Tag: ಲೀಲಾವತಿ ಆಸ್ಪತ್ರೆ

  • ಸೈಫ್‌ ಅಲಿ ಖಾನ್‌ಗೆ ಇರಿದದ್ದು ನಿಜವೇ ಅಥವಾ ನಟಿಸ್ತಿದ್ದಾರೆಯೇ? – ಬಿಜೆಪಿ ಸಚಿವ ರಾಣೆ ಲೇವಡಿ

    ಸೈಫ್‌ ಅಲಿ ಖಾನ್‌ಗೆ ಇರಿದದ್ದು ನಿಜವೇ ಅಥವಾ ನಟಿಸ್ತಿದ್ದಾರೆಯೇ? – ಬಿಜೆಪಿ ಸಚಿವ ರಾಣೆ ಲೇವಡಿ

    ಮುಂಬೈ: ಸೈಫ್‌ ಅಲಿ ಖಾನ್‌ (Saif Ali Khan) ಮೇಲೆ ಚಾಕು ಇರಿತ ದಾಳಿ ನಡೆದಿದ್ದು ನಿಜವೇ ಅಥವಾ 54 ವರ್ಷದ ನಟನ ನಟನೆಯೇ ಅಂತ ಬಿಜೆಪಿ ಮಹಾರಾಷ್ಟ್ರದ ಮೀನುಗಾರಿಕೆ ಸಚಿವರೂ ಆಗಿರುವ ಬಿಜೆಪಿ ನಾಯಕ ನಿತೇಶ್ ರಾಣೆ (Nitesh Rane) ಪ್ರಶ್ನೆ ಮಾಡಿದ್ದಾರೆ.

    ಚಾಕು ಇರಿತದಿಂದ (stabbed) ಚೇತರಿಸಿಕೊಂಡು 5 ದಿನಗಳ ಬಳಿಕ ಆಸ್ಪತ್ರೆಯಿಂದ ಮನೆಗೆ ವಾಪಾಸ್ಸಾಗಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ವಿರುದ್ಧ ರಾಣೆ ವಾಗ್ದಾಳಿ ನಡೆಸಿದ್ದಾರೆ. ಪುಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿತೇಶ್ ರಾಣೆ, ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ದಾಳಿಯನ್ನು ಪ್ರಶ್ನಿಸಿದ್ದಾರೆ. ಸೈಫ್‌ ಅಲಿ ಖಾನ್‌ ಮೇಲಿನ ದಾಳಿ ನಿಜವೇ ಅಥವಾ 54 ವರ್ಷದ ನಟನ ʻಕೇವಲ ನಟನೆಯೇʼ ಎಂದು ಪ್ರಶ್ನೆ ಮಾಡಿದ್ದಾರೆ.

    ಸೈಫ್ ಅಲಿ ಖಾನ್ ಡಿಸ್ಚಾರ್ಜ್ ಆದ ನಂತರ ಅವರನ್ನು ನೋಡಿದಾಗ, ಅವರು ನಿಜವಾಗಿಯೂ ಇರಿದಿದ್ದಾರೆಯೇ ಅಥವಾ ನಟಿಸಿದ್ದಾರೆಯೇ ಎಂದು ನನಗೆ ಅನುಮಾನವಾಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: Hyderabad | ಪತ್ನಿಯ ಹತ್ಯೆಗೈದು, ಕುಕ್ಕರ್‌ನಲ್ಲಿ ಬೇಯಿಸಿ ಕೆರೆಗೆ ಎಸೆದ ಮಾಜಿ ಸೈನಿಕ

    ಮುಂದುವರಿದು, ಶಾರುಖ್ ಖಾನ್, ಸೈಫ್ ಅಲಿ ಖಾನ್ ಅವರಂತಹ ‘ಖಾನ್‌’ಗಳು ಗಾಯಗೊಂಡಾಗ ಎಲ್ಲರೂ ಅದರ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಸುಶಾಂತ್ ಸಿಂಗ್ ರಜಪೂತ್ ಅವರಂತಹ ಹಿಂದೂ ನಟ ಚಿತ್ರಹಿಂಸೆಗೊಳಗಾದಾಗ ಯಾರೂ ಏನನ್ನೂ ಹೇಳಲು ಮುಂದೆ ಬರುವುದಿಲ್ಲ ಎಂದು ಕಿಡಿಕಾರಿದ್ದಾರೆ.

    ಹಿಂದೂ ಕಲಾವಿದರ ಬಗ್ಗೆ ಆ ಮುಂಬ್ರಾದ ಜೀತುದ್ದೀನ್ (ಜಿತೇಂದ್ರ ಅವ್ವಾದ್), ಬಾರಾಮತಿಯ ತಾಯಿ (ಸುಪ್ರಿಯಾ ಸುಳೆ) ಎಂದಾದರೂ ಚಿಂತಿಸುವುದನ್ನು ನೋಡಿದ್ದೀರಾ? ಅವರಿಗೆ ಸೈಫ್ ಅಲಿ ಖಾನ್‌, ಶಾರುಖ್ ಖಾನ್ ಮಗ ಮತ್ತು ನವಾಬ್ ಮಲಿಕ್ ಬಗ್ಗೆ ಮಾತ್ರ ಚಿಂತೆಯಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಹಿಂದೂಗಳು ಗಮನಹರಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಾರ್ವಜನಿಕವಾಗಿ ಹಸು ಕೊಂದು ಅಡುಗೆ ಮಾಡಿದ ವೀಡಿಯೋ ಹರಿಬಿಟ್ರು – ಅಸ್ಸಾಂನಲ್ಲಿ 6 ಮಂದಿ ಬಂಧನ

    ಸೈಫ್‌ ಅಲಿಖಾನ್‌ ಮನೆಗೆ ನುಗ್ಗಿದ ವ್ಯಕ್ತಿಯನ್ನು ಬಾಂಗ್ಲಾದೇಶಿ ಮೂಲದವನು ಎಂದು ಗುರುತಿಸಲಾಗಿದೆ. ಈ ಮೊದಲು ಬಾಂಗ್ಲಾದೇಶಿಗಳು ಮುಂಬೈ ಬಂದರಿನಲ್ಲಿ ತಂಗುತ್ತಿದ್ದರು. ಈಗ ಪರಿಸ್ಥಿತಿ ನೋಡಿ… ಮನೆಗಳಿಗೇ ನುಗ್ಗಲು ಪ್ರಾರಂಭಿಸಿದ್ದಾರೆ. ಬಹುಶಃ ಆ ಸಮಯದಲ್ಲಿ ನಟನನ್ನು ಕರೆದುಕೊಂಡು ಹೋಗಲು ಬಂದಿರಬಹುದು ಎಂದೂ ಹೇಳಿದ್ದಾರೆ.

    ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಸೈಫ್ ಅಲಿ ಖಾನ್ ಮಂಗಳವಾರ ಡಿಸ್ಚಾರ್ಜ್ ಆಗಿದ್ದರು. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಮಹಾಪ್ರಸಾದ ಬಡಿಸಿದ ಸುಧಾ ಮೂರ್ತಿ

  • 12 ದಿನಗಳ ಜೈಲುವಾಸದ ನಂತರ ಪತಿಯನ್ನು ನೋಡಿ ಕಣ್ಣೀರಿಟ್ಟ ನವನೀತ್ ರಾಣಾ

    12 ದಿನಗಳ ಜೈಲುವಾಸದ ನಂತರ ಪತಿಯನ್ನು ನೋಡಿ ಕಣ್ಣೀರಿಟ್ಟ ನವನೀತ್ ರಾಣಾ

    ಮುಂಬೈ: 12 ದಿನಗಳ ಜೈಲುವಾಸದ ನಂತರ ಮತ್ತೆ ಶಾಸಕ ಪತಿ ರವಿ ರಾಣಾ ಮತ್ತು ಅಮರಾವತಿ ಸಂಸದೆ ನವನೀತ್ ರಾಣಾ ಒಂದಾಗಿದ್ದು, ಕಣ್ಣೀರಿಟ್ಟಿದ್ದಾರೆ.

    ಗುರುವಾರ ನವನೀತ್ ರಾಣಾ ಬೈಕುಲ್ಲಾ ಜೈಲಿನಿಂದ ಬಿಡುಗಡೆಯಾಗಿದ್ದು, ಆಕೆಯ ಪತಿ ರವಿ ರಾಣಾ ತಲೋಜಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ವೇಳೆ ನವನೀತ್ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಹಿನ್ನೆಲೆ ರವಿ, ಆಸ್ಪತ್ರೆಗೆ ಮಡದಿಯನ್ನು ನೋಡಲು ಬಂದಿದ್ದಾರೆ. ಪತಿಯನ್ನು ನೋಡಿದ ತಕ್ಷಣ ನವನೀತ್ ಅಳಲು ಪ್ರಾರಂಭ ಮಾಡಿದ್ದಾರೆ. ದಂಪತಿ ಭಾವನಾತ್ಮಕವಾಗಿ ಒಬ್ಬರನ್ನೊಬ್ಬರು ನೋಡಿಕೊಂಡಿದ್ದು, ನಂತರ ರವಿ ಅವರು ಸಾಂತ್ವನ ಮಾಡಿದರು. ಇದನ್ನೂ ಓದಿ: ಬಂಧನದಲ್ಲಿರುವ ರಾಣಾ ದಂಪತಿ ನಿವಾಸದಲ್ಲಿ ಅಕ್ರಮ ಕಟ್ಟಡ – ಬಿಎಂಸಿ ನೋಟೀಸ್

    ನವನೀತ್ ರಾಣಾ ಅವರ ವಕೀಲರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಸಂಸದರು ಅಸ್ವಸ್ಥರಾಗಿದ್ದರು. ಅವರ ರಕ್ತದೊತ್ತಡ ಹೆಚ್ಚಾಗಿದೆ. ಅವರಿಗೆ ದೇಹದಲ್ಲಿ ನೋವು ಮತ್ತು ಸ್ಪಾಂಡಿಲೈಟಿಸ್ ಇತ್ತು. ನಂತರ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದರು.

    Navneet Rana Ravi Rana 2

    ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124(ಎ) (ದೇಶದ್ರೋಹ) ಮತ್ತು 153 (ಎ) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ರಾಣಾ ದಂಪತಿಯನ್ನು ಏಪ್ರಿಲ್ 23 ರಂದು ಖಾರ್ ಪೊಲೀಸರು ಬಂಧಿಸಿದ್ದರು.

  • ಕೆಜಿಎಫ್‍ನ ಅಧೀರ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಕೆಜಿಎಫ್‍ನ ಅಧೀರ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಮುಂಬೈ: ಬಾಲಿವುಡ್ ನಟ ಹಾಗೂ ಬಹುನಿರೀಕ್ಷಿತ ಕೆಜಿಎಫ್-2 ಚಿತ್ರದಲ್ಲಿ ಅಧೀರನ ಪಾತ್ರ ನಿರ್ವಹಿಸುತ್ತಿರುವ ಸಂಜಯ್ ದತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಉಸಿರಾಟದ ತೊಂದರೆ ಹಾಗೂ ಎದೆ ನೋವಿನಿಂದ ಆಗಸ್ಟ್ 8ರಂದು ಸಂಜಯ್ ದತ್ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಲೀಲಾವತಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಭಾನುವಾರವಷ್ಟೇ ಸಂಜಯ್ ದತ್ ಆರಾಮಾಗಿದ್ದಾರೆ, ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ಆಸ್ಪತ್ರೆ ತಿಳಿಸಿತ್ತು.

    ಸಂಜಯ್ ದತ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ನೆಗೆಟಿವ್ ವರದಿ ಬಂದಿತ್ತು. ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸಂಜಯ್ ದತ್ ಈ ಕುರಿತು ತಮ್ಮ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದರು. ನಾನು ಆರಾಗಿದ್ದೇನೆ, ಎಲ್ಲ ಕೆಲಸಗಳನ್ನು ಮಾಡುತ್ತಿದ್ದೇನೆ. ವೈದ್ಯಕೀಯ ನಿಗಾ ವಹಿಸಲಾಗಿದೆ. ಕೊರೊನಾ ಪರೀಕ್ಷಾ ವರದಿ ಸಹ ನೆಗೆಟಿವ್ ಬಂದಿದೆ ಎಂದು ಸ್ಪಷ್ಟಪಡಿಸಿದ್ದರು.

    ಲೀಲಾವತಿ ಆಸ್ಪತ್ರೆ ವೈದ್ಯರು, ನರ್ಸ್ ಹಾಗೂ ಸಿಬ್ಬಂದಿ ತುಂಬಾ ಕಾಳಜಿ ವಹಿಸಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಮನೆಗೆ ಮರಳುತ್ತೇನೆ. ನಿಮ್ಮ ಹಾರೈಕೆಗೆ ಧನ್ಯವಾದಗಳು. ಎಲ್ಲರೂ ಸುರಕ್ಷಿತವಾಗಿರಿ ಎಂದು ಈ ಹಿಂದೆ ಮಾಡಿದ್ದ ಟ್ವೀಟ್‍ನಲ್ಲಿ ತಿಳಿಸಿದ್ದರು.

    ಸಂಜಯ್ ದತ್ ಮಾನ್ಯತಾ ದತ್ ಅವರನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅಲ್ಲದೆ ಮೊದಲ ಪತ್ನಿಯ ಒಬ್ಬ ಮಗಳಿದ್ದಾಳೆ. ಸಂಜಯ್ ದತ್ ಕನ್ನಡದ ಕೆಜಿಎಫ್-2 ಚಿತ್ರದಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಬಾಲಿವುಡ್‍ನ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಲೀಲಾವತಿ ಆಸ್ಪತ್ರೆಗೆ ವೈದ್ಯರ ನೇಮಕ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ಲೀಲಾವತಿ ಆಸ್ಪತ್ರೆಗೆ ವೈದ್ಯರ ನೇಮಕ

    ನೆಲಮಂಗಲ: ಮಹಾಮಾರಿ ಕೊರೊನಾ ವೈರಸ್ ಲಾಕ್‍ಡೌನ್ ಸಮಯದಲ್ಲಿ ಬಡವರಿಗೆ ಆಧಾರವಾಗಿದ್ದ, ಡಾ.ಎಂ ಲೀಲಾವತಿ ಆಸ್ಪತ್ರೆಗೆ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಬೀಗ ಹಾಕಲಾಗಿತ್ತು.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಆಸ್ಪತ್ರೆಗೆ ಬೀಗ ಹಾಕಿದ ವಿಚಾರದಲ್ಲಿ ಸಾಮಾಜಿಕ ಕಳಕಳಿಯಿಂದ ಪಬ್ಲಿಕ್ ಟಿವಿಯಲ್ಲಿ ಗುರುವಾರ ಸಂಜೆ ವರದಿ ಪ್ರಸಾರವಾಗಿಸತ್ತು. ಪರಿಣಾಮ ಇಂದು ಆರೋಗ್ಯಾಧಿಕಾರಿಗಳು ಎಚ್ಚೆತ್ತಿದ್ದು, ವೈದ್ಯರನ್ನು ನೇಮಕ ಮಾಡಿದ್ದಾರೆ.

    ಗ್ರಾಮೀಣ ಭಾಗದ ಜನರ ಹಾಗೂ ರೋಗಿಗಳ ಪರದಾಟದ ವರದಿ ಮಾಡಿದ್ದ ಪಬ್ಲಿಕ್ ಟಿವಿಗೆ ಹಿರಿಯ ನಟಿ ಲೀಲಾವತಿ, ನಟ ವಿನೋದ್ ರಾಜ್ ಹಾಗೂ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ. ಇಂದು ಯಾವುದೇ ಸಮಸ್ಯೆ ಇಲ್ಲದೆ ಆಸ್ಪತ್ರೆಯ ಬಾಗಿಲು ಓಪನ್ ಮಾಡಿ ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ.

    ಆಸ್ಪತ್ರೆಗೆ ಬೀಗ ನೋಡಿ ಆಘಾತಕ್ಕೆ ಒಳಗಾಗಿದ್ದ ಲೀಲಾವತಿ ಹಾಗೂ ವಿನೋದ್ ರಾಜ್, ಯಾಕೆ ನಮ್ಮ ಹಾಗೂ ನಮ್ಮ ಹಳ್ಳಿ ಜನರ ಮೇಲೆ ಈ ರೀತಿಯ ದ್ವೇಷ. ನಾಲ್ಕು ವರ್ಷದ ಹಿಂದೆ ಇದೇ ಸಮಸ್ಯೆಯಾಗಿತ್ತು. ಆಗ ಪಬ್ಲಿಕ್ ಟಿವಿಯ ವರದಿ ಬಳಿಕ ಆಗಿನ ಆರೋಗ್ಯ ಸಚಿವ ಯು.ಟಿ ಖಾದರ್ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದರು. ಆದರೆ ಈಗ ಇದೆ ಸಮಸ್ಯೆ ಮತ್ತೆ ಮತ್ತೆ ಮರುಕಳಿಸಿರುವುದು ವಿಪರ್ಯಾಸವೇ ಸರಿ ಎಂದು ಹಿರಿಯ ನಟಿ ಲೀಲಾವತಿಯವರು ಕಳವಳ ವ್ಯಕ್ತಪಡಿಸಿದ್ದರು.