Tag: ಲಿಮಾ

  • 1,200 ವರ್ಷದಷ್ಟು ಹಳೆಯ ಮಕ್ಕಳ, ವಯಸ್ಕರ ಅವಶೇಷ ಪತ್ತೆ!

    1,200 ವರ್ಷದಷ್ಟು ಹಳೆಯ ಮಕ್ಕಳ, ವಯಸ್ಕರ ಅವಶೇಷ ಪತ್ತೆ!

    ಲಿಮಾ: 1,200 ವರ್ಷದಷ್ಟು ಹಳೆಯ ಮಕ್ಕಳ ಮತ್ತು ವಯಸ್ಕರ ಅವಶೇಷಗಳು ಲಿಮಾದಲ್ಲಿ ಪತ್ತೆಯಾಗಿವೆ.

    ಪೆರುವಿಯನ್ ಪುರಾತತ್ತ್ವ ಶಾಸ್ತ್ರಜ್ಞರು 800-1,200 ವರ್ಷಗಳ ಹಿಂದೆ ಸಮಾಧಿ ಮಾಡಲಾಗಿದ್ದ ಎಂಟು ಮಕ್ಕಳು ಮತ್ತು 12 ವಯಸ್ಕರ ದೇಹವನ್ನು ಪತ್ತೆ ಮಾಡಿದ್ದಾರೆ. ಶೋಧ ಕಾರ್ಯವನ್ನು ಮಾಡಿ ನಿನ್ನೆ ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಪೂರ್ವ-ಇಂಕಾನ್ ಕಾಜಮಾಕ್ರ್ವಿಲ್ಲಾದ ಲಿಮಾ ಪೂರ್ವದಲ್ಲಿ ಈ ಶೋಧ ಕಾರ್ಯ ನಡೆದಿದೆ. ಇದನ್ನೂ ಓದಿ:  ನಮ್ಮ ಮನೆಯ ಮಕ್ಕಳು ಅಮಾಯಕರು – ಬಂಧಿತರ ಕುಟುಂಬದವರ ಅಳಲು

    Peruvian archaeologists present pre-Incan mummies recently unearthed, in Lima

    ಈ ಅವಶೇಷಗಳು ಸಮಾಧಿಯಿಂದ ಮೇಲೆ ಬಂದಿದ್ದವು. ಈ ಹಿನ್ನೆಲೆ ಕಳೆದ ವರ್ಷ ನವೆಂಬರ್‍ನಲ್ಲಿ ಪೆರುವಿನ ಸ್ಯಾನ್ ಮಾರ್ಕೋಸ್ ವಿಶ್ವವಿದ್ಯಾಲಯದ ತಂಡವು ಈ ಕುರಿತು ಶೋಧ ಕಾರ್ಯ ಮಾಡಲು ಪ್ರಾರಂಭಿಸಿತು. ಭ್ರೂಣವನ್ನು ಹಗ್ಗಗಳಿಂದ ಸುತ್ತಲ್ಪಟ್ಟಿದ್ದು, ಪ್ರಾಚೀನ ಕಾಲದ ಮಮ್ಮಿಗಳಂತೆ ಕಂಡುಬಂದಿದೆ.

    Peruvian archaeologists present pre-Incan mummies recently unearthed, in Lima

    ಪುರಾತತ್ವಶಾಸ್ತ್ರಜ್ಞ ಪೀಟರ್ ವ್ಯಾನ್ ಡೇಲೆನ್ ಈ ಕುರಿತು ಮಾತನಾಡಿದ್ದು, ಕೆಲವು ಪುರಾತನ ಮಮ್ಮಿಗಳನ್ನು ರಕ್ಷಿಸಲಾಗಿದೆ. ಇತರ ಅಸ್ಥಿಪಂಜರಗಳನ್ನು ಪ್ರಾಚೀನ ಪೂರ್ವ-ಹಿಸ್ಪಾನಿಕ್ ಆಚರಣೆಯ ಭಾಗವಾಗಿ ಬಟ್ಟೆಗಳ ವಿವಿಧ ಪದರಗಳಲ್ಲಿ ಸುತ್ತಿಡಲಾಗಿತ್ತು. ಇನ್ನೂ ಹೆಚ್ಚು ಮಮ್ಮಿಗಳು ನಾಪತ್ತೆಯಾಗಿರಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಮೇಲಾಧಿಕಾರಿಗಳ ಕಿರುಕುಳ – ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ

    1,200-year-old remains of sacrificed adults, kids unearthed in Peru

    ಅವರಿಗೆ ಸಾವು ಅಂತ್ಯವಲ್ಲ. ಅವರ ಪ್ರಕಾರ, ಸತ್ತವರು ಜಗತ್ತಿಗೆ ಪರಿವರ್ತನೆಯಾಗುತ್ತಾರೆ. ಸತ್ತವರ ಆತ್ಮಗಳು ಜೀವಂತ ರಕ್ಷಕರಂತಿರುತ್ತವೆ ಎಂದು ನಂಬಲಾಗಿದೆ. 1,700 ವರ್ಷಗಳ ಹಿಂದಿನ ಆಡಳಿತಗಾರನಾದ ಲಾರ್ಡ್ ಆಫ್ ಸಿಪಾನ್‍ನ ಸಮಾಧಿಯನ್ನು ಉಲ್ಲೇಖಿಸಿರುವ ವ್ಯಾನ್ ಡೇಲೆನ್, ಸಿಪಾನ್ ಸಮಾಧಿ ಮಾದರಿಯಲ್ಲಿ ಈ ಸಮಾಧಿ ಇದೆ ಎಂದು ವಿವರಿಸಿದ್ದಾರೆ.

  • ನಿದ್ರೆಗೆ ಜಾರಿದ ಬಸ್ ಚಾಲಕ- ಕಂದಕ್ಕಕೆ ಉರುಳಿ 27 ಮಂದಿ ಸಾವು

    ನಿದ್ರೆಗೆ ಜಾರಿದ ಬಸ್ ಚಾಲಕ- ಕಂದಕ್ಕಕೆ ಉರುಳಿ 27 ಮಂದಿ ಸಾವು

    ಲಿಮಾ: ಕಂದಕಕ್ಕೆ ಬಸ್ ಉರುಳಿ ಬಿದ್ದು ಸ್ಥಳದಲ್ಲೇ 27ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿರುವ ಘಟನೆ ದಕ್ಷಿಣ ಪೆರುವಿಯನ್ ಪ್ರದೇಶದ ಅಯಾಕುಚೊದಲ್ಲಿ ನಡೆದಿದೆ.

    ಮೃತರೆಲ್ಲ ವಾರಿ ಪಲೋಮಿನೋ ಕಂಪನಿಯ ಗಣಿ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮತ್ತು ಕುಟುಂಬ ಸದಸ್ಯರು ಎಂದು ತಿಳಿದುಬಂದಿದೆ. ಇವರೆಲ್ಲರೂ ಅಯಾಕುಚೊ ಪ್ರದೇಶದಿಂದ ಅರೆಕ್ವಿಪಾಗೆ ಬಸ್‍ನಲ್ಲಿ ಹೋಗುತ್ತಿದ್ದರು. ಮಾರ್ಗಮದ್ಯೆ ಸುಮಾರು 250 ಮೀಟರ್ ಆಳದ ಕಂದಕಕ್ಕೆ ಬಸ್ ಉರುಳಿದ್ದು, ಅಪಾರ ಪ್ರಮಾಣದ ಸಾವು -ನೋವು ಉಂಟಾಗಿದೆ.

    ಸುದ್ದಿ ತಿಳಿಯುತ್ತಿದ್ದಂತೆ ರಕ್ಷಣಾ ತಂಡ, ಅಗ್ನಿಶಾಮಕದಳ ಮತ್ತು ಪೊಲೀಸರು ಸ್ಥಳಕ್ಕೆ ಬಂದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಬಸ್ ಚಾಲಕ ನಿದ್ರೆಗೆ ಜಾರಿರುವುದು ಅಪಘಾತಕ್ಕೆ ಕಾರಣವಾಗಿರಬಹುದು. ನನ್ನ ಸಹೋದರನನ್ನು ಕಿಟಕಿಯ ಮೂಲಕ ಹೊರಹಾಕಲಾಯಿತು. ಅವನ ದೇಹದ ಮೇಲೆ ಕಲ್ಲುಗಳು ಬಿದ್ದಿದ್ದವು. ಹೀಗಾಗಿ ಗಾಯಗೊಂಡಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಎಂಬ ಮಹಿಳೆಯೊಬ್ಬರು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ – ವಾಹನಗಳ ಓಡಾಟಕ್ಕೆ ಬಿದ್ದಿಲ್ಲ ಬ್ರೇಕ್

    ಕಳೆದ 10 ದಿನಗಳ ಹಿಂದೆ ಇಲ್ಲಿ ಇಂತಹದ್ದೇ ರಸ್ತೆ ಅಪಘಾತ ಸಂಭವಿಸಿತ್ತು. 17 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದರು. ವೇಗವಾಗಿ ವಾಹನ ಚಾಲನೆ ,ಹೆದ್ದಾರಿಗಳು ಸರಿಯಾದ ಚಿಹ್ನೆಗಳ ಕೊರತೆ ಮತ್ತು ಸಂಚಾರ ಸುರಕ್ಷತೆಯ ಕೊರತೆಯಿಂದಾಗಿ ವಾಹನ  ಅಪಘಾತಕ್ಕೋಳಗಾಗುತ್ತಿವೆ ಎನ್ನಲಾಗುತ್ತಿದೆ.

  • ದೇವರ ಹೆಸರಿನಲ್ಲಿ ಬಲಿಯಾದ 227 ಮಕ್ಕಳ ಅಸ್ಥಿಪಂಜರ ಪತ್ತೆ

    ದೇವರ ಹೆಸರಿನಲ್ಲಿ ಬಲಿಯಾದ 227 ಮಕ್ಕಳ ಅಸ್ಥಿಪಂಜರ ಪತ್ತೆ

    ಲಿಮಾ: ಚಿಮು ನಾಗರೀಕತೆ ನೆಲಸಿದ್ದ ಪೆರುವಿನ ಪೂರ್ವ ಕೊಲಂಬಿಯಾ ಪ್ರದೇಶದಲ್ಲಿ ದೇವರ ಹೆಸರಿನಲ್ಲಿ ಬಲಿಯಾದ 227 ಮಕ್ಕಳ ಅಸ್ಥಿಪಂಜರಗಳು ದೊರಕಿವೆ.

    ಕಳೆದ ಒಂದು ವರ್ಷದಿಂದ ರಾಜಧಾನಿ ಲಿಮಾದ ಉತ್ತರದ ಪ್ರವಾಸಿ ಪಟ್ಟಣವಾದ ಹುವಾನ್‍ಚಾಕೊ, ಚಿಮು ನಾಗರೀಕತೆಯಲ್ಲಿ ಮಕ್ಕಳನ್ನು ಬಲಿಕೊಡವ ಅತೀ ದೊಡ್ಡ ತಾಣ ಎಂದು ಪೆರುವಿನ ಪುರಾತತ್ವ ಇಲಾಖೆ ಅಲ್ಲಿ ಸಂಶೋಧನೆ ಮಾಡುತ್ತಿತ್ತು. ಈ ಜಾಗದಲ್ಲಿ ತುಂಬಾ ಮಕ್ಕಳ ಅಸ್ಥಿಪಂಜರಗಳು ಸಿಕ್ಕಿವೆ ಎಂದು ಪುರಾತತ್ವ ಶಾಸ್ತ್ರಜ್ಞ ಫೆರೆನ್ ಕ್ಯಾಸ್ಟಿಲ್ಲೊ ಮಂಗಳವಾರ ಹೇಳಿದ್ದಾರೆ.

    ಫೆರೆನ್ ಕ್ಯಾಸ್ಟಿಲ್ಲೊ ಅವರು ಹೇಳುವ ಪ್ರಕಾರ, ಅಂದಿನ ಚಿಮು ನಾಗರೀಕತೆಯ ಸಂಸ್ಕøತಿಯಲ್ಲಿ ದೇವರನ್ನು ಸಮಾಧಾನಪಡಿಸಲು ಅಲ್ಲಿನ ಜನರು 4 ರಿಂದ 14 ವರ್ಷದ ಒಳಗಿನ ಮಕ್ಕಳನ್ನು ದೇವರಿಗೆ ಬಲಿ ಕೊಡುತ್ತಿದ್ದ ಮೂಢನಂಬಿಕೆ ಇತ್ತು. ಅವರು ಮಕ್ಕಳನ್ನು ಹೆಚ್ಚು ಶೀತ ಪ್ರದೇಶದಲ್ಲಿ ದೇವರಿಗೆ ಬಲಿಕೊಡುತ್ತಿದ್ದರು. ಈ ಪ್ರದೇಶದಲ್ಲಿ ಎಲ್ಲಿ ಆಗೆಯುತ್ತೀರೋ ಅಲ್ಲಿ ಎಲ್ಲಾ ಮಕ್ಕಳ ಅಸ್ಥಿಪಂಜರಗಳು ಸಿಗುತ್ತಿವೆ ಎಂದು ಹೇಳಿದ್ದಾರೆ.

    ಈ ನಾಗರೀಕತೆಯಲ್ಲಿ ಮಕ್ಕಳನ್ನು ಸಮುದ್ರಕ್ಕೆ ಎದುರಾಗಿರುವ ಪ್ರದೇಶದಲ್ಲಿ ಹೆಚ್ಚು ಬಲಿಕೊಡಲಾಗಿದೆ. ಆದ್ದರಿಂದ ಸಮುದ್ರಕ್ಕೆ ಹತ್ತಿರ ಇರುವ ಪ್ರದೇಶದಲ್ಲಿ ಅತೀ ಹೆಚ್ಚು ಮಕ್ಕಳ ಬಲಿಕೊಟ್ಟಿರುವ ತಾಣಗಳು ಸಿಕ್ಕಿವೆ. ಹುವಾನ್‍ಚಾಕೊ ಎಂಬ ಪ್ರದೇಶದಲ್ಲಿ ಅತೀ ಹೆಚ್ಚು ಮಕ್ಕಳ ಅವಶೇಷಗಳು ಕಂಡು ಬಂದಿದ್ದು, ಈ ಪ್ರದೇಶವನ್ನು ಅತೀ ಹೆಚ್ಚು ಮಕ್ಕಳನ್ನು ಬಲಿಪಡೆದ ಪ್ರದೇಶ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

    2018 ರ ಜೂನ್ ಅಲ್ಲಿ ಪಂಪಾ ಲಾ ಕ್ರೂಜ್ ಪಟ್ಟಣದ ನೆರೆಹೊರೆಯ ಸ್ಥಳದಲ್ಲಿ ಅಗೆದು ಸಂಶೋಧನೆ ಮಾಡುವಾಗ ಪುರಾತತ್ವ ಶಾಸ್ತ್ರಜ್ಞರಿಗೆ ಮೊದಲು ಮಕ್ಕಳ ಶವಗಳು ಸಿಕ್ಕವು. ಈ ಪ್ರದೇಶದಲ್ಲಿ 56 ಮಕ್ಕಳ ಅಸ್ಥಿಪಂಜರಗಳನ್ನು ಪತ್ತೆಯಾದವು. ಪಂಪಾ ಲಾ ಕ್ರೂಜ್ ಹುವಾನ್‍ಚಾಕೊದಿಂದ ಸ್ವಲ್ಪ ದೂರದಲ್ಲಿದ್ದು, ಅಲ್ಲಿ ಜೀವವನ್ನು ತ್ಯಾಗ ಮಾಡಿದ 140 ಮಕ್ಕಳು ಮತ್ತು 200 ಲಾಮಾಗಳ ಅವಶೇಷಗಳು 2018 ರ ಏಪ್ರಿಲ್‍ನಲ್ಲಿ ಪತ್ತೆಯಾಗಿದ್ದವು.

    ಚಿಮು ನಾಗರೀಕತೆಯು ಪೆರುವಿಯನ್ ಕರಾವಳಿಯುದ್ದಕ್ಕೂ ಈಕ್ವೆಡಾರ್‍ವರೆಗೆ ವಿಸ್ತರಿಸಿತ್ತು. ಆದರೆ ಇಂಕಾ ಸಾಮ್ರಾಜ್ಯವು ಈ ಪ್ರದೇಶಗಳನ್ನು ವಶಪಡಿಸಿಕೊಂಡ ನಂತರ 1475 ರಲ್ಲಿ ಕಣ್ಮರೆಯಾಯಿತು.

  • ಕಿಸ್ ಮಾಡೋ ಭರದಲ್ಲಿ ಸೇತುವೆಯಿಂದ ಕೆಳಗೆ ಬಿದ್ದ ದಂಪತಿ

    ಕಿಸ್ ಮಾಡೋ ಭರದಲ್ಲಿ ಸೇತುವೆಯಿಂದ ಕೆಳಗೆ ಬಿದ್ದ ದಂಪತಿ

    ಲಿಮಾ: ಪ್ರೀತಿಯಲ್ಲಿ ಮುಳುಗಿದ್ದ ದಂಪತಿ ಕಿಸ್ ಮಾಡುವ ತನ್ಮಯತೆಯಲ್ಲಿ 50 ಅಡಿ ಎತ್ತರದ ಸೇತುವೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಪೆರು ನಗರದಲ್ಲಿ ನಡೆದಿದೆ.

    ಎಸ್ಪಿನೋಜ್ (34), ಹೆಕ್ಟರ್ ವಿಡಾಲ್ (36) ಸಾವನ್ನಪ್ಪಿದ ದಂಪತಿಯಾಗಿದ್ದು, ಶನಿವಾರ ತಡರಾತ್ರಿ ದುರ್ಘಟನೆ ನಡೆದಿದೆ. ಟೂರಿಸ್ಟ್ ಗೈಡ್‍ಗಳಾಗಿ ಕೆಲಸ ಮಾಡುವ ದಂಪತಿ ಕಾರ್ಯ ನಿಮಿತ್ತ ಪಟ್ಟಣಕ್ಕೆ ಆಗಮಿಸಿದ್ದರು. ಶನಿವಾರ ಕೆಲಸ ಪೂರ್ಣಗೊಳಿಸಿದ್ದ ದಂಪತಿ ನಗರದ ಬೆಥ್ಲೆಹೆಮ್ ಸೇತುವೆ ಮೇಲೆ ಏಕಾಂತದಲ್ಲಿ ಕಾಲ ಕಳೆಯಲು ನಿರ್ಧರಿಸಿ ನಿಂತಿದ್ದರು.

    ಸೇತುವೆ ಮೇಲೆ ತನ್ಮಯದಿಂದ ಕಿಸ್ ಮಾಡುತ್ತಿದ್ದ ಸಂದರ್ಭದಲ್ಲಿ ಪತ್ನಿ ಎಸ್ಪಿನೋಜ್ ತನ್ನ ಪತಿಯನ್ನು ಹತ್ತಿರಕ್ಕೆ ಎಳೆದುಕೊಂಡಿದ್ದು, ಈ ವೇಳೆ ಬ್ಯಾಲೆನ್ಸ್ ತಪ್ಪಿದ ಕಾರಣ ಇಬ್ಬರು ಸೇತುವೆ ಮೇಲಿಂದ ಕೆಳಗೆ ಉರುಳಿ ಬಿದ್ದಿದ್ದಾರೆ. ಪರಿಣಾಮ ತೀವ್ರಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದರೂ ಎಸ್ಪಿನೋಜ್ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಪತಿ ವಿಡಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರು ಸೇತುವೆ ಮೇಲಿಂದ ಕೆಳಗೆ ಬಿದ್ದ ದೃಶ್ಯಗಳು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

  • ಹೆದ್ದಾರಿಯಿಂದ 330 ಅಡಿಯ ಮಹಾಸಾಗರಕ್ಕೆ ಉರುಳಿತು ಬಸ್, 48 ಮಂದಿ ಸಾವು

    ಹೆದ್ದಾರಿಯಿಂದ 330 ಅಡಿಯ ಮಹಾಸಾಗರಕ್ಕೆ ಉರುಳಿತು ಬಸ್, 48 ಮಂದಿ ಸಾವು

    ಲಿಮಾ: ಬಸ್ಸೊಂದು ರಾಷ್ಟ್ರೀಯ ಹೆದ್ದಾರಿಯಿಂದ ಕೆಳಗುರುಳಿ ಪೆಸಿಫಿಕ್ ಸಾಗರಕ್ಕೆ ಬಿದ್ದ ಪರಿಣಾಮ 48 ಮಂದಿ ಸಾವನ್ನಪ್ಪಿದ್ದು, 6 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಪೆರುವಿನಲ್ಲಿ ಸಂಭವಿಸಿದೆ.

    ಪಸಾಮಾಯೊದ ಲಿಮಾದಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಪ್ಯಾನ್ ಅಮೆರಿಕ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಈ ಭೀಕರ ಅಪಘಾತ ಸಂಭವಿಸಿದೆ. ಸ್ಯಾನ್ ಮಾರ್ಟಿನ್ ಕಂಪೆನಿಗೆ ಸೇರಿ ಬಸ್ ಇದಾಗಿದ್ದು, ಟ್ರ್ಯಾಕ್ಟರ್ ಟ್ರೇಲರ್‍ಗೆ ಡಿಕ್ಕಿಯಾಗಿ 330 ಅಡಿಯ ಮಹಾಸಾಗರಕ್ಕೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶ ಪೆಸಿಫಿಕ್ ಸಾಗರದ ಮೇಲಿದ್ದು, ಡೆವಿಲ್ಸ್ ಕರ್ವ್ ಎಂದೇ ಕರೆಯಲಾಗುತ್ತದೆ.

    ಬಸ್ಸಿನಲ್ಲಿ ಒಟ್ಟು 57 ಮಂದಿ ಪ್ರಯಾಣಿಸುತ್ತಿದ್ದು, ಎಲ್ಲರೂ ಹುವಾವ್ರಾದಿಂದ ಪೆರುವಿನ ರಾಜಧಾನಿ ಲಿಮಾಗೆ ತೆರಳುತ್ತಿದ್ದರು ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದರು.

    ಸಾಗರಕ್ಕೆ ಬಿದ್ದ ರಭಸಕ್ಕೆ 48 ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುಮಾರು 12 ಕ್ಕೂ ಅಧಿಕ ದೇಹಗಳು ಬಸ್‍ನ ಒಳಗಡೆ ಸಿಲುಕಿಗೊಂಡಿತ್ತು. ಅಪಘಾತದಲ್ಲಿ ಬದುಕಿದವರ ರಕ್ಷಣೆಗಾಗಿ 100 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿತ್ತು.