ಟಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ಮೆಗಾಸ್ಟಾರ್ ಕುಟುಂಬ ಡಜನ್‌ಗೂ ಹೆಚ್ಚು ಕಲಾವಿದರನ್ನ ಕೊಟ್ಟಿದೆ. ಹೀಗಾಗಿ, ಈ ಕುಟುಂಬದಲ್ಲಿ ಜನಿಸುವ ಪ್ರತಿ ಮಗವೂ ಭವಿಷ್ಯದ ಸ್ಟಾರ್ ಎಂದೇ ಊಹಿಸಲಾಗುತ್ತೆ. ಇದೀಗ ಕುಟುಂಬದಲ್ಲಿ ಸಂತಸ ಮನೆ ಮಾಡಿದ್ದು, ಮೆಗಸ್ಟಾರ್ ಚಿರಂಜೀವಿ (Chiranjeevi) ಮತ್ತೆ ತಾತ ಆಗಿದ್ದಾರೆ. ಚಿರಂಜೀವಿ ಸಹೋದರನ ಪುತ್ರನಿಗೆ ಗಂಡು ಮಗು ಜನಿಸಿದೆ. ಈ ಖುಷಿಯ ಸುದ್ದಿಯನ್ನು ಚಿರಂಜೀವಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ತಮಗಾದ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನು ಮೊದಲು ಇನ್‌ಸ್ಟಾಗ್ರಾಮ್‌ನಲ್ಲಿ ವರುಣ್ ತೇಜ್ ಸಂತಸ ಹಂಚಿಕೊಡಿದ್ದರು. ಇದೀಗ ಕುಟುಂಬಕ್ಕೆ ಆಗಮಿಸಿರುವ ಹೊಸ ಪುಟ್ಟ ಸದಸ್ಯನ ಕುರಿತು ಮೆಗಾಸ್ಟಾರ್ ಮನಬಿಚ್ಚಿ ಮಾತನಾಡಿದ್ದಾರೆ. ‘ನಮ್ಮ ಜಗತ್ತಿಗೆ ಆಗಮಿಸಿರುವ ಪುಟಾಣಿಗೆ ಸ್ವಾಗತ, ಕೋನಿಡೇಲ ಕುಟುಂಬದ ಹೊಸ ಸದಸ್ಯ ನಿನ್ನ ಮೇಲೆ ನಮ್ಮ ಪ್ರೀತಿ ಆಶೀರ್ವಾದ ಸದಾ ಇರುತ್ತೆ’ ಎಂದು ಹೇಳುವ ಮೂಲಕ ಮಗುವನ್ನು ಎತ್ತಿಕೊಂಡಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕುಟುಂಬದಲ್ಲಿ ಮತ್ತೆ ಸಡಗರ ಮನೆ ಮಾಡಿದೆ. ಮೆಗಾ ಕುಟುಂಬದ ಮನೆ ಮಗ ವರುಣ್ ತೇಜ್ ತಂದೆಯಾಗುತ್ತಿರುವ ಖುಷಿಯಲ್ಲಿದ್ದಾರೆ. ಈ ಸುದ್ದಿಯನ್ನು ವರುಣ್ ತೇಜ್ (Varun Tej) ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ರಮೇಶ್ ಅರವಿಂದ್ ನಟನೆಯ ‘ದೈಜಿ’ ಚಿತ್ರದಲ್ಲಿ ದಿಗಂತ್
ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ (Lavanya Tripathi) ಪುಟ್ಟ ಮಗುವಿನ ಶೂ ಹಿಡಿದಿರುವ ಫೋಟೋ ಹಂಚಿಕೊಂಡು ಪೋಷಕರಾಗುತ್ತಿರುವ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ‘ಜೀವನದ ಅತೀ ಮುಖ್ಯವಾದ ರೋಲ್ ಶೀಘ್ರದಲ್ಲಿಯೇ ಬರಲಿದೆ’ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
2016ರಲ್ಲಿ ತೆರೆಕಂಡ ‘ಮಿಸ್ಟರ್’ ಚಿತ್ರದಲ್ಲಿ ವರುಣ್ ಮತ್ತು ಲಾವಣ್ಯ ಜೊತೆಯಾಗಿ ನಟಿಸಿದ್ದರು. ಅಲ್ಲಿಂದ ಶುರುವಾದ ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಗುರುಹಿರಿಯರ ಸಮ್ಮತಿ ಪಡೆದು 2023ರಲ್ಲಿ ವರುಣ್ ತೇಜ್ ಮತ್ತು ಲಾವಣ್ಯ ಇಟಲಿಯಲ್ಲಿ ಅದ್ಧೂರಿಯಾಗಿ ಮದುವೆಯಾದರು.
ಮೆಗಾಸ್ಟಾರ್ ಕುಟುಂಬದ ಕುಡಿ ವರುಣ್ ತೇಜ್ (Varun Tej) ಅವರು ಬಹುಕಾಲದ ಗೆಳತಿ ಲಾವಣ್ಯ (Lavanya Tripathi) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇದೀಗ ಆಹ್ವಾನವಿದ್ರೂ ವರುಣ್ ತೇಜ್ ಮದುವೆಗೆ ಹೋಗಲ್ಲ ಎಂದು ಪವನ್ ಕಲ್ಯಾಣ್ (Pawan Kalyan) ಮಾಜಿ ಪತ್ನಿ ನಟಿ ರೇಣು ದೇಸಾಯಿ (Renu Desai) ಮಾತನಾಡಿದ್ದಾರೆ. ಇದನ್ನೂ ಓದಿ:ಅದ್ದೂರಿಯಾಗಿ ನಡೆಯಿತು ವರುಣ್- ಲಾವಣ್ಯ ಪ್ರೀ ವೆಡ್ಡಿಂಗ್ ಪಾರ್ಟಿ
ನವೆಂಬರ್ 1ರಂದು ವರುಣ್-ಲಾವಣ್ಯ ಇಟಲಿಯಲ್ಲಿ ಮದುವೆಯಾಗ್ತಿದ್ದಾರೆ. ಇಡೀ ಮೆಗಾಸ್ಟಾರ್ ಕುಟುಂಬ ಇಟಲಿಯಲ್ಲಿ ಬೀಡು ಬಿಟ್ಟಿದೆ. ಹೀಗಿರುವಾಗ ಮದುವೆಗೆ ಆಹ್ವಾನ ನೀಡಿದ್ರೂ ಕೂಡ ನಟಿ ರೇಣು ದೇಸಾಯಿ ಭಾಗಿಯಾಗ್ತಿಲ್ಲ ಎನ್ನಲಾಗ್ತಿದೆ.
ನನಗೆ ಮದುವೆಗೆ ಆಹ್ವಾನವಿದೆ. ಆದರೆ ನಾನು ಮದುವೆಗೆ ಹೋಗುತ್ತಿಲ್ಲ. ನಾನು ಹೋದರೆ ಅಲ್ಲಿದ್ದವರಿಗೆ ತೊಂದರೆಯಾಗಬಹುದು. ಕಿರಿ ಕಿರಿಯಾಗಬಹುದು. ಹಾಗಾಗಿ ಮದುವೆಗೆ ಹಾಜರಿ ಹಾಕೋದಿಲ್ಲ. ಆದರೆ ನನ್ನ ಹಾರೈಕೆ ಅವರ ಮೇಲಿದೆ ಎಂದು ನಟಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ಪವನ್ ಕಲ್ಯಾಣ್ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಆ ಕುಟುಂಬದೊಂದಿಗೆ ರೇಣು ದೇಸಾಯಿ ಸಂಬಂಧ ಹೊಂದಿಲ್ಲ.
ಟಾಲಿವುಡ್‌ನ (Tollywood) ಲವ್ ಬರ್ಡ್ಸ್ ವರುಣ್ ತೇಜ್- ಲಾವಣ್ಯ (Lavanya Tripathi) ಜೋಡಿ, ನ.1ರಂದು ದಾಂಪತ್ಯ ಜೀವನಕ್ಕೆ (Wedding) ಕಾಲಿಡಲು ಸಜ್ಜಾಗಿದ್ದಾರೆ. ಹಸೆಮಣೆ ಏರುವ ಮುನ್ನ ಇದೀಗ ಹೊಸ ಜೋಡಿ ಇಟಲಿಯಲ್ಲಿ ಅ.30ರಂದು ಕಾಕ್‌ಟೇಲ್ ಪಾರ್ಟಿ ಮಾಡಿದೆ. ನವಜೋಡಿ ವರುಣ್- ಲಾವಣ್ಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ:ರಾಜ್ಯೋತ್ಸವ ಪ್ರಶಸ್ತಿ: ಸಿನಿಮಾ ಕ್ಷೇತ್ರದಿಂದ ಯಾರಿಗೆಲ್ಲ ಅವಾರ್ಡ್
ಬಿಳಿ ಬಣ್ಣದ ಉಡುಗೆಯಲ್ಲಿ ವರುಣ್- ಲಾವಣ್ಯ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್- ಸಾಯಿ ಧರಂ ತೇಜ್ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡರೆ, ರಾಮ್ ಚರಣ್ ಬಿಳಿ ಬಣ್ಣದ ಧಿರಿಸಿನಲ್ಲಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಇಂದು (ಅ.31ರಂದು) ನವ ಜೋಡಿಯ ಹಳದಿ ಶಾಸ್ತ್ರ, ಮೆಹೆಂದಿ ಶಾಸ್ತ್ರ ನಡೆಯಲಿದೆ. ವರುಣ್ (Varun Tej) ಮದುವೆಯಲ್ಲಿ ಇಡೀ ಮೆಗಾಸ್ಟಾರ್ ಕುಟುಂಬ ಭಾಗಿಯಾಗಲಿದೆ.
‘ಮಿಸ್ಟರ್’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, ಹಲವು ವರ್ಷಗಳ ಡೇಟಿಂಗ್ ನಂತರ ಈ ವರ್ಷ ಜೂನ್ 9ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಾಗಬಾಬು ಪುತ್ರ ವರುಣ್-ಲಾವಣ್ಯ ಎಂಗೇಜ್‌ಮೆಂಟ್ ಗ್ರ್ಯಾಂಡ್ ಆಗಿ ನೆರವೇರಿತ್ತು.
ಮೊದಲ ಪ್ರೇಮ ನಿವೇದನೆ ಮಾಡಿದ ಸ್ಥಳದಲ್ಲಿಯೇ ಮದುವೆಯಾಗಬೇಕು ಎಂಬ ಮನದಾಸೆಯಂತೆಯೇ ಈಗ ಇಟಲಿಯಲ್ಲಿ ಅದ್ದೂರಿಯಾಗಿ ವರುಣ್- ಲಾವಣ್ಯ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಮೆಗಾ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ವರುಣ್ ತೇಜ್- ಲಾವಣ್ಯ ತ್ರಿಪಾಠಿ (Lavanya Tripathi) ಮದುವೆಗೆ ಕೌಂಟ್‌ಡೌನ್ ಶುರುವಾಗಿದೆ. ಇಟಲಿಯಲ್ಲಿ ಅದ್ದೂರಿಯಾಗಿ ಮದುವೆಯಾಗಲು ಸಿದ್ಧತೆ ಕೂಡ ನಡೆಯುತ್ತಿದೆ. ನವೆಂಬರ್‌ನಲ್ಲಿ ವರುಣ್- ಲಾವಣ್ಯ ಹಸೆಮಣೆ (Wedding) ಏರುತ್ತಿದ್ದಾರೆ.
ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುನ್ನುಡಿ ಬರೆಯುಲು ಸಜ್ಜಾಗಿದ್ದಾರೆ. ನವೆಂಬರ್ 1ರಂದು ಇಟಲಿಯಲ್ಲಿ ಅದ್ದೂರಿಯಾಗಿ ಮದುವೆಯಾಗ್ತಿದ್ದಾರೆ. ನ.5ರಂದು ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಮದುವೆಗೆ ಎರಡು ಕುಟುಂಬ ಸದಸ್ಯರು ಮತ್ತು ಆಪ್ತರಷ್ಟೇ ಭಾಗಿಯಾಗುತ್ತಾರೆ. ಆರತಕ್ಷತೆಗೆ ಸಿನಿರಂಗದ ನಟ-ನಟಿಯರು, ರಾಜಕಾರಣಿಗಳಿಗೆ ಆಹ್ವಾನವಿದೆ. ಇದನ್ನೂ ಓದಿ:ಶ್ರೀಲೀಲಾ, ರಶ್ಮಿಕಾಗೆ ಗೇಟ್ ಪಾಸ್ – ವಿಜಯ್ ದೇವರಕೊಂಡಗೆ ಸಾಕ್ಷಿ ವೈದ್ಯ ನಾಯಕಿ
ವರುಣ್ (Varun Tej)-ಲಾವಣ್ಯ ಮೊದಲು ಭೇಟಿಯಾಗಿದ್ದು, ಇಟಲಿಯಲ್ಲಿ ‘ಮಿಸ್ಟರ್’ ಸಿನಿಮಾದ ಚಿತ್ರೀಕರಣಕ್ಕಾಗಿ ಬಂದಾಗ. ಆ ಸಮಯದಲ್ಲಿ ಪ್ರೇಮಾಂಕುರವಾಗಿತ್ತು. ಕೆಲ ವರ್ಷಗಳ ಹಿಂದೆ ಲಾವಣ್ಯಗೆ ಇಟಲಿಯಲ್ಲಿಯೇ ವರುಣ್ ಪ್ರಪೋಸ್ ಮಾಡಿದ್ರು. ಹಾಗಾಗಿ ಮೊದಲು ಭೇಟಿಯಾಗಿದ್ದ ಜಾಗದಲ್ಲೇ ಮದುವೆಯಾಗುವುದಕ್ಕೆ ನಿಶ್ಚಿಯಿಸಿದ್ದಾರೆ.
ವರುಣ್- ಲಾವಣ್ಯ ಮದುವೆಗೆ ಧರಿಸಲು ಮನೀಷ್ ಮಲ್ಹೋತ್ರಾ (Manish Malhotra) ಬಳಿ ವಿಶೇಷವಾಗಿ ವಸ್ತ್ರ ವಿನ್ಯಾಸ ಮಾಡಿಸಿದ್ದಾರೆ. ಮದುವೆಯ ದಿನ ಈ ಹೊಸ ಜೋಡಿ ಯಾವ ಲುಕ್‌ನಲ್ಲಿ ಕಾಣಿಸಿಕೊಳ್ತಾರೆ ಎಂದು ನೋಡಲು ಅಭಿಮಾನಿಗಳು ಕ್ಯೂರಿಯಸ್ ಆಗಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮದುವೆ ಸಡಗರ ಮನೆ ಮಾಡಿದೆ. ನವೆಂಬರ್ ಮೊದಲ ವಾರದಲ್ಲಿ ವರುಣ್ ತೇಜ್(Varun Tej)- ಲಾವಣ್ಯ ತ್ರಿಪಾಠಿ (Lavanya Tripati) ಹೊಸ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಮದುವೆಗೂ ಮುನ್ನ ಇಡೀ ಕುಟುಂಬ ಒಂದಾಗಿ ಪ್ರಿ ವೆಡ್ಡಿಂಗ್ ಸೆಲೆಬ್ರೆಷನ್ ಮಾಡಿದೆ. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ರಾಮ್ ಚರಣ್- ಉಪಾಸನಾ (Upasana) ಮುದ್ದು ಮಗಳ ಆಗಮನದ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಅದ್ದೂರಿಯಾಗಿ ನಾಮಕರಣ ಕೂಡ ಮಾಡಿದ್ದಾರೆ. ಈಗ ಮೆಗಾಸ್ಟಾರ್ ಮನೆ ಮಗ ವರುಣ್ ತೇಜ್-ಲಾವಣ್ಯ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ನವೆಂಬರ್ 1ರಂದು ಇಟಲಿಯಲ್ಲಿ (Italy) ಹಸೆಮಣೆಗೆ ಈ ಜೋಡಿ ಏರಲಿದೆಯಂತೆ.
ಮೆಗಾ ಪ್ರಿನ್ಸ್ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, 2017ರಲ್ಲಿ ಇಬ್ಬರು ಮಿಸ್ಟರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ವರುಣ್ ತೇಜ್, ಲಾವಣ್ಯ ತ್ರಿಪಾಠಿ ಇಬ್ಬರೂ ಕ್ಲೋಸ್ ಆಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬರಬರುತ್ತಾ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ, ಅದು ಪಬ್ಲಿಕ್ ಆಗದಂತೆ ನೋಡಿಕೊಂಡಿದ್ದರು. ಹಲವು ವರ್ಷಗಳವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇರಲಿಲ್ಲ. ಆದರೆ, ಅಂತರಿಕ್ಷಂ ಸಿನಿಮಾದ ವೇಳೆ ಇಬ್ಬರ ಬಗ್ಗೆ ಮೊದಲ ಬಾರಿಗೆ ಗಾಳಿಸುದ್ದಿ ಹಬ್ಬಿತ್ತು. ಅಲ್ಲಿಂದ ಇಬ್ಬರ ಡೇಟಿಂಗ್ ಸುದ್ದಿ ಚಾಲ್ತಿಗೆ ಬಂದಿತ್ತು.
ಆಗಾಗ ವರುಣ್, ಲಾವಣ್ಯ ಇಬ್ಬರೂ ಹಲವು ಕಾರ್ಯಕ್ರಮಗಳು ಹಾಗೂ ಪಾರ್ಟಿಗಳಲ್ಲಿ ಭೇಟಿಯಾಗುತ್ತಿದ್ದರು. ಇದು ಗಾಳಿಸುದ್ದಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ವರುಣ್, ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಯಸಿದ್ದರು. ಹೀಗಾಗಿ ಡಿಸೆಂಬರ್ 25 ಲಾವಣ್ಯ ಹುಟ್ಟುಹಬ್ಬದಂದು ಮದುವೆಗೆ ಪ್ರಪೋಸ್ ಮಾಡಿದ್ದರು. ಎರಡೂ ಮನೆಯವರು ಒಪ್ಪಿದರೂ, ಈ ಜೋಡಿ ಮದುವೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ.
ಯಂಗ್ ಜೋಡಿ ವರುಣ್- ಲಾವಣ್ಯ ಅವರು ಹೈದರಾಬಾದ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿ ಎಂಗೇಜ್ ಆಗಿದ್ದರು. ಜೂನ್ 9ರ ರಾತ್ರಿ ಎರಡು ಕುಟುಂಬದವರು ಆಪ್ತರಷ್ಟೇ ಭಾಗಿಯಾಗಿದ್ದರು. ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ಅವರ ಇಡೀ ಕುಟುಂಬ, ಅಲ್ಲು ಅರ್ಜುನ್ ಫ್ಯಾಮಿಲಿ, ವೆಂಕಟೇಶ್ವರ ರಾವ್ ಕುಟುಂಬದವರಷ್ಟೇ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಎಂಗೇಜ್‌ಮೆಂಟ್‌ನಲ್ಲಿ ನಟಿ ಲಾವಣ್ಯ ಗಿಳಿ ಹಸಿರು ಸೀರೆಯಲ್ಲಿ ಮಿಂಚಿದ್ರೆ, ವರುಣ್ ಗೋಲ್ಡನ್ ಬಣ್ಣದ ಶೆರ್ವಾನಿಯಲ್ಲಿ ಹೈಲೆಟ್ ಆಗಿದ್ದರು.
ಟಾಲಿವುಡ್‌ನಲ್ಲಿ ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಡೋದಕ್ಕೆ ವರುಣ್ ತೇಜ್(Varun Tej)- ಲಾವಣ್ಯ ತ್ರಿಪಾಠಿ (Lavanya Tripati) ರೆಡಿಯಾಗಿದ್ದಾರೆ. ಇದೇ ನವೆಂಬರ್ ಮೊದಲ ವಾರದಲ್ಲಿ ಹೊಸ ಬಾಳಿಗೆ (Wedding) ಈ ಜೋಡಿ ಕಾಲಿಡಲಿದೆ ಎಂದು ಹೇಳಲಾಗುತ್ತಿದೆ. ಮದುವೆ ದಿನ ಹತ್ತಿರ ಬರುತ್ತಿದ್ದಂತೆಯೇ ನಟಿ ಫಿಟ್‌ನೆಸ್‌ಗೆ ಹೆಚ್ಚು ಒತ್ತು ಕೊಡ್ತಿದ್ದಾರೆ. ಈ ಕುರಿತ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಲಾವಣ್ಯ ಶೇರ್ ಮಾಡಿದ್ದಾರೆ.
ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ರಾಮ್ ಚರಣ್- ಉಪಾಸನಾ (Upasana) ಮುದ್ದು ಮಗಳ ಆಗಮನದ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಅದ್ದೂರಿಯಾಗಿ ನಾಮಕರಣ ಕೂಡ ಮಾಡಿದ್ದಾರೆ. ಈಗ ಮೆಗಾಸ್ಟಾರ್ ಮನೆ ಮಗ ವರುಣ್ ತೇಜ್-ಲಾವಣ್ಯ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ನವೆಂಬರ್ 1ರಂದು ಇಟಲಿಯಲ್ಲಿ (Italy) ಹಸೆಮಣೆಗೆ ಈ ಜೋಡಿ ಏರಲಿದೆಯಂತೆ.
ಮೆಗಾ ಪ್ರಿನ್ಸ್ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, 2017ರಲ್ಲಿ ಇಬ್ಬರು ಮಿಸ್ಟರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ವರುಣ್ ತೇಜ್, ಲಾವಣ್ಯ ತ್ರಿಪಾಠಿ ಇಬ್ಬರೂ ಕ್ಲೋಸ್ ಆಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬರಬರುತ್ತಾ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ, ಅದು ಪಬ್ಲಿಕ್ ಆಗದಂತೆ ನೋಡಿಕೊಂಡಿದ್ದರು. ಹಲವು ವರ್ಷಗಳವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇರಲಿಲ್ಲ. ಆದರೆ, ಅಂತರಿಕ್ಷಂ ಸಿನಿಮಾದ ವೇಳೆ ಇಬ್ಬರ ಬಗ್ಗೆ ಮೊದಲ ಬಾರಿಗೆ ಗಾಳಿಸುದ್ದಿ ಹಬ್ಬಿತ್ತು. ಅಲ್ಲಿಂದ ಇಬ್ಬರ ಡೇಟಿಂಗ್ ಸುದ್ದಿ ಚಾಲ್ತಿಗೆ ಬಂದಿತ್ತು.
ಆಗಾಗ ವರುಣ್, ಲಾವಣ್ಯ ಇಬ್ಬರೂ ಹಲವು ಕಾರ್ಯಕ್ರಮಗಳು ಹಾಗೂ ಪಾರ್ಟಿಗಳಲ್ಲಿ ಭೇಟಿಯಾಗುತ್ತಿದ್ದರು. ಇದು ಗಾಳಿಸುದ್ದಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ವರುಣ್, ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಯಸಿದ್ದರು. ಹೀಗಾಗಿ ಡಿಸೆಂಬರ್ 25 ಲಾವಣ್ಯ ಹುಟ್ಟುಹಬ್ಬದಂದು ಮದುವೆಗೆ ಪ್ರಪೋಸ್ ಮಾಡಿದ್ದರು. ಎರಡೂ ಮನೆಯವರು ಒಪ್ಪಿದರೂ, ಈ ಜೋಡಿ ಮದುವೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ.
ಯಂಗ್ ಜೋಡಿ ವರುಣ್- ಲಾವಣ್ಯ ಅವರು ಹೈದರಾಬಾದ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿ ಎಂಗೇಜ್ ಆಗಿದ್ದರು. ಜೂನ್ 9ರ ರಾತ್ರಿ ಎರಡು ಕುಟುಂಬದವರು ಆಪ್ತರಷ್ಟೇ ಭಾಗಿಯಾಗಿದ್ದರು. ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ಅವರ ಇಡೀ ಕುಟುಂಬ, ಅಲ್ಲು ಅರ್ಜುನ್ ಫ್ಯಾಮಿಲಿ, ವೆಂಕಟೇಶ್ವರ ರಾವ್ ಕುಟುಂಬದವರಷ್ಟೇ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಎಂಗೇಜ್‌ಮೆಂಟ್‌ನಲ್ಲಿ ನಟಿ ಲಾವಣ್ಯ ಗಿಳಿ ಹಸಿರು ಸೀರೆಯಲ್ಲಿ ಮಿಂಚಿದ್ರೆ, ವರುಣ್ ಗೋಲ್ಡನ್ ಬಣ್ಣದ ಶೆರ್ವಾನಿಯಲ್ಲಿ ಹೈಲೆಟ್ ಆಗಿದ್ದರು.
ಟಾಲಿವುಡ್ ಬ್ಯೂಟಿ ಲಾವಣ್ಯ ತ್ರಿಪಾಠಿ (Lavanya Tripati) ಅವರು ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆಗೆ ಸೊಸೆಯಾಗಿ ಸದ್ಯದಲ್ಲೇ ಕಾಲಿಡಲಿದ್ದಾರೆ. ಇತ್ತೀಚಿಗೆ ಮೆಗಾಸ್ಟಾರ್ ಕುಟುಂಬದ ಮನೆಮಗ ವರುಣ್ ತೇಜ್ ಜೊತೆ ಅದ್ದೂರಿಯಾಗಿ ಲಾವಣ್ಯ ಎಂಗೇಜ್‌ಮೆಂಟ್ ಮಾಡಿಕೊಂಡರು. ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದರು. ಇದೀಗ ನಟಿ ಲಾವಣ್ಯ ಬಗ್ಗೆ ಹೊಸದೊಂದು ವಿಚಾರ ಚರ್ಚೆಯಾಗುತ್ತಿದೆ. ಲಾವಣ್ಯ ಅವರು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದಾರಂತೆ. ಈ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ.
ನಟ ವರುಣ್ ತೇಜ್ (Varun Tej)- ಲಾವಣ್ಯ ಅವರು ಒಟ್ಟಿಗೆ 2 ಸಿನಿಮಾ ಮಾಡಿದ್ದರು. ಸಿನಿಮಾಗಾಗಿ ಆದ ಪರಿಚಯ ಇಂದು ಮದುವೆವರೆಗೂ ತಂದು ನಿಲ್ಲಿಸಿದೆ. ಸತತ 6 ವರ್ಷಗಳ ಪ್ರೀತಿಯನ್ನ ಮನೆಯವರಿಗೆ ತಿಳಿಸಿ, 2 ಕುಟುಂಬದ ಸಮ್ಮತಿ ಪಡೆದು ಎಂಗೇಜ್ ಆಗಿದ್ದಾರೆ. ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗ ಜೋಡಿಯ ಬಗ್ಗೆ ಅಭಿಮಾನಿಗಳಿಗೆ ಹೊಸ ತಲೆನೋವು ಶುರುವಾಗಿದೆ. ಲಾವಣ್ಯ ಅವರ ವಿಚಿತ್ರ ಕಾಯಿಲೆ ಸಮಸ್ಯೆಯಿಂದ ಮದುವೆ ಮುರಿದು ಬೀಳುತ್ತಾ ಎಂಬ ಆತಂಕ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದನ್ನೂ ಓದಿ:ರಾಘವ್ ಲಾರೆನ್ಸ್-ಕಂಗನಾ ನಟನೆಯ ‘ಚಂದ್ರಮುಖಿ 2’ ಎಂಟ್ರಿಗೆ ಮುಹೂರ್ತ ಫಿಕ್ಸ್
ಲಾವಣ್ಯ ಮೆಗಾ ಫ್ಯಾಮಿಲಿ ಸೊಸೆಯಾಗುತ್ತಾರೆ ಎನ್ನುವ ವಿಷಯ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಇನ್ನು ಲಾವಣ್ಯ ಹಿನ್ನೆಲೆ ಏನು? ಆಕೆಯ ಜಾತಿ ಏನು? ಆಕೆಯ ಆಸ್ತಿ ಮೌಲ್ಯ ಎಷ್ಟು ಅಂತೆಲ್ಲಾ ಅಂತರ್ಜಾಲದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ಆಕೆ ತನಗಿರುವ ವಿಚಿತ್ರ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿದ್ದ ವೀಡಿಯೋವೊಂದು ಸದ್ದು ಮಾಡುತ್ತಿದೆ.
ಸೆಲೆಬ್ರೆಟಿಗಳು ಕೂಡ ಮನುಷ್ಯರೇ ಅಲ್ಲವೇ. ಸೂಪರ್ ಸ್ಟಾರ್‌ಗಳು ಕೂಡ ಚಿತ್ರವಿಚಿತ್ರ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಕ್ಯಾನ್ಸರ್‌ನಿಂದ ಬಳಲುವವರು ಕೂಡ ಇದ್ದಾರೆ. ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿರುತ್ತಾರೆ. ಆದರೆ ಸೆಲೆಬ್ರೆಟಿಗಳು ಎನ್ನುವ ಕಾರಣಕ್ಕೆ ಅವರ ಪ್ರತಿಯೊಂದು ವಿಚಾರ ದೊಡ್ಡದಾಗಿ ಸುದ್ದಿಯಾಗುತ್ತದೆ ಅಷ್ಟೇ. 2 ವರ್ಷಗಳ ಹಿಂದೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫಾಲೋವರ್ಸ್ ಜೊತೆ ಮಾತನಾಡುತ್ತಾ ನಟಿ ಲಾವಣ್ಯ ತಮಗಿರುವ ವಿಚಿತ್ರ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು.
ಸ್ವತಃ ಲಾವಣ್ಯ ತ್ರಿಪಾಠಿ ತಾವು ಟ್ರಿಪೋಫೋಬಿಯಾದಿಂಧ ಬಳಲುತ್ತಿರುವ ಬಗ್ಗೆ ಮಾತನಾಡಿದ್ದರು. ಚರ್ಮದ ರಂಧ್ರಗಳು, ಜೇನುಗೂಡು, ಕಮಲದ ಕಣ್ಣುಗಳ ರಂಧ್ರಗಳ ಅಥವಾ ಉಬ್ಬುಗಳನ್ನು ಹೊಂದಿರುವ ವಸ್ತುವನ್ನು ನೋಡಲು ಆಕೆ ಪ್ರಜ್ಞಾಪೂರ್ವಕವಾಗಿ ಹೆದರುತ್ತೀನಿ. ಇದರಿಂದ ಸಾಕಷ್ಟು ಬಾರಿ ಸಮಸ್ಯೆ ಎದುರಿಸಿರುವುದಾಗಿ ಹೇಳಿಕೊಂಡಿದ್ದರು. ಇದರಿಂದ ಹೊರ ಬರಲು ಪ್ರಯತ್ನ ನಡೆಸುತ್ತಿರುವುದಾಗಿ ವಿವರಿಸಿದ್ದರು. ನಾವು ಸಂತೋಷವಾಗಿ ಇರಬೇಕು. ನಮ್ಮ ಸುತ್ತಲಿನ ಪ್ರಪಂಚದಲ್ಲಿ ಸಂತಸ ಹರಡಬೇಕು, ಇದನ್ನು ನಾನು ನಂಬುತ್ತೇನೆ ಎಂದು ಲಾವಣ್ಯ ಮಾತನಾಡಿದ್ದರು.
ಇನ್ನೂ ಈಗಲೂ ಈ ವಿಚಿತ್ರ ಕಾಯಿಲೆಯಿಂದ ನಟಿ ಬಳಲುತ್ತಿದ್ದಾರಾ.? ಅಥವಾ ಗುಣಮುಖರಾಗಿದ್ದಾರಾ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಮೊದಲೇ ಶ್ರೀಜಾ, ನಿಹಾರಿಕಾ ಬದುಕು ಡಿವೋರ್ಸ್ ಪಡೆಯುವ ಮೂಲಕ ಮೂರಾ ಬಟ್ಟೆಯಾಗಿದೆ. ವರುಣ್- ಲಾವಣ್ಯ ಜೋಡಿಯ ಮಧ್ಯೆ ಈ ವಿಚಿತ್ರ ಕಾಯಿಲೆ ವಿಷ್ಯವಾಗಿ ಮದುವೆ ಬ್ರೇಕಪ್ ಆಗುತ್ತಾ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ.
ಮೆಗಾಸ್ಟಾರ್ ಕುಟುಂಬದ ಕುಡಿ ವರುಣ್ ತೇಜ್- ನಟಿ ಲಾವಣ್ಯ ತ್ರಿಪಾಠಿ (Lavanya Tripati) ಜೋಡಿ ತಮ್ಮ 7 ವರ್ಷದ ಪ್ರೀತಿಗೆ ಉಂಗುರ ಮುದ್ರೆ ಒತ್ತುವ ಮೂಲಕ ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ಟಿದ್ದರು. ಜೂನ್ 9ರಂದು ವರುಣ್ (Varun Tej) ಜೊತೆ ಲಾವಣ್ಯ ಅದ್ದೂರಿಯಾಗಿ ನಿಶ್ಚಿತಾರ್ಥ (Engagement) ಮಾಡಿಕೊಂಡರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡ್ತಿದ್ದಂತೆ ಈಗ ಹೊಸ ಚರ್ಚೆಯೊಂದು ಶುರುವಾಗುತ್ತಿದೆ. ಲಾವಣ್ಯ ಅವರ ಜಾತಿ ಯಾವುದು ಎನ್ನುವ ಕುತೂಹಲ ಫ್ಯಾನ್ಸ್‌ಗೆ ಹೆಚ್ಚಾಗಿದೆ.
ಮೆಗಾ ಪ್ರಿನ್ಸ್ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, 2016ರಲ್ಲಿ ಬಳಿಕ 2017ರಲ್ಲಿ ಇಬ್ಬರು ‘ಮಿಸ್ಟರ್’ (Mister) ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ವರುಣ್ ತೇಜ್ (Varun Tej), ಲಾವಣ್ಯ ತ್ರಿಪಾಠಿ (Lavanya Tripathi) ಇಬ್ಬರೂ ಕ್ಲೋಸ್ ಆಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬರಬರುತ್ತಾ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ, ಅದು ಪಬ್ಲಿಕ್ ಆಗದಂತೆ ನೋಡಿಕೊಂಡಿದ್ದಾರೆ. ಹಲವು ವರ್ಷಗಳವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇರಲಿಲ್ಲ. ಆದರೆ, ಅಂತರಿಕ್ಷಂ ಸಿನಿಮಾದ ವೇಳೆ ಇಬ್ಬರ ಬಗ್ಗೆ ಮೊದಲ ಬಾರಿಗೆ ಗಾಳಿಸುದ್ದಿ ಹಬ್ಬಿತ್ತು. ಅಲ್ಲಿಂದ ಇಬ್ಬರ ಡೇಟಿಂಗ್ ಸುದ್ದಿ ಚಾಲ್ತಿಗೆ ಬಂದಿತ್ತು.
ಆಗಾಗ ವರುಣ್, ಲಾವಣ್ಯ ಇಬ್ಬರೂ ಹಲವು ಕಾರ್ಯಕ್ರಮಗಳು ಹಾಗೂ ಪಾರ್ಟಿಗಳಲ್ಲಿ ಭೇಟಿಯಾಗುತ್ತಿದ್ದರು. ಇದು ಗಾಳಿಸುದ್ದಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ವರುಣ್, ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಯಸಿದ್ದರು. ಹೀಗಾಗಿ ಡಿಸೆಂಬರ್ 15 ಲಾವಣ್ಯ ಹುಟ್ಟುಹಬ್ಬದಂದು ಮದುವೆಗೆ ಪ್ರಪೋಸ್ ಮಾಡಿದ್ದರು. ಎರಡೂ ಮನೆಯವರು ಒಪ್ಪಿದರೂ, ಈ ಜೋಡಿ ಮದುವೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ಇದನ್ನೂ ಓದಿ:ಖ್ಯಾತ ಕಥೆಗಾರ ಟಿ.ಕೆ. ದಯಾನಂದ್ ಬರೆದ ಕಥೆಯೇ ‘ಟೋಬಿ’ ಸಿನಿಮಾ
ಯಂಗ್ ಜೋಡಿ ವರುಣ್- ಲಾವಣ್ಯ ಅವರು ಹೈದರಾಬಾದ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿ ಎಂಗೇಜ್ ಆಗಿದ್ದಾರೆ. ಜೂನ್ 9ರ ರಾತ್ರಿ ಎರಡು ಕುಟುಂಬದವರು ಆಪ್ತರಷ್ಟೇ ಭಾಗಿಯಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ಅವರ ಇಡೀ ಕುಟುಂಬ, ಅಲ್ಲು ಅರ್ಜುನ್ ಫ್ಯಾಮಿಲಿ, ವೆಂಕಟೇಶ್ವರ ರಾವ್ ಕುಟುಂಬದವರಷ್ಟೇ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಸದ್ಯ ಎಂಗೇಜ್ ಆಗಿರುವ ಈ ಜೋಡಿ ಈ ವರ್ಷದ ಅಂತ್ಯದಲ್ಲಿ ಮದುವೆ ಆಗಲಿದ್ದಾರೆ. ಎಂಗೇಜ್‌ಮೆಂಟ್‌ನಲ್ಲಿ ನಟಿ ಲಾವಣ್ಯ ಗಿಳಿ ಹಸಿರು ಸೀರೆಯಲ್ಲಿ ಮಿಂಚಿದ್ರೆ, ವರುಣ್ ಗೋಲ್ಡನ್ ಬಣ್ಣದ ಶೆರ್ವಾನಿಯಲ್ಲಿ ಹೈಲೆಟ್ ಆಗಿದ್ದಾರೆ. ನನ್ನ ಪ್ರೀತಿಯನ್ನ 2016ರಲ್ಲಿಯೇ ಕಂಡುಕೊಂಡಿದ್ದೆ ಎಂದು ನಟಿ ನಿಶ್ಚಿತಾರ್ಥದ ಫೋಟೋ ಸಮೇತ ಪೋಸ್ಟ್ ಮಾಡಿದ್ದರು.
ನಿಶ್ಚಿತಾರ್ಥದ ಬೆನ್ನಲ್ಲೇ ಚಿರು ಕುಟಂಬಕ್ಕೆ ಸೊಸೆಯಾಗಿ ಬರುತ್ತಿರುವ ಲಾವಣ್ಯಾ ತ್ರಿಪಾಠಿ ಅವರ ಜಾತಿಗಾಗಿ ಹುಡುಕಾಟ ಪ್ರಾರಂಭವಾಗಿದೆ. ಇಂಟರ್‌ನೆಟ್‌ನಲ್ಲಿ ಲಾವಣ್ಯಾ ಜಾತಿಯ ಬಗ್ಗೆ ಹುಡುಕಾಟ ಹೆಚ್ಚಾಗಿದೆ. ಉತ್ತರ ಪ್ರದೇಶ ಮೂಲದ ನಟಿ ಲಾವಣ್ಯಾ ಚಿರು ಕುಟುಂಬದ ಸೊಸೆಯಾಗಿ ಬರ್ತಿದ್ದಾರೆ ಎಂದರೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಹಾಗಾಗಿ ಜಾತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.
ಅಂದಹಾಗೆ ಈ ಹಿಂದೆ ಸಂದರ್ಶನವೊಂದರಲ್ಲಿ ಲಾವಣ್ಯಾ ಜಾತಿ ಬಗ್ಗೆ ಮಾತನಾಡಿದ್ದರು. ತನಗೆ ಜಾತಿ (Caste) ಮುಖ್ಯವಲ್ಲ ಎಂದು ಹೇಳಿದ್ದರು. ಒಬ್ಬ ವ್ಯಕ್ತಿ ತನ್ನ ಕಾರ್ಯಗಳಿಂದ ಶ್ರೇಷ್ಠನಾಗುತ್ತಾನೆ ಅವರ ಜಾತಿಯಿಂದ ಅಲ್ಲ ಎಂದು ನಾನು ನಂಬಿದ್ದೇನೆ ಎಂದು ನಟಿ ಹೇಳಿದ್ದರು. ಹಾಗಾಗಿ ಲಾವಣ್ಯ ಜಾತಿಯ ಬಗ್ಗೆ ಇದೀಗ ಕುತೂಹಲ ಹೆಚ್ಚಾಗಿದೆ.
ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಹಲವು ವರ್ಷಗಳ ಪ್ರೀತಿಗೆ ಟಾಲಿವುಡ್‌ನ ಯಂಗ್ ಕಪಲ್ ವರುಣ್ ತೇಜ್- ಲಾವಣ್ಯ ತ್ರಿಪಾಠಿ (Lavanya Tripathi) ಉಂಗುರದ ಮುದ್ರೆ ಒತ್ತಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೂ ಈ ಜೋಡಿ ಬ್ರೇಕ್ ಹಾಕಿದ್ದಾರೆ. ಸದ್ಯ ಯಂಗ್ ಜೋಡಿಯ ಎಂಗೇಜ್‌ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಮೆಗಾ ಪ್ರಿನ್ಸ್ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, 2016ರಲ್ಲಿ ಬಳಿಕ 2017ರಲ್ಲಿ ಇಬ್ಬರು ‘ಮಿಸ್ಟರ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ವರುಣ್ ತೇಜ್, ಲಾವಣ್ಯ ತ್ರಿಪಾಠಿ ಇಬ್ಬರೂ ಕ್ಲೋಸ್ ಆಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬರಬರುತ್ತಾ ಪ್ರೀತಿಯಲ್ಲಿ ಬಿದ್ದಿದ್ದರು.
ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ, ಅದು ಪಬ್ಲಿಕ್ ಆಗದಂತೆ ನೋಡಿಕೊಂಡಿದ್ದಾರೆ. ಹಲವು ವರ್ಷಗಳವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇರಲಿಲ್ಲ. ಆದರೆ, ‘ಅಂತರಿಕ್ಷಂʼ ಸಿನಿಮಾದ ವೇಳೆ ಇಬ್ಬರ ಬಗ್ಗೆ ಮೊದಲ ಬಾರಿಗೆ ಗಾಳಿಸುದ್ದಿ ಹಬ್ಬಿತ್ತು.ಅಲ್ಲಿಂದ ಎಂಗೇಜ್‌ಮೆಂಟ್ ಆಗುವವರೆಗೂ ರೂಮರ್ ಕಪಲ್ ಆಗಿದ್ದರು. ಇದನ್ನೂ ಓದಿ:4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಸುಶ್ಮಿತಾ ಸೇನ್ ಸಹೋದರ ರಾಜೀವ್
ಆಗಾಗ ವರುಣ್, ಲಾವಣ್ಯ ಇಬ್ಬರೂ ಕಾರ್ಯಕ್ರಮಗಳು ಹಾಗೂ ಪಾರ್ಟಿಗಳಲ್ಲಿ ಭೇಟಿಯಾಗುತ್ತಿದ್ದರು. ಇದು ಗಾಳಿಸುದ್ದಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು. ವರುಣ್, ತಮ್ಮ ಪ್ರೀತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಬಯಸಿದ್ದರು. ಹೀಗಾಗಿ ಡಿಸೆಂಬರ್ 15 ಲಾವಣ್ಯ ಹುಟ್ಟುಹಬ್ಬದಂದು ಮದುವೆಗೆ ಪ್ರಪೋಸ್ ಮಾಡಿದ್ದರು. ಎರಡೂ ಮನೆಯವರು ಒಪ್ಪಿದರೂ, ಈ ಜೋಡಿ ಮದುವೆ ಬಗ್ಗೆ ಬಾಯ್ಬಿಟ್ಟಿರಲಿಲ್ಲ.
ಯಂಗ್ ಜೋಡಿ ವರುಣ್- ಲಾವಣ್ಯ ಅವರು ಹೈದರಾಬಾದ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿ ಎಂಗೇಜ್ ಆಗಿದ್ದಾರೆ. ಜೂನ್ ೯ರ ರಾತ್ರಿ ಎರಡು ಕುಟುಂಬದವರು ಆಪ್ತರಷ್ಟೇ ಭಾಗಿಯಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ಅವರ ಇಡೀ ಕುಟುಂಬ, ಅಲ್ಲು ಅರ್ಜುನ್ ಫ್ಯಾಮಿಲಿ, ವೆಂಕಟೇಶ್ವರ ರಾವ್ ಕುಟುಂಬದವರಷ್ಟೇ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಸದ್ಯ ಎಂಗೇಜ್ ಆಗಿರುವ ಈ ಜೋಡಿ ಈ ವರ್ಷದ ಅಂತ್ಯದಲ್ಲಿ ಮದುವೆ ಆಗಲಿದ್ದಾರೆ.
ಎಂಗೇಜ್‌ಮೆಂಟ್‌ನಲ್ಲಿ (Engagement) ನಟಿ ಲಾವಣ್ಯ ಗಿಳಿ ಹಸಿರು ಸೀರೆಯಲ್ಲಿ ಮಿಂಚಿದ್ರೆ, ವರುಣ್ ಗೋಲ್ಡನ್ ಬಣ್ಣದ ಶೆರ್ವಾನಿಯಲ್ಲಿ ಹೈಲೆಟ್ ಆಗಿದ್ದಾರೆ. ನನ್ನ ಪ್ರೀತಿಯನ್ನ 2016ರಲ್ಲಿಯೇ ಕಂಡುಕೊಂಡಿದ್ದೆ ಎಂದು ನಟಿ ನಿಶ್ಚಿತಾರ್ಥದ ಫೋಟೋ ಸಮೇತ ಪೋಸ್ಟ್ ಮಾಡಿದ್ದಾರೆ. ಹೊಸ ಜೋಡಿಗೆ ಫ್ಯಾನ್ಸ್ ಶುಭಕೋರಿದ್ದಾರೆ.