Tag: ಲಾಹೋರ್‌ 1947

  • ಆ ಕಡೆ ಐಪಿಎಲ್, ಈ ಕಡೆ ಸಿನಿಮಾ: ಬ್ಯುಸಿಯಾದ ಪ್ರೀತಿ ಜಿಂಟಾ

    ಆ ಕಡೆ ಐಪಿಎಲ್, ಈ ಕಡೆ ಸಿನಿಮಾ: ಬ್ಯುಸಿಯಾದ ಪ್ರೀತಿ ಜಿಂಟಾ

    ರೋಬ್ಬರಿ ಆರು ವರ್ಷಗಳ ನಂತರ ಪ್ರೀತಿ ಜಿಂಟಾ (Preity Zinta) ಮುಖಕ್ಕೆ ಬಣ್ಣ ಹಚ್ಚಿದ್ದಾರೆ. ಹಲವು ವರ್ಷಗಳಿಂದ ವಿದೇಶದಲ್ಲೇ ಬೀಡು ಬಿಟ್ಟಿರುವ ಪ್ರೀತಿ, ಈಗ ಐಪಿಎಲ್ (IPL) ಪಂದ್ಯಕ್ಕಾಗಿ ಭಾರತಕ್ಕೆ ಬಂದಿದ್ದಾರೆ. ಒಂದು ಕಡೆ ಐಪಿಎಲ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೆ, ಮತ್ತೊಂದು ಕಡೆ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

    ಪ್ರೀತಿ ಜಿಂಟಾ ಮದುವೆಯಾಗಿ ವಿದೇಶದಲ್ಲಿ ಸೆಟಲ್ ಆದ ನಂತರ ಸಿನಿಮಾ ರಂಗವನ್ನೇ ಮರೆತಿದ್ದರು. ಇದೀಗ ಸನ್ನಿ ಡಿಯೋಲ್ ಜೊತೆ ಡ್ಯುಯೇಟ್ ಹಾಡೋಕೆ ನಟಿ ಹೊರಟಿದ್ದಾರೆ. ಹಾಗಾಗಿ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಹುಮ್ಮಸ್ಸು ಡಬಲ್ ಆಗಿದೆ.

    ‘ಗದರ್ 2’ (Gadar 2) ಮೂಲಕ ಸಕ್ಸಸ್ ಕಂಡಿರುವ ಸನ್ನಿ ಡಿಯೋಲ್ (Sunny Deol) ಜೊತೆ ಪ್ರೀತಿ ಜಿಂಟಾ ಜೊತೆಯಾಗಿ ನಟಿಸುತ್ತಿದ್ದಾರೆ. ಹೊಸ ಸಿನಿಮಾಗೆ ‘ಲಾಹೋರ್ 1947’ ಎಂದು ಟೈಟಲ್ ಇಡಲಾಗಿದೆ. ಚಿತ್ರಕ್ಕೆ ರಾಜ್‌ಕುಮಾರ್ ಸಂತೋಷಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸ್ಟಾರ್ ನಟ ಆಮೀರ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ.

     

    ಸನ್ನಿ ಡಿಯೋಲ್ ಜೊತೆ ಪ್ರೀತಿ ಜಿಂಟಾಗೆ ಉತ್ತಮ ಬಾಂಧವ್ಯವಿದೆ. ಈ ಹಿಂದೆ ಇಬ್ಬರೂ ಜೊತೆಯಾಗಿ ಎರಡ್ಮೂರು ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಈಗ ‘ಲಾಹೋರ್ 1947’ (Lahore 1947) ಚಿತ್ರದ ಮೂಲಕ ಮತ್ತೆ ಈ ಜೋಡಿ ಜೊತೆಯಾಗುತ್ತಿದ್ದಾರೆ. ‘ಗದರ್ 2’ ಚಿತ್ರದ ಸಕ್ಸಸ್ ಸನ್ನಿ ಡಿಯೋಲ್ ಕೆರಿಯರ್ ಮರುಜೀವ ನೀಡಿದೆ. ಹಾಗಾಗಿ ಅವರ ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

  • ಮತ್ತೆ ನಟನೆಗೆ ಮರಳಿದ ಪ್ರೀತಿ ಜಿಂಟಾ

    ಮತ್ತೆ ನಟನೆಗೆ ಮರಳಿದ ಪ್ರೀತಿ ಜಿಂಟಾ

    ಬಾಲಿವುಡ್ ಬ್ಯೂಟಿ ಪ್ರೀತಿ ಜಿಂಟಾ ಮದುವೆಯಾಗಿ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಐಪಿಎಲ್ ಕಾರಣದಿಂದ ಆಗಾಗ ಭಾರತಕ್ಕೆ ನಟಿ ಭೇಟಿ ನೀಡುತ್ತಾರೆ. ಹಲವು ವರ್ಷಗಳ ನಂತರ ಪ್ರೀತಿ ಜಿಂಟಾ (Preity Zinta) ನಟನೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಸನ್ನಿ ಡಿಯೋಲ್ ಜೊತೆ ಡ್ಯುಯೇಟ್ ಹಾಡೋಕೆ ನಟಿ ಸಜ್ಜಾಗಿದ್ದಾರೆ.

    ‘ಗದರ್ 2’ (Gadar 2) ಮೂಲಕ ಸಕ್ಸಸ್ ಕಂಡಿರುವ ಸನ್ನಿ ಡಿಯೋಲ್ (Sunny Deol) ಜೊತೆ ಪ್ರೀತಿ ಜಿಂಟಾ ಜೊತೆಯಾಗಿ ನಟಿಸುತ್ತಿದ್ದಾರೆ. ಹೊಸ ಸಿನಿಮಾಗೆ ‘ಲಾಹೋರ್ 1947’ ಎಂದು ಟೈಟಲ್ ನೀಡಲಾಗಿದೆ. ಚಿತ್ರಕ್ಕೆ ರಾಜ್‌ಕುಮಾರ್ ಸಂತೋಷಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸ್ಟಾರ್ ನಟ ಆಮೀರ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಚಿತ್ರೀಕರಣ ಸಂದರ್ಭದ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Preity G Zinta (@realpz)

    ಸನ್ನಿ ಡಿಯೋಲ್ ಜೊತೆ ಪ್ರೀತಿ ಜಿಂಟಾಗೆ ಉತ್ತಮ ಬಾಂಧವ್ಯವಿದೆ. ಈ ಹಿಂದೆ ಇಬ್ಬರೂ ಜೊತೆಯಾಗಿ ಎರಡ್ಮೂರು ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಈಗ ‘ಲಾಹೋರ್ 1947’ (Lahore 1947) ಚಿತ್ರದ ಮೂಲಕ ಮತ್ತೆ ಈ ಜೋಡಿ ಜೊತೆಯಾಗುತ್ತಿದ್ದಾರೆ. ಇದನ್ನೂ ಓದಿ:ಲಂಡನ್ ಅಲ್ಲ, ಭಾರತದಲ್ಲೇ ಅಂಬಾನಿ ಪುತ್ರನ ವಿವಾಹ

    ‘ಗದರ್ 2’ ಚಿತ್ರದ ಸಕ್ಸಸ್ ಸನ್ನಿ ಡಿಯೋಲ್ ಕೆರಿಯರ್ ಮರುಜೀವ ನೀಡಿದೆ. ಹಾಗಾಗಿ ಅವರ ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.