Tag: ಲಾರ್ಡ್ಸ್  ಕ್ರೀಡಾಂಗಣ

  • ಮತ್ತೆ ಕಮ್‌ಬ್ಯಾಕ್ ಮಾಡ್ತಾರಾ ವಿರಾಟ್ ಕೊಹ್ಲಿ?

    ಮತ್ತೆ ಕಮ್‌ಬ್ಯಾಕ್ ಮಾಡ್ತಾರಾ ವಿರಾಟ್ ಕೊಹ್ಲಿ?

    – ಲಾರ್ಡ್‌ನಲ್ಲಿ ಪ್ರಾಕ್ಟಿಸ್‌ನಲ್ಲಿ ಬ್ಯುಸಿ

    ಲಂಡನ್: ಮುಂಬರುವ ಆಸ್ಟ್ರೇಲಿಯಾ (Australia) ವಿರುದ್ಧದ ಏಕದಿನ ಸರಣಿಗಾಗಿ ಸ್ಟಾರ್ ಇಂಡಿಯಾ (India) ಆಟಗಾರ ವಿರಾಟ್ ಕೊಹ್ಲಿ (Virat Kohli) ಪ್ರ್ಯಾಕ್ಟಿಸ್‌ನಲ್ಲಿ ಬ್ಯುಸಿಯಾಗಿದ್ದಾರೆ.

    ಟಿ20 ಮತ್ತು ಟೆಸ್ಟ್ ಪಂದ್ಯಗಳಿಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿ ಏಕದಿನ ಪಂದ್ಯಕ್ಕೂ (ODI) ಕೂಡ ನಿವೃತ್ತಿ ಘೋಷಿಸುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ಈ ಚರ್ಚೆಯ ನಡುವೆಯೇ ಕೊಹ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ (Lord’s Stadium) ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ವರದಕ್ಷಿಣೆ ಕಿರುಕುಳ; ಬೆಂಕಿ ಹಚ್ಚಿ ಮಹಿಳೆ ಕೊಂದ ಪತಿ, ಅತ್ತೆ-ಮಾವ

    ಹೌದು, ಅಕ್ಟೋಬರ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ ವಿರಾಟ್ ಕೊಹ್ಲಿ ಸಿದ್ಧತೆ ನಡೆಸುತ್ತಿದ್ದು, ಲಾರ್ಡ್ಸ್ ಕ್ರೀಡಾಂಗಣದಲ್ಲಿ ಅಭಿಮಾನಿಗಳೊಂದಿಗೆ ಪೋಸ್ ಕೊಟ್ಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಐಪಿಎಲ್ ಬಳಿಕ ಬ್ರೇಕ್‌ನಲ್ಲಿರುವ ಕೊಹ್ಲಿ ಸದ್ಯ ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದು, ಏಕದಿನ ಪಂದ್ಯಕ್ಕಾಗಿ ಪ್ರ್ಯಾಕ್ಟಿಸ್‌ ನಡೆಸುತ್ತಿದ್ದಾರೆ.

    ಮುಂದಿನ ಅ.19ರಿಂದ ಅ.25ರವರೆಗೆ ಆಸ್ಟ್ರೇಲಿಯಾ ವಿರುದ್ಧ ಭಾರತ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈ ಸರಣಿ ಬಳಿಕ ದಿಗ್ಗಜರಾದ ವಿರಾಟ್, ರೋಹಿತ್ ನಿವೃತ್ತಿ ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಪ್ರಸ್ತುತ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ.ಇದನ್ನೂ ಓದಿ: ಶಿವಮೊಗ್ಗ | ಪ್ರಿಯಕರನೊಂದಿಗೆ ಸೇರಿ ಪತಿ ಕೊಂದ ಶಿಕ್ಷಕಿಗೆ ಮರಣದಂಡನೆ

  • ಚೇತೇಶ್ವರ ಪೂಜಾರ ರನೌಟ್-ಟ್ವಿಟ್ಟರ್‌ನಲ್ಲಿ ಕೊಹ್ಲಿ ಟ್ರೋಲ್! ವಿಡಿಯೋ ನೋಡಿ

    ಚೇತೇಶ್ವರ ಪೂಜಾರ ರನೌಟ್-ಟ್ವಿಟ್ಟರ್‌ನಲ್ಲಿ ಕೊಹ್ಲಿ ಟ್ರೋಲ್! ವಿಡಿಯೋ ನೋಡಿ

    ಲಂಡನ್: ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ ರನೌಟ್ ಆದ ಬಳಿಕ ಅಭಿಮಾನಿಗಳು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಟ್ರೋಲ್ ಮಾಡಿದ್ದಾರೆ.

    ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಟೀಂ ಇಂಡಿಯಾ ಆರಂಭಿಕರ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು. ಆ್ಯಂಡರ್ ಸನ್ 9ನೇ ಓವರ್ ಬೌಲಿಂಗ್ ವೇಳೆ ಸ್ಟ್ರೈಕ್ ನಲ್ಲಿದ್ದ ಚೇತೇಶ್ವರ ಪೂಜಾರ ಬ್ಯಾಟ್ ನಡೆಸಿದ್ದರು. ಆದರೆ ಈ ವೇಳೆ ಬಾಲ್ ವಿಕೆಟ್ ಪಕ್ಕದಲ್ಲೇ ಇದ್ದರು ಕೊಹ್ಲಿ ರನ್ ಓಡಲು ಕರೆ ನೀಡಿ ಪೂಜಾರ ಅರ್ಧ ಕ್ರೀಸ್ ಗೆ ಬಂದ ಮೇಲೆ ಹಿಂದಕ್ಕೆ ಹೋಗಲು ಸೂಚಿಸಿದರು. ಈ ವೇಳೆಗಾಗಲೇ ಇಂಗ್ಲೆಂಡ್ ನ ಒಲಿವರ್ ಪೋಪ್ ವಿಕೆಟ್ ಬೆಲ್ಸ್ ಎಗರಿಸಿದ್ದ ಪರಿಣಾಮ ಪೂಜಾರ ನಿರಾಸೆಯಿಂದ ಮೈದಾನದಿಂದ ಹೊರ ನಡೆದಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕೊಹ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪೂಜಾರರನ್ನು ಮೊದಲ ಟೆಸ್ಟ್ ನಿಂದ ಕೈಬಿಟ್ಟ ಬಳಿಕ 2ನೇ ಟೆಸ್ಟ್ ಗೆ ಆಯ್ಕೆ ಮಾಡಲಾಗಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 25 ಬಾಲ್ ಎದುರಿಸಿದ್ದ ಪೂಜಾರ ಕೇವಲ 1 ರನ್ ಗಳಿಸಿ ಔಟಾದರು. ವಿಶೇಷವೆಂದರೆ ಈ ವರ್ಷದಲ್ಲಿ ಪೂಜಾರ ಮೂರನೇ ಬಾರಿ ರನೌಟ್ ಆಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್ ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಪೂಜಾರ 2 ಇನ್ನಿಂಗ್ಸ್‍ಗಳಲ್ಲೂ ರನೌಟ್ ಆಗಿದ್ದರು. ಇದುವರೆಗೂ ಪೂಜಾರ ತಮ್ಮ ವೃತ್ತಿ ಬದುಕಿನಲ್ಲಿ 7 ಬಾರಿ ರನೌಟ್ ಆಗಿದ್ದಾರೆ.

    ಇಂಗ್ಲೆಂಡ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಆ್ಯಂಡರ್ ಸನ್ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದು ಟೀಂ ಇಂಡಿಯಾ ಪತನಕ್ಕೆ ಕಾರಣರಾಗಿದ್ದರು. ಅಲ್ಲದೇ 35.2 ಓವರ್ ಗಳಲ್ಲಿ ಟೀಂ ಇಂಡಿಯಾ 107 ರನ್ ಗೆ ಸರ್ವಪತನ ಕಂಡು 2ನೇ ದಿನದಾಟ ಅಂತ್ಯವಾಗಿತ್ತು. 5 ಪಂದ್ಯಗಳ ಟೆಸ್ಟ್ ಟೂರ್ನಿಯಲ್ಲಿ ಇಂಗ್ಲೆಂಡ್ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದು, ಸದ್ಯ 2ನೇ ಟೆಸ್ಟ್ ನಲ್ಲೂ ಜಯದ ನಿರೀಕ್ಷೆಯಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

    https://twitter.com/iam_anubhav/status/1027902766071435264

  • ಲಾರ್ಡ್ಸ್ ಅಂಗಳದಲ್ಲಿ ಪ್ರೇಮ ನಿವೇದನೆ – ವಿಡಿಯೋ ವೈರಲ್

    ಲಾರ್ಡ್ಸ್ ಅಂಗಳದಲ್ಲಿ ಪ್ರೇಮ ನಿವೇದನೆ – ವಿಡಿಯೋ ವೈರಲ್

    ಲಂಡನ್: ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಶನಿವಾರ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆದ ಪಂದ್ಯದ ವೇಳೆ ಯುವಕನೊಬ್ಬ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಂದ್ಯದ ವೇಳೆ ಯುವಕ ತನ್ನ ಗೆಳತಿಗೆ ಪ್ರೇಮ ಮನವಿಯನ್ನು ಮಾಡಿದ್ದು, ಈ ವೇಳೆ ಅಚ್ಚರಿಗೊಂಡ ಯುವತಿ ಬಳಿಕ ಗೆಳೆಯನ ಪ್ರೇಮಕ್ಕೆ ಸಮ್ಮಿತಿ ಸೂಚಿಸಿ ನಗು ಬೀರಿದ್ದಾಳೆ. ಈ ಸನ್ನಿವೇಶ ಕ್ರೀಡಾಂಗಣದಲ್ಲಿ ಅಳವಡಿಸಿದ್ದ ಬೀಗ್ ಸ್ಕ್ರೀನ್ ನಲ್ಲಿಯೂ ಪ್ರಸಾರಗೊಂಡಿದ್ದು, ಕ್ರಿಕೆಟ್ ಅಭಿಮಾನಿಗಳು ಇಬ್ಬರ ಪ್ರೀತಿಗೆ ಸಂತಸ ವ್ಯಕ್ತಪಡಿಸಿದ್ದು ಕಂಡು ಬಂತು.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಾರ್ಡ್ಸ್  ಕ್ರೀಡಾಂಗಣದ ಆಡಳಿತ ಮಂಡಳಿ ಸಹ ಯುವ ಜೋಡಿಗೆ ಶುಭಕೋರಿ ಟ್ವೀಟ್ ಮಾಡಿದೆ. ಕಳೆದ ಬಾರಿಯೂ ಲಾರ್ಡ್ಸ್ ಅಂಗಳದಲ್ಲಿ ಇಂತಹದ್ದೇ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು, ಕ್ರೀಡಾಂಗಣದ ಎಲ್ಲೆಡೆ ಪ್ರೀತಿ ತುಂಬಿದೆ ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ.

    ಪಂದ್ಯದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಯುವಕ ತಾನು ಹಲವು ದಿನಗಳಿಂದ ನಾನು ಈ ಸನ್ನಿವೇಶಕ್ಕೆ ಪ್ಲಾನ್ ಮಾಡಿದ್ದೆ, ಅದರಂತೆ ತಾನು ಇದನ್ನು ಮಾಡಿದ್ದೇನೆ. ಗೆಳತಿಯೂ ತನ್ನ ಕೋರಿಕೆಯನ್ನು ಒಪ್ಪಿದ್ದು ಸಂತಸ ತಂದಿದೆ. ಸದ್ಯ ಇಬ್ಬರು ಸಹ ಪೋಷಕರ ಒಪ್ಪಿಗೆ ಪಡೆದಿದ್ದು ಶೀಘ್ರದಲ್ಲೇ ಮದುವೆ ಮಾಡಿಕೊಳ್ಳುವುದಾಗಿ ತಿಳಿಸಿದರು.

    ಸದ್ಯ ಈ ವಿಡಿಯೋ ಕಂಡ ಹಲವರು ಯುವ ಜೋಡಿಗೆ ಶುಭ ಕೋರಿದ್ದು, ತಮ್ಮ ಜೀವನದಲ್ಲಿ ಇಂತಹ ಸನ್ನಿವೇಶ ಬರುವುದಕ್ಕಾಗಿ ಕಾತುರದಿಂದಿರುವುದಾಗಿ ಮರುಟ್ವೀಟ್ ಮಾಡಿದ್ದಾರೆ.