Tag: ಲಿಂಗಸೂಗುರು

  • ಪ್ರೀತಿ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು ಎಂಎಸ್‌ಸಿ ವಿದ್ಯಾರ್ಥಿನಿಯ ಹತ್ಯೆ

    ಪ್ರೀತಿ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು ಎಂಎಸ್‌ಸಿ ವಿದ್ಯಾರ್ಥಿನಿಯ ಹತ್ಯೆ

    ರಾಯಚೂರು: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಹಾಡಹಗಲೇ ನಡುರಸ್ತೆಯಲ್ಲಿ ಕೊಲೆ ಮಾಡಿರುವ ಘಟನೆ ರಾಯಚೂರಿನ (Raichuru) ಸಿಂಧನೂರಿನಲ್ಲಿ (Sindhanuru) ನಡೆದಿದೆ.

    ಮೃತ ವಿದ್ಯಾರ್ಥಿನಿಯನ್ನು ಲಿಂಗಸುಗೂರಿನ ಶಿಫಾ (24) ಹಾಗೂ ಆರೋಪಿಯನ್ನು ಮುಬಿನ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ವಿಜಯೇಂದ್ರ ಚಡ್ಡಿ ಹಾಕೋ ಮುನ್ನ ನಾನು ಪಕ್ಷ ಸಂಘಟನೆ ಮಾಡಿದ್ದೇನೆ.. ಈ ಬಚ್ಚಾನಿಂದ ಕಲಿಯಬೇಕಿಲ್ಲ: ಯತ್ನಾಳ್

    ಸಿಂಧನೂರಿನಲ್ಲಿ ಎಂಎಸ್‌ಸಿ ಓದುತ್ತಿದ್ದ ವಿದ್ಯಾರ್ಥಿನಿ ನಿತ್ಯ ಲಿಂಗಸುಗೂರಿನಿಂದ ಕಾಲೇಜಿಗೆ ಬರುತ್ತಿದ್ದಳು. ಟೈಲ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸುಮಾರು 6 ವರ್ಷಗಳ ಹಿಂದೆ ಯುವತಿಗೆ ಪರಿಚಯವಾಗಿದ್ದ. ಆದರೆ ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯದ ಮಾತುಕತೆ ನಡೆದಿತ್ತು. ಇದನ್ನು ತಿಳಿದ ಯುವಕ ಲಿಂಗಸುಗೂರಿನಿಂದ ಆಕೆಯನ್ನು ಹಿಂಬಾಲಿಸಿಕೊಂಡು ಬಂದು ಸಿಂಧನೂರಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಬಳಿಯೇ ಕುತ್ತಿಗೆಗೆ ಚಾಕು ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ.

    ಬಳಿಕ ಯುವತಿ ಜೊತೆ ಮದುವೆ ನಿಶ್ಚಯವಾಗಿದ್ದ ಹುಡುಗನ ಚಪ್ಪಲಿ ಅಂಗಡಿಗೆ ನುಗ್ಗಿ ಗಲಾಟೆ ಮಾಡಿದ್ದಾನೆ. ಅಲ್ಲಿಂದ ಲಿಂಗಸೂಗುರು ಪೊಲೀಸರಿಗೆ ಶರಣಾಗಿದ್ದಾನೆ. ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಯ ವಿಚಾರಣೆ ಮುಂದುವರೆದಿದೆ.ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತ – ಮನೆಯೊಡತಿಯ ಸಾವಿನಿಂದ ಆಹಾರ ತೊರೆದ ಶ್ವಾನ!

  • ಕೊರೊನಾ ಭೀತಿ ನಡುವೆಯೂ ಜೋರಾಗಿ ನಡೆದ ಜಾತ್ರೆ: ಸಾವಿರಾರು ಭಕ್ತರು ಭಾಗಿ

    ಕೊರೊನಾ ಭೀತಿ ನಡುವೆಯೂ ಜೋರಾಗಿ ನಡೆದ ಜಾತ್ರೆ: ಸಾವಿರಾರು ಭಕ್ತರು ಭಾಗಿ

    -ಜನ ಸೇರುವುದನ್ನ ತಡೆಯಲು ವಿಫಲವಾದ ತಾಲೂಕು ಆಡಳಿತ

    ರಾಯಚೂರು: ಶ್ರಾವಣ ಮಾಸ ಹಿನ್ನೆಲೆ ಉತ್ತರ ಕರ್ನಾಟಕದಲ್ಲಿ ಜಾತ್ರೆಗಳು ಜೋರಾಗೇ ನಡೆಯುತ್ತವೆ. ಆದ್ರೆ ಕೊರೊನಾ ಸೋಂಕು ಹರಡುವಿಕೆ ತಡೆಯಲು ಜನ ಸೇರುವುದನ್ನ ನಿಯಂತ್ರಿಸಲು ಜಾತ್ರೆಗಳಿಗೆ ನಿರ್ಭಂದ ಹೇರಲಾಗಿದೆ. ಇದೆಲ್ಲಾ ನಿಯಮಗಳನ್ನ ಗಾಳಿಗೆ ತೂರಿ ರಾಯಚೂರಿನ ಲಿಂಗಸುಗೂರು ತಾಲೂಕಿನ ಗೌಡೂರು ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರೆಯನ್ನ ಜೋರಾಗಿ ಮಾಡಲಾಗಿದೆ. ಜಾತ್ರೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದಾರೆ.

    ಕೊರೊನಾ ಭೀತಿ ಮರೆತು ಜೋರಾಗಿ ನಡೆದ ವೀರಭದ್ರೇಶ್ವರ ದೇವರ ಜಾತ್ರೆಯಲ್ಲಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಜನ ಪಾಲ್ಗೊಂಡಿದ್ದರು. ಕೊರೊನಾ ಸೋಂಕು ಹರಡುವಿಕೆ ಭಯವೇ ಇಲ್ಲದೇ ಜಾತ್ರೆಯಲ್ಲಿ ನಾನಾ ಸಂಪ್ರದಾಯ ಆಚರಣೆ ಮಾಡಲಾಗಿದೆ.

    ಪುರವಂತಿಕೆ ಸೇವೆ, ಕಳಸಾರೋಹಣ, ಬಾಯಿಗೆ ಶಸ್ತ್ರ ಹಾಕಿಸಿಕೊಂಡು ವೀರಭದ್ರೇಶ್ವರ ಭಕ್ತರು ಭಕ್ತಿ ಮೆರೆದಿದ್ದಾರೆ. ಸಾವಿರಾರು ತೆಂಗಿನಕಾಯಿ ಒಡೆದು ಭಕ್ತರು ಹರಕೆ ತೀರಿಸಿದ್ದಾರೆ. ಜಾತ್ರೆ ಆಚರಣೆಯಲ್ಲಿ ಜನ ಸೇರುವುದನ್ನ ತಡೆಯುವಲ್ಲಿ ಲಿಂಗಸೂಗುರು ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ.