Tag: ಲಿಂಗಾಯತ

  • ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದವನ್ನು ಈ ಬಾರಿ ಸಿಎಂ ತಲೆಗೆ ಕಟ್ಟಲು ಆಗಲ್ಲ: ಎಂ.ಬಿ.ಪಾಟೀಲ್

    ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದವನ್ನು ಈ ಬಾರಿ ಸಿಎಂ ತಲೆಗೆ ಕಟ್ಟಲು ಆಗಲ್ಲ: ಎಂ.ಬಿ.ಪಾಟೀಲ್

    ಬೆಂಗಳೂರು: ಪ್ರತ್ಯೇಕ ಲಿಂಗಾಯತ (Lingayat) ಧರ್ಮ ಆಗಬೇಕು, ಆದರೆ ಧರ್ಮ ಒಡೆದ ಆರೋಪ ಕಳೆದ ಬಾರಿ ಸಿದ್ದರಾಮಯ್ಯ (Siddaramaiah) ತಲೆಗೆ ಕಟ್ಟಿದಂತೆ ಈ ಬಾರಿ ಕಟ್ಟಲು ಆಗುವುದಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ (MB Patil) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜೈನರು ಸಿಖ್ಖರು ಬೌದ್ಧರಿಂದ ಯಾರಿಗಾದರೂ ತೊಂದರೆ ಆಗಿದೆಯಾ? ಇಲ್ಲವಲ್ಲ, ಹಾಗೆಯೇ ಲಿಂಗಾಯತ ಪ್ರತ್ಯೇಕ ಧರ್ಮ. ಈ ಬಾರಿ ಸಿದ್ದರಾಮಯ್ಯ ತಲೆಗೆ ಕಟ್ಟುವುದಕ್ಕೆ ಆಗುವುದಿಲ್ಲ. ಹಿಂದೆ ಆಟ ಆಡಿದ ಹಾಗೆ ಈಗ ಆಟ ಆಡಲು ಆಗುವುದಿಲ್ಲ. ಭಾನುವಾರ ಹೇಳಿದ್ದೇವೆ, ಭೌಗೋಳಿಕವಾಗಿ ನಾವೆಲ್ಲ ಭಾರತೀಯರು, ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳು. ಆದರೆ ಇದು ಬಸವ ಧರ್ಮ, ಇಂಡಿಕ್ ರಿಲಿಜಿಯನ್ ಇದರಲ್ಲಿ ಪ್ರಶ್ನೆ ಏನಿದೆ?ಹೋದ ಸಲ ಸಿದ್ದರಾಮಯ್ಯ ತಲೆಗೆ ಕಟ್ಟಿದರು. ಆದರೆ ಈ ಸಲ ಯಾರ ಆಟಗಳೂ ನಡೆಯುವುದಿಲ್ಲ ಎಂದರು. ಇದನ್ನೂ ಓದಿ: ಸಿಎಂ ಅಂತರಂಗದಲ್ಲಿ ಏನಿದೆ? ಪ್ರತ್ಯೇಕ ಧರ್ಮದ ಪರ ಯಾರಿದ್ದಾರೆ ಅಂತ ಸಮಾಜಕ್ಕೆ ಗೊತ್ತಿದೆ: ವಿಜಯೇಂದ್ರ

    ನಾವು ಪಾಸಿಟಿವ್ ಆಗಿ ಹೋಗೋಣ. ನಾವು ಲಿಂಗಾಯತ ಧರ್ಮದವರು, ಚತುರ್ವರ್ಣದಿಂದ ಹೊರಗೆ ಉಳಿದಿದ್ದೇವೆ. ಭಾನುವಾರ ಕಾರ್ಯಕ್ರಮ ನಡೆದಿದ್ದು ಮಠಾಧಿಪತಿಗಳ ಒಕ್ಕೂಟದಿಂದ. ಯಾರಿಗೆ ದ್ವಂದ್ವ ನಿಲುವು ಇದೆ, ಅವರನ್ನು ಕರೆಸಿಲ್ಲ. ನೇರವಾಗಿ ಇರುವವರನ್ನು ಕರೆದಿದ್ದಾರೆ. ವೀರಶೈವ ಮಹಾಸಭಾ ಕೂಡ ಒಂದು ಹಂತಕ್ಕೆ ಹತ್ತಿರ ಬಂದಿದೆ. ಅವರೂ ನಮ್ಮೊಂದಿಗೆ ಅರ್ಧ ದಾರಿಗೆ ಬಂದಿದ್ದಾರೆ. ಭಾನುವಾರ ಯಾರೂ ಜಾತಿ ಹೆಸರು ಬರೆಸಿ ಅಂತ ಕೇಳಿಲ್ಲ. ಸಣ್ಣಸಣ್ಣ ಉಪ ಪಂಗಡಗಳನ್ನು ಒಟ್ಟಿಗೆ ಕೊಂಡೊಯ್ಯಬೇಕು. ಇವರೊಂದಿಗೆ ನಾವು ಸಂಬಂಧ ಬೆಳೆಸಿಲ್ಲ. ಎಲ್ಲರನ್ನೂ ಅಪ್ಪಿಕೊಳ್ಳಬೇಕು. ಇವರೆಲ್ಲರಿಗೂ ರಾಜಕೀಯವಾಗಿ ಶಕ್ತಿ ತುಂಬಬೇಕು. ನಾವು ಹಿಂದೂ ವಿರೋಧಿಗಳಲ್ಲ, ವೀರಶೈವ ವಿರೋಧಿಗಳೂ ಅಲ್ಲ. ಜೈನರು ಸಿಖ್ಖರಿಂದ ಯಾರಿಂದಾದರೂ ತೊಂದರೆ ಆಗಿದೆಯಾ? ಆದ್ರೂ ಯಾಕೆ ಲಿಂಗಾಯತರ ಬೆನ್ನು ಬೀಳ್ತೀರಿ? ಕೇಂದ್ರ ಓಬಿಸಿಗೆ ಸೇರಿಸಿ ಎಂಬುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂ ಸಿಜೆಐ ತಾಯಿ ಆರ್‌ಎಸ್‌ಎಸ್ ಕಾರ್ಯಕ್ರಮದ ಆಹ್ವಾನ ಸ್ವೀಕರಿಸದ್ದಕ್ಕೆ ಕೃತ್ಯ: ಸಂತೋಷ್ ಲಾಡ್

  • ಕಾಂಗ್ರೆಸ್‌ನ ವೀರಶೈವ, ಲಿಂಗಾಯತ ಸಚಿವರಲ್ಲಿ ಮತ್ತೆ ಬಿರುಕು?

    ಕಾಂಗ್ರೆಸ್‌ನ ವೀರಶೈವ, ಲಿಂಗಾಯತ ಸಚಿವರಲ್ಲಿ ಮತ್ತೆ ಬಿರುಕು?

    ಬೆಂಗಳೂರು: ಕಾಂಗ್ರೆಸ್‌ನ ವೀರಶೈವ, ಲಿಂಗಾಯತ (Veerashaiva, Lingayat) ಸಚಿವರಲ್ಲಿ ಮತ್ತೊಮ್ಮೆ ಬಿರುಕು ಶುರುವಾಯ್ತಾ ಎಂಬ ಪ್ರಶ್ನೆ ಎದ್ದಿದೆ. ಪ್ರತ್ಯೇಕ ಲಿಂಗಾಯತ ಧರ್ಮದ (Separate Lingayat Religion) ಕೂಗಿನ ವಿಚಾರದಲ್ಲಿ ಮೂಡಿರುವ ಅಸಮಾಧಾನ ಮತ್ತೊಮ್ಮೆ ಸಚಿವ ಈಶ್ವರ್ ಖಂಡ್ರೆ ವರ್ಸಸ್ ಎಂ.ಬಿ ಪಾಟೀಲ್ ಫೈಟ್ ಜೋರಾಗುವ ಸಾಧ್ಯತೆಯಿದೆ.

    ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕು. ವೀರಶೈವರು ಲಿಂಗಾಯತದ ಒಂದು ಭಾಗ ಎಂದು ಎಂಬಿ ಪಾಟೀಲ್‌ (MB Patil) ಹೇಳಿದರೆ ವೀರಶೈವ – ಲಿಂಗಾಯತ ಎರಡೂ ಒಂದೇ ಎಂಬ ವಾದವನ್ನು ಈಶ್ವರ್ ಖಂಡ್ರೆ (Eshwar Khandre) ಪುನರುಚ್ಚರಿಸಿದ್ದಾರೆ.

    2017 ರಲ್ಲಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರದಲ್ಲಿ ಇದೇ ವಿಚಾರದಲ್ಲಿ ವಿವಾದದ ಕಿಡಿ ಹೊತ್ತಿತ್ತು. ಈಗ ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮ ಕೂಗು ಎದ್ದ ಬೆನ್ನಲ್ಲೇ ಮತ್ತೆ ವೀರಶೈವ, ಲಿಂಗಾಯತ ನಾಯಕರ ಮಧ್ಯೆ ಜಟಾಪಟಿ ಜೋರಾಗುವ ಸಾಧ್ಯತೆಯಿದೆ.  ಇದನ್ನೂ ಓದಿ:  ಕೊಪ್ಪಳದ ಕಾಂಗ್ರೆಸ್ ಸಚಿವ, ಸಂಸದ, ಶಾಸಕರು ಮೋಸಗಾರರು: ಸಿಎಂ ಭೇಟಿಗೂ ಮುನ್ನ ಇಕ್ಬಾಲ್ ಅನ್ಸಾರಿ ಬಾಂಬ್

    ಈಶ್ವರ್‌ ಖಂಡ್ರೆ ಹೇಳಿದ್ದೇನು?
    ವೀರಶೈವ-ಲಿಂಗಾಯತ ಎರಡೂ ಒಂದೇ. ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಕೊಡಬೇಕು ಎಂಬುದು ಮಹಾಸಭಾದ ಅಭಿಪ್ರಾಯ ಎಂದು ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

    ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕು ಎಂಬ ಸಚಿವ ಎಂಬಿ ಪಾಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ನಿಲುವು ಸ್ಪಷ್ಟವಾಗಿ ಹೇಳಿದ್ದೇನೆ. ಲಿಂಗಾಯತ-ವೀರಶೈವ ಎರಡು ಒಂದೇ. ಶಿವಕುಮಾರ ಸ್ವಾಮಿಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಸಭೆಯ ಎಲ್ಲಾ ಅಧ್ಯಕ್ಷರು ಳು ಇವತ್ತು ವೀರಶೈವ-ಲಿಂಗಾಯತ ಎರಡು ಸಮಾನಾರ್ಥಕ ಪದಗಳು ಇವೆ ಅಂತ ಹೇಳಿವೆ. ವೀರಶೈವ-ಲಿಂಗಾಯತ ಭಿನ್ನ ಇಲ್ಲ.ಇಷ್ಟ ಲಿಂಗ ಪೂಜೆ ಮಾಡುವವರು, ಅಷ್ಟಾವರಣ ವ್ಯವಸ್ಥೆ ಪಾಲನೆ ಮಾಡುವರು, ಗುರುಗಳು ಇದ್ದಾರೆ, ವಿರಕ್ತರು ಇದ್ದಾರೆ. ಹೀಗಾಗಿ ಎಲ್ಲರು ಒಗ್ಗಟ್ಟಾಗಿ, ಸಂಘಟಿತರಾಗಿ ಇರಬೇಕು.ಸಂಘಟನೆಯಲ್ಲಿ ಶಕ್ತಿ ಇದೆ. ವಿಘಟನೆಯಲ್ಲಿ ಯಾವುದೇ ಉಪಯೋಗ ಆಗೊಲ್ಲ ಎಂಬುದು ನಮ್ಮ ನಿಲುವು. ಆ ನಿಲುವಿಗೆ ನಾವು ಬದ್ದರಾಗಿದ್ದೇವೆ ಎಂದರು. ಇದನ್ನೂ ಓದಿ: ಕ್ರಿಕೆಟ್‌ ನೋಡಿ ಮರಳುತ್ತಿದ್ದಾಗ ಬಿತ್ತು ಮರ – ಯುವತಿಯ ಮೃತದೇಹ ವಿಕ್ಟೋರಿಯಾಗೆ ರವಾನೆ

    ಪ್ರತ್ಯೇಕ ಲಿಂಗಾಯತ ಧರ್ಮದಲ್ಲಿ ಮಹಾಸಭಾದ ನಿಲುವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಹಾಸಭಾ ಇವತ್ತು ಅಲ್ಲ ಸ್ವಾತಂತ್ರ್ಯ ಪೂರ್ವದಿಂದ ಹಿಡಿದು 2000 ಇಸವಿಯಿಂದ ನಡೆದ ಜನಗಣತಿ ಸಮಯದಲ್ಲಿ ಎಲ್ಲರ ಅಭಿಪ್ರಾಯ ತೆಗೆದುಕೊಳ್ಳಾಗಿದೆ . ಭೌಗೋಳಿಕವಾಗಿ ನಾವೆಲ್ಲರು ಹಿಂದೂಗಳೇ ಆದರೂ ನಮ್ಮ ಆಚಾರ-ವಿಚಾರದಲ್ಲಿ ಸಿಖ್, ಜೈನರು, ಬೌದ್ದ, ಪಾರ್ಸಿ ಗಳಿಗೆ ಪ್ರತ್ಯೇಕ ಧರ್ಮ ಅಂತ ಕೊಡಲಾಗಿದೆ. ಅದೇ ಆಧಾರದಲ್ಲಿ ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ನೀಡಬೇಕು ಅಂತ ಪದೇ ಪದೇ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಜನಗಣತಿಯಲ್ಲೂ ಪ್ರತ್ಯೇಕ ಕಾಲಂ ಕೊಡಬೇಕು ಅಂತ ವಿನಂತಿ ‌ಮಾಡಿದ್ದೇವೆ. ಇಲ್ಲಿವರೆಗೂ ಸರ್ಕಾರ ಅದನ್ನ ಗುರುತಿಸಿಲ್ಲ. ನಮ್ಮ ಮಹಾಸಭೆಯ ವತಿಯಿಂದ ಇನ್ನು ಮುಂದೆಯೂ ‌ಪ್ರತ್ಯೇಕ ಧರ್ಮ ಮಾನ್ಯತೆ ಸಿಗಲು ಪ್ರಯತ್ನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಪ್ರತ್ಯೇಕ ಧರ್ಮದ ವಿಚಾರ ಮತ್ರು ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ. ಸಿದ್ದರಾಮಯ್ಯ ಜನಸಮುದಾಯದ ನಾಯಕರು ಇದ್ದಾರೆ. ನಾವು ಯಾರಾದರೂ ಪ್ರತ್ಯೇಕ ಧರ್ಮದ ಬಗ್ಗೆ ಅವರ ಬಳಿ ಮಾತಾಡಿದ್ರೆ ಸಿಎಂ ನಿರ್ಧಾರ ತೆಗೆದುಕೊಳ್ತಾರೆ. ಮೊದಲು ‌ಕೂಡಾ ನೀವೆಲ್ಲರೂ ಬಂದು ಏನ್ ಹೇಳುತ್ತಿರೋ ಅದನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆಯೇ ವಿನಾ: ರಾಜಕೀಯ ದುರುದ್ದೇಶದಿಂದ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು.

  • ಲಿಂಗಾಯತರನ್ನು ತುಂಡು ತುಂಡು ಮಾಡಲು ಹೇಳಿದ್ಯಾರು- ಪೇಪರ್‌ ಎಸೆದು ಕ್ಯಾಬಿನೆಟ್‌ ಸಭೆಯಲ್ಲಿ ಎಂಬಿಪಿ ರೋಷಾವೇಶ

    ಲಿಂಗಾಯತರನ್ನು ತುಂಡು ತುಂಡು ಮಾಡಲು ಹೇಳಿದ್ಯಾರು- ಪೇಪರ್‌ ಎಸೆದು ಕ್ಯಾಬಿನೆಟ್‌ ಸಭೆಯಲ್ಲಿ ಎಂಬಿಪಿ ರೋಷಾವೇಶ

    – ಎಂಬಿ ಪಾಟೀಲ್‌ ಆಕ್ರೋಶಕ್ಕೆ ದಂಗಾದ ಸಚಿವರು
    – ಜಾತಿ ಗಣತಿಗೆ ಲಿಂಗಾಯತರಿಂದ ಭಾರೀ ವಿರೋಧ

    ಬೆಂಗಳೂರು: “ಲಿಂಗಾಯತರನ್ನು (Lingayat) ತುಂಡು ತುಂಡು ಮಾಡ್ತಾ ಇದ್ದೀರಿ? ಈ ರೀತಿ ಸಮೀಕ್ಷೆ ಮಾಡಲು ಹೇಳಿದವರು ಯಾರು? ಕುಲಶಾಸ್ತ್ರೀಯ ಅಧ್ಯಯನ ಯಾರು ಮಾಡೋದು?” – ಇದು ಸಚಿವ ಎಂಬಿ ಪಾಟೀಲ್‌ (MB Patil) ಆಕ್ರೋಶ ವ್ಯಕ್ತಪಡಿಸಿದ ಪರಿ.

    ಇಂದು ಸಂಜೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕ್ಯಾಬಿನೆಟ್‌ ಸಭೆ ನಡೆಯಿತು. ಈ ವೇಳೆ ಲಿಂಗಾಯತ ಶಾಸಕರು ಜಾತಿ ಜನಗಣತಿಗೆ ಭಾರೀ ವಿರೋಧ ವ್ಯಕ್ತಪಡಿಸಿದರು.

    ಸಚಿವ ಎಂಬಿ ಪಾಟೀಲ್‌ ಅಂತೂ ಎದ್ದು ನಿಂತು ಟೇಬಲ್‌ ಕುಟ್ಟಿ ಕೂಗಾಡಿದ್ದಾರೆ. ನಮ್ಮ ಸಮಾಜವನ್ನು ತುಂಡು ತುಂಡು ಮಾಡ್ತಾ ಇದ್ದೀರಿ? ತುಂಡು ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿ ಪೇಪರ್‌ಗಳನ್ನು ಎಸೆದು ಹಾಕಿದ್ದಾರೆ. ಎಂಬಿಪಿ ಆಕ್ರೋಶಕ್ಕೆ ಸಭೆಯಲ್ಲಿದ್ದ ಸಚಿವರು, ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ.

    ಇಲ್ಲಿಯವರೆಗೆ ಕ್ಯಾಬಿನೆಟ್‌ ಸಭೆ ಸಾಮಾನ್ಯ ಸಭೆಯಾಗಿ ನಡೆಯುತ್ತಿತ್ತು. ಆದರೆ ಇಂದಿನ ಸಭೆ ವಿಧಾನಸಭೆಯಲ್ಲಿ ಹೇಗೆ ವಿರೋಧ ಪಕ್ಷಗಳು ಮತ್ತು ಪ್ರತಿ ಪಕ್ಷಗಳ ಸದಸ್ಯರು ಕಿತ್ತಾಡುತ್ತಾರೋ ಅದೇ ರೀತಿಯಾಗಿ ಸಚಿವರು ಕಿತ್ತಾಡಿದ್ದಾರೆ ಎಂದು ಮೂಲಗಳು ಪಬ್ಲಿಕ್‌ ಟಿವಿಗೆ ತಿಳಿಸಿವೆ.

    ಈಶ್ವರ್ ಖಂಡ್ರೆ ಅವರು ಯಾವ ಆಧಾರದ ಮೇಲೆ ಹೊಸ ಜಾತಿಗಳನ್ನು ಸೃಷ್ಟಿ ಮಾಡಿದ್ದೀರಿ ಎಂದು ಆಕ್ರೋಶ ಹೊರಹಾಕಿದರೆ ನಮ್ಮ ಜಾತಿ ಬಗ್ಗೆ ನಿಮಗೆ ಏನು ಗೊತ್ತು ಎಂದು ಎಸ್‌ಎಸ್‌ ಮಲ್ಲಿಕಾರ್ಜುನ ಸಿಟ್ಟು ಹೊರ ಹಾಕಿದರು. ಸಚಿವರ ಮಾತಿಗೆ ಧ್ವನಿಗೂಡಿಸಿದ ಹೆಚ್‌ಕೆ ಪಾಟೀಲ್‌ ಈ ಜಾತಿಗಳನ್ನು ಯಾವುದೇ ಕಾರಣಕ್ಕೂ ಒಪ್ಪುವಂತದ್ದಲ್ಲ ಎಂದು ಗರಂ ಆಗಿಯೇ ಮಾತನಾಡಿದರು.

  • ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತರನ್ನೇ ಆಯ್ಕೆ ಮಾಡುತ್ತೇವೆ : ಬಾಲಚಂದ್ರ ಜಾರಕಿಹೊಳಿ‌

    ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತರನ್ನೇ ಆಯ್ಕೆ ಮಾಡುತ್ತೇವೆ : ಬಾಲಚಂದ್ರ ಜಾರಕಿಹೊಳಿ‌

    ಬೆಳಗಾವಿ: ಈ ಬಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲಿಂಗಾಯತರನ್ನೇ (Lingayat) ಆಯ್ಕೆ ಮಾಡುತ್ತೇವೆ ಎನ್ನುವ ಮೂಲಕ ಶಾಸಕ ಬಾಲಚಂದ್ರ ಜಾರಕಿಹೊಳಿ‌ (Balachandra Jarkiholi) ಡಿಸಿಸಿ ಬ್ಯಾಂಕ್ ಚುನಾವಣೆಗೂ (DCC Bank Election) ಮುನ್ನ ಲಿಂಗಾಯತ ಸಮಾಜದ ಪರ ಬ್ಯಾಟ್ ಬೀಸಿದ್ದಾರೆ.

    ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು ಬೆಳಗಾವಿ ಡಿಸಿಸಿ ಚುನಾವಣೆಯಲ್ಲಿ 16 ರಲ್ಲಿ 12 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಮುಂದಿನ‌ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ನಮ್ಮ ಗುಂಪಿನವರೇ ಆಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು‌. ಇದನ್ನೂ ಓದಿ:  ನಮ್ಮದಷ್ಟೆ ಅಲ್ಲ, ಬಿಜೆಪಿಯವರ ಕೇಸ್ ಕೂಡ ವಾಪಸ್ – 62 ಪ್ರಕರಣ ವಾಪಸ್‌ಗೆ ಡಿಕೆಶಿ ಸಮರ್ಥನೆ

    ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಹುಕ್ಕೇರಿ ಜನರೇ ಬಂದು ನಮ್ಮ ಬಳಿ ಬೆಂಬಲ‌ ಕೇಳಿದ್ದಾರೆ. ಶಾಂತಿ ಸಮಾಧಾನದಿಂದ ಚುನಾವಣೆ ಮಾಡುತ್ತೇವೆ. ಜನರ ಆಶೀರ್ವಾದ ಇದ್ದವರು ಗೆಲ್ಲುತ್ತಾರೆ. ಇದನ್ನೂ ಓದಿ:  ಒಂದಲ್ಲ ಎರಡಲ್ಲ ಮೂವರೊಟ್ಟಿಗೆ ಕಾಂಟ್ಯಾಕ್ಟ್‌ನಲ್ಲಿದ್ದ ಬ್ಯೂಟಿ – ಸ್ಟೇಷನ್‌ನಲ್ಲೇ ತಾಳಿ ಕಿತ್ತು ಗಂಡನ ಕೈಗಿಟ್ಟು ಹೋದ ಪತ್ನಿ

    ಜಾರಕಿಹೊಳಿ ಸಹೋದರರು ಕಳ್ಳರು ಎಂದು ಮಾಜಿ ಸಚಿವ ಎ ಬಿ ಪಾಟೀಲ್‌ ಅವರು ತುಡಗರು ಯಾರು ಎಂದು ಸ್ಪಷ್ಟಪಡಿಸಬೇಕು. ರಮೇಶ ಕತ್ತಿ ಅವರನ್ನ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಾಡಿದ್ದು ನಾವೇ ದಿವಂಗತ ಉಮೇಶ ಕತ್ತಿ ಅವರಿಗೆ ಈ ವಿಚಾರ ಗೊತ್ತಿತ್ತು.ರಮೇಶ ಕತ್ತಿ ಅವರಿಗಿಂತ ಚೆನ್ನಾಗಿ ಡಿಸಿಸಿ ಬ್ಯಾಂಕ್ ನಾವು ಮುನ್ನೆಡೆಸುತ್ತೇವೆ. ಮುಂದಿನ ದಿನಗಳಲ್ಲಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಾನು ಹುಕ್ಕೇರಿಯಲ್ಲಿ ಪ್ರಚಾರ ಆರಂಭ ಮಾಡುತ್ತೇವೆ ಎಂದರು.

    ಡಿಸಿಸಿ ಬ್ಯಾಂಕ್ ಚುನಾವಣೆ ನಮ್ಮ ಗುಂಪಿನಲ್ಲಿ ಲಕ್ಷ್ಮಣ ಸವದಿ ಇಲ್ಲ. ಅಥಣಿ ಹಾಗೂ ಕಾಗವಾಡ ತಾಲೂಕುಗಳಲ್ಲಿ ನಮ್ಮ ಗುಂಪಿನ‌ ಅಭ್ಯರ್ಥಿಗಳಿಲ್ಲ ಎಂದು ಸ್ಪಷ್ಟಪಡಿಸಿದರು.

  • ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆ – ಜಾರಕಿಹೊಳಿ ಬ್ರದರ್ಸ್‌ ಸೋಲಿಸಲು ಪಕ್ಷಾತೀತವಾಗಿ ಒಂದಾದ ಲಿಂಗಾಯತ ನಾಯಕರು

    ಬೆಳಗಾವಿ ಡಿಸಿಸಿ ಬ್ಯಾಂಕ್‌ ಚುನಾವಣೆ – ಜಾರಕಿಹೊಳಿ ಬ್ರದರ್ಸ್‌ ಸೋಲಿಸಲು ಪಕ್ಷಾತೀತವಾಗಿ ಒಂದಾದ ಲಿಂಗಾಯತ ನಾಯಕರು

    ಬೆಳಗಾವಿ: ಪ್ರತಿಷ್ಠಿತ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC Bank) ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ (Jarkiholi Brothers) ವಿರುದ್ಧದ ಹೋರಾಟಕ್ಕೆ ಲಿಂಗಾಯತ (Lingayat) ನಾಯಕರು ಸಜ್ಜಾಗಿದ್ದಾರೆ.

    ಹೌದು. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಲು ಲಿಂಗಾಯತ ನಾಯಕರು ನಿರ್ಧರಿಸಿದ್ದಾರೆ. ಮಹಾರಾಷ್ಟ್ರದ (Maharashtra) ಪ್ರಮುಖ ಮಠವೊಂದರಲ್ಲಿ ಲಿಂಗಾಯತ ನಾಯಕರು ರಹಸ್ಯ ಸಭೆ ನಡೆಸಿದ್ದಾರೆ. ಪಕ್ಷಾತೀತವಾಗಿ ಈ ಸಭೆಗೆ ಹಾಜರಾಗಿ ಡಿಸಿಸಿ ಬ್ಯಾಂಕ್‌ನಲ್ಲಿ ಹಿಡಿತ ಸಾಧಿಸಲು ಒಗ್ಗಟ್ಟಿನ ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ.

    ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದ ನಾಯಕರು ಈ ಸಭೆಯಲ್ಲಿ ಭಾಗಿಯಾಗಿರುವುದು ಕುತೂಹಲ ಮೂಡಿಸಿದೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜೊಲ್ಲೆ ದಂಪತಿ, ರಮೇಶ್ ಕತ್ತಿ, ಅಶೋಕ ಪಟ್ಟಣ್, ನಿಖಿಲ್ ಕತ್ತಿ, ಮಹಾದೇವಪ್ಪ ಯಾದವಾಡ, ರಾಜು ಕಾಗೆ, ಚನ್ನರಾಜ್ ಹಟ್ಟಿಹೊಳಿ ಸೇರಿ ಬಹುತೇಕ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಭೆಯ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಆಗದಂತೆ ನಾಯಕರು ಎಚ್ಚರಿಕೆ ವಹಿಸಿದ್ದಾರೆ.

     

    ಲಿಂಗಾಯತ ನಾಯಕರು ರಹಸ್ಯ ಸಭೆ ನಡೆಸಿದ ಬೆನ್ನಲ್ಲೇ ಡಿಸಿಸಿ ಬ್ಯಾಂಕ್ ಚುನಾವಣೆ ಅಖಾಡಕ್ಕೆ ಜಾರಕಿಹೊಳಿ ಬ್ರದರ್ಸ್ ಎಂಟ್ರಿಯಾಗಿದ್ದಾರೆ. ತಮ್ಮ ಬೆಂಬಲಿತರ ಪರ ಬಾಲಚಂದ್ರ ಜಾರಕಿಹೊಳಿ, ಸತೀಶ್‌ ಜಾರಕಿಹೊಳಿ ಪ್ರಚಾರ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೊಪ್ಪಳ | ಮಾಜಿ ಶಾಸಕ ದಡೇಸೂಗುರು ಕಾರಿಗೆ ಕಲ್ಲೆಸೆದ ಕಿಡಿಗೇಡಿಗಳು

    ಲಿಂಗಾಯತ ನಾಯಕರ ಸಭೆ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಹುಕ್ಕೇರಿ ತಾಲೂಕಿನಲ್ಲಿರುವ ಪ್ರತಿಷ್ಠಿತ ನಿಡಸೋಸಿ ಲಿಂಗಾಯತ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಲಿಂಗಾಯತ ಕಾರ್ಡ್ ಪ್ಲೇ ಮಾಡುವ ಮೂಲಕ ಸಚಿವ ಜಾರಕಿಹೊಳಿ ಎದುರಾಳಿಗಳಿಗೆ ತಿರುಗೇಟು ನೀಡಿದ್ದಾರೆ.

  • ಜಾತಿಗಣತಿ ವಿಶೇಷ ಕ್ಯಾಬಿನೆಟ್‌- ಲಿಂಗಾಯತ, ಒಕ್ಕಲಿಗ, ದಲಿತ, ಅಲ್ಪಸಂಖ್ಯಾತರು ಹೇಳಿದ್ದೇನು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಜಾತಿಗಣತಿ ವಿಶೇಷ ಕ್ಯಾಬಿನೆಟ್‌- ಲಿಂಗಾಯತ, ಒಕ್ಕಲಿಗ, ದಲಿತ, ಅಲ್ಪಸಂಖ್ಯಾತರು ಹೇಳಿದ್ದೇನು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಬೆಂಗಳೂರು: ಜಾತಿ ಗಣತಿ (Caste Census) ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಕೋಲಾಹಲವೇ ಎದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದ ವಿಶೇಷ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತಾದರೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

    ಸಂಪುಟ ಸಭೆಯಲ್ಲಿ ಲಿಂಗಾಯತ (Lingayat) ಹಾಗೂ ಒಕ್ಕಲಿಗ (Vokkaliga) ಸಚಿವರ ತೀವ್ರ ಆಕ್ಷೇಪದಿಂದಾಗಿ, ಮೇ 2ಕ್ಕೆ ವಿಶೇಷ ಸಂಪುಟ ಸಭೆಯಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದೆ. ಎಲ್ಲ ಸಚಿವರ ಅಭಿಪ್ರಾಯವನ್ನು ಅತ್ಯಂತ ತಾಳ್ಮೆಯಿಂದ ಆಲಿಸಿದ ಸಿಎಂ ಸಿದ್ದರಾಮಯ್ಯ ಬರವಣಿಗೆ ರೂಪದಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಲು ಸೂಚಿಸಿದ್ದಾರೆ.

    ಸಂಪುಟ ಸಭೆಯಲ್ಲಿ ಏರುಧ್ವನಿಯಲ್ಲೇ ಜಾತಿಗಣತಿ ವರದಿಯನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ (Mallikarjun) ವಿರೋಧಿಸಿದ್ದರು ಎಂದು ಮೂಲಗಳು ತಿಳಿಸಿವೆ. ಮುಸ್ಲಿಮರಲ್ಲೂ ನೂರಾರು ಉಪ ಪಂಗಡಗಳಿವೆ ಎಲ್ಲವನ್ನೂ ಯಾಕೆ ಒಂದರಲ್ಲೇ ಸೇರಿಸಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಕೂಡ ಗಟ್ಟಿಧ್ವನಿಯಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಜಡ್ಜ್ ಮನೆಯಲ್ಲಿ ಪತ್ತೆಯಾದ ಕಂತೆ ಕಂತೆ ಹಣದ ಬಗ್ಗೆ ಎಫ್‌ಐಆರ್ ಆಗಿಲ್ಲ ಯಾಕೆ: ಧನಕರ್ ಪ್ರಶ್ನೆ

     

    ಸಂಪುಟ ಸಭೆ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆಶಿ ಹಾಗೂ ಒಕ್ಕಲಿಗ ಸಚಿವರು ಪ್ರತ್ಯೇಕವಾಗಿ ಚರ್ಚೆ ನಡೆಸಿದರು.  ಈ ಮಧ್ಯೆ ಸಂಪುಟ ಸಭೆಗೆ 11 ಪುಟಗಳ ಟಿಪ್ಪಣಿ ಸಲ್ಲಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಾರ್ಖಂಡ್‌ನಲ್ಲಿ ಒಬಿಸಿ ಮೀಸಲಾತಿ 77%, ತಮಿಳುನಾಡಲ್ಲಿ 69% ಇದ್ದು, ಇಲ್ಲೂ ಕೂಡ ಮೀಸಲಾತಿ (Reservation) ಪ್ರಮಾಣವನ್ನು 32%ರಿಂದ 51%ಕ್ಕೆ ಏರಿಸುವಂತೆ ಟಿಪ್ಪಣಿ ಸಲ್ಲಿಸಿದೆ.ಇವತ್ತಿನ ಸಂಪುಟ ಸಭೆಗೆ ಪೂರ್ವಾನುಮತಿ ಪಡೆದು ಸಚಿವರಾದ ದಿನೇಶ್‌ಗುಂಡೂರಾವ್ ಹಾಗೂ ವೆಂಕಟೇಶ್ ಗೈರಾಗಿದ್ದರು. ಇದನ್ನೂ ಓದಿ: ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ,ಕೋರ್ಟ್‌ಗಳು ಸೂಪರ್ ಪಾರ್ಲಿಮೆಂಟ್‌ ಆಗಬಾರದು: ಧನಕರ್‌ ಅಸಮಾಧಾನ

     

    ಸಂಪುಟ ಸಭೆಯಲ್ಲಿ ಲಿಂಗಾಯತರ ವಾದವೇನು?
    ಜಾತಿಗಣತಿ ವರದಿಯಲ್ಲಿ ನಮ್ಮ ಸಮುದಾಯ 11% ಅಂತಿದೆ. 1990ರಲ್ಲೇ ಚಿನ್ನಪ್ಪರೆಡ್ಡಿ ಆಯೋಗ 17% ಅಂತ ವರದಿ ಕೊಟ್ಟಿದೆ. ಎಲ್ಲಾ ಉಪಜಾತಿಗಳು ಸೇರಿದ್ರೆ ನಮ್ಮ ಸಮುದಾಯದ ಸಂಖ್ಯೆ 22% ರಷ್ಟಿದೆ. ನಮ್ಮ ಜನಸಂಖ್ಯೆ 11% ಎಂಬ ವರದಿಯನ್ನು ಒಪ್ಪಲು ಸಾಧ್ಯವಿಲ್ಲ. ಮೊದಲು ಈ ದೋಷವನ್ನು ಸರಿಪಡಿಸಿ. ಆಮೇಲೆ ವರದಿ ಬಿಡುಗಡೆ ಮಾಡಿ.

    ಒಕ್ಕಲಿಗ ಸಚಿವರ ವಾದವೇನು?
    ನಮ್ಮ ಸಮುದಾಯವನ್ನು ಬೇರೆ ಬೇರೆ ಕ್ಲಾಸ್‌ಗಳಲ್ಲಿ ಗುರುತಿಸಲಾಗಿದೆ. ಈಗಿರುವ ಅಂಕಿ ಅಂಶ ಒಪ್ಪಲು ಸಾಧ್ಯವಿಲ್ಲ. ಎಲ್ಲಾ ವರ್ಗಗಳಲ್ಲಿರೋ ಸಮುದಾಯವನ್ನು ಒಟ್ಟಿಗೆ ಸೇರಿಸಿ. ದೋಷ ಸರಿಪಡಿಸಿ ಘೋಷಣೆ ಮಾಡುವುದಾದರೆ ಮಾಡಿ. ಇಲ್ಲದಿದ್ದರೆ ಮರು ಸಮೀಕ್ಷೆ ಮಾಡಿ.

    ದಲಿತ, ಅಲ್ಪಸಂಖ್ಯಾತ ಸಚಿವರುಗಳ ವಾದವೇನು?
    ಜಾತಿಗಣತಿಯಿಂದ ಹಿಂದೆ ಸರಿಯೋದು ಬೇಡ. ಹೈಕಮಾಂಡ್ ಆಜ್ಞೆಯಂತೆ ನಡೆದುಕೊಂಡು ಜಾತಿಗಣತಿ ವರದಿ ಜಾರಿಯಾಗಲೇಬೇಕು. ನಮ್ಮ ಪ್ರಣಾಳಿಕೆಯಲ್ಲೇ ಜಾತಿಗಣತಿ ಪ್ರಸ್ತಾಪವಿದೆ. ಯಾವುದೇ ಒತ್ತಡಕ್ಕೆ ಮಣಿಯಬೇಡಿ. ಅಗತ್ಯವಿದ್ರೆ ಅಧ್ಯಯನ ಸಮಿತಿ ರಚಿಸಿ, ಪರಾಮರ್ಶಿಸಿ.

  • ವಿಜಯೇಂದ್ರ ವಿರುದ್ಧ ಯತ್ನಾಳ್ ನೇತೃತ್ವದಲ್ಲಿ ಲಿಂಗಾಯತ ಮುಖಂಡರ ಸಭೆ – ಹೈಕಮಾಂಡ್ ಭೇಟಿಗೆ ತೀರ್ಮಾನ

    ವಿಜಯೇಂದ್ರ ವಿರುದ್ಧ ಯತ್ನಾಳ್ ನೇತೃತ್ವದಲ್ಲಿ ಲಿಂಗಾಯತ ಮುಖಂಡರ ಸಭೆ – ಹೈಕಮಾಂಡ್ ಭೇಟಿಗೆ ತೀರ್ಮಾನ

    ಬೆಂಗಳೂರು: ಬಿಜೆಪಿ (BJP) ರಾಜ್ಯಾಧ್ಯಕ್ಷ ವಿಜಯೇಂದ್ರ (Vijayendra) ಬದಲಾವಣೆಗೆ ರೆಬೆಲ್ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್ (Basanagouda Patil Yatnal) ಲಿಂಗಾಯತ ದಾಳ ಉರುಳಿಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿಂದು ಯತ್ನಾಳ್ ನೇತೃತ್ವದಲ್ಲಿ ಬಿಜೆಪಿ ಲಿಂಗಾಯತ ಮುಖಂಡರ (Lingayat Leaders) ಸಭೆ ನಡೆಸಿ ಮತ್ತೊಂದು ಸುತ್ತಿನ ಸಮರ ಸಾರಲಾಗಿದೆ.

    ಸಭೆಯಲ್ಲಿ ಯತ್ನಾಳ್, ಜಿ ಎಂ ಸಿದ್ದೇಶ್ವರ, ಮಹೇಶ್ ಕುಮಟಳ್ಳಿ, ಬಿ ಪಿ ಹರೀಶ್ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯದ ಬಿಜೆಪಿ ಮಾಜಿ ಶಾಸಕರು, ಜಿಲ್ಲಾ ಮಾಜಿ ಅಧ್ಯಕ್ಷರು, ಮಾಜಿ ಪದಾಧಿಕಾರಿಗಳು ಸೇರಿ 60-70 ಜನ ಸಭೆಯಲ್ಲಿ ಭಾಗವಹಿಸಿದ್ದರು.

     

    ಈ ಮೂಲಕ ವಿಜಯೇಂದ್ರ‌ ವಿರುದ್ಧ ಲಿಂಗಾಯತ ಮುಖಂಡರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಶಾಸಕ ಯತ್ನಾಳ್ ಮುಂದಾಗಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಇಳಿಸುವಂತೆ ಹೈಕಮಾಂಡ್ ಬಳಿ‌ ನಿಯೋಗ ಕೊಂಡೊಯ್ಯುವ ನಿರ್ಣಯ ಕೈಗೊಳ್ಳಲಾಗಿದೆ.

    ವಿಜಯೇಂದ್ರ ಮತ್ತೆ ರಾಜ್ಯಾಧ್ಯಕ್ಷ ಆಗಬಾರದು. ವಿಜಯೇಂದ್ರ ಬದಲು ಯತ್ನಾಳ್ ಅಥವಾ ವಿ ಸೋಮಣ್ಣ‌ ಅಥವಾ ಬೊಮ್ಮಾಯಿಯನ್ನು ಮುಂದಿನ ರಾಜ್ಯಾಧ್ಯಕ್ಷ ಮಾಡುವಂತೆ ವರಿಷ್ಠರಿಗೆ ಮನವಿ ಮಾಡಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: ನಿಮಗೆ ನಾಚಿಕೆಯಾಗಬೇಕು – ಕೇರಳ ಕಾಂಗ್ರೆಸ್‌ ವಿರುದ್ಧ ಪ್ರೀತಿ ಝಿಂಟಾ ಕೆಂಡಾಮಂಡಲ

    ಲಿಂಗಾಯತರಲ್ಲದಿದ್ದರೆ ಒಬಿಸಿ ಸಮುದಾಯದ ಸುನೀಲ್ ಕುಮಾರ್, ಎಸ್‌ಸಿ ಸಮುದಾಯದ ಲಿಂಬಾವಳಿ, ಒಬಿಸಿ ಸಮುದಾಯದ ಕುಮಾರ್ ಬಂಗಾರಪ್ಪ ಅವರನ್ನಾದರೂ ರಾಜ್ಯಾಧ್ಯಕ್ಷ ಮಾಡುವಂತೆ ಒತ್ತಾಯಿಸಲು ನಿರ್ಧರಿಸಲಾಗಿದೆ. ಇದೇವೇಳೆ ಸಭೆಯಲ್ಲಿ ವಿಜಯೇಂದ್ರ ವಿಫಲ ನಾಯಕ ಅಂತ ಆಕ್ರೋಶ ವ್ಯಕ್ತಪಡಿಸಲಾಗಿದೆ.

    ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಸಮುದಾಯದ ಮನೆ ಮನೆ ಜಾಗೃತಿಗೂ ಚಿಂತಿಸಲಾಗಿದೆ. ಒಟ್ಟಿನಲ್ಲಿ ಈ ಸಭೆ ಮೂಲಕ ವಿಜಯೇಂದ್ರ ಪರ ಲಿಂಗಾಯತರು ಇಲ್ಲ ಅನ್ನೋ ಸಂದೇಶ ರವಾನೆ ಮಾಡುವ ಕಸರತ್ತು ನಡೆಸಲಾಗಿದೆ.

  • ನೋಟಿಸ್‌ಗೆ ಬಗ್ಗದ ಯತ್ನಾಳ್ ? – ಬಿಎಸ್‌ವೈ ಭದ್ರಕೋಟೆ ಶಿವಮೊಗ್ಗದಲ್ಲಿ ಲಿಂಗಾಯತ ಸಮಾವೇಶಕ್ಕೆ ತಯಾರಿ

    ನೋಟಿಸ್‌ಗೆ ಬಗ್ಗದ ಯತ್ನಾಳ್ ? – ಬಿಎಸ್‌ವೈ ಭದ್ರಕೋಟೆ ಶಿವಮೊಗ್ಗದಲ್ಲಿ ಲಿಂಗಾಯತ ಸಮಾವೇಶಕ್ಕೆ ತಯಾರಿ

    ನವದೆಹಲಿ: ಶೋಕಾಸ್ ನೋಟಿಸ್‌ಗೆ ಉತ್ತರ ನೀಡಲು ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿ ಮುಂದೆ ಹಾಜರಾದ ಬಳಿಕ ಕೊಂಚ ಮೌನವಾದಂತೆ ಕಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ತೆರೆಮರೆಯಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದು, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಕುಟುಂಬಕ್ಕೆ ಸೆಡ್ಡು ಹೊಡೆಯಲು ಲಿಂಗಾಯತ ಸಮಾವೇಶ (Lingayat Samavesha) ಮಾಡಲು ಚಿಂತನೆ ನಡೆಸಿದ್ದಾರೆ.

    ವಕ್ಫ್ ಹೋರಾಟದ (Waqf Protest) ನೆಪದಲ್ಲಿ ದೆಹಲಿಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಭಿನ್ನರ ಗುಂಪು ವಿವಿಧ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿತ್ತು. ಈ ನಡುವೆಯೇ ಯತ್ನಾಳ್ ಅವರು ಶಿಸ್ತು ಸಮಿತಿ ಮುಂದೆ ಹಾಜರಾಗಿ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿ ಬಹಿರಂಗ ಹೇಳಿಕೆ ನೀಡುವುದಿಲ್ಲ ಎಂದು ಭರವಸೆ ನೀಡಿ ಬಂದಿದ್ದರು.

    ಈ ಭರವಸೆ ಬೆನ್ನಲ್ಲೇ ತೆರೆಮರೆಯಲ್ಲಿ ಕಾರ್ಯತಂತ್ರ ರೂಪಿಸುತ್ತಿರುವ ಯತ್ನಾಳ್ ಮತ್ತು ಅವರ ಟೀಂ ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗಾಯತ ಸಮಾವೇಶ ಮಾಡಲು ತಯಾರಿ ಆರಂಭಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಜಿ.ಎಂ ಜಿದ್ದೇಶ್ವರ್ (GM Siddeshwara) ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಶಿಕಾರಿಪುರ ಅಥವಾ ಸೊರಬದಲ್ಲಿ ಲಿಂಗಾಯತ ಸಮಾವೇಶ ನಡೆಸಿ ಸಾದರ ಮತ್ತು ಪಂಚಮಸಾಲಿ ಲಿಂಗಾಯತ ಸಮುದಾಯದ ಶಕ್ತಿ ಪ್ರದರ್ಶ‌ನಕ್ಕೆ ಚಿಂತನೆ ನಡೆಸಿದ್ದಾರೆ.

    ವಿಧಾನಸಭೆ ಕಲಾದ ಬಳಿಕ ಸಮಾವೇಶ ನಡೆಸಬಹುದು ಎನ್ನಲಾಗಿದ್ದು, ಪಕ್ಷದ ವೇದಿಕೆಯಲ್ಲಿ ಈ ಕಾರ್ಯಕ್ರಮ ಮಾಡದೇ ಖಾಸಗಿಯಾಗಿ ಮಾಡುವ ಮೂಲಕ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ತೊಡೆ ತಟ್ಟಲು ಸಿದ್ಧತೆ ಮಾಡಿಕೊಂಡಿದ್ದು ಇದು ಮತ್ತೊಂದು ಹಂತದ ಆತಂರಿಕ‌ ಕಲಹಕ್ಕೆ ವೇದಿಕೆಯಾಗುವ ಸಾಧ್ಯತೆ ಇದೆ.

     

  • ಲಿಂಗಾಯತರನ್ನು ಸಿಎಂ ಮಾಡಿ, ಆಗದೇ ಇದ್ದರೆ ಡಿಸಿಎಂ ಮಾಡಿ: ರಂಭಾಪುರಿ ಶ್ರೀ

    ಲಿಂಗಾಯತರನ್ನು ಸಿಎಂ ಮಾಡಿ, ಆಗದೇ ಇದ್ದರೆ ಡಿಸಿಎಂ ಮಾಡಿ: ರಂಭಾಪುರಿ ಶ್ರೀ

    ಕಲಬುರಗಿ: ಡಿಕೆ ಶಿವಕುಮಾರ್‌ಗೆ (DK Shivakumar) ಅಧಿಕಾರ ಹಸ್ತಾಂತರಿಸಬೇಕು ಎಂಬ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ನಿನ್ನೆ ಶ್ರೀಶೈಲ ಶ್ರೀಗಳು, ಇಂದು ರಂಭಾಪುರಿ ಶ್ರೀಗಳು (Rambhapuri Shree) ಲಿಂಗಾಯತ ಸಿಎಂ ದಾಳ ಉರುಳಿಸಿದ್ದಾರೆ.

    ರಾಜ್ಯದಲ್ಲಿ ಒಂದು ವೇಳೆ ಸಿಎಂ ಸ್ಥಾನ ಬದಲಾವಣೆ ಸನ್ನಿವೇಶ ಬಂದರೆ ವೀರಶೈವ ಲಿಂಗಾಯತ (Veershaiv Lingayat) ಸಮಾಜಕ್ಕೆ ಕಾಂಗ್ರೆಸ್ ಹೈಕಮಾಂಡ್‌ (Congress High Command) ಆದ್ಯತೆ ನೀಡಬೇಕೆಂದು ಬಾಳೆ ಹೊನ್ನೂರು ರಂಭಾಪುರಿ ಪ್ರಸನ್ನ ರೇಣುಕ ಡಾ.ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಯೋಗ್ಯತೆ ಇಲ್ಲ ಅಂದ್ರೆ ಜವಾಬ್ದಾರಿ ಬಿಟ್ಟು ಚುನಾವಣೆಗೆ ಹೋಗುವುದು ವಾಸಿ: ಸಚಿವ ರಾಜಣ್ಣಗೆ ಡಿಕೆಸು ತಿರುಗೇಟು

    ಒಂದು ವೇಳೆ ಸಿಎಂ ಸ್ಥಾನ ಲಿಂಗಾಯತರಿಗೆ ನೀಡಲು ಆಗದೇ ಇದ್ದರೆ ಡಿಸಿಎಂ ಸ್ಥಾನವಾದರೂ ನೀಡಬೇಕು. ಸದ್ಯ ಸರ್ಕಾರದಲ್ಲಿ ವೀರಶೈವ ಲಿಂಗಾಯತರಿಗೆ ಒಳ್ಳೆಯ ಸಚಿವ ಸ್ಥಾನಗಳನ್ನು ನೀಡಿಲ್ಲ. ಸಿಎಂ ಅವರು ಕೆಲವೇ ಸಮುದಾಯದ ಜನರಿಗೆ ತುಷ್ಟೀಕರಣ ಮಾಡದೇ ಎಲ್ಲರನ್ನು ಸಮಾನಾಗಿ ಕಾಣಬೇಕಾಗಿದೆ ಎಂದರು. ಇದನ್ನೂ ಓದಿ: ಯಾರಾದರೂ ಆರಾಮಾಗಿ ಇರುತ್ತಾರಾ: ದರ್ಶನ್‌ ಭೇಟಿಯ ನಂತರ ರಕ್ಷಿತಾ ಪ್ರೇಮ್‌ ಭಾವುಕ

    ಕಾಂಗ್ರೆಸ್‌ನಲ್ಲಿನ ಕೆಲವು ಹಗರಣ, ಬೆಲೆ ಏರಿಕೆಯಿಂದ ಜನರಿಂದ ಸರ್ಕಾರ ಸುಲಿಗೆ ಹೆಚ್ಚಾಗಿ ಮಾಡುತ್ತಿದೆ. ಇನ್ನು ಗ್ಯಾರಂಟಿ ಯೋಜನೆಗಳಿಂದ (Congress Guarantee) ಅಭಿವೃದ್ಧಿಗೆ ಹಣ ಇಲ್ಲ ಅಂತಾ ಹೇಳುತ್ತಿದ್ದಾರೆ. ಸರ್ಕಾರ ಜನರನ್ನ ದುಡಿಯುವಂತೆ ಮಾಡಬೇಕು ಸೋಮಾರಿತನ ಬರುವಂತೆ ಮಾಡಬಾರದು, ಪಕ್ಷದ ಜನಪ್ರಿಯರತೆ ಹೆಚ್ವಿಸಿಕೊಳ್ಳಲು ಅಗ್ಗದ ಪ್ರಚಾರ ಮಾಡಿ ಗ್ಯಾರಂಟಿಗಳಿಂದ ಹೊಡೆತ ಬಿದ್ದಿದೆ ಅಂತಾ ಗ್ಯಾರಂಟಿ ಯೋಜನೆ ವಿರುದ್ಧ ಸಹ ರಂಭಾಪುರಿ ಶ್ರೀ ಆಕ್ರೋಶ ವ್ಯಕ್ತಪಡಿಸಿದರು.

     

  • ಸಿಎಂ ಬದಲಾವಣೆ ಮಾಡುವುದಾದರೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಿ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

    ಸಿಎಂ ಬದಲಾವಣೆ ಮಾಡುವುದಾದರೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಿ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

    ಚಿಕ್ಕೋಡಿ: ಒಕ್ಕಲಿಗ ಸಮಾಜದ ಚಂದ್ರಶೇಖರ ಸ್ವಾಮೀಜಿ ಡಿ.ಕೆ ಶಿವಕುಮಾರ್‌ (DK Shivakumar) ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಹೇಳಿಕೆ ನೀಡಿದ ಬೆನ್ನಲ್ಲೇ ವೀರಶೈವ ಲಿಂಗಾಯತ (Veershaiv Lingayat) ಸಮಾಜದ ಪಂಚ ಪೀಠದಿಂದ ಲಿಂಗಾಯತ ಮುಖ್ಯಮಂತ್ರಿಗೆ ಬೇಡಿಕೆ ಎದ್ದಿದೆ.

    ಮುಖ್ಯಮಂತ್ರಿ ಬದಲಾವಣೆ ಮಾಡುವುದರೆ ವೀರಶೈವ ಲಿಂಗಾಯತರಿಗೆ ಆದ್ಯತೆ ನೀಡಬೇಕು ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ (Sri Channa Siddharama Panditaradhya Shivacharya swami of Sri Saila) ಆಗ್ರಹಿಸಿದ್ದಾರೆ.

    \

    ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಸ್ಥಾನದಲ್ಲಿ ಬದಲಾವಣೆ ಹಾಗೂ ಡಿಸಿಎಂ ಸ್ಥಾನಗಳನ್ನು ಹೆಚ್ಚುವರಿ ಮಾಡಿದರೆ ಲಿಂಗಾಯತ ಮಂತ್ರಿಗಳಿಗೆ ಹೆಚ್ಚಿನ ಸ್ಥಾನ ನೀಡಬೇಕು. ಚುನಾವಣೆ ಸಂದರ್ಭದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಡಿಕೆಗೆ ಸಿಎಂ ಸ್ಥಾನ ಹೇಳಿಕೆ ಹಿಂದಿದ್ಯಾ ಕುತಂತ್ರ? – ಆಪ್ತರ ಬಳಿ ಸಿಎಂ ತೀವ್ರ ಅಸಮಾಧಾನ

    ಎಂಬಿ ಪಾಟೀಲ್‌, ಈಶ್ವರ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ ಇಂತಹವರಿಗೆ ಅವಕಾಶ ನೀಡಬೇಕು. ಕಾಶಿ, ಉಜ್ಜಯಿನಿ, ಜಗದ್ಗುರುಗಳ ಜೊತೆಗೂ ಈ ವಿಚಾರದಲ್ಲಿ ಚರ್ಚೆ ಮಾಡಲಾಗಿದೆ. ಒಂದು ವೇಳೆ ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಒಪ್ಪಂದ ಆಗಿದ್ದರೆ ಒಪ್ಪಂದದ ಪ್ರಕಾರ ನಡೆದುಕೊಳ್ಳಲಿ ಎಂದು ಶ್ರೀಶೈಲ ಜಗದ್ಗುರುಗಳು ಹೇಳಿದರು.