Tag: ಲಿಂಗಾಯತ ಪ್ರತ್ಯೇಕ ಧರ್ಮ

  • ಈಗ ಲಿಂಗಾಯತ ಧರ್ಮ ಹೋರಾಟ ಮಾಡಿದ್ರೆ ತಪ್ಪಾಗಿ ಅರ್ಥೈಸುತ್ತಾರೆ: ಎಂಬಿ ಪಾಟೀಲ್

    ಈಗ ಲಿಂಗಾಯತ ಧರ್ಮ ಹೋರಾಟ ಮಾಡಿದ್ರೆ ತಪ್ಪಾಗಿ ಅರ್ಥೈಸುತ್ತಾರೆ: ಎಂಬಿ ಪಾಟೀಲ್

    – ಡಿ.22ಕ್ಕೆ ಸಂಪುಟ ವಿಸ್ತರಣೆ ಖಚಿತ
    – ಲೋಕಸಭಾ ಚುನಾವಣೆಯ ನಂತರ ನಿರ್ಣಾಯಕ ಹೋರಾಟ

    ವಿಜಯಪುರ: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ವಿಚಾರವನ್ನು ಲೋಕಸಭೆ ಚುನಾವಣೆವರೆಗೆ ಶಾಂತವಾಗಿರಲು ನಿರ್ಧಾರ ಮಾಡಿದ್ದು, ಈಗ ಹೋರಾಟ ಮಾಡಿದರೆ ತಪ್ಪಾಗಿ ಅರ್ಥೈಸಲಾಗುತ್ತದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಬಿ ಪಾಟೀಲ್ ಅವರು, ಕೇಂದ್ರ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವವನ್ನು ತಿರಸ್ಕರಿಸಿರುವುದು ಸಮಂಜಸವಲ್ಲ. ಈ ಕುರಿತು ಲೋಕಸಭಾ ಚುನಾವಣೆಯ ಬಳಿಕ ನಿರ್ಣಾಯಕ ಹೋರಾಟ ಮಾಡುತ್ತೇವೆ. ಈಗ ಹೋರಾಟ ಮಾಡಿದರೆ ಅದಕ್ಕೆ ಬೇರೆ ರೀತಿಯ ಅರ್ಥ ಕೊಡುತ್ತಾರೆ. ಈ ಹಿನ್ನೆಲೆ ಲೋಕಸಭೆ ಚುನಾವಣೆ ಬಳಿಕ ನಿರ್ಣಾಯಕ ಹೋರಾಟ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

    ಇದೇ ವೇಳೆ ಮಾಧ್ಯಮಗಳ ವಿರುದ್ಧ ಹರಿಹಾಯ್ದ ಎಂಬಿ ಪಾಟೀಲ್, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಲಿಂಗಾಯತ ಪ್ರತ್ಯೇಕ ಧರ್ಮದ ಹೇಳಿಕೆಯನ್ನು ತಿರುಚಿವೆ ಎಂದು ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದರು.

    ಡಿ.22 ಸಂಪುಟ: ಸಚಿವ ಸಂಪುಟ ಡಿ.22 ರಂದು ವಿಸ್ತರಣೆಯಾಗಲಿದೆ. ಈಗಾಗಲೇ ಸಮನ್ವಯ ಸಮಿತಿ ಸಭೆಯಲ್ಲಿ ಈ ಕುರಿತು ನಿರ್ಧಾರ ಮಾಡಲಾಗಿದೆ. ಸಂಪುಟ ವಿಸ್ತರಣೆ ವೇಳೆ ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದೇನೆ. ಈ ಕುರಿತು ಅಸಮತೋಲನದ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದೇವೆ. ಅಲ್ಲದೇ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೂ ಕೂಡ ಮನವರಿಕೆಯಾಗಿದೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಅಧಿಕಾರ ಪೂರೈಸಲಿದ್ದು, ನಾವು ಬಸವ ಧರ್ಮದವರು, ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನೋಡುವವರಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ಸಚಿವ ಡಿಕೆಶಿ ಕ್ಷಮೆಯಾಚಿಸಿದ್ದು ದಡ್ಡತನ: ರಮೇಶ್ ಜಿಗಜಿಣಗಿ

    ಸಚಿವ ಡಿಕೆಶಿ ಕ್ಷಮೆಯಾಚಿಸಿದ್ದು ದಡ್ಡತನ: ರಮೇಶ್ ಜಿಗಜಿಣಗಿ

    ವಿಜಯಪುರ: ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ವಿಚಾರವಾಗಿ ಈ ಸಂದರ್ಭದಲ್ಲಿ ಜಲಸಂಪ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ಕ್ಷಮೆ ಯಾಚಿಸಿದ್ದು ಅವರ ದಡ್ಡತನ ಎಂದು ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಹೇಳಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಇಷ್ಟು ದಿನ ಡಿಕೆ ಶಿವಕುಮಾರ್ ಅವರು ಮಲಗಿದ್ರಾ? ಈ ಸಂದರ್ಭದಲ್ಲಿ ಏಕೆ ಕ್ಷಮೆ ಕೇಳಬೇಕು? ಎಲ್ಲದಕ್ಕೂ ಕಾರಣ ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆ ಅಷ್ಟೇ. ಜನರ ಕರುಣೆ ಪಡೆಯಲು ಡಿಕೆ ಶಿವಕುಮಾರ್ ಈ ಹೇಳಿಕೆ ನೀಡಿದ್ದಾರೆ. ಆದರೆ ಇದರಿಂದ ಏನು ಪ್ರಯೋಜನ ಆಗುವುದಿಲ್ಲ ಎಂದು ತಿಳಿಸಿದರು.

    ಧರ್ಮ ಇಬ್ಭಾಗ ಮಾಡುವ ಕುರಿತ ಪ್ರಯತ್ನದ ಬಗ್ಗೆ ಜನರು ಈಗಾಗಲೇ ಒಂದು ತೀರ್ಮಾನ ಮಾಡಿದ್ದಾರೆ. ಆದರೆ ಇವರು ಜನರಿಗೆ ಒಂದು ತಪ್ಪು ಹಾದಿ ಹಿಡಿಸಲು ಇದೊಂದು ಇದು ಒಂದು ದೊಡ್ಡ ನಾಟಕ. ಧರ್ಮದ ವಿಚಾರದಲ್ಲಿ ಎಂದು ರಾಜಕಾರಣಿಗಳು ಕೈ ಹಾಕಬಾರದು ಎಂದು ಕಿವಿ ಮಾತು ಹೇಳಿದರು. ಇದನ್ನೂ ಓದಿ: ಶಿವಕುಮಾರ್ Vs ಎಂಬಿ ಪಾಟೀಲ್ – ಕಾಂಗ್ರೆಸ್‍ನಲ್ಲಿ ಮತ್ತೆ ಧರ್ಮ ಯುದ್ಧ ಶುರು

    ಇದೇ ವೇಳೆ ಬಳ್ಳಾರಿ ಉಪಚುನಾವಣೆಯ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಬಳ್ಳಾರಿ ಚುನಾವಣೆಯಲ್ಲಿ ನನಗೂ ಉಸ್ತುವಾರಿ ಹಾಕಿದ್ದಾರೆ. ನಾನು ಹಲವು ಬಾರಿ ಅಲ್ಲಿಗೆ ಭೇಟಿ ನೀಡಿದ್ದೇನೆ. ಚುಣಾವಣೆಯ ಕಾರ್ಯತಂತ್ರದ ಬಗ್ಗೆಯೂ ಎರಡು ಬಾರಿ ಪಕ್ಷದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ನಮ್ಮ ಪಕ್ಷದ ಅಭ್ಯರ್ಥಿ ಶಾಂತಕ್ಕ ಅವರು 1 ಲಕ್ಷ ಮತಗಳ ಅಂತರದಲ್ಲಿ ಗೆಲುವು ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನು ಓದಿ : ನಾವು ತಪ್ಪು ಮಾಡಿದ್ದೇವೆ, ನನ್ನ ಹೇಳಿಕೆಗೆ ಈಗಲೂ ಬದ್ಧ: ಡಿಕೆ ಶಿವಕುಮಾರ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತಪ್ಪೊಪ್ಪಿಕೊಂಡ ಡಿಕೆಶಿ ಹೇಳಿಕೆ ಸ್ವಾಗತಾರ್ಹ: ಶ್ರೀಶೈಲ ಜಗದ್ಗುರು

    ತಪ್ಪೊಪ್ಪಿಕೊಂಡ ಡಿಕೆಶಿ ಹೇಳಿಕೆ ಸ್ವಾಗತಾರ್ಹ: ಶ್ರೀಶೈಲ ಜಗದ್ಗುರು

    ಬೆಳಗಾವಿ: ಲಿಂಗಾಯತ ಧರ್ಮ ಹೋರಾಟ ಮಾಡಿದ್ದು ತಪ್ಪು ಎಂದು ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿಕೆ ನೀಡಿರುವುದು ಸ್ವಾಗತಾರ್ಹ ಎಂದು ಪಂಚ ಪೀಠದ ಶ್ರೀಶೈಲ ಜಗದ್ಗುರು ಶ್ರೀ ಹೇಳಿದ್ದಾರೆ.

    ಹುಕ್ಕೇರಿ ಪಟ್ಟಣದ ಹಿರೇಮಠದ ದಸರಾ ಉತ್ಸವದಲ್ಲಿ ಮಾತನಾಡಿದ ಶ್ರೀಗಳು, ಧರ್ಮವನ್ನ ಇಬ್ಭಾಗ ಮಾಡುವ ಪ್ರಯತ್ನ ಹಿಂದಿನ ದಿನಮಾನಗಳಲ್ಲಿ ಒಂದು ಪಕ್ಷ ಮಾಡಿತ್ತು. ಆದರೆ ಇಂದು ಆ ತಪ್ಪನ್ನ ಒಪ್ಪಿಕೊಂಡಿರುವುದು ಸ್ವಾಗತಾರ್ಹ. ವೀರಶೈವ ಲಿಂಗಾಯತ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದರೆ ಕೆಟ್ಟ ಪ್ರತಿಫಲ ಅನುಭವಿಸುತ್ತೇವೆ ಎನ್ನುವ ಸಂದೇಶ ಅವರಿಗೆ ಸಿಕ್ಕದೆ ಎಂದು ತಿಳಿಸಿದರು.

    ಸಚಿವ ಡಿಕೆ ಶಿವಕುಮಾರ್ ಅವರು ನಮ್ಮಿಂದ ತಪ್ಪಾಗಿದೆ ಎಂದು ಹೇಳಿದ್ದಾರೆ. ಈಗಲಾದರು ಅವರಿಗೆ ತಪ್ಪು ಅರ್ಥವಾಗಿದ್ದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಧರ್ಮದ ವಿಷಯಕ್ಕೆ ಕೈ ಹಾಕಬಾರದು. ಧರ್ಮ ಒಡೆಯಲು ಸಿದ್ದರಾಮಯ್ಯ ಮುಂದಾದಾಗ ಧರ್ಮ ಒಡೆಯಬೇಡಿ ಎಂದು ತಿಳಿಸಿ ಹೇಳಿದರೂ ಹಠ ತೊಟ್ಟು ಧರ್ಮ ಒಡೆಯುವ ಕಾರ್ಯಕ್ಕೆ ಮುಂದಾದರು. ಇಂದು ಅದರ ಕೆಟ್ಟ ಪ್ರತಿಫಲವನ್ನ ಸಿದ್ದರಾಮಯ್ಯ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

    ಕತ್ತಿ ತಿರುಗೇಟು: ಇದೇ ವೇಳೆ ಮಾತನಾಡಿದ ಬಿಜೆಪಿ ಶಾಸಕ ಉಮೇಶ್ ಕತ್ತಿ ಡಿಕೆ ಶಿವುಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದು, ಡಿಕೆ ಶಿವುಕುಮಾರ್ ಒಕ್ಕಲಿಗನೂ ಅಲ್ಲ, ಲಿಂಗಾಯತನೂ ಅಲ್ಲ. ಒಬ್ಬ ಒಳ್ಳೆಯ ರಾಜಕಾರಣಿ. ಅವರ ಬಾಯಲ್ಲಿ ಯಾವಾಗ ಏನು ಬರುತ್ತೆ ಏನೋ ತಿಳಿಯುತ್ತೆ ಹಾಗೆ ರಾಜಕಾರಣ ಮಾಡುತ್ತಾರೆ. ಕಾಂಗ್ರೆಸಿಗರು ವೀರಶೈವ ಲಿಂಗಾಯತ ಮಹಾಸಭಾದ ಕ್ಷಮೆ ಕೇಳಿ ಬಳಿಕ ಮಾತನಾಡಬೇಕು. ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ಧರ್ಮದ ವಿಷಯದಲ್ಲಿ ಕೈ ಹಾಕಬಾರದು ಎಂದು ಅವರು ಕಿವಿಮಾತು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲಿಂಗಾಯತ ಧರ್ಮದ ಬಗ್ಗೆ ಪ್ರಶ್ನೆ: ಸಿಎಂ ಕೈಗೆ ಮೈಕ್ ಕೊಟ್ಟ ರಾಹುಲ್ ಗಾಂಧಿ

    ಲಿಂಗಾಯತ ಧರ್ಮದ ಬಗ್ಗೆ ಪ್ರಶ್ನೆ: ಸಿಎಂ ಕೈಗೆ ಮೈಕ್ ಕೊಟ್ಟ ರಾಹುಲ್ ಗಾಂಧಿ

    ದಾವಣಗೆರೆ: ಮಧ್ಯ ಕರ್ನಾಟಕದ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮವೊಂದಲ್ಲಿ ಮಹಿಳೆಯೊಬ್ಬರು ಲಿಂಗಾಯತ ಧರ್ಮದ ಕುರಿತ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೇ ಸಿಎಂ ಸಿದ್ದರಾಮಯ್ಯ ಅವರಿಗೆ ಮೈಕ್ ನೀಡಿದ ಘಟನೆ ನಡೆದಿದೆ.

    ದಾವಣಗೆರೆ ಜಿಲ್ಲೆಯಲ್ಲಿ ಎರಡನೇ ದಿನ ಪ್ರವಾಸ ಕೈಗೊಂಡ ರಾಹುಲ್ ಗಾಂಧಿ, ಬಿಐಇಟಿ ಸಭಾಂಗಣ ದಲ್ಲಿ ಏರ್ಪಡಿಸಿದ್ದ ವರ್ತಕರ ಜೊತೆಗಿನ ಜಿಎಸ್‍ಟಿ ಕುರಿತ ಸಂವಾದದಲ್ಲಿ ಪಾಲ್ಗೊಂಡಿದ್ದರು. ಸಂವಾದದಲ್ಲಿ ವರ್ತಕರು ಕೇಳುವ ಪ್ರಶ್ನೆಗೆ ಉತ್ತರಿಸಿ ಜಿಎಸ್‍ಟಿ ಬಗ್ಗೆ ಇರುವ ತೊಂದರೆಗಳು ಲಾಭ ನಷ್ಟದ ಬಗ್ಗೆ ಸಂವಾದ ನಡೆಸಿದ್ರು.

    ಈ ವೇಳೆ ಸಂವಾದದಲ್ಲಿ ಮಹಿಳೆಯೊಬ್ಬರು ರಾಹುಲ್ ಗೆ ಲಿಂಗಾಯಿತ ಪ್ರತ್ಯೇಕ ಧರ್ಮದ ಬಗ್ಗೆ ಪ್ರಶ್ನೆ ಮಾಡಿದ್ದರು. ಲಿಂಗಾಯಿತ ಧರ್ಮದ ವಿಚಾರದಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಿರಾ? ಎಂಬ ಪ್ರಶ್ನೆಗೆ ರಾಹುಲ್ ಇದು ನನಗೆ ಸಂಬಂಧಿಸಿದಲ್ಲ. ಸಿದ್ದರಾಮಯ್ಯನವರು ಉತ್ತರ ಹೇಳುತ್ತಾರೆ ಎಂದು ಹೇಳಿ ಸಿಎಂ ಕೈಗೆ ಮೈಕ್ ಕೊಟ್ಟಿದ್ದಾರೆ. ಬಳಿಕ ಮಹಿಳೆಯ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ನೀಡಿದರು.

    ಇದಕ್ಕೂ ಮುನ್ನ ರಾಹುಲ್ ಶಿವಮೊಗ್ಗ ಹಾಗೂ ದಾವಣಗೆರೆ ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಚರ್ಚೆಯಲ್ಲಿ ಯುವಕರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಾವ ಮಟ್ಟದಲ್ಲಿ ವಿಫಲವಾಗಿದೆ. ಬೂತ್ ಮಟ್ಟದಲ್ಲಿ ಯಾವ ಯಾವ ತೊಂದರೆಗಳು ಇವೆ. ಪಕ್ಷದ ಬಲ ವರ್ಧನೆಗೆ ಯಾವ ರೂಪರೇಷೆಗಳನ್ನು ಮಾಡಿಕೊಳ್ಳಬೇಕು ಎಂದು ಪದಾಧಿಕಾರಿಗಳ ಜೊತೆ ಸುಧೀರ್ಘ ಚರ್ಚೆ ನಡೆಸಿದರು. ಚರ್ಚೆಯಲ್ಲಿ ಎಲ್ಲಾ ಕಡೆ ಮುಖಂಡರ ನಡುವೆ ಭಿನ್ನಮತವಿದೆ ಎಲ್ಲವನ್ನು ಸರಿದೂಗಿಸಿಕೊಂಡು ಕೆಲಸ ಮಾಡಿದರೆ ಮಾತ್ರ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎಂದು ಎಚ್ಚರಿಕೆ ಸಂದೇಶ ನೀಡಿದರು.

    ಬೆಣ್ಣೆ ದೋಸೆ ಸವಿದ ರಾಹುಲ್: ಸಂವಾದ ಮುಗಿದ ನಂತರ ಧಾರವಾಡದ ರಾಮ್ ಅಂಡ್ ಕೋ ಸರ್ಕಲ್ ನಲ್ಲಿರುವ ವಿಜಿ ಬೆಣ್ಣೆ ದೋಸೆ ಹೋಟೆಲ್ ಗೆ ಹೋಗಿ ಎರಡು ಬೆಣ್ಣೆದೋಸೆ ಸವಿದರು. ರಾಹುಲ್ ಜೊತೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಿ ಪರಮೇಶ್ವರ್ ಸೇರಿದಂತೆ ವಿವಿಧ ಮುಖಂಡರು ಸಾಥ್ ನೀಡಿದರು.

  • ಸರ್ಕಾರದ ಲಿಂಗಾಯತ ಪ್ರತ್ಯೇಕ ಧರ್ಮ ನಿರ್ಧಾರ ಒಪ್ಪಲ್ಲ: ವೀರಶೈವ ಮಹಾಸಭಾ

    ಸರ್ಕಾರದ ಲಿಂಗಾಯತ ಪ್ರತ್ಯೇಕ ಧರ್ಮ ನಿರ್ಧಾರ ಒಪ್ಪಲ್ಲ: ವೀರಶೈವ ಮಹಾಸಭಾ

    ದಾವಣಗೆರೆ: ಧರ್ಮ ದಂಗಲ್ ರಾಜ್ಯದಲ್ಲಿ ಜೋರಾಗುತ್ತಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿದ ರಾಜ್ಯ ಸರ್ಕಾರದ ವಿರುದ್ಧ ವೀರಶೈವರು ಸಿಡಿದೆದ್ದಿದ್ದಾರೆ. ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ನಿನ್ನೆ ವೀರಶೈವ ಮಹಾಸಭಾ ಅಧ್ಯಕ್ಷ, ಮಾಜಿ ಮಂತ್ರಿ ಶಾಮನೂರು ಶಿವಶಂಕರಪ್ಪ ಒಪ್ಪಿಕೊಂಡಿದ್ದರು. ಆದರೆ ಇವತ್ತು ವಿರೋಧಿಸಿದ್ದಾರೆ.

    ದಾವಣಗೆರೆಯ ತಮ್ಮ ನಿವಾಸದಲ್ಲಿ ರಂಭಾಪುರಿ ಶ್ರೀಗಳು, ಉಜ್ಜಯಿನಿ ಶ್ರೀಗಳ ಜೊತೆ ಪ್ರತ್ಯೇಕ ಧರ್ಮದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಶಾಮನೂರು ಶಿವಶಂಕರಪ್ಪ, ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

    ನಿನ್ನೆ ಕ್ಯಾಬಿನೆಟ್ ಕೈಗೊಂಡ ನಿರ್ಧಾರವನ್ನು ಸ್ಪಷ್ಟವಾಗಿ ಓದಿದ ಮೇಲೆ ನಮಗೆ ಗೊತ್ತಾಯಿತು. ತಜ್ಞರು ಒನ್ ಸೈಡ್ ವರದಿ ನೀಡಿದ್ದಾರೆ. ವೀರಶೈವ ಲಿಂಗಾಯತ ಒಂದೇ ಎನ್ನುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನಿರ್ಧಾರ ಅಚಲ. ಈ ಬಗ್ಗೆ ಇದೇ 23 ರಂದು ಬೆಂಗಳೂರಿನಲ್ಲಿ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ತೆಗೆದುಕೊಳ್ತೇವೆ ಅಂತಾ ಸ್ಪಷ್ಟಪಡಿಸಿದ್ರು.ಕೆಲ ಸ್ವಾಮೀಜಿಗಳು ಬಹಳ ಬುದ್ಧಿವಂತಿಕೆಯಿಂದ ಪ್ರತ್ಯೇಕ ಧರ್ಮ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

    ರಂಭಾಪುರಿ ಶ್ರೀಗಳು ಸಿಎಂ ಸಿದ್ದರಾಮಯ್ಯ ಅವರದ್ದು ಆತುರದ ನಿರ್ಧಾರ, ಏಕಪಕ್ಷೀಯವಾಗಿ ತೀರ್ಮಾನ ಅಂತಾ ಟೀಕಿಸಿದ್ರು. ಇನ್ನು ಈ ಸಂಬಂಧ ಬೆಳಗ್ಗೆ ಮಾತನಾಡಿದ್ದ ಬಿಎಸ್‍ವೈ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೈಗೊಳ್ಳೋ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದರು.