Tag: ಲಿವ್ ಇನ್ ರಿಲೇಶನ್‍ಶಿಪ್‍

  • ಮದ್ವೆಯಾಗಿ ಮುಚ್ಚಿಟ್ಟಿದ್ದರು – ಡೆಡ್ಲಿ ಮರ್ಡರ್ ತನಿಖೆ ವೇಳೆ ಸ್ಫೋಟಕ ರಹಸ್ಯ ಬಯಲು

    ಮದ್ವೆಯಾಗಿ ಮುಚ್ಚಿಟ್ಟಿದ್ದರು – ಡೆಡ್ಲಿ ಮರ್ಡರ್ ತನಿಖೆ ವೇಳೆ ಸ್ಫೋಟಕ ರಹಸ್ಯ ಬಯಲು

    ಮುಂಬೈ: ಇಲ್ಲಿನ ಮೀರಾ ರೋಡ್‌ನಲ್ಲಿರುವ ಗೀತಾ ನಗರದಲ್ಲಿ ನಡೆದ ಕೊಲೆ ತನಿಖೆ ವೇಳೆ ಸ್ಫೋಟಕ ರಹಸ್ಯ ಬಯಲಾಗಿದೆ. ದೆಹಲಿಯ ಶ್ರದ್ಧಾ ವಾಕರ್ ಹತ್ಯೆಯನ್ನೂ ಮೀರಿಸುವಂತಿರುವ ಈ ಕೇಸ್‌ನಲ್ಲಿ ಮತ್ತಷ್ಟು ರೋಚಕ ಮಾಹಿತಿಗಳು ಬೆಳಕಿಗೆ ಬಂದಿವೆ.

    ಹೌದು. ಮುಂಬೈನಲ್ಲಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಸರಸ್ವತಿ ವೈದ್ಯ (32) (Saraswathi Vaidya) ಹಾಗೂ ಮನೋಜ್ ಸಾನೆ (56) (Manoj Sahni) ಇಬ್ಬರೂ ವಿವಾಹವಾಗಿದ್ದರು. ಆದ್ರೆ ವಯಸ್ಸಿನ ಅಂತರದಿಂದ ಹೊರಗೆ ಹೇಳಿಕೊಳ್ಳಲಾಗದೇ ಮುಚ್ಚಿಟ್ಟಿದ್ದರು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಮುಂಬೈನಲ್ಲಿ ಡೆಡ್ಲಿ ಮರ್ಡರ್ – ಗೆಳತಿಯನ್ನು ಕೊಂದು ಕುಕ್ಕರ್‌ನಲ್ಲಿ ಕುದಿಸಿದ ಪ್ರಿಯತಮ

    ಸರಸ್ವತಿ ತನ್ನ ನಾಲ್ವರು ಸಹೋದರಿಯರೊಂದಿಗೆ ಸಂಪರ್ಕದಲ್ಲಿದ್ದು, ಅವರಲ್ಲಿ ಮೂವರನ್ನ ಶುಕ್ರವಾರ ವಿಚಾರಣೆಗೆ ಒಳಪಡಿಸಿದಾಗ ಮದುವೆಯಾಗಿದ್ದ ರಹಸ್ಯ ಬಯಲಾಗಿದೆ. ಅವರಿಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಈ ವಿಷಯವನ್ನ ತನ್ನ ಸಹೋದರಿಯರಿಗೆ ಮಾತ್ರ ತಿಳಿಸಿದ್ದರು. ವಯಸ್ಸಿನ ಅಂತರದಿಂದ ಬೇರೆಯವರಿಗೆ ಹೇಳಿರಲಿಲ್ಲ ಎಂದು ಪೊಲೀಸ್ ಅಧಿಕಾರಿ ಜಯಂತ್ ಬಬಲೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮುಂಬೈ, ದೆಹಲಿಯಷ್ಟೇ ಅಲ್ಲ ಬೆಂಗ್ಳೂರಲ್ಲೂ ಹೆಚ್ಚಾಗ್ತಿದೆ ಲಿವಿಂಗ್ ರಿಲೇಷನ್ ಕೊಲೆ ಕೇಸ್

    ವಾಸ್ತವವಾಗಿ ಮನೋಜ್ ಸಾನೆ, ಆಕೆಯ ಚಿಕ್ಕಪ್ಪನೇ ಆಗಿದ್ದು, ಮುಂಬೈನಲ್ಲಿ ಬಟ್ಟೆ ಅಂಗಡಿ ಹೊಂದಿದ್ದ. ಅಹ್ಮದ್‌ನಗರದಿಂದ ಶಾಲೆ ಬಿಟ್ಟ ಸರಸ್ವತಿ ಮುಂಬೈಗೆ ತೆರಳುವುದಕ್ಕೂ ಮುನ್ನ ತನ್ನ ಸಹೋದರಿಯರೊಂದಿಗೆ ವಾಸಿಸುತ್ತಿದ್ದಳು. ಅಲ್ಲಿ ಬೊರಿವಲಿಯ ರೇಷನ್ ಅಂಗಡಿಯಲ್ಲಿ ಮನೋಜ್ ಸಾನೆಯನ್ನ ಭೇಟಿಯಾಗಿದ್ದಳು. ಬಳಿಕ ಇಬ್ಬರು ಸ್ನೇಹಿತರಾದರು. ಸರಸ್ವತಿಗೆ ಮುಂಬೈನಲ್ಲೇ ಕೆಲಸ ಸಿಕ್ಕಿದ್ದರಿಂದ ಸಾನೆ ತನ್ನ ಮನೆಯಲ್ಲೇ ಉಳಿಯಲು ಅವಕಾಶ ಮಾಡಿಕೊಟ್ಟಿದ್ದ. ಆದ್ರೆ ಮೊದಲೇ ತಾಯಿಯನ್ನು ಕಳೆದುಕೊಂಡಿದ್ದರಿಂದ ಅವರ ತಂದೆ ಸಹ ಮಕ್ಕಳನ್ನು ಬಿಟ್ಟು ಹೋಗಿದ್ದರು. ಹಾಗಾಗಿ ಸರಸ್ವತಿಯ ಸಹೋದರಿಯರು ಅನಾಥಾಶ್ರಮಗಳಲ್ಲಿ ಬೆಳೆಯಬೇಕಾಯಿತು. ಸರಸ್ವತಿ ಮಾತ್ರ ಮದುವೆಯಾಗಿ ಸಾನೆ ಮನೆಯಲ್ಲೇ ಇದ್ದಳು.

    2 ವರ್ಷಗಳ ಹಿಂದೆಯೂ ಸಹೋದರಿಯನ್ನ ಭೇಟಿಯಾಗಿದ್ದಾಗ ತಾನು ತೊಂದರೆಯಲ್ಲಿರುವುದಾಗಿ ಹೇಳಿಕೊಂಡಿದ್ದಳು. ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕುಬಿಟ್ಟಿತು. ಕಳೆದ ಭಾನುವಾರ ಸರಸ್ವತಿ ವಿಷ ಸೇವಿಸಿ ಸಾವನ್ನಪ್ಪಿದಳು. ಇದರಿಂದ ಗಾಬರಿಗೊಂಡ ಸಾನೆ ದೇಹವನ್ನ ವಿಲೇವಾರಿ ಮಾಡಲು ಎಲೆಕ್ಟ್ರಿಕ್ ಗರಗಸದಿಂದ ಅನೇಕ ತುಂಡುಗಳನ್ನಾಗಿ ಕತ್ತರಿಸಿದ್ದ. ಎಷ್ಟು ತುಂಡುಗಳು ಎಂದು ಎಣಿಸಲು ನಮಗೇ ಕಷ್ಟವಾಗಿತ್ತು. ಏಕೆಂದರೆ ಕೆಲ ಭಾಗಗಳನ್ನ ಪುಡಿಪುಡಿ ಮಾಡಿ ಕುದಿಸಿದ್ದ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

  • ಮುಂಬೈನಲ್ಲಿ ಡೆಡ್ಲಿ ಮರ್ಡರ್ – ಗೆಳತಿಯನ್ನು ಕೊಂದು ಕುಕ್ಕರ್‌ನಲ್ಲಿ ಕುದಿಸಿದ ಪ್ರಿಯತಮ

    ಮುಂಬೈನಲ್ಲಿ ಡೆಡ್ಲಿ ಮರ್ಡರ್ – ಗೆಳತಿಯನ್ನು ಕೊಂದು ಕುಕ್ಕರ್‌ನಲ್ಲಿ ಕುದಿಸಿದ ಪ್ರಿಯತಮ

    ಮುಂಬೈ: ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನೂ ಮೀರಿಸುವ ಘಟನೆ ಮುಂಬೈನ ಮೀರಾ ರೋಡ್‌ನಲ್ಲಿರುವ ಗೀತಾ ನಗರದಲ್ಲಿ ನಡೆದಿದೆ. ಲಿವ್- ಇನ್-‌ ಪಾರ್ಟ್‌ನರ್ ನಲ್ಲಿದ್ದ ತನ್ನ ಗೆಳತಿಯನ್ನು ಹತ್ಯೆ ಮಾಡಿರುವ ಆರೋಪಿ 20 ಕ್ಕೂ ಅಧಿಕ ತುಂಡುಗಳಾಗಿ ಕತ್ತರಿಸಿ ಕುಕ್ಕರ್‌‌ (Cooker) ನಲ್ಲಿ ಬೇಯಿಸಿ ವಿಲೇವಾರಿ ಮಾಡುವ ಪ್ರಯತ್ನ ಮಾಡಿದ್ದಾನೆ. ಇದನ್ನೂ ಓದಿ: ಪ್ರೀತಿಸಿದ ಹುಡುಗಿಯ ಮೇಲೆ ಪ್ರಿಯಕರ, ಸ್ನೇಹಿತನಿಂದ ರೇಪ್!

    ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಗೀತಾ ನಗರದ ಏಳನೇ ಹಂತದಲ್ಲಿರುವ ಖಾಸಗಿ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿದ್ದ 56 ವರ್ಷದ ಮನೋಜ್ ಸಹಾನಿ ಎಂಬಾತನನ್ನು ನಯಾನಗರ ಪೊಲೀಸ್ ಠಾಣೆ‌ (Nayanagar Police Station) ಯ ಪೊಲೀಸರು ಬಂಧಿಸಿದ್ದಾರೆ.

    ಮನೋಜ್ ಸಹಾನಿ (Manoj Sahni) ತನ್ನ ಗೆಳತಿ ಸರಸ್ವತಿ ವೈದ್ಯ ಜೊತೆಗೆ ಕಳೆದ ಮೂರು ವರ್ಷಗಳಿಂದ ಮುಂಬೈನ ಮೀರಾ ರೋಡ್‌ನಲ್ಲಿರುವ ಗೀತಾ ನಗರ 7 ನೇ ಹಂತದಲ್ಲಿರುವ ಗೀತಾ ಆಕಾಶ್ ದೀಪ್ ಕಟ್ಟಡದಲ್ಲಿ ಫ್ಲಾಟ್ 704 ರಲ್ಲಿ ವಾಸಿಸುತ್ತಿದ್ದರು. ಆಗ್ಗಾಗ್ಗೆ ನಡೆಯುತ್ತಿದ್ದ ಜಗಳ ತಾರಕಕ್ಕೇರಿ ಸರಸ್ವತಿಯನ್ನು ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಹೇಳಿದ್ದಾರೆ.

    ಮರ ಕಡಿಯುವ ಯಂತ್ರ, ಪ್ಲಾಸ್ಟಿಕ್ ಚೀಲಗಳು ಪತ್ತೆ: ತನಿಖೆ ವೇಳೆ ಮಲಗುವ ಕೋಣೆಯಲ್ಲಿ ಕಪ್ಪು ಪ್ಲಾಸ್ಟಿಕ್ ಚೀಲಗಳು, ಏರ್  ಫ್ರೆಶ್‌ನರ್ (Air Freshener)  ಜೊತೆಗೆ ಮಧ್ಯಮ ಗಾತ್ರದ ಮರ ಕತ್ತರಿಸುವ ಯಂತ್ರವೂ ಪತ್ತೆಯಾಗಿದೆ. ಮಹಿಳೆಯ ಕೂದಲನ್ನು ಮಲಗುವ ಕೋಣೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದು, ದುರ್ವಾಸನೆ ಹಿನ್ನೆಲೆ ಸ್ಥಳೀಯರ ಮಾಹಿತಿಯಂತೆ ಪರಿಶೀಲನೆ ನಡೆಸಿದಾಗ ಘಟನೆ ಬಯಲಿಗೆ ಬಂದಿದೆ ಎಂದು ತಿಳಿಸಿದ್ದಾರೆ.

    ಪೊಲೀಸರ ಮಾಹಿತಿ ಪ್ರಕಾರ, ಮನೋಜ್ ಸಹಾನಿ ಮೂರ್ನಾಲ್ಕು ದಿನಗಳ ಹಿಂದೆ ಸರಸ್ವತಿ ವೈದ್ಯ (Saraswathi Vaidya) ಳನ್ನು ಕೊಂದು, ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಲು ಮರ ಕಡಿಯುವ ಯಂತ್ರವನ್ನು ಖರೀದಿಸಿದ್ದಾನೆ. ಆಕೆಯ ದೇಹವನ್ನು 20 ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಬಕೆಟ್ (Body In Bucket) ನಲ್ಲಿ ತುಂಬಿದ್ದಾನೆ. ವಾಸನೆ ನಿಯಂತ್ರಿಸಲು ಪ್ರೆಶರ್ ಕುಕ್ಕರ್‌ನಲ್ಲಿ ಕುದಿಸಿ ನಂತರ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಹಾಕಿ ವಿಲೇವಾರಿ ಮಾಡಿದ್ದಾನೆ. ಇದೇ ವೇಳೆ ಮನೆಗೆ ಏರ್ ಫ್ರೇಶರ್ ಬಳಸಿ ವಾಸನೆ ನಿಯಂತ್ರಿಸುವ ಪ್ರಯತ್ನವೂ ಮಾಡಿದ್ದಾನೆ. ತನಿಖೆ ವೇಳೆ ಅಡುಗೆ ಮನೆಯಲ್ಲಿ ದೇಹದ ಹಲವು ತುಂಡುಗಳು ಪತ್ತೆಯಾಗಿದ್ದು ಇನ್ನು ಹಲವು ತುಂಡುಗಳು ನಾಪತ್ತೆಯಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

  • The Kerala Story Effect: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿಯಿಂದ ಪ್ರಿಯಕರನ ವಿರುದ್ಧ ರೇಪ್ ಕೇಸ್

    The Kerala Story Effect: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿಯಿಂದ ಪ್ರಿಯಕರನ ವಿರುದ್ಧ ರೇಪ್ ಕೇಸ್

    ಭೋಫಾಲ್: ದಿ ಕೇರಳ ಸ್ಟೋರಿ ಸಿನಿಮಾ ನೋಡಿದ ಮಧ್ಯಪ್ರದೇಶದ (Madhya Pradesh) ಇಂದೋರ್‌ನ ಯುವತಿಯೊಬ್ಬಳು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ (Live IN RelationShip) ತನ್ನ ಪ್ರಿಯಕರನ ವಿರುದ್ಧವೇ ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ.

    ಯುವತಿಯು ತನ್ನನ್ನು ಪ್ರೀತಿ ಹೆಸರಲ್ಲಿ ಟ್ರ್ಯಾಪ್‌ ಮಾಡಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ತನ್ನ ಮತಾಂತರವಾಗುವಂತೆ (Conversion) ಒತ್ತಡ ಹೇರುತ್ತಿದ್ದಾನೆ ಎಂದು ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು, 23 ವರ್ಷದ ಯುವಕನನ್ನ ಬಂಧಿಸಿದ್ದಾರೆ.

    ಇತ್ತೀಚಿಗೆ ನಾವಿಬ್ಬರೂ `ದಿ ಕೇರಳ ಸ್ಟೋರಿ’ ಸಿನಿಮಾ (The Kerala Story Cinema) ನೋಡಿದ್ವಿ, ಇದಾದ ನಂತರ ನಮ್ಮ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದನ್ನೂ ಓದಿ: ಬ್ಯಾಂಕ್‌ಗಳಲ್ಲಿ ಶುರುವಾಯ್ತು ಪಿಂಕ್ ನೋಟ್ ವಿನಿಮಯ – RBI ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

    ಮಾಹಿತಿ ಪ್ರಕಾರ, ಆ ಯುವಕನ ಜೊತೆಯೇ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಿದ್ದಾಗಿ ದೂರುದಾರ ಯುವತಿ ತಿಳಿಸಿದ್ದಾಳೆ. ಅಂದ ಹಾಗೇ, ಆರೋಪಿ ಪ್ರಿಯಕರ 12ನೇ ತರಗತಿ ಪಾಸ್ ಆಗಿದ್ದು, ನಿರುದ್ಯೋಗಿಯಾಗಿದ್ದಾನೆ. ಸಂತ್ರಸ್ತ ಯುವತಿ ಸುಶಿಕ್ಷಿತಳಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಯುವಕನ ವಿರುದ್ಧ ಬಲವಂತ ಅಥವಾ ಮೋಸದಿಂದ ಮತಾಂತರ ಮಾಡುವುದನ್ನು ನಿಷೇಧಿಸುವ, ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ-2021 ಹಾಗೂ IPC ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಖಜ್ರಾನಾ ಪೊಲೀಸ್ ಠಾಣೆಯ ಉಸ್ತುವಾರಿ ದಿನೇಶ್ ವರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: IT ಕ್ಷೇತ್ರದಲ್ಲಿ ಒಂದೇ ವರ್ಷಕ್ಕೆ 60 ಸಾವಿರ ಜಾಬ್‌ ಕಟ್‌

  • ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಮಹಿಳೆ ಶವವಾಗಿ ಪತ್ತೆ

    ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಮಹಿಳೆ ಶವವಾಗಿ ಪತ್ತೆ

    ನವದೆಹಲಿ: ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ (Live-In Partner) ಮಹಿಳೆಯೊಬ್ಬಳು (Woman) ಶವವಾಗಿ ಪತ್ತೆಯಾದ ಘಟನೆ ದೆಹಲಿಯ (Newdelhi) ಮಂಗೋಲ್‍ಪುರ ಕಲನ್ ಗ್ರಾಮದಲ್ಲಿ ನಡೆದಿದೆ.

    ಮಂಗೋಲ್‍ಪುರ ಕಲನ್ ಗ್ರಾಮದ ಮನೆಯೊಂದರ 2ನೇ ಮಹಡಿಯಲ್ಲಿ 36 ವರ್ಷದ ಮಹಿಳೆಯ ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮಹಿಳೆ ಉತ್ತರ ಪ್ರದೇಶದ ಆಗ್ರಾ ನಿವಾಸಿಯಾಗಿದ್ದು, ಆಕೆ ಆಗ್ರಾ ಮೂಲದ ವ್ಯಕ್ತಿಯೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದಳು.

    ಈ ಇಬ್ಬರು ಒಟ್ಟಾಗಿ ಇರುವುದನ್ನು ಮನೆ ಮಾಲೀಕರು ಅನೇಕ ಬಾರಿ ನೋಡಿದ್ದರು. ಆದರೆ ನಿನ್ನೆ ಮನೆಯ ಬಾಗಿಲು ಅರ್ಧ ತೆಗೆದಿರುವುದನ್ನು ಗಮನಿಸಿದ ಮನೆ ಮಾಲೀಕ ಒಳಗೆ ಹೋಗಿ ನೋಡಿದ್ದಾರೆ. ಅಲ್ಲಿ ಮಹಿಳೆ ಶವವಾಗಿ ಬಿದ್ದಿದ್ದಳು. ಅಷ್ಟೇ ಅಲ್ಲದೇ ಲಿವ್ ಇನ್ ರಿಲೇಶನ್‍ನಲ್ಲಿದ್ದ ವ್ಯಕ್ತಿ ನಾಪತ್ತೆ ಆಗಿದ್ದ.

    ಘಟನೆಗೆ ಸಂಬಂಧಿಸಿ ಕೂಡಲೇ ರೋಹಿಣಿ ದಕ್ಷಿಣ ಪೊಲೀಸ್ ಠಾಣೆಗೆ ಮನೆ ಮಾಲೀಕ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಶವವನ್ನು ವಶಕ್ಕೆ ಪಡೆದು, ಪೋಸ್ಟ್ ಮಾರ್ಟಂಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಷ್ಟೇ ಅಲ್ಲದೇ ಮಹಿಳೆಯ ಶವದ ಮೇಲೆ ಯಾವುದೇ ಗಾಯದ ಗುರುತುಗಳಿರಲಿಲ್ಲ.

    crime

    ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಿವ್ ಇನ್ ರಿಲೇಶನ್‍ನಲ್ಲಿದ್ದ ವ್ಯಕ್ತಿಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಆತನ ಫೋನ್ ಸ್ವಿಚ್ ಆಫ್ ಆಗಿದ್ದು, ಮನೆಯಿಂದ ನಾಪತ್ತೆ ಆಗಿದ್ದಾನೆ.

    ಈ ಹಿನ್ನೆಲೆಯಲ್ಲಿ ಆಕೆಯ ಪತಿ ಶಹದಾರ ನಿವಾಸಿಗೆ ಸಂಪರ್ಕಿಸಿದ್ದಾರೆ. ಈ ವೇಳೆ ಆಕೆಗೆ 2011 ರಲ್ಲಿ ವಿವಾಹವಾಗಿದ್ದು, ಒಬ್ಬ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ವೋಟರ್ ಐಡಿ ಗೋಲ್ಮಾಲ್ – ಸ್ಥಳೀಯ ಶಾಸಕರ ಮೇಲೆ ಕಾಂಗ್ರೆಸ್ ಆರೋಪ

    ಮಹಿಳೆಯ ಪತಿ (Husband) ಪಂಜಾಬ್‍ನ ಜಿರಾಕ್‍ಪುರದಲ್ಲಿ ಕೆಲಸ ಮಾಡುತ್ತಿದ್ದು, ಆದರೆ ಆಕೆ ಚಿಕಿತ್ಸೆಗಾಗಿ ದೆಹಲಿಗೆ ತೆರಳಿದ್ದಳು. ಅಲ್ಲಿ ಓರ್ವ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇನ್ನೂ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೆಲ್ಮೆಟ್ ಆಯ್ತು, ಈಗ ಜೆಡಿಎಸ್ ಮುಖಂಡ ಆರ್. ಉಗ್ರೇಶ್‍ರಿಂದ ಬಾಳೆ ಹಣ್ಣು ಭಾಗ್ಯ

    Live Tv
    [brid partner=56869869 player=32851 video=960834 autoplay=true]

  • ಅಫ್ತಾಬ್‍ನನ್ನು ನೇಣಿಗೆ ಹಾಕಿ: ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ ಶ್ರದ್ಧಾಳ ತಂದೆ

    ಅಫ್ತಾಬ್‍ನನ್ನು ನೇಣಿಗೆ ಹಾಕಿ: ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ ಶ್ರದ್ಧಾಳ ತಂದೆ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಲೀವ್ ಇನ್ ರಿಲೇಷನ್ ಶಿಪ್‍ನಲ್ಲಿದ್ದ ((Live in relationship) ತನ್ನ ಗೆಳೆಯನಿಂದ ಬರ್ಬರವಾಗಿ ಹತ್ಯೆಯಾಗಿದ್ದ ಶ್ರದ್ಧಾಳ (Shraddha) ಕೊಲೆ ಪ್ರಕರಣ ಇದೀಗ ಬೇರೆ ರೀತಿಯ ತಿರುವು ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಶ್ರದ್ಧಾಳ ತಂದೆ (Father) ಮಾತನಾಡಿ, ಘಟನೆ ಹಿಂದೆ ಲವ್ ಜಿಹಾದ್ ಇದೆ ಎಂದು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಅವರು, ದೆಹಲಿ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ನಾವು ನಂಬಿದ್ದೇವೆ. ಶ್ರದ್ಧಾ ಆಕೆಯ ಚಿಕ್ಕಪ್ಪನ ಸಂಪರ್ಕದಲ್ಲಿ ಹೆಚ್ಚಿದ್ದಳು. ನನ್ನನೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಇದರಿಂದಾಗಿ ನಾನು ಅಫ್ತಾಬ್‍ನೊಂದಿಗೆ ಎಂದಿಗೂ ಸಂಪರ್ಕದಲ್ಲಿರಲಿಲ್ಲ ಎಂದ ಅವರು, ತನ್ನ ಮಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿ ಅಫ್ತಾಬ್‍ಗೆ ಮರಣ ದಂಡನೆ ವಿಧಿಸಬೇಕು ಜೊತೆಗೆ ಲವ್ ಜಿಹಾದ್ ಕೋನದಲ್ಲೂ ಶಂಕೆ ವ್ಯಕ್ತವಾಗುತ್ತಿದೆ ಎಂದರು.

    ಘಟನೆಗೆ ಸಂಬಂಧಿಸಿ ನಾನು ಮೊದಲು ಮುಂಬೈನ ವಸಾಯಿಯಲ್ಲಿ ದೂರು ದಾಖಲಿಸಿದ್ದೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದರು.

    ಘಟನೆಯೇನು?: ಆರೋಪಿ ಅಫ್ತಾಬ್ ಪೂನಾವಾಲಾ ರಾಷ್ಟ್ರ ರಾಜಧಾನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಜೊತೆಗೆ ಆತ ಫುಡ್ ಬ್ಲಾಗರ್ ಕೂಡಾ ಆಗಿದ್ದ. ಅಫ್ತಾಬ್ ಹಾಗೂ ಶ್ರದ್ಧಾ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. ಅದಾದ ಬಳಿಕ ಮನೆಯವರ ವಿರೋಧದ ನಡುವೆಯೂ ಶ್ರದ್ಧಾ ಅಫ್ತಾಬ್‍ನೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದಳು. ಇದರಿಂದಾಗಿ ಶ್ರದ್ಧಾ ಪೋಷಕರ ಮಾತನಾಡುವುದನ್ನು ನಿಲ್ಲಿಸಿದ್ದಳು.

    ಪೊಲೀಸ್ ಮೂಲಗಳ ಪ್ರಕಾರ, 2009ರಿಂದ ಸಂಬಂಧ ಹೊಂದಿದ್ದ ಈ ಜೋಡಿ 2022ರಲ್ಲಿ ದೆಹಲಿಗೆ ಸ್ಥಳಾಂತರಗೊಂಡಿದ್ದರು. ಅವರು ಮಾರ್ಚ್-ಏಪ್ರಿಲ್‍ನಲ್ಲಿ ಬೇರೆ ಬೇರೆ ಪ್ರದೇಶಗಳಿಗೂ ಭೇಟಿ ನೀಡಿದ್ದರು. ಅದಾದ ಬಳಿಕ ದೆಹಲಿಯ ಛತ್ತರ್‍ಪುರ ಪ್ರದೇಶದಲ್ಲಿ ಫ್ಲಾಟ್ ಅನ್ನು ಬಾಡಿಗೆಗೆ ಪಡೆದು ವಾಸಿಸಲು ಪ್ರಾರಂಭಿಸಿದ್ದರು.

    ಈ ವೇಳೆ ಮದುವೆ ವಿಷಯಕ್ಕೆ ಇಬ್ಬರ ಮಧ್ಯೆ ಜಗಳವಾಗಿದ್ದು, ಶ್ರದ್ಧಾಳನ್ನು ಅಫ್ತಾಬ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅದಾದ ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ಶ್ರದ್ಧಾ ಸಾಮಾಜಿಕ ಜಾಲತಾಣದ ಖಾತೆಯನ್ನು ಬಳಸಿ ಬೇರೆಯವರಿಗೆ ಆಕೆ ಸಕ್ರಿಯವಾಗಿದ್ದಾಳೆ ಎಂಬಂತೆ ತೋರಿಸಿದ್ದಾನೆ.

    ಇನ್ನೂ ಆಕೆಯನ್ನು ಮಿನಿ ಗರಗಸದ ಮೂಲಕ 35 ತುಂಡುಗಳನ್ನು ಮಾಡಿ ಕ್ರೂರತೆ ಮೆರೆದಿದ್ದಾನೆ. ಅಷ್ಟಕ್ಕೆ ನಿಲ್ಲಿಸದ ಅಫ್ತಾಬ್ ಆಕೆಯ ದೇಹದ ಭಾಗಗಳನ್ನಿಡಲೆಂದು ಅದನ್ನಿಡಲೆಂದು ಒಂದು ಹೊಸ ಫ್ರಿಡ್ಜ್‌ನ್ನು ತೆಗೆದುಕೊಂಡು ಬಂದಿದ್ದಾನೆ. ನಂತರ ಕೊಳೆತ ವಾಸನೆ ಬಾರದಿರಲಿ ಎಂದು ಪ್ರತಿನಿತ್ಯ ಅಗರ ಬತ್ತಿ ಹಚ್ಚುತ್ತಿದ್ದ. ಅದಾದ ಬಳಿಕ ಪ್ರತಿನಿತ್ಯ ಶ್ರದ್ಧಾಳ ದೇಹದ ಒಂದೊಂದೆ ಭಾಗಗನ್ನು ದೆಹಲಿ ಕಾಡುಗಳಿಗೆ ತೆಗೆದುಕೊಂಡು ಹೋಗಿ ಹೂತುಹಾಕಿ ವಿಕೃತಿ ಮೆರೆದಿದ್ದ. ಇದನ್ನೂ ಓದಿ: ಮನೆಯಲ್ಲಿ ಶ್ರದ್ಧಾಳ ದೇಹದ ಪೀಸ್‍ಗಳಿದ್ರೂ ಬೇರೆ ಯುವತಿಯನ್ನು ಮನೆಗೆ ಕರೆದು ಸೆಕ್ಸ್ ಮಾಡ್ತಿದ್ದ!

    ಇತ್ತ ಶ್ರದ್ಧಾಳ ಸ್ನೇಹಿತರು ಶ್ರದ್ಧಾಳ ಮೊಬೈಲ್ ಸ್ವಿಚ್ಛ್ ಆಫ್ ಆಗಿರುವುದನ್ನು ಕಂಡು ಕಂಗಾಲಾಗಿದ್ದಾರೆ. ಕೆಲ ಸಮಯ ಅವಳಿಗಾಗಿ ಹುಡುಕಲು ಪ್ರಾರಂಭಿಸಿದ್ದಾರೆ. ಆದರೂ ಆಕೆಯ ಸುಳಿವೇ ಸಿಗದಿದ್ದರಿಂದ ಶ್ರದ್ಧಾಳ ಪೋಷಕರಿಗೆ ತಿಳಿಸಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಶ್ರದ್ಧಾಳ ತಂದೆ ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಈ ವೇಳೆ ಕೆಲ ಭಯಾನಕ ವಿಷಯ ತಿಳಿದಿದ್ದು, ಆರೋಪಿ ಅಫ್ತಾಬ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ:  ನನ್ನನ್ನು ರಕ್ಷಿಸು, ಇಲ್ಲದಿದ್ರೆ ಆತ ಕೊಂದು ಬಿಡ್ತಾನೆ- ಸ್ನೇಹಿತನಿಗೆ ಮೊದಲೇ ತಿಳಿಸಿದ್ದ ಶ್ರದ್ಧಾ!

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿ ಶ್ರದ್ಧಾಳ ದೇಹದ ಪೀಸ್‍ಗಳಿದ್ರೂ ಬೇರೆ ಯುವತಿಯನ್ನು ಮನೆಗೆ ಕರೆದು ಸೆಕ್ಸ್ ಮಾಡ್ತಿದ್ದ!

    ಮನೆಯಲ್ಲಿ ಶ್ರದ್ಧಾಳ ದೇಹದ ಪೀಸ್‍ಗಳಿದ್ರೂ ಬೇರೆ ಯುವತಿಯನ್ನು ಮನೆಗೆ ಕರೆದು ಸೆಕ್ಸ್ ಮಾಡ್ತಿದ್ದ!

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತನ್ನೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ  (Live in relationship) ಗೆಳತಿಯ (Girlfriend) ಹತ್ಯೆ ಮಾಡಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಅನೇಕ ಭಯಾನಕ ಸಂಗತಿಗಳು ಬಯಲಾಗುತ್ತಿವೆ. ಕೊಲೆಗಾರ ಅಫ್ತಾಬ್, ಶ್ರದ್ಧಾಳನ್ನು (Shraddha) ಕೊಲೆ ಮಾಡಿ ಕೆಲ ದಿನಗಳ ನಂತರ ಮತ್ತೊಬ್ಬ ಮಹಿಳೆಯನ್ನು ತನ್ನ ಅಪಾರ್ಟ್‍ಮೆಂಟ್‍ಗೆ ಕರೆದು ಸೆಕ್ಸ್ ಮಾಡ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ.

    ಅಫ್ತಾಬ್(28) ಹಾಗೂ ಶ್ರದ್ಧಾ (27) ಇಬ್ಬರು ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದರು. 3 ವರ್ಷದ ಹಿಂದೆ ಮುಂಬೈನಲ್ಲಿ ಭೇಟಿಯಾಗಿದ್ದರು. ಅವರು ಅದಾದ ಬಳಿಕ ದೆಹಲಿಗೆ ಬಂದು ಅಲ್ಲೂ  ಲಿವಿಂಗ್ ಇನ್ ರಿಲೆಷನ್‍ಶಿಪ್‍ನಲ್ಲಿದ್ದರು. ಅದಾದ ಬಳಿಕ ಇಬ್ಬರ ಮಧ್ಯೆ ಮದುವೆ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶ್ರದ್ಧಾಳನ್ನು ಅಫ್ತಾಬ್ ಕೊಲೆ ಮಾಡಿ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ. ಅದಾದ ಬಳಿಕ ಶ್ರದ್ಧಾಳ ದೇಹದ ಭಾಗಗಳನ್ನು ದೆಹಲಿ ಕಾಡಿನಲ್ಲಿ ವಿಲೇವಾರಿ ಮಾಡಿದ್ದ.

    ಈ ಮಧ್ಯ ಅಂದರೆ ಶ್ರದ್ಧಾಳನ್ನು ಕೊಂದ 15-20 ದಿನಗಳ ನಂತರ ಅಫ್ತಾಬ್ ಅದೇ ಡೆಟಿಂಗ್ ಆ್ಯಪ್ ಮೂಲಕ ಮತ್ತೊಬ್ಬ ಯುವತಿಯನ್ನು ಭೇಟಿಯಾಗಿ ಡೇಟ್ ಮಾಡಲು ಪ್ರಾರಂಭಿಸಿದ್ದಾನೆ. ಅಷ್ಟೇ ಅಲ್ಲದೇ ಅಫ್ತಾಬ್ ಆ ಯುವತಿಯನ್ನು ಆಗಾಗ ಮನೆಗೂ ಕರೆ ತಂದು ಸೆಕ್ಸ್‌ ಮಾಡುತ್ತಿದ್ದ. ಆದರೆ ಆ ಮಹಿಳೆಯನ್ನು ಕರೆತರುವ ವೇಳೆ ಶ್ರದ್ಧಾಳ ದೇಹದ ಭಾಗಗಳನ್ನು ಫ್ರಿಡ್ಜ್‌ನಿಂದ ತೆಗೆದು ಕಬೋರ್ಡ್‍ನಲ್ಲಿ ಇಡುತ್ತಿದ್ದ ಎಂಬ ವಿಷಯ ಇದೀಗ ಬಯಲಾಗಿದೆ. ಇದನ್ನೂ ಓದಿ: ನನ್ನನ್ನು ರಕ್ಷಿಸು, ಇಲ್ಲದಿದ್ರೆ ಆತ ಕೊಂದು ಬಿಡ್ತಾನೆ- ಸ್ನೇಹಿತನಿಗೆ ಮೊದಲೇ ತಿಳಿಸಿದ್ದ ಶ್ರದ್ಧಾ!

    ಅಫ್ತಾಬ್ ಪೂನಾವಾಲಾ ಮತ್ತು ಶ್ರದ್ಧಾ ವಾಕರ್ ಏಪ್ರಿಲ್‍ನಲ್ಲಿ ದೆಹಲಿಗೆ ತೆರಳಿದರು. ಅವರಿಬ್ಬರ ಮಧ್ಯೆ ಒಂದು ಜಗಳ ಉಲ್ಬಣಗೊಂಡಿದ್ದು, ಆ ವೇಳೆ ಅಂದರೆ ಮೇ 18ರಂದು ಶ್ರದ್ಧಾಳನ್ನು ಕತ್ತು ಹಿಸುಕಿ ಅಫ್ತಾಬ್ ಕೊಲೆ ಮಾಡಿದ್ದ. ಬಾಣಸಿಗನ ತರಬೇತಿ ಪಡೆದಿದ್ದ ಅಫ್ತಾಬ್, ಶ್ರದ್ಧಾಳ ದೇಹವನ್ನು ಕತ್ತರಿಸುವ ಮೊದಲು ರಕ್ತದ ಕಲೆಗಳನ್ನು ಅನ್ನು ಹೇಗೆ ಸ್ವಚ್ಛಗೊಳಿಸಬಹುದು ಎಂದು ಗೂಗಲ್ ಮಾಡಿದ್ದನು. ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

    ಅಷ್ಟೇ ಅಲ್ಲದೇ ಶ್ರದ್ಧಾ ಕೊಲೆಯನ್ನು ಮುಚ್ಚಿಹಾಕಲು, ಅಫ್ತಾಬ್ ತನ್ನ ಸ್ನೇಹಿತರ ಜೊತೆ ಸಂಪರ್ಕದಲ್ಲಿರಲು ಆಕೆಯ ಸಾಮಾಜಿಕ ಜಾಲತಾಣದ ಖಾತೆಯನ್ನು ಬಳಸುತ್ತಿದ್ದನು. ಆದರೂ ಎರಡು ತಿಂಗಳಿಗೂ ಹೆಚ್ಚು ಕಾಲ ಆಕೆಯ ಫೋನ್ ಸ್ವಿಚ್ ಆಫ್ ಆಗಿದ್ದಾಗ ಆಕೆಯ ಸ್ನೇಹಿತರು ಅನುಮಾನಗೊಂಡು ಶ್ರದ್ಧಾಳ ಪೋಷಕರಿಗೆ ತಿಳಿಸಿದ್ದರು. ಅದಾದ ಬಳಿಕ ಆಕೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

    ಘಟನೆಯೇನು?: ತನ್ನೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ ಗೆಳತಿಯ ಹತ್ಯೆ ನಡೆಸಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ. ಆನಂತರ ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿರುವ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನನ್ನು ರಕ್ಷಿಸು, ಇಲ್ಲದಿದ್ರೆ ಆತ ಕೊಂದು ಬಿಡ್ತಾನೆ- ಸ್ನೇಹಿತನಿಗೆ ಮೊದಲೇ ತಿಳಿಸಿದ್ದ ಶ್ರದ್ಧಾ!

    ನನ್ನನ್ನು ರಕ್ಷಿಸು, ಇಲ್ಲದಿದ್ರೆ ಆತ ಕೊಂದು ಬಿಡ್ತಾನೆ- ಸ್ನೇಹಿತನಿಗೆ ಮೊದಲೇ ತಿಳಿಸಿದ್ದ ಶ್ರದ್ಧಾ!

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತನ್ನ ಗೆಳೆಯನಿಂದ ಭೀಕರವಾಗಿ ಕೊಲೆಯಾಗಿದ್ದ ಶ್ರದ್ಧಾ ವಾಕರ್‌ಳ ಪರಿಸ್ಥಿತಿ ಬಗ್ಗೆ ಆಕೆಯ ಸ್ನೇಹಿತ (Friend) ತಿಳಿಸಿದ್ದಾನೆ.

    ಹೌದು.. ಕೊಲೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನ ಕ್ರೂರತೆಯನ್ನು ಮೊದಲೇ ಶ್ರದ್ಧಾ(27) ತನ್ನ ಸ್ನೇಹಿತ ಲಕ್ಷ್ಮಣ್ ನಾಡಾರ್ ಜೊತೆ ಹೇಳಿಕೊಂಡಿದ್ದಳಂತೆ. ಈ ಬಗ್ಗೆ ಮಾತನಾಡಿರುವ ಲಕ್ಷ್ಮಣ್, ಶ್ರದ್ಧಾ ಹಾಗೂ ಅಫ್ತಾಬ್ ನಡುವೆ ಆಗಾಗ ಅನೇಕ ಜಗಳಗಳು ಹಾಗೂ ವಾದಗಳು ನಡೆಯುತ್ತಿದ್ದವು. ಒಮ್ಮೆ ಆಕೆ ನನ್ನನ್ನು ವಾಟ್ಸಪ್ ಮೂಲಕ ಸಂಪರ್ಕಿಸಿದ್ದಳು. ಅಷ್ಟೇ ಅಲ್ಲದೇ ಆಕೆ ಆ ರಾತ್ರಿ ಅವನೊಂದಿಗೆ ತಾನು ಇಲ್ಲೇ ಉಳಿದುಕೊಂಡರೆ ಆತ ತನ್ನನ್ನು ಕೊಲ್ಲುತ್ತಾನೆ. ದಯವಿಟ್ಟು ತನ್ನನ್ನು ಅವನ ನಿವಾಸದಿಂದ ರಕ್ಷಿಸುವಂತೆ ಬೇಡಿಕೊಂಡಿದ್ದಳು ಎಂದು ಮಾಹಿತಿ ನೀಡಿದರು.

    ಅದಾದ ಬಳಿಕ ಸ್ನೇಹಿತರೊಂದಿಗೆ ಸೇರಿ ಶ್ರದ್ಧಾಳನ್ನು ಛತ್ತರ್‍ಪುರದ ಆತನ ನಿವಾಸದಿಂದ ರಕ್ಷಿಸಿದ್ದೆವು. ಅಷ್ಟೇ ಅಲ್ಲದೇ ಘಟನೆಗೆ ಸಂಬಂಧಿಸಿ ಪೊಲೀಸರನ್ನು ಸಂಪರ್ಕಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದೆವು. ಆದರೆ ಶ್ರದ್ಧಾ ಆಫಾಬ್‍ನನ್ನು ಪ್ರೀತಿಸುತ್ತಿದ್ದರಿಂದ ಪೊಲೀಸರಿಗೆ ತಿಳಿಸಿರಲಿಲ್ಲ ಎಂದರು.

    ಅದಾದ ಬಳಿಕ 2 ತಿಂಗಳು ಕಾಲ ಶ್ರದ್ಧಾ ಸಂಪರ್ಕಿಸುವುದನ್ನು ನಿಲ್ಲಿಸಿದ್ದಳು. ಅಷ್ಟೇ ಅಲ್ಲದೇ ನಾವು ಯಾವುದೇ ಕರೆ, ಮೆಸೆಜ್ ಮಾಡಿದ್ದರೂ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಇದರಿಂದ ನಮಗೆಲ್ಲ ಚಿಂತೆ ಆರಂಭವಾಗಿತ್ತು. ಅಷ್ಟೇ ಅಲ್ಲದೇ ನಾವು ಆಕೆಯನ್ನು ಹುಡುಕಲು ಅನೇಕ ಪ್ರಯತ್ನವನ್ನು ಪಟ್ಟೆವು. ಆದರೆ ಆಕೆ ಎಲ್ಲಿದ್ದಾಳೆ ಎನ್ನುವುದನ್ನು ನಮಗೆ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಇದರಿಂದಾಗಿ ನಾವೂ ಬೇರೆ ದಾರಿ ಸಿಗದೇ ಆಕೆಯ ಸಹೋದರಿನಿಗೆ ವಿಷಯವನ್ನು ತಿಳಿಸಿದೆವು ಎಂದು ಹೇಳಿದರು.

    ಈ ವೇಳೆ ಇದನ್ನು ತಿಳಿದ ಶ್ರದ್ಧಾ ತಂದೆ ವಿಕಾಸ್ ವಾಕರ್ ಮುಂಬೈ ಪೊಲೀಸರಿಗೆ ದೂರು ನೀಡಿದರು. ಅದಾದ ಬಳಿಕ ತನಿಖೆಯನ್ನು ಪೊಲೀಸರು ಅನೇಕ ಭಯಾನಕ ವಿಷಯವನ್ನು ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ಅಫ್ತಾಬ್ ಬಳಿ ಶ್ರದ್ಧಾ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಳು. ಅದಾದ ನಂತರ ಇಬ್ಬರ ಸಂಬಂಧವು ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಕೋಪಗೊಂಡ ಆಫ್ತಾಬ್, ಅಂತಿಮವಾಗಿ ಅವಳನ್ನು ಕೊಂದನು ಎಂದು ತಿಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಗೆಳತಿಯ ದೇಹವನ್ನು 35 ಪೀಸ್ ಮಾಡಿ, ದೆಹಲಿಯಾದ್ಯಂತ ಕಾಡುಗಳಲ್ಲಿ ಹೂತು ಹಾಕಿದ!

    ಘಟನೆಯೇನು?: ತನ್ನೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ (Live in relationship) ಗೆಳತಿಯ (Girlfriend)  ಹತ್ಯೆ ನಡೆಸಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‍ನಲ್ಲಿಟ್ಟಿದ್ದ. ಆನಂತರ ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿರುವ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ದೆಹಲಿಯ ಭಯಾನಕ ಕೃತ್ಯಕ್ಕೆ ಅಮೆರಿಕದ ಥ್ರಿಲ್ಲರ್ `ಡೆಕ್ಸ್ಟರ್‌’ ಸ್ಫೂರ್ತಿ – ರೋಚಕ ಸತ್ಯ ಬಯಲು

    Live Tv
    [brid partner=56869869 player=32851 video=960834 autoplay=true]

  • ಮೂವರನ್ನು ಒಂದೇ ಮಂಟಪದಲ್ಲಿ ವರಿಸಿದ 46ರ ವ್ಯಕ್ತಿ – ಸಾಕ್ಷಿಯಾದ ಮಕ್ಕಳು

    ಮೂವರನ್ನು ಒಂದೇ ಮಂಟಪದಲ್ಲಿ ವರಿಸಿದ 46ರ ವ್ಯಕ್ತಿ – ಸಾಕ್ಷಿಯಾದ ಮಕ್ಕಳು

    ಭೋಪಾಲ್: ಮೂವರು ಮಹಿಳೆಯರೊಂದಿಗೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದ ವ್ಯಕ್ತಿಯೊಬ್ಬ ಬುಡಕಟ್ಟು ಪದ್ಧತಿಯ ಪ್ರಕಾರ ಏಕಕಾಲದಲ್ಲಿ ಮದುವೆಯಾಗಿ ಸುದ್ದಿಯಾಗಿದ್ದಾನೆ.

    ಮಧ್ಯಪ್ರದೇಶದ ಭೋಪಾಲ್‍ನಿಂದ ಸುಮಾರು 400ಕಿ.ಮೀ ದೂರದಲ್ಲಿರುವ ನಾನ್‍ಪುರ್ ಗ್ರಾಮದ ಮಾಜಿ ಸರ್‍ಪಂಚ್ ಮೌರ್ಯ (42) ಅವರು ನಾನಾಬಾಯಿ, ಮೇಳ ಮತ್ತು ಸಕ್ರಿ ಅವರನ್ನು ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾರೆ.

    MARRIAGE

    ಮೌರ್ಯ 2003ರಲ್ಲಿ ನಾನಾಬಾಯಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ಒಂದೇ ಮನೆಯಲ್ಲೇ ವಾಸಿಸುತ್ತಿದ್ದರು. ಅವರೊಂದಿಗೆ ಮತ್ತಿಬ್ಬರು ಮಹಿಳೆಯರಾದ ಮೇಳ ಮತ್ತು ಸಕ್ರಿ ಕಳೆದ 15 ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಇದನ್ನೂ ಓದಿ: ರಾಹುಲ್‌ ಮದುವೆಯಲ್ಲಿ ಭಾಗವಹಿಸಿದ್ರೆ ಸಂಘಿಗಳಿಗೆ ಭಯ ಯಾಕೆ: ಕಾಂಗ್ರೆಸ್‌ ಪ್ರಶ್ನೆ

    ವಿವಾಹ ಸಮಾರಂಭದಲ್ಲಿ ಮೂವರು ಮಹಿಳೆಯರ 6 ಮಕ್ಕಳು ಪಾಲ್ಗೊಂಡಿದ್ದರು. ಮೋರಿ ಫಾಲಿಯಾ ಗ್ರಾಮದಲ್ಲಿ ನಡೆದ ಈ ಕಾರ್ಯಕ್ರಮದ ಫೋಟೋ ಮತ್ತು ವೀಡಿಯೋ ಭಾರೀ ವೈರಲ್ ಆಗುತ್ತಿದೆ. ಮೂರು ದಿನಗಳ ಕಾಲ ಬುಡಕಟ್ಟು ಜನಾಂಗದವರ ಪ್ರಕಾರ ವಿಜೃಂಭಣೆಯಿಂದ ವಿವಾಹ ನಡೆಯಿತು. ಇದನ್ನೂ ಓದಿ: ತನಗಿಂತ 28 ವರ್ಷ ಚಿಕ್ಕವಳ ಕೈಹಿಡಿದ ಮಾಜಿ ಕ್ರಿಕೆಟಿಗ ಅರುಣ್ ಲಾಲ್

    ಈ ಬಗ್ಗೆ ಮೌರ್ಯ ಮಾತನಾಡಿ, ಈ ಸಂಬಂಧಗಳು ಪ್ರಾರಂಭವಾದಾಗ ನನ್ನ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಆದ್ದರಿಂದ ಸಂಬಂಧದಿಂದ ಮಕ್ಕಳನ್ನು ಪಡೆದರೂ ನಾನು ಅವರನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ. ಆದರೆ ಈಗ ನಾವು ಮದುವೆ ಆಗುವ ಸ್ಥಿತಿಯಲ್ಲಿದ್ದೇವೆ ಎಂದು ಹೇಳಿದರು.