Tag: ಲೀಕ್

  • ಕಮಲ್ ಹಾಸನ್ ಪುತ್ರಿಯ ಒಳಉಡುಪಿನಲ್ಲಿರುವ ಖಾಸಗಿ ಫೋಟೋ ಲೀಕ್

    ಕಮಲ್ ಹಾಸನ್ ಪುತ್ರಿಯ ಒಳಉಡುಪಿನಲ್ಲಿರುವ ಖಾಸಗಿ ಫೋಟೋ ಲೀಕ್

    ಮುಂಬೈ: ಖ್ಯಾತ ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ಅವರ ಖಾಸಗಿ ಫೋಟೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಅಕ್ಷರಾ ಹಾಸನ್ ತನ್ನ ಪ್ರೈವೇಟ್ ಫೋಟೋ ಲೀಕ್ ಆಗಿ ವೈರಲ್ ಆಗುತ್ತಿದ್ದಂತೆಯೇ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಅಕ್ಷರಾ ಒಳಪಡುಪಿನಲ್ಲಿರುವ ಫೋಟೋಗಳು ವೈರಲ್ ಆಗಿದೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಬೆಚ್ಚಿಬಿದ್ದಿದ್ದಾರೆ.

    ಅಕ್ಷರಾ ಅವರ ಈ ಫೋಟೋವನ್ನು ಎಡಿಟ್ ಮಾಡಲಾಗಿದ್ದೀಯಾ ಅಥವಾ ಇದು ಸ್ವತಃ ಆಕೆಯ ಫೋಟೋನಾ ಎಂಬುದು ಖಚಿತವಾಗಿಲ್ಲ. ಆದರೆ ಅಕ್ಷರಾ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಶೇರ್ ಆಗುತ್ತಿದೆ.

    ಅಕ್ಷರಾ ಹಾಸನ್ 2015ರಲ್ಲಿ ಹಿರಿಯ ನಟ ಅಮಿತಾಬ್ ಬಚ್ಚನ್ ಹಾಗೂ ನಟ ಧನುಷ್ ಜೊತೆ ‘ಶಮಿತಾಬ್’ ಚಿತ್ರದಲ್ಲಿ ನಟಿಸಿದ್ದರು. ಈ ಹಿಂದೆ ‘ದಿ-ವಿಲನ್’ ಸಿನಿಮಾದ ನಟಿ ಆ್ಯಮಿ ಜಾಕ್ಸನ್ ಅವರ ಫೋನ್ ಹ್ಯಾಕ್ ಆಗಿ ಅವರ ಖಾಸಗಿ ಫೋಟೋಗಳು ಲೀಕ್ ಆಗಿ ವೈರಲ್ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೀತಾ ಗೋವಿಂದಂ ಚಿತ್ರದಲ್ಲಿ ಲಿಪ್‍ಲಾಕ್ ಸೀನ್ ಕಟ್- ಸೀಕ್ರೆಟ್ ರಿವೀಲ್ ಮಾಡಿದ್ರು ರಶ್ಮಿಕಾ

    ಗೀತಾ ಗೋವಿಂದಂ ಚಿತ್ರದಲ್ಲಿ ಲಿಪ್‍ಲಾಕ್ ಸೀನ್ ಕಟ್- ಸೀಕ್ರೆಟ್ ರಿವೀಲ್ ಮಾಡಿದ್ರು ರಶ್ಮಿಕಾ

    ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕೊನೆಗೂ ತಮ್ಮ ಗೀತಾ ಗೋವಿಂದಂ ಚಿತ್ರದಲ್ಲಿ ಲಿಪ್‍ಲಾಕ್ ಸೀನ್ ಏಕೆ ಇರಲಿಲ್ಲ ಎಂಬುದರ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

    ರಶ್ಮಿಕಾ ಅಭಿನಯಿಸಿದ ಗೀತಾ ಗೋವಿಂದಂ ಚಿತ್ರ ತೆರೆ ಕಾಣುವ ಮೂರು ದಿನದ ಹಿಂದೆ ವಿಜಯ್ ಜೊತೆಗಿನ ಲಿಪ್‍ಲಾಕ್ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 40 ಸೆಕೆಂಡ್ ಇರುವ ಈ ದೃಶ್ಯ ನೋಡಿ ಕೆಲವರು ಖುಷಿಪಟ್ಟರೆ, ಮತ್ತೆ ಹಲವರು ಕಿಡಿಕಾರಿದ್ದರು.

    ರಶ್ಮಿಕಾಗೆ ಈಗಾಗಲೇ ನಿಶ್ಚಿತಾರ್ಥ ಆಗಿದೆ. ಹೀಗಿರುವಾಗ ಇಂಥ ದೃಶ್ಯಗಳಲ್ಲಿ ನಟಿಸುವುದು ಅಪರಾಧ ಎಂದು ಸಿಡಿಮಿಡಿಗೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿಜಯ್ ದೇವರಕೊಂಡ ಜೊತೆಗಿನ ಲಿಪ್‍ಲಾಕ್ ದೃಶ್ಯಗಳಿಗೆ ಕತ್ತರಿ ಹಾಕುವಂತೆ ನಿರ್ದೇಶಕ ಮತ್ತು ನಿರ್ಮಾಪಕರ ಮೇಲೆ ಸ್ವತಃ ರಶ್ಮಿಕಾ ಅವರೇ ಒತ್ತಡ ತಂದಿದ್ದರಂತೆ. ಹೀಗಾಗಿಯೇ ಆ ದೃಶ್ಯ ಗೀತ ಗೋವಿಂದಂ ಚಿತ್ರದಲ್ಲಿ ಕಾಣಿಸಲಿಲ್ಲ. ನನ್ನ ಮಾತಿಗೆ ಸಿನಿಮಾ ನಿರ್ದೇಶಕ ಪರಶುರಾಮ್ ಕೂಡ ಕೈ ಜೋಡಿಸಿದ್ರು ಅಂತ ರಶ್ಮಿಕಾ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ರಶ್ಮಿಕಾ ಮತ್ತು ವಿಜಯ್ ನಡುವಿನ ಲಿಪ್‍ಲಾಕ್ ದೃಶ್ಯ ಶೂಟ್ ಆಗಿತ್ತು. ಆದರೆ ಫೈನಲ್ ಕಾಪಿ ನೋಡಿದಾಗ ಅದು ಅನಗತ್ಯ ಎನ್ನಿಸಿತು. ಹೀಗಾಗಿ ನಾವೇ ಆ ದೃಶ್ಯಗಳಿಗೆ ಕತ್ತರಿ ಹಾಕಿದೆವು. ನಮಗೆ ಯಾರಿಂದಲೂ ಈ ದೃಶ್ಯಗಳನ್ನು ತೆಗೆಯಬೇಕೆಂದು ಫೋನ್ ಬಂದಿಲ್ಲ. ಯಾರೂ ಒತ್ತಾಯ ಕೂಡ ಮಾಡಿಲ್ಲ ಅಂತ ಚಿತ್ರದ ನಿರ್ದೇಶಕ ಪರಶುರಾಮ್ ತಿಳಿಸಿದ್ದಾರೆ.

    ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ಗಾಸಿಪ್ ಬಗ್ಗೆ ರಶ್ಮಿಕಾ ಅವರನ್ನು ಕೇಳಿದ್ದಾಗ ಅವರು, “ಅದು ನನ್ನ ವೈಯಕ್ತಿಕ ವಿಚಾರ. ಅದನ್ನು ನಾನು ಸಾರ್ವಜನಿಕವಾಗಿ ಚರ್ಚೆ ಮಾಡುವ ಅಗತ್ಯ ಇಲ್ಲ” ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಿಯೋ ಗ್ರಾಹಕರ ಮಾಹಿತಿ ಸೋರಿಕೆ ಆಗಿದ್ಯಾ? ನಿಮ್ಮ ಅನುಮಾನಗಳಿಗೆ ಇಲ್ಲಿದೆ ಉತ್ತರ

    ಜಿಯೋ ಗ್ರಾಹಕರ ಮಾಹಿತಿ ಸೋರಿಕೆ ಆಗಿದ್ಯಾ? ನಿಮ್ಮ ಅನುಮಾನಗಳಿಗೆ ಇಲ್ಲಿದೆ ಉತ್ತರ

    ನವದೆಹಲಿ: ರಿಲಯನ್ಸ್ ಜಿಯೋ ಗ್ರಾಹಕರ ಡೇಟಾ ಲೀಕ್ ಆಗಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

    magicapk.com ತಾಣ ಜಿಯೋ ಬಳಕೆದಾರರ ಮಾಹಿತಿಯನ್ನು ಪ್ರಕಟಿಸಿದೆ. ಆದರೆ ಜಿಯೋ ಈ ಸುದ್ದಿಯನ್ನು ತಿರಸ್ಕರಿಸಿದ್ದು, ಬಳಕೆದಾರರ ಮಾಹಿತಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟ ಪಡಿಸಿದೆ.

    ಆಗಿದ್ದು ಏನು?
    ಭಾನುವಾರ ಸಂಜೆ ಕೆಲ ಜಿಯೋ ಬಳಕೆದಾರರು ನಮ್ಮ ಮಾಹಿತಿ ಸೋರಿಕೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪ್ರಕಟಿಸಿದ್ದರು. ಈ ಪೋಸ್ಟ್, ಟ್ವೀಟ್ ಗಳು ಸಂಚಲನ ಮೂಡಿಸಿದ ಬಳಿಕ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಯಿತು.

    ಈ ವೆಬ್‍ಸೈಟ್ ನಲ್ಲಿರುವ ಮಾಹಿತಿಗಳು ನಿಜವಾಗಿಯೂ ಸೋರಿಕೆಯಾಗಿದ್ಯಾ ಎಂದು ಪರಿಶೀಲನೆ ನಡೆಸಿದ್ದು, ಈ ವೇಳೆ ನಮೂದಿಸಿದ ಮೊಬೈಲ್ ನಂಬರ್ ಮತ್ತು ಅದಕ್ಕೆ ಸಂಬಂಧಿಸಿದ ಗ್ರಾಹಕರ ಸಂಖ್ಯೆ ತಾಳೆ ಆಗುತ್ತಿರಲಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಹಾಗಾದ್ರೆ ಸೋರಿಕೆಯಾಗಿದ್ದು ಹೇಗೆ?
    ಥರ್ಡ್ ಪಾರ್ಟಿ ವೆಬ್‍ಸೈಟ್ ಮೂಲಕ ರಿಚಾರ್ಜ್ ಮಾಡಲು ಸಾಧ್ಯವಿದೆ. ಹೀಗಾಗಿ ಈ ವೆಬ್‍ಸೈಟ್ ಗಳಲ್ಲಿ ರಿಚಾರ್ಜ್ ಮಾಡಿದ ಗ್ರಾಹಕರ ಮೊಬೈಲ್ ಸಂಖ್ಯೆಗಳು ಲೀಕ್ ಆಗಿರಬಹುದು ಎಂದು ಕೆಲ ಮಾಧ್ಯಮಗಳು ವರದಿ ಪ್ರಕಟಿಸಿದೆ.

    ಸಸ್ಪೆಂಡ್ ಆಗಿದೆ ವೆಬ್‍ಸೈಟ್:
    ಜಿಯೋ ಗ್ರಾಹಕರ ಮಾಹಿತಿ ಸೋರಿಕೆ ಮಾಡಿದ್ದೇವೆ ಎಂದು ಪ್ರಕಟಿಸಿದ ಬಳಿಕ ಈಗ ಈ ವೆಬ್‍ಸೈಟ್ ಅಮಾನತು ಆಗಿದ್ದು, ಯಾವುದೇ ಪುಟ ಓಪನ್ ಆಗುತ್ತಿಲ್ಲ. ಐಪಿ ವಿಳಾಸ ಚೆಕ್ ಮಾಡಿದಾಗ ಮುಂಬೈ ಮೂಲದ ವೆಬ್‍ಸೈಟ್ ಇದಾಗಿದ್ದು, ಈ ವರ್ಷ ಮೇ ತಿಂಗಳಿನಲ್ಲಿ ಡೊಮೈನ್ ರಿಜಿಸ್ಟ್ರರ್ ಆಗಿದೆ. ವೆಬ್‍ಸೈಟ್ ಸಸ್ಪೆಂಡ್ ಆಗಿದ್ಯಾ ಅಥವಾ ಬಹಳಷ್ಟು ಜನ ಭೇಟಿ ನೀಡಿದ್ದರಿಂದ ಹೆವಿ ಟ್ರಾಫಿಕ್ ಆಗಿ ಪೇಜ್ ಓಪನ್ ಆಗುತ್ತಿಲ್ಲವೇ ಎನ್ನುವುದು ದೃಢಪಟ್ಟಿಲ್ಲ

    ಸೋರಿಕೆಯಾಗಿಲ್ಲ:
    ಗ್ರಾಹಕರ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ. ಗ್ರಾಹಕರ ಮಾಹಿತಿ ನಾವು ಸುರಕ್ಷಿತವಾಗಿ ಇಟ್ಟಕೊಂಡಿದ್ದೇವೆ. ಈಗಾಗಲೇ ನಾವು ಈ ಸಂಬಂಧ ವೆಬ್‍ಸೈಟ್ ವಿರುದ್ಧ ಕಾನೂನು ಸಂಸ್ಥೆಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಜಿಯೋದ ವಕ್ತಾರರು ತಿಳಿಸಿದ್ದಾರೆ.