Tag: ಲೀಡರ್

  • ದೆಹಲಿಯಲ್ಲಿ ಗಣರಾಜ್ಯೋತ್ಸವ – ದಾವಣಗೆರೆ ವಿದ್ಯಾರ್ಥಿನಿ ಎನ್‍ಸಿಸಿ ಪರೇಡ್ ಲೀಡರ್

    ದೆಹಲಿಯಲ್ಲಿ ಗಣರಾಜ್ಯೋತ್ಸವ – ದಾವಣಗೆರೆ ವಿದ್ಯಾರ್ಥಿನಿ ಎನ್‍ಸಿಸಿ ಪರೇಡ್ ಲೀಡರ್

    ದಾವಣಗೆರೆ: ದೆಹಲಿಯಲ್ಲಿ ನಡೆಯುವ 2020ನೇ ಗಣರಾಜ್ಯೋತ್ಸವದ ಎನ್‍ಸಿಸಿ ಪರೇಡ್‍ಗೆ ನಮ್ಮ ರಾಜ್ಯದ ದಾವಣಗೆರೆ ವಿದ್ಯಾರ್ಥಿನಿ ಲೀಡರ್ ಆಗಿ ಸೆಲೆಕ್ಟ್ ಆಗಿದ್ದಾರೆ.

    ಇದೇ ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್ ನಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದ ಯುವತಿ ಶ್ರೀಷ್ಮಾ ಹೆಗ್ಡೆ ಎನ್‍ಸಿಸಿ ಪರೇಡ್ ಲೀಡರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಹರಿಹರ ಪಟ್ಟಣದ ನಿವಾಸಿಗಳಾದ ಡಾ.ಪ್ರವೀಣ್ ಹೆಗ್ಡೆ- ಬಿಂದು ಹೆಗ್ಡೆ ದಂಪತಿ ಪುತ್ರಿ ಶ್ರೀಷ್ಮಾ ಹೆಗ್ಡೆ, ಕುಮಾರಪಟ್ಟಣದ ಆದಿತ್ಯ ಬಿರ್ಲಾ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ಈಗ ಇವರು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಎನ್‍ಸಿಸಿ ಪೆರೇಡ್‍ಗೆ ಆಯ್ಕೆಯಾಗಿದ್ದು, 2020ರ ಗಣರಾಜ್ಯೋತ್ಸವದ ಎನ್‍ಸಿಸಿ ಪರೇಡ್ ಲೀಡ್ ಮಾಡಲಿದ್ದಾರೆ. 2017 ದ ದೆಹಲಿಯ ಗಣರಾಜ್ಯೋತ್ಸದ ಪರೇಡ್‍ನಲ್ಲಿ ಕೊಡಗಿನ ಐಶ್ವರ್ಯಾ ಲೀಡರ್ ಆಗಿದ್ದರು. ಈಗ 3 ವರ್ಷದ ನಂತರ ಮತ್ತೆ ಕರ್ನಾಟಕದ ಎನ್‍ಸಿಸಿ ಯುವತಿಗೆ ಅವಕಾಶ ದೊರೆತಿದೆ.

  • ಲೀಡರ್ ಟೈಟಲ್ ಯಾರದ್ದು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿತು

    ಲೀಡರ್ ಟೈಟಲ್ ಯಾರದ್ದು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿತು

    ಬೆಂಗಳೂರು: ಸುಮಾರು 6 ತಿಂಗಳಿನಿಂದ ಗೊಂದಲಗಳಿಗೆ ಕಾರಣವಾಗಿದ್ದ ಲೀಡರ್ ಟೈಟಲ್ ಯಾರದ್ದು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

    ಲೀಡರ್ ಟೈಟಲ್ ಎಎಮ್‍ಆರ್ ರಮೇಶ್ ಅವರಿಗೆ ಸೇರಿದ್ದು ಎಂದು ಫಿಲ್ಮ್ ಚೇಂಬರ್ ಅಧಿಕೃತವಾಗಿ ಲೆಟರ್ ನೀಡಿದೆ. ಅಷ್ಟೇ ಅಲ್ಲದೇ ಇನ್ನು ಮುಂದೆ ತರುಣ್ ಶಿವಪ್ಪ ಈ ಟೈಟಲ್ ಬಳಸಬಾರದು ಎಂದು ಫಿಲ್ಮ್ ಚೇಂಬರ್ ಲೆಟರ್‍ನಲ್ಲಿ ತಿಳಿಸಿದೆ.

    ಸೈನೆಡ್ ನಿರ್ದೇಶಕ ಎಂಆರ್ ರಮೇಶ್ ಲೀಡರ್ ಟೈಟಲ್‍ನ್ನು ಅವರ ಬ್ಯಾನರ್‍ನಲ್ಲಿ ಸುಮಾರು 7 ವರ್ಷದ ಹಿಂದೆ ನೊಂದಾಯಿಸಿ ವರ್ಷ ವರ್ಷ ರಿನಿವಲ್ ಕೂಡ ಮಾಡಿಸುತ್ತಿದ್ದರು, ಆದ್ರೆ ನಿರ್ಮಾಪಕ ತರುಣ್ ಶಿವಪ್ಪ ಇವರನ್ನು ಸಂಪರ್ಕಿಸದೆ ಲೀಡರ್ ಹೆಸರಿನ ಸಿನಿಮಾ ಅನೌನ್ಸ್ ಮಾಡಿ ಶೂಟಿಂಗ್ ಶುರುಮಾಡಿದ್ದಲ್ಲದೆ ಪ್ರಚಾರ ಮಾಡಿದ್ದರು. ಈ ವಿಚಾರವಾಗಿ ರಮೇಶ್ ಅವರು ಫಿಲ್ಮ್ ಚೇಂಬರ್ ಮೆಟ್ಟಿಲನ್ನು ಏರಿದ್ದರು.

    ಈ ಟೈಟಲ್‍ನಲ್ಲಿ ಸಿನಿಮಾ ಮಾಡಲು ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದು ಅತೀ ಶೀಘ್ರದಲ್ಲೇ ಲೀಡರ್ ಹೆಸರಿನ ನೈಜ ಘಟನೆ ಆಧಾರಿತ ಸಿನಿಮಾ ಶುರುವಾಗಲಿದೆ ಎಂದು ನಿರ್ದೇಶಕ ರಮೇಶ್ ಹೇಳಿದ್ದಾರೆ.