Tag: ಲಾರ್ಡ್ಸ್

  • ಶತಕ ಸಿಡಿಸಿ ಸಚಿನ್, ಕೊಹ್ಲಿ, ಸ್ಮಿತ್ ಜೊತೆ ಸ್ಥಾನ ಪಡೆದ ರೂಟ್

    ಶತಕ ಸಿಡಿಸಿ ಸಚಿನ್, ಕೊಹ್ಲಿ, ಸ್ಮಿತ್ ಜೊತೆ ಸ್ಥಾನ ಪಡೆದ ರೂಟ್

    ಲಂಡನ್: ಲಾರ್ಡ್ಸ್ ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟ್ಸ್‌ಮ್ಯಾನ್ ಜೋ ರೂಟ್ ತಂಡದ ಗೆಲುವಿನ ಶತಕ ಗಳಿಸುವುದರೊಂದಿಗೆ ಟೆಸ್ಟ್‌ನಲ್ಲಿ 10 ಸಾವಿರ ರನ್‍ಗಳ ಗಡಿಯನ್ನು ದಾಟಿದ್ದಾರೆ.

    ಎರಡನೇ ಇನ್ನಿಂಗ್ಸ್‌ನಲ್ಲಿ ಔಟಾಗದೇ 115 ರನ್(170 ಎಸೆತ, 12 ಬೌಂಡರಿ) ಹೊಡೆದರು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ.

    ಟೆಸ್ಟ್ ಕ್ರಿಕೆಟ್‍ನಲ್ಲಿ ಮೈಲುಗಲ್ಲನ್ನ ತಲುಪಿದ ವಿಶ್ವದ 14ನೇ ಕ್ರಿಕೆಟಿಗರಾಗಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ತಂಡದ ಸ್ಟೀವ್ ಸ್ಮಿತ್, ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಈ ಹಿಂದೆ 10 ಸಾವಿರ ರನ್ ಹೊಡೆದಿದ್ದರು. ಈಗ ಈ ದಿಗ್ಗಜರ ಪಟ್ಟಿಗೆ ರೂಟ್ ಈಗ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಮೈದಾನದಲ್ಲೇ ಬ್ಯಾಟ್‍ನಲ್ಲಿ ಮ್ಯಾಜಿಕ್ ಮಾಡಿದ ರೂಟ್

    ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಹೊಡೆದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. 20 ಟೆಸ್ಟ್ ಆಡಿರುವ ಸಚಿನ್ 329 ಇನ್ನಿಂಗ್ಸ್‌ನಿಂದ 15,921 ರನ್ ಹೊಡೆದಿದ್ದಾರೆ.

    ಇಂಗ್ಲೆಂಡ್ ಪರ 10 ಸಾವಿರ ರನ್ ಹೊಡೆದ ಎರಡನೇ ಆಟಗಾರನಾಗಿ ಜೋ ರೂಟ್ ಹೊರ ಹೊಮ್ಮಿದ್ದಾರೆ. ಈ ಹಿಂದೆ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಅಲಸ್ಟೈರ್ ಕುಕ್ ಟೆಸ್ಟ್‌ನಲ್ಲಿ 161 ಪಂದ್ಯಗಳನ್ನು ಆಡಿ 12,472 ರನ್ ಹೊಡೆದಿದ್ದಾರೆ. ಇದನ್ನೂ ಓದಿ: 22ನೇ ಗ್ರ್ಯಾನ್ ಸ್ಲಾಂನ ಕಿರೀಟ ಮುಡಿಗೇರಿಸಿಕೊಂಡ ನಡಾಲ್ – ನಾರ್ವೆಯ ಕಾಸ್ಪರ್ ರೂಡ್‍ಗೆ ನಿರಾಸೆ

    31 ವರ್ಷದ ಜೋ ರೂಟ್ 118 ಪಂದ್ಯಗಳ 218 ಇನ್ನಿಂಗ್ಸ್‌ಗಳಿಂದ 10,015 ರನ್ ಹೊಡೆದಿದ್ದಾರೆ. ಇಲ್ಲಿಯವರೆಗೆ ಒಟ್ಟು 26 ಶತಕ, 53 ಅರ್ಧಶತಕ ಹೊಡೆದಿದ್ದಾರೆ.

  • ಸಿರಾಜ್ ವಿಕೆಟ್ ಪಡೆದ ಬಳಿಕ ವಿಶೇಷ ಸಂಭ್ರಮಾಚರಣೆಯ ಕಹಾನಿ ರಿವೀಲ್

    ಸಿರಾಜ್ ವಿಕೆಟ್ ಪಡೆದ ಬಳಿಕ ವಿಶೇಷ ಸಂಭ್ರಮಾಚರಣೆಯ ಕಹಾನಿ ರಿವೀಲ್

    ಲಂಡನ್: ಭಾರತ ತಂಡದ ಯುವ ವೇಗಿ ಮೊಹಮ್ಮದ್ ಸಿರಾಜ್ ವಿಕೆಟ್ ಪಡೆದ ಬಳಿಕ ತುಟಿಯ ಮೇಲೆ ಬೆರಳಿಟ್ಟು ಸಂಭ್ರಮಾಚರಣೆ ಮಾಡುವುದನ್ನು ಎಲ್ಲರೂ ನೋಡಿದ್ದೇವೆ. ಈ ಸಂಭ್ರಮಾಚರಣೆಯ ಹಿಂದಿನ ಅಸಲಿ ಕಹಾನಿಯನ್ನು ಸ್ವತಃ ಅವರೇ ಇದೀಗ ರಿವೀಲ್ ಮಾಡಿದ್ದಾರೆ.

    ತಮ್ಮ ನಿಖರ ದಾಳಿಯ ಮೂಲಕ ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್ ಗಳನ್ನು ಕಾಡಿದ ಸಿರಾಜ್, ಲಾರ್ಡ್ಸ್ ಟೆಸ್ಟ್ ನಲ್ಲಿ 4 ವಿಕೆಟ್ ಕಿತ್ತು ಮಿಂಚಿದರು. ಈ ಮೂಲಕ ಲಾರ್ಡ್ಸ್ ಮೈದಾನದಲ್ಲಿ 4 ವಿಕೆಟ್ ಕಿತ್ತ ಮೊದಲ ಭಾರತೀಯ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು. ಪ್ರತಿ ವಿಕೆಟ್ ಪಡೆದಾಗಲೂ ಕೂಡ ಸಿರಾಜ್ ತುಟಿಯ ಮೇಲೆ ಬೆರಳಿಟ್ಟು ಸಂಭ್ರಮಾಚರಣೆ ಮಾಡಿದ್ದನ್ನು ಗಮನಿಸಿ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರಶ್ನೆ ಕೇಳಲಾಯಿತು.

    ಸಂಭ್ರಮಾಚರಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿರಾಜ್, ನನ್ನ ಈ ರೀತಿಯ ಸಂಭ್ರಮಾಚರಣೆ ನನ್ನನ್ನು ಟೀಕೆ ಮಾಡುವವರಿಗಾಗಿ. ಟೀಕಾಕಾರರು ನನ್ನ ಬಗ್ಗೆ ಬೇಕಾದಷ್ಟು ಹೇಳಿಕೆಗಳನ್ನು ನೀಡುತ್ತಾರೆ. ನಾನು ಅವರಿಗೆ ಮಾತಿನ ಉತ್ತರ ಕೊಡಲು ಇಷ್ಟಪಡುವುದಿಲ್ಲ. ಹಾಗಾಗಿ ನನ್ನ ಬೌಲಿಂಗ್ ಮೂಲಕ ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತೇನೆ ಹಾಗಾಗಿ ಈ ರೀತಿ ಸಂಭ್ರಮಾಚರಣೆ ಮಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಡಿಆರ್‌ಎಸ್‌ ಎಡವಟ್ಟು – ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸಿರಾಜ್

    ಸಿರಾಜ್ ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತದ ಪರ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈಗಾಗಲೇ ಸಿರಾಜ್ 7 ಟೆಸ್ಟ್ ಪಂದ್ಯಗಳಿಂದ 23 ವಿಕೆಟ್ ಪಡೆದಿದ್ದಾರೆ. ಇದಲ್ಲದೆ ಒಂದು ಬಾರಿ ಐದು ವಿಕೆಟ್‍ಗೊಂಚಲು ಪಡೆದು ತನ್ನ ವಿಕೆಟ್ ಬೇಟೆ ಮುಂದುವರಿಸುತ್ತಿದ್ದಾರೆ.

  • ಇಂಗ್ಲೆಂಡ್ ವೇಗಕ್ಕೆ ಭಾರತ ಪ್ಯಾಕಪ್ – ಮೊದಲ ಇನ್ನಿಂಗ್ಸ್ ನಲ್ಲಿ 107ಕ್ಕೆ ಆಲೌಟ್

    ಇಂಗ್ಲೆಂಡ್ ವೇಗಕ್ಕೆ ಭಾರತ ಪ್ಯಾಕಪ್ – ಮೊದಲ ಇನ್ನಿಂಗ್ಸ್ ನಲ್ಲಿ 107ಕ್ಕೆ ಆಲೌಟ್

    ಲಂಡನ್: ಲಾರ್ಡ್ಸ್‌‌ ಅಂಗಳದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ ಭಾರತ 107 ರನ್‍ಗಳಿಗೆ ಆಲೌಟ್ ಆಗುವ ಮೂಲಕ ಎರಡನೇ ದಿನದಾಟ ಕೊನೆಗೊಂಡಿದೆ.

    ಮಳೆಯಿಂದಾಗಿ ಗುರುವಾರ ಮೊದಲ ದಿನದ ಆಟ ರದ್ದಾಗಿತ್ತು. ಎರಡನೇ ದಿನ ಟಾಸ್ ಗೆದ್ದ ಆಂಗ್ಲ ನಾಯಕ ಜೋ ರೂಟ್, ಭಾರತ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಆದರೆ ಆರಂಭದಲ್ಲೇ ವೇಗಿ ಆ್ಯಂಡರ್ಸನ್ ದಾಳಿಗೆ ಭಾರತ ತತ್ತರಿಸಿತ್ತು. 35.2 ಓವರ್ ಆಡಿದ ಟೀಂ ಇಂಡಿಯಾ 107 ರನ್‍ಗಳ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಯಿತು.

    ಆರಂಭಿಕರಾಗಿ ಕಣಕ್ಕೆ ಇಳಿದ ಮುರಳಿ ವಿಜಯ್ ಶೂನ್ಯಕ್ಕೆ ಔಟಾಗಿ ಮೊದಲ ಆಘಾತ ಎದುರಿಸಿದರೆ, ಈ ಪಂದ್ಯದಲ್ಲಿ ಬ್ಯಾಟಿಂಗ್ ಮುಂಬಡ್ತಿ ಪಡೆದು ಕಣಕ್ಕೆ ಇಳಿದ ಕೆಎಲ್ ರಾಹುಲ್ 8 ರನ್ ಗಳಿಸಿ ನಿರ್ಗಮಿಸಿ ನಿರಾಸೆ ಮೂಡಿಸಿದರು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯ ಊಟದ ವಿರಾಮದ ಬಳಿಕ ಆರಂಭವಾಯಿತು. ಬಳಿಕ ಚೇತೇಶ್ವರ ಪೂಜಾರ ಬಹುಬೇಗ ವಿಕೆಟ್ ಒಪ್ಪಿದರು. ಈ ವೇಳೆ ಭಾರತ 15 ರನ್ ಗೆ 3 ವಿಕೆಟ್ ಕಳೆದು ಕೊಂಡು ಸಂಕಷ್ಟ ಎದುರಿಸಿತ್ತು. ಮಳೆಯ ಕಣ್ಣಾಮುಚ್ಚಲೆಯೊಂದಿಗೆ ಮತ್ತೆ ಸ್ಥಗಿತಗೊಂಡು ಆರಂಭವಾದ ಪಂದ್ಯದಲ್ಲಿ ಕೊಹ್ಲಿ (23), ಹಾರ್ದಿಕ್ ಪಾಂಡ್ಯ (11), ದಿನೇಶ್ ಕಾರ್ತಿಕ್ (1), ರಹಾನೆ, ಕುಲ್ ದೀಪ್ ಯಾದವ್ ಸೇರಿದಂತೆ ಆಟಗಾರರು ಬಂದ ವೇಗದಲ್ಲೇ ಹಿಂದಿರುಗಿದರು.

    ಈ ವೇಳೆ ತಂಡಕ್ಕೆ ಆಸರೆಯಾದ ರವಿಚಂದ್ರನ್ ಅಶ್ವಿನ್ ಉಪಯುಕ್ತ 29 ರನ್ ಕಾಣಿಕೆ ನೀಡಿದರು. ಬಳಿಕ ಬಂದ ಮಹಮ್ಮದ್ ಶಮಿ 10 ರನ್ ಗಳಿಸಿ ಅಜೇಯರಾಗಿ ಉಳಿದರೆ ಇಶಾಂತ್ ಶರ್ಮಾ ಶೂನ್ಯಕ್ಕೆ ಔಟಾಗುವುದರೊಂದಿಗೆ ಟೀಂ ಇಂಡಿಯಾ 107 ರನ್ ಗೆ ಸರ್ವಪತನ ಕಂಡಿತು.

    ಆ್ಯಂಡರ್ ಸನ್ ದಾಖಲೆ:
    ಇಂಗ್ಲೆಂಡ್ ಪರ ಮಾರಕ ದಾಳಿ ನಡೆಸಿದ ಆ್ಯಂಡರ್ ಸನ್ 20 ರನ್ ನೀಡಿ 5 ವಿಕೆಟ್ ಪಡೆದರು. ಈ ಮೂಲಕ ಭಾರತದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿಕೊಂಡರು. ಈ ಪಂದ್ಯದಲ್ಲಿ ವೋಕ್ಸ್ 2, ಕುರ್ರಾನ್ ಹಾಗೂ ಬೋರ್ಡ್ ತಲಾ 1 ವಿಕೆಟ್ ಪಡೆದು ಮಿಂಚಿದರು. ಭಾರತದ ಪರ ಈ ಹಿಂದೆ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನದ ಇಮ್ರಾನ್ ಖಾನ್ (95) ಪಾತ್ರರಾಗಿದ್ದರು. ನಂತರದ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ನ ಮಾರ್ಷಲ್ 76 ವಿಕೆಟ್ ಗಳಿಸಿ ಸ್ಥಾನ ಪಡೆದಿದ್ದರು.

  • ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ದಾಖಲೆ ಬರೆದ ಧೋನಿ

    ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ದಾಖಲೆ ಬರೆದ ಧೋನಿ

    ಲಂಡನ್: ಕ್ರಿಕೆಟ್ ಕಾಶಿ ಎಂದೇ ಹೆಸರು ಪಡೆದಿರುವ ಲಾರ್ಡ್ಸ್ ಅಂಗಳದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಭಾರತ ಪರ 300 ಕ್ಯಾಚ್ ಪಡೆದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದ ವೇಳೆ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಜೋಸ್ ಬಟ್ಲರ್ ಕ್ಯಾಚ್ ಪಡೆಯುವ ಮೂಲ ಧೋನಿ ಸಾಧನೆ ಮಾಡಿದರು. ವಿಶ್ವ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ 4 ನೇ ಆಟಗಾರ ಎನಿಸಿಕೊಂಡರು.

    ಆಸ್ಟ್ರೇಲಿಯಾದ ಆ್ಯಡಂ ಗಿಲ್‍ಕ್ರಿಸ್ಟ್ (417), ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ (402), ಶ್ರೀಲಂಕಾದ ಕುಮಾರ ಸಂಗಕ್ಕರ (383), ನ್ಯೂಜಿಲೆಂಡ್ ನ ಬ್ರೆಂಡನ್ ಮೆಕಲಮ್ (262) ಕ್ಯಾಚ್ ಪಡೆದಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಟಿ20 ಟೂರ್ನಿಯ ಪಂದ್ಯದ ವೇಳೆ 50 ಕ್ಯಾಚ್ ಪೂರ್ಣಗೊಳಿಸಿದ್ದರು. ಮೂಲಕ ಟಿ20 ನಾದರಿಯಲ್ಲಿ 50 ಕ್ಯಾಚ್ ಪಡೆದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡರು. ಅಲ್ಲದೇ ಟಿ20 ಮಾದರಿಯ ಇನ್ನಿಂಗ್ಸ್‍ವೊಂದರಲ್ಲಿ 5 ಕ್ಯಾಚ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಯನ್ನು ಧೋನಿ ಪಡೆದಿದ್ದಾರೆ.

    ಧೋನಿ ಇದುವರೆಗೂ ಆಡಿರುವ 320 ಏಕದಿನ ಪಂದ್ಯಗಳಲ್ಲಿ 107 ಸ್ಟಪ್ ಮಾಡಿದ್ದು, ಇದರಲ್ಲೂ ದಾಖಲೆ ಬರೆದಿದ್ದಾರೆ. ಅಲ್ಲದೇ ಏಕದಿನ ಮಾದರಿಯಲ್ಲಿ ಇದುವರೆಗೂ 407 ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡಿ ಭಾರತದ ಮೊದಲ, ವಿಶ್ವದ 4ನೇ ಕೀಪರ್ ಎಂಬ ದಾಖಲೆ ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್ ಗಳಿಂದ ಜಯಗಳಿಸಿತ್ತು.