Tag: ಲಿಂಕ್ ಸುಪ್ರೀಂ ಕೋರ್ಟ್

  • ಗಮನಿಸಿ, ಮೊಬೈಲ್ ನಂಬರ್‍ಗೆ ಆಧಾರ್ ಲಿಂಕ್ ಮಾಡಲು ಫೆಬ್ರವರಿ 6 ಕೊನೆ ದಿನ

    ಗಮನಿಸಿ, ಮೊಬೈಲ್ ನಂಬರ್‍ಗೆ ಆಧಾರ್ ಲಿಂಕ್ ಮಾಡಲು ಫೆಬ್ರವರಿ 6 ಕೊನೆ ದಿನ

    ನವದೆಹಲಿ: 2018 ಫೆಬ್ರುವರಿ 6 ರ ಒಳಗಡೆ ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲೇಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

    ಈಗಾಗಲೇ ಹೊಸ ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ ಮಾಡಲಾಗಿದ್ದು, ಅಲ್ಲದೇ ಈ ಹಿಂದೆ ಸರ್ಕಾರ ಎಲ್ಲಾ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಜತೆ ಲಿಂಕ್ ಮಾಡಿಸಬೇಕು ಸೂಚಿಸಿತ್ತು. ಕೇಂದ್ರವು ಸುಪ್ರೀಂಕೋರ್ಟ್‍ಗೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ 2018 ಫೆಬ್ರವರಿ 6ರ ಒಳಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು ಎಂದು ತಿಳಿಸಿದೆ.

    ವಕೀಲ ಝೋಹೆಬ್ ಹೊಸೈನ್ ಮೂಲಕ ಸುಪ್ರೀಂ ನ್ಯಾಯಾಪೀಠಕ್ಕೆ ಕೇಂದ್ರ ಸರ್ಕಾರವು 113 ಪುಟಗಳ ಅಫಿಡವಿಟ್ ಸಲಿಸಿದೆ. ಇದೇ ವೇಳೆ ಬ್ಯಾಂಕ್ ಖಾತೆ ಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಮಾರ್ಚ್ 31 ರ ವರೆಗೆ ಗಡುವು ವಿಸ್ತರಿಸಿದೆ. ನಂತರದಲ್ಲಿ ಯಾವುದೇ ಕಾರಣಕ್ಕೂ ಗಡುವನ್ನು ಮತ್ತೆ ವಿಸ್ತರಿಸುವುದಿಲ್ಲ, ಆಧಾರ್ ಸಂಖ್ಯೆ ಲಿಂಕ್ ಮಾಡದೆ ಇರುವ ಖಾತೆಗಳು ನಿಷ್ಕ್ರಿಯವಾಗುತ್ತದೆ ಎಂದು ತಿಳಿಸಿದೆ.

    ವಿಶ್ವದ ಹಲವು ದೇಶಗಳಲ್ಲಿ ಸರ್ಕಾರಿ ವೆಬ್‍ಸೈಟ್‍ಗಳಿಗೆ ಹ್ಯಾಕರ್‍ಗಳು ದಾಳಿ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ಹೊಂದಿದ್ದು, ಪ್ರಸ್ತುತ ಆಧಾರ್ ಮಾಹಿತಿಯನ್ನು ಸುರಕ್ಷಿತವಾಗಿಡಲಾಗಿದೆ ಅಲ್ಲದೇ ಇದುವರೆಗೂ ಯಾವುದೇ ಸೈಬರ್ ದಾಳಿಗೆ ನಡೆದಿಲ್ಲ ಎಂದು ಕೋರ್ಟ್‍ಗೆ ತಿಳಿಸಿದೆ.

    ಆಧಾರ್ ಜೋಡಣೆ ಕುರಿತು ಸಾರ್ವಜನಿಕರು ಕೋರ್ಟ್‍ಗೆ ಸಲ್ಲಿಸಲಾಗಿದ್ದ ಆರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಕುರಿತು ನಾಲ್ಕು ವಾರಗಳಲ್ಲಿ ಉತ್ತರ ನೀಡಬೇಕು ಎಂದು ಸೂಚನೆಯನ್ನು ನೀಡಿತ್ತು.