Tag: ಲಿಂಗ

  • ರಾಹುಲ್ ಗಾಂಧಿಗೆ ವಿಭೂತಿ ಹಚ್ಚಿ ಮುರುಘಾಶ್ರೀಗಳಿಂದ ಲಿಂಗಧಾರಣೆ

    ರಾಹುಲ್ ಗಾಂಧಿಗೆ ವಿಭೂತಿ ಹಚ್ಚಿ ಮುರುಘಾಶ್ರೀಗಳಿಂದ ಲಿಂಗಧಾರಣೆ

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಮುರುಘಾಮಠಕ್ಕೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಲಿಂಗಧಾರಣೆ ಮಾಡಿ, ವಿಭೂತಿ ಹಚ್ಚಿದ ಮುರುಘಾಶ್ರೀಗಳು ತತ್ವದ ಉಪದೇಶ ಮಾಡಿದರು.

     

    ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಪ್ರಯುಕ್ತ ದಾವಣೆಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಯಿಂದ ಹೊರಟಿದ್ದ ರಾಹುಲ್ ಗಾಂಧಿ ಅವರು ಚಿತ್ರದುರ್ಗದ ಮುರುಘಾಮಠಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ್ದರು. ಈ ವೇಳೆ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ವಿವಿಧ ಮಠಾಧೀಶರಿಂದ ಆಶೀರ್ವಾದ ಪಡೆದರು.  ಇದನ್ನೂ ಓದಿ: ಸಿದ್ದರಾಮೋತ್ಸವ : ‘ಮೈಸೂರು ಹುಲಿಯಾ’, ‘ಸೆಲ್ಫ್ ಮೇಡ್ ಸಿದ್ದಣ್ಣ’ ಹಾಡು ರಿಲೀಸ್

    ಮುರುಘಾಮಠಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರು ಮೊದಲಿಗೆ ಬಸವಣ್ಣನ ಭಾವಚಿತ್ರ ಹಾರ ಹಾಕಿ ನಮಸ್ಕರಿಸಿದರು. ನಂತರ ಮಠಾಧೀಶರೊಂದಿಗೆ ಕೊಂಚ ಕಾಲ ಸಂವಾದ ನಡೆಸಿದ ರಾಹುಲ್ ಗಾಂಧಿ ಅವರಿಗೆ ಹಾರ ಹಾಕಿ, ಶಾಲು ಹೊದಿಸಿ, ಬಸವಣ್ಣನವರ ಬಾವಚಿತ್ರ ನೀಡಿ ಸನ್ಮಾನ ಮಾಡಲಾಯಿತು. ಬಳಿಕ ರಾಹುಲ್ ಗಾಂಧಿಗೆ ಲಿಂಗಧಾರಣೆ ಮಾಡಿ, ವಿಭೂತಿ ಹಚ್ಚಿ, ಲಿಂಗ ಪೂಜೆ ತತ್ವದ ಉಪದೇಶ ಮಾಡಿದರು ಮತ್ತು ಲಿಂಗ ಪೂಜೆ ಪಾಲಿಸುವುದಾಗಿ ರಾಹುಲ್ ಗಾಂಧಿ ತಿಳಿಸಿದರು.

    ಈ ವೇಳೆ ರಾಹುಲ್ ಗಾಂಧಿ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸುರ್ಜೆವಾಲಾ, ವೇಣುಗೋಪಾಲ, ಕೆಪಿಪಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಸಾಥ್ ನೀಡಿದರು. ಇದನ್ನೂ ಓದಿ: ಹುಬ್ಬಳ್ಳಿಯ ಜಿಮ್‍ನಲ್ಲಿ ಬಿಗಿ ಭದ್ರತೆಯಲ್ಲಿಯೇ ರಾಹುಲ್ ಗಾಂಧಿ ವರ್ಕೌಟ್

    Live Tv
    [brid partner=56869869 player=32851 video=960834 autoplay=true]

  • ಪ್ರೀತಿ ನಿರಾಕರಿಸಿದ ಮನೆಯವರು – ಲಿಂಗವನ್ನೇ  ಬದಲಾಯಿಸಿಕೊಂಡ ಯುವತಿ

    ಪ್ರೀತಿ ನಿರಾಕರಿಸಿದ ಮನೆಯವರು – ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ

    ಲಕ್ನೋ: ಪರಸ್ಪರ ಪ್ರೀತಿಸುತ್ತಿದ್ದ ಯುವತಿಯರಿಬ್ಬರ ಸಂಬಂಧಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಯುವತಿಯೊಬ್ಬಳು ಲಿಂಗವನ್ನೇ ಬದಲಾಯಿಸಿಕೊಂಡ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

    ಸಲಿಂಗಿಗಳಾದ ಯುವತಿಯರಿಬ್ಬರ ಒಬ್ಬರನೊಬ್ಬರು ಬಹಳ ಪ್ರೀತಿಸುತ್ತಿದ್ದರು. ತಮ್ಮ ಇಬ್ಬರ ಸಂಬಂಧವನ್ನು ಮತ್ತೊಂದು ಹಂತಕ್ಕೆ ತೆಗದುಕೊಂಡು ಹೋಗಲು ಇಚ್ಛಿಸಿ ಇಬ್ಬರು ಮದುವೆಯಾಗಲು ತೀಮಾನಿಸಿದರು. ಆದರೆ ಇವರಿಬ್ಬರ ಸಂಬಂಧಕ್ಕೆ ಮನೆಯವರು ವಿರೋಧ ವ್ಯಕ್ತಿಪಡಿಸಿದ್ದಾರೆ. ಈ ವೇಳೆ ಅವರಲ್ಲಿ ಒಬ್ಬಳು ಶಸ್ತ್ರಚಿಕಿತ್ಸೆ ಮೂಲಕ ಲಿಂಗವನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿದಳು.

    ಹುಚ್ಚಿಯಂತೆ ಪ್ರೀತಿಸುತ್ತಿದ್ದ ಯುವತಿ ತಮ್ಮ ಪ್ರೀತಿಗೆ ಯಾವುದೇ ಅಡ್ಡಿ, ಆತಂಕ ಬರಬಾರದು ಎಂಬ ಉದ್ದೇಶದಿಂದ ತನ್ನ ಲಿಂಗಬದಲಾಯಿಸಿಕೊಳ್ಳಲು ತೀರ್ಮಾನಿಸಿದಳು. ಯುವತಿ ತನ್ನ ಕುಟುಂಬಸ್ಥರ ಮನವೊಲಿಸಲು ನಾನಾ ಪ್ರಯತ್ನಗಳನ್ನಜು ಮಾಡಿದಳು ಆದರೆ, ಆಕೆಯ ಎಲ್ಲಾ ಪ್ರಯತ್ನಗಳು ವ್ಯರ್ಥವಾಯಿತು. ಕೊನೆಗೆ ತಮ್ಮಿಬ್ಬರ ಸಂಬಂಧ ಉಳಿಸಿಕೊಳ್ಳಲು ಆಕೆಗೆ ಬೇರೆ ದಾರಿ ಕಾಣದಿದ್ದಾಗ, ತನ್ನ ಲಿಂಗವನ್ನೇ ಬದಲಾಯಿಸಿಕೊಳ್ಳಲು ಯೋಚಿಸಿದ್ದಾಳೆ.

    ಪ್ರಯಾಗ್‌ರಾಜ್‌ನಲ್ಲಿರುವ ಸ್ವರೂಪ್ ರಾಣಿ ನೆಹರೂ ಆಸ್ಪತ್ರೆಯ ವೈದ್ಯರ ತಂಡವು ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಕೆ ಸಂಪೂರ್ಣ ಪುರುಷನಾಗಲು ಸುಮಾರು 1.5 ವರ್ಷಗಳು ಬೇಕಾಗುತ್ತವೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಮಹಿಳೆಗೆ ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ ನೀಡಲಾಗುತ್ತದೆ. ಟೆಸ್ಟೋಸ್ಟೆರಾನ್ ಚಿಕಿತ್ಸೆಯು ಎದೆಯ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಡಾ. ಮೋಹಿತ್ ಜೈನ್ ಹೇಳಿದ್ದಾರೆ.

    ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಯ ನಂತರ ಯುವತಿ ಗರ್ಭಧರಿಸುವ ಮತ್ತು ಗರ್ಭಿಣಿಯಾಗುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಈ ರೀತಿ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದು ಇದೇ ಮೊದಲಾಗಿದ್ದು, ಸಂಪೂರ್ಣ ಚಿಕಿತ್ಸೆ 18 ತಿಂಗಳಿನೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸದ್ಯ ಯುವತಿಯ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ತಿಳಿಸಿದ್ದಾರೆ.

    Live Tv

  • ರಾಯಚೂರಿನಲ್ಲೊಂದು ಅಚ್ಚರಿ ದೇವಾಲಯ – ಯುಗಾದಿಗೆ ಮಾತ್ರ ಈಶ್ವರ ಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ

    ರಾಯಚೂರಿನಲ್ಲೊಂದು ಅಚ್ಚರಿ ದೇವಾಲಯ – ಯುಗಾದಿಗೆ ಮಾತ್ರ ಈಶ್ವರ ಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ

    ರಾಯಚೂರು: ಯುಗಾದಿ ಹಬ್ಬ ಭಾರತೀಯರ ಹೊಸ ವರ್ಷದ ಮೊದಲ ಹಬ್ಬ. ಈ ವಿಶೇಷ ದಿನದಂದು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಮಾರಟೇಶ್ವರ ದೇವಾಲಯದ ಉದ್ಬವ ಲಿಂಗಕ್ಕೆ ಸೂರ್ಯ ರಶ್ಮಿ ನೇರವಾಗಿ ಬೀಳುತ್ತದೆ. ಹೀಗಾಗಿ ಇಲ್ಲಿನ ಭಕ್ತರು ಯುಗಾದಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ.

    ಯುಗಾದಿ ಸಂದರ್ಭದಲ್ಲಿ ಎರಡು ಮೂರುದಿನಗಳ ಕಾಲ ಸೂರ್ಯ ರಶ್ಮಿ ಲಿಂಗದ ಮೇಲೆ ಬೀಳುತ್ತದೆ. ಆದರೆ ಹಬ್ಬದ ದಿನ ಮಾತ್ರ ಸೂರ್ಯೋದಯವಾಗುತ್ತಿದ್ದಂತೆ ನೇರವಾಗಿ ಹೊಂಗಿರಣಗಳು ಲಿಂಗದ ಮೇಲೆ ಬೀಳುತ್ತದೆ. 7ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಈ ದೇವಸ್ಥಾನವನ್ನು ಎರಡನೇ ಶ್ರೀಶೈಲ ಅಂತಲೂ ಕರೆಯುತ್ತಾರೆ. ಇದನ್ನೂ ಓದಿ: ಉಕ್ರೇನ್ ನಿರಾಶ್ರಿತರಿಗಾಗಿ ಅಪ್ಲಿಕೇಶನ್ ರೆಡಿ ಮಾಡಿದ 15ರ ಭಾರತೀಯ ಬಾಲಕ

    ಸೂರ್ಯನ ಚಲನೆ ಆಧಾರದ ಮೇಲೆ ನಿರ್ಮಿಸಲಾಗಿರುವ ವಿಶಿಷ್ಟ ವಾಸ್ತುಶಿಲ್ಪ ಹೊಂದಿರುವ ಈ ದೇವಾಲಯ ಪ್ರತಿವರ್ಷ ಯುಗಾದಿಯ ದಿನ ಈ ಅಚ್ಚರಿಗೆ ಕಾರಣವಾಗುತ್ತಿದೆ. ಇದನ್ನೂ ಓದಿ: ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪೊಲೀಸರ ಮಸ್ತ್ ಡ್ಯಾನ್ಸ್: ಪರ,ವಿರೋಧ ಚರ್ಚೆ

  • ಅಪರೂಪದ ಘಟನೆ- ನಿತ್ಯ ಎರಡು ಬಾರಿ ಲಿಂಗಮುದ್ರೆಗೆ ಹಾಲುಣಿಸುವ ಹಸು

    ಅಪರೂಪದ ಘಟನೆ- ನಿತ್ಯ ಎರಡು ಬಾರಿ ಲಿಂಗಮುದ್ರೆಗೆ ಹಾಲುಣಿಸುವ ಹಸು

    ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಮಾದಾಪುರದ ಜನ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು, ಲಿಂಗಮುದ್ರೆ ಕಲ್ಲಿಗೆ ಗೋವು ಪ್ರತಿ ದಿನ ಎರಡು ಬಾರಿ ಹಾಲುಣಿಸುತ್ತಿದೆ. ನಿಯಮಿತವಾಗಿ ನಿತ್ಯ ಹಾಲುಣಿಸುವುದನ್ನು ಕಂಡು ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ.

    ಮನೆಯ ಕೊಟ್ಟಿಗೆಯಿಂದ ಬಿಟ್ಟ ತಕ್ಷಣ ಗ್ರಾಮದ ಪುಂಡಲೀಕ ಶೇಟ್ ಅವರಿಗೆ ಸೇರಿದ ಹಸು ನೇರವಾಗಿ ಜಮೀನಿನಲ್ಲಿರುವ ಲಿಂಗಮುದ್ರೆ ಕಲ್ಲಿನ ಬಳಿ ತೆರಳುತ್ತದೆ. ಬಳಿಕ ಲಿಂಗಮುದ್ರೆ ಕಲ್ಲಿಗೆ ತನ್ನ ಕೆಚ್ಚಲನ್ನು ತಾಗಿಸಿಕೊಂಡು ನಿಲ್ಲುತ್ತದೆ. ಈ ಮೂಲಕ ನಿಧಾನವಾಗಿ ಅದಕ್ಕೆ ಹಾಲು ಜಿನುಗುವಂತೆ ಮಾಡುತ್ತದೆ.

    ಕಳೆದೆರಡು ತಿಂಗಳ ಹಿಂದೆ ಈ ಹಸುವಿನ ಕರು ಮೃತಪಟ್ಟಿದ್ದು, ಕರು ಮೃತಪಟ್ಟ ಒಂದು ತಿಂಗಳ ವರೆಗೆ ಹಸು ಮಾಲೀಕ ಹಾಲು ಹಿಂಡಿ, ಬಳಿಕ ನಿಲ್ಲಿಸಿದ್ದಾರೆ. ನಂತರ ಹಸು ಕೂಡ ಹಾಲು ಕೊಡುವುದನ್ನು ನಿಲ್ಲಿಸಿತ್ತು. ಕರು ಮೃತಪಟ್ಟಿರುವುದರಿಂದ ಹಸು ಹಾಲು ಕೊಡುತ್ತಿಲ್ಲ ಎಂದು ಮಾಲೀಕ ಪುಂಡಲೀಕ ಶೇಟ್ ಅಂದುಕೊಂಡಿದ್ದರು. ಕೆಲ ದಿನಗಳ ಬಳಿಕ ಪುಂಡಲೀಕ ಶೇಟ್ ಅಣ್ಣನ ಮಗ, ಹಸು ಜಮೀನಿಗೆ ತೆರಳಿ, ಜಮೀನಿನಲ್ಲಿದ್ದ ಲಿಂಗಮುದ್ರೆಗೆ ಹಾಲುಣಿಸುವುದನ್ನು ನೋಡಿದ್ದನಂತೆ. ಆದರೆ ಅಭಾಸವಾಗಬಾರದು ಎಂಬ ಉದ್ದೇಶದಿಂದ ಯಾರಿಗೂ ತಿಳಿಸದೇ ಸುಮ್ಮನಿದ್ದ ಪುಂಡಲೀಕ ಅಣ್ಣನ ಮಗ, ನಂತರ ತಮ್ಮ ಚಿಕ್ಕಪ್ಪನಿಗೆ ವಿಷಯ ತಿಳಿಸಿದ್ದಾರೆ.

    ಈ ಹಸು ದಿನಕ್ಕೆ ಎರಡು ಬಾರಿ ಕಲ್ಲಿಗೆ ಹಾಲುಣಿಸುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಈ ರೀತಿ ವರ್ತಿಸುತ್ತಿದೆಯಂತೆ. ಇದೀಗ ಲಿಂಗಮುದ್ರೆ ಕಲ್ಲು ಹಾಗೂ ಗೋ ಮಾತೆ ಸಂಬಂಧವನ್ನು ಜನರು, ಕಾತುರದಿಂದ ವೀಕ್ಷಿಸುತ್ತಿದ್ದಾರೆ.