Tag: ಲೀವಿಂಗ್ ರಿಲೇಶನ್ ಶಿಪ್

  • ಡೇಟಿಂಗ್ ಆ್ಯಪ್ ತಂದ ಅವಾಂತರ – ಪ್ರಿಯಕರನನ್ನೇ ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿದ್ಲು

    ಡೇಟಿಂಗ್ ಆ್ಯಪ್ ತಂದ ಅವಾಂತರ – ಪ್ರಿಯಕರನನ್ನೇ ಕಿಡ್ನ್ಯಾಪ್ ಮಾಡಿ ಹಲ್ಲೆ ನಡೆಸಿದ್ಲು

    ಬೆಂಗಳೂರು: ಪ್ರೀತಿ ಮಾಡಿದ ಪ್ರಿಯಕರನನ್ನು ಕಿಡ್ನ್ಯಾಪ್ ಮಾಡಿಸಿ ಪ್ರಿಯತಮೆ ಹಾಗೂ ಆಕೆಯ ಸ್ನೇಹಿತರು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಹನುಂತನಗರದಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಯುವಕನನ್ನು ಮಹದೇವ್ ಎಂದು ಗುರುತಿಸಲಾಗಿದೆ. ಇದೀಗ ಪೊಲೀಸರು ಈ ಪ್ರಕರಣ ಸಂಬಂಧ ಇಬ್ಬರು ಯುವತಿಯರು ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದಾರೆ. ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಮಹದೇವ್ ಹಾಗೂ ಯುವತಿ ನಂತರ ಲೀವಿಂಗ್ ರಿಲೇಶನ್ ಶಿಪ್‍ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ ದಿನ ಕಳೆದಂತೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಮಹದೇವ್‍ಗೆ ಬೇರೆ ಹುಡುಗಿಯೊಂದಿಗೆ ಸಂಬಂಧ ಇದೆ ಎಂದು ಯುವತಿ ಅನುಮಾನಗೊಂಡಿದ್ದಾಳೆ. ಇದೇ ರೀತಿ ಯುವತಿ ಬಗ್ಗೆಯೂ ಮಹದೇವ್ ಸಂಶಯ ವ್ಯಕ್ತಪಡಿಸಿದ್ದನು. ಹೀಗಾಗಿ ಇಬ್ಬರು ಬೇರೆ, ಬೇರೆ ಕಡೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು. ಇದನ್ನೂ ಓದಿ: ನೀಟ್ ಪರೀಕ್ಷೆ: ಒಳಉಡುಪು ಕಳಚಿಡುವಂತೆ ಒತ್ತಾಯಿಸಿದ್ದ ವಿದ್ಯಾರ್ಥಿನಿಯರಿಗೆ ಮರು ಪರೀಕ್ಷೆಗೆ ಅನುಮತಿ

    ಇದ್ದಕ್ಕಿದ್ದಂತೆ ಕಳೆದ ವಾರ ಕೊನೆ ಬಾರಿ ನಿನ್ನ ನೋಡಬೇಕು ಎಂದು ಯುವತಿ ಕರೆ ಮಾಡಿ ಮಹದೇವ್‍ಗೆ ತಿಳಿಸಿದ್ದಾಳೆ. ಹೀಗಾಗಿ ಯುವತಿಯನ್ನು ಭೇಟಿಯಾಗಲು ಮನೆ ಬಳಿ ಬಂದಿದ್ದ ಮಹದೇವ್ ಅನ್ನು ಸ್ನೇಹಿತರ ಜೊತೆಗೂಡಿ ಕಾರಿನಲ್ಲಿ ಯುವತಿ ಕಿಡ್ನ್ಯಾಪ್ ಮಾಡಿದ್ದಾಳೆ. ನಂತರ ಯುವಕನ ಮೇಲೆ ಹಲ್ಲೆ ನಡೆಸಿ ಆತನ ಮನೆಗೆ ವಾಪಸ್ ಬಿಟ್ಟು ಪರಾರಿಯಾಗಿದ್ದಾಳೆ. ಇದೀಗ ಈ ಘಟನೆ ಸಂಬಂಧ ಹನುಂತನಗರ ಪೊಲೀಸ್ ಠಾಣೆಯಲ್ಲಿ ಯುವಕ ದೂರು ದಾಖಲಿಸಿದ್ದು, ಪ್ರಕರಣ ಸಂಬಂಧ 8 ಮಂದಿಯನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮತ್ತೊಮ್ಮೆ ಸಿಎಂ ಸಿದ್ದರಾಮಯ್ಯ – ಬಾಳೆಹಣ್ಣಿನ ಮೇಲೆ ಬರೆದು ರಥದ ಮೇಲೆ ಎಸೆದ ಅಭಿಮಾನಿ

    Live Tv
    [brid partner=56869869 player=32851 video=960834 autoplay=true]