ಬಾಲಿವುಡ್ ನಟಿ ಲಾರಾ ದತ್ತಾ (Lara Dutta) 47ನೇ ವರ್ಷದ ಹುಟ್ಟುಹಬ್ಬವನ್ನು ಪತಿ ಹಾಗೂ ಮಗಳೊಂದಿಗೆ ಸಿಂಪಲ್ ಆಗಿ ಆಚರಿಸಿದ್ದಾರೆ. ಹುಟ್ಟುಹಬ್ಬದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:13 ವರ್ಷಗಳ ಪ್ರೀತಿ- ಫಾರಿನ್ ಹುಡುಗನ ಜೊತೆ ಅರ್ಜುನ್ ಸರ್ಜಾ 2ನೇ ಪುತ್ರಿ ಎಂಗೇಜ್

ಏ.16 ಲಾರಾ ಬರ್ತ್‌ಡೇ ಈ ಹಿನ್ನೆಲೆ ಪತಿ ಮಹೇಶ್ ಭೂಪತಿ ಹಾಗೂ ಮಗಳೊಂದಿಗೆ ಕೇಕ್ ಕತ್ತರಿಸಿ ಬರ್ತ್‌ಡೇ ಆಚರಿಸಿದ್ದಾರೆ. ಹುಟ್ಟುಹಬ್ಬದ ಫೋಟೋ ಇನ್ಸ್ಟಾಗ್ರಾಂ ಶೇರ್ ಮಾಡಿ ನಟಿ ಸಂಭ್ರಮಿಸಿದ್ದಾರೆ. ನೆಚ್ಚಿನ ನಟಿಯ ಹುಟ್ಟುಹಬ್ಬಕ್ಕೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ನಿನ್ನ ಪ್ರೀತಿ, ತ್ಯಾಗ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ: ಪತ್ನಿಗೆ ನಿಖಿಲ್ ಲವ್ಲಿ ವಿಶ್
View this post on Instagram
ನೋ ಎಂಟ್ರಿ, ಜಿಂದಾ, ಡಾನ್ 2, ವೆಲ್‌ಕಮ್ ಟು ನ್ಯೂಯಾರ್ಕ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಲಾರಾ ನಟಿಸಿದ್ದಾರೆ. ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಸಿನಿಮಾದಲ್ಲಿ ಲಾರಾ ನಟಿಸುತ್ತಿದ್ದಾರೆ ಎನ್ನಲಾದ ಸುದ್ದಿ ಹರಿದಾಡುತ್ತಿದೆ. ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗುವರೆಗೂ ಕಾದುನೋಡಬೇಕಿದೆ.



ರಾಮಾಯಣದ (Ramayana Film) ಭಾಗವಾಗಲು ಯಾರು ತಾನೇ ಇಷ್ಟಪಡುವುದಿಲ್ಲ ಹೇಳಿ ಚಿತ್ರದಲ್ಲಿ ನನಗೆ ಆಫರ್ ಕೊಟ್ರರೆ ನಾನು ನಟಿಸಲು ಇಷ್ಟಪಡುವ ಅನೇಕ ಪಾತ್ರಗಳಿವೆ. ಶೂರ್ಪನಖಿ, ಮಂಡೋದರಿ, ನಾನು ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಲು ಇಷ್ಟಪಡುತ್ತೇನೆ ಎಂದು ಲಾರಾ ಹೇಳಿದ್ದಾರೆ. ಆ ಮೂಲಕ ‘ರಾಮಾಯಣ’ ಚಿತ್ರದಲ್ಲಿ ನಟಿಸುವ ಬಗ್ಗೆ ಲಾರಾ (Lara Dutta) ಯಾವುದೇ ಖಚಿತ ಮಾಹಿತಿ ನೀಡಿಲ್ಲ.