Tag: ಲಾಕ್ ಅಪ್

  • ಮಕ್ಕಳಾದ್ಮೇಲೆ ಮದ್ವೆ ಆಗೋಣ : ಕಂಗನಾ ರಣಾವತ್ ಶೋನಲ್ಲಿ ಭಾವುಕ ಮಾತು

    ಮಕ್ಕಳಾದ್ಮೇಲೆ ಮದ್ವೆ ಆಗೋಣ : ಕಂಗನಾ ರಣಾವತ್ ಶೋನಲ್ಲಿ ಭಾವುಕ ಮಾತು

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ನಡೆಸಿಕೊಡುವ ಶೋನಲ್ಲಿ ಏನೆಲ್ಲ ಆವಾಂತರಗಳು ನಡೆಯುತ್ತಿವೆ. ಪೂನಂ ಪಾಂಡೆ ಸೇರಿದಂತೆ ಹಲವು ಕಲಾವಿದರು ನಾಲಿಗೆಗೆ ಫಿಲ್ಟರ್ ಇಲ್ಲದೇ ಮಾತನಾಡುತ್ತಿದ್ದಾರೆ. ಪೂನಂ ಈ ಹಿಂದೆ ಟಾಪ್ ಲೆಸ್ ಆಗಿ ನಿಲ್ಲುತ್ತೇನೆ ಎಂದು ಹೇಳಿಕೆ ನೀಡಿ, ಅದರಂತೆ ನಡೆದುಕೊಂಡರು. ತಮ್ಮ ಅನೈತಿಕ ಸಂಬಂಧ, ತಮಗಾದ ಮೋಸ, ಬಾಯ್ ಫ್ರೆಂಡ್, ಗರ್ಲ್ ಫೆಂಡ್ ಹೀಗೆ ಏನೇನೋ ನೆನಪುಗಳು ಈ ಶೋನಲ್ಲಿ ಬರುತ್ತಲೇ ಇರುತ್ತವೆ. ಈ ಬಾರಿ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿ ಆಯಿತು ಲಾಕ್ ಅಪ್ ಶೋ. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ: ಅಜಯ್ ದೇವಗನ್ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ

    ನಟಿ ಪಾಯಲ್ ರೊಹಟಗಿ ಮಾತನಾಡುತ್ತಾ, ‘ತಮಗೆ ಮಕ್ಕಳು ಆಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ನನ್ನ ಬಾಯ್ ಫ್ರೆಂಡ್ ಸಂಗ್ರಾಮ್ ಗೆ ಮಕ್ಕಳೆಂದರೆ ತುಂಬಾ ಪ್ರೀತಿ. ಐವಿಎಫ್ ಮಾಡಿಸಿರುವುದು ಫೇಲ್ ಆಯಿತು. ಹಾಗಾಗಿ ನಾವು ಇನ್ನೂ ಮದುವೆ ಆಗಿಲ್ಲ. ಮಕ್ಕಳಾದ ಮೇಲೆಯೇ ಮದುವೆ ಆಗೋಣ ಅಂತ ತೀರ್ಮಾನಿಸಿದೆ. ಅಲ್ಲದೇ, ಮಕ್ಕಳಾಗುವ ಹುಡುಗಿಯೊಂದಿಗೆ ಮದುವೆಯಾಗು ಅಂತ ಸಂಗ್ರಾಮ್ ಗೆ ಹೇಳಿರುವೆ’ ಎಂದು ಹೇಳುವ ಮೂಲಕ ಇಡೀ ಶೋ ಅನ್ನು ಭಾವುಕ ಪ್ರಪಂಚಕ್ಕೆ ಕರೆದುಕೊಂಡು ಹೋದರು. ಇದನ್ನೂ ಓದಿ: ರಾಷ್ಟ್ರ ಭಾಷೆ ಹಿಂದಿ : ಸುದೀಪ್ ಸರಣಿ ಟ್ವಿಟ್ ಗೆ ತಪ್ಪಾಗಿ ತಿಳ್ಕೊಂಡಿದ್ದೆ ಎಂದ ಅಜಯ್ ದೇವಗನ್

    ತನ್ನ ಪ್ರೇಮಿಗಾಗಿ ಹುಡುಗಿಯೊಬ್ಬಳು ಏನು ಬೇಕಾದರೂ ತ್ಯಾಗಕ್ಕೆ ಸಿದ್ಧಳಾಗಿರುತ್ತಾಳೆ ಎಂದು ಮತ್ತೆ ಮಾತು ಮುಂದುವರಿಸಿದ ರೊಹಟಗಿ ‘ಸಂಗ್ರಾಮ್ ಗೆ ಮಕ್ಕಳ ಜತೆ ಹೇಗೆ ಇರುತ್ತಾರೆ ಎನ್ನುವುದನ್ನು ನಾನು ಬಲ್ಲೆ. ಅವರೊಂದಿಗೆ ಮಕ್ಕಳು ಸದಾ ಇರಬೇಕು ಎಂದು ಬಯಸುತ್ತಾರೆ. ಆದರೆ, ನನ್ನಿಂದ ಅದು ಸಾಧ್ಯವಾಗುತ್ತಿಲ್ಲ. ಆ ನೋವಿನೊಂದಿಗೆ ನಾನು ಇರಲಾರೆ. ಈ ಶೋ ಮೂಲಕವೂ ಅವರನ್ನು ಕೇಳಿಕೊಳ್ಳುತ್ತೇನೆ. ಮತ್ತೊಂದು ಹುಡುಗಿಯನ್ನು ನೋಡಿಕೊಂಡು ಖುಷಿಯಾಗಿರಿ’ ಎಂದು ರೊಹಟಗಿ ಮನವಿ ಮಾಡಿದ್ದಾರೆ. ಇದನ್ನೂ ಓದಿ : ನಟ ಶಾರುಖ್ ಖಾನ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಿದ ಗುಜರಾತ್ ಹೈಕೋರ್ಟ್

    ಈ ಶೋ ಕುರಿತು ಪ್ರತಿಕ್ರಿಯೆ ನೀಡಿರುವ ಸಂಗ್ರಾಮ್ ‘ಅವಳು ಮತ್ತು ನಾನು ಈಗ ಹೇಗಿದ್ದೆವೋ ಹಾಗೆ ಇರುವುದಕ್ಕೆ ಬಯಸುತ್ತೇವೆ. ಇನ್ನೊಂದು ಮದ್ವೆ ಆಗುವುದು ಮತ್ತು ಹುಡುಗಿಯನ್ನು ನೋಡುವುದನ್ನು ನನ್ನಿಂದ ಕೇಳುವುದಕ್ಕೂ ಆಗುವುದಿಲ್ಲ. ಮಕ್ಕಳಾಗದಿದ್ದರೆ ಏನಾಯಿತು? ನಾವೇ ಮಕ್ಕಳಂತೆ ಇರೋಣ’ ಎಂದಿದ್ದಾರೆ.

  • 11ನೇ ವಯಸ್ಸಲ್ಲೇ ಕಂಗನಾ ರಣಾವತ್ ಮೇಲೆ ದೌರ್ಜನ್ಯ: ಕರಾಳ ಸತ್ಯ ಬಿಚ್ಚಿಟ್ಟ ಬಿಟೌನ್ ಬೆಡಗಿ

    11ನೇ ವಯಸ್ಸಲ್ಲೇ ಕಂಗನಾ ರಣಾವತ್ ಮೇಲೆ ದೌರ್ಜನ್ಯ: ಕರಾಳ ಸತ್ಯ ಬಿಚ್ಚಿಟ್ಟ ಬಿಟೌನ್ ಬೆಡಗಿ

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ನಡೆಸಿಕೊಡುವ ಲಾಕ್ ಅಪ್ ರಿಯಾಲಿಟಿ ಶೋ ನಾನಾ ಮುಖಗಳನ್ನು ತೆರೆದಿಡುತ್ತಿದೆ. ತಮ್ಮ ಮೇಲೆ ಆದ ದೌರ್ಜನ್ಯ, ತಮಗಾದ ಅನ್ಯಾಯ, ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳು ಹೀಗೆ ಒಂದೊಂದೇ ವಿಷಯಗಳು ಈ ಶೋನಿಂದಾಗಿ ಆಚೆ ಬರುತ್ತಿವೆ. ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ

    ಪೂನಂ ಪಾಂಡೆ, ಮನ್ವರ್ ಫರೂಕಿ ಸೇರಿದಂತೆ ಅನೇಕ ಕಲಾವಿದರು ತಮ್ಮ ಮೇಲೆ ಆದ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಈಗ ಸ್ವತಃ ಕಂಗನಾ ರಣಾವತ್ ಅವರೇ ತಮ್ಮ 11ನೇ ವಯಸ್ಸಿನಲ್ಲಿ ತಮ್ಮ ಮೇಲೆ ಆದ ದೌರ್ಜನ್ಯದ ಕುರಿತು ಮಾತನಾಡಿದ್ದಾರೆ. ಇಂತಹ ಅನುಭವಗಳನ್ನು ಬಹಿರಂಗವಾಗಿ ಹೇಳಿಕೊಳ್ಳದೇ ಇದ್ದರೆ, ದೌರ್ಜನ್ಯ ನಡೆಯುತ್ತಲೇ ಇರುತ್ತವೆ ಎಂದಿದ್ದಾರೆ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ

    ನಿನ್ನೆ ನಡೆದ ಎಪಿಸೋಡ್ ನಲ್ಲಿ ಮನ್ವರ್ ಫರೂಕಿ ತಮ್ಮ ಮೇಲೆ ಚಿಕ್ಕ ವಯಸ್ಸಿನಲ್ಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದರು. ಆ ಹಿಂಸೆಯ ರೂಪವನ್ನು ಹೇಳಿಕೊಂಡರು. ಮೊದ ಮೊದಲು ಅದೇನು ಅಂತ ತಿಳಿಯುತ್ತಲೇ ಇರಲಿಲ್ಲ. ದೊಡ್ಡವನಾದ ಮೇಲೆ ಅದರ ಬಗ್ಗೆ ಅರಿವಾಯಿತು. ಸಿಡಿದೆದ್ದೆ ಸುಮ್ಮನಾದರು ಎಂದು ಹೇಳಿಕೊಂಡರು. ಈ ಸಮಯದಲ್ಲಿ ತಮ್ಮ ಮೇಲೂ ನಡೆದ ಲೈಂಗಿಕ ದೌರ್ಜನ್ಯದ ನರಕವನ್ನು ಬಿಚ್ಚಿಟ್ಟರು ಕಂಗನಾ. ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ

    ಆಗ ಕಂಗನಾ ಅವರಿಗೆ 11ರ ವಯಸ್ಸು. ಅವರಿಗಿಂತ ಮೂರ್ನಾಲ್ಕು ವರ್ಷ ಜಾಸ್ತಿ ಇದ್ದ ಹುಡುಗನು ಕಂಗಾನ ಅವರ ಬಟ್ಟೆಬಿಚ್ಚಿಸುತ್ತಿದ್ದನಂತೆ. ಅವನು ಹಾಗೆ ಮಾಡುತ್ತಿದ್ದಾನೆ ಎಂದು ಆಗ ಅರಿಯದ ವಯಸ್ಸು. ಅವನಿಗೆ ಲೈಂಗಿಕ ಸಮಸ್ಯೆ ಇರಬೇಕು ಎಂದು ಆಮೇಲೆ ಅವರಿಗೆ ಗೊತ್ತಾಯಿತಂತೆ. ಈ ವಿಷಯವನ್ನು ಶೋನಲ್ಲಿ ಕಂಗನಾ ಹೇಳಿಕೊಂಡರು.

  • ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ನಡೆಸಿಕೊಡುವ ಲಾಕ್ ಅಪ್ ರಿಯಾಲಿಟಿ ಶೋನಲ್ಲಿ ನಟಿ ಮಂದಾನಾ ಕರೀಮಿ ಮಾತನಾಡುತ್ತಾ, ತಾವು ಪತಿಯಿಂದ ದೂರವಾದ ನಂತರ ಸಾಂತ್ವಾನ ಹೇಳುವಂತೆ ನಟಿಸಿ ಖ್ಯಾತ ನಿರ್ದೇಶಕರೊಬ್ಬರು ತಮ್ಮನ್ನು ಬಳಸಿಕೊಂಡು, ಬೀಸಾಕಿದರು ಎಂದು ಹೇಳಿಕೆ ನೀಡಿದ್ದರು. ಮಂದಾನಾ ಮತ್ತು ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ತುಂಬಾ ಕ್ಲೋಸ್ ಆಗಿದ್ದು, ನಂತರ ದೂರ ದೂರವಾಗಿದ್ದರಿಂದ ಆ ನಿರ್ದೇಶಕ ಅನುರಾಗ್ ಕಶ್ಯಪ್ ಎಂದೇ ಬಿಂಬಿಸಲಾಯಿತು. ಸೋಷಿಯಲ್ ಮೀಡಿಯಾ ಸೇರಿದಂತೆ ಹಲವರು ಅನುರಾಗ್ ಕಶ್ಯಪ್ ಅವರತ್ತು ಬೊಟ್ಟು ಮಾಡಿ ತೋರಿಸಿದ್ದರು. ಇದೀಗ ಮಂದಾನಾ ಮಾತಿಗೆ ಟ್ವಿಸ್ಟ್ ಸಿಕ್ಕಿದೆ. ಇದನ್ನೂ ಓದಿ : ಗಮನ ಸೆಳೆದ ‘ಒಂದಂಕೆ ಕಾಡು’ ಮೋಷನ್ ಪೋಸ್ಟರ್

    ಲಾಕ್ ಅಪ್ ಶೋ ನಿಂದ ಎಲಿಮಿನೇಟ್ ಆಗಿ ಆಚೆ ಬಂದಿರುವ ಮಂದಾನಾ ಕರೀಮಿ ಈ ಕುರಿತಾಗಿ ಮಾತನಾಡಿದ್ದಾರೆ. ತಮಗೆ ಅನ್ಯಾಯ ಆಗಿದ್ದು ಹೇಗೆ? ಆ ನಿರ್ದೇಶಕ ಇವರೊಂದಿಗೆ ಹೇಗೆ ಸಂಬಂಧ ಹೊಂದಿದ. ಯಾಕೆ ದೂರವಾದ ಎನ್ನುವ ಎಲ್ಲ ಮಾಹಿತಿಯನ್ನೂ ಆಚೆ ಹಾಕಿದ್ದಾರೆ. ಈ ಮೂಲಕ ಮತ್ತೊಂದು ವಿವಾದಕ್ಕೂ ಅವರು ಕಾರಣವಾಗಿದ್ದಾರೆ.  ಇದನ್ನೂ ಓದಿ : Love…ಲಿ ಅಂತಿದ್ದಾರೆ ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸಿಂಹ: ಚಿಟ್ಟೆ ನ್ಯೂ ಲುಕ್‌ ಹೇಗಿದೆ ಗೊತ್ತಾ?

    ಮಂದಾನಾ ಕರೀಮಿ ಅವರು ಗೌರವ್ ಗುಪ್ತಾ ಎನ್ನುವವರ ಜತೆ ಮದುವೆ ಆಗಿದ್ದರು. ಈ ಜೋಡಿ ತುಂಬಾ ದಿನಗಳ ಕಾಲ ಸತಿಪತಿಗಳಾಗಿ ಉಳಿಯಲಿಲ್ಲ. ಮಂದಾನಾ ನಿರ್ವಹಿಸುತ್ತಿದ್ದ ಪಾತ್ರಗಳು ಪತಿ ಇಷ್ಟವಾಗುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಮತ್ತು ವೈಯಕ್ತಿಕ ಹಲವು ಕಾರಣಗಳಿಂದಾಗಿ ಇಬ್ಬರೂ ದೂರವಾದರು. ಪತಿಯು ದೂರವಾದ ನಂತರ ಮಂದಾನಾ ಮಾನಸಿಕ ಖಿನ್ನತೆಗೂ ಒಳಗಾದರು. ಈ ಸಂದರ್ಭದಲ್ಲಿ ಅವರಿಗೆ ನೆರವಿಗೆ ಬಂದಿದ್ದು ಬಾಲಿವುಡ್ ನ ಖ್ಯಾತ ನಿರ್ದೇಶಕ. ಇದನ್ನೂ ಓದಿ:`ಅದ್ದೂರಿ ಲವರ್’ಗಾಗಿ `ಕಿಸ್’ ಹೀರೋ ವಿರಾಟ್ ಭರ್ಜರಿ ವರ್ಕೌಟ್

    ಲಾಕ್ ಅಪ್ ಶೋನಿಂದ ಆಚೆ ಬಂದ ನಂತರ ಮಂದಾನಾ ಅವರಿಗೆ ಆ ನಿರ್ದೇಶಕರು ಯಾರು? ಅನುರಾಗ್ ಕಶ್ಯಪ್ ಹೆಸರು ತಳುಕು ಹಾಕಿಕೊಂಡಿದೆ. ಅದು ನಿಜನಾ? ಎಂದು ಪ್ರಶ್ನೆ ಕೇಳಿದ್ದಕ್ಕೆ ಗರಂ ಆಗಿದ್ದಾರೆ. ತಾವು ಯಾವತ್ತೂ ಅನುರಾಗ್ ಅವರ ಹೆಸರನ್ನು ಹೇಳಿಲ್ಲ. ಶೋನಲ್ಲೂ ಆ ನಿರ್ದೇಶಕರು ಯಾರು ಎಂದೂ ಹೇಳಿರಲಿಲ್ಲ. ಸುಖಾಸುಮ್ಮನೆ ಅವರು ಹೆಸರನ್ನು ಈ ವಿವಾದಕ್ಕೆ ತಳುಕು ಹಾಕುವುದು ಬೇಡ ಎಂದು ಗರಂ ಆಗಿಯೇ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ:ನಿಮ್ಮ ಹೃದಯವೇ ನನ್ನ ಸಾಮ್ರಾಜ್ಯ: ಅಭಿಮಾನಿಗಳಿಗೆ ಸುಂದರ ಕಥೆ ಹೇಳಿದ ರಾಕಿಭಾಯ್

    ತಮಗೆ ನಿರ್ದೇಶಕನೊಬ್ಬನಿಂದ ಅನ್ಯಾಯವಾಗಿದ್ದು ನಿಜ ಎಂದು ಒಪ್ಪಿಕೊಂಡಿರುವ ಅವರು, ಆ ನಿರ್ದೇಶಕ ಯಾರು ಎನ್ನುವುದನ್ನು ಹೇಳಲಾರೆ ಅಂದಿದ್ದಾರೆ. ಲಾಕ್ ಅಪ್ ಶೋನ ಫಾರ್ಮೆಟ್ ಹಾಗಿದ್ದರಿಂದ ಅನಿವಾರ್ಯವಾಗಿಯೇ ಈ ವಿಷಯವನ್ನು ಪ್ರಸ್ತಾಪ ಮಾಡಲಾಯಿತು. ನಾನು ಯಾವತ್ತೂ ಅನುರಾಗ್ ಕಶ್ಯಪ್ ಅವರ ಹೆಸರನ್ನು ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಉತ್ತರಿಸಿದ್ದಾರೆ ಮಂದಾನಾ.

  • ಕ್ಯಾಮೆರಾ ಮುಂದೆ ಟೀ ಶರ್ಟ್ ಬಿಚ್ಚಿ ಮಾತು ಉಳಿಸಿಕೊಂಡ ಪೂನಂ

    ಕ್ಯಾಮೆರಾ ಮುಂದೆ ಟೀ ಶರ್ಟ್ ಬಿಚ್ಚಿ ಮಾತು ಉಳಿಸಿಕೊಂಡ ಪೂನಂ

    ಲಾಕಪ್ ರಿಯಾಲಿಟಿ ಶೋನಲ್ಲಿ ತಮ್ಮನ್ನು ವೋಟು ಮಾಡುವ ಮೂಲಕ ಮನೆಯಲ್ಲೇ ಉಳಿಯುವಂತೆ ಮಾಡಿದರೆ, ವೀಕ್ಷಕರಿಗೆ ಸರ್ ಪ್ರೈಸ್ ಕಾದಿದೆ ಎಂದಿದ್ದರು ಬಾಲಿವುಡ್ ನ ವಿವಾದಿತ ತಾರೆ ಪೂನಂ ಪಾಂಡೆ. ತಾವು ಈ ಶೋನಿಂದ ಬಚಾವ್ ಆದರೆ, ಕ್ಯಾಮೆರಾ ಮುಂದೆ ಟೀ ಶರ್ಟ್ ಬಿಚ್ಚುವುದಾಗಿ ಮಾತು ಕೊಟ್ಟಿದ್ದರು. ಸಹ ಸ್ಪರ್ಧಿಗಳು ಈಕೆ ಸುಳ್ಳು ಹೇಳುತ್ತಾಳೆ. ಕಂಡಿತಾ ಆ ಕೆಲಸವನ್ನು ಮಾಡಲಾರಳು ಎಂದು ಜರಿದಿದ್ದರು. ಆದರೆ, ಪೂನಂ ಹಾಗೆ ಮಾಡಲಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ತಾವು ಎಲಿಮಿನೇಷನ್ ಆಗದೇ ಮತ್ತೆ ಮನೆಯಲ್ಲೇ ಮುಂದುವರೆದಿದ್ದರಿಂದ ಕ್ಯಾಮೆರಾ ಮುಂದೆ ಬಂದು ಟೀ ಶರ್ಟ್ ಬಿಚ್ಚಿದ್ದಾರೆ. ಅದು ಲೈವ್ ಕ್ಯಾಮೆರಾ ಮುಂದೆಯೇ ಈ ಘಟನೆ ನಡೆದು ಹೋಗಿದೆ. ಇದನ್ನೂ ಓದಿ : ಸಂಜನಾ ತಲೆ ಬೋಳಿಸಿಕೊಂಡಿದ್ದು ಸುಳ್ಳೇ ಸುಳ್ಳು : ಭಾವನೆಗಳ ಜೊತೆ ಆಟವಾಡಿದ ನಟಿಗೆ ಕ್ಲಾಸ್ ತಗೆದುಕೊಂಡ ನೆಟ್ಟಿಗರು

    ಬಹುತೇಕ ವಿವಾದಿತ ತಾರೆಯರನ್ನೇ ಜೈಲಿನಲ್ಲಿಟ್ಟು ನಡೆಯುತ್ತಿರುವ ಕಾರ್ಯಕ್ರಮ ಇದಾಗಿದೆ. ಈ ಶೋ ಅನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ಪೂನಂ ಸೇರಿದಂತೆ ಬಹುತೇಕ ಸ್ಪರ್ಧಿಗಳು ಒಂದಿಲ್ಲೊಂದು ರೀತಿಯಲ್ಲಿ ಮನೆಯಲ್ಲೇ ವಿವಾದಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಎಲಿಮಿನೇಷನ್ ನಿಂದ ಬಚಾವ್ ಆಗಲು ಸ್ಪರ್ಧಿಗಳು ಯಾರಿಗೂ ಗೊತ್ತಿರದ ಸಂಗತಿಗಳನ್ನು ಹೇಳಿಕೊಳ್ಳಬೇಕು. ಅಥವಾ ವೀಕ್ಷಕರನ್ನು ಮೋಡಿ ಮಾಡಿ ವೋಟು ಪಡೆದುಕೊಳ್ಳಬೇಕು ಎಂಬ ನಿಯಮವಿದೆ. ಅದನ್ನು ಸದುಪಯೋಗ ಪಡಿಸಿಕೊಂಡಿರುವ ಪೂನಂ, ಈ ಹಿಂದೆ ಲೈವ್ ಕ್ಯಾಮೆರಾ ಮುಂದೆಯೇ ಬಂದು ಟೀ ಶರ್ಟ್ ಬಿಚ್ಚುತ್ತೇನೆ. ನನಗೆ ವೋಟು ಮಾಡಿ ಉಳಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

    ಟೀ ಶರ್ಟ್ ಬಿಚ್ಚುವ ಮುನ್ನ ‘ಈ ಕಾರ್ಯಕ್ರಮವನ್ನು ಎಲ್ಲ ವಯೋಮಾನದವರು ನೋಡುತ್ತಾರೆ ಎನ್ನುವುದನ್ನು ಬಲ್ಲೆ. ಹಾಗಾಗಿ ನಾನು ಕಾರ್ಯಕ್ರಮದ ಯಾವ ನಿಯಮವನ್ನು ಉಲ್ಲಂಘಿಸುವುದಿಲ್ಲ. ಯಾರಿಗೂ ಮುಜಗರ ಪಡುವಂತ ಕೆಲಸವನ್ನೂ ಮಾಡುವುದಿಲ್ಲ. ಈ ನಡುವೆಯೇ ನಾನು ಕೊಟ್ಟ ಭರವಸೆಯನ್ನು ಈಡೇರಿಸಬೇಕಿದೆ. ಹಾಗಾಗಿ ಟೀ ಶರ್ಟ್ ಬಿಚ್ಚುತ್ತೇನೆ’ ಎಂದು ಹೇಳಿ ಕೆಲವೇ ಸೆಕೆಂಡ್ ಗಳಲ್ಲಿ ಟೀ ಶರ್ಟ್ ಬಿಚ್ಚಿ ಅಚ್ಚರಿ ಮೂಡಿಸುತ್ತಾರೆ ಪೂನಂ.

    ಇದರ ಜತೆಗೆ ತಾವು ಕಾರ್ಯಕ್ರಮದಿಂದ ಆಚೆ ಬಂದಾಗ ಇನ್ನೂ ಸರ್ ಪ್ರೈಸ್ ಗಳು ಕಾದಿರುತ್ತವೆ. ಸದ್ಯ ಇತಿಮಿತಿಯಲ್ಲೇ ನಾನು ನಿಮ್ಮೆಲ್ಲರ ಆಸೆ ಪೂರೈಸಿದ್ದೇನೆ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ ಪೂನಂ.

  • ಕಂಗನಾ ರಣಾವತ್ ಶೋನಲ್ಲಿ ಕರ್ಮ ಕರ್ಮ : ಶರ್ಟ್ ಬಿಚ್ಚಿತೀನಿ ಅಂದ ಮಾದಕ ನಟಿ ಪೂನಂ

    ಕಂಗನಾ ರಣಾವತ್ ಶೋನಲ್ಲಿ ಕರ್ಮ ಕರ್ಮ : ಶರ್ಟ್ ಬಿಚ್ಚಿತೀನಿ ಅಂದ ಮಾದಕ ನಟಿ ಪೂನಂ

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ನಡೆಸಿಕೊಡುವ ಶೋನಲ್ಲಿ ಏನೆಲ್ಲ ಅದ್ವಾನುಗಳು ನಡೆಯುತ್ತಿವೆ. ಸೆನ್ಸಾರ್ ಇಲ್ಲದೇ ಮಾತನಾಡುವ ನಟ ನಟಿಯರೇ ಆ ಶೋನಲ್ಲಿ ತುಂಬಿ ಹೋಗಿದ್ದರಿಂದ, ಫಿಲ್ಟರ್ ಇಲ್ಲದ ಡೈಲಾಗ್ ಕೇಳಿಸಿಕೊಳ್ಳಬಹುದಾಗಿದೆ. ಈ ಕಾರಣದಿಂದಾಗಿಯೇ ಶೋ ಕೂಡ ದಿನದಿಂದ ದಿನಕ್ಕೆ ಪಡ್ಡೆಗಳ ಬಿಸಿಯುಸಿರು ಹೆಚ್ಚಿಸುತ್ತಿದೆ. ಇದನ್ನೂ ಓದಿ : ಸಿನಿಮಾ ಶೀರ್ಷಿಕೆ ಮೂಲಕ ಅಪ್ಪುನ ನೆನಪಿಸಿಕೊಂಡ ಗೋಲ್ಡನ್ ಸ್ಟಾರ್ : ಗಣಿ-ಗುಬ್ಬಿ ಕಾಂಬಿನೇಷನ್ ಚಿತ್ರಕ್ಕೆ ‘ಬಾನದಾರಿಯಲ್ಲಿ’ ಟೈಟಲ್

    ಈಗಾಗಲೇ ಪೂನಂ ಪಾಂಡೆ ಈ ಶೋನಲ್ಲಿ ಮಾಡಿಕೊಂಡ ರಾದ್ಧಾಂತ ಒಂದೆರಡಲ್ಲ. ಸ್ವತಃ ತಮ್ಮ ಮಾಜಿ ಪತಿಯ ವಿರುದ್ಧ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಖಾಸಗಿ ಸಂಗತಿಗಳನ್ನು ಮುಲಾಜಿಲ್ಲದೇ ಹೇಳಿಕೊಂಡಿದ್ದಾರೆ. ಮತ್ತೊಂದು ಬಾರಿ ಅಸಹ್ಯ ಎನಿಸುವಂತಹ ಮಧ್ಯೆ ಬೆರಳು ತೋರಿಸಿ ವಿವಾದ ಮಾಡಿಕೊಂಡರು. ಈಗ ಇನ್ನೊಂದು ಕೆಲಸಕ್ಕೆ ಮುಂದಾಗಿದ್ದಾರೆ. ಅದು ಕ್ಯಾಮೆರಾ ಮುಂದೆಯೇ ಶರ್ಟ್ ಬಿಚ್ಚುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಜುಲೈ 28ರಂದು ಗುಮ್ಮನ ಕಥೆ – ಯುಗಾದಿ ದಿನ ಡಬಲ್ ಖುಷಿ ಕೊಟ್ಟ ‘ವಿಕ್ರಾಂತ್ ರೋಣ’ ಟೀಮ್

    ಪೂನಂ ಪಾಂಡೆ ಆ ಶೋನ ಎಲಿಮಿನೇಷನ್ ರೌಂಡ್ ನಲ್ಲಿದ್ದಾರೆ. ಹೀಗೆ ಎಲಿಮಿನೇಷನ್ ಆದವರು, ತಮ್ಮ ಜೀವನದಲ್ಲಿ ನಡೆದ ಘಟನೆಯನ್ನು, ಅದೂ ಯಾರಿಗೂ ಗೊತ್ತಿರದ ಸಂಗತಿಯನ್ನು ಹೇಳಿಕೊಂಡು ಬಚಾವ್ ಆಗಬಹುದು. ಅಥವಾ ಪ್ರೇಕ್ಷಕರಿಂದ ಬೇರೆ ರೀತಿಯಲ್ಲಿ ವೋಟು ಪಡೆದುಕೊಂಡು, ಅತೀ ಹೆಚ್ಚು ವೋಟು ಬಂದರೆ ಉಳಿದುಕೊಳ್ಳಬಹುದು. ಪೂನಂ ಆಯ್ಕೆ ಮಾಡಿಕೊಂಡಿದ್ದು ಜನರ ಹತ್ತಿರ ವೋಟು ಕೇಳುವುದನ್ನು. ಇದನ್ನೂ ಓದಿ: ಏ. 2 ರಂದು ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ : ತೆಲುಗಿನಲ್ಲಿ ಚಿರಂಜೀವಿ, ಮಲಯಾಳಂನಲ್ಲಿ ಮೋಹನ್ ಲಾಲ್

    ಕ್ಯಾಮೆರಾ ಮುಂದೆಯೇ ಬಂದ ಪೂನಂ ‘ನನಗೆ ವೋಟು ಮಾಡಿದರೆ ನಿಮಗೆ ಸರ್ ‍ಪ್ರೈಸ್ ಕಾದಿದೆ. ನಾನು ನನ್ನ ಎಂದಿನ ಶೈಲಿಯಲ್ಲಿ ನಿಮಗೆ ದರ್ಶನ ಕೊಡುತ್ತೇನೆ’ ಎಂದು ಸೂಕ್ಷ್ಮವಾಗಿ ಹೇಳುತ್ತಾರೆ. ಆದರೆ, ಪ್ರತಿಸ್ಪರ್ಧಿಗಳು ‘ಎಂದಿನಂತೆ ಅಂದರೆ?’ ಎಂದು ಪ್ರಶ್ನೆ ಮಾಡುತ್ತಾರೆ. ನೀವು ಹೇಳಿದಂತೆ ನಡೆದುಕೊಳ್ಳುವುದಿಲ್ಲ ಎಂದೂ ಚುಡಾಯಿಸುತ್ತಾರೆ. ಇದನ್ನೂ ಓದಿ: ದೆಹಲಿಯಲ್ಲಿ ರಾಕಿಬಾಯ್ ನೋಡಲು ಮುಗಿಬಿದ್ದ ಅಭಿಮಾನಿಗಳು

    ಮತ್ತೆ ಕ್ಯಾಮೆರಾ ಮುಂದೆ ಬರುವ ಪೂನಂ ‘ನನ್ನ ಅಭಿಮಾನಿಗಳಿಗೆ ನಾನು ಏನು ಅಂತ ಗೊತ್ತು. ಅವರಿಗೆ ಸೂಕ್ಷ್ಮತೆ ಅರ್ಥವಾಗುತ್ತದೆ’ ಎನ್ನುತ್ತಾರೆ. ಆದರೂ, ಸಹ ಸ್ಪರ್ಧಿ ಅಜ್ಮಾ ಮತ್ತು ಮುನಾವರ್ ರೇಗಿಸುತ್ತಾ, ಅದೇನು ಅಂತ ಹೇಳು ಎಂದು ಒತ್ತಾಯಿಸಿದಾಗ ‘ನನಗೆ ವೋಟು ಮಾಡಿದರೆ, ಕ್ಯಾಮೆರಾ ಮುಂದೆಯೇ ಶರ್ಟ್ ಬಿಚ್ಚುತ್ತೇನೆ’ ಎನ್ನುತ್ತಾರೆ ಪೂನಂ. ಶೋನಲ್ಲಿ ಆಡಿದ ಈ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರೋಧ ಕೇಳಿ ಬರುತ್ತಿದೆ. ಪೂನಂ ಖಾಸಗಿಯಾಗಿ ಏನಾದರೂ ಮಾಡಿಕೊಳ್ಳಲಿ. ಶೋನಲ್ಲಿ ಆ ರೀತಿ ಹೇಳುವುದು ಸರಿಯಲ್ಲ ಎಂದಿದ್ದಾರೆ ನೆಟ್ಟಿಗರು.

  • ಸಿನಿಮಾ ರಂಗದಲ್ಲಿ ಬೆಳೆಯೋಕೆ ಮಾಟ-ಮಂತ್ರ ಮಾಡಿಸ್ತಿದ್ದರಂತೆ ಕಂಗನಾ ರಣಾವತ್

    ಸಿನಿಮಾ ರಂಗದಲ್ಲಿ ಬೆಳೆಯೋಕೆ ಮಾಟ-ಮಂತ್ರ ಮಾಡಿಸ್ತಿದ್ದರಂತೆ ಕಂಗನಾ ರಣಾವತ್

    ದಿನದಿಂದ ದಿನಕ್ಕೆ ಕಂಗನಾ ರಣಾವತ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ಸಾಕಷ್ಟು ಸದ್ದು ಮಾಡುತ್ತಿದೆ. ಒಂದೊಂದು ಸಲ ಆ ಶೋ ಸ್ಪರ್ಧಿಯಿಂದಲೋ ಅಥವಾ ಮತ್ತೊಂದು ಸಲ ಸ್ವತಃ ಕಂಗನಾ ಹಾಡುವ ಮಾತಿನಿಂದಲೂ ವಿವಾದವಂತೂ ಆಗುತ್ತದೆ. ಪ್ರತಿ ಬಾರಿಯೂ ಪೂನಂ ಪಾಂಡೆ ಒಂದಿಲ್ಲೊಂದು ಗೋಳು ತೋಡಿಕೊಂಡು ಸುದ್ದಿ ಆಗುತ್ತಿದ್ದರು. ಈ ಬಾರಿ ಖ್ಯಾತ ನಟಿ ಪಾಯಲ್ ಸರದಿ. ಅವರ ಬದುಕಿನಲ್ಲಿ ಆದ ಅಚ್ಚರಿಯ ಸುದ್ದಿಯೊಂದನ್ನು ಹೇಳಿ ಸ್ವತಃ ಕಂಗನಾ ರಣಾವತ್ ಗೆ ಬೆಚ್ಚಿ ಬೀಳಿಸಿದ್ದಾಳೆ. ಇದನ್ನೂ ಓದಿ : ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಈ ಶೋನಲ್ಲಿ ಪಾಯಲ್ ಎಲಿಮಿನೇಷನ್ ಹಂತ ತಲುಪಿದ್ದಾರೆ. ಹಾಗಾಗಿ ಇದರಿಂದ ತಪ್ಪಿಸಿಕೊಳ್ಳಲು ಯಾರಿಗೂ ಗೊತ್ತಿರದ ಸತ್ಯ ಸಂಗತಿಯೊಂದನ್ನು ತಿಳಿಸಿ ಎಂದು ಕಂಗನಾ ಕೇಳಿದರು. ಅದಕ್ಕೆ ಉತ್ತರವಾಗಿ ಪಾಯಲ್, ತಾವು ಮಾಟ-ಮಂತ್ರ ಮಾಡಿಸಿದ್ದನ್ನು ಬಹಿರಂಗಪಡಿಸಿದರು. ಇದನ್ನೂ ಓದಿ : ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

    “ನಾನು ಸಿನಿಮಾ ರಂಗದಲ್ಲಿ 15 ವರ್ಷಗಳಿಂದ ಇರುವೆ. ಇಲ್ಲಿ ಸೋಲು ಮತ್ತು ಗೆಲುವನ್ನೂ ಕಂಡಿರುವೆ. ಒಂದು ಹಂತದಲ್ಲಿ ನನ್ನ ವೃತ್ತಿ ಜೀವನ ಮುಳುಗತೊಡಗಿತ್ತು. ಆವಾಗ ನಾನು ಮಾಟ ಮಾಡಿಸಲು ಮುಂದಾದೆ. ಮುಂಬಯಿನಲ್ಲಿ ವಶೀಕರಣ ಮಾಡುವಂತಹ ವ್ಯಕ್ತಿಯನ್ನು ಸಂಪರ್ಕಿಸಿ ಒಬ್ಬ ನಿರ್ಮಾಪಕನ ಜತೆ ಕೆಲಸ ಮಾಡುವುದಕ್ಕಾಗಿ ನಾನು ವಶೀಕರಣ ಮಾಡಿದೆ’’ ಎಂದು ಹೇಳಿದರು ಪಾಯಲ್. ಇದನ್ನೂ ಓದಿ : ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲೇ ಕಪಾಳಮೋಕ್ಷ: ಅತ್ಯುತ್ತಮ ನಟ ಆಸ್ಕರ್ ವಿಜೇತ ವಿಲ್ ಸ್ಮಿತ್ ಉಗ್ರತಾಪ

    ಇದೇ ಸಂದರ್ಭದಲ್ಲಿ ಕಂಗನಾ ರಣಾವತ್ ಕೂಡ ತಮ್ಮ ಜೀವನದಲ್ಲಿ ನಡೆದ ಬ್ಲ್ಯಾಕ್ ಮ್ಯಾಸಿಕ್ ವಿಷಯವೊಂದನ್ನು ಹಂಚಿಕೊಂಡರು. ‘ಕಂಗನಾ ರಣಾವತ್ ಕೂಡ ಬ್ಲ್ಯಾಕ್ ಮ್ಯಾಸಿಕ್ ಮೂಲಕ ಬಾಲಿವುಡ್ ನ ಅನೇಕರನ್ನು ವಶೀಕರಣ ಮಾಡುತ್ತಾರೆ ಎನ್ನುವ ಸುದ್ದಿಯಿತ್ತು. ನನ್ನ ಬಾಯ್ ಫ್ರೆಂಡ್ ಕೂಡ ನನ್ನ ಮೇಲೆ ಇದೇ ರೀತಿ ಆರೋಪ ಮಾಡಿದ್ದ. 2016ರಲ್ಲಿ ನಾನೂ ಕೂಡ ಮಾಟ ಮಂತ್ರದ ಕಾರಣಕ್ಕಾಗಿ ಸಾಕಷ್ಟು ಸುದ್ದಿ ಆದೆ’ ಎಂದು ಹೇಳಿದರು. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು

    ಕೊನೆಗೆ ಇದೆಲ್ಲವನ್ನೂ ಮಾಡಬೇಡಿ. ನಿಮಗೆ ಸೌಂದರ್ಯವಿದೆ. ಸೆಳೆಯುವಂತಹ ಶಕ್ತಿಯಿದೆ. ಬುದ್ಧಿವಂತರು, ಪ್ರತಿಭಾವಂತರು ಅದರ ಮೂಲಕ ಜನರನ್ನು ಗೆಲ್ಲಿರಿ. ಈ ಗೆಲುವು ಯಾವತ್ತಿಗೂ ಶಾಶ್ವತವಾಗಿ ಇರುತ್ತದೆ ಎಂದು ಪಾಯಲ್ ಗೆ ಬುದ್ದಿ ಹೇಳಿದರು ಕಂಗನಾ ರಣಾವತ್.