Tag: ಲಾರ್ಡ್ಸ್ ಟೆಸ್ಟ್

  • 23ನೇ ಓವರ್‌ನಲ್ಲಿ ಪಂದ್ಯ ಸ್ಥಗಿತ – ಲಾರ್ಡ್ಸ್ ಟೆಸ್ಟ್‌ನಲ್ಲಿ ವಾರ್ನ್‍ಗೆ ವಿಶೇಷ ಗೌರವ

    23ನೇ ಓವರ್‌ನಲ್ಲಿ ಪಂದ್ಯ ಸ್ಥಗಿತ – ಲಾರ್ಡ್ಸ್ ಟೆಸ್ಟ್‌ನಲ್ಲಿ ವಾರ್ನ್‍ಗೆ ವಿಶೇಷ ಗೌರವ

    ಲಾರ್ಡ್ಸ್: ಆಸ್ಟ್ರೇಲಿಯಾದ ದಿವಂಗತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರಿಗೆ ಗೌರವ ಸಲ್ಲಿಸಲು ಪ್ರಸ್ತುತ ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಅನ್ನು ಮೊದಲ ಇನ್ನಿಂಗ್ಸ್‌ನ 23ನೇ ಓವರ್‌ನ ನಂತರ ನಿಲ್ಲಿಸಲಾಯಿತು.

    23ನೇ ಓವರ್‌ನ ನಂತರದಲ್ಲಿ ಮೈದಾನದ ಸ್ಕ್ರೀನ್‍ವೊಂದರ ಮೇಲೆ ಶೇನ್ ವಾರ್ನ್ ಅವರ ಫೋಟೋವನ್ನು ಹಾಕಲಾಯಿತು. ಫೋಟೋದಲ್ಲಿ ಅವರು ರೌಂಡ್ ಕ್ಯಾಪ್‍ವೊಂದನ್ನು ಎಡಗೈನಲ್ಲಿ ಹಿಡಿದು ನಿಂತಿದ್ದು, ಶೇನ್ ವಾರ್ನ್ ಅವರೇ ನಿಮ್ಮನ್ನು ಇಲ್ಲಿ ನೇರದಿರುವ ಪ್ರತಿಯೊಬ್ಬರು ನೆನಪಿಕೊಳ್ಳುತ್ತಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ.

    ಶೇನ್ ವಾರ್ನ್ ಅವರು ತಮ್ಮ ಆಟದ ದಿನಗಳಲ್ಲಿ 23 ಸಂಖ್ಯೆಯ ಜೆರ್ಸಿಯೊಂದನ್ನು ಧರಿಸುತ್ತಿದ್ದ ಹಿನ್ನೆಲೆ ಆಟಗಾರರು 23ನೇ ಓವರ್ ವೇಳೆ ಆಟ ನಿಲ್ಲಿಸಿ ಗೌರವ ಸೂಚಿಸಿದರು. ಪ್ರೇಕ್ಷಕರು ಕೂಡ ದಂತಕಥೆಗೆ 23 ಸೆಕೆಂಡುಗಳ ಕಾಲ ಎದ್ದು ನಿಂತು ಚಪ್ಪಾಳೆಯೊಂದಿಗೆ ಗೌರವ ಸಲ್ಲಿಸಿದರು.

    ಈ ಕುರಿತು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರರೆಲ್ಲರೂ ಅವರೊಂದಿಗೆ ಕಳೆದ ಹಳೆಯ ನೆನಪುಗಳನ್ನೆಲ್ಲಾ ನೆನಪಿಸಿಕೊಂಡು ಭಾವನಾತ್ಮಕವಾಗಿ ಟ್ವೀಟ್ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

    ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಶೇನ್ ವಾರ್ನ್ ಮಾರ್ಚ್ 4 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. 52 ವರ್ಷದ ಶೇನ್ ವಾರ್ನ್‍ಗೆ ಥಾಯ್ಲೆಂಡ್‍ನ ವಿಲ್ಲಾದಲ್ಲಿ ಹೃದಯಾಘಾತವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ, ವಾರ್ನ್ ಕೊನೆಯುಸಿರೆಳೆದಿದ್ದರು.

    ಆಸ್ಟ್ರೇಲಿಯಾದ ತಂಡದಲ್ಲಿ ಗೂಗ್ಲಿ ಎಸೆತದ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ವಾರ್ನ್ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಹಲವು ತಂಡಗಳಿಗೆ ಕೋಚ್ ಮತ್ತು ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು.

  • ಲಾರ್ಡ್ಸ್ ಟೆಸ್ಟ್​ನಲ್ಲಿ ಆಂಗ್ಲರ ವಿರುದ್ಧ ಚೆಂಡು ವಿರೂಪ ಆರೋಪ

    ಲಾರ್ಡ್ಸ್ ಟೆಸ್ಟ್​ನಲ್ಲಿ ಆಂಗ್ಲರ ವಿರುದ್ಧ ಚೆಂಡು ವಿರೂಪ ಆರೋಪ

    ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರು ಶೂನಿಂದ ಚೆಂಡನ್ನು ತುಳಿದು ವಿರೂಪಗೊಳಿದ್ದಾರೆ ಎಂಬ ಕುರಿತು ಆರೋಪ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ.

    ಇಂಗ್ಲೆಂಡ್‍ನ ಇಬ್ಬರು ಆಟಗಾರರು ಶೂನಲ್ಲಿ ಚೆಂಡನ್ನು ತುಳಿದಿರುವ ಫೋಟೋಗಳನ್ನು ಹಾಕಿ ಆಂಗ್ಲ ಆಟಗಾರರು ಕಳ್ಳಾಟದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾಜಿ ಆಟಗಾರರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಆಸೀಸ್ ಆಟಗಾರ – ಸ್ಮಿತ್ ನಾಯಕತ್ವ ತಲೆದಂಡ? 

    ವಿರೇಂದ್ರ ಸೆಹ್ವಾಗ್ ಇದು ಇಂಗ್ಲೆಂಡ್ ಆಟಗಾರರು ನಡೆಸುತ್ತಿರುವ ಚೆಂಡು ವಿರೂಪವೇ ಅಥವಾ ಕೊರೊನಾ ಮುನ್ನಚ್ಚೆರಿಕಾ ಕ್ರಮವೇ ಎಂದು ತಮಾಷೆಯಾಗಿ ಪ್ರಶ್ನೆ ಮಾಡಿದರೆ. ಸ್ಟುವರ್ಟ್ ಬ್ರಾಡ್, ಈ ಘಟನೆಯ ಪೂರ್ಣ ವೀಡಿಯೋ ನೋಡದೆ ವಿಶ್ಲೇಷಿಸುವುದು ಸರಿಯಲ್ಲ. ಇದು ಆಕಸ್ಮಿಕವಾಗಿರಬಹುದು ಎಂದಿದ್ದಾರೆ.

    ಈ ನಡುವೆ ಈ ದೃಶ್ಯಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಹಾಗಾಗಿ ಈ ಕುರಿತು ಮ್ಯಾಚ್ ರೆಫ್ರಿ ಸೂಕ್ಷವಾಗಿ ತನಿಖೆ ನಡೆಸುವ ಸಾಧ್ಯತೆ ಇದೆ.

  • ಲಾರ್ಡ್ಸ್ ಟೆಸ್ಟ್ ಸೋಲಿನ ಬಳಿಕ ಅಭಿಮಾನಿಗಳಿಗೆ ಕೊಹ್ಲಿ ವಿಶೇಷ ಸಂದೇಶ

    ಲಾರ್ಡ್ಸ್ ಟೆಸ್ಟ್ ಸೋಲಿನ ಬಳಿಕ ಅಭಿಮಾನಿಗಳಿಗೆ ಕೊಹ್ಲಿ ವಿಶೇಷ ಸಂದೇಶ

    ನವದೆಹಲಿ: ಕೆಲವೊಂದು ಬಾರಿ ನಾವು ಜಯಗಳಿಸುತ್ತೇವೆ, ಕೆಲವೊಮ್ಮೆ ಪಾಠ ಕಲಿಯುತ್ತೇವೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಸೋಲುಂಡ ಬಳಿಕ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ಕೊಹ್ಲಿ, ಕೆಲವೊಂದು ಬಾರಿ ನಾವು ಜಯಗಳಿಸುತ್ತೇವೆ, ಕೆಲವೊಮ್ಮೆ ಪಾಠ ಕಲಿಯುತ್ತೇವೆ. ಆದರೆ ನಾವು ಎಂದು ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ನೀವು ನಮ್ಮನ್ನು ಬಿಟ್ಟುಕೊಡಬಾರದು, ನಾವು ನಿಮ್ಮನ್ನು ಬಿಟ್ಟುಕೊಡುವುದಿಲ್ಲ ಎಂದು ಭರವಸೆ ನೀಡುತ್ತೇವೆ ಎಂದು ಬರೆದುಕೊಂಡಿದ್ದಾರೆ.

    https://www.facebook.com/virat.kohli/posts/1882345588519202

    ಲಾರ್ಡ್ಸ್ ಪಂದ್ಯದ ಬಳಿಕ ಮಾತನಾಡಿದ್ದ ಕೊಹ್ಲಿ, ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ಇಲ್ಲಿ ಮಾಡಿದ ತಪ್ಪುಗಳಿಂದ ಹಲವು ವಿಚಾರಗಳನ್ನು ಕಲಿತಿದ್ದೇವೆ. ಮುಂದಿನ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಸರಣಿಯನ್ನು 2-1 ಅಂತರಕ್ಕೆ ತರುವ ವಿಶ್ವಾಸವಿದೆ. ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಸ್ಥಿರ ಪ್ರದರ್ಶನ ನೀಡಬೇಕಿದೆ ಎಂದು ಹೇಳಿದ್ದರು.

    ಐಸಿಸಿ ಶ್ರೇಯಾಂಕ ಹಿಂಬಡ್ತಿ: ಒಂದು ವಾರದ ಹಿಂದೆಯಷ್ಟೇ ಐಸಿಸಿ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದ ವಿರಾಟ್ ಕೊಹ್ಲಿ, ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ 23 ಹಾಗೂ 17 ರನ್ ಗಳನ್ನು ಮಾತ್ರ ಗಳಿಸಿ 2ನೇ ಸ್ಥಾನಕ್ಕೆ ಹಿಂಬಡ್ತಿಯಾಗಿದ್ದಾರೆ. 2011 ರಲ್ಲಿ ಸಚಿನ್ ತೆಂಡೂಲ್ಕರ್ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಬಳಿಕ ಕೊಹ್ಲಿ ನಂ.1 ಸ್ಥಾನ ಪಡೆದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದರು. ಸದ್ಯ ಪಟ್ಟಿಯಲ್ಲಿ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಮೊದಲ ಸ್ಥಾನ ಪಡೆದಿದ್ದಾರೆ.

    ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯ ಟ್ರೆಂಟ್ ಬ್ರಿಜ್ ನಲ್ಲಿ ಆಗಸ್ಟ್ 18 ರಿಂದ ಆರಂಭಗೊಳ್ಳಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv