Tag: ಲಾಕ್‌ಡೌನ್ ಮೋಡ್

  • ಸೈಬರ್ ಅಟ್ಯಾಕ್‌ಗಳನ್ನು ಕಡಿಮೆ ಮಾಡಲು ಆಪಲ್ ತರುತ್ತಿದೆ ಹೊಸ ಲಾಕ್‌ಡೌನ್ ಮೋಡ್

    ಸೈಬರ್ ಅಟ್ಯಾಕ್‌ಗಳನ್ನು ಕಡಿಮೆ ಮಾಡಲು ಆಪಲ್ ತರುತ್ತಿದೆ ಹೊಸ ಲಾಕ್‌ಡೌನ್ ಮೋಡ್

    ವಾಷಿಂಗ್ಟನ್: ಆಪಲ್ ಕಂಪನಿ ತನ್ನ ಐಫೋನ್, ಐ ಪ್ಯಾಡ್, ಹಾಗೂ ಮ್ಯಾಕ್ ಸಾಧನಗಳಿಗಾಗಿ ಹೊಸ ಭದ್ರತಾ ಫೀಚರ್‌ಅನ್ನು ಹೊರತರುತ್ತಿದೆ. ಇದು ಮುಖ್ಯವಾಗಿ ಉನ್ನತ ಪ್ರೊಫೈಲ್ ಬಳಕೆದಾರರ ಮೇಲಿನ ಉದ್ದೇಶಿತ ಸೈಬರ್ ಅಟ್ಯಾಕ್‌ಗಳನ್ನು ತಡೆಯಲು ವಿನ್ಯಾಸಗೊಳಿಸಲಾಗಿದೆ.

    ಲಾಕ್‌ಡೌನ್ ಮೋಡ್ ಹೆಸರಿನ ಹೊಸ ಐಚ್ಛಿಕ(ಆಪ್ಶನಲ್) ಫೀಚರ್, ಕೆಲವು ಉನ್ನತ ವ್ಯಕ್ತಿಗಳು ತಮ್ಮ ಆಪಲ್ ಡಿವೈಸ್‌ಗಳಲ್ಲಿ ಬಳಸಬಹುದಾಗಿದ್ದು, ಇದು ಸೈಬರ್ ಅಟ್ಯಾಕ್‌ಗಳಿಂದ ರಕ್ಷಣೆ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಇದು ಬಳಕೆದಾರರ ಸಾಧನಗಳನ್ನು ಹ್ಯಾಕ್ ಮಾಡುವುದನ್ನು ಕಡಿಮೆಗೊಳಿಸುತ್ತದೆ ಎಂದು ಹೇಳಿದೆ. ಇದನ್ನೂ ಓದಿ: ಆರ್ಥಿಕ ಹಿಂಜರಿತ ಭೀತಿ – ಅಂತಾರಾಷ್ಟ್ರೀಯ ತೈಲಬೆಲೆ ಭಾರೀ ಇಳಿಕೆ

    ಕಳೆದ ಹಲವು ವರ್ಷಗಳಿಂದ ಉನ್ನತ ವ್ಯಕ್ತಿಗಳ ಡಿವೈಸ್‌ಗಳನ್ನು ಹ್ಯಾಕ್ ಮಾಡಿರುವಂತಹ ಹಲವು ಪ್ರಕರಣಗಳು ವರದಿಯಾಗಿವೆ. ಮುಖ್ಯವಾಗಿ ಕಂಪನಿ ಸ್ಪೈವೇರ್ ನಂತಹ ದಾಳಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹೊಸ ಫೀಚರ್ ಅನ್ನು ಹೊರತಂದಿದೆ ಎಂದು ತಿಳಿಸಿದೆ.

    ಪ್ರಪಂಚದಾದ್ಯಂತ ಸುಮಾರು 150 ದೇಶಗಳಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳನ್ನು ಗುರಿಪಡಿಸಿಕೊಂಡು ಸೈಬರ್ ದಾಳಿಗಳು ನಡೆಯುತ್ತವೆ. ಇದಕ್ಕಾಗಿ ಲಾಕ್‌ಡೌನ್ ಮೋಡ್ ಫೀಚರ್ ಅನ್ನು ತರಲಾಗಿದ್ದು, ಇದನ್ನು ಬಳಕೆದಾರರಿಗೆ ತಿಳಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದೆ. ಇದನ್ನೂ ಓದಿ: ಇಡಿ ದಾಳಿ ಬೆನ್ನಲ್ಲೇ ದೇಶ ತೊರೆದ ವಿವೋ ನಿರ್ದೇಶಕರು 

    ವರದಿಗಳ ಪ್ರಕಾರ ಲಾಕ್‌ಡೌನ್ ಮೋಡ್, ಆಪಲ್ ಡಿವೈಸ್‌ಗಳಲ್ಲಿ ಮೆಸೇಜಿಂಗ್ ಆಪ್‌ಗಳ ಅಟ್ಯಾಚ್‌ಮೆಂಟ್‌ಗಳನ್ನು ಬ್ಲಾಕ್ ಮಾಡುತ್ತದೆ. ಇವು ಹ್ಯಾಕರ್‌ಗಳಿಗೆ ಡಿವೈಸ್‌ಗಳನ್ನು ಹ್ಯಾಕ್‌ಮಾಡಲು ಲಭ್ಯವಿರುವ ಸುಲಭದ ಹಾಗೂ ಮುಖ್ಯವಾದ ವಿಧಾನವಾಗಿದೆ.

    ಆಪಲ್ ಮುಂಬರುವ ಐಒಎಸ್ 16, ಐಪ್ಯಾಡ್ ಐಎಸ್ 16 ಹಾಗೂ ಮ್ಯಾಕ್ ಒಎಸ್‌ಗಳಲ್ಲಿ ನವೀಕರಣದ ಭಾಗವಾಗಿ ಲಾಕ್‌ಡೌನ್ ಮೋಡ್‌ಅನ್ನು ಬಿಡುಗಡೆ ಮಾಡಲು ಯೋಜಿಸಿದೆ. ಈ ಫೀಚರ್ ಸದ್ಯ ಬೀಟಾ ಆವೃತ್ತಿಯಲ್ಲಿ ಪರೀಕ್ಷೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]