Tag: ಲುದಿಯಾನಾ

  • ಬರೋಬ್ಬರಿ 65 ಕೆ.ಜಿ ಚಾಕಲೇಟ್‍ನಲ್ಲಿ ಮೂಡಿದ ಗಣೇಶ

    ಬರೋಬ್ಬರಿ 65 ಕೆ.ಜಿ ಚಾಕಲೇಟ್‍ನಲ್ಲಿ ಮೂಡಿದ ಗಣೇಶ

    ಲುದಿಯಾನಾ: ಗಣೇಶ ಚತುರ್ಥಿಯಂದು ಹಲವು ಕಡೆ ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಯಿತು. ಆದರೆ ಪಂಜಾಬ್‍ನ ಲೂದಿಯಾನಾದಲ್ಲಿ ಬರೋಬ್ಬರಿ 65 ಕೆ.ಜಿ ಚಾಕಲೇಟ್ ಬಳಸಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಯಿತ್ತು.

    ಹರ್‍ಜಿಂದರ್ ಸಿಂಗ್ ಕುಕ್ರೇಜಾ ಅವರು ಬರೋಬ್ಬರಿ 65 ಕೆ.ಜಿ ಚಾಕಲೇಟ್ ಬಳಸಿ ಗಣೇಶ ಮೂರ್ತಿಯನ್ನು ತಯಾರಿಸಿದ್ದಾರೆ. ಸತತವಾಗಿ ಮೂರನೇ ವರ್ಷ ಚಾಕಲೇಟ್ ಗಣೇಶನನ್ನು ಮಾಡಿ ಪ್ರತಿಷ್ಠಾಪಿಸಿದ್ದಾರೆ. ಈ ಗಣೇಶ ಮೂರ್ತಿಯನ್ನು 20 ಶೇಫ್‍ಗಳು 10 ದಿನದಲ್ಲಿ ತಯಾರಿಸಿದ್ದಾರೆ.

    ಸದ್ಯ ಹರ್‍ಜಿಂದರ್ ಈ ಫೋಟೋವನ್ನು ತಮ್ಮ ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ಸತತವಾಗಿ ಮೂರನೇ ವರ್ಷ ಚಾಕಲೇಟ್ ಗಣೇಶನನ್ನು ತಯಾರಿಸಿದ್ದೇವೆ. ಈ ಗಣೇಶ ಮೂರ್ತಿಯನ್ನು 20 ಶೇಫ್‍ಗಳು 10 ದಿನದಲ್ಲಿ ತಯಾರಿಸಿದ್ದಾರೆ. ಜನರಿಗೆ ಗಣೇಶ ಚತುರ್ಥಿಯಂದು ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಲು ಸ್ಫೂರ್ತಿ ನೀಡುವ ಉದ್ದೇಶದಿಂದ ಈ ಚಾಕಲೇಟ್ ಗಣೇಶನನ್ನು ತಯಾರಿಸಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.

    ಈ ಚಾಕಲೇಟ್ ಗಣೇಶ ಪರಿಸರ ಸ್ನೇಹಿ ಗಣೇಶ ಅಲ್ಲದೇ ಬೇರೆ ಒಂದು ಮಹತ್ವದ ಉದ್ದೇಶಕ್ಕಾಗಿಯೂ ಮಾಡಲಾಗಿದೆ. ಈ ಗಣೇಶನನ್ನು ನೀರಿನಲ್ಲಿ ವಿಸರ್ಜನೆ ಮಾಡುವ ಬದಲು ಹಾಲಿನಲ್ಲಿ ವಿಸರ್ಜನೆ ಮಾಡಿ ಅದನ್ನು ಬಡಮಕ್ಕಳಿಗೆ ಹಂಚಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

    ಸದ್ಯ ಹರ್‍ಜಿಂದರ್ ಟ್ವೀಟ್ ಮಾಡಿದ 1 ಗಂಟೆಯಲ್ಲಿ ಸಾಕಷ್ಟು ಕಮೆಂಟ್ಸ್ ಬಂದಿತ್ತು. ಕೆಲವರು ಚಾಕಲೇಟ್ ಗಣೇಶನನ್ನು ನೋಡಿ ಗಣೇಶ ಮೊದಲೇ ಫುಡೀ. ನೀವು ಮುಂದಿನ ಬಾರಿ ಲಡ್ಡು ಗಣೇಶ ಮಾಡಲು ಪ್ರಯತ್ನಿಸಿ ಎಂದು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು ನೀವು ಮಾಡಿದ ಚಾಕಲೇಟ್ ಗಣೇಶ ಚೆನ್ನಾಗಿದೆ ಹಾಗೂ ಅದರ ಹಿಂದಿನ ಉದ್ದೇಶ ಕೂಡ ಚೆನ್ನಾಗಿದೆ ಎಂದು ರೀ-ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv