Tag: ಲಿಂಗೇಶ್

  • ನನಗೆ ಕೆಆರ್ ನಗರದ ಸಂತ್ರಸ್ತೆ ಗೊತ್ತಿಲ್ಲ, ದೂರನ್ನೂ ಕೊಡಿಸಿಲ್ಲ: ಶಾಸಕ ರವಿಶಂಕರ್

    ನನಗೆ ಕೆಆರ್ ನಗರದ ಸಂತ್ರಸ್ತೆ ಗೊತ್ತಿಲ್ಲ, ದೂರನ್ನೂ ಕೊಡಿಸಿಲ್ಲ: ಶಾಸಕ ರವಿಶಂಕರ್

    ಮೈಸೂರು: ನನಗೆ ಕೆಆರ್ ನಗರದ ಸಂತ್ರಸ್ತೆ ಗೊತ್ತಿಲ್ಲ. ಆಕೆಯ ಜೊತೆ ನಾನು ಮಾತನಾಡಿಲ್ಲ. ದೂರನ್ನೂ ಕೊಡಿಸಿಲ್ಲ ಎಂದು ಕೆಆರ್ ನಗರದ (KR Nagar) ಶಾಸಕ ರವಿಶಂಕರ್ (D Ravishankar) ಅವರು ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್ ಆರೋಪವನ್ನು ಅಲ್ಲಗೆಳೆದಿದ್ದಾರೆ.

    ರೇವಣ್ಣ (HD Revanna) ಬಂಧನದಲ್ಲಿ ಕೆಆರ್ ನಗರ ಶಾಸಕ ರವಿಶಂಕರ್ ಕೈವಾಡವಿದೆ ಎಂಬ ಲಿಂಗೇಶ್ ಆರೋಪದ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಕಂಪ್ಲೆಂಟ್ ಕೊಟ್ಟಿದ್ದು ನಾನು ಎಂಬ ಆರೋಪ ಸತ್ಯಕ್ಕೆ ದೂರವಾದ ಮಾತು. ಇದರಲ್ಲಿ ಯಾರೋ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡುವ ಸಲುವಾಗಿ ಪತ್ರಿಕಾಗೋಷ್ಠಿ ಕರೆದಿದ್ದೇನೆ. ನನ್ನ ಹೆಸರನ್ನು ತಂದಿದ್ದಕ್ಕೆ ನಾನು ಮಾನನಷ್ಟ ಮೊಕದ್ದಮೆಯನ್ನು ಹಾಕುತ್ತೇನೆ ಎಂದರು. ಇದನ್ನೂ ಓದಿ: ದೆಹಲಿ ಬಳಿಕ ಅಹಮದಾಬಾದ್ ಶಾಲೆಗಳಿಗೂ ಬಾಂಬ್ ಬೆದರಿಕೆ

    ಕೆಆರ್ ನಗರ ಠಾಣೆಯಲ್ಲಿ ದೂರು ದಾಖಲಾಗಿರುವ ಕಾರಣ ನನ್ನ ಹೆಸರನ್ನು ಎಳೆಯುತ್ತಿದ್ದಾರೆ. ಮಹಿಳೆ ಮತ್ತು ಆಕೆಯ ಮಗ ನನ್ನ ಸಂಪರ್ಕದಲ್ಲಿಲ್ಲ. ದೂರು ಕೊಡುವ ಸಂದರ್ಭದಲ್ಲಿ ನಾನು ಚಿಕ್ಕೋಡಿಯ ನಿಪ್ಪಾಣಿಯಲ್ಲಿದ್ದೆ. ಸುಮ್ಮನೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿ ನನ್ನ ಹೆಸರು ಹಾಳು ಮಾಡುವ ನಿಟ್ಟಿನಲ್ಲಿ ಈ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ನಾನು ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಶಾಸಕ ರವಿಶಂಕರ್‌ ಷಡ್ಯಂತ್ರದಿಂದ ರೇವಣ್ಣ ಅರೆಸ್ಟ್‌: ಹಾಸನ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್‌

    ಲೋಕಸಭಾ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ವತಿಯಿಂದ ನಮಗೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ದರು. ನಾನು ಇಲ್ಲಿ ಚುನಾವಣೆ ಮುಗಿದ ಮೇಲೆ ಅಲ್ಲಿಗೆ ಹೋಗಿದ್ದೆ. ನಾನು ಅಲ್ಲಿ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೆ. ಇದಕ್ಕೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ಜೊತೆಗೆ ಆ ಹುಡುಗನ ವಿಚಾರ ಅಥವಾ ಅವರ ತಾಯಿಯ ವಿಚಾರ ಯಾವುದೂ ನನ್ನ ಗಮನಕ್ಕೆ ಬಂದಿಲ್ಲ, ನನ್ನ ಸಂಪರ್ಕದಲ್ಲೂ ಅವರಿಲ್ಲ. ನನಗೆ ಅದರ ಬಗ್ಗೆ ಅರಿವೂ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ, ಎನ್‌ಡಿಎ ನಾಯಕರಿಂದ ಹೆಣ್ಣುಮಕ್ಕಳ ರಕ್ಷಣೆ ಮಾಡುವ ಪರಿಸ್ಥಿತಿ ಬಂದಿದೆ: ಬಿ.ವಿ ಶ್ರೀನಿವಾಸ್

  • ಇಬ್ಬರು ಮಾರ್ವಾಡಿಗಳ ಕೈಯಲ್ಲಿ ಸಿಕ್ಕಿ ದೇಶ ನಲುಗಿ ಹೋಗಿದೆ – ಲಿಂಗೇಶ್

    ಇಬ್ಬರು ಮಾರ್ವಾಡಿಗಳ ಕೈಯಲ್ಲಿ ಸಿಕ್ಕಿ ದೇಶ ನಲುಗಿ ಹೋಗಿದೆ – ಲಿಂಗೇಶ್

    ಹಾಸನ: ಗುಜರಾತಿನ ಇಬ್ಬರು ಮಾರ್ವಾಡಿಗಳ ಕೈಯಲ್ಲಿ ಸಿಕ್ಕಿ ದೇಶ ನಲುಗಿ ಹೋಗಿದೆ ಎಂದು ಶಾಸಕ ಲಿಂಗೇಶ್ ಕಿಡಿಕಾರಿದ್ದಾರೆ.

    ಹಾಸನದ ಬೇಲೂರಿನಲ್ಲಿ ಮಾತನಾಡಿದ ಲಿಂಗೇಶ್, ಅಪರೇಷನ್ ಕಮಲದಲ್ಲಿ ತಮಗೆ ಐದು ಕೋಟಿ ಅಲ್ಲ ಐವತ್ತು ಕೋಟಿ ರೂಪಾಯಿ ಆಮಿಷ ಬಂದಿದ್ದು ನಿಜ. ಜೆಡಿಎಸ್ ರಾಜ್ಯಾಧ್ಯಕ್ಷರಿಗೂ ಸಹ ಅವರ ಪತ್ನಿ ಮುಖಾಂತರ ಆಮಿಷ ಒಡ್ಡಲಾಗಿತ್ತು. ಅಷ್ಟೇ ಅಲ್ಲ ಹೆಚ್.ಡಿ ರೇವಣ್ಣನವರಿಗೂ ಸಹ ಉಪ ಮುಖ್ಯಮಂತ್ರಿ ಸ್ಥಾನದ ಆಮಿಷ ನೀಡಲಾಗಿತ್ತು ಎಂದು ಹೊಸ ಬಾಂಬ್ ಸಿಡಿಸಿದರು. ಈ ಸಂದರ್ಭದಲ್ಲಿ ರೇವಣ್ಣ ಕೂಡ ಸಭೆಯಲ್ಲಿ ಹಾಜರಿದ್ದರು.

    ಇಷ್ಟೆಲ್ಲ ಆಮಿಷಗಳನ್ನು ಒಡ್ಡಿದ ಸಾವಿರಾರು ಕೋಟಿ ಹಣದ ಮೂಲದ ಬಗ್ಗೆ ಬಿಜೆಪಿ ವಿರುದ್ಧ ಯಾವುದೇ ತನಿಖೆ ಮಾಡಲಿಲ್ಲ. ಆದರೆ ಕೇವಲ ಎಂಟು ಕೋಟಿಗಾಗಿ ಕಾಂಗ್ರೆಸ್ ನಾಯಕ ಡಿಕೆಶಿಯನ್ನು ಜೈಲಿಗೆ ಕಳುಹಿಸಿದ್ದಾರೆ. ಉತ್ತರ ಭಾರತದ ದಬ್ಬಾಳಿಕೆಯಿಂದ ದಕ್ಷಿಣ ಭಾರತೀಯರು ನಲುಗುವಂತಾಗಿದೆ. ಪಿವಿ ನರಸಿಂಹರಾವ್ ಮತ್ತು ಹೆಚ್.ಡಿ.ದೇವೇಗೌಡರು ಬಿಟ್ಟರೆ ಇನ್ಯಾರು ಪ್ರಧಾನಿಯಾಗಲು ಸಾಧ್ಯವಾಗಿಲ್ಲ ಎಂದು ಹೇಳಿದರು.

    ಇವರ ದಬ್ಬಾಳಿಕಯಿಂದ ನಾವು ಹೊರಬರಬೇಕಿದೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಅಪಾರ ನಷ್ಟವಾಗಿದೆ. ರಾಜ್ಯದಿಂದ ಇಪ್ಪತ್ತೈದು ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದರೆ ಬಿಜೆಪಿಯವರು ಒಂದು ಬಿಡಿಗಾಸು ಕೂಡ ನೀಡಿಲ್ಲ ಎಂದು ಹರಿಹಾಯ್ದ ಲಿಂಗೇಶ್ ಯಾವುದೇ ಕಾರಣಕ್ಕೂ ತಾವು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.