Tag: ಲಿರಿಕಲ್ ವೀಡಿಯೋ

  • ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ

    ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ

    ಧೈರ್ಯಂ ಸರ್ವತ್ರ ಸಾಧನಂ’..ಸ್ಯಾಂಡಲ್ ವುಡ್ ಸಿನಿ ಪ್ರೇಕ್ಷರನ್ನು ರಂಜಿಸಲು ಸಿದ್ದವಾಗಿರುವ ನೂತನ ಚಿತ್ರ. ಪವರ್ ಫುಲ್ ಟೈಟಲ್ ಮೂಲಕ ಸುದ್ದಿಯಲ್ಲಿರುವ ಸಿನಿಮಾ ತಂಡವೀಗ ಚಿತ್ರದ ಮೊಟ್ಟ ಮೊದಲ ಹಾಡು ಬಿಡುಗಡೆ ಮಾಡಿದೆ. ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನಿರ್ದೇಶನ ವಿಭಾಗದಲ್ಲಿ, ಡೈಲಾಗ್ ರೈಟರ್ ಆಗಿ, ತಾಂತ್ರಿಕ ವಿಭಾಗದಲ್ಲಿ ದುಡಿದು ಅನುಭವ ಇರುವ ಎ. ಆರ್. ಸಾಯಿರಾಮ್ ಚೊಚ್ಚಲ ನಿರ್ದೇಶನದಲ್ಲಿ ಅರಳಿದ ಸಿನಿಮಾ ಧೈರ್ಯಂ ಸರ್ವತ್ರ ಸಾಧನಂ.

    ‘ಹೆಂಡವೇ ನಮ್ಮ ಮನೆ ದ್ಯಾವರು’ ಎಂಬ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಹಳ್ಳಿ ಸೊಗಡಿರೋ ಈ ಹಾಡಿಗೆ ನಿರ್ದೇಶಕ ಎ.ಆರ್. ಸಾಯಿರಾಮ್ ಮತ್ತು ಹೃದಯ ಶಿವ ಸಾಹಿತ್ಯ ಬರೆದಿದ್ದು, ದೇವಾನಂದ್ ವರ ಪ್ರಸಾದ್ ಹಾಡಿಗೆ ದನಿಯಾಗಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಈ ಹಾಡಿಗಿದೆ. ಚಿತ್ರದಲ್ಲಿ ಹೊಸ ಪ್ರತಿಭೆ ವಿವನ್ ಕೆ.ಕೆ ನಾಯಕ ನಟನಾಗಿ ಅಭಿನಯಿಸಿದ್ದು, ಅನುಷಾ ರೈ ನಾಯಕಿಯಾಗಿ ನಟಿಸಿದ್ದಾರೆ. ಯಶ್ ಶೆಟ್ಟಿ, ಬಾಲ ರಾಜವಾಡಿ, ಪ್ರದೀಪ್ ಪೂಜಾರಿ, ರಾಮ್ ಪವನ್, ವರ್ಧನ್ ತೀರ್ಥಹಳ್ಳಿ, ಚಕ್ರವರ್ತಿ ಚಂದ್ರಚೂಡ್, ಹೊಂಗಿರಣ ಚಂದ್ರು ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

    ಚಿತ್ರೀಕರಣ ಕಂಪ್ಲೀಟ್ ಆಗಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಸೆನ್ಸಾರ್ ಗೆ ರೆಡಿಯಾಗಿರುವ ಚಿತ್ರತಂಡ ಹಾಡು ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯ ಆರಂಭಿಸಿದೆ. ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಸಿನಿಮಾ ಬಿಡುಗಡೆ ಮಾಡಲು  ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್

    ಎ. ಪಿ. ಪ್ರೊಡಕ್ಷನ್ಸ್ ಬ್ಯಾನರ್ ನಡಿ ಆನಂದ್ ಬಾಬು.ಜಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಐದು ಹಾಡು, ಐದು ಆಕ್ಷನ್ ಸೀನ್ ಗಳಿದ್ದು, ಜ್ಯೂಡ ಸ್ಯಾಂಡಿ ಸಂಗೀತ ನಿರ್ದೇಶನ, ಶ್ರೀಕಾಂತ್ ಸಂಕಲನ, ರವಿಕುಮಾರ್ ಸನ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕಿನ್ನಲ್ ರಾಜ್, ಅರಸು ಅಂತಾರೆ, ಹೃದಯ ಶಿವ, ಎ. ಆರ್.ಸಾಯಿರಾಮ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮನಮಿಡಿಯುವ ಮತ್ತೊಂದು ಹಾಡಿನ ಲಿರಿಕಲ್ ವೀಡಿಯೋ ರಿಲೀಸ್ ಮಾಡಿದ ‘ಕನ್ನೇರಿ’ ಚಿತ್ರತಂಡ

    ಮನಮಿಡಿಯುವ ಮತ್ತೊಂದು ಹಾಡಿನ ಲಿರಿಕಲ್ ವೀಡಿಯೋ ರಿಲೀಸ್ ಮಾಡಿದ ‘ಕನ್ನೇರಿ’ ಚಿತ್ರತಂಡ

    ನೆಲೆ ಇಲ್ಲದೇ ಊರೂರು ಸುತ್ತುವ, ನೆಲೆ ಇದ್ದರೂ ಉಳ್ಳವರ ದಬ್ಬಾಳಿಕೆಯಿಂದ ಬದುಕು ಕಂಡುಕೊಳ್ಳಲು ಸಾಧ್ಯವಾಗದೇ ಪಟ್ಟಣದತ್ತ ಬದುಕನರಸಿ ಬರುತ್ತಿರುವ ಅದೆಷ್ಟೋ ಸಂತ್ರಸ್ತರು ಇಂದಿಗೂ ನಮ್ಮ ಮಧ್ಯೆ ಇದ್ದಾರೆ. ಇಂತವರ ಕಷ್ಟ ಕಾರ್ಪಣ್ಯಗಳನ್ನು ತೋರಿಸುವ, ಸಾಮಾಜಿಕ ಕಳಕಳಿ ಮೆರೆಯುವ ಹಲವು ಸಿನಿಮಾಗಳು ತೆರೆಕಂಡಿವೆ, ಕಳಕಳಿ ಮೆರೆದಿವೆ ಇದೀಗ ಅಂತಹದ್ದೇ ಕಳಕಳಿ ಹೊತ್ತ ಸಿನಿಮಾವೊಂದನ್ನು ಇತ್ತೀಚೆಗೆ ನಡೆದ ಘಟನೆಯನ್ನಾಧರಿಸಿ ನಿರ್ದೇಶಕ ನೀನಾಸಂ ಮಂಜು ತೆರೆಗೆ ತರಲು ಸಿದ್ಧವಾಗಿದ್ದಾರೆ. ಅದುವೇ ಕನ್ನೇರಿ ಸಿನಿಮಾ.

    ಮೂರು ವರ್ಷಗಳ ಹಿಂದೆ ಕೊಡಗಿನಲ್ಲಿ ನಡೆದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಎಲ್ಲರಿಗೂ ನೆನಪಿದೆ. ಆ ಹೋರಾಟದ ಕಿಚ್ಚು ಆರುತ್ತಿದ್ದಂತೆ ಅಲ್ಲೇನಾಯ್ತು ಆ ಸಂತ್ರಸ್ತರಿಗೆ ನೆಲೆ ಇರಲು ಭೂಮಿ ಸಿಕ್ಕಿತೇ..? ಅಲ್ಲಿನ ಹೆಣ್ಣು ಮಕ್ಕಳ ಬದುಕೇನಾಯ್ತು ಎಂಬುದು ಯಾರಿಗೂ ತಿಳಿದಿಲ್ಲ..? ಈ ಘಟನೆಯನ್ನು ಆಧಾರವಾಗಿಟ್ಟುಕೊಂಡು ಕನ್ನೇರಿ ಎಂಬ ಕಥೆ ಹೆಣೆದು ಸಿನಿಮಾವಾಗಿಸಿದ್ದಾರೆ ನೀನಾಸಂ ಮಂಜು. ಸದ್ಯ ಬಿಡುಗಡೆಗೆ ಸಜ್ಜಾಗಿರುವ ಕನ್ನೇರಿ ಸಿನಿಮಾ ಹಾಡುಗಳ ಮೂಲಕ ಗಮನ ಸೆಳೆಯುತ್ತಿದೆ. ಈಗಾಗಲೇ `ಬೆಟ್ಟ ಕಣಿವೆಗಳ ಹೊಟ್ಟೇಲಿ ಗೂಡುಕಟ್ಟಿ’ ಹಾಡಿನ ಮೂಲಕ ಎಲ್ಲರ ಮನಗೆದ್ದಿರುವ ಕನ್ನೇರಿ ಚಿತ್ರತಂಡ ‘ನೆಲೆ ಇರದ ಕಾಲು’ ಹಾಡಿನ ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿದೆ.

    ಕಾಡಿನ ಮೂಲ ನಿವಾಸಿಗಳನ್ನು ನಿರ್ವಸತಿಗರನ್ನಾಗಿಸಿದ ಕಾಡ ಮಕ್ಕಳ ಒಡಲ ಬೇಗುದಿಯ ನೋವಿನ ಕಥೆ ಈ ಹಾಡಿನಲ್ಲಿದ್ದು ವಿ ರಘು ಶಾಸ್ತ್ರಿ ಸಂದರ್ಭಕ್ಕೆ ತಕ್ಕ ಹಾಗೆ ಅಧ್ಬುತ ಸಾಹಿತ್ಯ ಬರೆದಿದ್ದು, ವಾಣಿ ಹರಿಕೃಷ್ಣ ದನಿಯಾಗಿದ್ದಾರೆ. ಸಾಕಷ್ಟು ಮೆಚ್ಚುಗೆ ಗಳಿಸಿಕೊಳ್ಳುತ್ತಿರುವ ‘ನೆಲೆ ಇರದ ಕಾಲು’ ಹಾಡನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಕುಂತ್ರು ನಿಂತ್ರು, ಎಲ್ಲೇ ಹೋದ್ರು ‘ತೋತಾಪುರಿ’ ಸಿನಿಮಾ ಹಾಡಿನದ್ದೇ ಗಾನಬಜಾನ

    ಪಿ.ಪಿ.ಹೆಬ್ಬಾರ್ ಮತ್ತು ಚಂದ್ರಶೇಖರ್ ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ‘ಕನ್ನೇರಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಅರ್ಚನಾ ಮಧುಸೂಧನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅರುಣ್ ಸಾಗರ್, ಅನಿತ ಭಟ್, ಸರ್ದಾರ್ ಸತ್ಯ, ಎಂ.ಕೆ.ಮಠ್, ಕರಿಸುಬ್ಬು ತಾರಾಬಳಗದಲ್ಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಕದ್ರಿ ಮಣಿಕಾಂತ್ ಸಂಗೀತ ಸಂಯೋಜನೆ, ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಸುಜಿತ್ ಎಸ್ ನಾಯಕ್ ಸಂಕಲನ ಚಿತ್ರಕ್ಕಿದೆ.

  • ಐಟಂ ಸಾಂಗ್ ಕ್ಲಿಕ್ -‘ಪುಷ್ಪ’ದಲ್ಲಿ ಸಮಂತಾ ಫುಲ್ ಮಿಂಚಿಂಗ್

    ಐಟಂ ಸಾಂಗ್ ಕ್ಲಿಕ್ -‘ಪುಷ್ಪ’ದಲ್ಲಿ ಸಮಂತಾ ಫುಲ್ ಮಿಂಚಿಂಗ್

    ಚೆನ್ನೈ: ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಸಮಂತಾ ರುತ್ ಪ್ರಭು ಇದೇ ಮೊದಲ ಬಾರಿಗೆ ಐಟಂ ಸಾಂಗ್ ಗೆ ಸ್ಟೆಪ್ ಹಾಕಿದ್ದು, ರಿಲೀಸ್ ಆದ ಒಂದೇ ದಿನದಲ್ಲಿ 11 ಮಿಲಿಯನ್(1.1 ಕೋಟಿಗೂ) ಗೂ ಹೆಚ್ಚು ವ್ಯೂಸ್ ಪಡೆದುಕೊಂಡಿದೆ.

    ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಸಿನಿಮಾದಲ್ಲಿ ಸಮಂತಾ ‘ಊ ಅಂತಾವಾ ಊ ಊ ಅಂತಾವಾ’ ಎಂಬ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ಈ ಸಾಂಗ್ ನ ಲಿರಿಕಲ್ ವೀಡಿಯೋವನ್ನು ನಿನ್ನೆ ರಿಲೀಸ್ ಮಾಡಲಾಗಿತ್ತು. ಈ ಸಾಂಗ್ ನಲ್ಲಿ ಸ್ಯಮ್ ಬೋಲ್ಡ್ ಲುಕ್ ನೀಡಿದ್ದು, ಫುಲ್ ಜೋಶ್ ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಅವರ ಅಭಿಮಾನಿಗಳು ನಾಗಚೈತನ್ಯ ಜೊತೆಗಿನ ವಿಚ್ಛೇದನದ ಬಳಿಕ ಇದು ಇವರ ಕಾಮ್‍ಬ್ಯಾಕ್ ಎಂದು ಖುಷ್ ಆಗಿದ್ದಾರೆ. ಇದನ್ನೂ ಓದಿ: ಅರಿಶಿನ ಶಾಸ್ತ್ರ ಸಂಭ್ರಮದ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್ 

    ಈ ಸಾಂಗ್ ಅನ್ನು ಇಂದ್ರಾವತಿ ಚೌಹಾಣ್ ಹಾಡಿದ್ದು, ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀಪ್ರಸಾದ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಾಂಗ್ ಗೆ ಸಮಂತಾ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಅದು ಅಲ್ಲದೇ ಸಮಂತಾ ಇದೇ ಮೊಟ್ಟಮೊದಲ ಬಾರಿಗೆ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದು, ಸಮಂತಾ ಲುಕ್ ಸಿನಿರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ.

    ‘ಪುಷ್ಪ’ ಸಿನಿಮಾ ಇದೇ ಡಿಸೆಂಬರ್ 17 ರಂದು ದೇಶಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದು, ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದಾರೆ.

  • ‘ವಿಂಡೋಸೀಟ್’ ಎರಡನೇ ಲಿರಿಕಲ್ ವೀಡಿಯೋ ಡಿ.18ಕ್ಕೆ ರಿಲೀಸ್

    ‘ವಿಂಡೋಸೀಟ್’ ಎರಡನೇ ಲಿರಿಕಲ್ ವೀಡಿಯೋ ಡಿ.18ಕ್ಕೆ ರಿಲೀಸ್

    ನಿರೂಪ್ ಭಂಡಾರಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ವಿಂಡೋಸೀಟ್’ ಸ್ಯಾಂಡಲ್‍ವುಡ್ ಅಂಗಳದಲ್ಲಿ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಒಂದೊಂದೇ ಸ್ಯಾಂಪಲ್‍ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ‘ವಿಂಡೋಸೀಟ್’ ಚಿತ್ರತಂಡ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ ಮಾಡಲು ಸಜ್ಜಾಗಿದೆ.

    ಈಗಾಗಲೇ ಯೋಗರಾಜ್ ಭಟ್ ಸಾಹಿತ್ಯ ಕೃಷಿಯಲ್ಲಿ ಅರಳಿರೋ ‘ಅತಿ ಚೆಂದದ ಹೂಗೊಂಚಲು’ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿ ಹಿಟ್ ಆಗಿದೆ. ಇದೀಗ ಅದೇ ಖುಷಿಯಲ್ಲಿ ಚಿತ್ರತಂಡ ‘ಖಾಲಿ ಆಕಾಶ’ ಎಂಬ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ ಮಾಡುತ್ತಿದ್ದು, ಡಿಸೆಂಬರ್ 18ಕ್ಕೆ ಆನಂದ್ ಆಡಿಯೋನಲ್ಲಿ ಈ ಲಿರಿಕಲ್ ವೀಡಿಯೋ ಬಿಡುಗಡೆಯಾಗುತ್ತಿದೆ. ಮೊದಲ ಲಿರಿಕಲ್ ವೀಡಿಯೋಗೆ ಸಿಕ್ಕ ಪ್ರತಿಕ್ರಿಯೆಯಿಂದ ಖುಷಿಯಲ್ಲಿರುವ ‘ವಿಂಡೋಸೀಟ್’ ಚಿತ್ರತಂಡ ‘ಖಾಲಿ ಆಕಾಶ’ ಹಾಡಿಗೆ ಯಾವ ರೀತಿ ಪ್ರೇಕ್ಷಕ ಪ್ರಭುವಿನ ಪ್ರತಿಕ್ರಿಯೆ ಸಿಗುತ್ತೆ ಅನ್ನೋದನ್ನ ಎದುರು ನೋಡುತ್ತಿದೆ.

    ‘ವಿಂಡೋಸೀಟ್’ ರೊಮ್ಯಾಂಟಿಕ್ ಥ್ರಿಲ್ಲರ್ ಜಾನರ್ ಸಿನಿಮಾವಾಗಿದ್ದು ನಟಿ ಶೀತಲ್ ಶೆಟ್ಟಿ ಈ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಜಾಕ್ ಮಂಜುನಿರ್ಮಾಣದಲ್ಲಿ ಮೂಡಿ ಬರ್ತಿರೋ ‘ವಿಂಡೋಸೀಟ್’ ಚಿತ್ರದಲ್ಲಿ ಸಂಜನಾ ಆನಂದ್, ಅಮೃತಾ ಐಯ್ಯಂಗಾರ್ ನಿರೂಪ್ ಭಂಡಾರಿ ಜೊತೆ ನಾಯಕಿಯರಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ರವಿಶಂಕರ್, ಮಧುಸೂದನ್ ರಾವ್, ಲೇಖಾ ನಾಯ್ಡು, ಸೂರಜ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಮೂಡಿ ಬಂದಿವೆ.