Tag: ಲಿವಿಂಗ್ ಟುಗೇದರ್

  • ಕುಡಿಯಲು ಹಣ ನೀಡದಕ್ಕೆ ಗೆಳೆಯ ಆತ್ಮಹತ್ಯೆ – ಮೃತಪಟ್ಟಿರೋದು ಕಂಡು ತಾನೂ ನೇಣಿಗೆ ಶರಣಾದ ಲಿವಿನ್ ಗೆಳತಿ

    ಕುಡಿಯಲು ಹಣ ನೀಡದಕ್ಕೆ ಗೆಳೆಯ ಆತ್ಮಹತ್ಯೆ – ಮೃತಪಟ್ಟಿರೋದು ಕಂಡು ತಾನೂ ನೇಣಿಗೆ ಶರಣಾದ ಲಿವಿನ್ ಗೆಳತಿ

    ಆನೇಕಲ್: ಕುಡಿಯಲು ಹಣ ನೀಡದಕ್ಕೆ ಗೆಳೆಯ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡು ಲಿವಿನ್ ಗೆಳತಿ ತಾನೂ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ (Anekal) ತಾಲ್ಲೂಕಿನ ಕಲ್ಲುಬಾಳುವಿನಲ್ಲಿ ನಡೆದಿದೆ.

    ಮೃತರನ್ನು ಒಡಿಶಾ (Odisha) ಮೂಲದ ಸೀಮಾ ನಾಯಕ್(25) ಹಾಗೂ ರಾಕೇಶ್ ಪಾತ್ರ(23) ಎನ್ನಲಾಗಿದ್ದು, ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇಬ್ಬರು ಲಿವಿಂಗ್ ಟುಗೇದರ್‌ನಲ್ಲಿದ್ದರು ಎಂದು ತಿಳಿದುಬಂದಿದೆ.ಇದನ್ನೂ ಓದಿ: ಡಿಕೆಶಿಯನ್ನು ಭೇಟಿಯಾದ ಕಿರಣ್ ಮಜುಂದಾರ್ ಶಾ – ಉತ್ತಮ ಚರ್ಚೆಯಾಗಿದೆ ಎಂದ ಡಿಸಿಎಂ

    ಎರಡು ದಿನಗಳಿಂದ ಮನೆ ಬಾಗಿಲು ತೆರೆಯದ ಹಿನ್ನೆಲೆ ಸ್ಥಳೀಯರು ಅನುಮಾನಗೊಂಡು ಕಿಟಕಿ, ಗಾಜು ಒಡೆದು ಪರಿಶೀಲನೆ ಮಾಡಿದಾಗ ಯುವ ಜೋಡಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ವೆಂಕಟೇಶ್ ಪ್ರಸನ್ನ, ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್, ಜಿಗಣಿ ಠಾಣೆ ಇನ್ಸ್‌ಪೆಕ್ಟರ್‌ ಮಂಜುನಾಥ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

    ಪೊಲೀಸರ ಮಾಹಿತಿ ಪ್ರಕಾರ, ಮೃತ ರಾಕೇಶ್ ಹಣಕ್ಕಾಗಿ ಪದೇ ಪದೇ ಕುಡಿದು ಜಗಳ ಮಾಡುತ್ತಿದ್ದ. ಭಾನುವಾರ ಸಹ ಹಣಕ್ಕಾಗಿ ಸೀಮಾ ಜೊತೆ ಜಗಳ ಮಾಡಿದ್ದ. ಹಣ ನೀಡುವುದಿಲ್ಲ ಎಂದು ಸೀಮಾ ಮಲಗಿದ್ದಳು. ಬೆಳಿಗ್ಗೆ ಎದ್ದು ನೋಡಿದಾಗ ರಾಕೇಶ್ ನೇಣು ಬಿಗಿದುಕೊಂಡಿದ್ದ. ಹಗ್ಗ ತುಂಡರಿಸಿ ಬದುಕಿಸಲು ಪ್ರಯತ್ನ ಮಾಡಿದಾಗ ಮೃತಪಟ್ಟಿರುವುದು ಖಾತ್ರಿಯಾಗಿದೆ. ಬಳಿಕ ಸೀಮಾ ಕೂಡ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿಸಿದ್ದಾರೆ

    ಸದ್ಯ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: Maharashtra | ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ – ನಾಲ್ವರು ಸಾವು, 10 ಮಂದಿಗೆ ಗಾಯ

  • ಸಬ್‍ಇನ್‍ಸ್ಪೆಕ್ಟರ್ ಪತ್ನಿ ಅನುಮಾನಾಸ್ಪದ ಸಾವು – ಪತಿಯ ವಿರುದ್ಧ ಕೊಲೆ ಆರೋಪ

    ಸಬ್‍ಇನ್‍ಸ್ಪೆಕ್ಟರ್ ಪತ್ನಿ ಅನುಮಾನಾಸ್ಪದ ಸಾವು – ಪತಿಯ ವಿರುದ್ಧ ಕೊಲೆ ಆರೋಪ

    ಬೆಂಗಳೂರು: ನಗರದ ಸಬ್‍ಇನ್‍ಸ್ಪೆಕ್ಟರ್  (Sub Inspector) ಒಬ್ಬರ ಮೇಲೆ ಪತ್ನಿಗೆ (Wife) ಕಿರುಕುಳ ನೀಡಿ ಕೊಲೆಗೈದ ಆರೋಪ ಕೇಳಿ ಬಂದಿದೆ.

    ಮೃತ ಮಹಿಳೆಯನ್ನು ಶಿಲ್ಪಾ (33) ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ರಮೇಶ್ ಅವರ ಮೇಲೆ ಶಿಲ್ಪಾ ಪೊಷಕರು ಕೊಲೆ ಆರೋಪ ಹೊರಿಸಿದ್ದಾರೆ. ಅಲ್ಲದೆ ನಿರಂತರ ಪತ್ನಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಸಹ ಕೇಳಿ ಬಂದಿದೆ. ಇದನ್ನೂ ಓದಿ: ಎಲ್ಲರಿಗೂ ಎಐ, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಅನ್ನೋ ಆಲೋಚನೆ ಬೇಡ: ಹೆಚ್‌.ಆರ್.ರಂಗನಾಥ್‌

    ರಮೇಶ್ ಹಾಗೂ ಶಿಲ್ಪಾ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ಐದಾರು ವರ್ಷಗಳಿಂದ ಲಿವಿಂಗ್ ಟುಗೇದರ್ (Living Together) ರಿಲೇಶನ್‍ಶಿಪ್‍ನಲ್ಲಿದ್ದರು. ಆದರೆ ಮದುವೆಯಾಗಲು (Marriage) ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಬಳಿಕ ಹಠಬಿಡದೆ ಪೊಲೀಸರ ಸಮ್ಮುಖದಲ್ಲಿ ಶಿಲ್ಪಾ, ರಮೇಶ್‍ನನ್ನು ಮದುವೆಗೆ ಒಪ್ಪಿಸಿದ್ದಳು.

    ಮದುವೆ ಬಳಿಕ ಮನೆಯವರು ಒಪ್ಪುತ್ತಿಲ್ಲ ಎಂದು ಪತ್ನಿಗೆ ಪ್ರತ್ಯೇಕ ಮನೆ ಮಾಡಿಕೊಟ್ಟಿದ್ದ. ಆದರೆ ಜೀವನಕ್ಕೆ ಯಾವುದೇ ಅರ್ಥಿಕ ನೆರವು ನೀಡುತ್ತಿರಲಿಲ್ಲ. ಪದೇ ಪದೇ ಜಾತಿ ನಿಂದನೆ ಮಾಡಿ, ತನ್ನ ಅಕ್ಕನ ಮಗಳನ್ನು ಮದುವೆಯಾಗಲು ನೀನು ಅಡ್ಡಿಯಾಗಿದ್ದೀಯಾ ಮನೆಬಿಟ್ಟು ಹೋಗು ಎಂದು ಕಿರುಕುಳ ನೀಡುತ್ತಿದ್ದ ಎಂದು ಮಹಿಳೆಯ ಪೋಷಕರು ದೂರಿದ್ದಾರೆ.

    ಶುಕ್ರವಾರ ರಾತ್ರಿ ಕುಟುಂಬದವರ ಜೊತೆ ಫೋನಿನಲ್ಲಿ ಮಾತನಾಡಿದ್ದ ಶಿಲ್ಪಾ ಖರ್ಚಿಗೆ ಹಣ ಬೇಕು ಎಂದು ಹಾಕಿಸಿಕೊಂಡಿದ್ದಳು. ಆದರೆ ಇಂದು ಬೆಳಗ್ಗೆ ಮನೆಯ ಮಾಲೀಕರು ಬಾಗಿಲು ತೆರೆಯುತ್ತಿಲ್ಲ ಎಂದು ಕುಟುಂಬದವರಿಗೆ ತಿಳಿಸಿದ್ದಾರೆ. ಕುಟುಂಬದವರು ಬರುವ ಮುನ್ನವೇ ಶವವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಶಿಲ್ಪಾ ಕುಟುಂಬ ಆಗ್ರಹಿಸಿದೆ. ಇದನ್ನೂ ಓದಿ: ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ ಪತಿ

  • ಜೆಡಿಎಸ್‍ನಿಂದ ಅಮಾನತ್ತಾದ ಶಾಸಕರು ಮದುವೆಗಿಂತ ಮುಂಚೆಯೇ ಪ್ರಸ್ಥ ಮಾಡ್ಕೊಳ್ತಿದ್ದಾರೆ- ಮಾಜಿ ಶಾಸಕ ಸುರೇಶ್ ಗೌಡ

    ಜೆಡಿಎಸ್‍ನಿಂದ ಅಮಾನತ್ತಾದ ಶಾಸಕರು ಮದುವೆಗಿಂತ ಮುಂಚೆಯೇ ಪ್ರಸ್ಥ ಮಾಡ್ಕೊಳ್ತಿದ್ದಾರೆ- ಮಾಜಿ ಶಾಸಕ ಸುರೇಶ್ ಗೌಡ

    ಮಂಡ್ಯ: ಜೆಡಿಎಸ್‍ನಿಂದ ಅಮಾನತ್ತಾದ ಶಾಸಕರು ಒಂದು ರೀತಿಯ ಆಧುನಿಕ ಶಾಸಕರಾಗಿದ್ದಾರೆ. ಅವರೀಗ ಲಿವ್ ಇನ್ ಟುಗೇದರ್ ಮಾಡುತ್ತಿದ್ದಾರೆ. ಮದುವೆಗಿಂತ ಮುಂಚೆಯೇ ಅವರು ಪ್ರಸ್ಥ ಮಾಡಿಕೊಳ್ಳುತ್ತಾರೆ ಎಂದು ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶ್‍ಗೌಡ ವಾಗ್ದಾಳಿ ನಡೆಸಿದ್ದಾರೆ.

    ಜಮೀರ್ ಅಹಮದ್ ಜೊತೆಯಲ್ಲಿ ಚಲುವರಾಯಸ್ವಾಮಿ ನಾಗಮಂಗಲದಲ್ಲಿ ಬೈಕ್ ಜಾಥಾ ನಡೆಸಿದ್ರು. ಈ ವೇಳೆ ಕಾರ್ಯಕರ್ತರು ತಮ್ಮ ಕೈಯಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ಬೈಕ್ ಜಾಥಾದಲ್ಲಿ ಪಾಲ್ಗೊಂಡಿದ್ರು. ಈ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಶಾಸಕ ಸುರೇಶ್ ಗೌಡ, ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಸೇರದೇ ಇದ್ದರೂ ಹಣಕ್ಕಾಗಿ ಯಾವ ಆಟ ಬೇಕಾದ್ರೂ ಆಡುತ್ತಾರೆ ಎಂದು ಟೀಕಿಸಿದರು.

    ಶಿಖಂಡಿ ರಾಜಕಾರಣಿ: ಸಿದ್ದರಾಮಯ್ಯ ಅವರ ಕೈಯಲ್ಲಿ ಅಧಿಕಾರ ಇರುವವರೆಗೂ ಅವರು ಅಲ್ಲಿರುತ್ತಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ವೀಕ್ ಆದ ನಂತರ ಬೇರೆ ಪಕ್ಷ ನೋಡುತ್ತಾರೆ. ಇವರಿಗೆ ನಿಯತ್ತು ನಂಬಿಕೆ ಇಲ್ಲ. ಚಲುವರಾಯಸ್ವಾಮಿಗೆ ಚಾಲೆಂಜ್ ಮಾಡುತ್ತೇನೆ. ಎಚ್‍ಎಎಲ್ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನನ್ನ ಮೇಲಿನ ಆರೋಪ ಸಾಬೀತು ಪಡಿಸಿದ್ರೆ ರಾಜಕೀಯ ಬಿಟ್ಟು ಹೋಗ್ತೀನಿ. ಇಲ್ಲದಿದ್ದರೆ ಅವನು ಬಿಟ್ಟು ಹೋಗ್ತಾನೆ. ಸಿದ್ದರಾಮಯ್ಯ ಇದ್ದಾರೆ ಎಂದು ನನ್ನ ಮೇಲೆ ಇಲ್ಲ ಸಲ್ಲದ ಕೇಸ್ ಹಾಕಿಸಿದ್ದಾರೆ. ಅವನೊಬ್ಬ ಶಿಖಂಡಿ ರಾಜಕಾರಣಿ ಎಂದು ಆಕ್ರೋಶ ಹೊರಹಾಕಿದ್ರು.

    ಚಲುವರಾಯಸ್ವಾಮಿ ಯಾವಾಗಲೂ ಹಿಂದಿನಿಂದ ಯುದ್ಧ ಮಾಡ್ತಾನೆ. ಶಿಖಂಡಿ ಆಗಲಿ ಯಾರೇ ಆಗಲಿ ನಮ್ಮೆದುರು ಬಂದಾಗ ತೀರಿಸಬೇಕಾಗುತ್ತೆ. ರಾಜಕೀಯವಾಗಿ ಚಲುವರಾಯಸ್ವಾಮಿಯನ್ನು ತೀರಿಸುವವನೇ ನಾನು. ನನ್ನದು ಒಂದೇ ಗುರಿ, ಒಂದೇ ಶಪಥ ಚಲುವರಾಯಸ್ವಾಮಿ ಸೋಲುವವರೆಗೂ ನಾನು ವಿರಮಿಸುವುದಿಲ್ಲ. ಚಲುವರಾಯಸ್ವಾಮಿ ಒಬ್ಬ ದುಷ್ಠ ವ್ಯಕ್ತಿ. ವೈಯಕ್ತಿಕವಾಗಿ ರಾಜಕೀಯವಾಗಿ ನಾನು ಚಲುವರಾಯಸ್ವಾಮಿ ದ್ವೇಷಿ ಎಂದು ಸುರೇಶ್‍ಗೌಡ ಹೇಳಿದರು.