Tag: ಲಾಯರ್

  • ಲಾ ಓದ್ಬೇಡ ಎಂದಿದ್ದ ಶಾನುಭೋಗರ ಆಸ್ತಿಗೆ ನಾನೇ ಲಾಯರ್ ಆದೆ: ಸಿಎಂ

    ಲಾ ಓದ್ಬೇಡ ಎಂದಿದ್ದ ಶಾನುಭೋಗರ ಆಸ್ತಿಗೆ ನಾನೇ ಲಾಯರ್ ಆದೆ: ಸಿಎಂ

    – ನಮ್ಮ ಇಡೀ ಊರಲ್ಲಿ ಲಾಯರ್ ಆಗಿದ್ದು ನಾನೊಬ್ಬನೇ

    ಬೆಂಗಳೂರು: ಶತಶತಮಾನಗಳಿಂದ ಬಹುಸಂಖ್ಯಾತ ಜನ ಅಕ್ಷರ ಸಂಸ್ಕೃತಿಯಿಂದ ವಂಚನೆಗೊಳಗಾಗಿದ್ದಾರೆ. ನಮ್ಮ ಇಡೀ ಊರಿನಲ್ಲಿ ಲಾಯರ್ (Lawyer) ಆದವನು ನಾನು ಒಬ್ಬನೇ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಮ್ಮ ಶಿಕ್ಷಣದ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

    ಕಾಳಿದಾಸ ಹೆಲ್ತ್ ಆಂಡ್ ಎಜುಕೇಶನ್ ಟ್ರಸ್ಟ್ ವತಿಯಿಂದ ವಸಂತ ನಗರದ ದೇವರಾಜ್ ಅರಸ ಭವನದಲ್ಲಿ ನಡೆದ ಪ್ರೇರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಸಿಎಂ, ನಮ್ಮ ಊರಲ್ಲಿ ಪದವೀಧರರು ಇದ್ದರು. ಆದರೆ ಲಾಯರ್ ಆಗಿದ್ದು ನಾನೇ. ನಮ್ಮ ಅಪ್ಪ ನಮ್ಮೂರು ಶಾನುಭೋಗರ ಮಾತು ಕೇಳುತ್ತಿದ್ದರು. ನನಗೆ ಎಂಎಸ್‌ಸಿ ಸೀಟು ಸಿಗಲಿಲ್ಲ. ಆಮೇಲೆ ವ್ಯವಸಾಯ ಮಾಡುತ್ತಿದ್ದೆ. ಅದಾದ ಬಳಿಕ ಲಾ ಓದೋಕೆ ಹೋಗಿದ್ದೆ ಎಂದು ತಿಳಿಸಿದರು.

    ನಮ್ಮ ಅಪ್ಪನಿಗೆ ನಾನು ಲಾ ಮಾಡ್ತೀನಿ ಅಂತ ಹೇಳಿದ್ದೆ. ಆಗ ಅವರು ಶಾನುಭೋಗರ ಹತ್ತಿರ ಹೋಗಿ ಕೇಳಿದ್ದರು. ಆಗ ಶಾನುಭೋಗರು ಕುರುಬರು ಲಾಯರ್ ಕೆಲಸ ಮಾಡೋಕೆ ಆಗುತ್ತಾ? ಬೇಡ ಎಂದು ಹೇಳಿದ್ದರು. ಅವರ ಮಾತು ಕೇಳಿ ನಮ್ಮ ಅಪ್ಪ ನನಗೆ ಲಾಯರ್ ಮಾಡಬೇಡ ಎಂದು ಹೇಳಿದ್ರು. ಆದರೂ ಕೂಡಾ ನಾನು ಲಾಯರ್ ಓದಿದೆ. ಬಳಿಕ ಶಾನುಭೋಗರ ಆಸ್ತಿ ವಿಚಾರಕ್ಕೆ ನಾನೇ ಲಾಯರ್ ಆದೆ. ಆಗ ಶಾನುಭೋಗರು ಏನು ಮಾತಾಡದೇ ಸುಮ್ಮನೆ ಆದರು ಎಂದು ಸಿಎಂ ತಮ್ಮ ಲಾ ಜೀವನದ ಇತಿಹಾಸ ಬಿಚ್ಚಿಟ್ಟರು. ಇದನ್ನೂ ಓದಿ: ಜನವರಿಯಲ್ಲಿ ಜಾತಿಗಣತಿ ವರದಿ ಸ್ವೀಕಾರ: ಸಿದ್ದರಾಮಯ್ಯ

    ನಾನು ಎವರೇಜ್ ಸ್ಟೂಡೆಂಟ್. ಎಸ್‌ಎಸ್‌ಎಲ್‌ಸಿ ಫಸ್ಟ್ ಕ್ಲಾಸ್, ಪಿಯುಸಿ ಬಂದ ಮೇಲೆ ಸೆಕೆಂಡ್ ಕ್ಲಾಸ್. ಡಿಗ್ರಿ ಬಂದ ಮೇಲೆ ಎವರೇಜ್ ಸ್ಟೂಡೆಂಟ್ ಆಗಿದ್ದೆ. ಆದರು ನಾನು ಇವತ್ತು ಸಿಎಂ ಆಗಿದ್ದೇನೆ. ಜೀವನದಲ್ಲಿ ಶ್ರಮ ಮುಖ್ಯ ಎಂದು ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಆಡಳಿತದಲ್ಲಿ ಕರ್ನಾಟಕಕ್ಕೆ ಗ್ರಹಣ- ಬಿಜೆಪಿ ವ್ಯಂಗ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಣೆಯಾಗಿದ್ದ ಲಾಯರ್ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

    ಕಾಣೆಯಾಗಿದ್ದ ಲಾಯರ್ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆ

    ಬಾಗಲಕೋಟೆ: ಕಾಣೆಯಾಗಿದ್ದ ಲಾಯರ್ (Lawyer) ಕೊಲೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾದ ಘಟನೆ ತುಮ್ಮರಮಟ್ಟಿ (Tummaramatti) ಗ್ರಾಮದಲ್ಲಿ ನಡೆದಿದೆ.

    ಗಿರೀಶ್ ಕಾಡಣ್ಣವರ (38) ಕೊಲೆಯಾದ ಲಾಯರ್. ಬೀಳಗಿ ತಾಲೂಕು ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡುತ್ತಿದ್ದ ಗಿರೀಶ್ ಅಕ್ಟೋಬರ್ 15ರಂದು ಮನೆಯಿಂದ ನಾಪತ್ತೆಯಾಗಿದ್ದರು. ಗ್ರಾಮದ ವಾರಿ ಮಲ್ಲಯ್ಯನ ಗುಡಿ ಬೆಟ್ಟದ ಮೇಲೆ ಇವರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಪರಿಚಿತರು ಇವರ ತಲೆ ಮತ್ತು ದೇಹವನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದು, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಇದನ್ನೂ ಓದಿ: ಈಜು ಬಾರದೇ ಯುವಕ ಕೆರೆಯಲ್ಲಿ ಮುಳುಗಿ ಸಾವು

    ಕೊಲೆ ಮಾಡಿದ್ದು ಯಾರು? ಹತ್ಯೆ ಮಾಡಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಬೀಳಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಂಗಳೂರಿನ ಲೇಡಿಹಿಲ್‌ನಲ್ಲಿ ಕಾರು ಹಿಟ್ & ರನ್ – ಓರ್ವ ಯುವತಿ ಸಾವು, ನಾಲ್ವರಿಗೆ ಗಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಲವ್ ಬರ್ಡ್ಸ್’ ಗಾಗಿ ಲಾಯರ್ ಆದ ಸಂಯುಕ್ತ ಹೊರನಾಡು

    ‘ಲವ್ ಬರ್ಡ್ಸ್’ ಗಾಗಿ ಲಾಯರ್ ಆದ ಸಂಯುಕ್ತ ಹೊರನಾಡು

    ತಾರಾ ಜೋಡಿ ಡಾರ್ಲಿಂಗ್ ಕೃಷ್ಣ – ಮಿಲನ ನಾಗರಾಜ್ ನಾಯಕ-ನಾಯಕಿಯಾಗಿ ನಟಿಸಿರುವ “ಲವ್ ಬರ್ಡ್ಸ್” ಚಿತ್ರದಲ್ಲಿ ನಟಿ ಸಂಯುಕ್ತ ಹೊರನಾಡು ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರಿಗೂ ಅಂಜದ ದಿಟ್ಟ ಹುಡುಗಿಯಾಗಿ, ತೆಗೆದುಕೊಂಡ ಎಲ್ಲಾ ಕೇಸ್ ಗಳಲ್ಲೂ ಯಶಸ್ಸು ಗಳಿಸುವ ಯಶಸ್ವಿ ಲಾಯರ್ ಆಗಿ ಅಭಿನಯಿಸಿರುವ ಸಂಯುಕ್ತ ಹೊರನಾಡು ಪಾತ್ರದ ಹೆಸರು ಮಾಯಾ. ಈಕೆ  ನಾಯಕ ಹಾಗೂ ನಾಯಕಿ ದೀಪಕ್ – ಪೂಜಾ ಇಬ್ಬರಿಗೂ ಗೆಳತಿ ಕೂಡ.

    ಯಂಗ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಯುಕ್ತ ಹೊರನಾಡು ಅವರ ಪಾತ್ರಕ್ಕೆ ಸರಿಹೊಂದುವ ಕಾಸ್ಟ್ಯೂಮ್ಸ್ ಗಳನ್ನು ಬಳಸಿಕೊಳ್ಳಲಾಗಿದೆ ಹಾಗೂ ಮೊದಲ ಬಾರಿಗೆ ಸಂಯುಕ್ತ ಹೊರನಾಡು ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಬೀಚ್ ಫೋಟೋ: ದೇವರಕೊಂಡ ಕ್ಲಿಕ್ಕಿಸಿದ್ದಾ ಎಂದ ನೆಟ್ಟಿಗರು

    ಶ್ರೀಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಕಡ್ಡಿಪುಡಿ ಚಂದ್ರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಮೊದಲ ಹಾಡು ಜನವರಿ 22 ರಂದು ಬಿಡುಗಡೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಡಿದ ಮತ್ತಲ್ಲಿ ವಕೀಲನ ಹಲ್ಲು ಮುರಿಯುವಂತೆ ಹಲ್ಲೆ – ದೊಡ್ಡವರ ಮಕ್ಕಳಿಂದ ಗೂಂಡಾವರ್ತನೆ

    ಕುಡಿದ ಮತ್ತಲ್ಲಿ ವಕೀಲನ ಹಲ್ಲು ಮುರಿಯುವಂತೆ ಹಲ್ಲೆ – ದೊಡ್ಡವರ ಮಕ್ಕಳಿಂದ ಗೂಂಡಾವರ್ತನೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೆಲ ದೊಡ್ಡವರ ಮಕ್ಕಳಿಗೆ ತಲೆಯೇ ನಿಲ್ಲುವುದಿಲ್ಲ. ಕುಡಿದ ಮತ್ತಿನಲ್ಲಿ ಲಾಯರ್ ಅಂತಾ ಹೇಳಿದರೂ ಬಿಡದೇ ಮನಸೋ ಇಚ್ಚೇ ಥಳಿಸಿರುವ ಘಟನೆ ನಡೆದಿದೆ.

    ಕಳೆದ ಭಾನುವಾರ ರಾತ್ರಿ 10.30ರ ಸುಮಾರಿಗೆ ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಪೊಲೀಸ್ ಕಾರ್ನರ್ ಸರ್ಕಲ್ ಬಳಿ ಲಾಯರ್ ಪ್ರವೀಣ್ ಗೌಡ ಅವರು ಬರುತ್ತಿದ್ದರು. ಇದೇ ವೇಳೆ ಬೆಂಜ್ ಕಾರೊಂದು ಪಕ್ಕ ಬಂದು ಸಿಗ್ನಲ್‍ನಲ್ಲಿ ನಿಂತಿತು. ಕಾರಿನ ಪಕ್ಕದಲ್ಲಿ ಪಾಸ್ ಮಾಡಿಕೊಂಡು ಬೈಕ್‍ನಲ್ಲಿ ಮುಂದೆ ಹೋಗುತ್ತಿರಬೇಕಾದರೆ, ಕಾರೊಳಗಿದ್ದ ವ್ಯಕ್ತಿ ನೋಡಿಕೊಂಡು ಹೋಗೋಲೇ ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆ: ನೈಸರ್ಗಿಕ ವಿಕೋಪದಿಂದ 8 ಯಾತ್ರಾರ್ಥಿಗಳು ಸಾವು

    ಸಿಗ್ನಲ್ ಆನ್ ಆಗಿದ್ದರಿಂದ ಬೆಂಜ್ ಕಾರು ಹಿಂದೆ ವಕೀಲರು ಹೋಗುತ್ತಿರಬೇಕಾದರೆ, ಕಾರು ನಿಲ್ಲಿಸಿ ಕೆಳಗಿಳಿದು ವಕೀಲ ಪ್ರವೀಣ್ ಗೌಡ ಬಳಿಯ ಹೆಲ್ಮೆಟ್ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ. ಮುಖ, ತುಟಿ ಹಾಗೂ ತಲೆಯ ಭಾಗಕ್ಕೆ ಹಲ್ಲೆ ಮಾಡಿ, ಎಡಭಾಗದ ಭುಜಕ್ಕೆ ಆಯುಧದಿಂದ ಥಳಿಸಿದ್ದಾರೆ. ಇದನ್ನೂ ಓದಿ: ಡೋನಾಲ್ಡ್ ಟ್ರಂಪ್ ಮೊದಲ ಪತ್ನಿ ಇವಾನಾ ಟ್ರಂಪ್ ವಿಧಿವಶ

    bengaluru

    ಕಾರಿನಿಂದ ಡ್ರೈವರ್‍ನನ್ನು ಕೆಳಗಿಳಿಸಿ ಹಲ್ಲೆ ಮಾಡಿದ್ದಾರೆ. ಮುಖಕ್ಕೆ ಹೊಡೆದಿದ್ದರಿಂದ ಒಂದು ಹಲ್ಲು ಮುರಿದಿದೆ. ಹೇಗೊ ತಪ್ಪಿಸಿಕೊಂಡು ಬಂದು ಕಾರಿನ ನಂಬರ್ ನೋಟ್ ಮಾಡಿಕೊಂಡು ಹಲಸೂರು ಗೇಟ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಆದರೆ 1 ವಾರವಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿರಲಿಲ್ಲ. ಕೊನೆಗೆ ವಕೀಲರ ಸಂಘ ಎಂಟ್ರಿಯಾದಾಗ ರಾಕೇಶ್ ಹಾಗೂ ರಂಗನಾಥ್ ಎಂಬ ಇಬ್ಬರು ಕನ್ಷ್ಟ್ರಕ್ಷನ್ ಕಂಪನಿಯ ಮಾಲೀಕರನ್ನು ಅರೆಸ್ಟ್ ಮಾಡಿದ್ದಾರೆ.

    ಈ ಹಿಂದೆ ಅರೆಸ್ಟ್ ಆದ ಆರೋಪಿಗಳ ಕುಟುಂಬಸ್ಥರು ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ಪ್ರತಿಷ್ಟಿತ ಕ್ಲಬ್ ನಡೆಸುತ್ತಿದ್ದರಂತೆ.. ಮದದಲ್ಲಿ ಸ್ವೇಚ್ಛಾಚಾರಿಗಳಂತೆ ವರ್ತಿಸುವ ಇಂಥವರಿಗೆ ಕಾನೂನಿನ ಪಾಠ ಕಲಿಸಬೇಕಿದೆ. ಸದ್ಯ ಆರೋಪಿಗಳನ್ನ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ಲಾಯರ್, ಬಿ.ಸಿ.ಪಾಟೀಲ್ ಪೊಲೀಸ್: ಸದನದಲ್ಲಿ ಸ್ವಾರಸ್ಯಕರ ಚರ್ಚೆ

    ಸಿದ್ದರಾಮಯ್ಯ ಲಾಯರ್, ಬಿ.ಸಿ.ಪಾಟೀಲ್ ಪೊಲೀಸ್: ಸದನದಲ್ಲಿ ಸ್ವಾರಸ್ಯಕರ ಚರ್ಚೆ

    – ನಾನು ಸಂಡೆ ಮಂಡೆ ಲಾಯರ್: ಸಿದ್ದರಾಮಯ್ಯ

    ಬೆಂಗಳೂರು: ವಿಧಾನಸೌಧದಲ್ಲಿ ಇಂದು ಸ್ವಾರಸ್ಯಕರ ಚರ್ಚೆ ನಡೆಯಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲಾಯರ್‌ಗಿರಿ ಬಗ್ಗೆ ನಡೆದ ಚರ್ಚೆಗೆ ಇಡೀ ಸದನ ನಗೆಗಡಲಲ್ಲಿ ತೇಲಿತು. ನಾನು ಪೂರ್ಣವಾಗಿ ಲಾಯರ್ ಕೆಲಸ ಮಾಡಲಿಲ್ಲ, ಸಂಡೆ ಮಂಡೆ ಲಾಯರ್ ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ ಚರ್ಚೆಯ ದಿಕ್ಕೇ ಬದಲಾಗಿಹೋಯಿತು.

    ವಿಧಾನಸಭೆಯಲ್ಲಿ ಸಚಿವ ಸುಧಾಕರ್ ವಿಧಾನಸಭಾಧ್ಯಕ್ಷರ ಪೀಠಕ್ಕೆ ಅಗೌರವ ಮಾಡಿದ್ದಾರೆ ಎಂದು ಹಕ್ಕುಚ್ಯುತಿ ಪ್ರಸ್ತಾಪ ಮಾಡಿ ಸಿದ್ದರಾಮಯ್ಯ ಮಾತನಾಡಿದರು. ಸುಪ್ರಿಂಕೋರ್ಟ್ ತೀರ್ಪಿನಲ್ಲಿ ಹಾಗೆಂದು ಹೇಳಲಾಗಿದೆ ಎಂದು ಸುಧಾಕರ್ ಹೇಳಿದರು ಎಂಬ ಅಂಶವನ್ನು ಬಿಟ್ಟು ಸಿದ್ದರಾಮಯ್ಯ ಹಿಂದಿನ ಸುಧಾಕರ್ ಹೇಳಿಕೆಯನ್ನ ಉಲ್ಲೇಖಿಸಿದು. ಇದಕ್ಕೆ ಸಚಿವ ಡಾ. ಸುಧಾಕರ್ ಆಕ್ಷೇಪ ವ್ಯಕ್ತಪಡಿಸಿದಾಗ ಮೊದಲು ಆ ವಾಕ್ಯವೇ ನನ್ನ ಪುಟದಲ್ಲಿ ಇಲ್ಲ ಎಂದ ಸಿದ್ದರಾಮಯ್ಯ, ಬಳಿಕ ಸ್ಪೀಕರ್ ಈ ವಾಕ್ಯ ನಿಮ್ಮ ದಾಖಲೆಯಲ್ಲಿಯೂ ಇದೆ ಓದಿ ಎಂದರು. ಆಗ ಜಾಣತನ ಮೆರೆದ ಸಿದ್ದರಾಮಯ್ಯ, ವಿಧಾನಸಭೆ ಕಡತದ ದಾಖಲೆಯಲ್ಲಿ ಇಂಗ್ಲೀಷ್‍ಗೂ ಮೊದಲು ಕನ್ನಡದಲ್ಲಿ ಇದ್ದಿದ್ದರಿಂದ ತಾವು ನೋಡಲಿಲ್ಲ, ಉದ್ದೇಶಪೂರ್ವಕವಾಗಿ ಆ ಸಾಲು ಬಿಟ್ಟು ಓದಿಲ್ಲ ಎಂದರು.

    ಈ ವೇಳೆ ಜಗದೀಶ್ ಶೆಟ್ಟರ್ ಮಧ್ಯಪ್ರವೇಶ ಮಾಡಿ ನೀವು ಗುಡ್ ಲಾಯರ್ ಚೆನ್ನಾಗಿ ಡಿಫೆನ್ಸ್ ಮಾಡ್ತೀರಿ ಅಂತ ಕೆಣಕಿದರು. ಅಯ್ಯೋ ಶೆಟ್ರೆ, ನಾನು ಪೂರ್ಣ ಲಾಯರ್ ಕೆಲಸ ಮಾಡಲಿಲ್ಲ, ಸಂಡೆ ಮಂಡೆ ಲಾಯರ್ ಆಗಿದ್ದೆ. ಅರ್ಧ ರಾಜಕಾರಣ, ಅರ್ಧ ಲಾಯರ್ ಕೆಲಸ ಆಗಿತ್ತು. ಬೆಳಗ್ಗೆ ತಾಲೂಕು ಆಫೀಸ್‍ಗೆ ಹೋಗೋದು, ಮಧ್ಯಾಹ್ನ ಲಾಯರ್ ಕೆಲಸ ಮಾಡೋದು ಆಗಿತ್ತು. ನಾನು ಲಾಯರ್ ಆಗಿದ್ದಿದ್ದರೆ ಜೀವನ ಬೇರೆಯ ರೀತಿಯೇ ಆಗಿರುತ್ತಿತ್ತು ಎಂದು ಹೇಳಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.

    ಈ ನಡುವೆ ಸಂಡೆಮಂಡೆ ಲಾಯರ್ ಎಂಬ ಪದ ಬಳಕೆಗೆ ಮಾಜಿ ಸ್ಪೀಕರ್ ಬೋಪಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಲಾಯರ್ ವೃತ್ತಿ ಗೌರವಯುತ ವೃತ್ತಿ. ಹಾಗೆ ಹೇಳಬಾರದು ಎಂದರು. ಇದು ನನಗೆ ನಾನೇ ಹೇಳಿಕೊಂಡಿದ್ದು. ನಾನು ಸಂಡೆಮಂಡೆ ಲಾಯರ್ರೇ ಆಗಿದ್ದು. ಈಗ ಲಾಯರ್ ಆಗಿ ಉಳಿದಿಲ್ಲ, ಮುಖ್ಯಮಂತ್ರಿ ಆದ ಮೇಲೆ ಆ ಸನ್ನದನ್ನೇ ರದ್ದು ಮಾಡಿಸಿದ್ದೆ. ಆದರೂ ಅವರ ಖುಷಿಗಾಗಿ ಸಂಡೆ ಮಂಡೆ ಲಾಯರ್ ಎಂಬ ಶಬ್ದ ಕಡತದಿಂದ ತೆಗೆದು ಹಾಕಿ ಎಂದು ಸಿದ್ದರಾಮಯ್ಯ ಮಾಡಿದರು.

    ಇದೇ ವೇಳೆ ಬೋಪಯ್ಯ ಮಾತಿಗೆ ಬಿ.ಸಿ.ಪಾಟೀಲ್ ಧ್ವನಿಗೂಡಿಸುತ್ತಿದ್ದಾಗ ಏಯ್, ನೀನು ಲಾಯರ್ ಅಲ್ಲ. ಸುಮ್ನಿರಪ್ಪ ನೀನು ಪೊಲೀಸ್ ಅಷ್ಟೇ, ಲಾಯರ್ ಅಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಸರ್, ನಾನು ಪೊಲೀಸ್ ಆಗಿದ್ದೆ. ಆಗ ನನಗೆ ಲಾಯರ್ ಗಳ ಒಡನಾಟ ಇತ್ತು. ಸಂಡೆ ಲಾಯರ್ ಅಂತ ಮಾತ್ರ ಹೇಳುತ್ತಾರೆ. ಆದರೆ ಸಂಡೇ ಮಂಡೇ ಲಾಯರ್ ಅಂತ ಹೇಳಲ್ಲ ಎಂದು ಬಿ.ಸಿ.ಪಾಟೀಲ್ ಹೇಳಿದರು.

  • ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ನಿಂದ ಪ್ರತಿಭಟನೆ

    ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ನಿಂದ ಪ್ರತಿಭಟನೆ

    ಬೆಂಗಳೂರು: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ, ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿಯೂ ಪ್ರತಿಭಟನೆಯ ಕಿಚ್ಚು ಹೊತ್ತಿ ಕೊಂಡಿದೆ. ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಇರುವ ನಗರ ಸಿವಿಲ್ ನ್ಯಾಯಾಲಯದ ಮುಂದೆ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ನಿಂದ ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಲಾಯಿತು.

    ಪ್ರತಿಭಟನೆಯಲ್ಲಿ 50ಕ್ಕೂ ಹೆಚ್ಚು ವಕೀಲರು ಭಾಗವಹಿಸಿದ್ರು. ಈ ವೇಳೆ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಸ್ಟೇಟ್ ಅಧ್ಯಕ್ಷ ಶಂಕರಪ್ಪ ಮಾತನಾಡಿ, ಮಾನವ ಹಕ್ಕು ತಡೆ ಹಿಡಿಯಲು 144 ಸೆಕ್ಷನ್ ಜಾರಿ ಮಾಡ್ತಾರೆ. 144 ಸೆಕ್ಷನ್ ಜಾರಿ ಮಾಡೋ ಅಗತ್ಯವೇ ಇರಲಿಲ್ಲ. ಸಂವಿಧಾನ ರಚನೆ ತಕ್ಷಣ ಜನರ ಡಿವಿಷನ್ ಆಯ್ತು. ಕೇವಲ 8% ಮಾತ್ರ ಮೂಲ ವಾಸಿಗರು, ಮಿಕ್ಕವರು ವಲಸಿಗರೇ, ಅವರ ಗತಿ ಏನು ಎಂದು ಪ್ರಶ್ನಿಸಿದರು.

    ಜೊತೆಗೆ ಎನ್‍ಡಿಎ ಅವರನ್ನು ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನದಲ್ಲಿ ಇದರ ಬಗ್ಗೆ ಉಲ್ಲೇಖಿಸಿದ್ದಾರೆ. ಸಂವಿಧಾನದಕ್ಕೆ ಮೋಸ ಆಗುವ ಕಾನೂನು ಜಾರಿ ಆದರೆ ನಾವು ಬಿಡೋದಿಲ್ಲವೆಂದು ಎಚ್ಚರಿಸಿದರು.

  • ರವಿ ಬೋಪಣ್ಣನಿಗಾಗಿ ಲಾಯರ್ ಆದ್ರು ಕಿಚ್ಚ ಸುದೀಪ್!

    ರವಿ ಬೋಪಣ್ಣನಿಗಾಗಿ ಲಾಯರ್ ಆದ್ರು ಕಿಚ್ಚ ಸುದೀಪ್!

    ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಜೋಡಿಯಾಗಿ ಗುರುತಿಸಿಕೊಂಡಿರುವವರು ಸುದೀಪ್ ಮತ್ತು ರವಿಚಂದ್ರನ್. ಮಾಣಿಕ್ಯ, ಹೆಬ್ಬುಲಿ, ಅಪೂರ್ವ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದ ಇವರೀಗ ರವಿ ಬೋಪಣ್ಣ ಚಿತ್ರದಲ್ಲಿ ನಾಲ್ಕನೇ ಬಾರಿ ಒಂದಾಗುತ್ತಿದ್ದಾರೆ. ಇಂಥಾದ್ದೊಂದು ಸುದ್ದಿ ವಾರದ ಹಿಂದೆ ಜಾಹೀರಾಗಿತ್ತು. ಇದೀಗ ಈ ಚಿತ್ರದಲ್ಲಿ ಸುದೀಪ್ ಅವರ ಪಾತ್ರ ಕೂಡಾ ರಿವೀಲ್ ಆಗಿದೆ.

    ರವಿ ಬೋಪಣ್ಣ ಚಿತ್ರದಲ್ಲಿ ಸುದೀಪ್ ಲಾಯರ್ ಆಗಿ ನಟಿಸಿದ್ದಾರೆ. ತಮ್ಮ ಭಾಗದ ಚಿತ್ರೀಕರಣವನ್ನೂ ಕೂಡಾ ಮುಗಿಸಿಕೊಂಡಿದ್ದಾರೆ. ಇದು ರವಿಚಂದ್ರನ್ ನಿರ್ದೇಶನದಲ್ಲಿ ಸುದೀಪ್ ನಟಿಸುತ್ತಿರೋ ಎರಡನೇ ಚಿತ್ರ. ಈ ಹಿಂದೆ ಅಪೂರ್ವ ಚಿತ್ರದಲ್ಲಿಯೂ ಅತಿಥಿ ಪಾತ್ರದಲ್ಲಿ ಅವರು ನಟಿಸಿದ್ದರು. ಈಗ ರವಿ ಬೋಪಣ್ಣದಲ್ಲಿಯೂ ಅತಿಥಿ ಪಾತ್ರವನ್ನೇ ನಿರ್ವಹಿಸಿದ್ದಾರೆ. ಪಾತ್ರ ಚಿಕ್ಕದಿರಲಿ, ದೊಡ್ಡದೇ ಇರಲಿ… ರವಿಚಂದ್ರನ್ ನಿರ್ದೇಶನದಲ್ಲಿ ನಟಿಸೋದೇ ಖುಷಿಯ ವಿಚಾರ ಎಂಬ ಅಭಿಪ್ರಾಯವನ್ನೂ ಸುದೀಪ್ ವ್ಯಕ್ತಪಡಿಸಿದ್ದಾರೆ.

    ಇನ್ನುಳಿದಂತೆ ಸುದೀಪ್ ಪಾತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ರವಿಚಂದ್ರನ್ ಕೂಡಾ ಹಂಚಿಕೊಂಡಿದ್ದಾರೆ. ಸುದೀಪ್ ಲಾಯರ್ ಆಗಿ ಎಂಟ್ರಿ ಕೊಡೋದು ಕ್ಲೈಮ್ಯಾಕ್ಸ್‍ನಲ್ಲಂತೆ. ಹೀಗೆ ಸುದೀಪ್ ಪಾತ್ರ ಎಂಟ್ರಿ ಕೊಟ್ಟಾಗಲೇ ಚಿತ್ರದ ಕಥೆ ಮತ್ತೊಂದು ಹಂತಕ್ಕೆ ಹೋಗುತ್ತದೆ. ಸುದೀಪ್ ಪಾತ್ರದ ಚಿತ್ರೀಕರಣ ಸುಂದರ ಕನಸಿನಂತೆ ಮುಗಿದು ಹೋಗಿದೆ. ಯಾವುದೇ ಪಾತ್ರ ನೀಡಿದರೂ ಅದನ್ನು ಆವಾಹಿಸಿಕೊಂಡು ನಟಿಸೋ ಸುದೀಪ್‍ಗಾಗಿ ನಿರ್ದೇಶನ ಮಾಡೋದೇ ಖುಷಿಯ ವಿಚಾರವೆಂದೂ ರವಿಚಂದ್ರನ್ ಹೇಳಿದ್ದಾರೆ. ಈ ಚಿತ್ರದಲ್ಲಿ ಲಾಯರ್ ಆಗಿ ಕಾಣಿಸಿಕೊಂಡಿರೋ ಸುದೀಪ್ ಲುಕ್ ಕೂಡಾ ಚೆನ್ನಾಗಿದೆ. ಅದು ಅವರ ಈ ವರೆಗಿನ ವೆರೈಟಿ ಲುಕ್‍ಗಳಿಗಿಂತಲೂ ಭಿನ್ನವಾಗಿದೆ.

  • ಪರಸ್ತ್ರಿಯೊಂದಿಗಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕ್ರಿಮಿನಲ್ ಲಾಯರ್

    ಪರಸ್ತ್ರಿಯೊಂದಿಗಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕ್ರಿಮಿನಲ್ ಲಾಯರ್

    ಹೈದರಾಬಾದ್: ಮದುವೆಯಾಗಿದ್ದರೂ ವಕೀಲನೊಬ್ಬ ಪರ ಸ್ತ್ರಿಯೊಂದಿಗೆ ಸಂಬಂಧ ಹೊಂದಿದ್ದಾಗ ಆತನ ಪತ್ನಿಯೇ ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಘಟನೆ ತೆಲಂಗಾಣದ ಉಪ್ಪಾಳದಲ್ಲಿ ನಡೆದಿದೆ.

    ಕೃಷ್ಣಮಚಾರಿ ಪತ್ನಿಗೆ ಸಿಕ್ಕಿ ಬಿದ್ದ ಕ್ರಿಮಿನಲ್ ವಕೀಲ. ಕೃಷ್ಣಮಚಾರಿ 2008ರಲ್ಲಿ ವಿಂದ್ಯಾರಾಣಿಯನ್ನು ಮದುವೆಯಾಗಿದ್ದನು. ವಿಂದ್ಯಾರಾಣಿ ರಾಜಸ್ಥಾನದಲ್ಲಿ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪತಿಯಿಂದ ದೂರ ವಾಸಿಸುತ್ತಿದ್ದರು. ಆದರೆ ಪತಿಗಾಗಿ ಹಣವನ್ನು ಕಳುಹಿಸುತ್ತಿದ್ದರು.

    ಇತ್ತ ಪತಿ ಕೃಷ್ಣಮಚಾರಿ ತನ್ನ ಪತ್ನಿ ಕಳುಹಿಸಿದ ಹಣದೊಂದಿಗೆ ಅದ್ಧೂರಿ ಜೀವನಶೈಲಿ ನಡೆಸುತ್ತಿದ್ದನು. ಅಷ್ಟೇ ಅಲ್ಲದೇ ಇನ್ನೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದನು. ಇಬ್ಬರು ಓಲ್ಡ್ ರಾಮಂತಪುರದಲ್ಲಿ ಬಾಡಿಗೆ ಫ್ಲಾಟ್ ನಲ್ಲಿ ವಾಸಿಸುತ್ತಿದ್ದರು.

    ಇತ್ತ ವಿಂದ್ಯಾರಾಣಿ ಸ್ವಯಂಪ್ರೇರಿತ ರಾಜೀನಾಮೆ ಪಡೆದು ಹೈದರಾಬಾದ್ ಗೆ ಹಿಂದಿರುಗಿ ಪತಿಯೊಂದಿಗೆ ವಾಸಿಸುತ್ತಿದ್ದರು. ದಿನಕಳೆದಂತೆ ವಿಂದ್ಯಾರಾಣಿ ಅವರಿಗೆ ತಮ್ಮ ಪತಿಯ ಬೇರೆ ಮಹಿಳೆಯ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಅನುಮಾನ ಬಂದಿದೆ. ಬಳಿಕ ನಂತರ ವಿಂದ್ಯಾರಾಣಿ ತನ್ನ ಸಂಬಂಧಿಕರು ಮತ್ತು ಮಾಧ್ಯಮದ ಸಹಾಯದಿಂದ ತನ್ನ ಪತಿಯನ್ನು ಮಹಿಳೆಯ ಜೊತೆ ಇದ್ದಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಪೊಲೀಸರು ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಆಗ ಆರೋಪಿ ವಕೀಲ ಅನೇಕ ಮಹಿಳೆಯರಿಗೆ ಮದುವೆಯಾಗುತ್ತೇನೆ ಎಂದು ನಂಬಿಸಿ ಮೋಸ ಮಾಡುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮತ್ತೆ ಚಾಮುಂಡೇಶ್ವರಿ ಸೋಲಿನ ನೆನಪು ಮಾಡಿಕೊಂಡ ಮಾಜಿ ಸಿಎಂ

    ಮತ್ತೆ ಚಾಮುಂಡೇಶ್ವರಿ ಸೋಲಿನ ನೆನಪು ಮಾಡಿಕೊಂಡ ಮಾಜಿ ಸಿಎಂ

    – ಶ್ಯಾನಭೋಗರ ಮಾತು ಕೇಳಿದ್ರೆ ಸಿಎಂ ಆಗ್ತಿರಲಿಲ್ಲ ಎಂದ್ರು

    ಬೆಂಗಳೂರು: ರಾಜ್ಯ ಮುಖ್ಯಮಂತ್ರಿಯಾಗಿ ನಾನು ಜನತೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದೆ. ಆದರೆ ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನನ್ನು ಸೋಲಿಸಿದರು. ಬಹುಶಃ ವರುಣಾ ಕ್ಷೇತ್ರದಲ್ಲಿ ನಿಂತಿದ್ದರು ಕೂಡ ನೀವು ಆರ್ಶೀವಾದ ಮಾಡುತ್ತಿದ್ದಿರಿ ಎಂದು ಸುತ್ತೂರು ಜಾತ್ರ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ಪದೇ ಪದೇ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಸೋಲು ಕನವರಿಕೆ ಆಗುತ್ತಿದ್ದು, ಈ ಹಿಂದೆ ಹಲವು ವೇದಿಕೆಗಳಲ್ಲಿ ತಮ್ಮ ಸೋಲಿನ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇಂದು ಕೂಡ ತಮ್ಮ ಆರಂಭಿಕ ಜೀವನದ ಬಗ್ಗೆ ನೆನಪಿಸಿಕೊಂಡ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಸೋಲು ಕನವರಿಕೆ ಆಯಿತು. ವೇದಿಕೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದರು ಕೂಡ ಚಾಮುಂಡೇಶ್ವರಿ ಜನರು ನನ್ನನ್ನು ಸೋಲಿಸಿದರು. ಆದರೆ ದೂರದ ಎಲ್ಲೋ ಬಾದಾಮಿ ಕ್ಷೇತ್ರದ ಜನ ಗೆಲ್ಲಿಸಿದರು. ವರುಣಾ ಕ್ಷೇತ್ರದಲ್ಲಿ ನಿಂತಿದ್ದರು ಕೂಡ ನೀವು ಆಶೀರ್ವಾದ ನೀಡುತ್ತಿದ್ದಿರಿ. ಹೀಗಾಗಿ ಈ ವರುಣಾ ಕ್ಷೇತ್ರ ಹಾಗೂ ಸುತ್ತೂರು ಮಠದ ಮೇಲೆ ನಮಗೆ ಅಪಾರ ಗೌರವ ಇದೆ ಎಂದರು.

    ಇದಕ್ಕೂ ಮುನ್ನ ಆರಂಭಿಕ ಜೀವನದ ಬಗ್ಗೆ ನೆನಪಿಸಿಕೊಂಡ ಅವರು, ಊರಿನಲ್ಲಿ ಪಂಚಾಯಿತಿ ಸೇರಿಸಿ ನಾನು ಲಾಯರ್ ಓದಿದೆ. ಏಕೆಂದರೆ ನಮ್ಮಪ್ಪ ನಮ್ಮೂರಿನ ಶ್ಯಾನಬೋಗರ ಮಾತು ಕೇಳುತ್ತಿದ್ದರು. ನನ್ನ ಮಗ ಲಾಯರ್ ಓದಬೇಕು ಎಂದು ಶ್ಯಾನಬೋಗರ ಬಳಿ ಕೇಳಿದರು. ಆಗ ಆ ಶ್ಯಾನಬೋಗರು ಹೇ ಕುರುಬರು ಲಾಯರ್ ಓದಲು ಆಗುತ್ತಾ? ಲಾಯರ್ ಗಿರಿ ಏನಿದ್ರು ಬ್ರಾಹ್ಮಣರ ಕೆಲಸ ಎಂದು ಹೇಳಿದ್ದರು. ಅಂದು ಶ್ಯಾನಬೋಗರ ಮಾತು ಕೇಳಿ ನಮ್ಮಪ್ಪ ನನಗೆ ಓದಿಸೋಲ್ಲ ಎಂದಿದ್ದ. ನಾನು ಮನೆಯಲ್ಲಿ ಗಲಾಟೆ ಮಾಡಿ ಲಾಯರ್ ಓದಿಸಲಿಲ್ಲ ಅಂದರೆ ಪಾಲು ಕೊಟ್ಟು ಬಿಡು ಎಂದು ಕೇಳಿದ್ದೆ. ಆಗ ಊರಿನಲ್ಲಿ ಪಂಚಾಯಿತಿ ಸೇರಿಸಿ ಕೊನೆಗೆ ನಾನು ಲಾಯರ್ ಓದಲು ಅನುಮತಿ ನೀಡಿದರು. ಆಗ ಶ್ಯಾನಬೋಗರ ಮಾತು ಕೇಳಿದರೆ ಲಾಯರ್ ಆಗುತ್ತಿರಲಿಲ್ಲಾ ಎಂದರು. ಅಲ್ಲದೇ ಲಾಯರ್ ಓದಿದಕ್ಕೆ ಸಿಎಂ ಆದೆ ಎಂದರು.

    ಇದೇ ವೇಳೆ ಯಾರು ಕೂಡ ಕರ್ಮವನ್ನ ನಂಬಬೇಡಿ ಎಂದ ಸಿದ್ದರಾಮಯ್ಯ ಅವರು, ಈ ಜನ್ಮದಲ್ಲಿ ಹೀಗಾಗಿದ್ದೆ, ಆ ಜನ್ಮದಲ್ಲಿ ಹಾಗಾಗಿದ್ದೆ ಎಂಬುವುದನ್ನು ನಂಬಲೇಬೇಡಿ. ಅದೊಂದು ದೊಡ್ಡ ಸುಳ್ಳಿನ ಕಥೆ. ಪಾಪ ಮಾಡಿದರೆ ಕುರಿ, ಕೋಳಿ, ನಾಯಿ ಆಗುತ್ತಾರೆ ಎಂಬುವುದು ಸುಳ್ಳು. ನಾನು ನಂಬಲ್ಲ ನೀವು ನಂಬಬೇಡಿ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv