Tag: ಲಾರಿ

  • ಚಿತ್ರದುರ್ಗ | ರಸ್ತೆ ದಾಟುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್‌ಗೆ ಲಾರಿ ಡಿಕ್ಕಿ – ಗಂಭೀರ ಗಾಯ

    ಚಿತ್ರದುರ್ಗ | ರಸ್ತೆ ದಾಟುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್‌ಗೆ ಲಾರಿ ಡಿಕ್ಕಿ – ಗಂಭೀರ ಗಾಯ

    ಚಿತ್ರದುರ್ಗ: ರಸ್ತೆ ದಾಟುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್‌ಗೆ (Police Constable) ಲಾರಿ (Lorry) ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು (Hiriyur) ತಾಲೂಕಿನ ಐಮಂಗಲ ಗ್ರಾಮದ ಬಳಿ ನಡೆದಿದೆ.

    ತರಬೇತಿಗಾಗಿ ಐಮಂಗಲ ಪೊಲೀಸ್ ತರಬೇತಿ ಶಾಲೆಗೆ ಆಗಮಿಸಿದ್ದ ಬೆಳಗಾವಿಯ ಪೊಲೀಸ್ ಕಾನ್ಸ್ಟೇಬಲ್‌ ಸಂಗಮೇಶ್ ನಾಯಕ್ (29) ರಸ್ತೆ ದಾಟುವ ವೇಳೆ ಲಾರಿ ಡಿಕ್ಕಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮಕ್ಕೆ ಅವಮಾನ ಸಹಿಸಲ್ಲ- ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಮುಂದಾದ ವಕೀಲ

    ಲಾರಿ ಡಿಕ್ಕಿಯ ರಭಸಕ್ಕೆ ಸಂಗಮೇಶ್ ಕಾಲು, ತಲೆ ಮತ್ತು ಮುಖಕ್ಕೆ ತೀವ್ರ ಪೆಟ್ಟುಗಳಾಗಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ವೈಭವದಿಂದ ನೆರವೇರಿದ ಅಮ್ಮನವರ ರಥೋತ್ಸವ

  • ನೆಲಮಂಗಲ | ಬೆಳ್ಳಂಬೆಳಗ್ಗೆ ಈರುಳ್ಳಿ ತುಂಬಿದ್ದ ಲಾರಿ ಬೆಂಕಿಗಾಹುತಿ

    ನೆಲಮಂಗಲ | ಬೆಳ್ಳಂಬೆಳಗ್ಗೆ ಈರುಳ್ಳಿ ತುಂಬಿದ್ದ ಲಾರಿ ಬೆಂಕಿಗಾಹುತಿ

    ನೆಲಮಂಗಲ: ಲಾರಿಯ ಇಂಜಿನ್‌ನಲ್ಲಿ ಉಂಟಾದ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ಮಾರುಕಟ್ಟೆಗೆ ಹೊರಟಿದ್ದ ಈರುಳ್ಳಿ ತುಂಬಿದ್ದ ಲಾರಿ ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ನೆಲಮಂಗಲ (Nelmangala) ತಾಲೂಕಿನ ಬೂದಿಹಾಳ್ (Budihal Gate) ಗೇಟ್ ಬಳಿ ನಡೆದಿದೆ.

    ಶನಿವಾರ (ಅ.4) ಬೆಳಗ್ಗೆ ಈರುಳ್ಳಿ ತುಂಬಿದ್ದ ಲಾರಿ ಚಿತ್ರದುರ್ಗದಿಂದ ನೆಲಮಂಗಲದ ದಾಸನಪುರ ಎಪಿಎಂಸಿಗೆ ಬರುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಲಾರಿಯ ಇಂಜಿನ್‌ನಲ್ಲಿ ಶಾರ್ಟ್‌ಸರ್ಕ್ಯೂಟ್‌ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಲಕ್ಷಾಂತರ ಮೌಲ್ಯದ ಈರುಳ್ಳಿ ಬೆಂಕಿಗಾಹುತಿಯಾಗಿದೆ.ಇದನ್ನೂ ಓದಿ: ಬೆಳಗಾವಿ | ಕಲ್ಲು ತೂರಾಟಕ್ಕೆ ಹಿಂದೂ ಯುವಕರ ಕೌಂಟರ್ – `ಐ ಲವ್ ಶ್ರೀರಾಮ್‌’ ಫಲಕ ಅಳವಡಿಕೆ

    ಈರುಳ್ಳಿ ನಾಶದಿಂದ ರೈತ ಕಂಗಾಲಾಗಿದ್ದು, ಲಾರಿಯ ಚಾಲಕ ಹಾಗೂ ಕ್ಲೀನರ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನೆಲಮಂಗಲ ಟ್ರಾಫಿಕ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • Kolar | ಲಾರಿ ಡಿಕ್ಕಿಯಾಗಿ ಮುರಿದು ಬಿದ್ದ ಸ್ಕೈವಾಕ್ – ಕಾರು ಜಖಂ

    Kolar | ಲಾರಿ ಡಿಕ್ಕಿಯಾಗಿ ಮುರಿದು ಬಿದ್ದ ಸ್ಕೈವಾಕ್ – ಕಾರು ಜಖಂ

    ಕೋಲಾರ: ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿ (Lorry) ಡಿಕ್ಕಿಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಕೈವಾಕ್ (Skywalk) ಮುರಿದು ಬಿದ್ದ ಪರಿಣಾಮ ಕಾರು ಜಖಂಗೊಂಡ ಘಟನೆ ಕೋಲಾರ (Kolar) ಹೊರವಲಯದ ಕೊಂಡರಾಜನಹಳ್ಳಿಯಲ್ಲಿ ನಡೆದಿದೆ.

    ಸ್ಕೈವಾಕ್ ಪಿಲ್ಲರ್‌ಗೆ ಲಾರಿ ಡಿಕ್ಕಿಯಾದ ಪರಿಣಾಮ ಸ್ಕೈವಾಕ್ ಮುರಿದು ಬಿದ್ದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಿಲ್ಲ. ಸ್ಥಳಕ್ಕೆ ಆಗಮಿಸಿದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಬೃಹತ್ ಎರಡು ಕ್ರೇನ್‌ಗಳನ್ನು ಬಳಸಿ ತೆರವು ಕಾರ್ಯ ಮಾಡಲಾಗಿದೆ. ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತ – ಮೃತರ ಕುಟುಂಬಕ್ಕೆ ತಲಾ 20 ಲಕ್ಷ ಪರಿಹಾರ ಘೋಷಿಸಿದ ವಿಜಯ್

    ಸತತ ನಾಲ್ಕೈದು ಗಂಟೆಗಳ ಕಾರ್ಯಾಚರಣೆ ಬಳಿಕ ಮುರಿದು ಬಿದ್ದಿದ್ದ ಸ್ಕೈವಾಕ್ ತೆರವುಗೊಳಿಸಲಾಗಿದೆ. ಘಟನೆಯಿಂದ ಚೆನೈ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡುವಂತಾಯಿತು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: `ಮಹಾ’ ಮಳೆಗೆ `ಉತ್ತರ’ ತತ್ತರ – ಕಲಬುರಗಿಯಲ್ಲಿ ಭೀಮೆ ಆರ್ಭಟ; ಇಡೀ ಗ್ರಾಮವೇ ಅಪೋಷನ!

  • ಬೆಂಗಳೂರಿನಲ್ಲಿ ಮತ್ತೆ ಪುಂಡರ ಅಟ್ಟಹಾಸ – ಸಿಕ್ಕಸಿಕ್ಕ ಲಾರಿಗಳನ್ನ ಅಡ್ಡಹಾಕಿ ಲಾಂಗ್‌ ತೋರಿಸಿ ಹಣ ವಸೂಲಿ

    ಬೆಂಗಳೂರಿನಲ್ಲಿ ಮತ್ತೆ ಪುಂಡರ ಅಟ್ಟಹಾಸ – ಸಿಕ್ಕಸಿಕ್ಕ ಲಾರಿಗಳನ್ನ ಅಡ್ಡಹಾಕಿ ಲಾಂಗ್‌ ತೋರಿಸಿ ಹಣ ವಸೂಲಿ

    – ಫೀಲ್ಡಲ್ಲಿ ಹೆಸರು ಮಾಡಬೇಕು ಅಂತ ಪುಂಡಾಟ

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಪುಡಿರೌಡಿಗಳ ಗ್ಯಾಂಗ್‌ವೊಂದು ಅಟ್ಟಹಾಸ ಮೆರೆದಿದೆ. ಒಂದೇ ದಿನದಲ್ಲಿ ಹೆಸರು ಮಾಡಬೇಕು ಅಂತಾ ಲಾಂಗ್ (Lang) ಹಿಡಿದು ರಸ್ತೆಬದಿ ಪಾರ್ಕ್‌ ಮಾಡಿದ್ದ ವಾಹನಗಳ ಮೇಲೆ ಬೀಸಿ ಪುಂಡಾಟ ಮೆರೆದಿದೆ. ಇದು ಸ್ಥಳೀಯರಲ್ಲೂ ಆತಂಕ ಮೂಡುವಂತೆ ಮಾಡಿದೆ.

    ಬ್ಯಾಡರಹಳ್ಳಿಯ ವಾಲ್ಮೀಕಿನಗರ ಮತ್ತು ಎಪಿನಗರದ ಮುದ್ದಯ್ಯನಪಾಳ್ಯದಲ್ಲಿ ಕಾರ್‌ ಗ್ಲಾಸ್‌ ಒಡೆದಿದ್ದ (Car Glass Broken) ಈ ಗ್ಯಾಂಗ್‌ ಬಳಿಕ ಮಾದನಾಯಕನಹಳ್ಳಿಯ ಮಾಗಡಿ ರೋಡ್ ಲಿಮಿಟ್ಸ್‌ನಲ್ಲಿ ಚಾಲಕನ ಮೇಲೆ ಲಾಂಗ್‌ ಬೀಸಿದೆ. ಮೊದಲಿಗೆ ಲಾರಿ ಗ್ಲಾಸ್‌ ಹೊಡೆದಿರುವ ಈ ಗ್ಯಾಂಗ್‌, ಚಾಲಕ ಮಲಗಿರೋದನ್ನ ಗಮನಿಸಿ ಹಣಕ್ಕಾಗಿ ಬೆದರಿಕೆ ಹಾಕಿದೆ. ಹಣ ತೆಗೆದುಕೊಡುವಷ್ಟರಲ್ಲಿ ಲಾಂಗ್‌ ಬೀಸಿ ಕೈ ಕೂಡ ಕಟ್‌ ಮಾಡಿದೆ. ಬಳಿಕ ಮೊಬೈಲ್‌ ಹಾಗೂ 5 ಸಾವಿರ ರೂ. ಹಣ ದೋಚಿ ಪರಿಯಾಗಿದೆ ಪುಂಡರ ಗ್ಯಾಂಗ್‌.

    ಇಷ್ಟಕ್ಕೇ ಸುಮ್ಮನಾಗದ ಈ ಗ್ಯಾಂಗ್‌ ದೊಡ್ಡಬಳ್ಳಾಪುರದ ಬಳಿ ಕೂಡ ಲಾಂಗ್ ಬೀಸಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಬೆದರಿಕೆ ಹಾಕಿದೆ. ಸಿಕ್ಕ ಸಿಕ್ಕ ಲಾರಿಗಳನ್ನ ಅಡ್ಡಹಾಕಿ ಲಾಂಗ್‌ ತೋರಿಸಿ, ಬೆದರಿಸಿ ಹಣ ವಸೂಲಿ ಮಾಡಿದೆ. ಆಟೋದಲ್ಲಿ ಬಂದವರಿಂದಲೇ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

    ಕುಡಿದ ಮತ್ತಿನಲ್ಲಿ ಸುಮಾರು 20 ವಾಹನಗಳ ಗ್ಲಾಸ್​​ಗಳನ್ನ ಪುಡಿ ಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅನ್ನಪೂರ್ಣೇಶ್ವರಿ ನಗರದ ಮುದ್ದಿನಪಾಳ್ಯದ ಬಳಿ ಐದಾರು ವಾಹನಗಳ ಗ್ಲಾಸ್ ಗಳನ್ನ ಪುಂಡರು ಹೊಡೆದು ಹಾಕಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಎ.ಪಿ ನಗರ, ಬ್ಯಾಡರಹಳ್ಳಿ, ಮಾದನಾಯಕನಹಳ್ಳಿ ಮತ್ತು ದೊಡ್ಡಬಳ್ಳಾಪುರ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.

  • ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿ – ಎರಡು ತುಂಡಾದ ಲಾರಿ

    ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿ – ಎರಡು ತುಂಡಾದ ಲಾರಿ

    ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಲಾರಿ (Lorry) ಎರಡು ತುಂಡಾದ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.

    ರಟ್ಟಿಹಳ್ಳಿ (Rattihalli) ತಾಲ್ಲೂಕಿನ ಹಳ್ಳೂರು ಗ್ರಾಮದ ಬಳಿ ಕಬ್ಬಿಣ ತುಂಬಿದ ಡಿಕ್ಕಿಯ ರಭಸಕ್ಕೆ ಲಾರಿ ಎರಡು ಭಾಗವಾಗಿದೆ. ಎಂಜಿನ್ ಒಂದು ಕಡೆ, ಲಾರಿಯ ಹಿಂಭಾಗ ಇನ್ನೊಂದು ಕಡೆಯಾಗಿದೆ. ಲಾರಿ ಚಾಲಕ ಪ್ರಾಣಾಪಾಯಿಂದ ಪಾರಾಗಿದ್ದಾನೆ. ಇದನ್ನೂ ಓದಿ: ಪ್ರೀತಿಗೆ ಮನೆಯವರ ವಿರೋಧ – ಪ್ರೇಮಿಗಳಿಬ್ಬರು ಆತ್ಮಹತ್ಯೆ ಯತ್ನ; ಯುವತಿ ಸಾವು, ಯುವಕ ಪಾರು

    ಲಾರಿಯು ಕಬ್ಬಿಣವನ್ನ ತುಂಬಿಕೊಂಡು ಹೊನ್ನಾಳಿ ಕಡೆ ಹೊರಟ್ಟಿತ್ತು. ಆ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ರಟ್ಟಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮಲ್ಲೇಶ್ವರದಲ್ಲಿ ಬೇಕರಿಗೆ ನುಗ್ಗಿದ ಲಾರಿ – ತಪ್ಪಿದ ಭಾರೀ ದುರಂತ

    ಮಲ್ಲೇಶ್ವರದಲ್ಲಿ ಬೇಕರಿಗೆ ನುಗ್ಗಿದ ಲಾರಿ – ತಪ್ಪಿದ ಭಾರೀ ದುರಂತ

    ಬೆಂಗಳೂರು: ನಿಯಂತ್ರಣ ತಪ್ಪಿ ಲಾರಿಯೊಂದು (Lorry) ಬೇಕರಿಗೆ ನುಗ್ಗಿದ ಘಟನೆ ಮಲ್ಲೇಶ್ವರದಲ್ಲಿರುವ (Malleshwaram) ಲಿಂಕ್ ರಸ್ತೆಯಲ್ಲಿ ನಡೆದಿದೆ.

    ಬೆಳಗಿನ ಜಾವದಲ್ಲಿ ಈ ಘಟನೆ ನಡೆದಿದ್ದರಿಂದ ಅದೃಷ್ಟವಶಾತ್ ಸಾವು ನೋವು ಸಂಭವಿಸಿಲ್ಲ. ಹಗಲಿನಲ್ಲಿ ಘಟನೆ ನಡೆದಿದ್ದರೆ ಭಾರೀ ದುರಂತ ಸಂಭವಿಸುವ ಸಾಧ್ಯತೆ ಇತ್ತು.ಇದನ್ನೂ ಓದಿ: ರಾಮನನ್ನು ವಿರೋಧಿಸಿದ್ದಕ್ಕೆ ಅಧಿಕಾರ ಹೋಯ್ತು: ಭಾರತದ ಮೇಲೆ ಗೂಬೆ ಕೂರಿಸಿದ ನೇಪಾಳದ ಮಾಜಿ ಪ್ರಧಾನಿ

     

    ಬೆಳಗಿನ ಜಾವ 4:30ಕ್ಕೆ ಈ ಘಟನೆ ನಡೆದಿದೆ. ಲಾರಿ ಗುದ್ದಿದ ಪರಿಣಾಮ ಬೇಕರಿಯ ಬಾಗಿಲು ಜಖಂಗೊಂಡು ಗೋಡೆ ಹಾಳಾಗಿದೆ. ಪುಟ್‌ಪಾತ್ ಕಾಂಕ್ರಿಟ್ ಕುಸಿದಿದೆ. ಮಲ್ಲೇಶ್ವರಂ ಪೊಲೀಸರು ಲಾರಿ ಮತ್ತು ಚಾಲಕನ  ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದ್ಯಾ ಅಥವಾ ಬ್ರೇಕ್ ಫೇಲ್ ಆಗಿ ಈ ಘಟನೆ ನಡೆದಿದ್ಯಾ ಎನ್ನುವುದರ ಬಗ್ಗೆ ಈಗ ತನಿಖೆ ನಡೆಯುತ್ತಿದೆ.

  • ಕಬ್ಬಿಗಾಗಿ ಲಾರಿ ಗ್ಲಾಸ್ ಪುಡಿಗಟ್ಟಿದ ಕಾಡಾನೆ: ವಿಡಿಯೋ ವೈರಲ್

    ಕಬ್ಬಿಗಾಗಿ ಲಾರಿ ಗ್ಲಾಸ್ ಪುಡಿಗಟ್ಟಿದ ಕಾಡಾನೆ: ವಿಡಿಯೋ ವೈರಲ್

    ಚಾಮರಾಜನಗರ: ಕಬ್ಬಿಗಾಗಿ ಲಾರಿಯ ಗ್ಲಾಸನ್ನ ಕಾಡಾನೆಯೊಂದು ಪುಡಿಗಟ್ಟಿದ ಘಟನೆ ಚಾಮರಾಜನಗರ (Chamarajanagara) ತಮಿಳುನಾಡಿನ ಗಡಿ ಹಾಸನೂರು ಸಮೀಪ ಸಂಭವಿಸಿದೆ.

    ಕಬ್ಬಿಗಾಗಿ ಲಾರಿಯ ಮುಂಭಾಗದ ಗ್ಲಾಸ್ ಮೇಲೆಯೇ ಕಾಲಿಟ್ಟ ಆನೆಯ ರಂಪಾಟ ಚಾಲಕನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ದೃಶ್ಯ ಕಂಡುಬಂದಿದ್ದು ಚಾಮರಾಜನಗರ ಹಾಸನೂರು ರಸ್ತೆ ಮಾರ್ಗ ಮಧ್ಯದಲ್ಲಿ. ದಿಢೀರ್ ರಸ್ತೆಗೆ ಬಂದಂತಹ ಆನೆ ಕಬ್ಬು ತುಂಬಿದ್ದ ಲಾರಿಯನ್ನ ಅಡ್ಡಗಟ್ಟಿ ಲಾರಿಯ ಗ್ಲಾಸ್ ಮೇಲೆ ಕಾಲಿರಿಸಿದ್ದೇ ತಡ ಗ್ಲಾಸ್ ನುಜ್ಜುಗುಜ್ಜಾಗಿದೆ. ಲಾರಿ ಮುಂಭಾಗದಿಂದಲೇ ಕಬ್ಬನ್ನ ಕೆಳಗೆಳೆದಿದೆ. ಆನೆಯ ರಂಪಾಟದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  • ನೆಲಮಂಗಲದಲ್ಲಿ ಭೀಕರ ಅಪಘಾತಕ್ಕೆ ಇಬ್ಬರು ದುರ್ಮರಣ

    ನೆಲಮಂಗಲದಲ್ಲಿ ಭೀಕರ ಅಪಘಾತಕ್ಕೆ ಇಬ್ಬರು ದುರ್ಮರಣ

    ನೆಲಮಂಗಲ: ಕುರಿ, ಮೇಕೆ ತುಂಬಿದ್ದ ಲಾರಿಗೆ (Lorry) ಕೆಎಸ್‌ಆರ್‌ಟಿಸಿ ಬಸ್ (KSRTC Bus) ಡಿಕ್ಕಿಯಾಗಿ ಲಾರಿ ಚಾಲಕ ಸೇರಿ ಇಬ್ಬರು ಸಾವನ್ನಪ್ಪಿರುವ ನೆಲಮಂಗಲ ಸಂಚಾರಿ ಪೊಲೀಸ್ (Nelamangala Traffic Police) ಠಾಣಾ ವ್ಯಾಪ್ತಿಯ ಗುಂಡೇನಹಳ್ಳಿ ಬಳಿ ಘಟನೆ ನಡೆದಿದೆ.

    ಲಾರಿ ಚಾಲಕ ಸೀನಪ್ಪ (50), ನಜೀರ್ ಅಹ್ಮದ್ (36) ಮೃತರೆಂದು ಗುರುತಿಸಲಾಗಿದೆ. ಕುರಿ ಮೇಕೆ ತುಂಬಿಕೊಂಡು ಮುಧೋಳದಿಂದ ತುಮಕೂರು ಮಾರ್ಗವಾಗಿ ಬೆಂಗಳೂರು (Bengaluru) ಕಡೆಗೆ ಬರುತ್ತಿದ್ದ ಲಾರಿ ಗುಂಡೇನಹಳ್ಳಿ ಬಳಿ ಪಂಚರ್ ಆಗಿತ್ತು. ಇದನ್ನೂ ಓದಿ: ಕಾಶ್ಮೀರದಲ್ಲಿ ಮೇಘಸ್ಫೋಟ | ದುರಂತ ನಡೆದಾಗ ಸ್ಥಳದಲ್ಲಿ 1,200 ಜನ ಇದ್ದರು: ಬಿಜೆಪಿ ಶಾಸಕ ಬಾಂಬ್‌

    ಲಾರಿ ಟಯರ್ ಪಂಚರ್ ಆಗಿ ರಸ್ತೆ ಬದಿ ಟಯರ್ ಬದಲಿಸುವ ವೇಳೆ, ನಿಂತಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತೋರ್ವನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಈ ಘಟನೆಯು ನಸುಕಿನ ಜಾವ 3:30ರ ಸುಮಾರಿಗೆ ನಡೆದಿದೆ.

    ಘಟನಾಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಒಂದು ಬಸ್ಸಿನ ಹಿಂದೆ, ಇನ್ನೊಂದು ಬಸ್ಸಿನ ಮುಂಭಾಗಕ್ಕೆ ಗುದ್ದಿ ಲಾರಿ ಪಲ್ಟಿ

    ಒಂದು ಬಸ್ಸಿನ ಹಿಂದೆ, ಇನ್ನೊಂದು ಬಸ್ಸಿನ ಮುಂಭಾಗಕ್ಕೆ ಗುದ್ದಿ ಲಾರಿ ಪಲ್ಟಿ

    ಬಾಗಲಕೋಟೆ: ಚಾಲಕನ ಅಚಾತುರ್ಯದಿಂದ ಎರಡು ಬಸ್ಸುಗಳಿಗೆ ಲಾರಿ (Lorry) ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ಬಾಗಲಕೋಟೆ (Bagalkote) ತಾಲೂಕಿನ ಸಿದ್ನಾಳ್ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ರಲ್ಲಿ ನಡೆದಿದೆ.

    ಮುಧೋಳ ಮೂಲದ ಲಾರಿ ಇದಾಗಿದ್ದು, ಸುಣ್ಣದ ಕಲ್ಲು ಲೋಡ್ ತುಂಬಿಕೊಂಡು ಹುಬ್ಬಳ್ಳಿ ಕಡೆಗೆ ಹೊರಟಿತ್ತು. ಈ ವೇಳೆ ಚಾಲಕ ಅಚಾತುರ್ಯದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಬಸ್ಸಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು, ನಂತರ ವಿಜಯಪುರ ಕಡೆಗೆ ಹೊರಟಿದ್ದ ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

     

    ಎರಡು ಬಸ್ಸುಗಳಿಗೆ ಲಾರಿ ಗುದ್ದಿದ್ದರಿಂದ ನಿರ್ವಾಹನ ತಲೆಗೆ ಗಾಯವಾಗಿದ್ದು, ಲಾರಿ ಚಾಲಕನ ಕೈ ಕಾಲಿಗೆ ಗಂಭೀರ ಗಾಯವಾಗಿದೆ. ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಲಾರಿ ಚಾಲಕ ವೇಗವಾಗಿ ವಾಹನ ಚಲಾಯಿಸಿದ್ದರಿಂದ ಈ ಘಟನೆ ಸಂಭವಿಸಿದೆ.

    ಯಾವುದೇ ಪ್ರಾಣಹಾನಿ ಸಂಭವಿಸದ ಕಾರಣ ನಡೆಯಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ಬಸ್ಸಿನಲ್ಲಿದ್ದ ಸುಮಾರು ಐದಾರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾರಿಗೂ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ. ಸ್ಥಳಕ್ಕೆ ಆಗಮಿಸಿದ ಕಲಾದಗಿ ಪೊಲೀಸರು ಪರಿಶೀಲನೆ‌ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮೈಸೂರು | ಲಾರಿ ಚಲಿಸುತ್ತಿದ್ದಾಗಲೇ ಹಠಾತ್ತನೆ ಕುಸಿದ ಸೇತುವೆ

    ಮೈಸೂರು | ಲಾರಿ ಚಲಿಸುತ್ತಿದ್ದಾಗಲೇ ಹಠಾತ್ತನೆ ಕುಸಿದ ಸೇತುವೆ

    ಮೈಸೂರು: ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಲಾರಿ (Lorry) ಚಲಿಸುತ್ತಿದ್ದಾಗಲೇ ಸೇತುವೆ ಕುಸಿದುಬಿದ್ದ ಘಟನೆ ಮೈಸೂರು (Mysuru) ಜಿಲ್ಲೆ ಸರಗೂರು ತಾಲೂಕಿನ ಇಟ್ನಾ ಸಮೀಪದ ಕಬಿನಿ ಬಲದಂಡೆ ನಾಲೆ ಬಳಿ ನಡೆದಿದೆ.

    ಪುರದಕಟ್ಟೆ ಮಾರ್ಗವಾಗಿ ನಂಜನಗೂಡಿಗೆ ಭತ್ತ (Paddy) ಹೊತ್ತೊಯ್ಯುತ್ತಿದ್ದ ಲಾರಿ ಸೇತುವೆ ಮೇಲೆ ಸಾಗುತ್ತಿದ್ದಾಗಲೇ ಹಠಾತ್ ಆಗಿ ಸೇತುವೆ ಕುಸಿದಿದೆ. ಇದನ್ನೂ ಓದಿ: ಬೈಕ್‌ ಸಮೇತ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ

    ಲಾರಿಯಲ್ಲಿದ್ದ ಲೋಡರ್ಸ್ ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಬಿನಿ ಬಲದಂಡೆ ನಿರ್ಮಾಣವಾದಾಗ ಕಟ್ಟಿದ್ದ ಸೇತುವೆ ಇದ್ದಾಗಿದ್ದು ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಶಿಥಿಲಗೊಂಡಿತ್ತು. ಇದನ್ನೂ ಓದಿ: ಹಾವೇರಿ | ಕಾಡಿನಿಂದ ನಾಡಿಗೆ ಬಂದು ಮನೆಯಲ್ಲಿ ಅವಿತ ಚಿರತೆ

    ‌ಲಾರಿಯನ್ನು ಮೇಲೆತ್ತುವುದರ ಜೊತೆಗೆ ಮತ್ತೊಂದು ಲಾರಿ ಮೂಲಕ ಭತ್ತದ ಮೂಟೆಗಳನ್ನ ಕೊಂಡೊಯ್ಯಲು ಸ್ಥಳೀಯರು ನೆರವು ನೀಡಿದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ- ಸಾಕ್ಷಿದಾರನ ಪರವಾಗಿ ಬರ್ತಾರಾ 6 ಮಂದಿ ಸ್ಥಳೀಯರು?