Tag: ಲಾವಣ್ಯ ತ್ರಿಪಾಠಿ

  • ವರುಣ್‌ ತೇಜ್-‌ ನಟಿ ಲಾವಣ್ಯ ಎಂಗೇಜ್‌ಮೆಂಟ್‌ ಡೇಟ್ ಫಿಕ್ಸ್

    ವರುಣ್‌ ತೇಜ್-‌ ನಟಿ ಲಾವಣ್ಯ ಎಂಗೇಜ್‌ಮೆಂಟ್‌ ಡೇಟ್ ಫಿಕ್ಸ್

    ಟಾಲಿವುಡ್‌ನ ಯಂಗ್ ಹೀರೋ, ಮೆಗಾಸ್ಟಾರ್ ಕುಟುಂಬದ (Megastar Family) ಮನೆ ಮಗ ವರುಣ್ ತೇಜ್ (Varun Tej) ಮದುವೆಗೆ (Wedding) ಸಕಲ ಸಿದ್ಧತೆ ನಡೆಯುತ್ತಿದೆ. ನಟಿ ಲಾವಣ್ಯ (Lavanya) ಜೊತೆಗೆ ವರುಣ್ ಮದುವೆ ಎಂಬ ಎಲ್ಲಾ ಊಹಾಪೋಹಗಳಿಗೂ ಸ್ಪಷ್ಟನೆ ಸಿಕ್ಕಿದೆ. ಬಹುಕಾಲದ ಗೆಳತಿ ನಟಿ ಲಾವಣ್ಯ ಜೊತೆ ಎಂಗೇಜ್ ಆಗಲು ವರುಣ್ ರೆಡಿಯಾಗಿದ್ದಾರೆ.

    ಚಿತ್ರರಂಗದಲ್ಲಿ ಮದುವೆಯ ಮಂಗಳ ವಾದ್ಯ ಸೌಂಡ್ ಮಾಡುತ್ತಿದೆ. ಅಥಿಯಾ ಶೆಟ್ಟಿ ಜೋಡಿ, ಸಿದ್- ಕಿಯಾರಾ, ಹೀಗೆ ಸ್ಟಾರ್ ಜೋಡಿಗಳು ಹಸೆಮಣೆ ಏರುತ್ತಿದ್ದಾರೆ. ಇದೀಗ ಮೆಗಾಸ್ಟಾರ್ ಕುಟುಂಬದ ಕುಡಿ ವರುಣ್ ತೇಜ್ ನಿಶ್ಚಿತಾರ್ಥಕ್ಕೆ (Engagement) ಕೌಂಟ್‌ಡೌನ್ ಶುರುವಾಗಿದೆ. ಇದನ್ನೂ ಓದಿ:ನಿರಾಶ್ರಿತರ ಜೊತೆ ನಿಂತುಕೊಂಡು ನಟ ಕಿರಣ್ ರಾಜ್

    ನಟಿ ಲಾವಣ್ಯ ತ್ರಿಪಾಠಿ ಜೊತೆ ವರುಣ್ ತೇಜ್ ಕಳೆದ ಐದಾರು ವರ್ಷಗಳಿಂದ ಡೇಟ್ ಮಾಡುತ್ತಿದ್ದಾರೆ. ಗುರುಹಿರಿಯರು ಕೂಡ ಇಬ್ಬರ ಪ್ರೀತಿಗೆ ಸಮ್ಮತಿ ಸೂಚಿಸಿದ್ದಾರೆ. ಜೂನ್ 9ಕ್ಕೆ (June 9) ವರುಣ್- ಲಾವಣ್ಯ ಎಂಗೇಜ್‌ಮೆಂಟ್ ಡೇಟ್ ಫಿಕ್ಸ್ ಆಗಿದೆ. ಹೈದರಾಬಾದ್‌ನಲ್ಲಿ ಸರಳವಾಗಿ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಜರುಗಲಿದೆ.

    ಶ್ರೀಜಾ, ನಿಹಾರಿಕಾ ಕೊನಿಡೆಲಾ, ಡಿವೋರ್ಸ್ ಸಂಗತಿಯ ನಡುವೆ ವರುಣ್ ತೇಜ್ ಮದುವೆಗೆ ಸಿದ್ಧತೆ ನಡೆಯುತ್ತಿದೆ. ಸದ್ಯದಲ್ಲೇ ವರುಣ್- ಲಾವಣ್ಯ ಮದುವೆ ಕೂಡ ರಿವೀಲ್ ಆಗಲಿದೆ.

  • ಬ್ಯಾಚುಲರ್ ಲೈಫ್‌ಗೆ ವರುಣ್ ತೇಜ್ ಗುಡ್ ಬೈ- ಮದುವೆ ಡೇಟ್ ಫಿಕ್ಸ್

    ಬ್ಯಾಚುಲರ್ ಲೈಫ್‌ಗೆ ವರುಣ್ ತೇಜ್ ಗುಡ್ ಬೈ- ಮದುವೆ ಡೇಟ್ ಫಿಕ್ಸ್

    ಟಾಲಿವುಡ್ (Tollywood) ಅಂಗಳದ ಯಂಗ್ ಹೀರೋ ವರುಣ್ ತೇಜ್ (Varun Tej)  ಅವರು ಇತ್ತೀಚಿಗೆ ಸಿನಿಮಾಗಿಂತ ತಮ್ಮ ಮದುವೆ ವಿಷ್ಯವಾಗಿಯೇ ಸಖತ್ ಸುದ್ದಿಯಾಗಿದ್ದಾರೆ. ಸದ್ಯದಲ್ಲಿಯೇ ವರುಣ್ ತನ್ನ ಗೆಳತಿ ಜೊತೆ ಹಸೆಮಣೆ ಏರಲಿದ್ದಾರೆ.

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರ ಮನೆ ಮಗಳು ನಿಹಾರಿಕಾ ಡಿವೋರ್ಸ್ ಸುದ್ದಿ ಬೆನ್ನಲ್ಲೇ ವರುಣ್ ತೇಜ್ ಮದುವೆ ಸುದ್ದಿ ಸೌಂಡ್ ಮಾಡುತ್ತಿದೆ. ಶ್ರೀಜಾ- ನಿಹಾರಿಕಾ ಇಬ್ಬರ ಡಿವೋರ್ಸ್ ಆಗಿರುವ ನೋವು ಮೆಗಾ ಫ್ಯಾಮಿಲಿಗೆ ಕಾಡುತ್ತಿದೆ. ನಿಹಾರಿಕಾ (Niharika) ಸೋದರ ವರುಣ್ ತೇಜ್ ಮದುವೆ ಮಾಡಲು ನಿರ್ಧಾರ ಕೈಗೊಂಡಿದ್ದಾರೆ.

    ಇತ್ತೀಚಿಗೆ ಚಿರಂಜೀವಿ ಸಹೋದರ ನಾಗ ಬಾಬು (Nagababu) ಅವರು ಪುತ್ರ ವರುಣ್ ತೇಜ್ ಮದುವೆ ಬಗ್ಗೆ ಮಾತನಾಡಿದ್ದರು. ಸದ್ಯದಲ್ಲೇ ಮದುವೆ ಬಗ್ಗೆ ಅಧಿಕೃತವಾಗಿ ಹೇಳೋದಾಗಿ ತಿಳಿಸಿದ್ದರು. ಇದೀಗ ಮತ್ತೆ ಈ ಸುದ್ದಿಗೆ ಪುಷ್ಟಿ ಸಿಕ್ಕಿದೆ. ನಟಿ ಲಾವಣ್ಯ ತ್ರಿಪಾಠಿ (Lavanya Tripathi) ಜೊತೆ ಮದುವೆಗೆ ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಲಂಡನ್‌ನಲ್ಲಿ ‘ಸಲಾರ್’ ನಟಿ ಶ್ರುತಿ ಹಾಸನ್ ನ್ಯೂ ಫೋಟೋಶೂಟ್

    ಹಲವು ವರ್ಷಗಳಿಂದ ವರುಣ್- ಲಾವಣ್ಯ ಪ್ರೀತಿಸುತ್ತಿದ್ದು, ಇಬ್ಬರ ಪ್ರೀತಿಗೆ ಮನೆ ಕಡೆಯಿಂದ ಸಮ್ಮತಿ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಬ್ಯಾಚುಲರ್ ಲೈಫ್‌ಗೆ ಗುಡ್ ಬೈ ಹೇಳಿ, ಇದೇ ಜೂನ್‌ಗೆ ಲಾವಣ್ಯ ಜೊತೆ ವರುಣ್ ನಿಶ್ಚಿತಾರ್ಥ ನಡೆಯಲಿದ್ದು, ವರ್ಷದ ಅಂತ್ಯದಲ್ಲಿ ಮದುವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮೆಗಾ ಫ್ಯಾಮಿಲಿಯವರು ಅಧಿಕೃತ ಅಪ್‌ಡೇಟ್ ನೀಡುವವರೆಗೂ ಕಾದುನೋಡಬೇಕಿದೆ.

  • ವರುಣ್ ತೇಜ್ ಜೊತೆ ಲಾವಣ್ಯ ಮದುವೆ? ಸ್ಪಷ್ಟನೆ ನೀಡಿದ ನಟಿ

    ವರುಣ್ ತೇಜ್ ಜೊತೆ ಲಾವಣ್ಯ ಮದುವೆ? ಸ್ಪಷ್ಟನೆ ನೀಡಿದ ನಟಿ

    ಟಾಲಿವುಡ್‌ನಲ್ಲಿ (Tollywood) ಸಾಕಷ್ಟು ಸಮಯದಿಂದ ವರುಣ್ ತೇಜ್ -ಲಾವಣ್ಯ ತ್ರಿಪಾಠಿ (Lavanya Tripati) ಡೇಟಿಂಗ್ ಸುದ್ದಿ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಇತ್ತೀಚಿಗೆ ಈ ಜೋಡಿಯ ಮದುವೆಯ ಬಗ್ಗೆ ಸಖತ್ ಸುದ್ದಿಯಾಗಿತ್ತು. ಈ ವರ್ಷ ಹಸೆಮಣೆ (Wedding) ಏರಲಿದ್ದಾರೆ ಎಂದೇ ನ್ಯೂಸ್ ಆಗಿತ್ತು. ಅದಕ್ಕೆಲ್ಲಾ ಈಗ ನಟಿ ಲಾವಣ್ಯ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಟ್ರೆಡಿಷನಲ್ ಫೋಟೋಶೂಟ್‌ನಲ್ಲಿ ಮಿಂಚಿದ ಸೋನಂ ಕಪೂರ್

    ತೆರೆಯ ಮೇಲೆ ವರುಣ್- ಲಾವಣ್ಯ ಜೋಡಿಯ ಕೆಮಿಸ್ಟ್ರಿ ಕಮಾಲ್ ಮಾಡಿದೆ. `ಮಿನಿಸ್ಟರ್’, ಮತ್ತು `ರಾಯಭಾರಿ’ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ಎಲ್ಲೂ ಅಧಿಕೃತವಾಗಿ ಈ ಜೋಡಿ ಸ್ಪಷ್ಟನೆ ನೀಡಿಲ್ಲ. ಇತ್ತೀಚಿಗಷ್ಟೇ ತೆಲುಗಿನ ಹಿರಿಯ ನಟ ನಾಗ ಬಾಬು (Actor Naga Babu) ಅವರು ಮಗ ವರುಣ್ ಮದುವೆ ಬಗ್ಗೆ ಸದ್ಯದಲ್ಲೇ ಸಿಹಿಸುದ್ದಿ ನೀಡುತ್ತೇವೆ ಎಂದು ಹೇಳಿದರು.

    ಹಾಗಾಗಿ ವರುಣ್ ತೇಜ್ ಜೊತೆಗಿನ ಲಾವಣ್ಯ ಮದುವೆ ಎಂದು ಸುದ್ದಿ ಸದ್ದು ಮಾಡಿತ್ತು. ಇದೀಗ ಈ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಮದುವೆ ಅನ್ನೋದು ನಿಜಕ್ಕೂ ಸುಂದರ. ಅದು ಸರಿಯಾದ ವ್ಯಕ್ತಿಯೊಂದಿಗೆ ಆಗಬೇಕು ಎಂಬುದು ನನ್ನ ಭಾವನೆ. ಮದುವೆ ಆಗುವ ಕಾಲಕ್ಕೆ ಆಗುತ್ತದೆ. ಹೀಗೆಯೇ ಮದುವೆ ಆಗಬೇಕು ಎಂದು ಕನಸು ಕಂಡವಳು ನಾನಲ್ಲ ಎಂದಿದ್ದಾರೆ ಲಾವಣ್ಯ.

    ಪ್ರಸ್ತುತ್ತ ನನ್ನ ಜೀವನದಲ್ಲಿ ಸಿನಿಮಾಗಳಲ್ಲಿ ನಟಿಸುವುದೇ ಮುಖ್ಯ. ಸಿನಿಮಾ ಬಿಟ್ಟು ಮದುವೆ ಬಗ್ಗೆ ನಾನು ಆಲೋಚನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
    ಈ ಮೂಲಕ ವರುಣ್ ತೇಜ್ ಜೊತೆಗಿನ ಮದುವೆ ಬಗ್ಗೆ ನಟಿ ಬ್ರೇಕ್ ಹಾಕಿದ್ದಾರೆ.

  • ನಟಿ ಲಾವಣ್ಯ ಜೊತೆ ಹಸೆಮಣೆ ಏರಲು ರೆಡಿಯಾದ ವರುಣ್‌ ತೇಜ್‌

    ನಟಿ ಲಾವಣ್ಯ ಜೊತೆ ಹಸೆಮಣೆ ಏರಲು ರೆಡಿಯಾದ ವರುಣ್‌ ತೇಜ್‌

    ಚಿತ್ರರಂಗದಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. ಸ್ಟಾರ್ ನಟ-ನಟಿಯರು ಹಸೆಮಣೆ ಏರುತ್ತಿದ್ದಾರೆ. ಈ ಬೆನ್ನಲ್ಲೇ ತೆಲುಗು ನಟ ವರುಣ್ ತೇಜ್ (Varun Tej) ಮದುವೆಯ (Wedding) ಸುದ್ದಿ ಹರಿದಾಡುತ್ತಿದೆ. ಸದ್ಯದಲ್ಲೇ ಸ್ಟಾರ್ ನಟಿಯ ಕೈ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ.

    ಮೆಗಾಸ್ಟಾರ್ ಫ್ಯಾಮಿಲಿಯ ಪ್ರತಿಭಾನ್ವಿತ ನಟ ವರುಣ್ ತೇಜ್‌ಗೆ ಸೌತ್‌ನಲ್ಲಿ ಬೇಡಿಕೆಯಿದೆ. `ಮುಕುಂದ’ (Mukunda) ಚಿತ್ರದ ಮೂಲಕ ನಾಯಕ ನಟನಾಗಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ವರುಣ್, ಸಾಕಷ್ಟು ಸಿನಿಮಾಗಳ ಮೂಲಕ ಛಾಪು ಮೂಡಿಸಿದ್ದಾರೆ. ನಟ ನಾಗಬಾಬು, ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್ ಅವರಂತಹ ಸ್ಟಾರ್ ನಟರಿದ್ದರೂ ಕೂಡ ತಮ್ಮ ಪರಿಶ್ರಮದಿಂದ ತೆಲುಗು ರಂಗದಲ್ಲಿ ವರುಣ್ ಗಟ್ಟಿನೆಲೆ ಗಿಟ್ಟಿಸಿಕೊಂಡಿದ್ದಾರೆ.‌ ಇದನ್ನೂ ಓದಿ: ಅಪಘಾತವಾಗಿ ಎರಡು ವರ್ಷ: ನಟಿ ರಿಷಿಕಾ ಸಿಂಗ್ ಬದುಕುಳಿದಿದ್ದೇ ಪವಾಡ

    ವರುಣ್ ತೇಜ್ ಅವರ ಸಹೋದರಿ ನಿಹಾರಿಕಾ (Niharika) ಮದುವೆ ಲಾಕ್‌ಡೌನ್ ವೇಳೆಯಲ್ಲಿ ನಡೆದಿತ್ತು. ಚಿತ್ರರಂಗದಲ್ಲಿ ಒಬ್ಬೊಬ್ಬರೇ ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಬೆನ್ನಲ್ಲೇ ವರುಣ್ ತೇಜ್ ಮದುವೆ ಸುದ್ದಿ ಈಗ ಹಾಟ್ ಟಾಪಿಕ್ ಆಗಿದೆ.

    ಇನ್ನೂ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ (Lavanya Tripati) ಹಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಈ ವರ್ಷ ಈ ಜೋಡಿ ಮದುವೆಯ ಕುರಿತು ಗುಡ್ ನ್ಯೂಸ್ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವರುಣ್ ತೇಜ್ ಜೊತೆ ಲಾವಣ್ಯ ತ್ರಿಪಾಠಿ ಮದುವೆ?

    ವರುಣ್ ತೇಜ್ ಜೊತೆ ಲಾವಣ್ಯ ತ್ರಿಪಾಠಿ ಮದುವೆ?

    ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ, ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ ಮದುವೆಗೆ ತೆರೆಮರೆಯಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ವರುಣ್‌ ತೇಜ್‌, ತೆಲುಗಿನ ಸ್ಟಾರ್ ನಟಿಯ ಕೈಹಿಡಿಯಲಿದ್ದಾರೆ.

    ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟ ವರುಣ್ ತೇಜ್ ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರಂತೆ. ಮೆಗಾಸ್ಟಾರ್ ಕುಟುಂಬದಲ್ಲಿ ಗಟ್ಟಿಮೇಳ ಶುರುವಾಗುವುದಕ್ಕೆ ಕೌಂಟ್ ಡೌನ್ ಶುರುವಾಗಲಿದೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ಸದ್ಯ ವರುಣ್ ತೇಜ್, ನಟಿ ಲಾವಣ್ಯ ತ್ರಿಪಾಠಿ ಅವರನ್ನ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಸಾಕಷ್ಟು ವರ್ಷಗಳಿಂದ ಪರಿಚಿತರಾಗಿರುವ ಈ ಜೋಡಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಂದ ಬೆನ್ನಲ್ಲೇ ನಟಿ ಲಾವಣ್ಯ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

    ಸಂದರ್ಶನವೊಂದರಲ್ಲಿ ವರುಣ್ ತೇಜ್ ಜತೆಗಿನ ಮದುವೆ ಗಾಸಿಪ್ ಬಗ್ಗೆ ಕೇಳಲಾಗಿದೆ. ನಾನು ಒಂಟಿಯಾಗಿದ್ದೇನೆ, ನನಗೆ ಸರಿಯಾದ ಜೋಡಿ ಸಿಕ್ಕಿಲ್ಲ ಎಂದು ಹೇಳುವ ಮೂಲಕ ಎಲ್ಲಾ ಗಾಸಿಪ್‌ಗೂ ನಟಿ ಬ್ರೇಕ್ ಹಾಕಿದ್ದರು.

    Live Tv
    [brid partner=56869869 player=32851 video=960834 autoplay=true]