Tag: ಲಿಯೋ

  • 68ನೇ ಚಿತ್ರಕ್ಕೆ 150 ಕೋಟಿ ಸಂಭಾವನೆ ಪಡೆದುಕೊಂಡ ದಳಪತಿ ವಿಜಯ್

    68ನೇ ಚಿತ್ರಕ್ಕೆ 150 ಕೋಟಿ ಸಂಭಾವನೆ ಪಡೆದುಕೊಂಡ ದಳಪತಿ ವಿಜಯ್

    ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಅವರು ‘ವಾರಿಸು’ (Varisu) ಸಿನಿಮಾದ ಸೂಪರ್ ಸಕ್ಸಸ್ ನಂತರ ‘ಲಿಯೋ’ (Leo Film) ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ತಮ್ಮ ಮುಂದಿನ 68ನೇ ಚಿತ್ರದ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡಿದ್ದರು.  ಈ ಚಿತ್ರಕ್ಕೆ ತಮ್ಮ ಸಂಭಾವನೆಯನ್ನ ಕೂಡ ಹೆಚ್ಚಿಕೊಂಡಿದ್ದಾರೆ.

    ಈ ವರ್ಷ ‘ವಾರಿಸು’ ಸಿನಿಮಾದ ಮೂಲಕ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡರು. ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ರೊಮ್ಯಾನ್ಸ್, ಆ್ಯಕ್ಷನ್ ಧಮಾಕ ಮೂಲಕ ವಿಜಯ್ ಅಬ್ಬರಿಸಿದ್ದರು. ಚಿತ್ರ ಕೂಡ ಕೋಟಿ ಕೋಟಿ ಕಲೆಕ್ಷನ್ ಮಾಡಿ ನಿರ್ಮಾಪಕರ ಜೇಬು ತುಂಬಿಸುವಲ್ಲಿ ಯಶಸ್ವಿಯಾಗಿತ್ತು.

    ಇದೀಗ ತ್ರಿಷಾ ಕೃಷ್ಣನ್ (Thrisha Krishnan) ಜೊತೆ ‘ಲಿಯೋ’ (Leo) ಸಿನಿಮಾ ಮಾಡ್ತಿದ್ದಾರೆ ದಳಪತಿ ವಿಜಯ್. ವಾರಿಸು, ಲಿಯೋ ಎರಡು ಚಿತ್ರಕ್ಕೂ 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದ ವಿಜಯ್ ಇದೀಗ ತಮ್ಮ 68ನೇ ಚಿತ್ರಕ್ಕೆ 50 ಕೋಟಿ ರೂಪಾಯಿ ಹೆಚ್ಚಿಸಿಕೊಂಡಿದ್ದಾರೆ. ವೆಂಕಟ್ ಪ್ರಭು ನಿರ್ದೇಶನದ ಚಿತ್ರಕ್ಕೆ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಹಣಕ್ಕಾಗಿ ನಾನು ಯಾರ ಹಿಂದೆಯೂ ಹೋಗಿಲ್ಲ : ನಟಿ ಪವಿತ್ರಾ ಲೋಕೇಶ್

    ದಕ್ಷಿಣ ಭಾರತದಲ್ಲಿ 100 ಕೋಟಿ ರೂಪಾಯಿ ಪಡೆಯುವ ಹೀರೋಗಳಿದ್ದಾರೆ. ಆದರೆ ಈಗ ವಿಜಯ್ 150 ಕೋಟಿ ರೂಪಾಯಿ ಸಂಭಾವನೆ ಪಡೆಯುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

  • ಕಾಶ್ಮೀರದಲ್ಲಿ ವಿಜಯ್‌ ಜೊತೆ ಕಾಣಿಸಿಕೊಂಡ ಸಂಜಯ್‌ ದತ್

    ಕಾಶ್ಮೀರದಲ್ಲಿ ವಿಜಯ್‌ ಜೊತೆ ಕಾಣಿಸಿಕೊಂಡ ಸಂಜಯ್‌ ದತ್

    `ವಾರಿಸು’ ಚಿತ್ರದ ಸಕ್ಸಸ್ ನಂತರ ವಿಜಯ್ ದಳಪತಿ (Vijay Thalapathy) ಇದೀಗ `ಲಿಯೋ’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್‌ಗೆ `ಕೆಜಿಎಫ್ 2′ (KGF 2) ಖ್ಯಾತಿಯ ಸಂಜಯ್ ದತ್ (Sanjay Dutt) ಸಾಥ್ ನೀಡಿದ್ದಾರೆ.

    ರಶ್ಮಿಕಾ ಮಂದಣ್ಣ (Rashmika Mandanna) ಜೊತೆ `ವಾರಿಸು’ ಚಿತ್ರದಲ್ಲಿ ರೊಮ್ಯಾನ್ಸ್ ಮಾಡಿದ ಬಳಿಕ ಈಗ `ಲಿಯೋ’ (Leo) ಸಿನಿಮಾವನ್ನು ವಿಜಯ್ ದಳಪತಿ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ವಿಜಯ್ ಆ್ಯಂಡ್ ಟೀಂ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ವಿಜಯ್ ಜೊತೆ ಸಂಜಯ್ ದತ್ ಕೂಡ ಕಾಣಿಸಿಕೊಂಡಿದ್ದಾರೆ.

    ಲೋಕೇಶ್‌ ಕನಗರಾಜ್‌ ನಿರ್ದೇಶನದ `ಲಿಯೋ’ ಚಿತ್ರದಲ್ಲಿ ಸಂಜಯ್ ದತ್ ಖಳನಾಯಕನಾಗಿ ಅಬ್ಬರಿಸುತ್ತಿದ್ದಾರೆ. `ಕೆಜಿಎಫ್ 2′ ಚಿತ್ರದ ನಂತರ ದಕ್ಷಿಣದ ಸಿನಿಮಾಗಳಿಗೆ ಸಂಜಯ್ ದತ್ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ. ಸೌತ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲು ಮನಸ್ಸು ಮಾಡಿರುವ ಅಧೀರ ಈಗ ವಿಜಯ್‌ಗೆ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

    `ಲಿಯೋ’ ತಮಿಳು ಸಿನಿಮಾ ಶೂಟಿಂಗ್‌ಗಾಗಿ ಸಂಜಯ್ ದತ್ ಕೂಡ ಕಾಶ್ಮೀರಕ್ಕೆ ಬಂದಿಳಿದಿದ್ದಾರೆ. ʻಲಿಯೋʼ ಟೀಂ ಸಂಜಯ್ ದತ್ ಅವರನ್ನ ಅದ್ದೂರಿಯಾಗಿ ಸ್ವಾಗತಿಸಿದೆ. ಬಳಿಕ ವಿಜಯ್- ಸಂಜಯ್  ಭೇಟಿಯಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಖುಷಿಯಿಂದ ಚಿತ್ರತಂಡ ಹೇಳಿಕೊಂಡಿದ್ದಾರೆ. ವಿಜಯ್ ಮತ್ತು ಸಂಜಯ್ ದತ್ ಜೊತೆಗಿನ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಲಿಯೋ ಟೀಂ ಶೇರ್ ಮಾಡಿದೆ.

  • ಮತ್ತೆ `ವಾರಿಸು’ ಟೀಂ ಜೊತೆ ಕೈಜೋಡಿಸಿದ ದಳಪತಿ ವಿಜಯ್

    ಮತ್ತೆ `ವಾರಿಸು’ ಟೀಂ ಜೊತೆ ಕೈಜೋಡಿಸಿದ ದಳಪತಿ ವಿಜಯ್

    ಕಾಲಿವುಡ್ ಸೂಪರ್ ಸ್ಟಾರ್ ದಳಪತಿ ವಿಜಯ್ (Thalapathy Vijay) ನಟನೆಯ ʻವಾರಿಸುʼ (Varisu Film) ಸೂಪರ್ ಸಕ್ಸಸ್ ನಂತರ ಹೊಸ ಚಿತ್ರ `ಲಿಯೋ’ (Liyo) ಪ್ರಾಜೆಕ್ಟ್‌ನಲ್ಲಿ  ಬ್ಯುಸಿಯಾಗಿದ್ದಾರೆ. ಈ ನಡುವೆ ಮತ್ತೆ `ವಾರಿಸು ಟೀಂ’ ವಿಜಯ್‌ನ ಭೇಟಿ ಮಾಡಿದ್ದಾರೆ. ತಂಡದ ಹೊಸ ಚಿತ್ರಕಥೆಗೆ ದಳಪತಿ ವಿಜಯ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    `ಬೀಸ್ಟ್’ ಚಿತ್ರ ಸೋಲಿನಿಂದ ಬೇಸತ್ತ ದಳಪತಿ ವಿಜಯ್‌ಗೆ `ವಾರಿಸು’ ಸಿನಿಮಾ ಸಕ್ಸಸ್ ದೊಡ್ಡ ಮಟ್ಟದಲ್ಲಿ ತಿರುವು ನೀಡಿದೆ. ಇದೇ ಖುಷಿಯಲ್ಲಿ ತಮ್ಮ 67ನೇ ಚಿತ್ರ ʻಲಿಯೋʼ ಪ್ರಾಜೆಕ್ಟ್‌ನತ್ತ ವಿಜಯ್ ಮುಖ ಮಾಡಿದ್ದಾರೆ.

    `ವಾರಿಸು’ ಸಿನಿಮಾ ಕಥೆ, ವಿಜಯ್ -ರಶ್ಮಿಕಾ ರೊಮ್ಯಾನ್ಸ್, ಸಾಂಗ್ಸ್ ಎಲ್ಲವೂ ತೆರೆಯ ಮೇಲೆ ಕಮಾಲ್ ಮಾಡೋದರಲ್ಲಿ ಗೆದ್ದಿತ್ತು. ಇದೀಗ ಮತ್ತೆ ಈ ಟೀಂ ಒಂದಾಗುತ್ತಿದೆ. ಭಿನ್ನ ಕಥೆಯೊಂದಿಗೆ `ವಾರಿಸು’ ನಿರ್ದೇಶಕ ನಟ ವಿಜಯ್ ಭೇಟಿ ಮಾಡಿ ಕಥೆ ಹೇಳಿದ್ದಾರೆ. ವಿಜಯ್ ಕೂಡ ಕಥೆ ಕೇಳಿ ಥ್ರಿಲ್ ಆಗಿ ತಂಡಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

    `ಲಿಯೋ’ ಚಿತ್ರ ಮುಗಿಯುತ್ತಿದ್ದಂತೆ `ವಾರಿಸು’ ಟೀಂ ಜೊತೆ ವಿಜಯ್ ಹೊಸ ಸಿನಿಮಾ ಮಾಡಲಿದ್ದಾರೆ. ಮತ್ತೆ ಈ ಚಿತ್ರಕ್ಕೆ‌ ವಿಜಯ್‌ ಜೊತೆ ರಶ್ಮಿಕಾ ಮಂದಣ್ಣ ಜೋಡಿಯಾಗಲಿದ್ದಾರಾ ಎಂಬುದನ್ನ ಕಾದುನೋಡಬೇಕಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಳಪತಿ ವಿಜಯ್ ಸಿನಿಮಾಕ್ಕೆ ‘ಲಿಯೋ’ ಶೀರ್ಷಿಕೆ ಫಿಕ್ಸ್

    ದಳಪತಿ ವಿಜಯ್ ಸಿನಿಮಾಕ್ಕೆ ‘ಲಿಯೋ’ ಶೀರ್ಷಿಕೆ ಫಿಕ್ಸ್

    ಟ ದಳಪತಿ ವಿಜಯ್‌ ಮತ್ತು ನಿರ್ದೇಶಕ ಲೋಕೇಶ್‌ ಕನಗರಾಜ್‌, ಚಿತ್ರಕ್ಕೆ ‘ಲಿಯೋ’ ಶೀರ್ಷಿಕೆ ಅಂತಿಮವಾಗಿದೆ. ಶೀರ್ಷಿಕೆ ಟೀಸರ್‌ ಬಿಡುಗಡೆ ಆಗಿದ್ದು, ಚಾಕಲೇಟ್‌ ತಯಾರಕನಾಗಿ ವಿಜಯ್‌ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಬದಿಯಲ್ಲಿ ಕೈಯಲ್ಲಿ ಕತ್ತಿ ಹಿಡಿದು ಶತ್ರುಗಳ ಸಂಹಾರಕ್ಕೂ ಸಜ್ಜಾಗಿದ್ದಾರೆ.

    ಮಾಸ್ಟರ್‌ ಸಿನಿಮಾ ಬಳಿಕ ಲೋಕೇಶ್‌ ಕನಗರಾಜ್‌ ಮತ್ತು ವಿಜಯ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದಾಗಿದ್ದು, ಈಗಾಗಲೇ ಚಿತ್ರದ ಬಹುತೇಕ ಸ್ಟಾರ್‌ ಕಾಸ್ಟ್‌ ಸಹ ಬಹಿರಂಗವಾಗಿದೆ. ತ್ರಿಷಾ ಕೃಷ್ಣನ್‌ ಈ ಚಿತ್ರದಲ್ಲಿ ವಿಜಯ್‌ಗೆ ಜೋಡಿಯಾದರೆ, ಪ್ರಿಯಾ ಆನಂದ್‌ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಇದನ್ನೂ ಓದಿ: ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ನಟಿ ಬಿಪಾಶಾ ಬಸು

    ಫೆ. 2ರಂದು ಚೆನ್ನೈನಲ್ಲಿ ‘ಲಿಯೋ’ ಚಿತ್ರದ ಅದ್ದೂರಿ ಮುಹೂರ್ತ ನೆರವೇರಿತ್ತು. ಆದರೆ, ಶೀರ್ಷಿಕೆ ಮಾತ್ರ ಘೋಷಣೆ ಆಗಿರಲಿಲ್ಲ. ಮುಹೂರ್ತ ಮುಗಿದ ಒಂದು ದಿನದ ಬಳಿಕ ಅಂದರೆ ಫೆ. 3ರಂದು ಶೀರ್ಷಿಕೆ ಟೀಸರ್‌ ರಿಲೀಸ್‌ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದರು.

    7 ಸ್ಕ್ರೀನ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿರುವ ‘ಲಿಯೋ’ ಚಿತ್ರಕ್ಕೆ ಅನಿರುದ್ಧ ರವಿಚಂದ್ರನ್‌ ಸಂಗೀತ ನೀಡಲಿದ್ದಾರೆ. ಈ ಹಿಂದೆ ವಿಜಯ್‌ ಅವರ ಕೈದಿ, ಮಾಸ್ಟರ್‌ ಮತ್ತು ಬೀಸ್ಟ್‌ ಸಿನಿಮಾಗಳಿಗೆ ಅನಿರುದ್ಧ ಸಂಗೀತ ನೀಡಿದ್ದರು. ಲಿಯೋ ಮೂಲಕ ನಾಲ್ಕನೇ ಬಾರಿ ಒಂದಾಗಿದ್ದಾರೆ.

    ಮನೋಜ್‌ ಪರಮಹಂಸ ಛಾಯಾಗ್ರಹಣ, ಅನ್ಬರವೀ ಸಾಹಸ, ಫಿಲೋಮಿನ್‌ ರಾಜ್‌ ಸಂಕಲನ, ಸತೀಸ್‌ ಕುಮಾರ್‌ ಕಲೆ, ದಿನೇಶ್‌ ನೃತ್ಯ ನಿರ್ದೇಶನ, ಸಂಭಾಷಣೆ ಲೋಕೇಶ್‌ ಕನಗರಾಜ್‌, ರತ್ನ ಕುಮಾರ್‌, ಧೀರಜ್‌ ವೈದ್ಯ, ರಾಮಕುಮಾರ್‌ ಬಾಲಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k