Tag: ಲಾಜ್ಜ್

  • ಬೆಂಗಳೂರು ಲಾಡ್ಜ್​ನಲ್ಲಿ ಕತ್ತು ಕೊಯ್ದು ಮಹಿಳೆಯ ಬರ್ಬರ ಕೊಲೆ!

    ಬೆಂಗಳೂರು ಲಾಡ್ಜ್​ನಲ್ಲಿ ಕತ್ತು ಕೊಯ್ದು ಮಹಿಳೆಯ ಬರ್ಬರ ಕೊಲೆ!

    ಬೆಂಗಳೂರು: ಲಾಡ್ಜ್‌ವೊಂದರಲ್ಲಿ ಕತ್ತುಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ರೇಣುಕಾ(31) ಕೊಲೆಯಾದ ಮಹಿಳೆ. ಮೆಜೆಸ್ಟಿಕ್‍ನಲ್ಲಿರುವ ಸೂರ್ಯ ನೆಸ್ಟ್ ಹೊಟೇಲ್‍ನಲ್ಲಿ ಈ ಭಯಾನಕ ಘಟನೆ ನಡೆದಿದೆ. ಸೋಮವಾರ ಶಂಕರ ಮತ್ತು ರೇಣುಕಾ ದಂಪತಿ ಎಂದು ಹೇಳಿಕೊಂಡು ರೂಮ್ ಬುಕ್ ಮಾಡಿದ್ದರು. ಸೋಮವಾರದಂದು ಹೊರಗಿನಿಂದ ರೂಮ್‍ನ ಬಾಗಿಲು ಲಾಕ್ ಮಾಡಿಕೊಂಡು ಪತಿರಾಯ ಹೊರಗಡೆ ಹೋದವನು ವಾಪಸ್ ಹೋಟೆಲ್‍ಗೆ ಬಂದಿರಲಿಲ್ಲ. ಆದರೆ ಮಂಗಳವಾರ ರೂಮ್ ನಿಂದ ಕೆಟ್ಟ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಹೊಟೇಲ್ ಸಿಬ್ಬಂದಿ ಬಾಗಿಲು ತೆಗೆದು ಪರಿಶೀಲಿಸಿದ ವೇಳೆ ಮಹಿಳೆಯ ಕೊಲೆ ಆಗಿರುವ ಸಂಗತಿ ಬೆಳಕಿಗೆ ಬಂದಿದೆ.

    ಮೃತದೇಹವನ್ನು ಕಂಡು ಗಾಬರಿಯಾದ ಹೊಟೇಲ್ ಮಾಲಿಕರು ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಗಂಡನೇ ಕೊಲೆ ಮಾಡಿ ಹೋಗಿರಬಹುದು ಶಂಕೆ ವ್ಯಕ್ತವಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡ ಉಪ್ಪಾರಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv