Tag: ಲಾಸ್ ಏಂಜಲಿಸ್

  • ತನ್ನ ಜೀವನದ ರಿಯಲ್ ಚಾಂಪಿಯನ್ ಯಾರೆಂಬುದನ್ನು ತಿಳಿಸಿದ ಪ್ರಿಯಾಂಕಾ ಚೋಪ್ರಾ

    ತನ್ನ ಜೀವನದ ರಿಯಲ್ ಚಾಂಪಿಯನ್ ಯಾರೆಂಬುದನ್ನು ತಿಳಿಸಿದ ಪ್ರಿಯಾಂಕಾ ಚೋಪ್ರಾ

    ಲಾಸ್ ಏಂಜಲಿಸ್: 2018 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಬಾಕ್ಸರ್ ಮೇರಿ ಕೋಮ್ ಎಂದಿಗೂ ನನ್ನ ಚಾಂಪಿಯನ್ ಆಗಿರುತ್ತಾರೆ ಎಂದು ಸ್ಟಾರ್ ನಟಿ ಪ್ರಿಯಾಂಕ ಚೋಪ್ರಾ ಹೇಳಿದ್ದಾರೆ.

    ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಚೋಪ್ರಾ ನನ್ನ ಸ್ನೇಹಿತೆಯ ಈ ಸಾಧನೆ ನನಗೆ ಹೆಮ್ಮೆ ತಂದಿದೆ. ಮೇರಿ ಕೋಮ್ ಎಂದಿಗೂ ನನ್ನ ಚಾಂಪಿಯನ್ ಎಂದು ಶುಭಾಶಯ ಕೋರಿದ್ದಾರೆ. ಈ ಹಿಂದೆ ಪ್ರಿಯಾಂಕ ಚೋಪ್ರಾ ಅವರು ಮೇರಿ ಕೋಮ್ ಅವರ ಜೀವನಾಧಾರಿತ ಚಿತ್ರದಲ್ಲಿ ಅಭಿನಯಿಸಿದ್ದರು, ಈ ಚಿತ್ರವನ್ನು ನಿರ್ದೇಶನ ಮಾಡಿದ್ದ ಓಮುಂಗ್ ಕುಮಾರ್ ಸಹ ಮೇರಿ ಕೋಮ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    2008 ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಪಡೆದಿದ್ದ ಮೇರಿ ಕೋಮ್ ಅವರ ಜೀವನ ಪ್ರಯಾಣವನ್ನು ಆಧರಿಸಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಈ ಚಿತ್ರವೂ 2014 ರಲ್ಲಿ ತೆರೆಗೆ ಬಂದಿತ್ತು.

    ಆಸ್ಟೇಲಿಯಾದ ಗೋಲ್ಟ್ ಕಾಸ್ಟ್ ನಲ್ಲಿ ನಡೆಯುತ್ತಿರುವ 2018ರ ಕಾಮನ್ ವೆಲ್ಸ್ ಮಹಿಳೆಯರ ಬಾಕ್ಸಿಂಗ್ ನಲ್ಲಿ ಫೈನಲ್ ಪ್ರವೇಶಿದ್ದ ಮೇರಿ ಕೋಮ್ 45-48 ಕೆ.ಜಿ. ಬಾಕ್ಸಿಂಗ್ ಚಿನ್ನದ ಪದಕ ಗಳಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಐರ್ಲೆಂಡಿನ ಕ್ರಿಸ್ಟಿನಾ ಹೊರಾ ಅವರನ್ನು 5-0 ಅಂತರರಿಂದ ಮಣಿಸಿದ ಮೇರಿ ಕೋಮ್ ಚಿನ್ನದ ಪದಕ ಗೆದಿದ್ದರು. ಈಗಾಗಲೇ ಐದು ಬಾರಿ ವಿಶ್ವಚಾಂಪಿಯನ್ ಪಟ್ಟ ಗಳಿಸಿರುವ ಕೋಮ್ ಭಾರತ ಬಾಕ್ಸಿಂಗ್ ಶಕ್ತಿಯನ್ನು ಮತ್ತೊಮ್ಮೆ ವಿಶ್ವ ಮಟ್ಟದಲ್ಲಿ ತೆರೆದಿಟ್ಟಿದ್ದರು.

  • ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಭಾರೀ ಟ್ರಾಫಿಕ್ ಜಾಮ್: ಫೋಟೋಗಳಲ್ಲಿ ನೋಡಿ

    ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಭಾರೀ ಟ್ರಾಫಿಕ್ ಜಾಮ್: ಫೋಟೋಗಳಲ್ಲಿ ನೋಡಿ

    ಲಾಸ್ ಏಂಜಲೀಸ್: ಥ್ಯಾಂಕ್ಸ್ ಗಿವಿಂಗ್ ಡೇ ಹಿನ್ನೆಲೆಯಲ್ಲಿ ಜನರು ಕಾರು ತೆಗೆದ ಪರಿಣಾಮ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಭಾರೀ ಟ್ರಾಫಿಕ್ ಜಾಮ್ ಆಗಿದ್ದು ವಿಶ್ವಾದ್ಯಂತ ಸುದ್ದಿಯಾಗಿದೆ.

    ಅಮೆರಿಕಾದಲ್ಲಿ ಪ್ರತೀ ವರ್ಷ ನವೆಂಬರ್ ತಿಂಗಳ ನಾಲ್ಕನೇ ಗುರುವಾರ ಥ್ಯಾಕ್ಸ್ ಗಿವಿಂಗ್ ಡೇ ಆಚರಿಸಲಾಗುತ್ತದೆ. ಈ ದಿನದ ನಂತರ 3 ದಿನ ಸಾರ್ವಜನಿಕ ರಜೆ ಇರುತ್ತದೆ. ಹೀಗಾಗಿ ನವೆಂಬರ್ 23 ರಂದು ಥ್ಯಾಕ್ಸ್ ಗಿವಿಂಗ್ ಡೇ ಆಚರಣೆ ನಡೆಯಲಿದ್ದು, 26ರವರೆಗೆ ರಜೆ ಇರಲಿದೆ.

    ಈ ದಿನ ಅಮೆರಿಕನ್ನರು ತಮ್ಮ ಸ್ನೇಹಿತರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಮಾತ್ರವಲ್ಲದೇ ಅವರೊಂದಿಗೆ ತಮ್ಮ ಮಧುರ ಕ್ಷಣಗಳನ್ನು ಕಳೆಯುತ್ತಾರೆ. ವೀಕೆಂಡ್ ನಲ್ಲಿ ಈ ಆಚರಣೆಬರುವ ಹಿನ್ನೆಲೆಯಲ್ಲಿ ವರ್ಷದ 4 ದಿನ ಅವರು ತಮ್ಮ ಎಲ್ಲಾ ಕೆಲಸ-ಕಾರ್ಯಗಳನ್ನು ಬಿಟ್ಟು ಗೆಳೆಯರನ್ನು ಭೇಟಿಯಾಗಲೆಂದು ತೆರಳುತ್ತಾರೆ. ಇದರಿಂದಾಗಿ ಬೃಹತ್ ಟ್ರಾಫಿಕ್ ಉಂಟಾಗುತ್ತದೆ.

    ರಾತ್ರಿ ವೇಳೆ ಉಂಟಾದ ಟ್ರಾಫಿಕ್ ಜಾಮ್ ದೃಶ್ಯವನ್ನು ಅಲ್ಲಿನ ಸ್ಥಳೀಯರು ಸೆರೆಹಿಡಿದ್ದಾರೆ. ವಾಹನಗಳ ರೆಡ್‍ಲೈಟ್ ಮಾರ್ಗದುದ್ದಕ್ಕೂ ಝಗಮಗಿಸುತ್ತದೆ. ವಾಹನಗಳ ಲೈಟ್ ನಿಂದ ಕಂಗೊಳಿಸುತ್ತಿರುವ ಈ ದೃಶ್ಯವನ್ನು ಅಲ್ಲಿನ ಚಾನೆಲೊಂದು ಸೆರೆಹಿಡಿದು ಟ್ವೀಟ್ ಮಾಡಿದೆ.

    https://twitter.com/AlexanderXV/status/933187838442639360