Tag: ಲಿಂಗೈಕ್ಯ

  • ಕುಪ್ಪೂರು ಶ್ರೀ ಲಿಂಗೈಕ್ಯ

    ಕುಪ್ಪೂರು ಶ್ರೀ ಲಿಂಗೈಕ್ಯ

    ನೆಲಮಂಗಲ: ಕುಪ್ಪೂರು ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಉಸಿರಾಟ ಸಮಸ್ಯೆಯಿಂದ ಹೃದಯಾಘಾತವಾಗಿ ನಿಧನರಾಗಿದ್ದಾರೆ.

    ಯತೀಶ್ವರ ಶಿವಾಚಾರ್ಯ ಸ್ವಾಮೀಜಿ (55) ಲಿಂಗೈಕ್ಯರಾಗಿದ್ದಾರೆ. ಸ್ವಾಮೀಜಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿತ್ತು. ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಸ್ವಾಮೀಜಿ ಇಂದು ಕೊನೆಯುಸಿರೆಳದಿದ್ದಾರೆ. ಇದನ್ನೂ ಓದಿ:  ಭೀಕರ ರಸ್ತೆ ಅಪಘಾತ – ಚಾಲಕ ಸೇರಿ 6 ಮಂದಿ ವಿದ್ಯಾರ್ಥಿಗಳು ದುರ್ಮರಣ

    ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗುತ್ತಿತ್ತು. ನೆಲಮಂಗಲದ ಬಳಿ ಅಂಬುಲೆನ್ಸ್‌ನಲ್ಲಿ ಹೋಗುತ್ತಿದ್ದ ವೇಳೆ ಉಸಿರಾಟ ಸಮಸ್ಯೆಯಿಂದ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರು ಮಠ ಸ್ವಾಮೀಜಿ ಲಿಂಗೈಕ್ಯರಾಗಿರುವುದನ್ನು ಮಠದ ಮೂಲ ಖಚಿತಪಡಿಸಿದೆ.

  • ಬಾಗಲಕೋಟೆಗೆ ಆಗಮಿಸಿದ ಮಾತೆ ಮಹಾದೇವಿ ಲಿಂಗೈಕ್ಯ ಶರೀರ

    ಬಾಗಲಕೋಟೆಗೆ ಆಗಮಿಸಿದ ಮಾತೆ ಮಹಾದೇವಿ ಲಿಂಗೈಕ್ಯ ಶರೀರ

    ಬಾಗಲಕೋಟೆ: ಜಗತ್ತಿನ ಪ್ರಥಮ ಮಹಿಳಾ ಜಗದ್ಗುರು ಡಾ. ಮಾತೆ ಮಹಾದೇವಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಲಿಂಗಾಯತ ಧರ್ಮದ ಮತ್ತೊಂದು ಕೊಂಡಿ ಕಳಚಿದಂತಾಗಿದೆ. ರಾತ್ರಿ ವೇಳೆ ಆಗಮಿಸಿದ ಮಾತಾಜಿ ಪಾರ್ಥಿವ ಶರೀರವನ್ನು ಕೂಡಲಸಂಗಮ ಕ್ರಾಸ್ ಬಳಿ ಬರಮಾಡಿಕೊಂಡರು. ಬಸವಣ್ಣನವರ ವಚನಗಳ ಮೂಲಕ ಭಕ್ತಿಯ ಶ್ರದ್ಧಾಂಜಲಿ ಅರ್ಪಿಸಿದರು.

    ಸಂಗಮಕ್ರಾಸ್ ನಿಂದ ಬಸವಣ್ಣನ ವೃತ್ತ ಮೂಲಕ ಬಸವ ಧರ್ಮಪೀಠ ವರೆಗೆ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಅಪಾರ ಭಕ್ತರು ಮಾತಾಜಿ ಲಿಂಗೈಕ್ಯ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ ಮೊಂಬತ್ತಿ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

    ನಂತರ ಬಸವಧರ್ಮ ಪೀಠ ವೇದಿಕೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಯಿತು. ಬಸವಧರ್ಮ ನೂತನ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಸೇರಿದಂತೆ ಅನೇಕ ಸ್ವಾಮೀಜಿಗಳು ಮಾತಾಜಿ ಶರೀರಕ್ಕೆ ಪೂಜೆ ಸಲ್ಲಿಸಿದರು.

    ರಾತ್ರಿಯಾದರೂ ಅಪಾರ ಭಕ್ತರು ತಾಯಿ ದರ್ಶನ ಪಡೆದು ಕಣ್ಣೀರಿಟ್ಟರು. ಮಾತೆ ಸತ್ಯಾದೇವಿ, ಮಹಾದೇಶ್ವರ ಸ್ವಾಮೀಜಿ, ಬಸವಜಯ ಮೃತ್ಯುಂಜಯ ಸ್ವಾಮೀಜಿ, ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ಹಾಗೂ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು, ಭಕ್ತ ಸಮೂಹ ಶೋಕ ಸಾಗರದಲ್ಲಿ ಮೊಳಗಿತ್ತು. ರಾತ್ರಿ ಇಡೀ ಶರಣರ ವಚನಗಳ ಭಜನೆ ಮಾಡಲಾಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾತೆ ಮಹಾದೇವಿ ಲಿಂಗೈಕ್ಯ – 30 ವರ್ಷದ ಹಿಂದೆಯೇ ನಿರ್ಮಾಣವಾಗಿದೆ ಕಮಲ ಆಕಾರದ ಗದ್ದುಗೆ

    ಮಾತೆ ಮಹಾದೇವಿ ಲಿಂಗೈಕ್ಯ – 30 ವರ್ಷದ ಹಿಂದೆಯೇ ನಿರ್ಮಾಣವಾಗಿದೆ ಕಮಲ ಆಕಾರದ ಗದ್ದುಗೆ

    ಬಾಗಲಕೋಟೆ: ಲಿಂಗೈಕ್ಯರಾಗಿರುವ ಮಾತೆ ಮಹಾದೇವಿ ಅವರನ್ನು ಈಗಾಗಲೇ ನಿರ್ಮಾಣವಾಗಿರುವ ಕಮಲದ ಆಕಾರದ ಗದ್ದುಗೆಯಲ್ಲಿ ಶನಿವಾರ ಸಮಾಧಿ ಮಾಡಲಾಗುತ್ತದೆ.

    ಹುನಗುಂದ ತಾಲೂಕಿನ ಕೂಡಲಸಂಗಮದ ಅನುಭವಮಂಟಪದ ಬಳಿ 30 ವರ್ಷದ ಹಿಂದೆಯೇ ಈ ಸಮಾಧಿ ನಿರ್ಮಾಣವಾಗಿದೆ. ಈ ಹಿಂದೆ ಸಮಾಧಿ ಸ್ಥಳದಲ್ಲಿ ಲಿಂಗ ಆಕಾರದೊಳಗೆ ಅಕ್ಕಮಹಾದೇವಿ ಮೂರ್ತಿಯನ್ನು ಇಡಲಾಗಿತ್ತು. ಈಗ ಅಕ್ಕಮಹಾದೇವಿ ಮೂರ್ತಿ ತೆಗೆದು ಮಾತೆ ಮಹಾದೇವಿ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಗುವುದು ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ:ಲಿಂಗಾಯತ ಧರ್ಮದ ಹೋರಾಟಗಾರ್ತಿ ಮಾತೆ ಮಹಾದೇವಿ ಲಿಂಗೈಕ್ಯ

    ಕೂಡಲಸಂಗಮಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿ ಆರ್ ರಾಮಚಂದ್ರನ್, ಎಸ್‍ಪಿ ಸಿಬಿ ರಿಷ್ಯಂತ್ ಭೇಟಿ ನೀಡಿದ್ದು, ಸಮಾಧಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಹಾಗೆಯೇ ಅಂತಿಮ ದರ್ಶನದ ಸಮಯದಲ್ಲಿ ಬೇಕಾಗುವ ಭದ್ರತೆ ಕುರಿತು ಮಠದ ಸಿಬ್ಬಂದಿ ಜೊತೆ ಚರ್ಚೆ ನಡೆಸಿದ್ದಾರೆ.

    ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಮಾತೆ ಮಹಾದೇವಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 3.30ಕ್ಕೆ ಲಿಂಗೈಕ್ಯರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೋಂಟದಾರ್ಯ ಶ್ರೀ ಅಂತಿಮ ದರ್ಶನ- ಸಂಜೆ 4 ಗಂಟೆಗೆ ಕ್ರಾಂತಿಯೋಗಿಯ ಅಂತ್ಯಕ್ರಿಯೆ

    ತೋಂಟದಾರ್ಯ ಶ್ರೀ ಅಂತಿಮ ದರ್ಶನ- ಸಂಜೆ 4 ಗಂಟೆಗೆ ಕ್ರಾಂತಿಯೋಗಿಯ ಅಂತ್ಯಕ್ರಿಯೆ

    ಗದಗ: ಲಿಂಗಾಯತ ಧರ್ಮದ ಪ್ರಮುಖ ರೂವಾರಿ, ಸಮಾಜ ಸುಧಾರಕ, ಗದಗಿನ ತೋಂಟದಾರ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ನಿನ್ನೆ ಬೆಳಗ್ಗೆ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದಾರೆ. ಶ್ರೀಗಳ ಅಗಲಿಕೆಯಿಂದ ಅವರ ಭಕ್ತರು ಶೋಕಸಾಗರದಲ್ಲಿ ಮುಳುಗಿದ್ದು, ಅಂತಿಮ ದರ್ಶನ ಪಡೆಯಲು ಸಾಗರೋಪಾದಿಯಲ್ಲಿ ಮಠದತ್ತ ಬರ್ತಿದ್ದಾರೆ.

    ಶನಿವಾರ ರಾತ್ರಿವರೆಗೂ ಗದುಗಿನ ತೋಂಟದಾರ್ಯ ಮಠದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಪಾರ್ಥಿವ ಶರೀರವನ್ನು ಡಂಬಳದ ತೋಂಟದಾರ್ಯ ಮೂಲ ಮಠಕ್ಕೆ ರವಾನಿಸಿ, ಬೆಳಗ್ಗೆ 4 ಗಂಟೆವರೆಗೂ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತ್ರ ಪುನಃ ಗದುಗಿನ ತೋಂಟದಾರ್ಯ ಮಠಕ್ಕೆ ತರಲಾಯ್ತು. ಅಲ್ಲದೆ ಬೆಳಗ್ಗೆ 11 ಗಂಟೆವರೆಗೆ ಮಠದ ಆವರಣದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.


    ಇಂದು ಬೆಳಗ್ಗೆ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಶ್ರೀಗಳ ಅಂತಿಮ ದರ್ಶನ ಪಡೆಯಲಿದ್ದಾರೆ. ಇದಾದ ಬಳಿಕ 11 ಘಂಟೆಯ ನಂತರ ಗದಗ ಬೆಟಗೇರಿ ಅವಳಿ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ, ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ. ಗದಗ ತೋಂಟದಾರ್ಯ ಮಠಕ್ಕೆ ಪಿಠಾಧಿಪತಿ ಇಲ್ಲದ ಕಾರಣ ಶಿವಮೊಗ್ಗದ ಆನಂದಪುರ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಜಿ ಅಂತಿಮ ವಿಧಿವಿಧಾನ ನೆರವೇರಿಸಲಿದ್ದಾರೆ ಅಂತ ಮುಂಡರಗಿ ತೋಂಟದಾರ್ಯ ಮಠಸ ನಿಜಗುಣಾನಂದ ಸ್ವಾಮಿಜಿ ತಿಳಿಸಿದ್ದಾರೆ.

    ಶ್ರೀಗಳ ನಿಧನದಿಂದ ಗದಗದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಬಹುತೇಕ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿವೆ. ನಿನ್ನೆ ಮತ್ತು ಇಂದು ಚಿತ್ರಪ್ರದರ್ಶನಗಳನ್ನೂ ರದ್ದು ಮಾಡಲಾಗಿದೆ. ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಗದಗ, ಹಾವೇರಿ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ಧಾರವಾಡ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=E_XsKW_w2yA

  • ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ ಲಿಂಗೈಕ್ಯ

    ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ ಲಿಂಗೈಕ್ಯ

    ಗದಗ: ತೋಂಟದಾರ್ಯ ಮಠದ ಸಿದ್ದಲಿಂಗ ಸ್ವಾಮೀಜಿ ಶನಿವಾರ ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

    ಸಿದ್ದಲಿಂಗ ಸ್ವಾಮೀಜಿ ಅವರಿಗೆ ಇಂದು ಬೆಳಗಿನ ಜಾವ ಹೃದಯಘಾತ ಕಾಣಿಸಿಕೊಂಡಿದೆ. ಬಳಿಕ ಅವರನ್ನು ಜಿಲ್ಲೆಯ ಚೀರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸ್ವಾಮೀಜಿ ನಿಧನರಾಗಿದ್ದಾರೆ.

    ಇಂದು ಬೆಳಗ್ಗೆ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಸ್ವಾಮೀಜಿಗೆ ಹೃದಯಘಾತವಾಗಿದೆ. ಈ ವೇಳೆ ಪೂಜೆಗೆಂದು ಸೇವಕರು ಎಬ್ಬಿಸಿದ್ದಾರೆ. ಆಗ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕೋಣೆಯ ಒಳಗೆ ಹೋಗಿ ನೋಡಿದಾಗ ಅವರ ಆರೋಗ್ಯ ಸ್ಥಿತಿ ಸರಿಯಿರಲಿಲ್ಲ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

    ಇತ್ತೀಚೆಗೆ ಕಳೆದ ಆರು ತಿಂಗಳಿಂದ ಕಾಲು ಮತ್ತು ಇತರೆ ನೋವುಗಳಿಂದ ಸ್ವಾಮೀಜಿ ಬಳಲುತ್ತಿದ್ದರು. ಬಳಿಕ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆಗ ಯಾವುದೇ ರೀತಿ ಕಾಯಿಲೆ ಅವರಿಗೆ ಇರಲಿಲ್ಲ. ಆದರೆ ಇಂದು ಹೃದಯಘಾತವಾಗಿ ಮೃತಪಟ್ಟಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ.

    ಶುಕ್ರವಾರ ರಾತ್ರಿ ಪೂಜೆ ಮಾಡಿ ವಿಶ್ರಾಂತಿ ಪಡೆದುಕೊಂಡಿದ್ದರು. ಮುಂಜಾನೆ 6 ಗಂಟೆಗೆ ಏಳುತ್ತಿದ್ದರು. ಆದರೆ ಶನಿವಾರ ಬೆಳಗ್ಗೆ 7.30ರ ಸಮಯವಾದರೂ ನಿದ್ದೆಯಿಂದ ಎದ್ದಿರಲಿಲ್ಲ.. ನಾವು ಕಿಟಿಕಿಯಿಂದ ನೋಡಿದಾಗ ಕುಳಿತಿದ್ದರು. ಮಠದಲ್ಲಿಯೇ ಕೋಣೆಯಲ್ಲಿ ಕುಳಿತ ಸ್ಥಳದಲ್ಲಿ ಲೋ ಬಿಪಿಯಾಗಿ ಹೃದಯಾಘಾತವಾಗಿ ಮೃತ ಪಟ್ಟಿದ್ದಾರೆ ಎಂದು ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪಟ್ಟಣ್ಣಶೆಟ್ಟರ್ ಹೇಳಿದ್ದಾರೆ.

    ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ವಿಚಾರದಲ್ಲಿ ಸಿದ್ದಲಿಂಗ ಸ್ವಾಮೀಜಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾರ್ ಪಲ್ಟಿ: ಮುಧೋಳ ಗವಿಮಠದ ಜಗದ್ಗುರು ಮೃತ್ಯುಂಜಯ ಸ್ವಾಮೀಜಿ ಲಿಂಗೈಕ್ಯ

    ಕಾರ್ ಪಲ್ಟಿ: ಮುಧೋಳ ಗವಿಮಠದ ಜಗದ್ಗುರು ಮೃತ್ಯುಂಜಯ ಸ್ವಾಮೀಜಿ ಲಿಂಗೈಕ್ಯ

    ಬಾಗಲಕೋಟೆ: ಕಾರ್ ಪಲ್ಟಿಯಾಗಿ ಮುಧೋಳ ಗವಿಮಠದ ಜಗದ್ಗುರು ಮೃತ್ಯುಂಜಯ ಸ್ವಾಮೀಜಿ(65) ಲಿಂಗೈಕ್ಯರಾದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

    ಸ್ವಾಮಿಜಿ ಹುಬ್ಬಳ್ಳಿಯಿಂದ ಗವಿಮಠಕ್ಕೆ ತೆರಳುವಾಗ ಮುಧೋಳ ಹಾಗೂ ಲೋಕಾಪುರ ಮಧ್ಯೆ ಚಾಲಕ ಅನ್ವೇಶ್ ನಿದ್ದೆಗೆ ಜಾರಿದ್ದ ಕಾರಣ ಕಾರು ಎರಡು ಬಾರಿ ಪಲ್ಟಿಯಾಗಿ ಬಿದ್ದು ಈ ಅವಘಡ ಸಂಭವಿಸಿದೆ.

    ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಅಪಘಾತದಲ್ಲಿ ಸ್ವಾಮೀಜಿ ಅವರಿಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸ್ವಾಮೀಜಿ ನಿಧನರಾಗಿದ್ದಾರೆ.

    ಚಾಲಕ ಅನ್ವೇಶ್ ಗೆ ಕೂಡ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಭೇಟಿ ನೀಡಿ ಭಕ್ತರಿಗೆ ಸಾಂತ್ವಾನ ಹೇಳಿದ್ರು. ಸದ್ಯ ಸ್ವಾಮೀಜಿಯ ಪಾರ್ಥಿವ ಶರೀರವನ್ನ ಮುಧೋಳ ನಗರಕ್ಕೆ ರವಾನೆ ಮಾಡಲಾಗ್ತಿದೆ ಅಂತಾ ಭಕ್ತರಾದ ಬಸವರಾಜ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.