Tag: ಲಾರಿ ಮುಷ್ಕರ

  • ಅನ್ನ ಭಾಗ್ಯ | 260 ಕೋಟಿ ಬಾಡಿಗೆ ಬಾಕಿ – ಇಂದಿನಿಂದ ಸಾಗಾಣಿಕೆ ಬಂದ್‌

    ಅನ್ನ ಭಾಗ್ಯ | 260 ಕೋಟಿ ಬಾಡಿಗೆ ಬಾಕಿ – ಇಂದಿನಿಂದ ಸಾಗಾಣಿಕೆ ಬಂದ್‌

    – ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ  ಲಾರಿ ಮಾಲೀಕರು

    ಬೆಂಗಳೂರು: ಸರ್ಕಾರದ ಅನ್ನಭಾಗ್ಯ ಗ್ಯಾರಂಟಿ ಯೋಜನೆಗೆ ಮತ್ತೊಂದು ವಿಘ್ನ ಎದುರಾಗಿದೆ. ಬಾಡಿಗೆ ನೀಡದ ಸರ್ಕಾರದ ವಿರುದ್ದ ಲಾರಿ ಚಾಲಕರು ಮತ್ತು ಮಾಲೀಕರು ಆಕ್ರೋಶ ಹೊರಹಾಕಿ ಆಹಾರ ಧಾನ್ಯ ಸಾಗಾಣಿಕೆಯನ್ನು ಇಂದಿನಿಂದ ಬಂದ್ ಮಾಡಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.

    ಫೆಬ್ರವರಿಯಿಂದ ಮೇ ತಿಂಗಳವರೆಗೆ ಸರ್ಕಾರ ಬಾಕಿ ಮೊತ್ತ ಪಾವತಿಸಿಲ್ಲ. ಬಾಕಿ ಹಣ ಪಾವತಿಯಾಗುವವರೆಗೆ ಅನ್ನಭಾಗ್ಯದ ಅಕ್ಕಿ ಸರಬರಾಜು ಮಾಡುವುದಿಲ್ಲ. ಹಣ ಪಾವತಿಯಾಗದ ಕಾರಣ ಮೂರರಿಂದ ನಾಲ್ಕು ಸಾವಿರ ಲಾರಿ ಮಾಲೀಕರು ಕಂ ಚಾಲಕರು ಸಂಕಷ್ಟದಲ್ಲಿದ್ದಾರೆ. ಮುಷ್ಕರದಿಂದ ಯಶವಂತ‌ಪುರ ಎಂಪಿಎಂಸಿ, ಚಾಮರಾಜಪೇಟೆ ಲಾರಿ ಸ್ಟ್ಯಾಂಡ್‌ ಬಳಿ‌ ಲಾರಿಗಳು ನಿಂತಲ್ಲೇ ನಿಂತಿವೆ. ಇದನ್ನೂ ಓದಿ: ಮಾಟ ಮಾಡ್ತಾರೆ ಅಂತ ಒಂದೇ ಕುಟುಂಬದ ಐವರನ್ನು ಜೀವಂತವಾಗಿ ಸುಟ್ಟು ಹತ್ಯೆ

     

    ಸರ್ಕಾರ ಅನ್ನಭಾಗ್ಯ ಅಕ್ಕಿ ಸಾಗಣೆಯ ಸುಮಾರು 260 ಕೋಟಿ ರೂ. ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪಡಿತರ ಆಹಾರ ಧಾನ್ಯಗಳ ಸಗಟು ಹಾಗೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಸಂಘ ಇಂದಿನಿಂದ ಬಂದ್‌ಗೆ ಕರೆ ನೀಡಿವೆ ಎಂದು ಲಾರಿ‌ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ. ಇದನ್ನೂ ಓದಿ: ನೆಲಮಂಗಲ ಪೊಲೀಸ್ ಠಾಣೆಗೆ ಹಾಜರಾದ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ

    ಬಾಡಿಗೆ ನೀಡದ ಕಾರಣ ಇಪಿಎಫ್, ಇಎಸ್ಐ ಕಟ್ಟಿಲ್ಲ. ಸರ್ಕಾರದ ಜೊತೆಗೆ ಅಧಿಕಾರಿಗಳೇ ಓಡಿಸಿಕೊಳ್ಳಲಿ. ಸಾಗಾಣಿಕೆ ಟೆಂಡರ್‌ಗಳಲ್ಲಿ ಭಾಗವಹಿಸುವಾಗ ನೀಡಿದ್ದ ಇಎಂಡಿ ಮೊತ್ತವನ್ನು ಬ್ಯಾಂಕ್ ಗ್ಯಾರಂಟಿ ನೀಡಿದ ನಂತರವೂ ಗುತ್ತಿಗೆದಾರರಿಗೆ ಮರುಪಾವತಿ ಮಾಡಿಲ್ಲ. ಆಯ್ಕೆಯಾಗದ ಬಿಡ್‌ದಾರರಿಗೂ ಇಎಂಡಿ ಹಣ ಹಿಂತಿರುಗಿಸಿಲ್ಲ. ಒಂದು ದಿನ ತೆರಿಗೆ ಕಟ್ಟದೇ ಇದ್ದರೆ ದಂಡ ವಿಧಿಸುತ್ತಾರೆ ಎಂದು ಆಕ್ರೋಶ ಹೊರ ಹಾಕಿದರು.

  • 3 ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರ ಅಂತ್ಯ

    3 ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರ ಅಂತ್ಯ

    ಬೆಂಗಳೂರು: ಸರ್ಕಾರ ಹಾಗೂ ಲಾರಿ ಮಾಲೀಕರ ನಡುವಿನ ಸಂಧಾನ ಯಶಸ್ವಿಯಾಗಿದ್ದು, ಲಾರಿ ಮಾಲೀಕರು ಮುಷ್ಕರವನ್ನು ವಾಪಾಸ್ ಪಡೆದಿದ್ದಾರೆ.

    ಮೂರು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರದ (Lorry Strike) ಬಗ್ಗೆ ಮಾಧ್ಯಮಗಳೊಂದಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (Ramalinga Reddy) ಮಾತನಾಡಿದರು. ಲಾರಿ ಮಾಲೀಕರು ಜೊತೆ ಸಭೆ ನಡೆಸಿದ್ದೇವೆ. ಆರು ಬೇಡಿಕೆಗಳನ್ನು ಇಟ್ಟಿದ್ದಾರೆ. ಮೊದಲು ಆಯುಕ್ತರ ಜೊತೆ ಸಭೆ ನಡೆಸಿದ್ದರು. ಆನ್‌ಲೈನ್‌ನಲ್ಲಿ ದಂಡ ಕಟ್ಟುವ ವ್ಯವಸ್ಥೆಯನ್ನು ಮಾಡಲಿದ್ದೇವೆ ಎಂದರು. ಇದನ್ನೂ ಓದಿ: Waqf Act| ಹಿಂದೂಗಳು ಸಲ್ಲಿಸಿದಾಗ ಹೈಕೋರ್ಟ್‌ಗೆ ಹೋಗಿ ಎಂದಿತ್ತು – ಸುಪ್ರೀಂ ವಿಚಾರಣೆಗೆ ಮಾನದಂಡ ಏನು?- ವಕೀಲ ವಿಷ್ಣು ಶಂಕರ್‌ ಜೈನ್‌

    ಒಟಿಎಸ್ ಮಾದರಿಯಲ್ಲಿ ದಂಡ ಪಾವತಿಗೆ ಅವಕಾಶ ಕಲ್ಪಿಸುವಂತೆ ಕೇಳಿದ್ದಾರೆ. ಅದನ್ನು ಸಿಎಂ ಗಮನಕ್ಕೆ ತರಲಿದ್ದೇವೆ ಹಾಗೂ ಟೋಲ್ ವಿಚಾರವನ್ನೂ ಸಿಎಂ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನಿನ್ನ ಪ್ರೀತಿ, ತ್ಯಾಗ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ: ಪತ್ನಿಗೆ ನಿಖಿಲ್ ಲವ್ಲಿ ವಿಶ್

    ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಪ್ರತಿಕ್ರಿಯಿಸಿ, ನಾಲ್ಕು ಪ್ರಮುಖ ಬೇಡಿಕೆ ಇತ್ತು. ಬಾರ್ಡರ್ ಚೆಕ್‌ಪೋಸ್ಟ್ ಸಮಸ್ಯೆಯನ್ನು 3 ತಿಂಗಳಲ್ಲಿ ಬಗೆಹರಿಸುವ ಭರವಸೆ ನೀಡಿದ್ದಾರೆ. ಡಿಸೇಲ್ ದರ 2023ರಲ್ಲಿ ಯದ್ವಾತದ್ವಾ ಏರಿಕೆ ಮಾಡಿದ್ದರು. ಇದನ್ನು ಇನ್ನೊಂದು ಬಾರಿ ಅಧ್ಯಯನ ಮಾಡುವುದಾಗಿ ಹೇಳಿದ್ದಾರೆ ಎಂದರು. ಇದನ್ನೂ ಓದಿ: ವಕ್ಫ್ ಮಂಡಳಿಗೆ ಸದಸ್ಯರ ನೇಮಕ ಮಾಡುವಂತಿಲ್ಲ, ಆಸ್ತಿಗಳ ವಿಚಾರದಲ್ಲೂ ಯಥಾಸ್ಥಿತಿ ಕಾಪಾಡಿ: ಸುಪ್ರೀಂ

    ನೋ ಎಂಟ್ರಿ 5 ಗಂಟೆ ಮೇಲೆ ಬರಲು ಆಗದೇ ಇರುವುದರ ಬಗ್ಗೆಯೂ ಗಮನ ಹರಿಸುವುದಾಗಿ ಹೇಳಿದ್ದಾರೆ. ಪೊಲೀಸರ ಕಿರುಕುಳದ ಬಗ್ಗೆಯೂ ತಿಳಿಸಿದ್ದೇವೆ ಎಂದು ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಮೂರು ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರದಿಂದ ದಿನಕ್ಕೆ 4,500 ಕೋಟಿ ರೂ.ಗಿಂತಲೂ ಅಧಿಕ ನಷ್ಟವಾಗಿದೆ ಎಂದು ಹೇಳಿದರು.

  • ಲಾರಿ ಮಾಲೀಕರ ಜೊತೆ ಸಿಎಂ ಸಂಧಾನ ಸಭೆ ವಿಫಲ – ಇಂದಿನಿಂದ ಪ್ರತಿಭಟನೆ ತೀವ್ರಗೊಳಿಸಲು ಸಜ್ಜಾದ ಲಾರಿ ಅಸೋಸಿಯೇಷನ್!

    ಲಾರಿ ಮಾಲೀಕರ ಜೊತೆ ಸಿಎಂ ಸಂಧಾನ ಸಭೆ ವಿಫಲ – ಇಂದಿನಿಂದ ಪ್ರತಿಭಟನೆ ತೀವ್ರಗೊಳಿಸಲು ಸಜ್ಜಾದ ಲಾರಿ ಅಸೋಸಿಯೇಷನ್!

    ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆರಂಭಗೊಂಡಿರುವ ಲಾರಿ ಮುಷ್ಕರ (Lorry Strike) 2ನೇ ದಿನಕ್ಕೆ ಕಾಲಿಟ್ಟಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಜೊತೆ ಲಾರಿ ಮಾಲೀಕರ ಮಾತುಕತೆ ವಿಫಲವಾದ ಹಿನ್ನೆಲೆ ಇಂದಿನಿಂದ ಪ್ರತಿಭಟನೆ ತೀವ್ರಗೊಳಿಸಲು ಲಾರಿ ಅಸೋಸಿಯೇಷನ್ (Lorry Assosiation) ಸಜ್ಜಾಗಿದೆ.

    ಡೀಸೆಲ್ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಲಾರಿ ಮಾಲೀಕರ ಸಂಘ ಸರ್ಕಾರದ ವಿರುದ್ಧ ಸಮರಸಾರುತ್ತಿದೆ. ಇಂದೂ ಕೂಡ ಮುಂದುವರಿಯಲಿರುವ ಲಾರಿ ಮುಷ್ಕರ ಅನಿರ್ದಿಷ್ಟಾವಧಿ ಲಾರಿ ಪ್ರತಿಭಟನೆಗೆ ಸಂಘಟಕರಿಗೆ ಕರೆ ನೀಡಿದೆ.ಇದನ್ನೂ ಓದಿ: ಹತ್ತೂರಿನ ಒಡೆಯ ಪುತ್ತೂರು ಮಹಾಲಿಂಗೇಶ್ವರ – ಇಲ್ಲಿ ಆನೆಗಳಿಗೆ ಪ್ರವೇಶವಿಲ್ಲ

    ಮಂಗಳವಾರ ಲಾರಿ ಮಾಲೀಕರ ಫೆಡರೇಷನ್ ಮತ್ತು ಏಜೆಂಟರ ಸಂಘಗಳ ಒಕ್ಕೂಟ ಕರೆ ಕೊಟ್ಟಿದ್ದ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೆಂಗಳೂರು ನಗರದಲ್ಲಿ ಖಾಸಗಿ ಲಾರಿ, ಗೂಡ್ಸ್ ವಾಹನಗಳ ಸಂಖ್ಯೆ ಕಡಿಮೆಯಾಗಿತ್ತು. ಜಲ್ಲಿ, ಮರಳು ವಾಹನಗಳ ಸಂಚಾರ ಇಳಿಮುಖವಾಗಿತ್ತು. ಈ ಹಿನ್ನೆಲೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ಸೇರಿ ಹಲವರನ್ನು ಕರೆದು ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ ಸಾರಿಗೆ ಸಚಿವರ ಸಂಧಾನ ವಿಫಲಗೊಂಡಿತ್ತು.

    ಬಳಿಕ ಸಿಎಂ ಸಿದ್ದರಾಮಯ್ಯ ಜೊತೆ ಮಂಗಳವಾರ ಸಂಜೆ ಮಾತುಕತೆ ನಡೆಸಲಾಗಿತ್ತು. ಈ ವೇಳೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಎರಡೂ ಬೇಡಿಕೆಗಳು ಆರ್‌ಟಿಓಗೆ ಸಂಬಂಧಪಟ್ಟಿವೆ. ಫಿಟ್ನೆಸ್ ಸರ್ಟಿಫಿಕೇಟ್ ವಿಚಾರ ತೊಂದರೆ ಆಗದಂತೆ ಕ್ರಮವಹಿಸುತ್ತೇವೆ. ಟೋಲ್ ದರ, ಡಿಸೇಲ್ ವಿಚಾರ ಸಿಎಂಗೆ ಸಂಬಂಧಪಟ್ಟಿದೆ. ಇದೇ ವೇಳೆ ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರ ಮಾಡಬೇಡಿ ಎಂದು ಸಿಎಂ ಒತ್ತಾಯ ಪೂರ್ವಕವಾಗಿ ಹೇಳಿದರು.

    ಇನ್ನೂ ಸಿಎಂ ಮಾತಿಗೂ ಮಣೆ ಹಾಕದ ಲಾರಿ ಅಸೋಸಿಯೇಷನ್, ಮುಷ್ಕರ ಮುಂದುವರೆಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಲಾರಿ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ, ಸಿಎಂ ಸಿದ್ದರಾಮಯ್ಯ ಡಿಸೇಲ್ ದರ ಏರಿಕೆ ಕಡಿಮೆ ಮಾಡುವ ಬಗ್ಗೆ ಹಾಗೂ ಟೋಲ್ ಬಗ್ಗೆ ಮಾತನಾಡತ್ತಿಲ್ಲ. ಆಟೋ, ರಿಕ್ಷಾದಂತೆ ಲಾರಿಗಳಿಗೂ ಫಿಕ್ಸ್ ಬಾಡಿಗೆ ದರ ಮಾಡಿ, ಸಿಎಂ ಮಾತುಕತೆಗೆ ಸಮ್ಮತವಿಲ್ಲ. ಹೀಗಾಗಿ ಪ್ರತಿಭಟನೆ ಮುಂದುವರೆಯಲಿದೆ ಎಂದರು.

    ಒಟ್ಟಿನಲ್ಲಿ ಸರ್ಕಾರ ಹಾಗೂ ಲಾರಿ ಮಾಲೀಕರ ನಡುವಿನ ಮಾತುಕತೆ ವಿಫಲವಾಗಿದ್ದು, ಇಂದಿನಿಂದ ಮುಷ್ಕರ ತೀವ್ರಗೊಳ್ಳುವ ಸಾಧ್ಯತೆಯಿದೆ.ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ 5.6 ತೀವ್ರತೆಯ ಭೂಕಂಪ – ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ

  • ಅನಿರ್ದಿಷ್ಟಾವಧಿ ಲಾರಿ ಮುಷ್ಕರ | ರಸ್ತೆಗಿಳಿಯದ ಲಾರಿಗಳು – ಯಾವೆಲ್ಲಾ ಸೇವೆಯಲ್ಲಿ ವ್ಯತ್ಯಯ?

    ಅನಿರ್ದಿಷ್ಟಾವಧಿ ಲಾರಿ ಮುಷ್ಕರ | ರಸ್ತೆಗಿಳಿಯದ ಲಾರಿಗಳು – ಯಾವೆಲ್ಲಾ ಸೇವೆಯಲ್ಲಿ ವ್ಯತ್ಯಯ?

    ಬೆಂಗಳೂರು: ಬೆಲೆ ಏರಿಕೆಯನ್ನು ಖಂಡಿಸಿ ಲಾರಿ ಮಾಲೀಕರು ಮುಷ್ಕರಕ್ಕೆ ಕರೆಕೊಟ್ಟಿದ್ದು, ಸೋಮವಾರ ಮಧ್ಯರಾತ್ರಿಯಿಂದಲೇ ಮುಷ್ಕರ ಆರಂಭವಾಗಿದೆ. ಅದರಂತೆ ಲಾರಿಗಳು ರೋಡಿಗೆ ಇಳಿಯುತ್ತಿಲ್ಲ. ಇಂದರಿಂದಾಗಿ ಇಂದು (ಏ.15) ಬೆಳಗ್ಗೆಯಿಂದ ಆಗತ್ಯ ವಸ್ತುಗಳ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

    ಡೀಸೆಲ್ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ, ಆರ್‌ಟಿಒ ಅಧಿಕಾರಿಗಳ ಕಿರುಕುಳ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಲಾರಿ ಮಾಲೀಕರ ಸಂಘ (State Lorry Owner’s Association) ಕರೆ ನೀಡಿದೆ. ಸುಮಾರು 6 ಲಕ್ಷಕ್ಕೂ ಹೆಚ್ಚು ಲಾರಿಗಳು ಇಂದು ಸೇವೆ ಬಂದ್ ಮಾಡಲಿವೆ. ಇದರಿಂದ ಹಲವು ಸೇವೆಗಳಿಗೆ ಬಿಸಿ ತಟ್ಟಲಿದೆ. 6 ತಿಂಗಳಲ್ಲಿ ಸರ್ಕಾರ 2 ಬಾರಿ ಡೀಸೆಲ್ ದರ ಹೆಚ್ಚಿಸಿದೆ. ಡೀಸೆಲ್ ದರ ಇಳಿಸಬೇಕು ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಲಾರಿ ಮಾಲೀಕರು ಏಪ್ರಿಲ್ 14ರ ಗಡುವು ಕೊಟ್ಟಿದ್ದರು. ಆದರೆ ಸರ್ಕಾರ ಇದಕ್ಕೆ ಸ್ಪಂದಿಸಿರಲಿಲ್ಲ.

    ಮುಷ್ಕರದ (Lorry Strike) ಪರಿಣಾಮವಾಗಿ ಇಂದಿನಿಂದ ಅನೇಕ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ. ಜಲ್ಲಿ ಕಲ್ಲು, ಮರಳು ಲಾರಿಗಳು, ಗೂಡ್ಸ್ ವಾಹನಗಳು, ಅಕ್ಕಿ ಸಾಗಿಸುವ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದೆ. ಜೊತೆಗೆ ಪೆಟ್ರೋಲ್, ಡೀಸೆಲ್ ಸಾಗಿಸುವ ಲಾರಿಗಳೂ ಬಂದ್ ಸಂಚಾರ ನಿಲ್ಲಿಸಲಿವೆ.

    ಲಾರಿ ಮಾಲೀಕರ ಬೇಡಿಕೆ ಏನು?
    *ಡೀಸೆಲ್ ದರ ಇಳಿಕೆ ಮಾಡಬೇಕು.
    *ಟೋಲ್ ಸಂಗ್ರಹ ಕೈ ಬಿಡಬೇಕು.
    *ಆರ್‌ಟಿಓ ಬಾರ್ಡರ್ ಚೆಕ್ ಪೋಸ್ಟ್ ತೆಗೆಯಬೇಕು.
    *ಎಫ್‌ಸಿ ಶುಲ್ಕ ಕಡಿಮೆ ಮಾಡಬೇಕು.
    *ಸರಕು ಸಾಗಣೆ ವಾಹನ ನಿರ್ಬಂಧ ಹಿಂಪಡೆಯಬೇಕು.

    ಲಾರಿ ಮುಷ್ಕರದಿಂದ ಏನೇನು ಎಫೆಕ್ಟ್?
    *ತರಕಾರಿ, ಹಣ್ಣುಗಳ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ.
    *ಏರ್‌ಪೋರ್ಟ್ ಟ್ಯಾಕ್ಸಿ ಸಿಗೋದು ಡೌಟ್.
    *ಟೂರಿಸ್ಟ್ ಟ್ಯಾಕ್ಸಿ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ.
    *ಜಲ್ಲಿ ಕಲ್ಲು, ಮರಳು ಲಾರಿ ಓಡಾಡಲ್ಲ.
    *ಡಿಪೋಗಳಿಗೆ ಪಡಿತರ ಆಹಾರ ಧಾನ್ಯಗಳ ಪೂರೈಕೆಯಿಲ್ಲ.
    *ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸಾಧ್ಯತೆ ಅನುಮಾನ.
    *ಕೆಲವು ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ವ್ಯತ್ಯಯ ಸಾಧ್ಯತೆ.

    ಯಾವ ಸೇವೆ ಲಭ್ಯ? 
    *ಹಾಲು
    *ಔಷಧ
    *ಗೃಹ ಬಳಕೆ ಡುಗೆ ಅನಿಲ
    *ಆಂಬ್ಯುಲೆನ್ಸ್‌
    *ಅಗ್ನಿಶಾಮಕ ಸೇವೆ ವಾಹನ

  • ಇಂದು ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಲಾರಿ ಮುಷ್ಕರ – ರಸ್ತೆಗಿಳಿಯಲ್ಲ 6 ಲಕ್ಷ ಲಾರಿಗಳು

    ಇಂದು ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಲಾರಿ ಮುಷ್ಕರ – ರಸ್ತೆಗಿಳಿಯಲ್ಲ 6 ಲಕ್ಷ ಲಾರಿಗಳು

    – ಪೆಟ್ರೋಲ್, ಡೀಸೆಲ್ ಪೂರೈಕೆಯೂ ಸ್ಥಗಿತ

    ಬೆಂಗಳೂರು: ಡಿಸೆಲ್ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ, ಆರ್‌ಟಿಒ ಅಧಿಕಾರಿಗಳ ಕಿರುಕುಳ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ (State Lorry Owner’s Association) ಕರೆ ನೀಡಿದೆ.

    ಸುಮಾರು 6 ಲಕ್ಷಕ್ಕೂ ಹೆಚ್ಚು ಲಾರಿಗಳು ಇಂದು ಮಧ್ಯರಾತ್ರಿಯಿಂದಲೇ ಸೇವೆ ಬಂದ್ ಮಾಡಲಿದ್ದು, ಹಲವು ಸೇವೆಗಳಿಗೆ ಬಿಸಿ ತಟ್ಟಲಿದೆ. 6 ತಿಂಗಳಲ್ಲಿ ಸರ್ಕಾರ 2 ಬಾರಿ ಡೀಸೆಲ್ ದರ ಹೆಚ್ಚಿಸಿದೆ. ಡೀಸೆಲ್ ದರ ಇಳಿಸಬೇಕು ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಲಾರಿ ಮಾಲೀಕರು ಏಪ್ರಿಲ್ 14ರ ಗಡುವು ಕೊಟ್ಟಿದ್ದರು. ಆದರೆ ಸರ್ಕಾರ ಇದಕ್ಕೆ ಸ್ಪಂದಿಸಿಲ್ಲ. ಹೀಗಾಗಿ ಇಂದು ಮಧ್ಯರಾತ್ರಿಯಿಂದಲೆ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಮುಂದಾಗಿದೆ.‌ ಇದನ್ನೂ ಓದಿ: ಜಾತಿ ಸಮೀಕ್ಷೆ | 1 ಕೋಟಿ ಜನರನ್ನು ಸಮುದ್ರಕ್ಕೆ ಬಿಡಬೇಕಾ? – ಅಶೋಕ್ ಕಿಡಿ

    ಮುಷ್ಕರದ (Lorry Strike) ಪರಿಣಾಮವಾಗಿ ಮಂಗಳವಾರದಿಂದ ಅನೇಕ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ. ಲಾರಿ ಮುಷ್ಕರದ ಕಾರಣ 6 ಲಕ್ಷ ಲಾರಿಗಳ ಸಂಚಾರ ಬಂದ್ ಆಗಲಿದೆ. ಜಲ್ಲಿ ಕಲ್ಲು, ಮರಳು ಲಾರಿಗಳು, ಗೂಡ್ಸ್ ವಾಹನಗಳು, ಅಕ್ಕಿ ಸಾಗಿಸುವ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದೆ. ಜೊತೆಗೆ ಪೆಟ್ರೋಲ್, ಡೀಸೆಲ್ ಸಾಗಿಸುವ ಲಾರಿಗಳೂ ಬಂದ್ ಆಚರಿಸಲಿವೆ. ಇದನ್ನೂ ಓದಿ: ಪೀಣ್ಯಾದ ಚಿತಾಗಾರದಲ್ಲಿ ನೆರವೇರಿದ ಬ್ಯಾಂಕ್ ಜನಾರ್ಧನ್ ಅಂತ್ಯಕ್ರಿಯೆ

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಮತ್ತು ಏಜೆಂಟ್‌ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್ ಷಣ್ಮುಗಪ್ಪ, 5 ಪ್ರಮುಖ ಬೇಡಿಕೆಯನ್ನ ಮುಂದಿಟ್ಟು ಮುಷ್ಕರಕ್ಕೆ ಕರೆ ನೀಡುತ್ತಿದ್ದೇವೆ. ಸರ್ಕಾರದಿಂದ ಇದುವರೆಗೂ ಯಾವುದೇ ಮಾತುಕತೆಯಾಗಿಲ್ಲ. ಕರ್ನಾಟಕಕ್ಕೆ ಮಾತ್ರ ಯಾಕೆ ಆರ್‌ಟಿಒ ಚೆಕ್ ಪೋಸ್ಟ್ ಬೇಕು? ಕಳೆದ ಆರು ವರ್ಷದಿಂದ ನಾವು ಪ್ರತಿಭಟನೆ ಮಾಡಿಲ್ಲ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾವು ಪ್ರತಿಭಟಿಸಿಲ್ಲ. ಎಲ್‌ಪಿಜಿ ಟ್ಯಾಂಕರ್‌ಗಳು ರಾತ್ರಿಯಿಂದ ಭರ್ತಿಯಾಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ಇಂದಿನಿಂದ ವಾರಪೂರ್ತಿ ಹಲವು ಕಡೆ ಬೀಳಲಿದೆ ಮಳೆ

    ಏ.27 ಮತ್ತು 28 ರಂದು ಮಾತುಕತೆ ನಡೆಸಿ ದೇಶಾದ್ಯಂತ ಲಾರಿ ಮುಷ್ಕರ ಮಾಡುತ್ತೇವೆ. ಇಂದು ರಾತ್ರಿಯಿಂದಲೇ ಆರು ಲಕ್ಷ ಲಾರಿಗಳು ರಾಜ್ಯಾದ್ಯಂತ ನಿಲ್ಲಲಿವೆ. ಇಂದು ಮಧ್ಯರಾತ್ರಿಯಿಂದಲೇ ಲಾರಿ ಮುಷ್ಕರ ಆರಂಭವಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ದೊಡ್ಡಗೌಡ್ರು, ಕುಮಾರಣ್ಣನ ಮನೆಗೂ ಬಂದಿಲ್ಲ,ಸಿದ್ದರಾಮಯ್ಯನವರಿಗಾಗಿಯೇ ಮಾಡಿದ ವರದಿ: ನಿಖಿಲ್‌ ಕಿಡಿ

    ಲಾರಿ ಮಾಲೀಕರ ಬೇಡಿಕೆ ಏನು?
    *ಡೀಸೆಲ್ ದರ ಇಳಿಕೆ ಮಾಡಬೇಕು.
    *ಟೋಲ್ ಸಂಗ್ರಹ ಕೈ ಬಿಡಬೇಕು.
    *ಆರ್‌ಟಿಓ ಬಾರ್ಡರ್ ಚೆಕ್ ಪೋಸ್ಟ್ ತೆಗೆಯಬೇಕು.
    *ಎಫ್‌ಸಿ ಶುಲ್ಕ ಕಡಿಮೆ ಮಾಡಬೇಕು.
    *ಸರಕು ಸಾಗಣೆ ವಾಹನ ನಿರ್ಬಂಧ ಹಿಂಪಡೆಯಬೇಕು.

    ಲಾರಿ ಮುಷ್ಕರದಿಂದ ಏನೇನು ಎಫೆಕ್ಟ್?
    *ತರಕಾರಿ, ಹಣ್ಣುಗಳ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ.
    *ಏರ್‌ಪೋರ್ಟ್ ಟ್ಯಾಕ್ಸಿ ಸಿಗೋದು ಡೌಟ್.
    *ಟೂರಿಸ್ಟ್ ಟ್ಯಾಕ್ಸಿ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ.
    *ಜಲ್ಲಿ ಕಲ್ಲು, ಮರಳು ಲಾರಿ ಓಡಾಡಲ್ಲ.
    *ಡಿಪೋಗಳಿಗೆ ಪಡಿತರ ಆಹಾರ ಧಾನ್ಯಗಳ ಪೂರೈಕೆಯಿಲ್ಲ.
    *ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸಾಧ್ಯತೆ ಅನುಮಾನ.
    *ಕೆಲವು ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ವ್ಯತ್ಯಯ ಸಾಧ್ಯತೆ.

    ಯಾವ ಸಂಘಟನೆಗಳ ಬೆಂಬಲ?
    – ಆಲ್ ಇಂಡಿಯಾ ಮೋಟರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ದೆಹಲಿ
    – ಸೌಥ್ ಇಂಡಿಯಾ ಮೋಟರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್
    – ಕರ್ನಾಟಕ ಗೂಡ್ಸ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್
    – ಏರ್‌ಪೋರ್ಟ್ ಟ್ಯಾಕ್ಸಿ ಅಸೋಸಿಯೇಷನ್
    – ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಅಸೋಸಿಯೇಷನ್
    – ಜಲ್ಲಿ ಕಲ್ಲು, ಮರಳು ಲಾರಿ ಅಸೋಸಿಯೇಷನ್
    – ರಾಜ್ಯ ಪಡಿತರ ಆಹಾರ ಧಾನ್ಯಗಳ ಸಾಗಾಣಿಕೆದಾರರ ಸಂಘ
    – ಸೌಥ್ ಜೋನ್ ಎಲ್‌ಪಿಜಿ ಅಸೋಸಿಯೇಷನ್

  • ಬೆಲೆ ಏರಿಕೆ ವಿರುದ್ಧ ಸಮರ – ಮಧ್ಯರಾತ್ರಿಯಿಂದಲೇ ಲಾರಿ ಮುಷ್ಕರ

    ಬೆಲೆ ಏರಿಕೆ ವಿರುದ್ಧ ಸಮರ – ಮಧ್ಯರಾತ್ರಿಯಿಂದಲೇ ಲಾರಿ ಮುಷ್ಕರ

    ಬೆಂಗಳೂರು: ಡೀಸೆಲ್ ದರ ಏರಿಕೆ (Diesel Price Hike) ಖಂಡಿಸಿ ಏಪ್ರಿಲ್‌ 14ರ ಮಧ್ಯರಾತ್ರಿಯಿಂದಲೇ ಲಾರಿ ಮಾಲೀಕರ ಸಂಘ (Lorry Owners Association) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದ ರಾಜ್ಯಾದ್ಯಂತ 6 ಲಕ್ಷ ಲಾರಿಗಳ ಸಂಚಾರ ಬಂದ್‌ ಆಗಲಿದ್ದು, ರಾಜ್ಯಕ್ಕೆ ಬರುವ ಮತ್ತು ಹೊರರಾಜ್ಯಗಳಿಗೆ ತೆರಳುವ ಸರಕು ಸಾಗಣೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ.

    ಹೌದು. ಪ್ರಸ್ತುತ ಡಿಸೇಲ್ ದರ ಹೆಚ್ಚಳ, ರಾಜ್ಯ ಹೆದ್ದಾರಿಗಳಿಗೆ ಟೋಲ್ ಅಳವಡಿಕೆ ಹಣ ವಸೂಲಿ, ಆರ್‌ಟಿಓ ಬಾರ್ಡರ್ ಚೆಕ್ ಪೋಸ್ಟ್, FC ಶುಲ್ಕ ಹೆಚ್ಚಿಸಿರುವುದು, ಬೆಂಗಳೂರು ನಗರದಲ್ಲಿ ಸರಕು ಸಾಗಾಣಿಕೆ ವಾಹನಗಳಿಗೆ ನೋ ಎಂಟ್ರಿ, ಚಾಲಕರ ಮೇಲೆ ಹಲ್ಲೆ ಹೀಗೆ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಲಾರಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆ‌ರ್.ಷಣ್ಮುಖಪ್ಪ ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ – ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

    ಆಲ್ ಇಂಡಿಯಾ ಮೋಟರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್‌ ದೆಹಲಿ, ಸೌಥ್ ಇಂಡಿಯಾ ಮೋಟರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್, ಕರ್ನಾಟಕ ಗೂಡ್ಸ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್, ಏರ್ ಪೋರ್ಟ್ ಟ್ಯಾಕ್ಸಿ ಅಸೋಸಿಯೇಷನ್, ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಅಸೋಸಿಯೇಷನ್, ಜಲ್ಲಿ ಕಲ್ಲು, ಮರಳು ಲಾರಿ ಅಸೋಸಿಯೇಷನ್, ರಾಜ್ಯ ಪಡಿತರ ಆಹಾರ ಧಾನ್ಯಗಳ ಸಾಗಾಣಿಕೆದಾರರ ಸಂಘ, ಸೌಥ್ ಜೋನ್ ಲಿಪಿಜಿ ಅಸೋಸಿಯೇಷನ್, ಜಲ್ಲಿ, ಮರಳು ಸಾಗಣೆ ವಾಹನಗಳು, ಗ್ಯಾಸ್ ಟ್ಯಾಂಕ್ ಮಾಲೀಕರ ಸಂಘ ಸಹಿತ 69 ಸಂಘಟನೆಗಳು ಮುಷ್ಕರ ಬೆಂಬಲಿಸಿವೆ. ರಾಜ್ಯದಲ್ಲಿ ಸುಮಾರು 700 ಗೂಡ್ಸ್‌ ಕಚೇರಿಗಳಿದ್ದು, ಬಂದ್ ಆಗಲಿವೆ. ಈ ಬಗ್ಗೆ ಕೈಗಾರಿಕೆ, ಕಾರ್ಖಾನೆ, ಕಂಪನಿಗಳಿಗೆ ಮುಷ್ಕರದ ಬಗ್ಗೆ ಪತ್ರ ಬರೆಯಲಾಗಿದೆ ಎಂದು ಸಹ ಅವರು ತಿಳಿಸಿದ್ದಾರೆ.

    ಡೀಸೆಲ್ ದರವನ್ನು 2024ರ ಜೂನ್‌ನಲ್ಲಿ 3 ರೂ. ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಈಗ ಮತ್ತೆ 2 ರೂ. ಹೆಚ್ಚಳ ಮಾಡಿದೆ. ಈ ಏರಿಕೆ ಕೈಬಿಡುವವರೆಗೆ ಮುಷ್ಕರ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲೇ ಅನ್ಯಧರ್ಮೀಯ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ದುಷ್ಕರ್ಮಿಗಳು – 6 ಆರೋಪಿಗಳು ಅರೆಸ್ಟ್

    ರಾಜ್ಯದಲ್ಲಿ 18 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸಲಾಗುತ್ತಿದೆ. ಬೇರೆ ಯಾವ ರಾಜ್ಯದಲ್ಲಿಯೂ ರಾಜ್ಯ ಹೆದ್ದಾರಿಗೆ ಟೋಲ್‌ ಇಲ್ಲ. ಹಾಗಾಗಿ ರಾಜ್ಯದಲ್ಲಿ ಟೋಲ್ ಸಂಗ್ರಹ ಕೈಬಿಡಬೇಕು. ಗಡಿ ಚೆಕ್‌ಪೋಸ್ಟ್‌ಗಳನ್ನು ರದ್ದುಮಾಡಬೇಕು. ವಾಹನಗಳ ಸಾಮರ್ಥ್ಯ ಅರ್ಹತಾ ಪತ್ರ (ಫಿಟ್‌ನೆಸ್ ಸರ್ಟಿಫಿಕೆಟ್) ನವೀಕರಣಕ್ಕೆ ಶುಲ್ಕವನ್ನು ಹೆಚ್ಚು ಮಾಡಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಅದನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ಸರಕು ಸಾಗಣೆ ವಾಹನಗಳ ಪ್ರವೇಶವನ್ನು ನಿಷೇಧಿಸಿರುವುದು, ಕೇವಲ 5 ಗಂಟೆ ಅವಕಾಶ ನೀಡಿರುವುದನ್ನು ತೆಗೆದುಹಾಕಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿವೆ ಎಂದು ತಿಳಿಸಿದ್ದಾರೆ.

    ಯಾವೆಲ್ಲ ಸೇವೆಗಳಲ್ಲಿ ವ್ಯತ್ಯಯ?
    ಸದ್ಯ ರಾಜ್ಯಾದ್ಯಂತ 6 ಲಕ್ಷ ಸರಕು ಲಾರಿಗಳ ಕಾರ್ಯಾಚರಣೆ ಬಂದ್‌ ಆಗುವುದರಿಂದ ತರಕಾರಿ, ಹಣ್ಣುಗಳ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ ಇದೆ. ಏರ್ ಪೋರ್ಟ್ ಟ್ಯಾಕ್ಸಿ, ಟೂರಿಸ್ಟ್ ಟ್ಯಾಕ್ಸಿ ಸಿಗೋದು ಸಹ ಅನುಮಾನವಿದೆ. ಇದರಿಂದ ಡಿಪೋಗಳಿಗೆ ಪಡಿತರ ಆಹಾರ ಧಾನ್ಯಗಳ ಪೂರೈಕೆ, ಎಲ್‌ಪಿಜಿ ಸಿಲಿಂಡರ್‌ ಸರಬರಾಜು ಹಾಗೂ ಕೆಲ ಪೆಟ್ರೋಲ್ ಬಂಕ್‌ಗಳಲ್ಲಿ ಡಿಸೇಲ್ ವ್ಯತ್ಯಯ ಸಾಧ್ಯತೆ ಇದೆ ಎಂದು ಸಹ ಲಾರಿ ಮಾಲೀಕರು ತಿಳಿಸಿದ್ದಾರೆ. ಇದನ್ನೂ ಓದಿ: 2,000 ಕೋಟಿ ಅಕ್ರಮ, 400 ಕೋಟಿ ಕಮಿಷನ್ ಆರೋಪ – ಡಿಕೆಶಿ, ಡಿಕೆಸು ವಿರುದ್ಧ ರಾಜ್ಯಪಾಲರಿಗೆ ಮುನಿರತ್ನ ದೂರು

  • ಹಿಂದೆ ಡೀಸೆಲ್ ದರ ಏರಿಕೆ ಆದಾಗ ಯಾಕೆ ಲಾರಿ ಮಾಲೀಕರು ಮುಷ್ಕರ ಮಾಡಲಿಲ್ಲ? – ಡಿಕೆಶಿ

    ಹಿಂದೆ ಡೀಸೆಲ್ ದರ ಏರಿಕೆ ಆದಾಗ ಯಾಕೆ ಲಾರಿ ಮಾಲೀಕರು ಮುಷ್ಕರ ಮಾಡಲಿಲ್ಲ? – ಡಿಕೆಶಿ

    ರಾಮನಗರ: ರಾಜಕೀಯಕ್ಕೆ ಮಣಿದು ಲಾರಿ ಮಾಲೀಕರು ಮುಷ್ಕರ ಮಾಡೋದು ಸರಿಯಲ್ಲ. ಮುಷ್ಕರ ಮಾಡಿದ್ರೆ ನಿಮಗೆ ನಷ್ಟ ಆಗುತ್ತೆ. ಹಾಗಾಗಿ ಯಾವುದೇ ಮುಷ್ಕರ ಮಾಡಬೇಡಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಲಾರಿ ಮಾಲೀಕರಿಗೆ ಮನವಿ ಮಾಡಿದ್ದಾರೆ.

    ರಾಜ್ಯದಲ್ಲಿ ಡಿಸೇಲ್ ದರ ಏರಿಕೆ (Diesel Price Hike) ಖಂಡಿಸಿ ಲಾರಿ ಮಾಲೀಕರು ಮುಷ್ಕರಕ್ಕೆ ಕರೆ ನೀಡಿರುವ ವಿಚಾರ ಕುರಿತು ಕನಕಪುರದಲ್ಲಿ ಡಿಸಿಎಂ ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ನಾಳೆಯಿಂದ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ – ಮೈಸೂರಿನಲ್ಲಿ ಜೋಶಿ ಚಾಲನೆ; ಸರ್ಕಾರದ ವೈಫಲ್ಯ ವಿರುದ್ಧ ಕಹಳೆ

    ಲಾರಿ ಮಾಲೀಕರು ಮುಷ್ಕರ (Lorry Owners Strike) ಕರೆದಿರೋ ಬಗ್ಗೆ ಮಾಹಿತಿ ಇಲ್ಲ. ಹಿಂದೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಆದಾಗ ಯಾಕೆ ಇವರು ಮುಷ್ಕರ ಮಾಡಲಿಲ್ಲ? ಆವತ್ತು ಕೂಡ ಮುಷ್ಕರ ಮಾಡಬಹುದಿತ್ತಲ್ಲ. ಈಗ ರಾಜಕೀಯ ಕಾರಣಕ್ಕಾಗಿ ಮುಷ್ಕರ ಮಾಡ್ತಿದ್ದಾರೆ. ಈಗಲೂ ಎಲ್ಲಾ ಲಾರಿ ಮಾಲೀಕರಿಗೆ ಮನವಿ ಮಾಡ್ತೀನಿ. ಸುಮ್ಮನೆ ರಾಜಕೀಯಕ್ಕೆ ಒಳಗಾಗಬೇಡಿ. ರಾಜಕೀಯಕ್ಕೆ ಮಣಿದು ಮುಷ್ಕರ ಮಾಡೋದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಈ ಸರ್ಕಾರ ಪೋಸ್ಟ್‌ ಮಾರ್ಟಂಗೂ ದರ ವಿಧಿಸಿಬಿಟ್ರೆ ಸಾಯೋದಕ್ಕೂ ಜನ ಹಿಂಜರೀತಾರೆ – ಸಿ.ಟಿ ರವಿ ಲೇವಡಿ

    ಮುಷ್ಕರ ಮಾಡಿದ್ರೆ ನಿಮಗೆ ನಷ್ಟ ಆಗುತ್ತೆ. ನೀವು ಸರ್ಕಾರದ ಜೊತೆ ಇರಬೇಕು. ನಿಮ್ಮ ಬದುಕು ನೋಡಿ, ಒಂದು ದಿನ ಮುಷ್ಕರ ಮಾಡಿದ್ರೆ ಆ ನಷ್ಟ ಭರಿಸಲು ನಿಮ್ಮ ಕೈಯಲ್ಲಿ ಆಗಲ್ಲ. ಲಾರಿ ಇಎಂಐ, ಬಡ್ಡಿ, ಡ್ರೈವರ್ ಸಂಬಳ ಇದೆಲ್ಲ ಹೊರೆ ಆಗುತ್ತೆ. ದಯಮಾಡಿ ಯಾವುದೇ ಮುಷ್ಕರ ಮಾಡಬೇಡಿ ಎಂದು ಲಾರಿ ಮಾಲೀಕರಿಗೆ ಮನವಿ ಮಾಡಿದರು. ಇದನ್ನೂ ಓದಿ: ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್ ಸಿಬಿಐಗೆ ವಹಿಸುವ ಅಗತ್ಯ ಇಲ್ಲ: ಪರಮೇಶ್ವರ್

  • ಏ.15 ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ – 9 ಲಕ್ಷ ವಾಣಿಜ್ಯ ವಾಹನಗಳ ಸಂಚಾರ ಬಂದ್‌

    ಏ.15 ರಿಂದ ಅನಿರ್ದಿಷ್ಟಾವಧಿ ಲಾರಿ ಮುಷ್ಕರ – 9 ಲಕ್ಷ ವಾಣಿಜ್ಯ ವಾಹನಗಳ ಸಂಚಾರ ಬಂದ್‌

    – ಏರ್‌ಪೋರ್ಟ್‌ ಟ್ಯಾಕ್ಸಿ, ಗೂಡ್ಸ್ ವಾಹನಗಳೂ ಬಂದ್

    ಬೆಂಗಳೂರು: ಡೀಸೆಲ್ ದರ ಏರಿಕೆ (Diesel Price Hike) ಖಂಡಿಸಿ ಇದೇ ಏಪ್ರಿಲ್ 15 ರಿಂದ ಲಾರಿ ಮಾಲೀಕರ ಸಂಘ (Lorry Owners Association) ಮುಷ್ಕರಕ್ಕೆ ಕರೆ ನೀಡಿದ್ದಾರೆ. ಅಂದು ರಾಜ್ಯಾದ್ಯಂತ ಎಲ್ಲಾ ಲಾರಿಗಳ ಸಂಚಾರ ಸ್ಥಗಿತಗೊಳ್ಳಲಿದ್ದು, ಗೂಡ್ಸ್ ವಾಹನಗಳು, ಏರ್‌ಪೋರ್ಟ್‌ ಟ್ಯಾಕ್ಸಿಗಳೂ (Airport Taxi) ಸಹ ಸಂಪೂರ್ಣ ಬಂದ್‌ ಆಗಲಿದೆ.

    ಬಸ್‌ ಟಿಕೆಟ್‌, ಮೆಟ್ರೋ, ಹಾಲು, ವಿದ್ಯುತ್‌ ಬಳಿಕ ಡಿಸೇಲ್‌ ದರ ಏರಿಕೆ ಮಾಡಿ ಕರ್ನಾಟಕ ಸರ್ಕಾರ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೆನ್ನಲ್ಲೇ ಲಾರಿ ಮಾಲೀಕರ ಸಂಘ ಡೀಸೆಲ್ ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ಕರೆ ನೀಡಿದೆ. ಈ ಸಂಬಂಧ ಚಾಮರಾಜಪೇಟೆಯ ಖಾಸಗಿ ಹೋಟೆಲ್‌ನಲ್ಲಿಂದು (Private Hotel) ವಾಣಿಜ್ಯ ವಾಹನಗಳ ಮಾಲೀಕರ ಸಂಘ ಸಭೆ ನಡೆಸಿದ್ದು, ಸಭೆಯ ಬಳಿಕ ಹೋರಾಟಕ್ಕೆ ಕರೆ ನೀಡಿದೆ. ಇದೇ ಏಪ್ರಿಲ್‌ 15ರ ಬೆಳಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ.

    ಈ ಕುರಿತು ಮಾತನಾಡಿರುವ ಲಾರಿ ಅಸೋಸಿಯೇಷನ್ ಅಧ್ಯಕ್ಷ ಷಣ್ಮುಗಪ್ಪ, ಡಿಸೇಲ್ ಬೆಲೆ 7 ತಿಂಗಳಲ್ಲಿ 5 ರೂ ಏರಿಕೆಯಾಗಿದೆ. ಇದು ಲಾರಿ ಸೇರಿದಂತೆ ವಾಣಿಜ್ಯ ವಾಹನಗಳ ಮಾಲೀಕರು ನೇಣು ಹಾಕಿಕೊಳ್ಳುವ ಸ್ಥಿತಿ ಬಂದಿದೆ. ಏನಾದರೂ ಫ್ರೀ ಕೊಡಲಿ, ಆದರೆ ಹೊಟ್ಟೆ ಮೇಲೆ ಹೊಡೆದು ದರ ಏರಿಕೆ ಮಾಡೋದು ಸರಿಯಲ್ಲ. ಫಿಟ್ನೆಸ್ ಫೀಸ್, ಬಾರ್ಡರ್ ಚೆಕ್ ಪೋಸ್ಟ್, ಡಿಸೇಲ್ ದರ ಸೇರಿದಂತೆ ಪ್ರಮುಖ ಬೇಡಿಕೆಗಳನ್ನ ಈಡೇರಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ. 14ನೇ ತಾರೀಖು ಅಂಬೇಡ್ಕರ್ ಜಯಂತಿ ರಾತ್ರಿಯಿಂದಲೇ ಹೋರಾಟ ಶುರು ಮಾಡಲಿದ್ದೇವೆ. ಬೇಡಿಕೆ ಈಡೇರುವವರೆಗೆ ಕರ್ನಾಟಕದ ಒಳಗೆ ಯಾರೂ ಬರಲ್ಲ. ಇದಕ್ಕೆ ಪೆಟ್ರೋಲ್ ಮಾಲೀಕರು ಬೆಂಬಲಕೊಟ್ಟಿದ್ದಾರೆ, ಏರ್ಪೋಟ್ ಟ್ಯಾಕ್ಸಿ, ಜಲ್ಲಿ ಮರಳು, ಸೇರಿದಂತೆ ಗೂಡ್ಸ್ ವಾಹನಗಳು ಬಂದ್ ಆಗಲಿವೆ. ಎಲ್ಲಾ ಬಗೆಯ ವಾಣಿಜ್ಯ ವಾಹನಗಳ 9 ಲಕ್ಷ ವಾಹನಗಳು ಸ್ಥಗಿತವಾಗಲಿವೆ ಎಂದು ತಿಳಿಸಿದ್ದಾರೆ.

    ಏಪ್ರಿಲ್‌ 14ರ ವರೆಗೆ ಸರ್ಕಾರಕ್ಕೆ ಗಡುವು ನೀಡುತ್ತೇವೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಮಣಿಯದಿದ್ದರೆ, 14ರ ರಾತ್ರಿಯಿಂದಲೇ ಹೋರಾಟ ಶುರು ಮಾಡಲಿದ್ದೇವೆ. ಹೋರಾಟ ಶುರುವಾದ ಬಳಿಕ ಯಾವುದೇ ರಾಜ್ಯದಿಂದ ಕರ್ನಾಟಕ ಒಳಗೆ ವಾಣಿಜ್ಯ ವಾಹನ ಸಂಚಾರ ಮಾಡಲ್ಲ. ಚೆಕ್ ಪೋಸ್ಟ್‌ಗಳಲ್ಲಿ ಖುದ್ದು ನಾವುಗಳೇ ನಿಲ್ಲುತ್ತೇವೆ. ಯಾವುದೇ ವಾಣಿಜ್ಯ ವಾಹನಗಳನ್ನ ಒಳಗಡೆ ಬಿಡದಂತೆ ನೋಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

    ಯಾವೆಲ್ಲಾ ವಾಹನಗಳು ಬಂದ್‌?
    ಏಪ್ರಿಲ್‌ 15ರಿಂದ ಏರ್ ಪೋರ್ಟ್ ಟ್ಯಾಕ್ಸಿ, ಜಲ್ಲಿ ಕಲ್ಲು, ಮರಳು ಲಾರಿ, ಗೂಡ್ಸ್ ವಾಹನಗಳು ಸೇರಿದಂತೆ 6 ಲಕ್ಷ ಲಾರಿಗಳ ಸಂಚಾರ ಬಂದ್‌ ಆಗಲಿದೆ. ಜೊತೆಗೆ ಅಕ್ಕಿ ಲೊಡ್, ಗೂಡ್ಸ್, ಪೆಟ್ರೋಲ್ ಡಿಸೇಲ್ ಲಾರಿಗಳನ್ನೂ ಬಂದ್‌ ಮಾಡಲಾಗುತ್ತದೆ. ಇದಕ್ಕೆ ಚಾಲಕರ ಸಂಘದಿಂದಲೂ ಬೆಂಬಲ ವ್ಯಕ್ತವಾಗಿದೆ. ಎಲ್ಲಾ ಬಗೆಯ ವಾಣಿಜ್ಯ ವಾಹನಗಳ 9 ಲಕ್ಷ ವಾಹನಗಳ ಸಂಚಾರ ಸ್ಥಗಿತವಾಗಲಿವೆ ಎಂದು ತಿಳಿಸಿದ್ದಾರೆ.

  • ಡೀಸೆಲ್‌ ಮೇಲಿನ ವ್ಯಾಟ್ ಕಡಿಮೆ‌ ಮಾಡದಿದ್ದರೆ ಲಾರಿ ಮುಷ್ಕರ : ಷಣ್ಮುಗಪ್ಪ

    ಡೀಸೆಲ್‌ ಮೇಲಿನ ವ್ಯಾಟ್ ಕಡಿಮೆ‌ ಮಾಡದಿದ್ದರೆ ಲಾರಿ ಮುಷ್ಕರ : ಷಣ್ಮುಗಪ್ಪ

    ಬೆಂಗಳೂರು: ಡೀಸೆಲ್‌ ಮೇಲೆ ವಿಧಿಸಿರುವ ವ್ಯಾಟ್‌ ಅನ್ನು ರಾಜ್ಯ ಸರ್ಕಾರ ಕಡಿಮೆ ಮಾಡಬೇಕು ಇಲ್ಲವಾದಲ್ಲಿ ಲಾರಿ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಬೇಕಾಗುತ್ತದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಕಳೆದ ಒಂದು ವರ್ಷದಲ್ಲಿ ಡೀಸೆಲ್ ಬೆಲೆ 26 ರೂಪಾಯಿಯಷ್ಟು ಹೆಚ್ಚಾಗಿದೆ.‌ ಇದರಿಂದಾಗಿ ಶೇ. 30 ರಷ್ಟು ಲಾರಿಗಳು ಶೆಡ್ ಸೇರಿವೆ. ದಿನದಿಂದ‌ ದಿನಕ್ಕೆ ಡೀಸೆಲ್‌ ಬೆಲೆ ಗಗನಕ್ಕೆ ಏರುತ್ತಾ ಶತಕ ಬಾರಿಸಿದೆ.‌‌ ಅದರೂ‌ ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.‌ ಡೀಸೆಲ್‌‌ ಬೆಲೆ ಏರಿಕೆಯಾಗ್ತಿರೋದ್ರಿಂದ ಎಲ್ಲ ಅಗತ್ಯ ವಸ್ತುಗಳ ಬೆಲೆಯೂ‌ ಏರಿಕೆಯಾಗ್ತಿದೆ ಜನ ಸಾಮಾನ್ಯರಿಗೆ ದೊಡ್ಡ ಹೊರೆಯಾಗ್ತಿದೆ ಎಂದರು. ಇದನ್ನೂ ಓದಿ: ಮಳೆರಾಯನ ಆರ್ಭಟಕ್ಕೆ ಬೆಚ್ಚಿಬಿದ್ದ ಕೇರಳ – ಸಾವಿನ ಸಂಖ್ಯೆ 26ಕ್ಕೆ ಏರಿಕೆ

    ವ್ಯಾಟ್‌ ಇಳಿಕೆಯಾಗದೇ ಇದ್ದರೆ ಅಕ್ಟೋಬರ್ 23 ರಂದು ಲಾರಿ‌ ಮಾಲೀಕರು ಸಭೆ ಮಾಡಿ‌ ಅನಿವಾರ್ಯವಾಗಿ ಲಾರಿ ಮುಷ್ಕರ ಮಾಡಬೇಕಾಗುತ್ತೆ.‌ ಅಷ್ಟರ ಒಳಗಡೆ ರಾಜ್ಯ ಸರ್ಕಾರ ಡೀಸೆಲ್‌ ಮೇಲಿನ ವ್ಯಾಟ್ ಕಡಿಮೆ‌ ಮಾಡಬೇಕು. ಇಲ್ಲವಾದಲ್ಲಿ 6 ಲಕ್ಷ ಲಾರಿಗಳು ರಸ್ತೆಗಿಳಿಯದೇ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

  • ಲಾರಿ ಮುಷ್ಕರ ಬೆಂಬಲಿಸಿ ಹೆದ್ದಾರಿಯಲ್ಲಿ ಪ್ರತಿಭಟನೆ

    ಲಾರಿ ಮುಷ್ಕರ ಬೆಂಬಲಿಸಿ ಹೆದ್ದಾರಿಯಲ್ಲಿ ಪ್ರತಿಭಟನೆ

    ಹುಬ್ಬಳ್ಳಿ: ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಕರೆ ನೀಡಿದ ಲಾರಿ ಮುಷ್ಕರಕ್ಕೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

    ಹುಬ್ಬಳ್ಳಿಯ ಗಬ್ಬೂರ ಟೋಲ್ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಹಳೆ ಲಾರಿಗಳನ್ನು ಬಂದ್ ಮಾಡುವ ಕಾನೂನುನ್ನು ಹಿಂಪಡೆಯಬೇಕು. ಥರ್ಡ್ ಪಾರ್ಟಿ ಇನ್ಸೂರೆನ್ಸ್ ಕಡಿಮೆ ಮಾಡಬೇಕು. ಇ.ವೇ ಬಿಲ್ ಹಿಂಪಡೆಯಬೇಕು ಟೋಲ್ ದರವನ್ನು ಕಡಿಮೆ ಮಾಡಬೇಕು ಹಾಗೂ ಇತರೆ ಸಮಸ್ಯೆಗಳಾದ ಗ್ಯಾಸ್ ಡೀಸೆಲ್, ಪೆಟ್ರೋಲ್ ದರವನ್ನು ಜಿಎಸ್‍ಟಿಯಲ್ಲಿ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ರೈತರ ಕೃಷಿ ಕಾಯ್ದೆ, ವಿದ್ಯುತ್ ಕಾಯ್ದೆ ಎಪಿಎಂಸಿ ಹಿಂಪಡೆಯಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಸ್ತೆ ಮಧ್ಯದಲ್ಲಿಯೇ ಪ್ರತಿಭಟನೆ ನಡೆಸಿದರು. ಇನ್ನೂ ರಸ್ತೆಯ ಮೇಲೆ ಸಂಚರಿಸುತ್ತಿರುವ ಲಾರಿಗಳನ್ನು ಬಂದ್ ಮಾಡಲು ಮುಂದಾದ ಕಾರ್ಯಕರ್ತರ ಮಧ್ಯದಲ್ಲಿಯೇ ಮಾತಿನ ಚಕಮಕಿ ನಡೆಯಿತು.