Tag: ಲಾರಿ ಚಾಲಕರು

  • ಲಾಕ್‍ಡೌನ್ ಪರಿವೇ ಇಲ್ಲದೇ ಬೀದಿಯಲ್ಲಿ ಹೊಡೆದಾಡಿಕೊಂಡ ಲಾರಿ ಚಾಲಕರು

    ಲಾಕ್‍ಡೌನ್ ಪರಿವೇ ಇಲ್ಲದೇ ಬೀದಿಯಲ್ಲಿ ಹೊಡೆದಾಡಿಕೊಂಡ ಲಾರಿ ಚಾಲಕರು

    – ವಾಹನ ಬಿಟ್ಟು ಚಾಲಕರು ಪರಾರಿ

    ಕಾರವಾರ: ಲಾಕ್‍ಡೌನ್ ನಡುವೆಯೂ ಅನುಮತಿಯಿಲ್ಲದೇ ಲಾರಿ ಚಲಾಯಿಸಿ ನಂತರ ಅದರ ಪರಿವೇ ಇಲ್ಲದೇ ಬೀದಿಯಲ್ಲಿ ನಿಂತುಕೊಂಡು ಚಾಲಕರು ಹೊಡೆದಾಡಿಕೊಂಡ ಘಟನೆ ಕಾರವಾರದಲ್ಲಿ ನಡೆದಿದೆ.

    ಇಡೀ ರಾಜ್ಯದಲ್ಲಿ ಲಾಕ್‍ಡೌನ್ ಇದೆ. ವಾಹನ ಸಂಚಾರಕ್ಕೂ ನಿಷೇಧವಿದೆ. ಆದರೆ ಇದರ ನಡುವೆಯೂ ಹಾವೇರಿ ಇಂದ ಕಾರವಾರ ನಗರಕ್ಕೆ ಯಾವುದೇ ಪರವಾನಿಗೆ ಇಲ್ಲದೇ ಕಾಲಿ ಟಾರ್ ಲಾರಿಯನ್ನು ಚಲಾಯಿಸಿಕೊಂಡು ಬಂದ ಇಬ್ಬರು ಚಾಲಕರು, ನಗರ ಪ್ರವೇಶಿಸುವ ಕುರಿತು ಒಬ್ಬರಿಗೊಬ್ಬರು ಹೆದ್ದಾರಿಯಲ್ಲೇ ಬಡಿದಾಡಿಕೊಂಡ ಘಟನೆ ಕಾರವಾರ ನಗರದ ಬೈತಖೋಲ್ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

    ಲಾರಿಗೆ ನಗರ ಪ್ರವೇಶಿಸಲು ಯಾವುದೇ ಪರವಾನಿಗೆ ಸಹ ಇಲ್ಲ. ಇದಲ್ಲದೇ ಮಾಸ್ಕ್ ಕೂಡ ಹಾಕಿಕೊಳ್ಳದ ಇಬ್ಬರು ಚಾಲಕರು ನಗರ ಪ್ರವೇಶಿಸುತ್ತಿದ್ದರು. ಈ ವೇಳೆ ಓರ್ವ ಚಾಲಕ ಲಾರಿ ಚಲಾಯಿಸುತಿದ್ದ ನಾಸಿರ್ ನಿಗೆ ಗಾಡಿ ನಿಲ್ಲಿಸಲು ಹೇಳಿದ್ದಾನೆ. ಆದರೆ ಆತ ಒಪ್ಪದೇ ಚಲಾಯಿಸಿದ್ದು, ಈ ವೇಳೆ ಇಬ್ಬರೂ ಹೆದ್ದಾರಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಘಟನೆ ಕುರಿತು ಕಾರವಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಈ ವೇಳೆ ಇಬ್ಬರು ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದಾರೆ.

  • ಅಗತ್ಯ ವಸ್ತು ಸಾಗಿಸುವ ವಾಹನ ಚಾಲಕರ ಮೇಲೆ ಪೊಲೀಸರಿಂದ ಹಲ್ಲೆ

    ಅಗತ್ಯ ವಸ್ತು ಸಾಗಿಸುವ ವಾಹನ ಚಾಲಕರ ಮೇಲೆ ಪೊಲೀಸರಿಂದ ಹಲ್ಲೆ

    – ರಕ್ಷಣೆಗಾಗಿ ಜಿಲ್ಲಾಧಿಕಾರಿಗೆ ಮನವಿ

    ಧಾರವಾಡ: ನೈರುತ್ಯ ರೇಲ್ವೆ ವಲಯದಿಂದ ಪರವಾನಿಗೆ ಪಡೆದು ಅಗತ್ಯ ವಸ್ತುಗಳ ಸಾಮಾಗ್ರಿ ಸಾಗಿಸುತ್ತಿದ್ದ ವಾಹನಗಳ ಚಾಲಕರಿಗೆ ಪೊಲೀಸರು ಮನಸೋ ಇಚ್ಛೆ ಥಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ನವಲೂರು ಬಳಿ ಇರುವ ರೇಲ್ವೆ ಗೂಡ್ಸ್ ಶೆಡ್‍ಗೆ ಪ್ರತಿದಿನ ಬರುವ ಅಗತ್ಯ ವಸ್ತುಗಳಾದ ಅಕ್ಕಿ, ಗೋಧಿ ಮತ್ತು ರಸಗೊಬ್ಬರಗಳನ್ನು ಸಾಗಿಸಲು 20ಕ್ಕೂ ಹೆಚ್ಚು ಲಾರಿಗಳಿಗೆ ಅವಕಾಶ ನೀಡಲಾಗಿತ್ತು. ಲಾರಿ ಚಾಲಕರು ಅವರಿಗೆ ನೀಡಿರುವ ಅಧಿಕೃತ ಪಾಸಗಳನ್ನು ಹಾಕಿಕೊಂಡು ಕ್ರೂಸರ್‍ನಲ್ಲಿ ಲಾರಿ ಬಳಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

    ಹತ್ತಕ್ಕೂ ಹೆಚ್ಚು ಲಾರಿ ಚಾಲಕರನ್ನು ತಡೆದ ಪೊಲೀಸರು, ಪಾಸ್ ತೋರಿಸಿದ್ರೂ ಮನಸೋ ಇಚ್ಛೆ ಥಳಿಸಿದ್ದಾರೆ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಥಳಿತಕ್ಕೊಳಗಾದ ಲಾರಿ ಚಾಲಕರು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸದ್ದಾರೆ. ಅಲ್ಲದೆ ಅಗತ್ಯ ವಸ್ತುಗಳ ಸಾಗಾಟದ ಲಾರಿ ಚಾಲಕರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.