Tag: ಲೀಕ್

  • ಬಿಡುಗಡೆಗೂ ಮುನ್ನ ‘ಲಿಯೋ’ ಸಿನಿಮಾದ ದೃಶ್ಯ ಲೀಕ್: ಟೀಮ್ ಕಿಡಿಕಿಡಿ

    ಬಿಡುಗಡೆಗೂ ಮುನ್ನ ‘ಲಿಯೋ’ ಸಿನಿಮಾದ ದೃಶ್ಯ ಲೀಕ್: ಟೀಮ್ ಕಿಡಿಕಿಡಿ

    ನಾಳೆ ವಿಶ್ವದಾದ್ಯಂತ ದಳಪತಿ ವಿಜಯ್  ಅವರ ಲಿಯೋ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಆರಂಭಿಕ ಕೆಲ ದೃಶ್ಯಗಳನ್ನು ಆನ್ ಲೈನ್ ನಲ್ಲಿ ಸೋರಿಕೆ (Scene Leek) ಆಗಿವೆ. ಇದು ಥಿಯೇಟರ್ ನಿಂದ ಸೋರಿಕೆಯಾದ ದೃಶ್ಯವಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟರೆ ಇನ್ನೂ ಕೆಲವರು ಇದು ಡಿಲಿಟೆಡ್ ದೃಶ್ಯವೆಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಟೀಮ್‍ ಗೆ ಇದು ನುಂಗಲಾರದ ತುತ್ತಾಗಿದೆ.

    ಕಾನೂನು ಸಂಕಷ್ಟ

    ಬಹು ನಿರೀಕ್ಷಿತ ಲಿಯೋ (Leo) ಸಿನಿಮಾ ಅಕ್ಟೋಬರ್ 19ರಂದು ವಿಶ್ವದಾದ್ಯಂತ ರಿಲೀಸ್ ಗೆ ಸಿದ್ಧತೆ ಮಾಡಿಕೊಂಡಿದೆ. ಆದರೆ, ತೆಲುಗಿನಲ್ಲಿ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಕನ್ನಡ, ಮಲಯಾಳಂ, ಹಿಂದಿ, ತಮಿಳಿನಲ್ಲಿ ಈ ಸಿನಿಮಾ ಏಕಕಾಲದಲ್ಲಿ ಬಿಡುಗಡೆಯಾದರೆ, ತೆಲುಗಿನಲ್ಲಿ ಅಕ್ಟೋಬರ್ 20ರವರೆಗೂ ಕಾಯುವುದು ಅನಿವಾರ್ಯವಾಗಿದೆ.

    ಲಿಯೋ ಸಿನಿಮಾದ ಶೀರ್ಷಿಕೆಯ ಕುರಿತಂತೆ ಸಿತಾರಾ ಎಂಟರ್ ಟೈನ್ಮೆಂಟ್ ನಿರ್ಮಾಪಕ ನಾಗ ವಂಶಿ ಕೋರ್ಟು ಮೆಟ್ಟಿಲು ಏರಿದ್ದರು. ಈ ಟೈಟಲ್ ನಾಗ ವಂಶಿ ಅವರಿಗೆ ಸೇರಿದ್ದು ಆಗಿದ್ದು. ಹಾಗಾಗಿ ಈ ಟೈಟಲ್ ನಲ್ಲಿ ಸಿನಿಮಾ ರಿಲೀಸ್ ಮಾಡದಂತೆ ಮನವಿ ಮಾಡಿಕೊಂಡಿದ್ದರು. ನಿನ್ನೆ ಹೈದರಾಬಾದ್ ನ ಸಿಟಿ ಸಿವಿಲ್ ನ್ಯಾಯಾಲಯವು ತೆಲುಗಿನಲ್ಲಿ ಲಿಯೋ ಶೀರ್ಷಿಕೆ ಬಳಕೆ ಕುರಿತಂತೆ ತಡೆಯಾಜ್ಞೆ (Injunction) ನೀಡಿದೆ.

     

    ಅಕ್ಟೋಬರ್ 20ನೇ ತಾರೀಖಿನವರೆಗೂ ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡದಂತೆ ಮಾನ್ಯ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಹೀಗಾಗಿ ಸಹಜವಾಗಿಯೇ ದಳಪತಿ ವಿಜಯ್ (Dalpati Vijay) ಅಭಿಮಾನಿಗಳಿಗೆ ನಿರಾಸೆ ಆಗಿದೆ. ಅಕ್ಟೋಬರ್ 20ರಂದು ನ್ಯಾಯಾಲಯ ಏನು ಹೇಳಲಿದೆ ಎಂದು ಅಭಿಮಾನಿಗಳು ಕಾದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕಲ್ಕಿ’ ಸಿನಿಮಾ ಫೋಟೋ ಲೀಕ್: ಗಂಭೀರ ಪ್ರಕರಣ ಎಂದ ನಿರ್ಮಾಪಕರು

    ‘ಕಲ್ಕಿ’ ಸಿನಿಮಾ ಫೋಟೋ ಲೀಕ್: ಗಂಭೀರ ಪ್ರಕರಣ ಎಂದ ನಿರ್ಮಾಪಕರು

    ತ್ತೀಚೆಗೆ ಪ್ರಭಾಸ್ ನಟನೆಯ ಕಲ್ಕಿ (Kalki) ಸಿನಿಮಾದ ಫೋಟೋವೊಂದು ಲೀಕ್ ಆಗಿತ್ತು. ಸಿನಿಮಾದ ಪ್ರಮುಖ ಗೆಟಪ್ ಒಳಗೊಂಡಿದ್ದ ಆ ಫೋಟೋವನ್ನು ಯಾರು ಲೀಕ್ ಮಾಡಿದ್ದಾರೆ ಎಂದು ನಿರ್ಮಾಣ ಸಂಸ್ಥೆ ತಲೆಕೆಡಿಸಿಕೊಂಡಿತ್ತು. ಸಿನಿಮಾ ರಿಲೀಸ್ ಗೂ ಮುನ್ನ ಹೀಗೆ ಪಾತ್ರಗಳ ಬಗ್ಗೆ ರಿವಿಲ್ ಮಾಡುತ್ತಿರುವುದು ಕೋಪ ತರಿಸಿತ್ತು. ಇದೀಗ ನಿರ್ಮಾಪಕರು ಈ ಕುರಿತು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ.

    ಕಲ್ಕಿ ಸಿನಿಮಾದ ವಿಎಫ್ಎಕ್ಷ್  ಮಾಡುತ್ತಿರುವ ಸಂಸ್ಥೆಯೇ ಫೋಟೋವನ್ನು ಲೀಕ್ ಮಾಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಂಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ಮಾಪಕರು ಪೊಲೀಸ್ ಮೊರೆ ಹೋಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

    ಭಾರೀ ಬಜೆಟ್ ನಲ್ಲಿ ರೆಡಿ ಆಗಿರುವ ಕಲ್ಕಿ ಚಿತ್ರಕ್ಕೆ ಈ ಹಿಂದೆ ಪ್ರಾಜೆಕ್ಟ್ ಕೆ (Project K) ಹೆಸರಿನಿಂದ ಕರೆಯಲಾಗುತ್ತಿತ್ತು. ಸಿನಿಮಾದ ಗ್ಲಿಂಪ್ಸ್  (Glimpse) ರಿಲೀಸ್ ದಿನ ಅಸಲಿ ಹೆಸರನ್ನು ಅನೌನ್ಸ್ ಮಾಡಲಾಯಿತು. ಈ ಗ್ಲಿಂಪ್ಸ್ ನಲ್ಲಿ ಸಾಕಷ್ಟು ಸಂಗತಿಗಳನ್ನು ನಿರ್ದೇಶಕರು ಹೇಳಿದ್ದರು. ಇದನ್ನೂ ಓದಿ:‘ಕುದ್ರು’ ಸಿನಿಮಾದಲ್ಲಿ ಕ್ಲಾಸ್ ಬಂಕ್ ಹಾಡು

    ಈ ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಪ್ರಭಾಸ್ ಜೊತೆ ಕಮಲ್ ಹಾಸನ್ (Kamal Haasan),  ರಾಣಾ ದಗ್ಗುಬಾಟಿ ಈಗಾಗಲೇ ಅಮೆರಿಕಾಗೆ ಪ್ರವಾಸ ಬೆಳೆಸಿದ್ದಾರೆ. ಸುಮಾರು 600 ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದ್ದು, ಅನೇಕ ದಿಗ್ಗಜ ಕಲಾವಿದರು ಈ ಚಿತ್ರಕ್ಕಾಗಿ ಒಂದಾಗಿದ್ದಾರೆ. ಇಷ್ಟೊಂದು ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾದ ಫಸ್ಟ್ ಲುಕ್ (First Look) ಬೇರೆ ಹಂತದಲ್ಲಿ ಇರಬೇಕಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

     

    `ಪಠಾಣ್’ (Pathaan) ಚಿತ್ರದ ಸೂಪರ್ ಸಕ್ಸಸ್‌ನಲ್ಲಿರುವ ದೀಪಿಕಾ ಪಡುಕೋಣೆ (Deepika Padukone) `ಪ್ರಾಜೆಕ್ಟ್ ಕೆ’ ಸಿನಿಮಾಗೆ ಭರ್ಜರಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. `ಪಠಾಣ್’ ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಹಾಗಾಗಿ `ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ದುಬಾರಿ ಸಂಭಾವನೆಯನ್ನೇ ನಟಿ ಪಡೆದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಡುಗಡೆಗೂ ಮುನ್ನ ‘ಜವಾನ್’ ಚಿತ್ರದ ವಿಡಿಯೋ ಲೀಕ್: ಪೊಲೀಸ್ ಠಾಣೆ ಮೆಟ್ಟಿಲೇರಿದ ತಂಡ

    ಬಿಡುಗಡೆಗೂ ಮುನ್ನ ‘ಜವಾನ್’ ಚಿತ್ರದ ವಿಡಿಯೋ ಲೀಕ್: ಪೊಲೀಸ್ ಠಾಣೆ ಮೆಟ್ಟಿಲೇರಿದ ತಂಡ

    ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ರಿಲೀಸ್ ಗೂ ಮುನ್ನ ಚಿತ್ರತಂಡಕ್ಕೆ ಭರ್ಜರಿ ಶಾಕ್ ಕೊಟ್ಟಿದೆ ಮೈಕ್ರೋ ಬ್ಲಾಗ್ ವೊಂದು ಚಿತ್ರದ ವಿಡಿಯೋ (Video) ತುಣಕೊಂದನ್ನು ಪೋಸ್ಟ್ ಮಾಡಿದ್ದು, ಅದರಿಂದಾಗಿ ಸಿನಿಮಾದ ಹಲವು ವಿಷಯಗಳು ಬಹಿರಂಗವಾಗಿವೆಯಂತೆ. ಹಾಗಾಗಿ ಚಿತ್ರತಂಡದ ಪ್ರದೀಪ್ ನಿಮಾನಿ ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಫ್.ಐ.ಆರ್ ಕೂಡ ದಾಖಲಾಗಿದೆ.

    ಶಾರುಖ್ ಖಾನ್ (Shahrukh Khan) ಅಭಿನಯದ ‘ಪಠಾಣ್’ ಚಿತ್ರವು ಜಗತ್ತಿನಾದ್ಯಂತ 1000 ಕೋಟಿ ರೂ. ಗಳಿಕೆ ಮಾಡುವ ಮೂಲಕ ಬ್ಲಾಕ್ಬಸ್ಟರ್ ಆಗಿತ್ತು. ಇದರಿಂದ ಸಹಜವಾಗಿಯೇ ಅವರ ಮುಂದಿನ ಚಿತ್ರ ‘ಜವಾನ್’ (Jawana) ಮೇಲೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಈ ಚಿತ್ರದ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಹಲವು ಪ್ರತಿಷ್ಠಿತ ಸಂಸ್ಥೆಗಳು ಮುಂದಾಗಿದ್ದು, ಈ ಪೈಕಿ ಚಿತ್ರದ ಆಡಿಯೋ (Audio) ಹಕ್ಕುಗಳು ದಾಖಲೆಯ 36 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿರುವ ಸುದ್ದಿ ಬಂದಿದೆ. ಇದನ್ನೂ ಓದಿ:ಎಡಗೈ ಬಳಕೆದಾರರಿಗೆಂದೇ ವಿಶೇಷವಾದ ಹೆಲ್ಮೆಟ್ ಲಾಂಚ್- ದಿಗಂತ್‌ & ಟೀಮ್‌ ಸಾಥ್

    ‘ಜವಾನ್’ ಚಿತ್ರದ ಆಡಿಯೋ ಹಕ್ಕುಗಳನ್ನು ಭಾರತದ ಖ್ಯಾತ ಆಡಿಯೋ ಸಂಸ್ಥೆಯಾದ ಟಿ-ಸೀರೀಸ್ ತನ್ನದಾಗಿಸಿಕೊಂಡಿದ್ದು, 36 ಕೋಟಿ ರೂ.ಗಳನ್ನು ಕೊಟ್ಟು ಹಕ್ಕುಗಳನ್ನು ಪಡೆದಿದೆ ಎಂದು ಹೇಳಲಾಗಿದೆ. ಚಿತ್ರಕ್ಕೆ ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್ (Aniruddha Ravichandran), ಈ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.

    ಈ ವರ್ಷದ ಅತೀ ನಿರೀಕ್ಷಿತ ಮತ್ತು ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ನಿರ್ಮಿಸುತ್ತಿದ್ದು, ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಾದ ಅಟ್ಲಿ ನಿರ್ದೇಶನ ಮಾಡಿದ್ದಾರೆ.

     

    ‘ಜವಾನ್’ ಒಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ಯೋಗಿ ಬಾಬು, ಸುನೀಲ್ ಗ್ರೋವರ್, ಸಾನ್ಯಾ ಮಲ್ಹೋತ್ರಾ ಸೇರಿದಂತ ಹಲವು ಜನಪ್ರಿಯ ಕಲಾವಿದರು ಅಭಿನಯಿಸಿದ್ದಾರೆ. ದೀಪಿಕಾ ಪಡುಕೋಣೆ, ಸಂಜಯ್ ದತ್ ಮತ್ತು ವಿಜಯ್ ಅತಿಥಿ ಕಲಾವಿದರಾಗಿ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.‘ಜವಾನ್’ ಚಿತ್ರವು ಸೆಪ್ಟೆಂಬರ್ 7ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಿಲೀಸ್ ಗೂ ಮುನ್ನವೇ ಜವಾನ ದೃಶ್ಯ ಲೀಕ್ : ಹೈಕೋರ್ಟ್ ಮೆಟ್ಟಿಲೇರಿದ ಶಾರುಖ್ ಖಾನ್

    ರಿಲೀಸ್ ಗೂ ಮುನ್ನವೇ ಜವಾನ ದೃಶ್ಯ ಲೀಕ್ : ಹೈಕೋರ್ಟ್ ಮೆಟ್ಟಿಲೇರಿದ ಶಾರುಖ್ ಖಾನ್

    ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shahrukh Khan) ನಟನೆಯ ‘ಜವಾನ’ (Jawan) ಸಿನಿಮಾ ಜೂನ್ ನಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಈ ಚಿತ್ರದ ಮಹತ್ವದ ದೃಶ್ಯಗಳು ಮತ್ತು ಫೋಟೋಗಳು ಲೀಕ್ (Leake) ಆಗಿವೆ. ಈ ಕುರಿತು ಸ್ವತಃ ಶಾರುಖ್ ಖಾನ್ ಗರಂ ಆಗಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಬಳಸಿಕೊಳ್ಳಬೇಕಾದ ದೃಶ್ಯ ಮತ್ತು ಫೋಟೋಗಳು ಲೀಕ್ ಆಗುತ್ತಿರುವುದಕ್ಕೆ ಮತ್ತು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರುವವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಈ ಸಿನಿಮಾವನ್ನು ತಮ್ಮದೇ ರೆಡ್ ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಶಾರುಖ್ ಖಾನ್, ದೃಶ್ಯಗಳು ಸೋರಿಕೆಯಿಂದಾಗಿ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಲಿದೆ. ಹೀಗಾಗಿ ಲೀಕ್ ಮಾಡುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ

    ಶಾರುಖ್ ಖಾನ್ ಮನವಿಯನ್ನು ಪುರಸ್ಕರಿಸಿರುವ ದೆಹಲಿ ಹೈಕೋರ್ಟ್ (High Court) , ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿರುವ ದೃಶ್ಯಗಳನ್ನು ಕೂಡಲೇ ಡಿಲಿಟ್ ಮಾಡಬೇಕು ಎಂದು ಆದೇಶ ನೀಡಿದೆ. ಯುಟ್ಯೂಬ್, ವೆಬ್ ಸೈಟ್ ಸೇರಿದಂತೆ ಜವಾನ ದೃಶ್ಯಗಳನ್ನು ಅಪ್ ಲೋಡ್ ಮಾಡಿದವರು ಕೂಡಲೇ ಡಿಲಿಟ್ ಮಾಡಬೇಕು ಎಂದು ಹೈಕೋರ್ಟ್ ಆದೇಶ ಮಾಡಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

    ಜವಾನ ಬಹುತಾರಾಗಣ ಹೊಂದಿರುವ ಸಿನಿಮಾ. ಶಾರುಖ್ ಜೊತೆ ದೀಪಿಕಾ ಪಡುಕೋಣೆ (Deepika Padukone) ಹಾಗೂ ನಯನತಾರಾ ನಟಿಸಿದ್ದಾರೆ. ಈ ಮೂವರ ಸಂಗಮದ ಮೊದಲ ಸಿನಿಮಾ ಇದಾಗಿದೆ. ಇವರ ಜೊತೆ ಖ್ಯಾತ ತಮಿಳು ನಟ ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾನಾ ಕಾರಣಗಳಿಂದಾಗಿ ಈ ಸಿನಿಮಾ ಕುತೂಹಲ ಮೂಡಿಸಿದೆ.

  • ಬಿಜೆಪಿ ಐಟಿ ಸೆಲ್‍ನಿಂದ ಫೋನ್ ನಂಬರ್ ಲೀಕ್, ಅತ್ಯಾಚಾರ, ಕೊಲೆ ಬೆದರಿಕೆ ಕರೆಗಳು ಬರುತ್ತಿವೆ- ಸಿದ್ಧಾರ್ಥ್ ಆಕ್ರೋಶ

    ಬಿಜೆಪಿ ಐಟಿ ಸೆಲ್‍ನಿಂದ ಫೋನ್ ನಂಬರ್ ಲೀಕ್, ಅತ್ಯಾಚಾರ, ಕೊಲೆ ಬೆದರಿಕೆ ಕರೆಗಳು ಬರುತ್ತಿವೆ- ಸಿದ್ಧಾರ್ಥ್ ಆಕ್ರೋಶ

    ಚೆನ್ನೈ: ನನ್ನ ಫೋನ್ ನಂಬರ್ ನ್ನು ತಮಿಳುನಾಡು ಬಿಜೆಪಿ ಹಾಗೂ ತಮಿಳುನಾಡು ಬಿಜೆಪಿ ಐಟಿ ಸೆಲ್‍ನವರು ಲೀಕ್ ಮಾಡಿದ್ದು, ನೂರಾರು ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ತಮಿಳು ನಟ ಸಿದ್ಧಾರ್ಥ್ ಆರೋಪಿಸಿದ್ದಾರೆ. ಈ ಬಗ್ಗೆ ಇದೀಗ ಟ್ವಿಟ್ಟರ್ ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

    ಈ ಕುರಿತು ಟ್ವೀಟ್ ಮಾಡಿರುವ ಸಿದ್ಧಾರ್ಥ್, ನನ್ನ ಫೋನ್ ನಂಬರ್ ನ್ನು ತಮಿಳುನಾಡು ಬಿಜೆಪಿ ಹಾಗೂ ತಮಿಳುನಾಡು ಬಿಜೆಪಿ ಐಟಿ ಸೆಲ್‍ನವರು ಲೀಕ್ ಮಾಡಿದ್ದಾರೆ. ಸುಮಾರು 500ಕ್ಕೂ ಹೆಚ್ಚು ನಿಂದನೆ, ಅತ್ಯಾಚಾರ ಹಾಗೂ ಕೊಲೆ ಬೆದರಿಕೆಯ ಕರೆಗಳು ಬರುತ್ತಿವೆ. ಕಳೆದ 24 ಗಂಟೆಗಳಿಂದ ನನಗೆ ಹಾಗೂ ನನ್ನ ಕುಟುಂಬದವರಿಗೆ ಬೆರಿಕೆ ಕರೆಗಳು ಬರುತ್ತಿವೆ. ಬಿಜೆಪಿಯ ಲಿಂಕ್ ಹಾಗೂ ಡಿಪಿಗಳೊಂದಿಗೆ ಎಲ್ಲ ನಂಬರ್‍ಗಳನ್ನು ದಾಖಲಿಸಿದ್ದೇನೆ ಹಾಗೂ ಪೊಲೀಸರಿಗೆ ಹಸ್ತಾಂತರಿಸುತ್ತಿದ್ದೇನೆ. ನಾನು ಸುಮ್ಮನಿರುವುದಿಲ್ಲ, ಪ್ರಯತ್ನಿಸುತ್ತಲೇ ಇರುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಟ್ವೀಟ್‍ನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

    ತಮಿಳುನಾಡು ಬಿಜೆಪಿಯ ಹಲವು ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಅವುಗಳಲ್ಲಿ ಇದೂ ಒಂದು. ಬಿಜೆಪಿ ಸದಸಯರು ನಿನ್ನೆ ನನ್ನ ಫೋನ್ ನಂಬರ್ ಲೀಕ್ ಮಾಡಿದ್ದಾರೆ. ನನ್ನ ಮೇಲೆ ದಾಳಿ ನಡೆಸಿ, ಕಿರುಕುಳ ನೀಡುವಂತೆ ಜನರಿಗೆ ಹೇಳಿದ್ದಾರೆ.

    ಈ ವ್ಯಕ್ತಿ ಇನ್ನೆಂದೂ ಇನ್ನೆಂದೂ ಬಾಯ್ಬಿಡಬಾರದು ಬರೆದಿದ್ದಾರೆ. ಕೋವಿಡ್‍ನಿಂದ ನಾವು ಬದುಕಬಹುದು, ಇಂತಹ ಜನರಿಂದ ನಾವು ಉಳಿಯಲು ಸಾಧ್ಯವೇ ಎಂದು ಸಿದ್ಧಾರ್ಥ್ ಟ್ವೀಟ್‍ನಲ್ಲಿ ಪ್ರಶ್ನಿಸಿದ್ದಾರೆ.

    ಈ ಕುರಿತು ಇದೀಗ ಟ್ವಿಟ್ಟರ್ ನಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಟ್ರೆಂಡಿಂಗ್‍ನಲ್ಲಿದೆ. ಕೋವಿಡ್ ನಿರ್ವಹಣೆ ವಿಚಾರವಾಗಿ ಸಿದ್ಧಾರ್ಥ್ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

  • ಪ್ರಭಾಸ್- ಶ್ರದ್ಧಾ ಕಪೂರ್‌ರ ರೊಮ್ಯಾಂಟಿಕ್ ಫೋಟೋ ಲೀಕ್

    ಪ್ರಭಾಸ್- ಶ್ರದ್ಧಾ ಕಪೂರ್‌ರ ರೊಮ್ಯಾಂಟಿಕ್ ಫೋಟೋ ಲೀಕ್

    ಹೈದಾರಾಬಾದ್: ಟಾಲಿವುಡ್ ನಟ ಪ್ರಭಾಸ್ ಹಾಗೂ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ ನಟಿಸುತ್ತಿರುವ ‘ಸಾಹೋ’ ಚಿತ್ರದ ರೊಮ್ಯಾಂಟಿಕ್ ಫೋಟೋ ಲೀಕ್ ಆಗಿದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಲೀಕ್ ಆಗಿರುವ ಫೋಟೋದಲ್ಲಿ ಪ್ರಭಾಸ್ ಹಾಗೂ ಶ್ರದ್ಧಾ ಪ್ರೀತಿಯಿಂದ ಒಬ್ಬರನೊಬ್ಬರು ರೊಮ್ಯಾಂಟಿಕ್ ಆಗಿ ನೋಡುತ್ತಿದ್ದಾರೆ. ಈ ಫೋಟೋದಲ್ಲಿ ಶ್ರದ್ಧಾ ಗುಲಾಬಿ ಬಣ್ಣದ ಉಡುಪು ಧರಿಸಿದರೆ, ಪ್ರಭಾಸ್ ಬಿಳಿ ಬಣ್ಣದ ಟಿ-ಶರ್ಟ್ ಧರಿಸಿದ್ದಾರೆ.

    ಸಾಹೋ ಆ್ಯಕ್ಷನ್ ಚಿತ್ರವಾಗಿದ್ದು, ನಿರ್ದೇಶಕ ಸುಜೀತ್ ನಿರ್ದೇಶನ ಮಾಡುತ್ತಿದ್ದಾರೆ. ವಂಶಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ, ಅರುಣ್ ವಿಜಯ್ ಹಾಗೂ ಜಾಕಿ ಶ್ರಾಫ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ಹೈದರಾಬಾದ್, ಮುಂಬೈ, ಅಬುಧಾಬಿ, ದುಬೈ, ರೋಮಾನಿಯಾ ಹಾಗೂ ಯೂರೋಪ್‍ನ ಕೆಲವು ಭಾಗಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇದೇ ವರ್ಷ ಅಗಸ್ಟ್ 15 ಸ್ವತಂತ್ರ್ಯ ದಿನಾಚರಣೆಯಂದು ಸಾಹೋ ಚಿತ್ರ ಬಿಡುಗಡೆ ಆಗಲಿದೆ.

  • ಸಿನಿಮಾದಲ್ಲಿ ಬಿಕಿನಿ ಧರಿಸಿದ್ದೇನೆ, ಲೀಕ್ ಮಾಡುವ ಅವಶ್ಯಕತೆ ಇಲ್ಲ: ಹನ್ಸಿಕಾ

    ಸಿನಿಮಾದಲ್ಲಿ ಬಿಕಿನಿ ಧರಿಸಿದ್ದೇನೆ, ಲೀಕ್ ಮಾಡುವ ಅವಶ್ಯಕತೆ ಇಲ್ಲ: ಹನ್ಸಿಕಾ

    ಹೈದರಾಬಾದ್: ಟಾಲಿವುಡ್ ನಟಿ ಹನ್ಸಿಕಾ ಮೋಟ್ವಾನಿ ಬಿಕಿನಿಯಲ್ಲಿರುವ ಫೋಟೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಬ್ಲಿಸಿಟಿಗಾಗಿ ಹನ್ಸಿಕಾ ಈ ರೀತಿ ಮಾಡಿದ್ದಾರೆ ಎಂಬ ಮಾತುಗಳು ಈಗ ಕೇಳಿ ಬರುತ್ತಿದ್ದು, ಈ ಹೇಳಿಕೆಗೆ ನಟಿ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

    ಫೋಟೋ ಲೀಕ್ ಆಗಿದ್ದರ ಬಗ್ಗೆ ಮಾತನಾಡಿದ ಹನ್ಸಿಕಾ, “ನಾನು ಅಮೆರಿಕಾದಲ್ಲಿದ್ದಾಗ ನನ್ನ ಮೊಬೈಲಿನಲ್ಲಿ ಕೆಲ ಸಮಸ್ಯೆ ಆಗುತ್ತಿರುವುದನ್ನು ಗಮನಿಸಿದೆ. ಬಳಿಕ ನನ್ನ ಪ್ರೈವೇಟ್ ಫೋಟೋ ಲೀಕ್ ಆಗಿರುವುದನ್ನು ನೋಡಿ ನಾನು ಶಾಕ್ ಆದೆ. ಈ ಫೋಟೋಗಳು ನಾನು ನಾಲ್ಕು ವರ್ಷಗಳ ಹಿಂದೆ ಕ್ಲಿಕ್ಕಿಸಿದೆ. ಆದರೆ ಈ ಫೋಟೋಗಳಲ್ಲಿ ಕೆಲವು ಫೋಟೋಗಳನ್ನು ಹ್ಯಾಕರ್ಸ್ ಎಡಿಟಿಂಗ್ ಮಾಡಿದ್ದಾರೆ. ಆಗ ನನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ ಎಂದು ನನಗೆ ತಿಳಿಯಿತು. ಬಳಿಕ ನನ್ನ ತಂಡಕ್ಕೆ ತಕ್ಷಣ ಇದರ ಬಗ್ಗೆ ಮಾಹಿತಿ ನೀಡಿದೆ” ಎಂದು ಹೇಳಿದ್ದಾರೆ.

    ನನ್ನ ಪ್ರೈವೇಟ್ ಫೋಟೋ ಲೀಕ್ ಆಗಿದ್ದು ನನಗೆ ತುಂಬಾ ಮುಜುಗರ ಆಯಿತು. ಅಲ್ಲದೇ ಆ ಫೋಟೋಗಳಿಗೆ ಬರುತ್ತಿದ್ದ ಕಮೆಂಟ್ ನೋಡಿ ತುಂಬಾ ಬೇಸರವಾಗುತ್ತಿತ್ತು. ಕೆಲವರು ಸಿನಿಮಾದಲ್ಲಿ ಬಿಕಿನಿ ಧರಿಸುವಾಗ ಆಗದಿರುವ ಮುಜುಗರ ಈಗ ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ. ಮೊದಲಿಗೆ ಲೀಕ್ ಆಗಿರುವ ಫೋಟೋಗಳಲ್ಲಿ ಕೆಲವು ಫೋಟೋಗಳನ್ನು ಎಡಿಟಿಂಗ್ ಮಾಡಿದ್ದಾರೆ. ನಾನು ನನ್ನ ಇಚ್ಛೆಯಿಂದ ಸಿನಿಮಾಗಳಲ್ಲಿ ಬಿಕಿನಿ ಧರಿಸಿದೆ. ಆದರೆ ಇಲ್ಲಿ ನನ್ನ ಅನುಮತಿ ಇಲ್ಲದೇ ಫೋಟೋ ವೈರಲ್ ಆಗುತ್ತಿದೆ ಎಂದು ಹೇಳಿದ್ದಾರೆ. ಇದನ್ನು ಓದಿ: ಹನ್ಸಿಕಾ ಮೊಬೈಲ್ ಹ್ಯಾಕ್- ನಟಿಯ ಪ್ರೈವೇಟ್ ಫೋಟೋ ವೈರಲ್

    ಹನ್ಸಿಕಾ ಅವರ ಪ್ರೈವೇಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗುತ್ತಿದ್ದಂತೆ ನನ್ನ ಮೊಬೈಲ್ ಹ್ಯಾಕ್ ಆಗಿದೆ ಎಂದು ಹೇಳಿದ್ದರು. ಹನ್ಸಿಕಾ ತಮ್ಮ ಟ್ವಿಟ್ಟರಿನಲ್ಲಿ, “ನನ್ನ ಫೋನ್ ಹಾಗೂ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ. ದಯವಿಟ್ಟು ಯಾರು ಮೆಸೇಜ್‍ಗಳಿಗೆ ಪ್ರತಿಕ್ರಿಯಿಸಬೇಡಿ. ನನ್ನ ತಂಡ ಇದಕ್ಕಾಗಿ ಕೆಲಸ ಮಾಡುತ್ತಿದೆ. ಎಲ್ಲವು ಸರಿ ಹೋಗುತ್ತದೆ” ಎಂದು ಟ್ವೀಟ್ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಶ್ನೆ ಪತ್ರಿಕೆ ಲೀಕ್ ನಲ್ಲಿ ಸ್ವಾಮೀಜಿಯ ಕೈವಾಡ

    ಪ್ರಶ್ನೆ ಪತ್ರಿಕೆ ಲೀಕ್ ನಲ್ಲಿ ಸ್ವಾಮೀಜಿಯ ಕೈವಾಡ

    ಬೆಂಗಳೂರು: ಇತ್ತೀಚೆಗಷ್ಟೇ ಪೊಲೀಸ್ ಪೇದೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಲೀಕ್ ಮಾಡಿದ್ದ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಸ್ವಾಮೀಜಿಯೊಬ್ಬರ ಹೆಸರು ಹೊರಬಂದಿದ್ದು, ಸ್ಫೋಟಕ ಮಾಹಿತಿ ಬಯಲಾಗಿದೆ.

    ಕಲ್ಮಠ ಸ್ವಾಮಿಯ ಹೆಸರು ಕೇಳಿ ಬಂದಿದೆ. ಪ್ರಶ್ನೆ ಪತ್ರಿಕೆ ಲೀಕ್ ಮಾಡುವುದರಲ್ಲಿ ಎಕ್ಸ್ ಪರ್ಟ್ ಆಗಿರುವ ಶಿವಕುಮಾರ ಸ್ವಾಮೀಜಿಯನ್ನು ಸಿಸಿಬಿ ವಿಚಾರಣೆಯನ್ನು ಮಾಡುತ್ತಿದ್ದು, ಸಾಕಷ್ಟು ಅಂಶಗಳು ಬೆಳಕಿಗೆ ಬರುತ್ತಿವೆ. ಕಲ್ಮಠ ಸ್ವಾಮಿ ಪ್ರಶ್ನೆ ಪತ್ರಿಕೆ ಲೀಕ್ ಮಾಡಿ ಅಭ್ಯರ್ಥಿಗಳಿಗೆ ಟ್ರೈನಿಂಗ್ ಕೊಡುತ್ತಿದ್ದ ಎಂದು ಗೊತ್ತಾಗಿದೆ.

    6 ಲಕ್ಷ ಕೊಟ್ಟವರಿಗೆ ನೂರು ಪ್ರಶ್ನೆ ಉಚಿತ ಎಂದು ಹೇಳುತ್ತಾ 15 ಕೋಟಿ ಹಣ ವಸೂಲಿ ಮಾಡಿ ಅಭ್ಯರ್ಥಿಗಳಿಗೆ ಶಿವಕುಮಾರ್ ಟ್ರೈನಿಂಗ್ ಕೊಡುತ್ತಿದ್ದನು. ಈತ ಪ್ರಶ್ನೆ ಪತ್ರಿಕೆಯ ಮುಖ್ಯ ಪೇಜ್‍ನ್ನೇ ಕದಿಯುತ್ತಿದ್ದನು. ಬಳಿಕ ಜನರಿಲ್ಲದ ರೆಸಾರ್ಟ್ ಒಂದರಲ್ಲಿ ಟ್ರೈನಿಂಗ್ ಕೊಡುತ್ತಿದ್ದನು ಎಂದು ತಿಳಿದು ಬಂದಿದೆ.

    ಪೊಲೀಸ್ ಪೇದೆ ಪ್ರಶ್ನೆ ಪತ್ರಿಕೆ ಲೀಕ್ ಪ್ರಕರಣದ ಹಿಂದೆ ಶಾಸಕ ಸ್ಥಾನದ ಆಕಾಂಕ್ಷಿಯಾಗಿದ್ದ ಬಿಜೆಪಿ ಮುಖಂಡನ ನಂಟು ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಬಸವರಾಜ್ ಅಲಿಯಾಸ್ ಬಸವ ಪ್ರಶ್ನೆ ಪತ್ರಿಕೆ ಲೀಕ್ ಮಾಡಿದವನಾಗಿದ್ದು, 110 ಜನ ಹುಡುಗರು, 10 ಜನ ಹುಡುಗಿಯರು ಕೂಡ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಹಿಂದೆ ರಾಸಲೀಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಕಲ್ಮಠ ಸ್ವಾಮಿ ಈಗ ಮತ್ತೆ ಪ್ರಶ್ನೆ ಪತ್ರಿಕೆಯ ಉರುಳು ಸಿಕ್ಕಿಬಿದ್ದಿದೆ. ಪ್ರಶ್ನೆ ಪತ್ರಿಕೆಯ ಲೀಕ್ ದಂಧೆ ಗೊತ್ತಿದ್ದೇ ಸ್ವಾಮಿಜಿ ಜಾಗವನ್ನು ಬಿಟ್ಟುಕೊಟ್ಟಿದ್ರಾ.? ಅಥವಾ ಹಣವನ್ನು ಪಡೆದುಕೊಂಡಿದ್ರಾ ಅನ್ನೋ ಅನುಮಾನವನ್ನೂ ಕೂಡ ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು 7 ದಿನಗಳ ಕಾಲ ಲೀಕ್ ಕಿಂಗ್‍ಪಿನ್ ಶಿವಕುಮಾರಸ್ವಾಮಿಯನ್ನು ಕಸ್ಟಡಿಗೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಕ್ಷರಾ ಹಾಸನ್ ಅರೆಬೆತ್ತಲೆ ಫೋಟೋ ಲೀಕ್ – ಮಾಜಿ ಪ್ರಿಯಕರ ತನುಜ್ ವಿರ್ವಾನಿ ವಿಚಾರಣೆ?

    ಅಕ್ಷರಾ ಹಾಸನ್ ಅರೆಬೆತ್ತಲೆ ಫೋಟೋ ಲೀಕ್ – ಮಾಜಿ ಪ್ರಿಯಕರ ತನುಜ್ ವಿರ್ವಾನಿ ವಿಚಾರಣೆ?

    ಮುಂಬೈ: ಕಳೆದ ಕೆಲ ದಿನಗಳ ಹಿಂದೆ ನಟ ಕಮಲ್ ಹಾಸನ್ ಅವರ 2ನೇ ಪುತ್ರಿ ಅಕ್ಷರಾ ಹಾಸನ್‍ರ ಕೆಲ ಅರೆಬೆತ್ತಲೆ ಖಾಸಗಿ ಫೋಟೋ ಲೀಕ್ ಆಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ಅಕ್ಷರಾ ಅವರ ಮಾಜಿ ಪ್ರಿಯಕರ ತನುಜ್ ವಿರ್ವಾನಿ ಅವರನ್ನ ವಿಚಾರಣೆ ನಡೆಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಫೋಟೋ ಲೀಕ್ ಆಗಿದ್ದ ಘಟನೆಗೆ ಸಂಬಂಧಿಸಿದಂತೆ ಅಕ್ಷರಾ ಅವರು ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಬಳಿಕ ಪ್ರಕರಣದಲ್ಲಿ ಮುಂಬೈ ಸೈಬರ್ ಕ್ರೈಂ ಪೊಲೀಸರು ಹಲವರನ್ನು ತನಿಖೆ ನಡೆಸಿದ್ದರು. ಇದರ ಭಾಗವಾಗಿಯೇ ಸದ್ಯ ತನುಜ್ ವಿರ್ವಾನಿ ಅವರ ಮೇಲಿನ ಶಂಕೆಯಿಂದ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.

    ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ತನುಜ್ ವಿರ್ವಾನಿ, ಪೊಲೀಸ್ ವಿಚಾರಣೆಯನ್ನು ಅಲ್ಲಗೆಳೆದಿದ್ದಾರೆ. ತಾವು ಯಾವುದೇ ವಿಚಾರಣೆಗೆ ಸಿದ್ಧ. ನಾನು ಇಂದಿಗೂ ಕೂಡ ಅಕ್ಷರಾ ಅವರ ಕ್ಷೇಮವನ್ನೇ ಬಯಸುತ್ತೇನೆ. ನಮ್ಮ ಪ್ರೀತಿಯ ವೇಳೆ ಇಂತಹ ಸಂಗತಿಗಳಿಗೆ ಅವಕಾಶ ನೀಡಿರಲಿಲ್ಲ. ಸ್ವತಃ ಬಯಕೆಗಳಿಗೆ ಅವುಗಳನ್ನು ಬಳಕೆ ಮಾಡಿಕೊಳ್ಳುವುದಿಲ್ಲ. ಇಂದಿಗೂ ನಾನು ಅವರ ಉತ್ತಮ ಸ್ನೇಹಿತನಾಗಿದ್ದು, ನಾನು ಇಂತಹ ತಾಂತ್ರಿಕ ಕಳ್ಳತನಗಳ ಬಗ್ಗೆ ಎಚ್ಚರಿಕೆ ವಹಿಸುತ್ತೇನೆ. ಯಾವುದೇ ಫೋಟೋಗಳನ್ನೂ ಕೂಡ ನಾನು ನನ್ನ ಮೊಬೈಲ್ ಫೋನ್‍ನಲ್ಲಿ ಸೇವ್ ಮಾಡುವುದಿಲ್ಲ. ಸತ್ಯ ನನ್ನ ಪರ ಇದ್ದು, ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ. ಇದನ್ನು ಓದಿ: ಕಮಲಹಾಸನ್ ಪುತ್ರಿ ಒಳಉಡುಪಿನಲ್ಲಿದ್ದ ಫೋಟೋ ಲೀಕ್: ಅಕ್ಷರಾ ಹೇಳಿದ್ದೇನು?  

    ಲೀಕ್ ಆದ ಚಿತ್ರಗಳು ಅಕ್ಷರಾ ಹಾಸನ್ ತಮ್ಮ ಬೆಡ್ ರೂಮ್ ನಲ್ಲಿ ತೆಗೆದುಕೊಂಡಿದ್ದ ಖಾಸಗಿ ಫೋಟೋಗಳಾಗಿದ್ದು, ಅವುಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. 2013ರ ವರೆಗೂ ಅಕ್ಷರಾ ಬಳಕೆ ಮಾಡುತ್ತಿದ್ದ ಐಫೋನ್ ನಲ್ಲಿ ಇದ್ದ ಫೋಟೋಗಳು ಇವು ಎನ್ನಲಾಗಿದೆ. ಈ ಹಿಂದೆಯು ಕೂಡ ಕಮಲ್ ಹಾಸನ್ ಅವರ ಮೊದಲ ಪುತ್ರಿ ಶೃತಿ ಹಾಸನ್ ಅವರು ಚಿತ್ರವೊಂದರಲ್ಲಿ ನಟನೆ ಮಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೇಳೆಯೂ ಕೂಡ ಕಮಲ್ ಅಭಿಮಾನಿಗಳಿಗೆ ಸಾಕಷ್ಟು ಬೇಸರ ಉಂಟಾಗಿತ್ತು.

    https://www.instagram.com/p/BppAsI1BOi5/?utm_source=ig_embed

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಆಂಬಿಡೆಂಟ್ ಡೀಲ್ ಕೇಸ್: ವಿಡಿಯೋ ಲೀಕ್ ಆಗಿದ್ದಕ್ಕೆ ಅಲೋಕ್ ಕುಮಾರ್ ಗರಂ

    ಆಂಬಿಡೆಂಟ್ ಡೀಲ್ ಕೇಸ್: ವಿಡಿಯೋ ಲೀಕ್ ಆಗಿದ್ದಕ್ಕೆ ಅಲೋಕ್ ಕುಮಾರ್ ಗರಂ

    ಬೆಂಗಳೂರು: ಆಂಬಿಡೆಂಟ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫರೀದ್ ಪಂಚನಾಮೆಯ ವಿಡಿಯೋ ಲೀಕ್ ಆಗಿದ್ದು, ಈ ಕುರಿತು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಗರಂ ಆಗಿದ್ದಾರೆ ಎನ್ನಲಾಗಿದೆ.

    ಪ್ರಕರಣದಲ್ಲಿ ಪ್ರಮುಖ ಆಧಾರವಾಗಿರುವ ತಾಜ್ ವೆಸ್ಟ್ ಅಂಡ್ ಹೋಟೆಲ್ ಸ್ಥಳದ ಪರಿಶೀಲನೆ ವಿಡಿಯೋ ಲೀಕ್ ಆಗಿರುವುದು ಸಿಸಿಬಿ ತನಿಖೆ ಮೇಲೆ ಅನುಮಾನ ಉಂಟಾಗುವಂತೆ ಮಾಡಿದೆ.

    ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಅಲೋಕ್ ಕುಮಾರ್ ಅವರು ಪ್ರಕರಣದ ಆರೋಪಿ ಫರೀದ್ ಸ್ಥಳ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಆಲಿಖಾನ್ ಹಾಗೂ ಜನಾರ್ದನ ರೆಡ್ಡಿ ಇದ್ದರು ಎಂಬ ಅಂಶ ಸ್ಪಷ್ಟವಾಗಿದೆ ಎಂದು ತಿಳಿಸಿದ್ದರು.

    ಲೀಕ್ ಆಗಿರುವ ವಿಡಿಯೋ ಬಗ್ಗೆ ಹಲವು ಅನುಮಾನಗಳು ಕಾರಣವಾಗಿದ್ದು, ಜನಾರ್ದನ ರೆಡ್ಡಿ ಪರ ಪೊಲೀಸರೆ ಇದ್ದರಾ? ಎಂಬ ಸಂಶಯಕ್ಕೂ ಕಾರಣವಾಗಿದೆ. ಲೀಕ್ ಆಗಿರುವ ವಿಡಿಯೋ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಅಲೋಕ್ ಕುಮಾರ್ ಪ್ರಶ್ನೆ ಮಾಡಿದ್ದು, ನ್ಯಾಯಾಲಯಕ್ಕೆ ನೀಡಬೇಕಾದ ವಿಡಿಯೋ ಮೊದಲೇ ಮಾಧ್ಯಮಗಳಿಗೆ ಹೇಗೆ ಲಭ್ಯವಾಗಿದೆ ಎಂದು ಪ್ರಶ್ನಿಸಿ ಗರಂ ಆಗಿದ್ದಾರೆ. ಅಲ್ಲದೇ ಈ ವಿಡಿಯೋ ಲೀಕ್ ಆಗಲು ತಮ್ಮ ಕಚೇರಿಯಲ್ಲೇ ಕೆಲ ಕಠಿಣ ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಅಲೋಕ್ ಕುಮಾರ್ ಅವರು ವಿಡಿಯೋ ಲೀಕ್ ಆಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಯಾವ ಕ್ರಮಕೈಗೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

    ಯಾವುದೇ ಪ್ರಕರಣದಲ್ಲಿ ಆರೋಪಿಯ ಹೇಳಿಕೆ ಪಡೆದ ಬಳಿಕ ಸ್ಥಳ ಮಹಜರು ಮಾಡುವುದು ಕಾನೂನು ಕ್ರಮವಾಗಿದೆ. ಇದರಂತೆ ಫರೀದ್ ಹೇಳಿಕೆ ಪಡೆದಿದ್ದ ಸಿಸಿಬಿ ಪೊಲೀಸರು ಅದರಂತೆ ಮಹಜರು ನಡೆಸಿದ್ದರು. ಈ ಪ್ರಕ್ರಿಯೆನ್ನು ಸಂಪೂರ್ಣವಾಗಿ ಚಿತ್ರೀಕರಣ ಮಾಡಲಾಗುತ್ತದೆ. ಮಹಜರು ವಿಡಿಯೋವನ್ನು ಪೊಲೀಸರು ಪ್ರಕರಣದ ಪ್ರಮುಖ ಸಾಕ್ಷಿಯಾಗಿ ನ್ಯಾಯಾಲಕ್ಕೆ ಸಲ್ಲಿಸಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv