Tag: ಲಾಡು

  • ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಶಾಸಕ ಇಕ್ಬಾಲ್‌ ಹುಸೇನ್‌ರಿಂದ 2.70 ಲಕ್ಷ ಲಡ್ಡು ವಿತರಣೆ

    ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಶಾಸಕ ಇಕ್ಬಾಲ್‌ ಹುಸೇನ್‌ರಿಂದ 2.70 ಲಕ್ಷ ಲಡ್ಡು ವಿತರಣೆ

    ರಾಮನಗರ: 77ನೇ ಸ್ವಾತಂತ್ರ್ಯೋತ್ಸವ (77th Independence Day) ಸಂಭ್ರಮದ ಭಾಗವಾಗಿ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ (Iqbal Hussain) ಅವರು 2.70 ಲಕ್ಷ ಲಡ್ಡು ವಿತರಣೆ ಮಾಡಲಿದ್ದಾರೆ.

    ಆ.15 (ಮಂಗಳವಾರ) ಸ್ವತಂತ್ರ ದಿನಾಚರಣೆ ಆಚರಿಸಲು ದೇಶ ಸಜ್ಜಾಗಿದೆ. ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮಿಸುವ ಉದ್ದೇಶದಿಂದ ಲಾಡು ವಿತರಣೆಗೆ ಇಕ್ಬಾಲ್‌ ಹುಸೇನ್‌ ಅವರು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ 5 ತಾಲ್ಲೂಕಿನ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ಲಡ್ಡು ಹಂಚಿಕೆ ಮಾಡಲಿದ್ದಾರೆ. ಇದನ್ನೂ ಓದಿ: 10,000 ಪೊಲೀಸರು.. ಆ್ಯಂಟಿ ಡ್ರೋನ್‌ ಸಿಸ್ಟಮ್‌, ಅತ್ಯಾಧುನಿಕ ಕ್ಯಾಮೆರಾ – ಸ್ವಾತಂತ್ರ್ಯೋತ್ಸವಕ್ಕೆ ಕೆಂಪು ಕೋಟೆಯಲ್ಲಿ ಬಿಗಿ ಭದ್ರತೆ

    ರಾಮನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬರೋಬ್ಬರಿ 2,70,000 ಲಡ್ಡು ತಯಾರಿ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಲಾಡು ಹಂಚಿಕೆ ಮಾಡಲಾಗುವುದು.

    100 ಮಂದಿ ನುರಿತ ಬಾಣಸಿಗರು ಲಡ್ಡು ತಯಾರಿಸಿದ್ದಾರೆ. ಸ್ವತಂತ್ರ ದಿನದಂದು ಹಂಚಲು ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲಾ ಶಾಲೆಗಳಿಗೂ ಲಡ್ಡು ನೀಡಲಾಗುವುದು. ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಲಡ್ಡು ಹಂಚಿಕೆ ಕಾರ್ಯ ನಡೆಯಲಿದೆ. ಇದನ್ನೂ ಓದಿ: ಬೆಂ-ಮೈ ಎಕ್ಸ್‌ಪ್ರೆಸ್ ವೇನಲ್ಲಿ ರಾತ್ರಿ ವೇಳೆ ವಾಹನ ನಿಲ್ಲಿಸಿದ್ರೆ ಬರ್ತಾರೆ ದರೋಡೆಕೋರರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಡಲೆ ಹಿಟ್ಟಿನಿಂದ ಬಜ್ಜಿ ಮಾತ್ರವಲ್ಲ, ರುಚಿಯಾದ ಲಾಡು ಮಾಡಿ!

    ಕಡಲೆ ಹಿಟ್ಟಿನಿಂದ ಬಜ್ಜಿ ಮಾತ್ರವಲ್ಲ, ರುಚಿಯಾದ ಲಾಡು ಮಾಡಿ!

    ಡಲೆ ಹಿಟ್ಟಿನಿಂದ ಬಜ್ಜಿಯನ್ನು ತಯಾರಿಸಿ ಗೊತ್ತಿದೆ. ಆದರೆ ಕಡಲೆ ಹಿಟ್ಟಿನಿಂದ ಸಿಹಿಯಾದ ತಿಂಡಿಯನ್ನು ತಯಾರಿಸಬಹುದು. ಯಾವುದೇ ವಿಶೇಷ ದಿನ ಅಥವಾ ಹಬ್ಬದ ಸಂದರ್ಭದಲ್ಲಿ ರುಚಿಯಾಗಿ ಏನಾದರೂ ತಿನ್ನಬೇಕು. ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ ಅನ್ನಿಸುತ್ತಿರುತ್ತದೆ. ಹೀಗಾಗಿ ನೀವು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಎಂದು ತಯಾರಿಸುವ ಲಾಡು ಮಾಡಿ, ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಕಡಲೆ ಹಿಟ್ಟು- 3 ಕಪ್
    * ಎಳ್ಳು – 4-5 ಚಮಚ
    * ತೆಂಗಿನ ತುರಿ -1 ಕಪ್
    * ಬೆಲ್ಲ-2 ಕಪ್
    * ತುಪ್ಪ- ಅರ್ಧ ಕಪ್
    * ಗೋಡಂಬಿ- ಸ್ವಲ್ಪ ಇದನ್ನೂ ಓದಿ:  ಬಿಸ್ಕೆಟ್ ನಿಂದ ತಯಾರಿಸಿ ಸಿಹಿಯಾದ ಬರ್ಫಿ

    ಮಾಡುವ ವಿಧಾನ:
    *  ಪಾತ್ರೆಗೆ ಕಡಲೆ ಹಿಟ್ಟನ್ನು ಹಾಕಿ, ಅದಕ್ಕೆ ಸ್ವಲ್ಪ ನೀರು ಸೇರಿಸಿ ಕಲೆಸಿ, ಮಿಶ್ರಣ ತಯಾರಿಸಿಕೊಳ್ಳಬೇಕು.
    * ನಂತರ ತವಾಗೆ ತುಪ್ಪ ಹಾಕಿ ಬಿಸಿಯಾದಾಗ ಅದರಲ್ಲಿ ಕಡಲೆ ಹಿಟ್ಟು ಹಾಕಿ ಫ್ರೈ ಮಾಡಿ. ಬಳಿಕ ಇದೇ ರೀತಿ ಎಳ್ಳು ಮತ್ತು ತೆಂಗಿನ ತುರಿ ಹಾಕಿ ಫ್ರೈ ಮಾಡಿಕೊಳ್ಳಬೇಕು. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ನಂತರ ಉಳಿದ ತುಪ್ಪವನ್ನು ಪ್ಯಾನ್‍ಗೆ ಹಾಕಿ 2 ನಿಮಿಷ ಬಿಸಿ ಮಾಡಿ. ಬಳಿಕ ಅದಕ್ಕೆ ಸ್ವಲ್ಪ ಬೆಲ್ಲ ಹಾಕಿ ಬೆಲ್ಲ ಕರಗುವಷ್ಟು ಹೊತ್ತು ಬಿಸಿ ಮಾಡಿ. ಫ್ರೈ ಮಾಡಿಟ್ಟ ಹಿಟ್ಟು, ಎಳ್ಳು ಮತ್ತು ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ


    * ಕೈಗೆ ತುಪ್ಪ ಸವರಿಕೊಂಡು ಆ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆ ಕಟ್ಟಿದರೆ ಲಾಡು ಸಿದ್ಧವಾಗುತ್ತದೆ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

  • ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಲಾಡು ದರ ಏರಿಕೆ

    ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಲಾಡು ದರ ಏರಿಕೆ

    ಚಾಮರಾಜನಗರ: ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದ ಲಾಡು ದರದಲ್ಲಿ ಏರಿಕೆ ಮಾಡಲಾಗಿದೆ.

    100 ಗ್ರಾಂ ಲಾಡುಗೆ ಇಂದಿನಿಂದ 25 ರೂಪಾಯಿ ಮಾಡಿದ್ದು, ಈ ಹಿಂದೆ 100 ಗ್ರಾಂ ಲಾಡು ಬೆಲೆ 20 ರೂ. ಇತ್ತು. ಲಾಡು ತಯಾರಿಕಾ ವೆಚ್ಚ ಹಾಗೂ ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ 5 ರೂಪಾಯಿ ಏರಿಕೆ ಮಾಡಲಾಗಿದೆ.

    ರಾಜ್ಯದಲ್ಲಿಯೇ ಅತಿ ಹೆಚ್ಚು ಆದಾಯ ತಂದು ಕೊಡುವ ದೇಗುಲಗಳ ಪೈಕಿ 2ನೇ ಸ್ಥಾನವನ್ನು ಹನೂರಿನ ಮಲೆ ಮಹದೇಶ್ವರ ಬೆಟ್ಟ ಪಡೆದುಕೊಂಡಿದೆ. ಅತಿ ಹೆಚ್ಚು ಭಕ್ತರನ್ನು ಹೊಂದಿರುವ ಮಾದಪ್ಪನ ಸನ್ನಿಧಿಯಲ್ಲಿ ಸಿಗುವ ಲಾಡು ದರವನ್ನು 2015 ರಿಂದಲೂ ಏರಿಕೆ ಮಾಡಿರಲಿಲ್ಲ. ಲಾಡು ತಯಾರಿಕೆಯ ಕಚ್ಚಾ ವಸ್ತು ಬೆಲೆ ಏರಿಕೆ, ನೌಕರರ ಸಂಬಳ ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ ಎಂದು ದೇವಸ್ಥಾನದ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿದರು.

  • ಮಹದೇಶ್ವರ ಬೆಟ್ಟದಲ್ಲಿ ಲಾಡು ಮಾರಾಟದಿಂದ 1.50 ಕೋಟಿ ಆದಾಯ

    ಮಹದೇಶ್ವರ ಬೆಟ್ಟದಲ್ಲಿ ಲಾಡು ಮಾರಾಟದಿಂದ 1.50 ಕೋಟಿ ಆದಾಯ

    ಚಾಮರಾಜನಗರ: ಪ್ರತಿ ತಿಂಗಳು ಹುಂಡಿಯಲ್ಲಿ ಕೋಟಿ ಕೋಟಿ ಆದಾಯ ಗಳಿಸುತ್ತಿರುವ ಮಲೆ ಮಹದೇಶ್ವರನಿಗೆ ಈ ಬಾರಿಯ ಶಿವರಾತ್ರಿಯ ಜಾತ್ರೆಯಲ್ಲಿ ಲಾಡು ಮಾರಾಟದಿಂದಲೂ ಒಂದು ಕೋಟಿ ರೂಪಾಯಿಗೂ ಹೆಚ್ಚು ಆದಾಯ ಬಂದಿದೆ.

    ಈ ಬಾರಿಯ ಶಿವರಾತ್ರಿ ಜಾತ್ರೆಯಲ್ಲಿ ವಿವಿಧ ಸೇವೆಗಳು ಸೇರಿದಂತೆ 6 ಲಕ್ಷದ 20 ಸಾವಿರದ ಐದುನೂರು (6,20,500) ಲಾಡುಗಳು ಖರ್ಚಾಗಿವೆ. ಕೌಂಟರ್‌ಗಳಲ್ಲೇ ಐದು ಲಕ್ಷದ ಎರಡೂವರೆ ಸಾವಿರ ಲಾಡು ಮಾರಾಟವಾಗಿದೆ.

    ಇದರಿಂದ ಈ ಬಾರಿ ಲಾಡು ಮಾರಾಟದಿಂದ ಒಂದು ಕೋಟಿ ಐವತ್ತು ಸಾವಿರ ರೂಪಾಯಿ (1.50 ಕೋಟಿ) ಆದಾಯ ಬಂದಿದೆ ಎಂದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿದ್ದಾರೆ.

    ಜಾತ್ರೆಯ ವಿಶೇಷವಾಗಿ ಈ ಬಾರಿ ತಯಾರಿಸಿದ್ದ ಲಾಡುಗಳಲ್ಲಿ ವಿವಿಧ ಸೇವೆಗಳನ್ನು ಮಾಡಿಸಿದವರಿಗೆ 23,000 ಸಾವಿರ ಲಾಡುಗಳನ್ನು ಹಾಗೂ ಉತ್ಸವ ಮಾಡಿಸಿದವರಿಗೆ 65 ಸಾವಿರ ಲಾಡುಗಳನ್ನು ಪ್ರಸಾದವಾಗಿ ನೀಡಲಾಗಿದೆ.

  • ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು – ನೌಕರರಿಗೆ ರಜೆ ಇಲ್ಲ

    ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡು – ನೌಕರರಿಗೆ ರಜೆ ಇಲ್ಲ

    – ಭಕ್ತರ ವಿತರಣೆಗೆ 7.5 ಲಕ್ಷ ಲಾಡು ತಯಾರಿ

    ಚಾಮರಾಜನಗರ: ಜಿಲ್ಲೆಯಲ್ಲಿ ಕೆಎಸ್ಆರ್‌ಟಿಸಿ ಬಸ್ ಸೇವೆ ಅಬಾಧಿತವಾಗಿದೆ. ತಮ್ಮನ್ನೂ ಸಹ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಕೆಎಸ್ಆರ್‌ಟಿಸಿ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಚಾಮರಾಜನಗರ ಜಿಲ್ಲೆಯಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಎಂದಿನಂತೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದು ಕೆಎಸ್ಆರ್‌ಟಿಸಿ ಬಸ್‍ಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.

    ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ ಇರುವುದರಿಂದ ಜಿಲ್ಲೆಯಲ್ಲಿ ಕೆಎಸ್ಆರ್‌ಟಿಸಿಯ ಯಾವುದೇ ನೌಕರರಿಗೆ ರಜೆ ನೀಡಿಲ್ಲ. ಗೈರು ಹಾಜರಾದರೆ ನೋ ವರ್ಕ್ ನೋ ವೇಜಸ್ ಎಂದು ಎಚ್ಚರಿಕೆ ನೀಡಲಾಗಿದೆ. ಚಾಮರಾಜನಗರ ವಿಭಾಗದಲ್ಲಿ ಒಟ್ಟು ನಾಲ್ಕು ಡಿಪೋಗಳಿದ್ದು 557 ಬಸ್‍ಗಳಿವೆ 1800ಕ್ಕೂ ಹೆಚ್ಚು ಮಂದಿ ನೌಕರರಿದ್ದು ಜಿಲ್ಲೆಯಲ್ಲಿ ಬಸ್ ಸೇವೆ ಅಬಾಧಿತವಾಗಿದೆ.

    ಇನ್ನೂ ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡೆ ಹರಿದು ಬಂದಿದೆ. ಬರುವ ಭಕ್ತಾಧಿಗಳಿಗೆ ಪ್ರಾಧಿಕಾರದಿಂದ ಲಾಡು ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ಮೂರು ದಿನದಲ್ಲಿ 2.10 ಲಕ್ಷ ಲಾಡು ಮಾರಾಟವಾಗಿದ್ದು, ಇನ್ನೂ 3.5 ಲಕ್ಷ ಲಾಡು ಸ್ಟಾಕ್ ಇದೆ. ಇಂದಿನಿಂದ 24ರವರೆಗೆ ಪ್ರತಿದಿನ 40,000 ಲಾಡುಗಳು ತಯಾರಾಗಲಿದ್ದು, 2 ಲಕ್ಷ ಲಾಡು ತಯಾರಾಗಲಿವೆ.

    ಅಂದರೆ ಒಟ್ಟಾರೆ ಈ ಬಾರಿ ಶಿವರಾತ್ರಿ ವೇಳೆ 7.5 ಲಕ್ಷ ಲಾಡು ವಿತರಣೆಗೆ ಸಿದ್ಧತೆ ನಡೆದಿದೆ. ಲಾಡುವಿನ ಕೊರತೆ ಉಂಟಾಗಬಾರದೆಂದು ಲಾಡು ತಯಾರಿಕೆ ಇಂದು ಕೂಡ ಮುಂದುವರಿದಿದೆ ಎಂದು ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ಜಯ ವಿಭವ ಸ್ವಾಮಿ ಮಾಹಿತಿ ನೀಡಿದ್ದಾರೆ.

  • ವೈಕುಂಠ ಏಕಾದಶಿಗೆ ಯಲಹಂಕದಲ್ಲಿ 2 ಲಕ್ಷ ಲಾಡು ತಯಾರು

    ವೈಕುಂಠ ಏಕಾದಶಿಗೆ ಯಲಹಂಕದಲ್ಲಿ 2 ಲಕ್ಷ ಲಾಡು ತಯಾರು

    – 27 ವರ್ಷದಿಂದ ಸತತ ಲಾಡು ತಯಾರಿಕೆ

    ಬೆಂಗಳೂರು: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಯಲಹಂಕದಲ್ಲಿ 2 ಲಕ್ಷ ಲಾಡುಗಳನ್ನು ತಯಾರು ಮಾಡಲಾಗಿದ್ದು, ಬೆಂಗಳೂರಿನ ಅನೇಕ ದೇವಾಲಯಗಳಿಗೆ ತಲುಪಿಸು ಸಿದ್ಧತೆ ನಡೆದಿದೆ.

    ಅರ್ನ ಸೇವಾ ಟ್ರಸ್ಟ್ ವತಿಯಿಂದ ಕೇಶವ ರಾಜಣ್ಣ ನೇತೃತ್ವದಲ್ಲಿ ಲಾಡುಗಳನ್ನ ತಯಾರು ಮಾಡಲಾಗಿದೆ. ಬೆಂಗಳೂರಿನ ಕೆಲವು ದೇವಾಲಯಗಳಿಗೆ ಇವರೇ ಹೋಗಿ ದೇವಾಲಯದಲ್ಲಿ ಹಂಚಿ ಬರುತ್ತಾರೆ. ಜೊತೆಗೆ ಬೆಂಗಳೂರು ಸುತ್ತಮುತ್ತಲಿನ ವೆಂಕಟೇಶ್ವರ ದೇವಾಲಯದ ಯಾರೇ ಕರೆ ಮಾಡಿ ಲಾಡು ಬೇಕು ಅಂದ್ರು ಅವರಿಗೆ ತಲುಪಿಸುವ ಕೆಲಸವನ್ನ ಮಾಡಲಾಗುತ್ತಿದೆ.

    ದೇವಾಲಯದ ಯಾರಾದರೂ ಕಾಲ್ ಮಾಡಿ ದೇವಾಲಯದ ವಿಳಾಸ ಹೇಳಿದರೆ ಅರ್ನ ಸೇವಾ ಟ್ರಸ್ಟ್ ನವರೇ ಕಳುಹಿಸಿಕೊಡುತ್ತಾರೆ. ಇಲ್ಲವೇ ದೇವಾಲಯದವರೇ ಬಂದು ಲಾಡುಗಳನ್ನು ತೆಗೆದುಕೊಂಡು ಹೋಗಬಹುದು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಅರ್ನ ಸೇವಾ ಟ್ರಸ್ಟ್ ಸದಸ್ಯರೊಬ್ಬರು, ಎಲ್ಲಾ ಲಾಡುಗಳನ್ನ ಹಲವು ವರ್ಷಗಳಿಂದ ಉಚಿತವಾಗಿ ವಿತರಣೆ ಮಾಡುತ್ತಲೇ ಬಂದಿದ್ದೇವೆ. ಈ ಬಾರಿ ಚಿತ್ರನಟಿ ಸುಧಾರಾಣಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಭಾನುವಾರ ಯಲಹಂಕ ಉಪನಗರದ ದಕ್ಷಿಣ ಕನ್ನಡ ವಿಶ್ವ ಬ್ರಾಹ್ಮಣ ಸಂಘದ ಮೈದಾನದ ಆವರಣದಲ್ಲಿ ನಡೆಯಲಿದೆ. ಯಾರಿಗೆ ಲಾಡುಗಳು ಬೇಕೋ ಅವರು ಒಂದು ಕರೆ ಲಾಡುಗಳನ್ನ ಉಚಿತವಾಗಿ ಪಡೆಯಬಹುದು ಎಂದು ತಿಳಿಸಿದ್ದಾರೆ.

  • ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಅದ್ಧೂರಿ ಸಿದ್ಧತೆ – 50 ಸಾವಿರ ಲಾಡು ತಯಾರಿ

    ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಅದ್ಧೂರಿ ಸಿದ್ಧತೆ – 50 ಸಾವಿರ ಲಾಡು ತಯಾರಿ

    ಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾ ಬಿಡುಗಡೆಗೆ ಒಂದು ದಿನದ ಮುನ್ನವೇ ರಾಜ್ಯದೆಲ್ಲಡೆ ಅಭಿಮಾನಿಗಳು ತಯಾರಿ ನಡೆಸಿದ್ದಾರೆ. ಅದರಲ್ಲೂ ಮಂಡ್ಯದಲ್ಲಿ ಕುರುಕ್ಷೇತ್ರಕ್ಕೆ ಸ್ವಾಗತ ಮಾಡಲು ಭರದ ಸಿದ್ಧತೆಗಳು ನಡೆಸಲಾಗುತ್ತಿದೆ.

    ನಾಳೆ ಬಹು ನಿರೀಕ್ಷಿತ ಕುರುಕ್ಷೇತ್ರ ಸಿನೆಮಾ ಬಿಡುಗಡೆ ಹಿನ್ನೆಲೆ, ಮಂಡ್ಯದಲ್ಲಿ ಚಿತ್ರದ ಬಿಡುಗಡೆಯನ್ನು ಹಬ್ಬದಂತೆ ಆಚರಿಸಲು ಸಿದ್ಧತೆ ನಡೆಸಲಾಗಿದೆ. ಇಂಡುವಾಳು ಸಚ್ಚಿದಾನಂದ ಹಿತೈಷಿಗಳ ಬಳಗದ ವತಿಯಿಂದ ಹಲವು ಕಾಯಕ್ರಮಗಳನ್ನು ಆಯೋಜಿಸಲಾಗಿದೆ.

    ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ನೂರಾರು ಅಭಿಮಾನಿಗಳಿಂದ ಸಾಮೂಹಿಕ ರಕ್ತದಾನ, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನೂರು ಕ್ವಿಂಟಾಲ್ ಅಕ್ಕಿ ತಲುಪಿಸಲು ನಿರ್ಧಾರ ಮಾಡಲಾಗಿದೆ. ಅಲ್ಲದೇ ಸಿನೆಮಾ ಪ್ರದರ್ಶನಕ್ಕೂ ಮುನ್ನ ಮಂಡ್ಯದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಕೂಡ ನಡೆಯಲಿದೆ. ಈ ಮೆರವಣಿಗೆಯಲ್ಲಿ 50 ಜೋಡೆತ್ತು, 50 ಆಟೋ, 50 ಟ್ರ್ಯಾಕ್ಟರ್ ಹಾಗೂ 500 ಬೈಕ್ ಸೇರಿದಂತೆ 50 ಬಗೆಯ ಜಾನಪದ ಕಲಾತಂಡಗಳು ಭಾಗಿಯಾಗಲಿದೆ.

    ಕುರುಕ್ಷೇತ್ರ ಬಿಡುಗಡೆಯಾಗಲಿರುವ ಚಿತ್ರ ಮಂದಿರದ ಮುಂಭಾಗ 50 ಅಡಿ ಉದ್ದದ ದರ್ಶನ್ ಕಟೌಟನ್ನು ನಿಲ್ಲಿಸಲಾಗುತ್ತದೆ. ವಿಶೇಷವಾಗಿ ಸಿನಿಆಮ ಪ್ರದರ್ಶನದ ವೇಳೆ ಅಭಿಮಾನಿಗಳಿಗೆ ಹಂಚಲು ಸುಮಾರು 50 ಸಾವಿರ ಲಾಡುಗಳನ್ನ ತಯಾರಿಸಲಾಗುತ್ತಿದೆ.

    ಸಿನೆಮಾ ಕನ್ನಡದೊಂದಿಗೆ ಬೇರೆ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಕೆಲ ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿಯಿಂದಲೇ ಪ್ರದರ್ಶನ ಆರಂಭವಾಗಲಿದೆ ಎಂಬ ಮಾಹಿತಿ ಇದ್ದು, ಈಗಾಗಲೇ ಆನ್ ಲೈನ್ ನಲ್ಲಿ 4 ದಿನಗಳ ಪ್ರದರ್ಶನಗಳು ಬಹುತೇಕ ಫುಲ್ ಆಗಿದೆ. ಬಹು ತಾರಾಗಣವನ್ನು ಹೊಂದಿರುವ ಸಿನಿಮಾವನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

  • ಮೈಸೂರಿನ ವಿವಿಧ ದೇವಾಲಯಗಳಲ್ಲಿಂದು ವಿಶೇಷ ಪೂಜೆ- ಭಕ್ತಾದಿಗಳಿಗೆ 2 ಲಕ್ಷ ಲಾಡು ವಿತರಣೆ

    ಮೈಸೂರಿನ ವಿವಿಧ ದೇವಾಲಯಗಳಲ್ಲಿಂದು ವಿಶೇಷ ಪೂಜೆ- ಭಕ್ತಾದಿಗಳಿಗೆ 2 ಲಕ್ಷ ಲಾಡು ವಿತರಣೆ

    ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಹೊಸ ವರ್ಷಕ್ಕೆ ವಿಭಿನ್ನ ರೀತಿಯ ಸ್ವಾಗತ ಕೋರಿದ್ದು, ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

    ಚಾಮುಂಡಿ ಬೆಟ್ಟ ಸೇರಿದಂತೆ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡುತ್ತಿದ್ದು, ಮೈಸೂರಿನ ಯೋಗ ನರಸಿಂಹ ಸ್ವಾಮಿ ದೇವಾಲಯದಿಂದ ಭಕ್ತರಿಗೆ ಲಾಡು ವಿತರಣೆ ಮಾಡುತ್ತಿದ್ದಾರೆ. ದೇವಾಲಯ ಭಕ್ತಾದಿಗಳಿಗೆ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸುಮಾರು ಎರಡು ಲಕ್ಷ ಲಾಡು ವಿತರಿಸುತ್ತಿದೆ.

    ಮೈಸೂರಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರುತ್ತಿದ್ದು, ದೇವಾಲಯಗಳಲ್ಲಿ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನು ಅರಮನೆಯಂತೂ ಬೆಳಕಿನ ಚಿತ್ತಾರದಿಂದ ಕಂಗೊಳಿಸುತ್ತಿದ್ದು, ವಿವಿಧ ಬಣ್ಣದ ಬೆಳಕಿನ ಚಿತ್ತಾರ ನಯನ ಮನೋಹರವಾಗಿತ್ತು. ಪ್ಯಾಲೇಸ್ ಮೇಲಿಂದ ಸಿಡಿದ ಸಿಡಿಮದ್ದು ನೋಡುಗರ ಮತ್ತು ಪ್ರವಾಸಿಗರ ಕಣ್ಮನ ಸೆಳೆಯಿತು.

    ಹೊಸ ವರ್ಷದ ಪ್ರಯುಕ್ತ ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶುಭಾಶಯ ಕೋರಿದ್ದು, ಎಲ್ಲರಿಗೂ ಆಂಗ್ಲ ನೂತನ ಸಂವತ್ಸರದ ಹಾರ್ದಿಕ ಶುಭಾಶಯಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.