Tag: ಲಾಡ್ಲೇ ಮಶಾಕ್ ದರ್ಗಾ

  • ಕಲಬುರಗಿ | ಲಾಡ್ಲೇ ಮಶಾಕ್ ದರ್ಗಾದ ಶಿವಲಿಂಗ ಪೂಜೆಗೆ ಹಿಂದೂ ಕಾರ್ಯಕರ್ತರಿಂದ ಸಿದ್ಧತೆ

    ಕಲಬುರಗಿ | ಲಾಡ್ಲೇ ಮಶಾಕ್ ದರ್ಗಾದ ಶಿವಲಿಂಗ ಪೂಜೆಗೆ ಹಿಂದೂ ಕಾರ್ಯಕರ್ತರಿಂದ ಸಿದ್ಧತೆ

    – ಆಳಂದ ಪಟ್ಟಣದಲ್ಲಿ ನಿಷೇಧಾಜ್ಞೆ, ಬಿಗಿ ಪೊಲೀಸ್ ಬಂದೋಬಸ್ತ್

    ಕಲಬುರಗಿ: ಪ್ರತಿ ವರ್ಷ ಶಿವರಾತ್ರಿ (Shivaratri )ಬಂದ್ರೆ ಸಾಕು ಕಲಬುರಗಿಯ ವಿವಾದಿತ ಲಾಡ್ಲೇ ಮಶಾಕ್ ದರ್ಗಾ (Ladley Mashak Dargah) ಆವರಣದಲ್ಲಿರುವ ಶಿವಲಿಂಗ ಪೂಜೆ ವಿವಾದ ಜೋರಾಗುತ್ತದೆ. ಅದೇ ರೀತಿ ಈ ಬಾರಿ ಸಹ ರಾಘವ ಚೈತನ್ಯ ಶಿವಲಿಂಗ ಪೂಜೆ ವಿವಾದ ಎದಿದ್ದು ಹಿಂದೂಗಳ ಪೂಜೆಗೆ ನ್ಯಾಯಲಯ ಗ್ರೀನ್ ಸಿಗ್ನಲ್ ನೀಡಿದೆ. ಆ ಮೂಲಕ ಮಹಾ ಶಿವರಾತ್ರಿಯಂದು ರಾಘವ ಚೈತನ್ಯ ಶಿವಲಿಂಗದ ಪೂಜೆಗೆ ಹಿಂದೂಗಳು ಉತ್ಸುಕರಾಗಿದ್ದಾರೆ. ಈಗಾಗಲೇ ಪೂಜೆ ಸಲ್ಲಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

    ಸದ್ಯದಲ್ಲೇ ಇಂದು ಯಾರ‍್ಯಾರು ಪೂಜೆಗೆ ತೆರಳುತ್ತರೆ ಎನ್ನುವ ಪಟ್ಟಿ ಸಿದ್ಧಪಡಿಸಲಿದ್ದರೆ. ಬಳಿಕ ಪೂಜೆಗೆ ದರ್ಗಾಕ್ಕೆ ತೆರಳುವ 15 ಜನರ ಪಟ್ಟಿಯನ್ನು ಪೊಲೀಸರಿಗೆ ನಿಡಲಾಗುತ್ತದೆ. ಬಳಿಕ ಹಿಂದೂ ಕಾರ್ಯಕರ್ತರಿಂದ ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆ ವರೆಗೆ ಶಿವಲಿಂಗ ಪೂಜೆ (Shivalinga Pooja) ನೆರವೇರಲಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಮಹಾ ಶಿವರಾತ್ರಿ ಸಂಭ್ರಮ – ಮಧ್ಯರಾತ್ರಿಯಿಂದಲೇ ಸಾಲುಗಟ್ಟಿ ನಿಂತ ಶಿವಭಕ್ತರು

    ಆಳಂದ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ:
    ಲಾಡ್ಲೇ ಮಶಾಕ್‌ ದರ್ಗಾ ಆವರಣದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆಗೆ ಹೈಕೋರ್ಟ್ ಅವಕಾಶ ಹಿನ್ನಲೆ ಹಿಂದೂ ಕಾರ್ಯಕರ್ತರಿಂದ ಪೂಜೆ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು 163 ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಜೊತೆಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನ ನಿಯೋಜಿಸಲಾಗಿದೆ. ಇದನ್ನೂ ಓದಿ: ಕಾಡು ಮಲ್ಲೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ – ಮುಂಜಾನೆಯಿಂದಲೇ ಶಿವಲಿಂಗಕ್ಕೆ ರುದ್ರಾಭಿಷೇಕ

    ಕಳೆದ ಮೂರು ವರ್ಷಗಳಿಂದ ಕಲಬುರಗಿ ಜಿಲ್ಲೆ ಆಳಂದ ಪಟ್ಟದ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆ ಇಡೀ ರಾಜ್ಯದಲ್ಲೆ ದೊಡ್ಡ ಸಂಚಲನ ಮೂಡಿಸಿತ್ತು. ಕಳೆದ ವರ್ಷದಂತೆ ಈ ಬಾರಿ ಸಹ ದರ್ಗಾದ ಆವರಣದಲ್ಲಿರುವ ಶಿವಲಿಂಗಕ್ಕೆ ಮಹಾ ಶಿವರಾತ್ರಿಯಂದು ಪೂಜೆಗೆ ಅವಕಾಶ ಕೋರಿ ಹಿಂದೂಪರ ಸಂಘಟನೆಗಳು ನ್ಯಾಯಲಯದ ಮೊರೆ ಹೋಗಿದ್ದವು. ಆದ್ರೆ ದರ್ಗಾ ಸಮಿತಿಯವರು ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವಲಿಂಗ ಇಲ್ಲ ಪೂಜೆಗೆ ಅವಕಾಶ ಕೋಡಬಾರದು ಅಂತಾ ಅರ್ಜಿ ಸಲ್ಲಿಕೆ ಮಾಡಿದ್ದರು. ಹಿಂದೂಗಳು ಸಲ್ಲಿಸಿದ್ದ ಅರ್ಜಿ ಮತ್ತು ಲಾಡ್ಲೇ ಮಶಾಕ್ ದರ್ಗಾದವರು ಸಲ್ಲಿಸಿದ್ದ ಅರ್ಜಿಯನ್ನ ವಿಚಾರಣೆ ನಡೆಸಿದ ಕೋರ್ಟ್ ಕಮಿಟಿ ರಚಿಸಿತ್ತು. ವಿವಾದಿತ ದರ್ಗಾಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಅದ್ರಂತೆ ಕಮಿಟಿ ದರ್ಗಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿದೆ. ಇದೀಗ ಕೋರ್ಟ್ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 15 ಜನ ಹಿಂದೂಗಳಿಗೆ ಪೂಜೆ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದೆ.

    ವಿವಾದಿತ ದರ್ಗಾದಲ್ಲಿ ಹಿಂದೂಗಳು ಪೂಜೆ ಮಾತ್ರ ಸಲ್ಲಿಸಬೇಕು. ಪೂಜೆಯ ಹೊರತುಪಡಿಸಿ ಬೇರೆ ಯಾವುದೇ ಜಿರ್ಣೋದ್ಧಾರ ಕೆಲಸ ಮಾಡದಂತೆ ಕೋರ್ಟ್ ಸೂಚಿಸಿದೆ. ರಾಜಕೀಯ ನಾಯಕರನ್ನ ಕರೆದೊಯ್ದು ಪೂಜೆ ಮಾಡುವ ಬದಲು ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡುವ ಭಕ್ತರನ್ನು ಕರೆದೊಯ್ಯುವಂತೆ ಸೂಚಿಸಿದೆ. ಈ ಮಧ್ಯೆ ದರ್ಗಾದಲ್ಲಿನ ಶಿವಲಿಂಗ ಜಾಗದ ವಿಚಾರವಾಗಿ ಹಿಂದೂಗಳ ಹೋರಾಟ ಮುಂದುವರೆಯಲಿದೆ ಅಂತಾ ಆಂದೋಲಾ ಶ್ರೀ ಹೇಳಿದ್ದಾರೆ. ಇದನ್ನೂ ಓದಿ: ಶಿವರಾತ್ರಿ ವಿಶೇಷ: ಹಿಂದೂಗಳ ಆದ್ಯ ತೀರ್ಥಕ್ಷೇತ್ರ – ಮಾರಿಷಸ್‌ನ ಮಂಗಲ ಮಹಾದೇವ ಶಿವಾಲಯ!

  • ಪೊಲೀಸ್‌ ಸರ್ಪಗಾವಲು – ಆಳಂದ ದರ್ಗಾದಲ್ಲಿ ನಡೆಯಿತು ಉರುಸ್, ಶಿವಲಿಂಗ ಪೂಜೆ

    ಪೊಲೀಸ್‌ ಸರ್ಪಗಾವಲು – ಆಳಂದ ದರ್ಗಾದಲ್ಲಿ ನಡೆಯಿತು ಉರುಸ್, ಶಿವಲಿಂಗ ಪೂಜೆ

    ಕಲಬುರಗಿ: ಆಳಂದದ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿ (Ladle Mashak Dargah) ಮುಸ್ಲಿಮರು ನಿರ್ವಿಘ್ನವಾಗಿ ಉರುಸ್ (Urus) ಆಚರಿಸಿದರೆ ಹಿಂದೂಗಳು ಯಾವುದೇ ಅಡೆತಡೆ ಇಲ್ಲದೇ ಶ್ರೀರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ (Shivaratri Pooja) ಸಲ್ಲಿಸಿದ್ದಾರೆ.

    ವಕ್ಫ್ ಟ್ರಿಬ್ಯುನಲ್‌ ಕೋರ್ಟ್ ಮತ್ತು ಕಲಬುರಗಿ ಹೈಕೋರ್ಟ್ ಪೀಠ ಅನುಮತಿ ನೀಡಿದ ಹಿನ್ನಲೆಯಲ್ಲಿ ಬಿಗಿ ಭದ್ರತೆಯಲ್ಲಿ 15 ಜನರ ತಂಡ ದರ್ಗಾದಲ್ಲಿನ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ (Raghava Chaitanya Shivalinga) ಪೂಜೆ ಸಲ್ಲಿಸಿತು.

    ದರ್ಗಾಕ್ಕೆ ತೆರಳುವ ಮುನ್ನ ಆಳಂದ ಪಟ್ಟಣದ ಹೊರವಲಯದಲ್ಲಿ ಗಣಪತಿ ಪೂಜೆ, ಗಂಗಾ ಪೂಜೆ, ಮಹಾರುದ್ರಾಭಿಷೇಕ ಪೂಜೆ, ಸಹಸ್ರ ಬಿಲ್ವಾರ್ಚನೆ ಪೂಜೆ ಮತ್ತು ಮಹಾಮಂಗಳಾರತಿ ಪೂಜೆ ನೆರವೇರಿಸಲಾಯಿತು. ಶಿವರಾತ್ರಿ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಹಲವಾರು ಪೂಜಾ ಕೈಂಕರ್ಯಗಳಲ್ಲಿ ಕಡಗಂಚಿ ಶ್ರೀ, ಸಿದ್ದಲಿಂಗ ಶ್ರೀ ಸೇರಿದಂತೆ ಹಲವು ಬಿಜೆಪಿ ಶಾಸಕರು ಮತ್ತು ಮೂರು ಸಾವಿರಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು.

    ಪೂಜೆ ಕೈಂಕರ್ಯಗಳು ಮುಗಿದ ಬಳಿಕ ಕಡಗಂಚಿ ಶ್ರೀಗಳು ಮತ್ತು ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ 15 ಜನ ಹಿಂದೂಗಳ ತಂಡ ಬಿಗಿ ಭದ್ರತೆಯಲ್ಲಿ ಲಾಡ್ಲೇ ಮಶಾಕ್ ದರ್ಗಾ ಪ್ರವೇಶ ಮಾಡಿದರು. ಪ್ರತಿಯೊಬ್ಬರ ವಿಳಾಸ ಪರಿಶೀಲಿಸಿ ದರ್ಗಾ ಪ್ರವೇಶಿಸಲು ಅನುಮತಿ ನೀಡಲಾಯಿತು. ಈ ವೇಳೆ ಒಳಗಡೆ ಮೊಬೈಲ್‌ ತೆಗೆದುಕೊಂಡು ಹೋಗಲು ಅನುಮತಿ ನೀಡಿರಲಿಲ್ಲ. ಇದನ್ನೂ ಓದಿ: ಯೋಗಿಯಿಂದಲೇ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಬಿಜೆಪಿ ಪ್ಲಾನ್‌

    ಮುಸ್ಲಿಮರಿಂದ ಪ್ರಾರ್ಥನೆ:
    ಹಿಂದೂಗಳ ಪೂಜೆಗೂ ಮುನ್ನ ವಕ್ಫ್ ಟ್ರಿಬ್ಯುನಲ್ ಕೋರ್ಟ್ ಮತ್ತು ಹೈಕೋರ್ಟ್ ಪೀಠದ ತೀರ್ಪಿನಂತೆ ಬೆಳಗ್ಗೆ 8 ಗಂಟೆಗೆ 15 ಜನ ಮುಸ್ಲಿಂ ಮುಖಂಡರು ಪೊಲೀಸ್ ಬಿಗಿ ಭದ್ರತೆಯಲ್ಲಿ ಲಾಡ್ಲೇ ಮಶಾಕ್ ದರ್ಗಾಕ್ಕೆ ಆಗಮಿಸಿದರು.

     

    ಕಳೆದ ವರ್ಷ ನಡೆದ ಕೋಮು ಗಲಭೆ ಮರುಕಳಿಸದಂತೆ ಈ ಬಾರಿ ಕಲಬುರಗಿ ಜಿಲ್ಲಾ ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಂಡ ಹಿನ್ನಲೆಯಲ್ಲಿ ಎರಡು ಧರ್ಮದ ಜನ ನಿರ್ವಿಘ್ನವಾಗಿ ಲಾಡ್ಲೇ ಮಶಾಕ್ ದರ್ಗಾದಲ್ಲಿ ಪೂಜೆ ಸಲ್ಲಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k