Tag: ಲಾರ್ಡ್ಸ್ ಮೈದಾನ

  • ಲಂಡನ್‍ನ ಲಾರ್ಡ್ಸ್ ಮೈದಾನದಲ್ಲಿ ನಡೆಯೋ ಕ್ರಿಕೆಟ್ ಟೂರ್ನಮೆಂಟ್‍ಗೆ ಕಿಚ್ಚನಿಗೆ ಆಹ್ವಾನ

    ಲಂಡನ್‍ನ ಲಾರ್ಡ್ಸ್ ಮೈದಾನದಲ್ಲಿ ನಡೆಯೋ ಕ್ರಿಕೆಟ್ ಟೂರ್ನಮೆಂಟ್‍ಗೆ ಕಿಚ್ಚನಿಗೆ ಆಹ್ವಾನ

    ಬೆಂಗಳೂರು: ಲಂಡನ್‍ನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರೋ ಕ್ರಿಕೆಟ್ ಟೂರ್ನಮೆಂಟ್‍ನಲ್ಲಿ ಭಾಗಿಯಾಗಲು ಕಿಚ್ಚ ಸುದೀಪ್‍ಗೆ ಆಹ್ವಾನ ಬಂದಿದೆ.

    ಮೇ 11 ರಂದು ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ಕಾರ್ಪೋರೇಟ್ ಕ್ರಿಕೆಟ್ ಡೇ ನಡೆಯಲಿದೆ. ಬ್ಯಾಟ್ ಹಿಡಿದು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಮಿಂಚಲಿದೆ ಸ್ಯಾಂಡಲ್‍ವುಡ್‍ನ ಹೆಬ್ಬುಲಿ.

    ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕರಾಗಿ ಮಿಂಚುತ್ತಿರೋ ಸುದೀಪ್‍ಗೆ ಲಂಡನ್‍ನಿಂದ ಬಂದಿರೋ ಆಹ್ವಾನ ಖುಷಿ ಕೊಟ್ಟಿದೆ ಅಂತಾ ಸ್ವತಃ ಕಿಚ್ಚ ಸುದೀಪ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.