Tag: ಲೀನಾ ಮಣಿಮೇಕಲೈ

  • ಕಾಳಿಮಾತೆ ಕೈಲಿ ಸಿಗರೇಟ್ ವಿವಾದ : ನಿರ್ದೇಶಕಿ ವಿರುದ್ಧ ಬಲವಂತದ ಕ್ರಮ ಬೇಡ ಎಂದ ಸುಪ್ರೀಂ

    ಕಾಳಿಮಾತೆ ಕೈಲಿ ಸಿಗರೇಟ್ ವಿವಾದ : ನಿರ್ದೇಶಕಿ ವಿರುದ್ಧ ಬಲವಂತದ ಕ್ರಮ ಬೇಡ ಎಂದ ಸುಪ್ರೀಂ

    ಕಾಳಿಮಾತೆ ಕೈಯಲ್ಲಿ ಸಿಗರೇಟ್ ಕೊಟ್ಟ ಪೋಸ್ಟರ್ ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕಿ ಲೀನಾ ಮಣಿಮೇಗಲೈ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಿರುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶಕಿ ಪರ ಹೇಳಿಕೆ ನೀಡಿದೆ. ಲೀನಾ ನಿರ್ದೇಶನದಲ್ಲಿ ಮೂಡಿ ಬಂದ ಕಾಳಿ ಸಾಕ್ಷ್ಯ ಚಿತ್ರದ ಪೋಸ್ಟರ್ ನಲ್ಲಿ  ಎಲ್.ಜಿ.ಬಿ.ಟಿ.ಕ್ಯೂ ಧ್ವಜ ಹಿಡಿದು ಸಿಗರೇಟು ಸೇದುತ್ತಿರುವಂತೆ ಚಿತ್ರಿಸಲಾಗಿತ್ತು.

    ತಮ್ಮ ಸಿನಿಮಾದ ಪೋಸ್ಟರ್ ನಲ್ಲಿ ಕಾಳಿ ಮಾತೆಯ ಕೈಗೆ ಸಿಗರೇಟು ಕೊಟ್ಟಿರುವ ವಿಚಾರಕ್ಕಾಗಿ ಭಾರೀ ವಿವಾದ ಎಬ್ಬಿಸಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈ ತಮ್ಮ ಮೇಲಿನ ದೂರುಗಳನ್ನು ವಜಾ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದ್ದರು. ರಾಜ್ಯದ ನಾನಾ ಭಾಗಗಳಲ್ಲಿ ದಾಖಲಾದ ಎಫ್.ಐ.ಆರ್ ಗಳನ್ನು ರದ್ದು ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್, ಬಲವಂತವಾಗಿ ಏನೂ ಕ್ರಮ ಕೈಗೊಳ್ಳದಂತೆ ತಿಳಿಸಿದೆ.

    ತಮ್ಮ ಸಿನಿಮಾದ ಪೋಸ್ಟರ್ ನಲ್ಲಿ ಲೀನಾ ಕಾಳಿ ಮಾತೆಯ ಕೈಗೆ ಸಿಗರೇಟು ಕೊಟ್ಟಿದ್ದಲ್ಲದೇ, ತೃತೀಯ ಲಿಂಗಿಗಳನ್ನು ಸೂಚಿಸುವಂತಹ ಬಾವುಟವನ್ನೂ ಅವರು ಕಾಳಿ ಮಾತೆಯ ಮತ್ತೊಂದು ಕೈಗೆ ಕೊಟ್ಟಿದ್ದರು. ಈ ಪೋಸ್ಟ್ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ನಿರ್ದೇಶಕಿಯನ್ನು ಬಂಧಿಸಿ, ಕ್ರಮ ತಗೆದುಕೊಳ್ಳಬೇಕು ಎಂದು ದೇಶದ ನಾನಾ ರಾಜ್ಯಗಳಲ್ಲಿ ಹಲವರು ದೂರು ದಾಖಲಿಸಿದ್ದರು. ಇದನ್ನೂ ಓದಿ: ರಶ್ಮಿಕಾ ಬೀಚ್ ಫೋಟೋ: ದೇವರಕೊಂಡ ಕ್ಲಿಕ್ಕಿಸಿದ್ದಾ ಎಂದ ನೆಟ್ಟಿಗರು

    ತಾವು ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ಆಗುವಂತೆ ಪೋಸ್ಟರ್ ರಚಿಸಿಲ್ಲ, ಆ ಪೋಸ್ಟರ್ ಯಾರಿಗೂ ನೋವು ತರುವಂತಹ ಉದ್ದೇಶ ಹೊಂದಿರಲಿಲ್ಲ ಎಂದು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನದಟ್ಟು ಮಾಡುತ್ತಿರುವ ಅವರು, ತಮ್ಮ ಕುಟುಂಬಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆಯೊಡ್ಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ತಗೆದುಕೊಳ್ಳಬೇಕು ಎಂದು ಅರ್ಜಿಯಲ್ಲಿ ಅವರು ಮನವಿ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಳಿ ಕೈಯಲ್ಲಿ ಸಿಗರೇಟ್ ವಿವಾದ : ಸುಪ್ರೀಂ ಮೊರೆ ಹೋದ ನಿರ್ದೇಶಕಿ ಲೀನಾ

    ಕಾಳಿ ಕೈಯಲ್ಲಿ ಸಿಗರೇಟ್ ವಿವಾದ : ಸುಪ್ರೀಂ ಮೊರೆ ಹೋದ ನಿರ್ದೇಶಕಿ ಲೀನಾ

    ಮ್ಮ ಸಿನಿಮಾದ ಪೋಸ್ಟರ್ ನಲ್ಲಿ ಕಾಳಿ (Kali) ಮಾತೆಯ ಕೈಗೆ ಸಿಗರೇಟು (Cigarette) ಕೊಟ್ಟಿರುವ ವಿಚಾರಕ್ಕಾಗಿ ಭಾರೀ ವಿವಾದ ಎಬ್ಬಿಸಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈ (Leena Manimekalai) ತಮ್ಮ ಮೇಲಿನ ದೂರುಗಳನ್ನು ವಜಾ ಮಾಡಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲು ಏರಿದ್ದಾರೆ. ರಾಜ್ಯದ ನಾನಾ ಭಾಗಗಳಲ್ಲಿ ದಾಖಲಾದ ಎಫ್.ಐ.ಆರ್ ಗಳನ್ನು ರದ್ದು ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

    ತಮ್ಮ ಸಿನಿಮಾದ ಪೋಸ್ಟರ್ ನಲ್ಲಿ ಲೀನಾ ಕಾಳಿ ಮಾತೆಯ ಕೈಗೆ ಸಿಗರೇಟು ಕೊಟ್ಟಿದ್ದಲ್ಲದೇ, ತೃತೀಯ ಲಿಂಗಿಗಳನ್ನು ಸೂಚಿಸುವಂತಹ ಬಾವುಟವನ್ನೂ ಅವರು ಕಾಳಿ ಮಾತೆಯ ಮತ್ತೊಂದು ಕೈಗೆ ಕೊಟ್ಟಿದ್ದರು. ಈ ಪೋಸ್ಟ್ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ನಿರ್ದೇಶಕಿಯನ್ನು ಬಂಧಿಸಿ, ಕ್ರಮ ತಗೆದುಕೊಳ್ಳಬೇಕು ಎಂದು ದೇಶದ ನಾನಾ ರಾಜ್ಯಗಳಲ್ಲಿ ಹಲವರು ದೂರು ದಾಖಲಿಸಿದ್ದರು. ಇದನ್ನೂ ಓದಿ: ಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

    ತಾವು ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗೆ ಧಕ್ಕೆ ಆಗುವಂತೆ ಪೋಸ್ಟರ್ ರಚಿಸಿಲ್ಲ, ಆ ಪೋಸ್ಟರ್ ಯಾರಿಗೂ ನೋವು ತರುವಂತಹ ಉದ್ದೇಶ ಹೊಂದಿರಲಿಲ್ಲ ಎಂದು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಮನದಟ್ಟು ಮಾಡುತ್ತಿರುವ ಅವರು, ತಮ್ಮ ಕುಟುಂಬಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆಯೊಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ತಗೆದುಕೊಳ್ಳಬೇಕು ಎಂದು ಅರ್ಜಿಯಲ್ಲಿ ಅವರು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಕಾಳಿ’ಗೆ ಅವಮಾನ ಮಾಡಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈಗೆ ದೆಹಲಿ ಕೋರ್ಟ್ ಸಮನ್ಸ್

    ‘ಕಾಳಿ’ಗೆ ಅವಮಾನ ಮಾಡಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈಗೆ ದೆಹಲಿ ಕೋರ್ಟ್ ಸಮನ್ಸ್

    ಜುಲೈ 4 ರಂದು ತಮ್ಮ ಡಾಕ್ಯುಮೆಂಟರಿ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿ ಭಾರೀ ವಿವಾದಕ್ಕೆ ಕಾರಣವಾಗಿದ್ದರು ತಮಿಳಿನ ನಿರ್ದೇಶಕಿ ಲೀನಾ ಮಣಿಮೇಕಲೈ. ತಮ್ಮ ನಿರ್ದೇಶನದಲ್ಲಿ ಮೂಡಿ ಬಂದ ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್ ನಲ್ಲಿ ಅವರು ಕಾಳಿಯ ಒಂದು ಕೈಲಿ ಸಿಗರೇಟು ಮತ್ತೊಂದು ಕೈಯಲ್ಲಿ ಲೈಂಗಿಕ ಅಲ್ಪ ಸಂಖ್ಯಾತರ ಧ್ವಜ ಹಿಡಿಸಿ ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಿದ್ದರು. ಈ ಕಾರಣಕ್ಕಾ ಅವರ ಮೇಲೆ ಸಾಕಷ್ಟು ದೂರುಗಳನ್ನು ಸಲ್ಲಿಸಲಾಗಿತ್ತು.

    ತಮ್ಮ ಡಾಕ್ಯುಮೆಂಟರಿಯ ಪೋಸ್ಟರ್ ನಲ್ಲಿ ಲೀನಾ ಕಾಳಿಯನ್ನು ಅವಮಾನಿಸಲಾಗಿದೆ ಎನ್ನುವ ಕಾರಣಕ್ಕಾಗಿ ಸಾಕಷ್ಟು ದೂರುಗಳು ಸಲ್ಲಿಕೆಯಾಗಿದ್ದವು. ಈ ದೂರುಗಳನ್ನು ಆಧರಿಸಿ ದೆಹಲಿಯ ತೀಸ್ ಹಜಾರಿ ಕೋರ್ಟ್ ನಿಂದ ಸಮನ್ಸ್ ಜಾರಿ ಮಾಡಲಾಗಿದೆ. ನವೆಂಬರ್ 1 ರಂದು ಲೀನಾ ಮಣಿಮೇಕಲೈ  ವಿಚಾರಣೆ ಎದುರಿಸಬೇಕಿದೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಸಾಕ್ಷ್ಯ ಚಿತ್ರದ ಪೋಸ್ಟರ್ ನಲ್ಲಿ ಕಾಳಿ ದೇವತೆಯನ್ನು ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಲಾಗಿತ್ತು. ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ದೇಶಾದ್ಯಂತ ಹಲವು ಕಡೆ ಲೀನಾ ಮಣಿಮೇಕಲೈ ಅವರ ವಿರುದ್ಧ ದೂರುಗಳನ್ನು ಸಲ್ಲಿಸಲಾಗಿತ್ತು. ಪ್ರಕರಣ ಗಂಭೀರ ಸ್ವರೂಪವನ್ನೂ ಪಡೆದುಕೊಂಡಿತ್ತು. ಹೀಗಾಗಿ ಲೀನಾ ವಿರುದ್ಧ ಕ್ರಮಕ್ಕೆ ಸಾಕಷ್ಟು ಜನರು ಆಗ್ರಹ ಮಾಡಿದ್ದರು. ಅವರು ಈ ದೇಶದಲ್ಲಿ ಇರದೇ ಇರುವ ಕಾರಣಕ್ಕಾಗಿ ಕ್ರಮ ತಗೆದುಕೊಳ್ಳಲು ಪೊಲೀಸರಿಂದ ಸಾಧ್ಯವಾಗಿರಲಿಲ್ಲ. ಇದೀಗ ಕೋರ್ಟ್ ಸಮನ್ಸ್ ಜಾರಿ ಮಾಡಿ ಕೋರ್ಟಿಗೆ ಹಾಜರಾಗುವಂತೆ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಳಿ ವಿವಾದ: ಆ.6ರಂದು ಹಾಜರಾಗುವಂತೆ ಲೀನಾಗೆ ದೆಹಲಿ ಹೈಕೋರ್ಟ್ ಸಮನ್ಸ್

    ಕಾಳಿ ವಿವಾದ: ಆ.6ರಂದು ಹಾಜರಾಗುವಂತೆ ಲೀನಾಗೆ ದೆಹಲಿ ಹೈಕೋರ್ಟ್ ಸಮನ್ಸ್

    ಮಿಳು ಸಿನಿಮಾ ನಿರ್ದೇಶಕಿ ಲೀಲಾ ಮಣಿಮೇಕಲೈ ಅವರ ಕಾಳಿ ಚಿತ್ರವನ್ನು ತಡೆಕೋರಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಲೀನಾ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಅಲ್ಲದೇ, ಆ.6 ರಂದು ಕೋರ್ಟ್ ಮುಂದೆ ಹಾಜರಾಗುವಂತೆ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಮೂರ್ತಿ ಅಭಿಷೇಕ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಕಾಳಿ ಚಿತ್ರಕ್ಕೆ ತಡೆಯಾಜ್ಞೆ ನೀಡಲು ಸದ್ಯ ಆಗದು, ಮೊದಲು ಪ್ರತಿವಾದಿ ಹೇಳಿಕೆ ನೀಡಬೇಕು. ಪ್ರತಿವಾದಿಯ ಹೇಳಿಗೆ ಅಗತ್ಯವಿರುವ ಕಾರಣಕ್ಕಾಗಿ ಸಮನ್ಸ್ ನೀಡಿದೆ.

    ಕಾಳಿ ಕೈಲಿ ಸಿಗರೇಟು ಮತ್ತು ಎಲ್ಜಿಬಿಟಿಕ್ಯೂ ಧ್ವಜ ನೀಡಿ ಅವಮಾನಿಸಿದ್ದಾರೆ ಎಂದು ಲೀನಾ ಮೇಲೆ ಹಲವು ದೂರುಗಳು ದಾಖಲಾಗಿದ್ದವು. ಕೆಲ ಕಡೆ ಪ್ರತಿಭಟನೆಯನ್ನು ಕೂಡ ಮಾಡಲಾಯಿತು. ಆದರೂ, ಲೀನಾ ಸುಮ್ಮನಾಗಲಿಲ್ಲ. ಶಿವ ಪಾರ್ವತಿ ಕೈಲಿ ಸಿಗರೇಟು ನೀಡಿ ಮತ್ತೆ ಅವಮಾನಿಸಿದರು. ಹಾಗಾಗಿ ಲೀನಾ ವಿರುದ್ಧ ಪ್ರತಿಭಟನೆ ಜೋರಾಗಿದೆ. ಈ ಚಿತ್ರವು ಪ್ರದರ್ಶನ ಆಗದಂತೆ ತಡೆಯಬೇಕೆಂದು ಹಲವು ಕಡೆ ದೂರು ಕೂಡ ದಾಖಲಾಗಿವೆ. ಇದನ್ನೂ ಓದಿ:ಯಂಗ್ ಅಂಡ್ ಎನರ್ಜಿಟಿಕ್ ಸ್ಟಾರ್ ಶಿವಣ್ಣನ ಹುಟ್ಟುಹಬ್ಬಕ್ಕೆ ಶುಭಕೋರಿದ ರಾಜಕೀಯ ಗಣ್ಯರು

    ಭಾರತದಾದ್ಯಂತ ಅನೇಕ ಕಡೆ ಲೀನಾ ಮೇಲೆ ದೂರುಗಳು ದಾಖಲಾದರು, ಲೀನಾ ಮಾತ್ರ ಸುಮ್ಮನೆ ಕುಳಿತಿಲ್ಲ. ಮತ್ತೆ ಮತ್ತೆ ಕಾಳಿ ಮತ್ತು ಹಿಂದೂ ದೇವರಗಳನ್ನು ಇಟ್ಟುಕೊಂಡು ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಕೆಲಸವನ್ನು ಮಾಡುತ್ತಲೇ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಧಾನಿ ಮೋದಿ – ಟಿಎಂಸಿ ನಡುವೆ `ಕಾಳಿ’ ಕದನ

    ಪ್ರಧಾನಿ ಮೋದಿ – ಟಿಎಂಸಿ ನಡುವೆ `ಕಾಳಿ’ ಕದನ

    ಕೋಲ್ಕತ್ತ: ಹಿಂದೂ ದೇವತೆಗಳನ್ನು ಸತತವಾಗಿ ಅವಮಾನಿಸುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲೈ ಮೊದಲ ಪೋಸ್ಟರ್‌ನಲ್ಲೇ ಕಾಳಿ ದೇವಿ ಕೈಯಲ್ಲಿ ಸಿಗರೇಟು ನೀಡಿ ವಿವಾದಕ್ಕೀಡಾಗಿದ್ದರು. ಇದು ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಶಿವ-ಪಾರ್ವತಿ ಪಾತ್ರಧಾರಿಗಳು ಸಿಗರೇಟು ಸೇದುವ ದೃಶ್ಯದ ಫೋಟೋ ಹಾಕಿ ಮತ್ತೊಮ್ಮೆ ವಿವಾದಕ್ಕೆ ಕಾರಣರಾದರು. ಇದೀಗ ರಾಷ್ಟ್ರವ್ಯಾಪಿಯಾಗಿ ವಿವಾದ ಹರಡಿದೆ.

    ಕಾಳಿ ದೇವಿ ಕುರಿತು ಪ್ರಧಾನಿ ನರೇಂದ್ರ ಮೋದಿ ಇಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ಟಿಎಂಸಿ (ತೃಣಮೂಲ ಕಾಂಗ್ರೆಸ್) ಪ್ರಮುಖರಿಂದ ಆಕ್ಷೇಪಣೆಗಳೂ ವ್ಯಕ್ತವಾಗಿವೆ. ಇದನ್ನೂ ಓದಿ: ದೇವೇಗೌಡರನ್ನು ಭೇಟಿಯಾದ ದ್ರೌಪದಿ ಮುರ್ಮು- ಎನ್‍ಡಿಎ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ

    ರಾಮಕೃಷ್ಣ ಮಿಷನ್ ಹಮ್ಮಿಕೊಂಡಿದ್ದ ಸ್ವಾಮಿ ಆತ್ಮಸ್ಥಾನಾನಂದ ಅವರ ಜನ್ಮ ಶತಮಾನೋತ್ಸವ ವರ್ಚುವಲ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಂದು ಕಾಳಿ ದೇವಿ ಕುರಿತು ಮಾತನಾಡಿದ್ದಾರೆ.

    ಕಾಳಿ ಮಾತೆಯ ಆಶೀರ್ವಾದ ಈ ದೇಶದ ಮೇಲೆ ಸದಾಕಾಲವೂ ಇರಲಿದೆ. ದೇಶದಲ್ಲಿರುವ ಸಂತರು `ಏಕ ಭಾರತ, ಶ್ರೇಷ್ಠ ಭಾರತ’ ಆಶಯದ ಸಾಕಾರಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲು ರೋಹಿತ್ ಶರ್ಮಾಗೆ ಇನ್ನೊಂದೆ ಹೆಜ್ಜೆ

    ರಾಮಕೃಷ್ಣ ಪರಮಹಂಸರು ಕಾಳಿ ಮಾತೆಯ ಕುರಿತು ಸ್ಪಷ್ಟ ಕಲ್ಪನೆ ಹೊಂದಿದ್ದರು. ಅವರ ಶಿಷ್ಯ ಸ್ವಾಮಿ ವಿವೇಕಾನಂದರೂ ಆಧ್ಯಾತ್ಮಿಕ ದೃಷ್ಟಿಕೋನ ಹೊಂದಿದ್ದರು. ಇದು ಅವರಲ್ಲಿ ಅಸಾಧಾರಣ ಶಕ್ತಿ ತುಂಬಿತ್ತು. ನಂಬಿಕೆ ಪವಿತ್ರವಾಗಿದ್ದರೆ ಅಗೋಚರ ಶಕ್ತಿಯೊಂದು ನಮಗೆ ಅರಿವಿಲ್ಲದಂತೆಯೇ ನಮ್ಮನ್ನು ಸರಿ ದಾರಿಯಲ್ಲಿ ಕೊಂಡೊಯ್ಯುತ್ತದೆ. ಕಾಳಿ ಮಾತೆಯ ಕೃಪೆ ಭಾರತದ ಮೇಲೆ ಇದೆ. ಆಧ್ಯಾತ್ಮಿಕ ಶಕ್ತಿಯೊಂದಿಗೆ ದೇಶವು ಲೋಕ ಕಲ್ಯಾಣದ ಕಾಯಕದಲ್ಲಿ ಮುನ್ನಡೆಯುತ್ತಿದೆ ಎಂದು ಶ್ಲಾಘಿಸಿದ್ದಾರೆ.

    ಪ್ರಧಾನಿ ಮೋದಿ ಅವರ ಹೇಳಿಕೆಗೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಸುಳಿವಿಲ್ಲದ ವಿಷಯಗಳ ಬಗ್ಗೆ ತಮ್ಮ ಯಜಮಾನರು ಕಾಮೆಂಟ್ ಮಾಡುವುದನ್ನು ನಿಲ್ಲಿಸಬೇಕೆಂದು ಸಲಹೆ ನೀಡುತ್ತೇನೆ ಎಂಬುದಾಗಿ ಬಂಗಾಳದ ಬಿಜೆಪಿ ಘಟಕದ ವಿರುದ್ಧ ಹರಿಹಾಯ್ದಿದ್ದಾರೆ.

    ಇದರಿಂದ ಮೊಯಿತ್ರಾ ಅವರನ್ನು ಟಿಎಂಸಿ ಸದಸ್ಯತ್ವದಿಂದ ಅಮಾನತುಗೊಳಿಸುವಂತೆ ಬಿಜೆಪಿ ಒತ್ತಾಯಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಕಾಳಿ ದೇವಿಯನ್ನು ಅಪಮಾನಿಸಿದ ಲೀನಾ: ಹಿಂದೂಗಳ ಆಕ್ರೋಶ

    ಮತ್ತೆ ಕಾಳಿ ದೇವಿಯನ್ನು ಅಪಮಾನಿಸಿದ ಲೀನಾ: ಹಿಂದೂಗಳ ಆಕ್ರೋಶ

    ಕಾಳಿ ದೇವಿಯನ್ನು ನಿರಂತರವಾಗಿ ಅಪಮಾನಿಸುತ್ತಿರುವ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಮೇಲೆ ಕ್ರಮಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆಕೆ ಯಾವುದೇ ದೇಶದಲ್ಲಿ ಇದ್ದರೂ, ಕನಿಷ್ಠ ಅವಳ ಟ್ವಿಟರ್ ಮತ್ತು ಫೇಸ್ ಬುಕ್ ಪೇಜ್ ಗಳನ್ನು ಡಿಲಿಟ್ ಮಾಡಲೂ ಸಾಧ್ಯವಾಗುತ್ತಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಅವರ ಮೇಲೆ ಕ್ರಮ ತಗೆದುಕೊಳ್ಳದೇ ಇರುವ ಕಾರಣಕ್ಕಾಗಿ ಹೀಗೆ ನಿರಂತರವಾಗಿ ಅವರು ಅಪಮಾನದ ಪೋಸ್ಟ್ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ಮೊದಲ ಸಲ ಕಾಳಿ ಕೈಯಲ್ಲಿ ಸಿಗರೇಟು ಮತ್ತು ಎಲ್‍ಜಿಬಿಡಿಕ್ಯೂ ಧ್ವಜ ಕೊಟ್ಟು ಹಿಂದೂಗಳ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಆನಂತರ ಶಿವ ಪಾರ್ವತಿ ಕೈಯಲ್ಲೂ ಸಿಗರೇಟು ಕೊಟ್ಟು ಅಪಮಾನ ಮಾಡಿದ್ದಾರೆ. ಇದೀಗ ಕಾಳಿಯ ಕುರಿತಾಗಿ ಮತ್ತಷ್ಟು ಬರಹಗಳನ್ನು ಬರೆದಿದ್ದು, ಸಲಿಂಗಿಗಳನ್ನು ಕಾಳಿ ಇಷ್ಟಪಡುತ್ತಾಳೆ ಎಂದೂ, ಮತ್ತು ಹಿಂದುತ್ವವನ್ನು ನಾಶ ಮಾಡಲು ಕಾಳಿ ಬರುತ್ತಾಳೆ ಎಂದು ಟ್ವಿಟರ್ ಖಾತೆಯಲ್ಲಿ ಲೀನಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಲೀನಾ ವಿರುದ್ಧ ದೂರುಗಳ ಮಹಾಪುರವೇ ಹರಿದು ಬರುತ್ತಿದ್ದರೂ, ಅವರನ್ನು ಕೂಡಲೇ ಬಂಧಿಸಬೇಕು ಎಂಬ ಆಗ್ರಹ ಶುರುವಾಗಿದ್ದರೂ, ಇವರಿಗೂ ಯಾವುದೇ ಕ್ರಮ ತಗೆದುಕೊಳ್ಳದೇ ಇರುವುದಕ್ಕೆ ಹಲವರು ಹಲವು ಅನುಮಾನಗಳನ್ನು ಹೊರಹಾಕಿದ್ದಾರೆ. ಆ ಲೀನಾ ಹಿಂದೆ ಯಾರು ಇದ್ದಾರೆ ಎಂದು ಪತ್ತೆ ಹಚ್ಚಬೇಕು ಹಾಗೂ ಕೂಡಲೇ ಸೋಷಿಯಲ್ ಮೀಡಿಯಾದಿಂದ ಅವರ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ `ಕಾಳಿ’ ಹಿಂದುತ್ವವನ್ನು ಕಿತ್ತೊಗೆಯುತ್ತಾಳೆ: ಲೀನಾ ಮಣಿಮೇಕಲೈ ಸ್ಫೋಟಕ ಹೇಳಿಕೆ

    ನನ್ನ `ಕಾಳಿ’ ಹಿಂದುತ್ವವನ್ನು ಕಿತ್ತೊಗೆಯುತ್ತಾಳೆ: ಲೀನಾ ಮಣಿಮೇಕಲೈ ಸ್ಫೋಟಕ ಹೇಳಿಕೆ

    ಚೆನ್ನೈ: ಹಿಂದೂ ದೇವತೆಗಳನ್ನು ಸತತವಾಗಿ ಅವಮಾನಿಸುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ವಿವಿಧೆಡೆ ದೂರುಗಳು ದಾಖಲಾಗುತ್ತಿವೆ. ಲೀನಾ ಅವರು ಮೊದಲ ಪೋಸ್ಟರ್‌ನಲ್ಲೇ ಕಾಳಿ ಕೈಗೆ ಸಿಗರೇಟು ನೀಡಿದ್ದರು. ನಂತರ ಮತ್ತೊಂದು ಪೋಸ್ಟ್ ಮಾಡಿದ್ದ ಅವರು ಶಿವ ಮತ್ತು ಪಾರ್ವತಿ ಕೈಯಲ್ಲೂ ಸಿಗರೇಟು ಕೊಡಿಸಿದ್ದರು.

    ಇದರಿಂದಾಗಿ ಹಿಂದೂಪರ ಸಂಘಟನೆಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಕನ್ನಡದ ನಟಿ ಮಾಳವಿಕಾ ಅವಿನಾಶ್ ಸಹ ಈ ನಡೆಯನ್ನು ವಿರೋಧಿಸಿದ್ದರು. ವ್ಯಾಪಕ ವಿರೋಧಗಳ ನಡುವೆಯೂ ಚಿತ್ರದ ನಿರ್ದೇಶಕಿ ಲೀನಾ ಮಣಿಮೇಕಲೈ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಟ್ವೀಟ್‌ನಲ್ಲಿ ಏನಿದೆ?
    ನನ್ನ ಕಾಳಿ ವಿಲಕ್ಷಣವಾದರೂ ಸ್ವತಂತ್ರ ಮನೋಭಾವದ ಚೇತನ. ಪಿತೃ ಪ್ರಭುತ್ವದ ಮೇಲೆ ಉಗುಳುತ್ತಾಳೆ. ನನ್ನ ಕಾಳಿ ಹಿಂದುತ್ವವನ್ನು ಕಿತ್ತೊಗೆಯುತ್ತಾಳೆ, ಬಂಡವಾಳಶಾಹಿಯನ್ನು ಕಿತ್ತೊಗೆಯುತ್ತಾಳೆ. ತನ್ನ ಸಾವಿರ ಕೈಗಳಿಂದ ಎಲ್ಲರನ್ನು ಅಪ್ಪಿಕೊಳ್ಳುತ್ತಾಳೆ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಕಾಳಿಯ ರೌದ್ರಾವತಾರದ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಹಿಂದೂ ದೇವರನ್ನು ಸತತವಾಗಿ ಅವಮಾನಿಸುತ್ತಿರುವ ಲೀನಾ ಮಣಿಮೇಕಲೈ ವಿರುದ್ಧ ದೇಶಾದ್ಯಂತ ದೂರುಗಳು ದಾಖಲಾಗುತ್ತಿವೆ. ಲೀನಾ ಅವರು ಮೊದಲ ಪೋಸ್ಟರ್ ನಲ್ಲಿ ಕೇವಲ ಕಾಳಿ ಕೈಗೆ ಸಿಗರೇಟು ನೀಡಿದ್ದರು. ನಂತರ ಮತ್ತೊಂದು ಪೋಸ್ಟ್ ಮಾಡಿದ್ದ ಅವರು ಶಿವ ಮತ್ತು ಪಾರ್ವತಿ ಕೈಯಲ್ಲೂ ಸಿಗರೇಟು ಕೊಟ್ಟಿದ್ದರು. ಈ ಕುರಿತು ಕನ್ನಡದ ನಟ ನಟಿಯರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಯಿಸಿದ್ದಾರೆ. ನಟಿ ಮಾಳವಿಕಾ ಅವಿನಾಶ್ ಈ ನಡೆಯನ್ನು ವಿರೋಧಿಸಿದ್ದರೆ, ನಟ ಕಿಶೋರ್ ಮತ್ತೊಂದು ರೀತಿಯಲ್ಲಿ ಪ್ರತಿಕ್ರಯಿಸಿದ್ದಾರೆ.

    ಶಿವನಿಗೆ ಬೇಡರ ಕಣ್ಣಪ್ಪ ಮಾಂಸವನ್ನು ಅರ್ಪಿಸಿದಾಗ ಅವನಿಗೆ ಹಿಂದೂ ದ್ವೇಷದ ದುರಹಂಕಾರ ಇರಲಿಲ್ಲ. ಹಾಗಾಗಿ ಶಿವನಿಗೆ ಆತನ ಭಕ್ತಿ ಇಷ್ಟವಾಗಿತ್ತು. ಅಜ್ಞಾನಕ್ಕಿಂತ ಭಕ್ತಿಯೇ ಶ್ರೇಷ್ಠತೆ ಪಡೆಯಿತು. ಇದೀಗ ಉದಾರವಾದಿಗಳ ವಿಕೃತಿ ಹೆಚ್ಚಾಗುತ್ತಿದೆ. ವಿಕೃತಿಗಳಿಗೆ ಮಾರ್ಗವಾಗಿದೆ ಎಂದಿದ್ದಾರೆ. ನಿಮ್ಮ ಅಭ್ಯಾಸ ಮತ್ತು ದುರ್ಗುಣಗಳನ್ನು ಹೇರಲು ಕಾಳಿ ಮಾತೆ ಸಾಕು ಪ್ರಾಣಿಯಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸ್ತ್ರಿವಾದಿ ಮಹುವಾ ಮೊಯಿತ್ರಾಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ‘ಕೆಜಿಎಫ್ 2’, ‘ಆರ್.ಆರ್.ಆರ್’ ದಾಖಲೆ ಮುರಿಯತ್ತಾ ರಾಮ್ ಗೋಪಾಲ್ ವರ್ಮಾ ಅವರ ‘ಲಡ್ಕಿ’ ಸಿನಿಮಾ ?

    ಇದೇ ಪ್ರಕರಣಕ್ಕೆ ಹೋಲುವಂತೆ ನಟ ಕಿಶೋರ್ ಕೂಡ ವಿಭಿನ್ನವಾಗಿಯೇ ಪ್ರತಿಕ್ರಿಯೆ ನೀಡಿದ್ದು, ನನ್ನ ದೇವರು, ನನ್ನ ಭಕ್ತಿ, ನನ್ನ ನೈವೇದ್ಯಗಳು, ನನ್ನಹಕ್ಕು. ಅದು ನನ್ನ ನಾಡಿನ ಸೌಂದರ್ಯ, ನನ್ನ ನಾಡಿನ ಶಕ್ತಿ ಎಂದು ಬೇಡರ ಕಣ್ಣಪ್ಪ ಸಿನಿಮಾ ಪೋಸ್ಟರ್ ಶೇರ್ ಮಾಡಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಕಿಶೋರ್ ಅವರ ಈ ಪೋಸ್ಟ್ ಕೂಡ ಪರ ವಿರೋಧಕ್ಕೆ ಕಾರಣವಾಗಿದೆ

    ನಿರ್ಮಾಪಕಿ ಲೀನಾ ಮಣಿಮೇಕಲೈ ಕಾಳಿ ಕೈಯಲ್ಲಿ ಸಿಗರೇಟು ಮತ್ತು ಎಲ್‍ಜಿಬಿಡಿಕ್ಯೂ ಧ್ವಜ ಕೊಟ್ಟು ಹಿಂದೂಗಳ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಮೊನ್ನೆಯಷ್ಟೇ ಶಿವ ಪಾರ್ವತಿ ಕೈಯಲ್ಲೂ ಸಿಗರೇಟು ಕೊಟ್ಟು ಅಪಮಾನ ಮಾಡಿದ್ದಾರೆ. ಹೀಗಾಗಿ ಲೀನಾ ವಿರುದ್ಧ ದೂರುಗಳ ಮಹಾಪುರವೇ ಹರಿದು ಬರುತ್ತಿವೆ. ಅವರನ್ನು ಕೂಡಲೇ ಬಂಧಿಸಬೇಕು ಎಂಬ ಆಗ್ರಹ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಳಿಗೆ ಅವಮಾನ : ನಿರ್ಮಾಪಕಿ ಲೀನಾ ಮಣಿಮೇಕಲೈಗೆ ಲುಕ್ ಔಟ್ ಸಂಕಟ

    ಕಾಳಿಗೆ ಅವಮಾನ : ನಿರ್ಮಾಪಕಿ ಲೀನಾ ಮಣಿಮೇಕಲೈಗೆ ಲುಕ್ ಔಟ್ ಸಂಕಟ

    ಹಿಂದೂ ದೇವರನ್ನು ಸತತವಾಗಿ ಅವಮಾನಿಸುತ್ತಿರುವ ಲೀನಾ ಮಣಿಮೇಕಲೈ ವಿರುದ್ಧ ದೇಶಾದ್ಯಂತ ದೂರುಗಳು ದಾಖಲಾಗುತ್ತಿವೆ. ಕಾಳಿ ಕೈಯಲ್ಲಿ ಸಿಗರೇಟು ಮತ್ತು ಎಲ್‍ಜಿಬಿಡಿಕ್ಯೂ ಧ್ವಜ ಕೊಟ್ಟು ಹಿಂದೂಗಳ ಕಂಗೆಣ್ಣಿಗೆ ಗುರಿಯಾಗಿದ್ದ ಲೀನಾ, ಮೊನ್ನೆಯಷ್ಟೇ ಶಿವ ಪಾರ್ವತಿ ಕೈಯಲ್ಲೂ ಸಿಗರೇಟು ಕೊಟ್ಟು ಅಪಮಾನ ಮಾಡಿದ್ದಾರೆ. ಹೀಗಾಗಿ ಲೀನಾ ವಿರುದ್ಧ ದೂರುಗಳ ಮಹಾಪುರವೇ ಹರಿದು ಬರುತ್ತಿವೆ. ಅವರನ್ನು ಕೂಡಲೇ ಬಂಧಿಸಬೇಕು ಎಂಬ ಆಗ್ರಹ ಶುರುವಾಗಿದೆ.

    ಮಧ್ಯ ಪ್ರದೇಶದಲ್ಲಿ ಅತೀ ಹೆಚ್ಚು ದೂರುಗಳು ಲೀನಾ ಮೇಲೆ ದಾಖಲಾಗಿರುವುದರಿಂದ, ಮಧ್ಯಪ್ರದೇಶ ಪೊಲೀಸರು ಲೀನಾ ವಿರುದ್ಧ ಲುಕ್‍ ಔಟ್ ಸುತ್ತೋಲೆ ಹೊರಡಿಸಿದ್ದಾರೆ. ಐಪಿಸಿ ಸೆಕ್ಸನ್ 295 ಎ (ಧಾರ್ಮಿಕ ನಂಬಿಕೆಗಳಿಗೆ ಉದ್ದೇಶಪೂರ್ವಕವಾಗಿ ಭಾವನೆಗಳನ್ನು ಕೆರಳಿಸುವ ಕೃತ್ಯ) ಅಡಿಯಲ್ಲಿ ಭೋಪಾಲ್ ನಲ್ಲಿ ಎಫ್.ಐ.ಆರ್ ದಾಖಲಾಗಿದೆ. ಇದನ್ನೂ ಓದಿ:ತಮಿಳು ಕಿರುತೆರೆಯತ್ತ `ಪಾರು’ ಖ್ಯಾತಿಯ ಮೋಕ್ಷಿತಾ ಪೈ

    ಎಫ್.ಐ.ಆರ್ ದಾಖಲಾಗುತ್ತಿದ್ದಂತೆಯೇ ಮಧ್ಯ ಪ್ರದೇಶದ ಗೃಹ ಸಚಿವಾಲಯದ ಆದೇಶದ ಮೇರೆಗೆ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ. ಲೀನಾ ಮಣಿಮೇಕಲೈ ಕಾಳಿ ಬಗ್ಗೆ ಸಾಕ್ಷ್ಯ ಚಿತ್ರವನ್ನು ತಯಾರಿಸಿ ಅದನ್ನು ಈಗ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಕಳುಹಿಸಿದ್ದಾರೆ. ಹಾಗಾಗಿ ಜುಲೈ 4 ರಂದು ಕಾಳಿಯ ಕೈಯಲ್ಲಿ ಸಿಗರೇಟು ಇರುವಂತಹ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ಈ ಪೋಸ್ಟರ್ ಭಾರೀ ಸಂಚಲನಕ್ಕೆ ಕಾರಣವಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಕಾಳಿ ವಿವಾದ ಆಯ್ತು, ಇದೀಗ ಶಿವ, ಪಾರ್ವತಿ ಪಾತ್ರಧಾರಿಗಳ ಚಿತ್ರ ಹಂಚಿಕೊಂಡ ಲೀನಾ

    ಕಾಳಿ ವಿವಾದ ಆಯ್ತು, ಇದೀಗ ಶಿವ, ಪಾರ್ವತಿ ಪಾತ್ರಧಾರಿಗಳ ಚಿತ್ರ ಹಂಚಿಕೊಂಡ ಲೀನಾ

    ಒಟ್ಟಾವಾ: ಕಾಳಿ ಸಾಕ್ಷ್ಯಾಚಿತ್ರದ ವಿವಾದ ಬಳಿಕ ನಿರ್ಮಾಪಕಿ ಲೀನಾ ಮತ್ತೊಂದು ಪೋಸ್ಟ್ ಮಾಡಿ, ಕಾಳಿ ಪೊಸ್ಟರ್ ವಿರೋಧಿಸಿದವರನ್ನು ವ್ಯಂಗ್ಯ ಮಾಡಿದ್ದಾರೆ.

    ಈಗಾಗಲೇ ಲೀನಾ ಅವರು, ಕಾಳಿಯ ಒಂದು ಕೈಲಿ ಸಿಗರೇಟು ಮತ್ತೊಂದು ಕೈಲಿ ಎಲ್ಜಿಬಿಟಿಕ್ಯೂ ಧ್ವಜವನ್ನು ನೀಡಲಾಗಿದ್ದ ತಮ್ಮ ಸಾಕ್ಷ್ಯ ಚಿತ್ರದ ಪೋಸ್ಟರ್‌ವೊಂದನ್ನು ಶೇರ್ ಮಾಡುವ ಮೂಲಕ ಭಾರೀ ವಿವಾದಕ್ಕೆ ಕಾರಣರಾಗಿದ್ದರು. ತನ್ನ ವಿರುದ್ಧ ಹಲವು ಎಫ್‍ಐಆರ್‌ಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಅವರು ತನ್ನ ರಕ್ಷಣೆಗಾಗಿ ಹೊಸ ಟ್ವೀಟ್‍ವೊಂದನ್ನು ಮಾಡಿದ್ದಾರೆ.

    ಈ ಪೋಸ್ಟ್‌ನಲ್ಲಿ ಶಿವ, ಪಾರ್ವತಿ ಪಾತ್ರಧಾರಿಗಳ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಈ ಇಬ್ಬರು ಪಾತ್ರಧಾರಿಗಳು ಧೂಮಪಾನದಲ್ಲಿ ತೊಡಗಿದ್ದಾರೆ. ಇದೀಗ ಈ ಚಿತ್ರಕ್ಕೆ ನಿರ್ಮಾಪಕಿ ವಿರುದ್ಧ ಮತ್ತೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ಪದೇ ಪದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

    ಟ್ವಿಟ್ಟರ್ ಬಳಕೆದಾರರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಈ ನಿರ್ಮಾಪಕಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಕೋಟ್ಯಂತರ ಹಿಂದೂಗಳ ಭಾವನೆಗೆ ಆಕೆ ಧಕ್ಕೆ ಮಾಡಿದ್ದಾರೆ ಎಂದು ಕಿಡಿಕಾರಿ, ಅವರ ವಿರುದ್ಧ ಅನೇಕ ಎಫ್‍ಐಆರ್ ದಾಖಲಾಗಿತ್ತು.

    Live Tv
    [brid partner=56869869 player=32851 video=960834 autoplay=true]