Tag: ಲಿವ್ ಇನ್ ಪಾರ್ಟ್ನರ್

  • ಲಿವ್ ಇನ್ ಪಾರ್ಟ್ನರ್‌ನ ಕೊಂದು ಕಬೋರ್ಡ್‌ನಲ್ಲಿ ತುಂಬಿಸಿಟ್ಟ!

    ಲಿವ್ ಇನ್ ಪಾರ್ಟ್ನರ್‌ನ ಕೊಂದು ಕಬೋರ್ಡ್‌ನಲ್ಲಿ ತುಂಬಿಸಿಟ್ಟ!

    ನವ ದೆಹಲಿ: ತನ್ನ ಲಿವ್ ಇನ್ ಪಾರ್ಟ್ನರ್‌ನ ಕೊಂದು ಆಕೆಯ ದೇಹವನ್ನು ಕಬೋರ್ಡ್‌ ನಲ್ಲಿ (Almirah) ತುಂಬಿಸಿ ಪರಾರಿಯಾಗಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ವಿಪಾಲ್ ಟೈಲರ್ ಎಂದು ಗುರುತಿಸಲಾಗಿದ್ದು, ಈತನನ್ನು ರಾಜಸ್ಥಾನದಿಂದ ಬಂಧಿಸಲಾಗಿದೆ. ಬಳಿಕ ಅಲ್ಲಿಂದ ದೆಹಲಿಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮೃತಳ ತಂದೆ ತನ್ನ 26 ವರ್ಷದ ಮಗಳನ್ನು ಸಂಪರ್ಕ ಮಾಡಲು ಹಲವು ದಿನಗಳಿಂದ ಪ್ರಯತ್ನಿಸಿದ್ದಾರೆ. ಆದರೆ ಮಗಳು ಸಂಪರ್ಕಕ್ಕೆ ಸಿಗದಿದ್ದರಿಂದ ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಇದಾದ ಮರುದಿನವೇ ಕೊಲೆ ವಿಚಾರ ಬೆಳಕಿಗೆ ಬಂದಿದೆ.

    ಏಪ್ರಿಲ್ 3 ರಂದು ಮಹಿಳೆಯ ತಂದೆ ರಾತ್ರಿ 10.40 ರಸುಮಾರಿಗೆ ಪಿಸಿಆರ್ ಗೆ ಕರೆ ಮಾಡಿದರು. ಈ ವೇಳೆ ತನ್ನ ಮಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಆಕೆಯ ಕೊಲೆಯಾಗಿದೆಯೇ ಎಂಬುದಾಗಿ ಅನುಮಾನ ವ್ಯಕ್ತಪಡಿಸಿ ದೂರು ನೀಡಿದರು. ಈ ಸಂಬಂಧ ದೂರು ಸ್ವೀಕರಿಸಿದ ಪೊಲೀಸರ ತಂಡವು ತನಿಖೆಗೆ ಇಳಿಯಿತು.

    ಮೃತಳ ತಂದೆಯ ಅನುಮಾನದಂತೆ ದಾಬ್ರಿ ಪೊಲೀಸ್ ಠಾಣೆಯ ತಂಡವು ದ್ವಾರಕಾದ ರಾಜಪುರಿ ಪ್ರದೇಶದಲ್ಲಿ ಲಿನ್‌- ಇನ್-‌ ಪಾರ್ಟ್ನರ್‌ ಜೊತೆ ವಾಸವಾಗಿದ್ದ ಮನೆಯೊಂದಕ್ಕೆ ತನಿಖೆಗೆ ತೆರಳಿತ್ತು. ಈ ವೇಳೆ ಮಹಿಳೆಯ ಶವವನ್ನು ಅಲ್ಮೇರಾದಲ್ಲಿ ತುಂಬಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

    ಆಕೆಯ ಲಿವ್-ಇನ್- ಪಾರ್ಟ್ನರ್‌ (Live In Partner) ಆಕೆಯನ್ನು ಕೊಂದಿದ್ದಾನೆ ಎಂದು ತಂದೆ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಸೆಕ್ಸ್‌ಗೆ ನಿರಾಕರಿಸಿದ ಲಿವ್-ಇನ್-ಪಾರ್ಟ್ನರ್‌ನ ಕುತ್ತಿಗೆಗೆ ಕತ್ತರಿಯಿಂದ ಇರಿದ!

    ಸೆಕ್ಸ್‌ಗೆ ನಿರಾಕರಿಸಿದ ಲಿವ್-ಇನ್-ಪಾರ್ಟ್ನರ್‌ನ ಕುತ್ತಿಗೆಗೆ ಕತ್ತರಿಯಿಂದ ಇರಿದ!

    ಭೋಪಾಲ್: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 20 ವರ್ಷದ ಯುವಕನೊಬ್ಬನನ್ನು ಇಂದೋರ್ (Indore) ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಪ್ರವೀಣ್ ಸಿಂಗ್ ಧಾಕಡ್ (24) ಎಂದು ಗುರುತಿಸಲಾಗಿದೆ. ಮೂಲತಃ ಗುಣಾ ಜಿಲ್ಲೆಯ ನಿವಾಸಿಯಾಗಿರುವ ಈತ ಲಿವ್- ಇನ್- ಪಾರ್ಟ್ನರ್‌ ನ ಕುತ್ತಿಗೆಗೆ ಕತ್ತರಿಯಿಂದ ಇರಿದು ಕೊಲೆ ಮಾಡಿದ್ದಾನೆ. ಸಂತ್ರಸ್ತೆ ಮತ್ತು ಆರೋಪಿ ಇನ್‍ಸ್ಟಾಗ್ರಾಮ್‍ನಲ್ಲಿ (Instagram) ಸ್ನೇಹಿತರಾಗಿ ಕಳೆದ ಕೆಲವು ದಿನಗಳಿಂದ ನಗರದ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ನಡೆದಿದ್ದೇನು..?: ಡಿಸೆಂಬರ್ 7 ರಂದು ರಾವ್ಜಿ ಬಜಾರ್ ಪ್ರದೇಶದಲ್ಲಿ ದಂಪತಿ ಬಾಡಿಗೆ ಮನೆಯಲ್ಲಿ ಮಹಿಳೆಯನ್ನು ಕೊಲ್ಲಲಾಯಿತು. ಎರಡು ದಿನಗಳ ನಂತರ ಡಿಸೆಂಬರ್ 9 ರಂದು ಪೊಲೀಸರು ಆಕೆಯ ದೇಹವನ್ನು ವಶಪಡಿಸಿಕೊಂಡರು ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಭಿನಯ್ ವಿಶ್ವಕರ್ಮ ಸುದ್ದಿಗಾರರಿಗೆ ತಿಳಿಸಿದರು. ಇದನ್ನೂ ಓದಿ: ರೈಲಿಗೆ ಸಿಕ್ಕಿ 92 ಕುರಿಗಳ ಮಾರಣ ಹೋಮ – ಕುರಿಗಾಹಿ ಮಹಿಳೆಗೆ ಗಾಯ

    ಆರೋಪಿ ಪ್ರವೀಣ್, ಸಂತ್ರಸ್ತೆ ತನ್ನೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ನಿರಾಕರಿಸಿದಾಗ ಕೋಪಗೊಂಡು ಅವಳ ಕುತ್ತಿಗೆಗೆ ಕತ್ತರಿಯಿಂದ ಇರಿದಿದ್ದಾನೆ. ಪರಿಣಾಮ ಮಹಿಳೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಳಿಕ ಆರೋಪಿಗಳು ಗಾಬರಿಗೊಂಡು ಮನೆಗೆ ಹೊರಗಿನಿಂದ ಬೀಗ ಹಾಕಿ ಆಕೆಯ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ವಿಶ್ವಕರ್ಮ ತಿಳಿಸಿದ್ದಾರೆ.

  • ಮದುವೆಯಾಗಲು ನಿರಾಕರಿಸಿದ್ದಕ್ಕೆ ರೇಪ್‌ ಕೇಸ್‌; ಲಿವ್‌-ಇನ್‌ ಪಾರ್ಟ್ನರ್‌ ಹತ್ಯೆ

    ಮದುವೆಯಾಗಲು ನಿರಾಕರಿಸಿದ್ದಕ್ಕೆ ರೇಪ್‌ ಕೇಸ್‌; ಲಿವ್‌-ಇನ್‌ ಪಾರ್ಟ್ನರ್‌ ಹತ್ಯೆ

    ಮುಂಬೈ: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ 28 ವಯಸ್ಸಿನ ಮಹಿಳೆಯನ್ನು ಆಕೆಯ ಲಿವ್-ಇನ್ ಪಾರ್ಟ್ನರ್‌ ಕೊಲೆ ಮಾಡಿರುವ ಘಟನೆ ನಡೆದಿದೆ. ಹತ್ಯೆಗೈದು ನಂತರ ಮೃತದೇಹವನ್ನು ತನ್ನ ಪತ್ನಿಯ ನೆರವಿನಿಂದ ಗುಜರಾತ್‌ನ ವಲ್ಸಾದ್‌ ತೊರೆಗೆ ಎಸೆದಿದ್ದಾನೆ.

    ಕೊಲೆಯಾದ ಮಹಿಳೆ ನೈನಾ ಮಹತ್‌ ಎಂದು ಪೊಲೀಸರು ಗುರುತಿಸಿದ್ದಾರೆ. ಈಕೆ ಮೇಕಪ್ ಆರ್ಟಿಸ್ಟ್‌ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರು. ಆಕೆ ಆರೋಪಿ ಮನೋಹರ್ ಶುಕ್ಲಾ ಜೊತೆ ಐದು ವರ್ಷಗಳಿಂದ ಸಂಬಂಧ ಹೊಂದಿದ್ದಳು. ಶುಕ್ಲಾ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ. ಇದನ್ನೂ ಓದಿ: ವಿವಾಹಿತ ಸೇನಾಧಿಕಾರಿ ಜೊತೆ ನೇಪಾಳಿ ಮಹಿಳೆ ಸಂಬಂಧ – ಮದುವೆಯಾಗು ಎಂದಿದ್ದಕ್ಕೆ ಕೊಲೆಯಾದ್ಳು

    ನೈನಾ ಮತ್ತು ಶುಕ್ಲಾ 5 ವರ್ಷಗಳಿಂದ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು. ನೈನಾ ತನ್ನನ್ನು ಮದುವೆಯಾಗುವಂತೆ ಶುಕ್ಲಾಗೆ ಒತ್ತಾಯಿಸುತ್ತಿದ್ದಳು. ಅದಕ್ಕೆ ಶುಕ್ಲಾ ನಿರಾಕರಿಸಿದ್ದ. ಇದರಿಂದ ಬೇಸತ್ತು ನೈನಾ ತನ್ನ ಮೇಲೆ ಶುಕ್ಲಾ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪ್ರಕರಣವನ್ನು ಹಿಂಪಡೆಯುವಂತೆ ಶುಕ್ಲಾ ಕೇಳಿಕೊಂಡಿದ್ದ. ಆದಕ್ಕೆ ನಿರಾಕರಿಸಿದಾಗ ಆಕೆಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ನೈನಾಳನ್ನ ಕೊಲೆ ಮಾಡಿದ ನಂತರ ಶುಕ್ಲಾ ಶವವನ್ನು ವಲ್ಸಾದ್ ತೊರೆಯಲ್ಲಿ ಎಸೆಯುವ ಮೊದಲು ಸೂಟ್‌ಕೇಸ್‌ನಲ್ಲಿ ತುಂಬಲು ತನ್ನ ಹೆಂಡತಿಯ ಸಹಾಯ ಪಡೆದಿದ್ದಾನೆ. ಈ ಘಟನೆ ಆಗಸ್ಟ್ 9 ರಲ್ಲಿ ನಡೆದಿತ್ತು. ನೈನಾ ಕುಟುಂಬಸ್ಥರು ಆಗಸ್ಟ್ 12 ರಂದು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ನೈಗಾಂವ್ ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಮಣಿಪುರದಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿ – ಮೂವರು ಆದಿವಾಸಿಗಳ ಹತ್ಯೆ

    ಆಕೆಯ ಸಹೋದರಿ ಜಯಾ, ಆಗಸ್ಟ್ 12 ರಂದು ನೈನಾಳ ಫೋನ್ ಸ್ವಿಚ್ ಆಫ್ ಆಗಿದೆ. ಸಂಪರ್ಕ ಸಾಧ್ಯವಾಗಿಲ್ಲ ಎಂದು ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದ್ದಳು. ಆರೋಪಿ ಶುಕ್ಲಾ ಮತ್ತು ಆತನ ಪತ್ನಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಿವ್-ಇನ್- ಪಾರ್ಟ್ನರ್ ವಿಧವೆಯ ಹಣೆ, ಎದೆಗೆ ಗುಂಡಿಟ್ಟು ಕೊಂದು ಶರಣಾದ!

    ಲಿವ್-ಇನ್- ಪಾರ್ಟ್ನರ್ ವಿಧವೆಯ ಹಣೆ, ಎದೆಗೆ ಗುಂಡಿಟ್ಟು ಕೊಂದು ಶರಣಾದ!

    ಲಕ್ನೊ: ಯುವಕನೊಬ್ಬ ಲಿವ್- ಇನ್- ಪಾರ್ಟ್ನರ್ ಲ್ಲಿದ್ದ (Live-In-Partner) ವಿಧವೆಯ ಹಣೆ ಹಾಗೂ ಎದೆಗೆ ಗುಂಡಿಟ್ಟು ಬರ್ಬರವಾಗಿ ಕೊಲೆ ಮಾಡಿದ ಘಟನೆ ಉತ್ತರಪ್ರದೇಶಲ್ಲಿ ನಡೆದಿದೆ.

    ಆರೋಪಿ ಯುವಕನನ್ನು ರಿಷಭ್ ಸಿಂಗ್ ಬಹದೂರಿಯಾ ಹಾಗೂ ಮೃತಳನ್ನು ರಿಯಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಡ್ಯಾಂನಲ್ಲಿ ತುಂಬಿ ಹಿಡಿದುಟ್ಟುಕೊಳ್ಳಲು ಆಗದೇ ಇದ್ದಾಗ ತಮಿಳುನಾಡಿಗೆ ನೀರು ಬಿಟ್ಟಿದ್ವಿ: ಹೆಚ್‍ಡಿಕೆ

    ಈ ಜೋಡಿ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಯಾರಡೈಸ್ ಕ್ರಿಸ್ಟಲ್ ಅಪಾರ್ಟ್‍ಮೆಂಟ್‍ನಲ್ಲಿ ಬಾಡಿಗೆ ಫ್ಲ್ಯಾಟ್‍ನಲ್ಲಿ ವಾಸವಾಗಿದ್ದರು. ಆದರೆ ಗುರುವಾರ ಕ್ಲುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ರಿಯಾಳನ್ನು ರಿಷಭ್ ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಂತರ ಪೊಲೀಸರಿಗೆ ಶರಣಾಗಿದ್ದಾನೆ.

    ಕೂಡಲೇ ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆಗೆ ಬಳಸಿದ್ದ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ. ಇತ್ತ ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ದೆಹಲಿಯಿಂದ ಪುಣೆಗೆ ಹೊರಡಬೇಕಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ

    ಆಗಸ್ಟ್ 17ರಂದು ರಾತ್ರಿ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಗೆ ಕರೆಯೊಂದು ಬಂದಿದೆ. ಕರೆ ಮಾಡಿದ ವ್ಯಕ್ತಿ ಅಪಾರ್ಟ್‍ಮೆಂಟ್‍ನಲ್ಲಿ ಲಿವ್ ಇನ್ ಪಾರ್ಟ್ನರ್ ಕೊಲೆಯಾಗಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಡಿಸಿಪಿ ವಿನೀತ್ ಜೈಸ್ವಾಲ್ ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದ್ವೆಯಾಗಿ ಮಗುವಿದ್ರೂ ಲಿವ್ ಇನ್ ರಿಲೇಷನ್‍ಶಿಪ್ – ವೈದ್ಯೆಯನ್ನ ಕೊಲೆ ಮಾಡಿದ್ದ ಪಾರ್ಟ್ನರ್ ಅರೆಸ್ಟ್

    ಮದ್ವೆಯಾಗಿ ಮಗುವಿದ್ರೂ ಲಿವ್ ಇನ್ ರಿಲೇಷನ್‍ಶಿಪ್ – ವೈದ್ಯೆಯನ್ನ ಕೊಲೆ ಮಾಡಿದ್ದ ಪಾರ್ಟ್ನರ್ ಅರೆಸ್ಟ್

    – ವೈದ್ಯೆಯ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದ

    ತಿರುವನಂತಪುರಂ: ಲಿವ್ ಇನ್ ಪಾರ್ಟ್ನರ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕ್ಲಿನಿಕ್ ಲ್ಯಾಬ್‍ಗೆ ಕರ್ಕೊಂಡು ಹೋದ – ಡೆಂಟಿಸ್ಟ್‌ಗೆ ಚಾಕು ಇರಿದ ಲಿವ್ ಇನ್ ಪಾರ್ಟ್ನರ್

    ತ್ರಿಶೂರ್ ಮೂಲದ ದಂತವೈದ್ಯ ಡಾ.ಸೋನಾರನ್ನು ಆರೋಪಿ ಮಹೇಶ್ ಕೊಲೆ ಮಾಡಿದ್ದನು. ಸೋನಾ ಹೊಟ್ಟೆಗೆ ಗಂಭೀರವಾಗಿ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದರು. ಕೊಲೆ ಮಾಡಿದ ನಂತರ ಆರೋಪಿ ಎರಡು ದಿನಗಳ ಕಾಲ ಪರಾರಿಯಾಗಿದ್ದನು. ಆದರೆ ಕೇರಳ ಪೊಲೀಸರು ಮಂಗಳವಾರ ಆರೋಪಿಯನ್ನು ಬಂಧಿಸಿದ್ದಾರೆ.

    “ನಾವು ಮಂಗಳವಾರ ಆರೋಪಿ ಮಹೇಶ್‍ನನ್ನು ಬಂಧಿಸಿದ್ದೇವೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ಸದ್ಯಕ್ಕೆ ಪ್ರಾಥಮಿಕ ವಿಚಾರಣೆ ಮಾಡುತ್ತಿದ್ದೇವೆ. ನಂತರ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಮಹೇಶ್ ಮೃತ ಡಾ.ಸೋನಾ ಜೊತೆ ಎರಡು ವರ್ಷಗಳ ಕಾಲ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದನು. ಆರೋಪಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದನು. ಹೀಗಾಗಿ ಸೋನಾರ ದಂತ ಚಿಕಿತ್ಸಾಲಯದಲ್ಲಿ ನಿರ್ಮಾಣ ಕೆಲಸ ಮಾಡಿದ್ದನು. ಇದಕ್ಕಾಗಿ ಸುಮಾರು 7 ಲಕ್ಷ ಹಣ ಖರ್ಚಾಗಿತ್ತು. ಆದರೆ ಮಹೇಶ್ ಸೋನಾರಿಂದ 22 ಲಕ್ಷ ರೂಪಾಯಿಯನ್ನು ಪಡೆದುಕೊಂಡಿದ್ದಾನೆ. ಹೀಗಾಗಿ ಹಣಕಾಸಿನ ವಿಷಯಗಳಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಅಲ್ಲದೇ ಸೋನಾ ತನ್ನ ಕ್ಲಿನಿಕ್‍ನಿಂದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ:
    ಡಾ.ಸೋನಾ (30) ಮೃತ ಡೆಂಟಿಸ್ಟ್. ಸೆಪ್ಟೆಂಬರ್ 28 ರಂದು ಆರೋಪಿ ಮಹೇಶ್ (37) ಚಾಕುವಿನಿಂದ ಇರಿದಿದ್ದನು. ತೀವ್ರ ಗಾಯಗೊಂಡಿದ್ದ ಸೋನಾರನ್ನು ತ್ರಿಶೂರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದರು. ಚಾಕುವಿನಿಂದ ಇರಿದ ನಂತರ ಆರೋಪಿ ಮಹೇಶ್ ಸ್ಥಳದಿಂದ ಪರಾರಿಯಾಗಿದ್ದನು.

    ಮೃತ ಸೋನಾ ಕಳೆದ ಒಂದೂವರೆ ವರ್ಷಗಳಿಂದ ತ್ರಿಶೂರ್‌ನ ಒಲ್ಲೂರು ಬಳಿಯ ಕುಟ್ಟ ನೆಲ್ಲೂರ್ ನಲ್ಲಿ ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಮಹೇಶ್ ಜೊತೆ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದರು. ಇತ್ತೀಚೆಗೆ ಇವರ ಮಧ್ಯೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿತ್ತು. ಈ ವೇಳೆ ಮಹೇಶ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಸೋನಾ ಒಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹೇಶ್ ನನ್ನ ಆದಾಯವನ್ನು ಕ್ಲಿನಿಕ್‍ನಿಂದ ಅಕ್ರಮವಾಗಿ ತೆಗೆದುಕೊಂಡಿದ್ದಾನೆ ಎಂದು ಸೋನಾ ದೂರಿನಲ್ಲಿ ಆರೋಪಿಸಿದ್ದರು.

    ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಸೆಪ್ಟೆಂಬರ್ 28 ರಂದು ಮೃತ ಸೋನಾ ಮತ್ತು ಮಹೇಶ್ ಇಬ್ಬರು ಕ್ಲಿನಿಕ್‍ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಸೋನಾ ತಂದೆ ಜೋಸ್ ಕೂಡ ಇದ್ದರು. ಆದರೆ ಮಾತುಕತೆಯ ಸಮಯದಲ್ಲೇ ಆರೋಪಿ ಮಹೇಶ್ ಸೋನಾರನ್ನು ಕ್ಲಿನಿಕ್‍ನ ಲ್ಯಾಬ್‍ಗೆ ಒತ್ತಾಯಿಸಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಏಕಾಏಕಿ ಚಾಕುವಿನಿಂದ ಇರಿದು, ಪರಾರಿಯಾಗಿದ್ದನು.

    ಸೋನಾಗೆ ಈಗಾಗಲೇ ಮದುವೆಯಾಗಿದ್ದು, ತನ್ನ ಪತಿಯಿಂದ ಬೇರೆಯಾಗಿದ್ದರು. ಒಂದು ಮಗು ಕೂಡ ಇತ್ತು. ಆರೋಪಿ ಮಹೇಶ್ ಇನ್ನೂ ಮದುವೆಯಾಗಿರಲಿಲ್ಲ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

  • ಕ್ಲಿನಿಕ್ ಲ್ಯಾಬ್‍ಗೆ ಕರ್ಕೊಂಡು ಹೋದ – ಡೆಂಟಿಸ್ಟ್‌ಗೆ ಚಾಕು ಇರಿದ ಲಿವ್ ಇನ್ ಪಾರ್ಟ್ನರ್

    ಕ್ಲಿನಿಕ್ ಲ್ಯಾಬ್‍ಗೆ ಕರ್ಕೊಂಡು ಹೋದ – ಡೆಂಟಿಸ್ಟ್‌ಗೆ ಚಾಕು ಇರಿದ ಲಿವ್ ಇನ್ ಪಾರ್ಟ್ನರ್

    – 2 ವರ್ಷಗಳಿಂದ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ರು

    ತಿರುವನಂತಪುರಂ: ಲಿವ್ ಇನ್ ಪಾರ್ಟ್ನರ್ ನೊಬ್ಬ ದಂತವೈದ್ಯೆಗೆ ಚಾಕುವಿನಿಂದ ಇರಿದಿದ್ದು, ಪರಿಣಾಮ ಚಿಕಿತ್ಸೆ ಫಲಿಕಾರಿಯಾಗದೆ ಡೆಂಟಿಸ್ಟ್ ಮೃತಪಟ್ಟಿರುವ ಘಟನೆ ಕೇಳರದ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದಿದೆ.

    ಡಾ.ಸೋನಾ (30) ಮೃತ ಡೆಂಟಿಸ್ಟ್. ಸೆಪ್ಟೆಂಬರ್ 28 ರಂದು ಆರೋಪಿ ಮಹೇಶ್ (37) ಚಾಕುವಿನಿಂದ ಇರಿದಿದ್ದನು. ತೀವ್ರ ಗಾಯಗೊಂಡಿದ್ದ ಸೋನಾರನ್ನು ತ್ರಿಶೂರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ನಿಧನರಾಗಿದ್ದಾರೆ. ಚಾಕುವಿನಿಂದ ಇರಿದ ನಂತರ ಆರೋಪಿ ಮಹೇಶ್ ಸ್ಥಳದಿಂದ ಪರಾರಿಯಾಗಿದ್ದಾನೆ.

    ಮೃತ ಸೋನಾ ಕಳೆದ ಒಂದೂವರೆ ವರ್ಷಗಳಿಂದ ತ್ರಿಶೂರ್‌ನ ಒಲ್ಲೂರು ಬಳಿಯ ಕುಟ್ಟ ನೆಲ್ಲೂರ್ ನಲ್ಲಿ ಡೆಂಟಲ್ ಕ್ಲಿನಿಕ್ ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಮಹೇಶ್ ಜೊತೆ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದರು. ಆರೋಪಿ ಮಹೇಶ್ ಕಟ್ಟಣ ನಿರ್ಮಾಣ ಕೆಲಸ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಇತ್ತೀಚೆಗೆ ಇವರ ಮಧ್ಯೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿತ್ತು. ಈ ವೇಳೆ ಮಹೇಶ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಸೋನಾ ಒಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಹೇಶ್ ನನ್ನ ಆದಾಯವನ್ನು ಕ್ಲಿನಿಕ್‍ನಿಂದ ಅಕ್ರಮವಾಗಿ ತೆಗೆದುಕೊಂಡಿದ್ದಾನೆ ಎಂದು ಸೋನಾ ದೂರಿನಲ್ಲಿ ಆರೋಪಿಸಿದ್ದರು ಎಂದು ತಿಳಿದುಬಂದಿದೆ.

    ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಸೆಪ್ಟೆಂಬರ್ 28 ರಂದು ಮೃತ ಸೋನಾ ಮತ್ತು ಮಹೇಶ್ ಇಬ್ಬರು ಕ್ಲಿನಿಕ್‍ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಸೋನಾ ತಂದೆ ಜೋಸ್ ಕೂಡ ಇದ್ದರು. ಆದರೆ ಮಾತುಕತೆಯ ಸಮಯದಲ್ಲೇ ಆರೋಪಿ ಮಹೇಶ್ ಸೋನಾರನ್ನು ಕ್ಲಿನಿಕ್‍ನ ಲ್ಯಾಬ್‍ಗೆ ಒತ್ತಾಯಿಸಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಹಲ್ಲೆಯಿಂದ ಸೋನಾರ ಹೊಟ್ಟೆಗೆ ತೀವ್ರ ಗಾಯಗಳಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋನಾ ಭಾನುವಾರ ಸಾವನ್ನಪ್ಪಿದ್ದಾರೆ. ಆರೋಪಿ ಮಹೇಶ್ ಹಲ್ಲೆ ಮಾಡಿದ ತಾನು ತಪ್ಪೊಪ್ಪಿಕೊಳ್ಳಲು ಪೊಲೀಸ್ ಠಾಣೆಗೆ ಹೋಗುವುದಾಗಿ ಹತ್ತಿರದ ಅಂಗಡಿ ಮಾಲೀಕರಿಗೆ ತಿಳಿಸಿ ನಂತರ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೋನಾಗೆ ಈಗಾಗಲೇ ಮದುವೆಯಾಗಿದ್ದು, ತನ್ನ ಪತಿಯಿಂದ ಬೇರೆಯಾಗಿದ್ದರು. ಒಂದು ಮಗು ಕೂಡ ಇತ್ತು. ಆರೋಪಿ ಮಹೇಶ್ ಇನ್ನೂ ಮದುವೆಯಾಗಿರಲಿಲ್ಲ. ಸದ್ಯಕ್ಕೆ ಪೊಲೀಸರು ಸೋನಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೇರೆ ಆಸ್ಪತ್ರೆಗೆ ರವಾನಿಸಿದ್ದು, ಆರೋಪಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

  • ಪ್ಲೀಸ್ ನನ್ನನ್ನು ಗಲ್ಲಿಗೇರಿಸಿ – ಲಿವ್ ಇನ್ ಪಾರ್ಟ್ನರ್ ಗರ್ಭಿಣಿಯನ್ನ ಕೊಂದು ಪೊಲೀಸರಿಗೆ ಶರಣು

    ಪ್ಲೀಸ್ ನನ್ನನ್ನು ಗಲ್ಲಿಗೇರಿಸಿ – ಲಿವ್ ಇನ್ ಪಾರ್ಟ್ನರ್ ಗರ್ಭಿಣಿಯನ್ನ ಕೊಂದು ಪೊಲೀಸರಿಗೆ ಶರಣು

    – ಪೊಲೀಸ್ ಠಾಣೆಗೆ ಬಂದು ಪೆನ್, ಪೇಪರ್ ಕೇಳಿದ ಯುವಕ

    ಮುಂಬೈ: 27 ವರ್ಷದ ಯುವಕನೊಬ್ಬ ತನ್ನ ಲಿವ್-ಇನ್ ಪಾರ್ಟ್ನರ್ ಗರ್ಭಿಣಿಯನ್ನು ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ರಂಜನ್‍ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊರೆಗಾಂವ್ ಗ್ರಾಮದಲ್ಲಿ ನಡೆದಿದೆ. ಮೃತ ಗರ್ಭಿಣಿಯನ್ನ ಸೋನಮಣಿ ಸೊರೆನ್ ಎಂದು ಗುರುತಿಸಲಾಗಿದೆ. ಆರೋಪಿ ಕಿರಣ್ ಫಂಡೆ ಲಿವ್ ಇನ್ ಸಂಗಾತಿಯನ್ನು ಕೊಂದು ಪೊಲೀಸರಿಗೆ ಶರಣಾಗಿದ್ದಾನೆ.

    ಏನಿದು ಪ್ರಕರಣ?
    ಮೃತ ಸೋನಮಣಿ ಮತ್ತು ಕಿರಣ್ ಕೆಲವು ತಿಂಗಳಿಂದ ಲಿವ್-ಇನ್ ರಿಲೀಷನ್‍ಶಿಪ್‍ನಲ್ಲಿದ್ದಾರೆ. ಇಬ್ಬರೂ ಬೇರೆ ಬೇರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದು, ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು. ಶನಿವಾರ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕೋಪಕೊಂಡ ಆರೋಪಿ ಗರ್ಭಿಣಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೊರೆನ್ ಗರ್ಭಿಣಿಯಾದ ನಂತರ ಇಬ್ಬರ ನಡುವಿನ ಜಗಳಕ್ಕೆ ಕಾರಣವಾಗಿದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಸೊರೆನ್‍ನನ್ನು ಕೊಲೆ ಮಾಡಿದ ನಂತರ ಆರೋಪಿ ಭಯಗೊಂಡು ರಂಜನ್‍ಗಾಂವ್ ಪೊಲೀಸ್ ಠಾಣೆಗೆ ಬಂದಿದ್ದಾನೆ. ನಂತರ ಪೊಲೀಸರ ಬಳಿ ತನಗೆ ಪೆನ್ ಮತ್ತು ಪೇಪರ್ ನೀಡುವಂತೆ ಕೇಳಿಕೊಂಡಿದ್ದಾನೆ. ಅದರಲ್ಲಿ “ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ ಮತ್ತು ಕೊಲೆ ಮಾಡಿದ್ದೇನೆ. ದಯವಿಟ್ಟು ನನ್ನನ್ನು ಗಲ್ಲಿಗೇರಿಸಿ” ಎಂದು ಬರೆದಿದ್ದಾನೆ.

    ಪೊಲೀಸ್ ಅಧಿಕಾರಿಗೆ ಆ ಪೇಪರ್ ನೀಡಿದ್ದಾನೆ. ಜೊತೆಗೆ ತನ್ನ ಮನೆ ವಿಳಾಸ ಮತ್ತು ಕೀಲಿಯನ್ನು ಪೊಲೀಸರಿಗೆ ನೀಡಿದ್ದಾನೆ. ತಕ್ಷಣ ಪೊಲೀಸರ ತಂಡ ಆತ ನೀಡಿದ್ದ ವಿಳಾಸಕ್ಕೆ ಹೋಗಿ ನೋಡಿದ್ದಾರೆ. ಅಲ್ಲಿ ರೂಮಿನಲ್ಲಿ ಸೊರೆನ್ ಶವವಾಗಿ ಪತ್ತೆಯಾಗಿದ್ದಳು.

    ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯಕ್ಕೆ ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.