Tag: ಲಾಲ್ ಬಹಾದ್ದೂರ್ ಶಾಸ್ತ್ರಿ

  • ಅ.2 ರಂದು ರಾಜ್ಯಾದ್ಯಂತ `ಗಾಂಧಿ ನಡಿಗೆ’; ಒಂದು ವರ್ಷ ಕಾರ್ಯಕ್ರಮ ಆಯೋಜನೆ – ಡಿಕೆಶಿ

    ಅ.2 ರಂದು ರಾಜ್ಯಾದ್ಯಂತ `ಗಾಂಧಿ ನಡಿಗೆ’; ಒಂದು ವರ್ಷ ಕಾರ್ಯಕ್ರಮ ಆಯೋಜನೆ – ಡಿಕೆಶಿ

    – ಸ್ವಚ್ಛತೆಯ ಪ್ರತಿಜ್ಞಾವಿಧಿ ಸ್ವೀಕಾರ

    ಬೆಂಗಳೂರು: ಅ.2 ರಂದು ರಾಜ್ಯಾದ್ಯಂತ `ಗಾಂಧಿ ನಡಿಗೆ’ ಹಾಗೂ `ಸ್ವಚ್ಛತೆಯ ಪ್ರತಿಜ್ಞಾ ಸ್ವೀಕಾರ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ತಿಳಿಸಿದರು.

    ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರು (Mahatma Gandhi) ಬೆಳಗಾವಿಯಲ್ಲಿ (Belagavi) ಸ್ವಾತಂತ್ರ‍್ಯ ಸಂಗ್ರಾಮದ ನೇತೃತ್ವ ವಹಿಸಿಕೊಂಡು 100 ವರ್ಷವಾಗಿರುವ ಹಿನ್ನೆಲೆಯಲ್ಲಿ ಒಂದು ವರ್ಷಗಳ ಕಾಲ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಕಾರ್ಯಕ್ರಮದ ಮೊದಲ ಭಾಗವಾಗಿ ಅ.2 ಗಾಂಧಿ ಜಯಂತಿಯಂದು 1 ಕಿ.ಮೀ. ‘ಗಾಂಧಿ ನಡಿಗೆ’ ಮತ್ತು ‘ಸ್ವಚ್ಛತಾ ಪ್ರತಿಜ್ಞಾ ಸ್ವೀಕಾರ’ ಅಭಿಯಾನ ಹಮ್ಮಿಕೊಳ್ಳಲಾಗುವುದು. ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಕೇಂದ್ರ ಹಾಗೂ ಪಾಲಿಕೆ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಅವ್ರು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಪ್ರದೀಪ್ ಈಶ್ವರ್

    ಬೆಂಗಳೂರಿನಲ್ಲಿ ಬುಧವಾರ ಬೆಳಗ್ಗೆ 9 ಗಂಟೆಗೆ ಗಾಂಧಿ ಭವನದಿಂದ ವಿಧಾನಸೌಧದ ಗಾಂಧಿ ಪ್ರತಿಮೆವರೆಗೂ ನಡಿಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು ಎಂದಿದ್ದಾರೆ.

    500 ಶಾಲಾ ಮಕ್ಕಳಿಗೆ ಜೂಮ್ ಮೂಲಕ ಪ್ರತಿಜ್ಞಾವಿಧಿ:
    ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ (Lal Bahadur Shastri) ಇಬ್ಬರ ಜನ್ಮದಿನವೂ ಒಂದೇ ದಿನ ಆಗಿರುವ ಕಾರಣ ಇಬ್ಬರ ಪ್ರತಿಮೆಗೂ ಮಾಲಾರ್ಪಣೆ ಮಾಡಲಾಗುವುದು. ನಂತರ ನಡಿಗೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾಗೂ ಬೆಂಗಳೂರಿನ 500 ಶಾಲಾ, ಕಾಲೇಜು ಮಕ್ಕಳಿಗೆ ಜೂಮ್ ಮೂಲಕ ಪ್ರತಿಜ್ಞಾ ವಿಧಿ ಬೋಧನೆ ಮಾಡಲಾಗುವುದು. ಇದು ಸರ್ಕಾರದ ಕಾರ್ಯಕ್ರಮ, ಗಾಂಧಿ ಅವರ ಆದರ್ಶವನ್ನು ಯುವ ಪೀಳಿಗೆಗೆ ತಲುಪಿಸಲು ಈ ಕಾರ್ಯಕ್ರಮ ರೂಪಿಸಿದೆ ಎಂದರು.

    ಶ್ವೇತ ವಸ್ತ್ರ ಧರಿಸಿ ನಡಿಗೆ:
    ಜಿಲ್ಲಾ ಕೇಂದ್ರದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ತಾಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರು ಭಾಗವಹಿಸಲಿದ್ದಾರೆ. ಈ ನಡಿಗೆ ವೇಳೆ ಬಿಳಿ ವಸ್ತ್ರ, ಗಾಂಧಿ ಟೋಪಿ ಧರಿಸಿ ಹೆಜ್ಜೆ ಹಾಕುವಂತೆ ಮನವಿ ಮಾಡಲಾಗುವುದು. ಗಾಂಧಿ ಜಯಂತಿಯನ್ನು ವಿಶಿಷ್ಟವಾಗಿ ಆಚರಣೆ ಮಾಡುತ್ತಿದ್ದು, ಇಡೀ ವರ್ಷ ಗಾಂಧೀಜಿ ಅವರ ಆಚಾರ ವಿಚಾರವನ್ನು ಯುವ ಪೀಳಿಗೆಗೆ ತಿಳಿಸಲು ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತ್ಯೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಮೈಸೂರು ದಸರಾದಲ್ಲಿ ತುತ್ತೂರಿ ಬ್ಯಾನ್

    ಪ್ರತಿಜ್ಞಾ ವಿಧಿಗಾಗಿ ಆಪ್ ಮೂಲಕ ನೋಂದಣಿ:
    ರಾಜ್ಯದಲ್ಲಿ ಸಾರ್ವಜನಿಕರು ಪ್ರತಿಜ್ಞಾ ವಿಧಿ ತೆಗೆದುಕೊಳ್ಳಲು ಒಂದು ಆಪ್ ಸಿದ್ಧಪಡಿಸಲಾಗಿದ್ದು, ಈಗಾಗಲೇ 35 ಸಾವಿರ ಮಂದಿ ಈ ಆಪ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿಜ್ಞಾ ವಿಧಿ ಪಡೆದವರಿಗೆ ಆನ್‌ಲೈನ್‌ನಲ್ಲೇ ಪ್ರಮಾಣಪತ್ರ ನೀಡಲಾಗುವುದು. ಇದು ಮೊದಲ ಹಂತದ ಕಾರ್ಯಕ್ರಮವಾಗಿದ್ದು, ಇಡೀ ವರ್ಷ ಬೇರೆ ಬೇರೆ ಕಾರ್ಯಕ್ರಮ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

  • ರಾಹುಲ್ ಗಾಂಧಿ ನಕಲಿ ಗಾಂಧಿ: ಬೊಮ್ಮಾಯಿ

    ರಾಹುಲ್ ಗಾಂಧಿ ನಕಲಿ ಗಾಂಧಿ: ಬೊಮ್ಮಾಯಿ

    – ಇಡೀ ಕಾಂಗ್ರೆಸ್ ಪಾರ್ಟಿ ಬೇಲ್ ಮೇಲೆ ಹೊರಗೆ ಇದೆ

    ಬೆಂಗಳೂರು: ಗಾಂಧಿ ಜಯಂತಿಯ ದಿನದಂದು ನಕಲಿ ಗಾಂಧಿಗಳ ಬಗ್ಗೆ ಯಾಕೆ ಮಾತಾಡೋದು. ರಾಹುಲ್ ಗಾಂಧಿ (Rahul Gandhi) ನಕಲಿ ಗಾಂಧಿ. ಇಡೀ ಕಾಂಗ್ರೆಸ್ ಪಾರ್ಟಿ ಬೇಲ್ ಮೇಲೆ ಹೊರಗೆ ಇದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ (Sonia Gandhi)  ಎಲ್ಲರೂ ಬೇಲ್ ಮೇಲೆ ಇದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಿಡಿಕಾರಿದರು.

    ಬಿಜೆಪಿ ಭ್ರಷ್ಟಾಚಾರ ಪಕ್ಷ ಎಂಬ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಗಾಂಧಿ ಜಯಂತಿಯ ದಿನದಂದು ನಕಲಿ ಗಾಂಧಿಗಳ ಬಗ್ಗೆ ಯಾಕೆ ಮಾತಾಡೋದು. ರಾಹುಲ್ ಗಾಂಧಿ (Rahul Gandhi) ನಕಲಿ ಗಾಂಧಿ. ಇಡೀ ಕಾಂಗ್ರೆಸ್ ಪಾರ್ಟಿ ಬೇಲ್ ಮೇಲ್ ಹೊರಗೆ ಇದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ (Sonia Gandhi)  ಎಲ್ಲರೂ ಬೇಲ್ ಮೇಲೆ ಇದ್ದಾರೆ. ಭ್ರಷ್ಟಾಚಾರದ ಮೇಲೆ ಅವರು ಬೇಲ್ ಮೇಲೆ ಇದ್ದಾರೆ. ಅವರು ನಮ್ಮ ಬಗ್ಗೆ ಮಾತಾಡೋದಾ? ನಮ್ಮ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರು (ಡಿಕೆಶಿವಕುಮಾರ್) ಬೇಲ್ ಮೇಲೆ ಹೊರಗೆ ಇರೋದು. ಪಾಪ ಎರಡು ವರ್ಷದಿಂದ ಕೇಸ್ ನಡೆಯುತ್ತಿದೆ. ಇವರು ನಮ್ಮ ಬಗ್ಗೆ ಮಾತಾಡೋದಾ? ಕಾಂಗ್ರೆಸ್‍ನವರಿಗೆ ಕರ್ನಾಟಕ ATM ಆಗಿತ್ತು. ಅದು ಕೈ ತಪ್ಪಿದೆ ಅಂತ ಕಾಂಗ್ರೆಸ್‍ನವರು ಹೀಗೆ ಮಾತನಾಡುತ್ತಿದ್ದಾರೆ. ಕರ್ನಾಟಕ ಕೈ ತಪ್ಪಿದೆ ಅಂತ ಅವರಿಗೆ ಕೊರಗು ಇದೆ. ಹೀಗಾಗಿ ಆರೋಪ ಮಾಡ್ತಿದ್ದಾರೆ. ನಮ್ಮಲ್ಲಿ 40% ಇಲ್ಲ ಯಾವುದು ಇಲ್ಲ. ಕಾಂಗ್ರೆಸ್‍ನವರು ದುರುದ್ದೇಶದ ಪ್ರಚಾರ ಮಾಡುತ್ತಿದ್ದಾರೆ. ಪದೇ ಪದೇ ಹೇಳ್ತೀನಿ ಯಾವುದೇ ದಾಖಲೆ ಇದ್ದರೆ ಕೊಡಲಿ. ಆ ಬಗ್ಗೆ ತನಿಖೆ ಮಾಡಿಸ್ತೀನಿ. ಇದೇ ನಮ್ಮ ಸ್ಟಾಂಡ್ ಎಂದು ವಾಗ್ದಾಳಿ ನಡೆಸಿದರು.

    ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಮಹಾತ್ಮ ಗಾಂಧಿ ಜಯಂತಿ ಹಿನ್ನೆಲೆ, ವಿಧಾನಸೌಧದ ಗಾಂಧಿಜೀ ಪ್ರತಿಮೆ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ (Lal Bahadur Shastri) ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಬೊಮ್ಮಾಯಿ ಅವರು, ರಾಷ್ಟ್ರಪಿತ ಗಾಂಧಿಯವರ ಜನ್ಮ ದಿನ ಇಂದು. ನಾವೆಲ್ಲರು ಗೌರವ ಅರ್ಪಣೆ ಮಾಡಿದ್ದೇವೆ. ಗಾಂಧಿ ದೇಶಕ್ಕೆ ಪ್ರೇರಣ ಶಕ್ತಿ. ಅವರ ಬದುಕು ಆದರ್ಶ. ಹಲವು ಅಪಮಾನ ಸಹಿಸಿಕೊಂಡು ಹೋರಾಟ ಮಾಡಿದವರು. ದೇಶಕ್ಕಾಗಿ ತಮ್ಮ ಜೀವನ ತ್ಯಾಗ ಮಾಡಿದವರು. ಗಾಂಧಿಯವರ ನೇತೃತ್ವ ಸಿಗೋವರೆಗೂ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ಸಿಕ್ಕಿತು. ಸತ್ಯ, ಅಹಿಂಸೆ ಎಂಬ ಎರಡು ಅಸ್ತ್ರ ಕೊಟ್ಟರು. ಈ ಎರಡು ಅಸ್ತ್ರ ಪ್ರಬಲವಾಗಿದ್ದವು. ಬ್ರಿಟಿಷರ ವಿರುದ್ಧ ಜನಾಂದೋಲ ಸೃಷ್ಟಿ ಆಗಿ ಸ್ವಾತಂತ್ರ್ಯ ಸಿಕ್ಕಿತು. ಗಾಂಧಿಯವರ ಜೀವನವೇ ನಮಗೆ ಸಂದೇಶ. ಸತ್ಯ, ಅಹಿಂಸೆ ಮಾರ್ಗವನ್ನು ಅವರು ಬಿಡಲಿಲ್ಲ. ಇಂದೂ ಕೂಡಾ ನಮ್ಮ ದೇಶಕ್ಕೆ ಅಂತರ್ ಸತ್ವದ ಪ್ರೇರಣೆ ಗಾಂಧಿಜೀ. ಅವರು ಹೇಳಿದ ಮಾತು ಈಗಲೂ ಪ್ರಸ್ತುತ ಎಂದರು. ಇದನ್ನೂ ಓದಿ: ಅಭಿವೃದ್ಧಿ ಆಗಬಾರದೆಂದು ನಾನು ಭಾವಿಸಿದ್ದರೆ ನೀವು ಮಲ್ಲೇಶ್ವರಂನಲ್ಲಿ ಶಾಸಕರೇ ಆಗುತ್ತಿರಲಿಲ್ಲ: ಹೆಚ್‍ಡಿಕೆ

    ಲಾಲ್ ಬಹಾದ್ದೂರ್ ಶಾಸ್ತ್ರಿಗಳ ಜಯಂತಿ ಕೂಡ ಇಂದು ನಡೆಸಲಾಗಿದೆ. ಗಾಂಧಿಜೀ ಶಾಸ್ತ್ರಿಯವರ ನಡುವೆ ಸಾಮ್ಯತೆ ಇದೆ. ಒಂದೇ ದಿನ ಅವರ ಜಯಂತಿ ದೈವ ಇಚ್ಛೆ. ಶಾಸ್ತ್ರಿಗಳು ಇಂದಿಗೂ ಕೂಡಾ ಜನ ಮಾನಸದಲ್ಲಿ ಇದ್ದಾರೆ. ಬಡತನದಿಂದ ಬಂದರು ಬದುಕಿನಲ್ಲಿ ರಾಜೀ ಮಾಡಿಕೊಂಡಿಲ್ಲ. ಪ್ರಧಾನಿ ಆದ್ರು ಅವರ ಆದರ್ಶ ಬಿಡಲಿಲ್ಲ. ದೇಶವನ್ನು ಸಮರ್ಥವಾಗಿ ನಡೆಸಿದರು. ಇಂಡೋ-ಪಾಕ್ ಕದನದಲ್ಲಿ ಸೇನೆಗೆ ಧೈರ್ಯ ಹೇಳಿದ್ದರು. ಯುದ್ದ ಗೆಲ್ಲಲು ಪ್ರೇರಣೆ ನೀಡಿದ್ದರು. ನಾವು ಅಂದು ಆಹಾರದಲ್ಲಿ ಸ್ವಾವಲಂಬಿ ಆಗಿರಲಿಲ್ಲ. ಹಸಿರು ಕಾಂತ್ರಿಗೆ ಅಡಿಪಾಯ ಹಾಕಿದ್ರು. ಜೈ ಜವಾನ್ ಜೈ ಕಿಸಾನ್ ಅಂತ ಹೇಳಿದರು. ಸತ್ಯದಿಂದ ಅವರು ಆಡಳಿತ ಮಾಡಿದರು. ಅವರ ಆಡಳಿತ ನಮಗೆ ಮಾರ್ಗದರ್ಶನ ಎಂದು ನುಡಿದರು. ಇದನ್ನೂ ಓದಿ: ಸಿಪಿವೈ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆತ ಪ್ರಕರಣ- 14 ಜನರ ಮೇಲೆ FIR ದಾಖಲು

    ಬಳಿಕ ಮಾಧ್ಯಮಗಳೊಂದಿಗೆ ಚನ್ನಪಟ್ಟಣ ಗಲಾಟೆ ವಿಚಾರವಾಗಿ ಮಾತನಾಡಿ, ಮಾಹಿತಿ ತರಿಸಿಕೊಳ್ತಿದ್ದೇನೆ. ಸರ್ಕಾರದ ಕಾರ್ಯಕ್ರಮ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು. ಹಿಂಸೆಗೆ ಅವಕಾಶ ಕೊಡಬಾರದು. ನಾವು ಪ್ರಬುದ್ಧವಾಗಿ ಇದ್ದೇವೆ. ಅನುದಾನ ಜನರಿಗೆ ಮುಟ್ಟಬೇಕು. ಘಟನೆ ಬಗ್ಗೆ ವರದಿ ಪಡೆದುಕೊಳ್ತೀನಿ ಎಂದರು. ಇದನ್ನೂ ಓದಿ: ಗಾಂಧಿ ಜಯಂತಿ- ದ್ರೌಪದಿ ಮುರ್ಮು, ಸೋನಿಯಾ ಗಾಂಧಿ ಸೇರಿ ಗಣ್ಯರಿಂದ ನಮನ

    ಇದೇ ವೇಳೆ ಫಿಟ್ ಇಂಡಿಯಾ ಫ್ರೀಡಂ ರನ್‍ಗೆ ಸಿಎಂ ಚಾಲನೆ ನೀಡಿದರು. ಕ್ರೀಡಾ ಇಲಾಖೆ ಆಯೋಜನೆ ಮಾಡಿರೋ ಫಿಟ್ ಇಂಡಿಯಾ ರನ್ ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ, ಸಿಎಸ್ ವಂದಿತಾ ಶರ್ಮಾ ಸೇರಿ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]