Tag: ಲಾಹೋರ್ ಸ್ಫೋಟ

  • ಉಗ್ರ ಹಫೀಸ್ ಸಯೀದ್ ಮನೆಯ ಸಮೀಪ ಭಾರೀ ಸ್ಫೋಟ – ಇಬ್ಬರು ಬಲಿ

    ಉಗ್ರ ಹಫೀಸ್ ಸಯೀದ್ ಮನೆಯ ಸಮೀಪ ಭಾರೀ ಸ್ಫೋಟ – ಇಬ್ಬರು ಬಲಿ

    ಲಾಹೋರ್: ಪಾಕಿಸ್ತಾನದ ಲಾಹೋರ್ ನಲ್ಲಿ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದ್ದು ಇಬ್ಬರು ಮೃತಪಟ್ಟು, 16 ಮಂದಿ ಗಂಭೀರ ಗಾಯಗೊಂಡಿದ್ದಾರೆ.

    ಮುಂಬೈ ದಾಳಿಯ ಪ್ರಮುಖ ಆರೋಪಿ ಲಷ್ಕರ್ ತೊಯ್ಬಾ ಸಂಘಟನೆ ಮತ್ತು ಜಮಾತ್-ಉದ್-ದವಾಹ್ (ಜುಡಿ) ಮುಖ್ಯಸ್ಥ ಹಫೀಜ್ ಸಯೀದ್ ನಿವಾಸದಿಂದ 120 ಮೀಟರ್ ದೂರದಲ್ಲಿ ಈ ಸ್ಫೋಟ ಸಂಭವಿಸಿದೆ.

    ಸ್ಫೋಟಕ್ಕೆ ನಿಜವಾದ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.  ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಕೆ ಮಾಡಿ ಸ್ಫೋಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಲಾಹೋರಿನ ಜೋಹರ್ ಪಟ್ಟಣದಲ್ಲಿ ಸ್ಫೋಟ ಸಂಭವಿಸಿದ ಕೂಡಲೇ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿವೆ. ಸ್ಫೋಟದಲ್ಲಿ ಗಾಯಗೊಂಡವರನ್ನು ಖಾಸಗಿ ಕಾರು ಮತ್ತು ಆಟೋರಿಕ್ಷಾ ಮೂಲಕ  ಜಿನ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

    ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಮನೆಯ ಬಳಿ ಪಾರ್ಕ್ ಮಾಡಿದ ಕೂಡಲೇ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಹತ್ತಿರದ ಮನೆಗಳು ಮತ್ತು ಕಟ್ಟಡಗಳ ಗಾಜಿನ ಕಿಟಕಿಗಳು ಒಡೆದು ಹೋಗಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.