Tag: ಲಿಂಗಾಯತರು

  • ಮುಂದಿನ ಸಲ ಯತ್ನಾಳ್‌ಗೆ ಸೋಲು ಖಚಿತ – ಸೋಲದಿದ್ರೆ ಮಠ ತ್ಯಾಗ: ಹುಲಸೂರು ಶ್ರೀ ಬಹಿರಂಗ ಸವಾಲ್

    ಮುಂದಿನ ಸಲ ಯತ್ನಾಳ್‌ಗೆ ಸೋಲು ಖಚಿತ – ಸೋಲದಿದ್ರೆ ಮಠ ತ್ಯಾಗ: ಹುಲಸೂರು ಶ್ರೀ ಬಹಿರಂಗ ಸವಾಲ್

    ಬೀದರ್: ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ವಾಪಸ್ ಪಡೆಯದೇ ಇದ್ರೆ ಮುಂದಿನ ಸಲ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ (Basanagouda Patil Yatnal) ಸೋಲು ಖಚಿತ, ಒಂದು ವೇಳೆ ಅವರು ಸೋಲದೆ ಇದ್ರೆ ನಾನು ನನ್ನ ಮಠ ತ್ಯಾಗ ಮಾಡುತ್ತೇನೆ ಎಂದು ಬಸವಕಲ್ಯಾಣದಲ್ಲಿ ಹುಲಸೂರು ಮಠದ ಪೀಠಾಧಿಪತಿ ಶ್ರೀ ಶಿವಾನಂದ ಸ್ವಾಮೀಜಿ (Sri Sivananda Swamiji )ಅವರು ಬಹಿರಂಗ ಸವಾಲ್ ಹಾಕಿದ್ದಾರೆ.

    ಬಸವಕಲ್ಯಾಣದಲ್ಲಿ (Basavakalyana) ನಡೆದ ಶರಣ ಸಂಸ್ಕ್ರತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯತ್ನಾಳ್‌ಗೆ ಮಾನ ಮರ್ಯಾದೆ ಇದ್ರೆ ಲಿಂಗಾಯತರಲ್ಲಿ ಕ್ಷೆಮೆ ಕೇಳಬೇಕು. ಇಲ್ಲಾವಾದ್ರೆ ರಾಜ್ಯದ ಲಿಂಗಾಯತರು (Lingayats) ಇಲ್ಲಿಂದ ಯತ್ನಾಳ್‌ರನ್ನು ಓಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಫೆಂಗಲ್ ಚಂಡಮಾರುತ ಎಫೆಕ್ಟ್‌ – ಬೆಂಗಳೂರಿಗೆ ಇನ್ನೆರಡು ದಿನ ಮಳೆ ಕಾಟ ಫಿಕ್ಸ್!

    ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡೋರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಹೆಸರು ಮಾತ್ರ ಬಸವರಾಜ ಆದ್ರೆ ನೀನು ಬೆಂಕಿ ಹಚ್ಚುವ ಬಸವರಾಜ. ಬಸವಣ್ಣನವರು ಸೇರಿದಂತೆ ಎಲ್ಲರ ಬಗ್ಗೆ ಹಗುರವಾಗಿ ಮತಾನಾಡುತ್ತಿದ್ದು, ಯತ್ನಾಳ್‌ ತಾನೊಬ್ಬನೇ ತೀಸ್ಮರ್ಕಾ ಎಂದು ತಿಳಿದುಕೊಂಡಿದ್ದಾನೆ ಎಂದು ಲೇವಡಿ ಮಾಡಿದ್ದಾರೆ.

    ನಾನು ಶ್ರೀಮಂತ, ನಾನು ಎಂಎಲ್‌ಎ ದೊಡ್ಡವ ಎಂದು ತಿಳಿದುಕೊಂಡಿದ್ದು, ಜನಗಳಿಗೆ ಗೌರವ ಕೊಡಲಿಲ್ಲಾ ಅಂದ್ರೆ ನೀನ್ಯಾವ ಸೀಮೆಯ ಶಾಸಕ? ಬಸವಣ್ಣನವರ ವಿರುದ್ಧ ಅವಹೇಳನ ಹೇಳಿಕೆ ವಾಪಸ್ ಪಡೆಯಬೇಕು, ಇಲ್ಲವಾದ್ರೆ ಮುಂದಿನ ಸಲ‌‌‌‌ ನಿಮಗೆ ಸೋಲು ಗ್ಯಾರಂಟಿ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಬಂಡೀಪುರದ ಅರಣ್ಯಕ್ಕೆ ಅಕ್ರಮ ಪ್ರವೇಶ; 6 ಜೀವಂತ ಆಮೆ, 72 ಕೆಜಿ ಶ್ರೀಗಂಧ ತುಂಡು ವಶ – ಆರೋಪಿ ಬಂಧನ

  • ಬಿಎಸ್‌ವೈ ಸಿಎಂ ಆಗಿದ್ದಾಗ ಅಡುಗೆಯವರಿಂದ ಡ್ರೈವರ್‌ವರೆಗೂ ಲಿಂಗಾಯತರೇ ಇದ್ದರು: ಬೇಳೂರು ಗೋಪಾಲಕೃಷ್ಣ

    ಬಿಎಸ್‌ವೈ ಸಿಎಂ ಆಗಿದ್ದಾಗ ಅಡುಗೆಯವರಿಂದ ಡ್ರೈವರ್‌ವರೆಗೂ ಲಿಂಗಾಯತರೇ ಇದ್ದರು: ಬೇಳೂರು ಗೋಪಾಲಕೃಷ್ಣ

    ಬೆಂಗಳೂರು: ಯಡಿಯೂರಪ್ಪ (BS Yediyurappa) ಸಿಎಂ ಆಗಿದ್ದಾಗ ಅಡುಗೆಯವರಿಂದ ಹಿಡಿದುಕೊಂಡು ಕಾರ್ ಡ್ರೈವರ್‌ವರೆಗೂ ಲಿಂಗಾಯತರನ್ನೆ (Lingayats) ಇಟ್ಟುಕೊಂಡಿದ್ದರು. ಯಡಿಯೂರಪ್ಪಗೆ ನಾಚಿಕೆ ಮಾನ ಮರ್ಯಾದೆ ಇದೆಯಾ ಎಂದು ಯಡಿಯೂರಪ್ಪ ವಿರುದ್ಧ ಏಕವಚನದಲ್ಲಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalakrishna) ವಾಗ್ದಾಳಿ ನಡೆಸಿದ್ದಾರೆ.

    ಲಿಂಗಾಯತ ಅಧಿಕಾರಿಗಳಿಗೆ ಈ ಸರ್ಕಾರದಲ್ಲಿ ಅನ್ಯಾಯ ಆಗುತ್ತಿದೆ ಎಂಬ ಶಾಮನೂರು (Shamanur Shivashankarappa) ಹೇಳಿಕೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಅವರು ಆದ್ಯತೆ ಮೇರೆಗೆ ಅಧಿಕಾರಿಗಳ ವರ್ಗಾವಣೆ ಮಾಡುತ್ತಾರೆ. ಜಾತಿ ಆಧಾರದಲ್ಲಿ ಅಧಿಕಾರಿಗಳನ್ನು ನೇಮಕಾತಿ ಮಾಡೋದಿಲ್ಲ. ಏನು ಲಿಂಗಾಯತ ಜಾತಿಯವರು ಒಬ್ಬರೇ ಇರ್ತಾರಾ? ಎಲ್ಲಾ ಜಾತಿಯವರು ಇರೋದಿಲ್ವಾ? ಎಲ್ಲಾ ಜಾತಿಗೂ ಕೊಡಬೇಕಾಗುತ್ತದೆ. ಶಾಮನೂರು ಎಲ್ಲಾ ಜಾತಿಯವರ ಪರ ಮಾತನಾಡಬೇಕಿತ್ತು. ಇಲ್ಲ ಅಂದರೆ ನಮ್ಮ ಜಾತಿಯನ್ನು ಕಡೆಗಣಿಸುತ್ತಿದ್ದಾರೆ ಅಂತ ನಾವು ಹೇಳಬೇಕಾಗುತ್ತದೆ ಎಂದು ಶಾಮನೂರು ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ:‌ ಈ ಬಾರಿ ಖರ್ಗೆ ಬದಲಾಗಿ ರಾಧಾಕೃಷ್ಣಗೆ ಕಲಬುರಗಿ ಎಂಪಿ ಟಿಕೆಟ್: ಚಿಂಚನಸೂರು

    ಶಾಮನೂರು ಹಿರಿತನಕ್ಕೆ ಗೌರವ ಕೊಡಬೇಕು. ಹೀಗೆ ಹೇಳಿಕೆ ಕೊಡೋದು ತಪ್ಪು. ಅದಕ್ಕೆ ಯಡಿಯೂರಪ್ಪ ಅವರು ಸಾಥ್ ಕೊಡುತ್ತೇನೆ ಎನ್ನುತ್ತಾರೆ. ಯಡಿಯೂರಪ್ಪ ಅಡುಗೆಯವರಿಂದ ಹಿಡಿದು ಡ್ರೈವರ್, ಕ್ಲೀನರ್‌ವರೆಗೂ ಲಿಂಗಾಯತರನ್ನು ಇಟ್ಟುಕೊಂಡಿದ್ದರು. ಯಡಿಯೂರಪ್ಪ ಶಾಮನೂರು ಮಾತಿಗೆ ಸಾಥ್ ಕೊಡ್ತೀನಿ ಅಂತಾರೆ. ಯಡಿಯೂರಪ್ಪಗೆ ಮಾನ ಮರ್ಯಾದೆ ಇದೆಯಾ? ಅವರು ಯಾವ ಜಾತಿಯವರನ್ನು ಇಟ್ಟುಕೊಂಡಿದ್ರು ಕೇಳಿ ಮೊದಲು ಎಂದು ಏಕವಚನದಲ್ಲಿ ಮಾತನಾಡಿದರು. ಇದನ್ನೂ ಓದಿ: ಕೆಲವರಿಗೆ ಹುಚ್ಚು ಹಿಡಿದು ಸಿಎಂ ಸ್ಥಾನದ ಬಗ್ಗೆ ಮಾತಾಡ್ತಾರೆ: ಕೊತ್ತೂರು ಮಂಜುನಾಥ್

    ಯಡಿಯೂರಪ್ಪನ ಆಫೀಸ್‌ನಲ್ಲಿ ಪೂರ್ತಿ ಲಿಂಗಾಯತರು ಇದ್ದರು. ಶಾಮನೂರು ಅವರು ಹಿರಿಯರು. ಸಿಎಂ ಅವರು ಯಾರಿಗೆ ನೇಮಕ ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಸಿಎಂ ಆದ ಮೇಲೆ ಸಿದ್ದರಾಮಯ್ಯ ಕುರುಬರ ಅಧಿಕಾರಿಗಳನ್ನು ಸ್ವಲ್ಪ ತಮ್ಮ ಸುತ್ತಮುತ್ತು ಮಾಡಿಕೊಂಡು ಇರುತ್ತಾರೆ. ಇಲ್ಲ ಅನ್ನೋಕೆ ಆಗಲ್ಲ. ಯಡಿಯೂರಪ್ಪ ಯಾರನ್ನು ಮಾಡಿದ್ರು ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಧರ್ಮ ಇಲ್ಲ ಎಂದು ಹೇಳುವವರನ್ನ ಗಲ್ಲಿಗೇರಿಸಬೇಕು – ಶಾಸಕ ಕೊತ್ತೂರು ಮಂಜುನಾಥ್

    ಶಾಮನೂರು ಹಾಗೆ ಮಾತನಾಡಬಾರದು. ರಾಜ್ಯದ ಮುಖ್ಯಮಂತ್ರಿಗಳು ಏನು ಬೇಕೋ ಅದನ್ನು ಮಾಡುತ್ತಾರೆ. ನಮಗೆ ಬೇಜಾರು ಆಗಿದ್ದು ಯಡಿಯೂರಪ್ಪ ಸಾಥ್ ಅಂದಿದ್ದು. ತಮ್ಮ ಇಡೀ ಆಡಳಿತದಲ್ಲಿ ಲಿಂಗಾಯತರನ್ನ ಇಟ್ಟುಕೊಂಡು ಆಡಳಿತ ಮಾಡಿದ್ದು ಯಡಿಯೂರಪ್ಪ. ಈಗ ಶಾಮನೂರು ಹೇಳಿಕೆಗೆ ಸಾಥ್ ಕೊಡುತ್ತೇನೆ ಅಂದರೆ ಯಡಿಯೂರಪ್ಪಗೆ ನಾಚಿಕೆ ಆಗಬೇಕು. ಲಿಂಗಾಯತರೇ ಇರೋದಾ ಈ ರಾಜ್ಯದಲ್ಲಿ? ಬೇರೆಯವರು ಇಲ್ವಾ? ಎಲ್ಲಾ ಜಾತಿಯವರಿಗೂ ಅವಕಾಶ ಕೊಡಬೇಕು. ಎಲ್ಲಾ ಜಾತಿ ಓಟು ಕೊಟ್ಟು 135 ಸ್ಥಾನ ಬಂದಿದೆ. ಕುರುಬ, ಒಕ್ಕಲಿಗ, ಈಡಿಗ ಎಲ್ಲರಿಗೂ ಅವಕಾಶ ಕೊಡಲಿ. ಶಾಮನೂರು ಮಗನಿಗೆ ಅಧಿಕಾರ ಕೊಟ್ಟಿದ್ದಾರೆ. ಯಾಕೆ ಅವರು ಹಾಗೆ ಮಾತನಾಡುತ್ತಾರೋ ಗೊತ್ತಿಲ್ಲ. ರಾಜ್ಯದ ಸಿಎಂ, ಡಿಸಿಎಂ ಯಾರಿಗೆ ಅಧಿಕಾರ ಕೊಡಬೇಕು ಅಂತ ತೀರ್ಮಾನ ಮಾಡುತ್ತಾರೆ. ಇವರು ಹೀಗೆ ಮಾತನಾಡುವುದು ಸರಿಯಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಸೌಹಾರ್ದಯುತ ಈದ್ ಮಿಲಾದ್ ಹಬ್ಬದಂದೇ ಕಿಡಿಗೇಡಿಗಳು ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ: ಉಮೇಶ್ ಜಾಧವ್

    ಇನ್ನು 6 ತಿಂಗಳು ಸರ್ಕಾರ ಇರಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಧಮ್ ಇದ್ರೆ ತಾಕತ್ ಇದ್ದರೆ ನಮ್ಮ ಪಕ್ಷಕ್ಕೆ ಕೈ ಹಾಕಲಿ ನೋಡೋಣ. ಸರ್ಕಾರ ಬೀಳುತ್ತೆ ಅನ್ನೋದು ಹಗಲುಗನಸು ಕಾಣಬೇಕು. ಹೆಚ್‌ಡಿಕೆ ಇರಬಹುದು, ಯೋಗೇಶ್ವರ್ ಇರಬಹುದು. ಹಿಂದೆ 16 ಜನ ಎತ್ತುಕೊಂಡು ಹೋದ್ರಲ್ಲ. ಆ ತಾಕತ್ತು, ಆ ಧಮ್ಮು ನಮ್ಮ ಸಿಎಂ, ಡಿಸಿಎಂಗೆ ಇದೆ. ಅದನ್ನು ತಡೆಯೋಕೆ ಅವಕಾಶ ಇದೆ. ಧಮ್ ಇದ್ದರೆ ತಾಕತ್ ಇದ್ದರೆ ಕೈ ಹಾಕಲಿ ನೋಡೋಣ. ಆಗ ಏನು ಮಾಡಬೇಕು ಅಂತ ನಮಗೆ ಗೊತ್ತಿದೆ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ಕರ್ನಾಟಕ ಮತ್ತೊಂದು ಬಿಹಾರ ಆಗ್ತಿದೆ ಅನಿಸುತ್ತಿದೆ: ಆರ್. ಅಶೋಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 50 ವರ್ಷಗಳಿಂದ ಕಾಂಗ್ರೆಸ್ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿಲ್ಲ: ಬೊಮ್ಮಾಯಿ

    50 ವರ್ಷಗಳಿಂದ ಕಾಂಗ್ರೆಸ್ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿಲ್ಲ: ಬೊಮ್ಮಾಯಿ

    ಬೀದರ್: ಕಾಂಗ್ರೆಸ್ (Congress) 50 ವರ್ಷಗಳಿಂದ ಲಿಂಗಾಯತರನ್ನು (Lingayats) ಮುಖ್ಯಮಂತ್ರಿ (CM) ಮಾಡೋಕೆ ಆಗಿಲ್ಲ. ಇದೀಗ ಕಾಂಗ್ರೆಸ್ ಲಿಂಗಾಯತರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದೆ. ಅವರಿಗೆ ಯಾವ ನೈತಿಕ ಹಕ್ಕಿದೆ? ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಟಾಂಗ್ ನೀಡಿದರು.

    ಬಿಜೆಪಿ (BJP) ಲಿಂಗಾಯತರಿಗೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಆರೋಪಕ್ಕೆ ಬೀದರ್‌ನ (Bidar) ಭಾಲ್ಕಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ಲಿಂಗಾಯತರು ಅಷ್ಟೇ ಅಲ್ಲಾ, ಎಲ್ಲಾ ಸಮುದಾಯಕ್ಕೆ ಮಾಡಿದ್ದನ್ನು ತಿಳಿಸಬೇಕಿದೆ. ಹೀಗಾಗಿ ಯಡಿಯೂರಪ್ಪನವರ ಸಭೆಯಲ್ಲಿ ತೀರ್ಮಾನ ಮಾಡಿದ್ದಾರೆ. ಲಿಂಗಾಯತರಿಗೆ ಅತಿ ಹೆಚ್ಚು ಸೀಟುಗಳು ಕೊಟ್ಟಿದ್ದು ಬಿಜೆಪಿ. ಆದರೆ ಸಮಾಜವನ್ನು ಹೊಡೆಯುವಂತಹ ಕೆಲಸ ಹಾಗೂ ಹುನ್ನಾರ ಮಾಡಿದ್ದು ಕಾಂಗ್ರೆಸ್‌ನವರು ಎಂದು ಸಿಎಂ ಗರಂ ಆದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಪುಕ್ಕಲುತನ ಕಾಡ್ತಿರೋದ್ರಿಂದ 18 ವರ್ಷ ತುಂಬದ ಮೊಮ್ಮಗ ಜೊತೆ ಪ್ರಚಾರಕ್ಕೆ ಬರ್ತಿದ್ದಾರೆ – ಸಿಂಹ ಕಿಡಿ

    ನಾವು ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತೇವೆ. ಆದರೆ ನಾಯಕತ್ವ ಯಾರು ಕೊಟ್ಟಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. 50 ವರ್ಷದಿಂದ ನಿಜಲಿಂಗಪ್ಪ ಬಳಿಕ ಕಾಂಗ್ರೆಸ್‌ನಲ್ಲಿ ಲಿಂಗಾಯತರು ಯಾರೂ ಸಿಎಂ ಆಗಲಿಲ್ಲ. ವೀರೇಂದ್ರ ಪಾಟೀಲ್‌ಗೆ 9 ತಿಂಗಳಲ್ಲೇ ಹೀನಾಯವಾಗಿ ತೆಗೆದಿದ್ದರು ಎಂದು ಕಾಂಗ್ರೆಸ್ ನಾಯಕರಿಗೆ ಸಿಎಂ ತೀರುಗೇಟು ನೀಡಿದರು. ಇದನ್ನೂ ಓದಿ: ದಿಢೀರ್‌ ಬೆಳವಣಿಗೆ – ಕನಕಪುರದಿಂದ ಡಿಕೆ ಸುರೇಶ್‌ ನಾಮಪತ್ರ ಸಲ್ಲಿಕೆ

  • ಬಸವಣ್ಣನ ಪಠ್ಯವನ್ನೇ ತಿರುಚಲಾಗಿದೆ: ಲಿಂಗಾಯತ ಸ್ವಾಮೀಜಿಗಳು ಅಸಮಾಧಾನ

    ಬಸವಣ್ಣನ ಪಠ್ಯವನ್ನೇ ತಿರುಚಲಾಗಿದೆ: ಲಿಂಗಾಯತ ಸ್ವಾಮೀಜಿಗಳು ಅಸಮಾಧಾನ

    ಬೀದರ್/ಬೆಂಗಳೂರು: ಪರಿಷ್ಕೃತ ಪಠ್ಯದಲ್ಲಿ ಬಸವಣ್ಣ ಇತಿಹಾಸ ತಿರುಚಲಾಗಿದೆ ಎಂದು ಲಿಂಗಾಯತ ಮಠಾಧೀಶರ ಒಕ್ಕೂಟ ಆಕ್ರೋಶ ಹೊರಹಾಕಿದೆ. 100ಕ್ಕೂ ಹೆಚ್ಚು ಲಿಂಗಾಯತ ಮಠಾಧೀಶರು ಇರುವ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವಣ್ಣನವರ ಪಠ್ಯವನ್ನು ತಿರುಚಲಾಗಿದೆ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.

    ಬಸವಣ್ಣನವರ ತಿರುಚಿರುವ ಪಠ್ಯವನ್ನು ಸರಿಪಡಿಸದೇ ಹೋದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತೇವೆ ಎಂದು ಲಿಂಗಾಯತ ಮಠಾಧೀಶರ ಒಕ್ಕೂಟ ಎಚ್ಚರಿಕೆ ನೀಡಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಪಠ್ಯದಲ್ಲಿರುವ ತಮ್ಮ ಕವಿತೆ ವಾಪಸ್ ಪಡೆದ ಮತ್ತೊಬ್ಬ ಸಾಹಿತಿ

    9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಬಸವಣ್ಣ ಕುರಿತಾಗಿ ತಪ್ಪಾಗಿ ಉಲ್ಲೇಖಿಸಲಾಗಿದೆ. ಉಪನಯನ ಆದ ನಂತರ ಕೂಡಲ ಸಂಗಮಕ್ಕೆ ನಡೆದರು ಎಂದು ಪಠ್ಯದಲ್ಲಿ ತಪ್ಪಾಗಿ ಬರೆಯಲಾಗಿದೆ. ಆದರೆ ಬಸವಣ್ಣನವರು ತಮ್ಮ ಅಕ್ಕ ನಾಗಾಯಿಗೆ ಇಲ್ಲದ ಉಪನಯನ ನನಗೇಕೆ ಎಂದು ಧಿಕ್ಕರಿಸಿದ್ದರು. ಇದು ಐತಿಹಾಸಿಕ ಸಂಗತಿ ಎಂದು ಮಠಾಧೀಶರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಶೈವ ಗುರುಗಳ ಸಾನಿಧ್ಯದಲ್ಲಿ ಲಿಂಗ ದೀಕ್ಷೆಯನ್ನು ಪಡೆದರು ಎಂದು ಬರೆಯಲಾಗಿದೆ. ಆದರೆ ಬಸವಣ್ಣನವರೇ ಇಷ್ಟಲಿಂಗದ ಜನಕರು. ಈ ಬಗ್ಗೆ ಅಲ್ಲಮ್ಮಪ್ರಭು ಆದಿಯಾಗಿ ಎಲ್ಲಾ ಶರಣರು ತಮ್ಮ ವಚನದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಿಯುಸಿ ಪಠ್ಯ ಪರಿಷ್ಕರಣೆ ಮುಕ್ತಾಯ

    ಬಸವಣ್ಣನವರು ವೀರ ಶೈವ ಮತವನ್ನು ಅಭಿವೃದ್ಧಿ ಪಡಿಸಿದರು ಎಂದು ಪಠ್ಯದಲ್ಲಿ ಸೇರಿಸಿದ್ದಾರೆ. ಇದು ಕೂಡ ತಪ್ಪು. ವಾಸ್ತವದಲ್ಲಿ ವೀರ ಶೈವ, ಶೈವ ಪಂಥದ ಶಾಖೆ. ಅದು ಲಿಂಗಾಯತ ಧರ್ಮದ ಒಂದು ಪಂಗಡ ಎಂದು ಇತಿಹಾಸ ಹೇಳುತ್ತದೆ. ಸರ್ಕಾರದ ದಾಖಲೆಯಲ್ಲೂ ಹೀಗೆಯೇ ಇದೆ ಎಂದು ಹೇಳಿದ್ದಾರೆ.

    ಶೈವರಲ್ಲಿ ವರ್ಣಾಶ್ರಮದ ಆಚರಣೆಯಿದೆ. ಲಿಂಗಾಯತರಲ್ಲಿ ವರ್ಣಾಶ್ರಮ ಪದ್ಧತಿ ಇಲ್ಲ. ಹೀಗಾಗಿ ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿ ಪಡಿಸಿದರು ಎಂಬುವುದು ಸುಳ್ಳು ಎಂದು ಪತ್ರದಲ್ಲಿ ಉಲ್ಲೇಖಿಸಿ, ಪಠ್ಯ ಪರಿಷ್ಕರಣೆ ಬಗ್ಗೆ ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

  • ಇನ್ಮುಂದೆಯಾದ್ರೂ ಎಚ್ಚರ ಅಪ್ಪ- ಸಿದ್ದುಗೆ ಪುತ್ರ ಯತೀಂದ್ರ ಸಲಹೆ

    ಇನ್ಮುಂದೆಯಾದ್ರೂ ಎಚ್ಚರ ಅಪ್ಪ- ಸಿದ್ದುಗೆ ಪುತ್ರ ಯತೀಂದ್ರ ಸಲಹೆ

    ಬೆಂಗಳೂರು: ಲಿಂಗಾಯತ, ಒಕ್ಕಲಿಗ ಜಾತಿ ಲೆಕ್ಕಾಚಾರ ಹಾಗೂ ಡಿಕೆಶಿ ಜೆಡಿಎಸ್ ಬಾವುಟ ಹಿಡಿದ ವಿಷಯದ ಬಗ್ಗೆ ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆ ಮಾತನಾಡುತ್ತಾ ಕುಳಿತ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ಪುತ್ರ ಯತೀಂದ್ರ ಅವರು ಅಸಮಾಧಾನವನ್ನು ಹೊರ ಹಾಕಿ ಸಲಹೆ ನೀಡಿದ್ದಾರೆ.

    ಸಿದ್ದರಾಮಯ್ಯ ಆಪ್ತರೇ ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ವಿಡಿಯೋವನ್ನ ಲೀಕ್ ಮಾಡಿಸಿದ್ದರು. ಆದರೆ ಆ ವಿಡಿಯೋ ಸಿದ್ದರಾಮಯ್ಯ ಪಾಲಿಗೆ ಮತ್ತಷ್ಟು ನೆಗೆಟಿವ್ ಆಗುತ್ತಿದೆ ಅನ್ನೋದು ಪುತ್ರ ಯತೀಂದ್ರರ ಆಕ್ಷೇಪವಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸೋಮವಾರ ಈ ಸಂಬಂಧ ಸಿದ್ದರಾಮಯ್ಯ ಜೊತೆ ಯತೀಂದ್ರ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗರ ವಿರುದ್ಧ ಮಾತನಾಡಬೇಡಿ ಅಂತ ಹೇಳಿದ್ದೆ. ಆಗ ನಿನಗೆ ರಾಜಕೀಯ ಗೊತ್ತಾಗಲ್ಲ ಸುಮ್ನಿರು ಅಂತ ನನಗೆ ಬೈದಿದ್ದೀರಿ. ಆ ಬಳಿಕ ಏನಾಯಿತು, ಅದೇ ವಿಷಯದಿಂದಾಗಿ ಅದೇ ಸಮುದಾಯಗಳ ಸಿಟ್ಟು ನಿಮ್ಮ ಅಧಿಕಾರ ಕಳೆದುಕೊಳ್ಳುವಂತೆ ಮಾಡಿತ್ತು. ಈಗ ಮತ್ತೆ ಅದೇ ರೀತಿಯ ತಪ್ಪು ಮಾಡುತ್ತಿದ್ದೀರಿ. ನಾಲ್ಕು ಗೋಡೆಯ ಮಧ್ಯೆ ಆಪ್ತರ ಮುಂದೆ ಮಾತನಾಡಿದ್ದನ್ನ ವಿಡಿಯೋ ಮಾಡಿ ಬಹಿರಂಗಪಡಿಸೋ ಅವಶ್ಯಕತೆ ಏನಿತ್ತು ಎಂದು ಅಪ್ಪನ ಮೇಲೆ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ದೋಸ್ತಿ ಮುಗಿದ ಮೇಲೆ ಇವರಿಗ್ಯಾಕೆ ಅವ್ರ ಉಸಾಬರಿ: ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಕಿಡಿ

    ಅಪ್ಪನ ಜೊತೆಗಿರುವವರೇ ದಿಕ್ಕು ತಪ್ಪಿಸುತ್ತಿದ್ದಾರೆ. ಎಚ್ಚರಿಕೆಯಿಂದ ಹೆಜ್ಜೆ ಇಡಿ ಎಂದು ಪುತ್ರ ಯತೀಂದ್ರ ಅವರು ಸಿದ್ದರಾಮಯ್ಯಗೆ ತಿಳಿಸಿದ್ದಾರೆ. ಮಗನ ರಾಜಕೀಯ ಗುಣಾಕಾರ, ಭಾಗಕಾರ ಕಂಡ ಸಿದ್ದರಾಮಯ್ಯ ಅವರು, ಪುತ್ರನ ಮಾತಿಗೆ ಮರು ಮಾತನಾಡದೆ ಸೈಲೆಂಟಾಗಿದ್ದಾರೆ. ಈ ಮೂಲಕ ಆಪ್ತರೇ ಅಪ್ಪನನ್ನ ದಾರಿ ತಪ್ಪಿಸುತ್ತಿದ್ದಾರೆ ಎಂಬುದನ್ನ ಅರಿತ ಡಾ.ಯತೀಂದ್ರ, ಅಪ್ಪನಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:  ವಿಡಿಯೋದ ತಪ್ಪು ವ್ಯಾಖ್ಯಾನ ನೀಡಿ ಬಿಜೆಪಿ ವಿಕೃತಾನಂದ: ಸಿದ್ದರಾಮಯ್ಯ

    ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬುದ್ಧಿ ಹೇಳಿದ್ದ ಮಗನನ್ನ ಗದರಿದ್ದ ಸಿದ್ದರಾಮಯ್ಯ ರಾಜಕೀಯವಾಗಿ ಎಡವಿದ್ದರೂ ಈಗ ಬುದ್ಧಿ ಹೇಳಿದ ಮಗನಿಗೆ ಸಿದ್ದರಾಮಯ್ಯರ ಮೌನವೇ ಉತ್ತರವಾಗಿರುವುದು ಕುತೂಹಲ ಮೂಡಿಸಿದೆ.

  • ಬಿಎಸ್‍ವೈ ಆಯ್ತು ಈಗ ಅವರ ಬೆಂಬಲಿಗರು ಕೂಡ ಟಾರ್ಗೆಟ್

    ಬಿಎಸ್‍ವೈ ಆಯ್ತು ಈಗ ಅವರ ಬೆಂಬಲಿಗರು ಕೂಡ ಟಾರ್ಗೆಟ್

    -ಲಿಂಗಾಯತರು ಬಿಜೆಪಿ ಕಚೇರಿಗೆ ಬರಬೇಡಿ
    -ರಾಜ್ಯ ಬಿಜೆಪಿ ಕಚೇರಿಯಲ್ಲಿ ಜಾತಿ ರಾಜಕೀಯ

    ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿಯಲ್ಲಿ ಜಾತಿ ರಾಜಕೀಯ ನಡಿಯುತ್ತಿರುವ ಆರೋಪ ಕೇಳಿಬರುತ್ತಿದ್ದು, ಸಿಎಂ ಯಡಿಯೂರಪ್ಪ ಅಷ್ಟೇ ಅಲ್ಲ ಸಿಎಂ ಬೆಂಬಲಿಗರನ್ನೂ ಕೂಡ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

    ಯಡಿಯೂರಪ್ಪನವರ ಆಪ್ತರೆಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಕೆಲವರಿಗೆ ಗೇಟ್ ಪಾಸ್ ನೀಡಲಾಗಿದೆ. ಹಾಗೆಯೇ ಲಿಂಗಾಯತರು ಬಿಜೆಪಿ ಕಚೇರಿಗೆ ಬರಬೇಡಿ ಎನ್ನುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ಹಾಗೂ ಸಿಎಂ ಬೆಂಬಲಿಗ ನಂಜುಂಡಸ್ವಾಮಿ ಆರೋಪಿಸಿದ್ದಾರೆ. ಬಹಿರಂಗವಾಗಿ ವೀಡಿಯೋದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ನಂಜುಂಡಸ್ವಾಮಿ, ಸಿಎಂ ಬೆಂಬಲಿಗರು ಎಂಬ ಕಾರಣಕ್ಕೆ ತಮ್ಮ ಪಕ್ಷದಲ್ಲಿ ಭೇದಭಾವ ಮಾಡಲಾಗುತ್ತಿದೆ ಎಂದು ಹೇಳಿಕೊಂಡರು.

    ಲಿಂಗಾಯತರು, ಯಡಿಯೂರಪ್ಪನವರು ಆಪ್ತರೆಂದು ನಮಗೆ ಬಿಜೆಪಿ ಕಚೇರಿಯಲ್ಲಿ ಪ್ರವೇಶ ನೀಡುತ್ತಿಲ್ಲ ಎಂದು ನಂಜುಂಡಸ್ವಾಮಿ ಬಹಿರಂಗ ಆರೋಪಿ ಮಾಡುತ್ತಿದ್ದಾರೆ. ಈ ಹಿಂದೆ ಬಿಜೆಪಿ ಕಚೇರಿಯಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಕೆಲಸಗಾರರನ್ನು ಕೂಡ ಕೆಲಸದಿಂದ ತೆಗೆದಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಇದೀಗ ಬಿಜೆಪಿ ಕಚೇರಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ನಂಜುಂಡಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

    14 ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿ ನಾನು ಕೆಲಸ ಮಾಡಿದ್ದು ಸಾರ್ಥಕವಾಯ್ತು ಎಂದುಕೊಂಡಿದ್ದೆ, ಆದ್ರೆ ಅದು ಸಾರ್ಥಕವಾಗಿಲ್ಲ. ಬಿಜೆಪಿ ನಮ್ಮ ಹೆತ್ತ ತಾಯಿ ಎಂದು ತಿಳಿದುಕೊಂಡಿದ್ದೆವು. ಆದ್ರೆ ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ಅಧ್ಯಕ್ಷರಾಗಿದ್ದಾಗ ಪಕ್ಷವನ್ನು ಬೆಳೆಸಿದರು. ಆದರೆ ಪ್ರಸ್ತುತವಾಗಿ ಬಂದಿರುವ ಅಧ್ಯಕ್ಷರು ಲಿಂಗಾಯತರನ್ನ ಟಾರ್ಗೆಟ್ ಮಾಡಿಕೊಂಡು ಸುಮಾರು 5ರಿಂದ 6 ಮಂದಿ ಕೆಲಸಗಾರರನ್ನು ತೆಗೆದು ಹಾಕಿದ್ದಾರೆ. ಲಿಂಗಾಯತರು ಬಿಜೆಪಿ ಕಚೇರಿಗೆ ಬರಬೇಡಿ ಎನ್ನುತ್ತಾರೆ. 14 ವರ್ಷ ನಾವು ದುಡಿದ ಶ್ರಮ ಎಲ್ಲಿ ಹೋಯ್ತು? ಬಿಎಸ್‍ವೈ ಬೆಂಬಲಿಗರು ಎಂದು ಟಾರ್ಗೆಟ್ ಮಾಡಲಾಗುತ್ತಿದೆ. ಏಕಾಏಕಿ ಕೆಲಸದಿಂದ ಕೆಲಸಗಾರರನ್ನು ತೆಗೆದು ಹಾಕಿದರೆ ಅವರು ಹಾಗೂ ಅವರ ಕುಟುಂಬದ ಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.

    ಬಿಎಸ್‍ವೈ ಅಧ್ಯಕ್ಷರಾಗಿದ್ದಾಗ ಪಕ್ಷದಲ್ಲಿ ಎಲ್ಲಾ ಜಾತಿಯ ಸಿಬ್ಬಂದಿ ಕೂಡ ಕೆಲಸ ಮಾಡುತ್ತಿದ್ದರು. ಆದರೆ ಈಗ ಅವರು ಬರಬೇಡಿ, ನೀವು ಬರಬೇಡಿ ಎಂದು ಹೇಳುತ್ತಿದ್ದಾರೆ. ಹಾಗಾದರೆ ನಮ್ಮನ್ನು ಪಕ್ಷಕ್ಕೆ ಸದಸ್ಯರಾಗಿ ಮಾಡಿಕೊಂಡಿದ್ದು ಯಾಕೆ? ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹಾಗೂ ಸಚಿವ ಅಮಿತ್ ಶಾ ಅವರಿಗೆ ಏನು ತಿಳಿಯುತ್ತೆ? ಯಡಿಯೂರಪ್ಪ ಇಲ್ಲವಾದರೆ ರಾಜ್ಯದಲ್ಲಿ ಬಿಜೆಪಿ ಸರ್ವನಾಶವಾಗಿಬಿಡುತ್ತೆ. ಉತ್ತರ ಕರ್ನಾಟಕ ನೆರೆ ಪರಿಹಾರ ಕೊಡಬೇಕು ಎಂದು ಬಿಎಸ್‍ವೈ ಮುನ್ನುಗ್ಗುತ್ತಿದ್ದಾರೆ. ಆದರೆ ಈಗ ಅಂಥವರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ತಮ್ಮ ಪಕ್ಷದ ವಿರುದ್ಧವೇ ಬಿಜೆಪಿ ಕಾರ್ಯಕರ್ತ ಕಿಡಿಕಾರಿದರು.

    ವಿಧಾನಸೌಧ, ವಿಧಾನಸಭೆಯಲ್ಲಿ ಯಾರೂ ಕೂಡ ಯಡಿಯೂರಪ್ಪ ಅವರನ್ನ ಬೈಯ್ಯುತ್ತಲ್ಲ. ಆದರೆ ನಮ್ಮ ಪಕ್ಷದಲ್ಲಿ ಸೇರಿಕೊಂಡಿರುವ ಕೆಲವು ಹುಳಗಳು ಸಿಎಂನಾ ಮೂಲೆಗುಂಪು ಮಾಡಲು ಪ್ಲಾನ್ ಹಾಕಿದ್ದಾರೆ ಎಂದರು. ಹಾಗೆಯೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕೂಡ ಎಚ್ಚರಿಸಿದ್ದಾರೆ. ನೀವು ಹೀಗೆ ಕಚೇರಿಯಲ್ಲಿ ತಾರತಮ್ಯ ಮಾಡುತ್ತೀರಿ, ಲಿಂಗಾಯರು ಎಂದು ಬೇಧ ಮಾಡಿದರೆ ನಿಜವಾಗಿಯೂ ಮುಂದಿನ ಚುವಾವಣೆಯಲ್ಲಿ 40%ದಷ್ಟು ಕೂಡ ಮತ ಬೀಳಲ್ಲ. ಬಿಎಸ್‍ವೈ ಪಕ್ಷ ಕಟ್ಟಿದ್ದಾಗ ಬಿಜೆಪಿ ಸ್ಥಿತಿ ಹೇಗಿತ್ತು ಈಗ ಹೇಗಿದೆ ಎನ್ನುವುದನ್ನು ಮರೆಯಬೇಡಿ. ನೀವು ಹೀಗೆ ತಾರತಮ್ಯ ಮಾಡುತ್ತಿದ್ದರೆ ಬಜೆಪಿ ವಿರೋಧ ಪಕ್ಷದಲ್ಲಿ ಕೂರುವಷ್ಟು ಸೀಟು ಗೆಲ್ಲಲ್ಲ ಎಂದರು.

    ಹಾಗೆಯೇ ಅಮಿತ್ ಶಾ ಅವರ ಬಗ್ಗೆ ಮಾತನಾಡಿ, ನೀವು ನೆರೆ ವೀಕ್ಷಣೆಗೆ ಬಂದು ಕರ್ನಾಟಕದ ಪರಿಸ್ಥಿತಿ ಬಗ್ಗೆ ತಿಳಿದಿದ್ದೀರಾ. ಆದರೂ ಪರಿಹಾರ ಬಿಡುಗಡೆ ಮಾಡಲು ಏಕೆ ತಡಮಾಡಿದ್ದೀರಾ? ಬೇರೆ ರಾಜ್ಯಗಳಿಗೆ ಎಂದು ರೀತಿ, ಕರ್ನಾಟಕ್ಕೆ ಒಂದು ರೀತಿ ಮಾಡುವುದು ಸರಿಯಲ್ಲ ಎಂದಿದ್ದಾರೆ. ಈವರೆಗೂ ಬಿಎಸ್‍ವೈ ಜಾತಿ ರಾಜಕೀಯ ಮಾಡಿಲ್ಲ, ಮುಂದೆಯೂ ಮಾಡಲ್ಲ. ಇದನ್ನು ನಳಿನ್ ಕುಮಾರ್ ಕಟೀಲ್ ತಿಳಿದುಕೊಳ್ಳಬೇಕು. ಯಡಿಯೂರಪ್ಪ ಇದ್ರೆ ಬಿಜೆಪಿ, ಈಗ ಅವರು ಬೇಡ ಎಂದು ಬೇರೆಯವರು ತಿಳಿದುಕೊಂಡಿದ್ದರೆ ಅದು ಅವರ ಮೂರ್ಖತನ. ಮೋದಿ ಅವರೊಬ್ಬರನ್ನೇ ನೋಡಿ ಬಿಜೆಪಿಗೆ ಜನ ಮತ ಹಾಕಿಲ್ಲ. ಕನಾಟಕದಲ್ಲಿ ಯಡಿಯೂರಪ್ಪ ಅವರನ್ನು ನೋಡಿ ಮತ ಹಾಕಿದ್ದಾರೆ. ಮೋದಿ ಅವರಿಗೆ ಹಳ್ಳಿಗಳ ಬಗ್ಗೆ ಏನು ಗೊತ್ತಿದೆ ಎಂದು ಹರಿಹಾಯ್ದಿದ್ದಾರೆ.

  • ಲಿಂಗಾಯತರ ಪಟ್ಟಿಗೆ ‘ಶಾ’ ಕತ್ತರಿ! – ಬಿಎಸ್‍ವೈ ಆಪ್ತರಿಗೆ ಬಿಗ್ ಶಾಕ್

    ಲಿಂಗಾಯತರ ಪಟ್ಟಿಗೆ ‘ಶಾ’ ಕತ್ತರಿ! – ಬಿಎಸ್‍ವೈ ಆಪ್ತರಿಗೆ ಬಿಗ್ ಶಾಕ್

    ಬೆಂಗಳೂರು: ಸಚಿವ ಸಂಪುಟ ರಚನೆಗೆ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬೆನ್ನಲ್ಲೇ ಉದ್ದವಿದ್ದ ಲಿಂಗಾಯತರ ಪಟ್ಟಿಗೆ ಕತ್ತರಿ ಹಾಕಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಸಚಿವ ಸಂಪುಟ ಪಟ್ಟಿಯಲ್ಲಿದ್ದ ಐದು ಲಿಂಗಾಯತ ನಾಯಕರಿಗೆ ಮಾತ್ರ ಮಣೆ ಹಾಕಲಾಗಿದೆ. ಅದರಲ್ಲೂ ಹಿರಿಯರಿಗೆ ಮಾತ್ರ ಮಂತ್ರಿಗಿರಿ ನೀಡಲು ಅಮಿತ್ ಶಾ ನಿರ್ಧರಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಲಿಂಗಾಯತ ಶಾಸಕರಿಗೆ ಬಿಗ್ ಶಾಕ್ ಉಂಟಾಗಿದೆ.

    ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಶಾಸಕ ಜಗದೀಶ್ ಶೆಟ್ಟರ್, ಗೋವಿಂದರಾಜ ನಗರದ ಶಾಸಕ ವಿ.ಸೋಮಣ್ಣ, ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ ಹಾಗೂ ನಿಪ್ಪಾಣಿಯ ಶಾಸಕಿ ಶಶಿಕಲಾ ಜೊಲ್ಲೆ ಅವರು ಲಿಂಗಾಯತ ಸಮುದಾಯದ ನಾಯಕರಾಗಿದ್ದು, ಅವರಿಗೆ ಮಂತ್ರಿ ಸ್ಥಾನ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಎಸ್ಸಿ/ಎಸ್ಟಿ ಸಮುದಾಯಕ್ಕೆ ಬಂಪರ್!
    ಬಿ.ಎಸ್.ಯಡಿಯೂರಪ್ಪ ಅವರ ಕ್ಯಾಬಿನೆಟ್‍ನಲ್ಲಿ ಲಿಂಗಾಯತರಿಗಿಂತ ಎಸ್‍ಸಿ-ಎಸ್‍ಟಿಗೆ ಹೆಚ್ಚು ಸಚಿವ ಸ್ಥಾನ ಸಾಧ್ಯತೆ ಇದೆ. ಪಕ್ಷೇತರ ನಾಗೇಶ್ ಸೇರಿದಂತೆ 6 ಮಂದಿಗೆ ಮಂತ್ರಿಗಿರಿ ಪಕ್ಕಾ ಆಗಿದ್ದು, ಎಸ್‍ಸಿಗೆ 4 ಹಾಗೂ ಎಸ್‍ಟಿಗೆ 2 ಸಚಿವ ಸ್ಥಾನ ನೀಡಲು ಹೈಕಮಾಂಡ್ ಮುಂದಾಗಿದೆ.

    ಎಸ್‍ಸಿ ಕೋಟಾದಲ್ಲಿ ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್, ಮಹದೇವಪುರದ ಶಾಸಕ ಅರವಿಂದ ಲಿಂಬಾವಳಿ, ಮುಧೋಳದ ಶಾಸಕ ಗೋವಿಂದ ಕಾರಜೋಳ ಹಾಗೂ ಸುಳ್ಯ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ಸಿಗಲಿದೆ. ಎಸ್‍ಟಿ ಕೋಟಾದಲ್ಲಿ ಮೊಳಕಾಳ್ಮೂರು ಶಾಸಕ ಶ್ರೀರಾಮುಲು ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮಂತ್ರಿಗಿರಿ ನೀಡಲು ನಿರ್ಧರಿಸಲಾಗಿದೆ.

    ಹಿಂದುಳಿದ ವರ್ಗದ ಮೂವರಿಗೆ ಸಚಿವ ಸ್ಥಾನ ನೀಡುವಂತೆ ಅಮಿತ್ ಶಾ ಅವರು ಸೂಚನೆ ನೀಡಿದ್ದಾರೆ. ಹೀಗಾಗಿ ಕುರುಬ ಸಮುದಾಯದ ಕೆ.ಎಸ್.ಈಶ್ವರಪ್ಪ, ಬಂಟ ಸಮುದಾಯದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಹಾಗೂ ಬಿಲ್ಲವ ಸಮುದಾಯದ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಮಂತ್ರಿಗೆ ಸಿಗಲಿದೆ ಎಂದು ಹೇಳಲಾಗುತ್ತಿದೆ.

    ಇಬ್ಬರು ಒಕ್ಕಲಿಗರಿಗಷ್ಟೇ ಮಂತ್ರಿ ಭಾಗ್ಯ!
    ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ ಒಕ್ಕಲಿಗರೇ ಹೆಚ್ಚಾಗಿದ್ದರು. ಆದರೆ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಇಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗುತ್ತಿದೆ. ಅದರಲ್ಲೂ ಬೆಂಗಳೂರಿನ ಇಬ್ಬರು ಒಕ್ಕಲಿಗ ಶಾಸಕರಿಗಷ್ಟೇ ಮಂತ್ರಿ ಭಾಗ್ಯ ಸಿಗಲಿದೆ. ಈ ಪಟ್ಟಿಯಲ್ಲಿ ಆರ್.ಅಶೋಕ್ ಹಾಗೂ ಅಶ್ವಥ್‍ನಾರಾಯಣ್ ಇದ್ದಾರೆ. ಈ ಮೂಲಕ ಆಪರೇಷನ್ ಕಮಲದ ಆಪರೇಟರ್ ಗೆ ಬಿಜೆಪಿ ಹೈಕಮಾಂಡ್ ಮಂತ್ರಿಗಿರಿ ಬಂಪರ್ ಆಫರ್ ನೀಡಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

    ಬ್ರಾಹ್ಮಣ ಕೋಟಾದಲ್ಲಿ ಸುರೇಶ್ ಕುಮಾರ್, ಕೊಡವ ಕೋಟಾದಲ್ಲಿ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನ ನೀಡಲು ಅಮಿತ್ ಶಾ ಸೂಚನೆ ನೀಡಿದ್ದಾರಂತೆ. ಆದರೆ ಬಿಎಸ್‍ವೈ ಆಪ್ತರಾದ ಬಸವರಾಜ ಬೊಮ್ಮಾಯಿ, ಎಂ.ಪಿ.ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಸಚಿವ ಸ್ಥಾನದಿಂದ ಸಿ.ಟಿ. ರವಿ ಅವರನ್ನು ಹೊರಗಿಟ್ಟಿರುವ ಅಮಿತ್ ಶಾ ಅವರು, ಬಿಜೆಪಿಯಲ್ಲಿ ಉನ್ನತ ಸ್ಥಾನ ನೀಡಲು ಚಿಂತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.