Tag: ಲಿಂಗತ್ವ ಅಲ್ಪಸಂಖ್ಯಾತರು

  • ದೇಶದಲ್ಲೇ ಫಸ್ಟ್‌ – ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆಗೆ ಚಾಲನೆ

    ದೇಶದಲ್ಲೇ ಫಸ್ಟ್‌ – ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆಗೆ ಚಾಲನೆ

    ಬೆಂಗಳೂರು: ದೇಶದಲ್ಲೇ ಪ್ರಪ್ರಥಮ ಬಾರಿಗೆ ಕರ್ನಾಟಕ (Karnataka) ರಾಜ್ಯಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ (Transgenders) ಮೂಲ ಹಂತದ ಸಮೀಕ್ಷೆ ಹಾಗೂ ಮಾಜಿ ದೇವದಾಸಿಯರ ಮರು ಸಮೀಕ್ಷೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಅವರು ವಿಧಾನಸೌಧದಲ್ಲಿ ಗುರುವಾರ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.

    ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ಸಮೀಕ್ಷೆ (Survey) ನಡೆಯುತ್ತಿದ್ದು, ಮೊದಲ ಬಾರಿಗೆ ರಾಜ್ಯಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಹಾಗೂ 15 ಜಿಲ್ಲೆಗಳಲ್ಲಿ ಮಾಜಿ ದೇವದಾಸಿಯರ ಮರು ಸಮೀಕ್ಷೆ ನಡೆಯಲಿದೆ. ಇದನ್ನೂ ಓದಿ: ಸಮೀರ್‌ ವಿಡಿಯೋ ವೈರಲ್‌ ಹಿಂದೆ ಭಾರಿ ಫಂಡಿಂಗ್ ಇದೆ; 308 ಟ್ರೋಲ್ ಪೇಜಸ್‌, 50-60 ಕಟೆಂಟ್ ಕ್ರಿಯೇಟರ್ಸ್ ಇದ್ದಾರೆ: ಸುಮಂತ್‌

     

    ಸಮೀಕ್ಷೆಯಲ್ಲಿ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಪುನರ್ವಸತಿ ಕಲ್ಪಿಸಲು ಸಮೀಕ್ಷೆಗಳನ್ನು ನಡೆಸಲಾಗುವುದು. ಇದನ್ನೂ ಓದಿ: ಯೂಟ್ಯೂಬರ್‌ ಅಭಿಷೇಕ್‌ಗೆ SIT ಫುಲ್‌ ಗ್ರಿಲ್‌ – ಲೈಕ್ಸ್, ವ್ಯೂವ್ಸ್‌ಗಾಗಿ ವಿಡಿಯೋ ಮಾಡಿದೆ ಅಂತ ತಪ್ಪೊಪ್ಪಿಗೆ

    ಸಮೀಕ್ಷೆಯ ಪೋಸ್ಟರ್ ಬಿಡುಗಡೆ ವೇಳೆ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪದ್ಮಾವತಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ಬಾಬು, ಹಿರಿಯ ಅಧಿಕಾರಿಗಳು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಪ್ರಧಾನಿ ಜನ್ಮದಿನದಂದು ದೇಶದ ಮೊದಲ ಲಿಂಗತ್ವ ಅಲ್ಪಸಂಖ್ಯಾತರ ವಾರ್ಡ್ ತೆರೆದ  ಆರ್‌ಎಂಎಲ್ ಆಸ್ಪತ್ರೆ

    ಪ್ರಧಾನಿ ಜನ್ಮದಿನದಂದು ದೇಶದ ಮೊದಲ ಲಿಂಗತ್ವ ಅಲ್ಪಸಂಖ್ಯಾತರ ವಾರ್ಡ್ ತೆರೆದ  ಆರ್‌ಎಂಎಲ್ ಆಸ್ಪತ್ರೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಹುಟ್ಟುಹಬ್ಬದ ದಿನ ದೇಶದ ಮೊದಲ ಲಿಂಗತ್ವ ಅಲ್ಪಸಂಖ್ಯಾತರ (Transgenders) ಹೊರರೋಗಿ ವಿಭಾಗವನ್ನು ದೆಹಲಿಯ (Delhi) ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಉದ್ಘಾಟಿಸಲಾಗಿದೆ. ಈ ಮೂಲಕ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಆರೋಗ್ಯ ಕ್ಷೇತ್ರದಲ್ಲಿ ನೂತನ ಹೆಜ್ಜೆ ಇರಿಸಿದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಅಜಯ್ ಶುಕ್ಲಾ ಅವರು, ವೈದ್ಯಕೀಯ ಆರೈಕೆಯನ್ನು ಪಡೆಯುವಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಎದುರಿಸುವ ಸವಾಲುಗಳ ಬಗ್ಗೆ ಒತ್ತಿ ಹೇಳಿದರು. ಆಸ್ಪತ್ರೆಯ ಸೇವೆಗಳನ್ನು ಪಡೆಯಲು ಅವರು ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ನೂತನ ವಿಭಾಗ ಆರಂಭದ ನಿರ್ಧಾರ ಕೈಗೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬರಗಾಲ ಘೋಷಣೆಗೆ ಒತ್ತಾಯ – ಶಾಸಕರ ಕಾರ್ಯಕ್ರಮಗಳ ಘೇರಾವ್‍ಗೆ ರೈತ ಸಂಘ ನಿರ್ಧಾರ

    ಈ ವಿಭಾಗದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ರೋಗಿಗಳಿಗೆ ಮೀಸಲಾದ ವಿಶ್ರಾಂತಿ ಕೊಠಡಿಯನ್ನು ಒದಗಿಸಲಾಗುತ್ತದೆ. ಅವರು ಯಾವುದೇ ಅತಂಕವಿಲ್ಲದೇ ಚಿಕಿತ್ಸೆ ಪಡೆಯುವ ವಾತಾವರಣ ಕಲ್ಪಿಸಲಾಗುತ್ತದೆ. ಸೂಕ್ತ ಚಿಕಿತ್ಸೆಯನ್ನು ಸಹ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

    ಈ ವಿಚಾರವಾಗಿ ಕಾರ್ಯಕ್ರಮದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸಂಭ್ರಮಿಸಿದ್ದಾರೆ. ಮೋದಿಯವರ ಹುಟ್ಟುಹಬ್ಬಕ್ಕೆ ಉಡುಗೊರೆ ದೊರೆತಂತಾಗಿದೆ. ಇದುವರೆಗೂ ನಾವು ಆಸ್ಪತ್ರೆಗೆ ಬರಲು ಹಿಂಜರಿಯುತ್ತಿದ್ದೆವು. ಆದರೆ ಈ ಕ್ರಮದಿಂದಾಗಿ ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಿದಂತಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ 14 ವಿದ್ಯಾರ್ಥಿನಿಯರು- ಕಾರಣ ನಿಗೂಢ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟಿಜಿ ಕಾರ್ಡ್ ವಿತರಣೆ – ಕರ್ನಾಟಕ ರಾಜ್ಯದಲ್ಲೇ ಬೀದರ್ ನಂಬರ್ 1 ಜಿಲ್ಲೆ

    ಟಿಜಿ ಕಾರ್ಡ್ ವಿತರಣೆ – ಕರ್ನಾಟಕ ರಾಜ್ಯದಲ್ಲೇ ಬೀದರ್ ನಂಬರ್ 1 ಜಿಲ್ಲೆ

    ಬೀದರ್: ಲಿಂಗತ್ವ ಅಲ್ಪಸಂಖ್ಯಾತರಿಗೆ ಆನ್‍ಲೈನ್ ಮೂಲಕ ಟಿಜಿ ಕಾರ್ಡುಗಳನ್ನು ವಿತರಿಸಿದ ಕರ್ನಾಟಕ ರಾಜ್ಯದ ಮೊದಲನೇ ಜಿಲ್ಲೆಯಾಗಿ ಬೀದರ್ ಜಿಲ್ಲೆಯು ರಾಜ್ಯದ ಗಮನ ಸೆಳೆದಿದೆ. ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಹಲವಾರು ಬಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ದೇಶನ ನೀಡಿದ್ದರಿಂದ ಟಿಜಿ ಕಾರ್ಡು ವಿತರಣೆಯ ಪ್ರಕ್ರಿಯೆಯು ಬೀದರ್ ಜಿಲ್ಲೆಯಲ್ಲಿ ತೀವ್ರ ರೀತಿಯಲ್ಲಿ ನಡೆಯುತ್ತಿದೆ.

    ಬೀದರ್ ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 53 ಲಿಂಗತ್ವ ಅಲ್ಪಸಂಖ್ಯಾತರಿಗೆ ಟಿ.ಜಿ.ಕಾರ್ಡುಗಳನ್ನು ಆನ್‍ಲೈನ್ ಮೂಲಕ ಮಾಡಿಸಲಾಗಿದ್ದು, ಈ ಪ್ರಕ್ರಿಯೆಯನ್ನು ಇನ್ನಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತರಬೇತಿ ನಡೆಯಿತು. ಇದನ್ನೂ ಓದಿ: ಯಶ್ ನೇತೃತ್ವದ ತಂಡದಿಂದ ಪುರಾತನ ಕಲ್ಯಾಣಿ ಪುನರುಜ್ಜೀವನಕ್ಕೆ ಚಾಲನೆ

    ಈ ತರಬೇತಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ರವೀಂದ್ರ ಎಸ್ ರತ್ನಾಕರ, ಕರ್ನಾಟಕ ರಾಜ್ಯ ಮಂಗಳಮುಖಿಯರ ಅಭಿವೃದ್ಧಿ ನಿಗಮದ ನಿರೀಕ್ಷಕರಾದ ಯಲ್ಲಮ್ಮ ಬೋವಿ, ಶರಣ ತತ್ವ ಪ್ರಸಾರ, ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಬಸವರಾಜ್, ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷರಾದ ಭೀಮ್ ಅಲಿಯಾಸ್ ಭೂಮಿಕಾ ಮತ್ತು ಇನ್ನಿತರ ಲಿಂಗತ್ವ ಅಲ್ಪಸಂಖ್ಯಾತರು ಭಾಗವಹಿಸಿದ್ದರು.

    ಬೀದರ್ ಜಿಲ್ಲೆಯಲ್ಲಿ 944 ಜನ ಲಿಂಗತ್ವ ಅಲ್ಪಸಂಖ್ಯಾತರಿದ್ದು, ಇದರಲ್ಲಿ ಶರಣ ತತ್ವ ನೇರ ಪ್ರಸಾರ ಮತ್ತು ಗ್ರಾಮೀಣ ಸಂಸ್ಥೆ ಬೀದರ್ ನಲ್ಲಿ 398 ಜನರು ನೋಂದಣಿಯಾಗಿದ್ದಾರೆ. ಬೀದರ್ ತಾಲೂಕಿನಲ್ಲಿ 140, ಭಾಲ್ಕಿ ತಾಲೂಕಿನಲ್ಲಿ 118, ಬಸವಕಲ್ಯಾಣ ತಾಲೂಕಿನಲ್ಲಿ 51, ಹುಮನಾಬಾದ್ ತಾಲೂಕಿನಲ್ಲಿ 41 ಮತ್ತು ಔರಾದ್ ತಾಲೂಕಿನಲ್ಲಿ 48 ಜನರು ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. ಇದನ್ನೂ ಓದಿ: ರಾಜಕೀಯ ಮಾಡಲು ಸಿದ್ದರಾಮಯ್ಯ, ಹೆಚ್‍ಡಿಕೆಗೆ ವಿಷಯಗಳೇ ಸಿಗ್ತಿಲ್ಲ: ಶಿವರಾಜ್ ಪಾಟೀಲ್