Tag: ಲಿವ್ ಇನ್ ರಿಲೇಶನ್

  • 70 ವರ್ಷ ಲಿವ್ ಇನ್ ರಿಲೇಶನ್ – 95ನೇ ವಯಸ್ಸಿನಲ್ಲಿ ಹಸೆಮಣೆ ಏರಿದ ರಾಜಸ್ಥಾನ ಜೋಡಿ

    70 ವರ್ಷ ಲಿವ್ ಇನ್ ರಿಲೇಶನ್ – 95ನೇ ವಯಸ್ಸಿನಲ್ಲಿ ಹಸೆಮಣೆ ಏರಿದ ರಾಜಸ್ಥಾನ ಜೋಡಿ

    ಜೈಪುರ: ಇತ್ತೀಚಿನ ದಿನಗಳಲ್ಲಿ ಮದುವೆಗೂ ಮುನ್ನವೇ ಲಿವ್ ಇನ್ ರಿಲೇಶನ್‌ನಲ್ಲಿರುವುದು (Live In Relation) ಕಾಮನ್. ಆದರೆ ರಾಜಸ್ಥಾನದ (Rajasthan) ಜೋಡಿಯೊಂದು 70 ವರ್ಷಗಳಿಂದ ಲಿವ್ ಇನ್‌ನಲ್ಲಿದ್ದು, ವೃದ್ಧಾಪ್ಯದಲ್ಲಿ ಹಸಮಣೆ ಏರಿರುವ ಅಪರೂಪದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

    ಹೌದು, ರಾಜಸ್ಥಾನದ ಡುಂಗರಪುರ (Dungarpur) ಜಿಲ್ಲೆಯ ಗಾಲಂದರ್ ಗ್ರಾಮದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಡುಂಗರಪುರದ ರಾಮ ಅಂಗರಿ (95) ಹಾಗೂ ಜೀವಲಿ ದೇವಿ (90) 70 ವರ್ಷಗಳ ಕಾಲ ಲಿವ್ ಇನ್ ರಿಲೇಶನ್‌ನಲ್ಲಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಂದ್ರೆ Real Culprits of Bangalore – ವಿಪಕ್ಷ ನಾಯಕ ಆರ್‌. ಅಶೋಕ್‌ ಲೇವಡಿ

    ಈ ಜೋಡಿ ಒಂದೇ ಮನೆಯಲ್ಲಿ ಇದ್ದುಕೊಂಡು ಮದುವೆಯಾಗದೇ ಜೀವನ ನಡೆಸುತ್ತಿದ್ದರು. ಈ ಜೋಡಿಗೆ 4 ಗಂಡು ಹಾಗೂ 4 ಹೆಣ್ಣುಮಕ್ಕಳಿದ್ದಾರೆ. ಈ ಪೈಕಿ ನಾಲ್ವರು ಮಕ್ಕಳು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಬಹಳ ಹಿಂದೆಯೇ ಮದುವೆಯಾಗಬೇಕಿದ್ದ ಈ ಜೋಡಿಯ ಕನಸನ್ನು ಮಕ್ಕಳು ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ನೆರವೇರಿಸಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಜ್ಜು – ಜೂ.10ರಂದು ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಶುರು

    ಪುತ್ರರು, ಪುತ್ರಿಯರು, ಮೊಮ್ಮಕ್ಕಳು ಎಲ್ಲರೂ ಈ ವಿಶಿಷ್ಟ ಮದುವೆಯಲ್ಲಿ ಭಾಗವಹಿಸಿದ್ದಾರೆ. ಎಲ್ಲಾ ಯುವ ಜೋಡಿಗಳ ವಿವಾಹದಂತೆ ಹಳದಿ, ಮೆಹಂದಿ ಮತ್ತು ಬಿಂದೋರಿಯಂತಹ ಎಲ್ಲಾ ಆಚರಣೆಗಳನ್ನು ನಡೆಸಲಾಯಿತು. ಮದುವೆಯಲ್ಲಿ ಡಿಜೆ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದ್ದು, ಮಕ್ಕಳು, ಮೊಮ್ಮಕ್ಕಳು ಮತ್ತು ಗ್ರಾಮಸ್ಥರು ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಅಪರೂಪದ ಮದುವೆಯಲ್ಲಿ ಇಡೀ ಊರಿಗೆ ಊರೇ ಭಾಗಿಯಾಗಿ ಸಂಭ್ರಮಿಸಿದೆ. ಇದನ್ನೂ ಓದಿ: ಕೊಲಂಬಿಯಾದ ಬಲಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಮೇಲೆ ಗುಂಡೇಟು

  • 100 ಸಾಕ್ಷ್ಯಗಳೊಂದಿಗೆ 3 ಸಾವಿರ ಪುಟಗಳ ಚಾರ್ಜ್‌ಶೀಟ್‌ ಸಿದ್ಧಪಡಿಸಿದ ದೆಹಲಿ ಪೊಲೀಸರು

    100 ಸಾಕ್ಷ್ಯಗಳೊಂದಿಗೆ 3 ಸಾವಿರ ಪುಟಗಳ ಚಾರ್ಜ್‌ಶೀಟ್‌ ಸಿದ್ಧಪಡಿಸಿದ ದೆಹಲಿ ಪೊಲೀಸರು

    ನವದೆಹಲಿ: ಶ್ರದ್ಧಾವಾಕರ್ ಹತ್ಯೆ ಪ್ರಕರಣಕ್ಕೆ (Shraddha Walkar Murder Case) ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿರುವ ದೆಹಲಿ ಪೊಲೀಸರು (Delhi Police) 100 ಸಾಕ್ಷ್ಯಗಳೊಂದಿಗೆ 3 ಸಾವಿರ ಪುಟಗಳ ಚಾರ್ಜ್‌ಶೀಟ್ ಕರಡನ್ನು ಸಿದ್ಧಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    3000 ಸಾವಿರ ಪುಟಗಳ ಚಾರ್ಜ್‌ಶೀಟ್ ಕರಡಿನೊಂದಿಗೆ ವಿಧಿವಿಜ್ಞಾನ (Forensic) ಹಾಗೂ ತಾಂತ್ರಿಕ 100 ಸಾಕ್ಷ್ಯಗಳನ್ನು ಒಳಗೊಂಡ ಅಂತಿಮ ದೋಷಾರೋಪ ಪಟ್ಟಿ ಸಿದ್ಧಪಡಿಸಲಾಗಿದೆ. ಅದನ್ನು ಕಾನೂನು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಶ್ರದ್ಧಾಳನ್ನ ಕೊಂದು ಗೆಳತಿಯೊಂದಿಗೆ ಸೆಕ್ಸ್- ಡಾಕ್ಟರ್ ಜೊತೆ ಡೇಟಿಂಗ್ ಮಾಡ್ತಿದ್ದ ಅಫ್ತಾಬ್

    ಏನಿದು ಘಟನೆ?
    ತನ್ನೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ (Live In Relationship) ಗೆಳತಿ ಶ್ರದ್ಧಾವಾಕರ್ ಹತ್ಯೆ ನಡೆಸಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಅದನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ. ಆನಂತರ ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿದ್ದ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿತ್ತು. ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ (2022ರ ನವೆಂಬರ್ 12ರಂದು) ಕೊಲೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನನ್ನ (Aftab Amin Poonawala) ಪೊಲೀಸರು ಬಂಧಿಸಿದ್ದರು.

    ಈ ತನಿಖೆಯಲ್ಲಿ ಛತ್ತರ್‌ಪುರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಮೂಳೆಗಳು ಶ್ರದ್ಧಾವಾಕರ್ ದೇಹದ್ದೇ ಎಂದು ಡಿಎನ್‌ಎ ವರದಿಗಳು ದೃಢಪಡಿಸಿದೆ. ಅಫ್ತಾಬ್‌ಗೆ ಮಂಪರು ಪರೀಕ್ಷೆ ಸಹ ನಡೆಸಲಾಗಿತ್ತು. ಈ ವೇಳೆ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದನು. ಆದ್ರೆ ಪ್ರಾಸಿಕ್ಯೂಷನ್ ದೃಷ್ಟಿಕೋನದಿಂದ ತಪ್ಪೊಪ್ಪಿಗೆಯೊಂದೆ ಅಪರಾಧ ನಿರ್ಣಯಕ್ಕೆ ಸಾಕಾಗಲ್ಲ ಎಂದು ಹೇಳಲಾಗಿತ್ತು. ಇದನ್ನೂ ಓದಿ: ಶ್ರದ್ಧಾ ಹತ್ಯೆ ಕೇಸ್ – ಕಾಡಿನಲ್ಲಿ ದೊರೆತ ಮೂಳೆಗಳು ತಂದೆಯ ಡಿಎನ್‌ಎಗೆ ಮ್ಯಾಚ್

    2022ರಲ್ಲಿ ಘಟನೆ ನಡೆದ ಬಳಿಕ ತನಿಖೆ ಚುರುಕುಗೊಳಿಸಿದ ದೆಹಲಿ ಪೊಲೀಸರು ಕೊಲೆಗೆ ಬಳಸಿದ್ದ ಗರಗಸ, ಚಾಕುಗಳು ಮತ್ತು ಇತರ ಸಾಧನಗಳನ್ನ ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ಅಂಶಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಲಿವ್‌ ಇನ್‌ ರಿಲೇಷನ್‌ಶಿಪ್‌ ಜೊತೆಗಿದ್ದ ಯುವಕನ ಕೊಂದಳಾಕೆ..!

    ಲಿವ್‌ ಇನ್‌ ರಿಲೇಷನ್‌ಶಿಪ್‌ ಜೊತೆಗಿದ್ದ ಯುವಕನ ಕೊಂದಳಾಕೆ..!

    ಪುಣೆ: ತನ್ನ ಜೊತೆ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಯುವಕನನ್ನು (live-in partner) ಕೊಂದು ತನಗೇನೂ ಗೊತ್ತೇ ಇಲ್ಲ ಎಂಬಂತಿದ್ದ ಯುವತಿಯನ್ನು ಪುಣೆ ಪೊಲೀಸರು (Pune Police) ಬಂಧಿಸಿದ್ದಾರೆ.

    ಏನಾಗಿತ್ತು?: ಪುಣೆಯ ಹಾದಪ್ಸರ್‌ ಎಂಬಲ್ಲಿ ಸೋನಲ್‌ ದಭಾಡೆ ಹಾಗೂ ರೋಹಿಣಿ ಯಾನುತೆ ಲಿವ್‌ ಇನ್‌ ರಿಲೇಷನ್‌ಶಿಪ್‌ ನಲ್ಲಿ ಜೊತೆಯಾಗಿದ್ದರು. ಸೋನಲ್‌ ದಭಾಡೆ ಮನೆಯಲ್ಲಿ ಇಬ್ಬರೂ ವಾಸವಾಗಿದ್ದರು.

    ಸೋನಲ್‌ ಹಾಗೂ ರೋಹಿಣಿ ಎರಡು ಖಾಸಗಿ ಕಂಪೆನಿಯಲ್ಲಿ ಪ್ರತ್ಯೇಕವಾಗಿ ಕೆಲಸ ಮಾಡುತ್ತಿದ್ದರು. ಇದರ ಜೊತೆಗೆ ಇಬ್ಬರೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧತೆ ನಡೆಸುತ್ತಿದ್ದು. ಇವರ ನಡುವೆ ಆಗಾಗ ವಾಗ್ವಾದಗಳು ಹಾಗೂ ಗಲಾಟೆಗಳು ನಡೆಯುತ್ತಿದ್ದವು. ಆದರೆ ಕಳೆದ ಆಗಸ್ಟ್‌ 29ರಂದು ರೋಹಿಣಿ ಉಸಿರುಗಟ್ಟಿಸಿ ಸೋನಲ್‌ ದಭಾಡೆಯನ್ನು ಕೊಂದಿದ್ದಳು. ಬಳಿಕ ಪೊಲೀಸರಿಗೆ ವಿಷಯ ತಿಳಿಸಿ ಸಹಜ ಸಾವು ಎಂಬಂತೆ ವರ್ತಿಸಿದ್ದಳು. ಇದನ್ನೂ ಓದಿ: ನಿಮ್ಮ ಧಮ್ಕಿಗೆ ಹೆದರಲ್ಲ – ಪ್ರತಾಪ್ ಸಿಂಹಗೆ ತನ್ವೀರ್ ಸೇಠ್ ತಿರುಗೇಟು

    ನಟನಾ ಮಣಿ!: ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಪೊಲೀಸರು ಸೋನಲ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಇದರ ವರದಿಯಲ್ಲಿ ಸೋನಲ್‌ ಉಸಿರುಗಟ್ಟಿ ಸಾವನ್ನಪ್ಪಿರುವ ವಿವರ ಬೆಳಕಿಗೆ ಬಂದಿದೆ. ಸೋನಲ್‌ ನನ್ನು ತಾನೇ ಕೊಂದಿದ್ದರೂ ಪೊಲೀಸರಿಗೆ ಹಾಗೂ ಸಂಬಂಧಿಗಳಿಗೆ ಈ ವಿಷಯ ಹೇಳಿರಲಿಲ್ಲ.

    ಆದರೆ ಪೋಸ್ಟ್‌ ಮಾರ್ಟಂ ವರದಿ ಬರುತ್ತಿದ್ದಂತೆಯೇ ಪೊಲೀಸರು ರೋಹಿಣಿಯ ತನಿಖೆ ಶುರು ಮಾಡಿದ್ದಾರೆ. ಯಾವಾಗ ತನಿಖೆ ಬಿಸಿ ತಾಗಿತೋ ಆಕೆ ಎಲ್ಲ ವಿವರಗಳನ್ನೂ ಬಾಯಿಬಿಟ್ಟು ತಾನೇ ಆತನನ್ನು ಕೊಂದಿದ್ದಾಗಿ ಹೇಳಿದ್ದಾಳೆ. ಪ್ರಕರಣ ಸಂಬಂಧ ಹದಪ್ಸರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: 24 ಗಂಟೆಯೊಳಗೆ ರೈತರ ಪಂಪ್‍ಸೇಟ್‍ಗೆ ಟ್ರಾನ್ಸ್​ಫಾರ್ಮರ್ ವ್ಯವಸ್ಥೆ ಮಾಡಿ: ಸುನಿಲ್ ಕುಮಾರ್

    ಪೊಲೀಸರು ಹೇಳೋದೇನು?: ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ವೇಳೆ ಇಬ್ಬರಿಗೂ ಪರಿಚಯವಾಗಿದ್ದು, ಬಳಿಕ ಲಿವ್‌ ಇನ್‌ ರಿಲೇಷನ್‌ ಶಿಪ್ಪಲ್ಲಿದ್ದರು. ಘಟನೆ ನಡೆದ ದಿನ ರೋಹಿಣಿ ಸೋನಲ್‌ನನ್ನು ದೂಡಿದ್ದಾಳೆ. ಆಗ ಸೋನಲ್‌ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಇದೇ ಸಮಯದಲ್ಲಿ ರೋಹಿಣಿ ಆತನನ್ನು ಉಸಿರುಗಟ್ಟಿಸಿ ಸಾಯಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

  • 48 ವರ್ಷ ಪ್ರೀತಿಸಿ 80ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೃದ್ಧ!

    48 ವರ್ಷ ಪ್ರೀತಿಸಿ 80ನೇ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೃದ್ಧ!

    ಉದಯ್‍ಪುರ್: 80 ವರ್ಷದ ವೃದ್ಧರೊಬ್ಬರು 48 ವರ್ಷಗಳಿಂದ ಲಿವ್ ಇನ್ ರಿಲೇಶನ್‍ನಲ್ಲಿದ್ದ 76 ವರ್ಷದ ಪ್ರೇಯಸಿ ಜೊತೆ ಮೊದಲ ಪತ್ನಿಯ ಸಮ್ಮತಿಯೊಂದಿಗೆ ರಾಜಸ್ಥಾನ ಉದಯ್‍ಪುರದಲ್ಲಿ ಮದುವೆಯಾಗಿದ್ದಾರೆ.

    ದೇವ್‍ದಾಸ್ ಕಸೌಲಾ ಅವರಿಗೆ ಈ ಹಿಂದೆ ಮದುವೆಯಾಗಿತ್ತು. ಮದುವೆಯಾದ ನಂತರ 1970ರಲ್ಲಿ ತಾನು ಪಕ್ಕದ ಗ್ರಾಮದಲ್ಲಿದ್ದ ಗೆಳತಿ ಮಗ್ದುಬಾಯಿ ಜೊತೆ ಓಡಿ ಹೋಗಿದ್ದರು. ನಂತರ ತನ್ನ ಗ್ರಾಮಕ್ಕೆ ಮರಳಿ  ಗೆಳತಿಯ ಜೊತೆ ವಾಸಿಸುತ್ತಿದ್ದರು.

    ದೇವ್‍ದಾಸ್ ಮೊದಲ ಪತ್ನಿ ಚಂಪಾ ಬಾಯಿ ತನ್ನ ಮಕ್ಕಳ ಮನೆಯಲ್ಲಿ ವಾಸಿಸುತ್ತಿದ್ದು, ದೇವ್‍ದಾಸ್ ತನ್ನ ಪ್ರೇಯಸಿ ಜೊತೆ ಪೂರ್ವಿಕರ ಮನೆಯಲ್ಲಿ ವಾಸವಾಗಿದ್ದರು. ಆದರೆ ಇವರಿಬ್ಬರ ಈ ಸಂಬಂಧಕ್ಕೆ ಯಾವುದೇ ಹೆಸರಿಲ್ಲದ ಕಾರಣ ದೇವ್‍ದಾಸ್‍ರ ಮೊದಲ ಪತ್ನಿಯ ಮಗ ಇವರಿಬ್ಬರನ್ನು ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಲು ಮುಂದಾಗಿದ್ದಾರೆ. ಈ ಮದುವೆಗೆ ಚಂಪಾ ಅನುಮತಿ ನೀಡಿದ್ದರು.

    ಭಾಂಜನ ಸಂಪ್ರದಾಯದ ಪ್ರಕಾರ ಮಂಗಳವಾರ ದೇವ್‍ದಾಸ್ ಕಸೌಲಾ ಕುದುರೆ ಮೇಲೆ ಕುಳಿತು ವಧುವಿನ ಮನೆಗೆ ತೆರಳಿದ್ದರು. ನಂತರ ವರನ ಕಡೆಯವರು 50ಕೆ.ಜಿ ಅಕ್ಕಿ ಹಾಗೂ ವಧುವಿನ ಕಡೆಯವರು 10 ಕೆ.ಜಿ ಅಕ್ಕಿ ನೀಡಿದ್ದಾರೆ. ಈ ಅಕ್ಕಿಯಲ್ಲಿ ಭೋಜನವನ್ನು ತಯಾರಿಸಿ ಮದುವೆಗೆ ಬಂದ ಅತಿಥಿಗೆ ನೀಡಿದ್ದರು. ಮಕ್ಕಳು ಹಾಗೂ ಮರಿಮೊಮ್ಮಕ್ಕಳು ಗ್ರಾಮದವರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಸಿಕೊಟ್ಟಿದ್ದಾರೆ.