Tag: ಲಾಂಚ್

  • ಹೊಸ ವರ್ಷಕ್ಕೆ ನಾನಿ ನಟನೆಯ 30ನೇ ಸಿನಿಮಾ ಲಾಂಚ್

    ಹೊಸ ವರ್ಷಕ್ಕೆ ನಾನಿ ನಟನೆಯ 30ನೇ ಸಿನಿಮಾ ಲಾಂಚ್

    ಹೊಸ ವರ್ಷದ ಆರಂಭದ ದಿನ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ನಾನಿ ಮೂವತ್ತನೇ ಸಿನಿಮಾ ಇಂದು ಅಧೀಕೃತವಾಗಿ ಲಾಂಚ್ ಆಗಿದೆ. ಕೆಲ ದಿನಗಳ ಹಿಂದೆ ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ನಾನಿಯೊಂದಿಗೆ ಮುಂದಿನ ಸಿನಿಮಾ ಮಾಡೋದಾಗಿ ಮಾಹಿತಿ ಹಂಚಿಕೊಂಡಿತ್ತು. ಆದ್ರೆ ಸಿನಿಮಾ ನಿರ್ದೇಶಕರು, ತಾರಾಬಳಗ, ತಂತ್ರಜ್ಞರು ಯಾವುದರ ಬಗ್ಗೆಯೂ ತಿಳಿಸಿರಲಿಲ್ಲ. ಇದೀಗ ಹೊಸ ವರ್ಷದ ಆರಂಭದ ದಿನ ಚಿತ್ರತಂಡ ವೀಡೀಯೋ ತುಣುಕನ್ನು ಬಿಡುಗಡೆ ಮಾಡುವ ಮೂಲಕ ನಾನಿ ಮೂವತ್ತನೇ ಸಿನಿಮಾವನ್ನು ಅಧೀಕೃತವಾಗಿ ಲಾಂಚ್ ಮಾಡಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.

    ನಾನಿ ಮೂವತ್ತನೇ ಸಿನಿಮಾಗೆ ಶೌರ್ಯುವ್ ಆಕ್ಷನ್ ಕಟ್ ಹೇಳುತ್ತಿದ್ದು, ನಿರ್ದೇಶಕನಾಗಿ ಇದು ಇವರ ಮೊದಲ ಸಿನಿಮಾವಾಗಿದೆ. ಎಮೋಶನಲ್ ಫ್ಯಾಮಿಲಿ ಎಂಟಟೈನ್ಮೆಂಟ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಅಪ್ಪ-ಮಗಳ ಬಾಂದವ್ಯದ ಸುತ್ತ ಹೆಣೆಯಲಾದ ವಿಭಿನ್ನ ಕಥಾಹಂದರ ಒಳಗೊಂಡಿದೆ. ನಾನಿ ಜೋಡಿಯಾಗಿ ‘ಸೀತಾ ರಾಮಂ’ ಖ್ಯಾತಿಯ ಮೃಣಾಲ್ ಠಾಕೂರ್ ತೆರೆ ಹಂಚಿಕೊಳ್ಳುತ್ತಿದ್ದು, ಚಿತ್ರದ ಟೈಟಲ್ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. ಇದನ್ನೂ ಓದಿ: ಪ್ರಿಯಾಗೆ ಕಾಲ್ಗೆಜ್ಜೆ ತೊಡಿಸಿ ಮಂಡಿಯೂರಿ ಪ್ರಪೋಸ್ ಮಾಡಿದ `ಪಾರು’ ನಟ ಸಿದ್ದು

    ವೈರ ಎಂಟಟೈನ್ಮೆಂಟ್ಸ್ ಬ್ಯಾನರ್ ನಡಿ ಚೆರುಕುರಿ ವೆಂಕಟ ಮೋಹನ್, ಡಾ.ವಿಜೇಂದ್ರ ರೆಡ್ಡಿ ಹಾಗೂ ಮೂರ್ತಿ ಕಲಗಾರ ನಾನಿ ಮೂವತ್ತನೇ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಯುವ ಹಾಗೂ ಪ್ರತಿಭಾವಂತ ತಂತ್ರಜ್ಞರು ಈ ಚಿತ್ರದ ಭಾಗವಾಗಲಿದ್ದು, ಸಾನು ಜಾನ್ ವರ್ಗೀಸ್ ISC ಕ್ಯಾಮೆರಾ ವರ್ಕ್ ಚಿತ್ರಕ್ಕಿರಲಿದ್ದು, ‘ಜೆರ್ಸಿ’, ‘ಶ್ಯಾಮ್ ಸಿಂಗ ರಾಯ್’ ಸಿನಿಮಾ ನಂತರ ನಾನಿ ಜೊತೆ ಇದು ಇವರ ಮೂರನೇ ಸಿನಿಮಾವಾಗಿದೆ. ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ, ಪ್ರವೀಣ್ ಆಂಥೋನಿ ಸಂಕಲನ ಚಿತ್ರಕ್ಕಿರಲಿದೆ.

    Live Tv
    [brid partner=56869869 player=32851 video=960834 autoplay=true]

  • ಅಜಯ್ ರಾವ್ ನೂತನ ಸಿನಿಮಾಗೆ ‘ಯುದ್ಧಕಾಂಡ’ ಟೈಟಲ್ ಫಿಕ್ಸ್

    ಅಜಯ್ ರಾವ್ ನೂತನ ಸಿನಿಮಾಗೆ ‘ಯುದ್ಧಕಾಂಡ’ ಟೈಟಲ್ ಫಿಕ್ಸ್

    ತಾಜ್ ಮಹಲ್, ಕೃಷ್ಣ ಲೀಲಾ, ಕೃಷ್ಣ ರುಕ್ಮಿಣಿ ಖ್ಯಾತಿಯ ನಟ ಅಜಯ್ ರಾವ್ ಸ್ಯಾಂಡಲ್ ವುಡ್ ಯುವ ನಿರ್ದೇಶಕನೊಂದಿಗೆ ಹೊಸ ಸಿನಿಮಾ ಘೋಷಿಸಿದ್ದಾರೆ. ಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ ‘ಯುದ್ಧಕಾಂಡ’ ಎಂದು ಟೈಟಲ್ ಇಡಲಾಗಿದೆ. ಸಖತ್ ಇಂಟ್ರಸ್ಟಿಂಗ್ ಆಗಿರೋ ಟೈಟಲ್ ಟೀಸರ್ ಸಿನಿರಸಿಕರ ಗಮನ ಸೆಳೆಯುತ್ತಿದೆ.

    ಈ ಚಿತ್ರವನ್ನು ಅಜಯ್ ರಾವ್ ತಮ್ಮದೇ ನಿರ್ಮಾಣ ಸಂಸ್ಥೆ ‘ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್’ ಮತ್ತು ‘ಅಜಯ್ ರಾವ್ ಪ್ರೊಡಕ್ಷನ್ಸ್’ ನಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಕೃಷ್ಣ ಲೀಲಾ ಸಿನಿಮಾ ನಂತರ ಮತ್ತೊಮ್ಮೆ ನಿರ್ಮಾಣ ಸಾಹಸಕ್ಕೆ ಮುಂದಾಗಿದ್ದಾರೆ. ಚಿತ್ರದಲ್ಲಿ ವಕೀಲರಾಗಿ ಕಾಣಿಸಿಕೊಳ್ಳುತ್ತಿರುವ ಅಜಯ್ ರಾವ್ ಸಿನಿಮಾವನ್ನು ವಕೀಲರಿಂದಲೇ ಲಾಂಚ್ ಮಾಡಿಸಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್

    ‘ಯುದ್ಧಕಾಂಡ’ ಎಂದಾಗ ಎಲ್ಲರಿಗೂ ನೆನಪಾಗೋದು ಲೆಜೆಂಡರಿ ರವಿ ಸರ್ ಸಿನಿಮಾ. ಆ ಸಿನಿಮಾದ ನಿರ್ದೇಶಕರಾದ ಕೆ. ವಿ ರಾಜು ಸರ್ ಜೊತೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ ಅದು ನನ್ನ ಅದೃಷ್ಟ. ಈ ಸಿನಿಮಾ ಲಾಂಚ್ ಮಾಡೋವಾಗ ಮೊದಲು ರವಿ ಸರ್ ಭೇಟಿ ಮಾಡಿ ಆಶೀರ್ವಾದ ತೆಗೆದುಕೊಂಡು ಬಂದೆ. ಒಳ್ಳೆದಾಗ್ಲಿ ಎಂದು ಆಶೀರ್ವಾದ ಮಾಡಿದ್ರು. ಆದ್ರೆ ಆಗ ಬಂದ ‘ಯುದ್ಧಕಾಂಡ’ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಇದು ರಿಮೇಕ್ ಸಿನಿಮಾ ಕೂಡ ಅಲ್ಲ ಎಂದು ಅಜಯ್ ರಾವ್ ಮಾಹಿತಿ ಹಂಚಿಕೊಂಡ್ರು.

    ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷ ಆಯ್ತು. ನಟನಾಗಿ ಯಶಸ್ಸು, ಸೋಲು ಎರಡನ್ನು ನೋಡಿದ್ದೇನೆ. ಕೇವಲ ನಟನಾಗಿ ಉಳಿಯದೇ ಸಿನಿಮಾದ ಎಲ್ಲಾ ಕ್ಷೇತ್ರದಲ್ಲಿ ಪ್ರಯೋಗ ಮಾಡಬೇಕು ಎಂದುಕೊಂಡು ಬೆಂಗಳೂರಿಗೆ ಬಂದವನು ನಾನು. ಹೀರೋ ಆಗಿದ್ದವನು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿಯೂ ಮಾಡಿದ್ದೇನೆ. ಕೃಷ್ಣ ಲೀಲಾ ಸಿನಿಮಾ ಮೂಲಕ ನಿರ್ಮಾಪಕನೂ ಆಗಿದ್ದೇನೆ. ಇದೀಗ ಏಳು ವರ್ಷದ ನಂತರ ಎರಡನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದೇನೆ ಎಂದು ಚಿತ್ರರಂಗದ ಜರ್ನಿಯನ್ನು ಮೆಲುಕು ಹಾಕಿದ್ರು ಅಜಯ್ ರಾವ್.

    ‘ಯುದ್ಧಕಾಂಡ’ ಸಿನಿಮಾವನ್ನು ಕಟಿಂಗ್ ಶಾಪ್ ಸಿನಿಮಾ ಖ್ಯಾತಿಯ ಪವನ್ ಭಟ್ ನಿರ್ದೇಶಿಸುತ್ತಿದ್ದಾರೆ. ಕಾರ್ತಿಕ್ ಶರ್ಮಾ ಕ್ಯಾಮೆರಾ ವರ್ಕ್, ಕೆ.ಬಿ.ಪ್ರವೀಣ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲಿದೆ ‘ಯುದ್ಧಕಾಂಡ’ ಚಿತ್ರತಂಡ.

    Live Tv
    [brid partner=56869869 player=32851 video=960834 autoplay=true]

  • ದರ್ಶನ್ ನಟನೆಯ ಡಿ53 ಚಿತ್ರದ ಟೈಟಲ್ ಲಾಂಚ್

    ದರ್ಶನ್ ನಟನೆಯ ಡಿ53 ಚಿತ್ರದ ಟೈಟಲ್ ಲಾಂಚ್

    ಬೆಂಗಳೂರು: ಕ್ರಿಸ್‍ಮಸ್ ಹಬ್ಬಕ್ಕೆ ಸ್ಪೆಷಲ್ ಆಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಚಿತ್ರದ ಟೈಟಲ್ ಲಾಂಚ್ ಆಗಿದೆ.

    ದರ್ಶನ್ ಅಭಿನಯಿಸುತ್ತಿರುವ ಚಿತ್ರಕ್ಕೆ `ರಾಬರ್ಟ್’ ಟೈಟಲ್ ಫಿಕ್ಸ್ ಮಾಡಿದ್ದು, ಚೌಕ ಸಿನಿಮಾ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ `ಡಿ.53′ ಹೆಸರಲ್ಲಿ ಬಿಡುಗಡೆಯಾದ ಥೀಮ್ ಪೋಸ್ಟರ್ ಬಜಾರ್ ನಲ್ಲಿ ಹವಾ ಕ್ರಿಯೇಟ್ ಮಾಡಿಕೊಂಡಿತ್ತು.

    `ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು. ರಾವಣನ ಮುಂದೆ ಗೆಲ್ಲೋದು ಗೊತ್ತು’ ಎನ್ನುವ ಖಡಕ್ ಡೈಲಾಗ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು. ಇದೀಗ ಟೈಟಲ್ ಪೋಸ್ಟರ್ ಅಭಿಮಾನಿಗಳಿಗೆ ಅಟ್ರ್ಯಾಕ್ಟ್ ಮಾಡುತ್ತಿದೆ.

    ಹನುಮಂತನ ಅವತಾರವೆತ್ತಿರುವ ದಾಸ ರಾಮನನ್ನು ಹೆಗಲ ಮೇಲಿರಿಸಿಕೊಂಡು ನಿಂತಿರುವ ಪೋಸ್ಟರ್ ಅಭಿಮಾನಿಗಳನ್ನು ಥ್ರಿಲ್ಲಾಗುವಂತೆ ಮಾಡಿದೆ. `ರಾಬರ್ಟ್’ ಮಾಸ್ ಎಂಟರ್ ಟೈನರ್ ಚಿತ್ರವಾಗಿದ್ದು, ಫೆಬ್ರವರಿಯಿಂದ ಶೂಟಿಂಗ್ ಶುರುವಾಗಲಿದೆ. ಚಿತ್ರದ ನಾಯಕಿ ಸೇರಿದಂತೆ ಓವರ್ ಆಲ್ ಸ್ಟಾರ್ ಇನ್ನು ಅಂತಿಮವಾಗಿಲ್ಲ

    ದರ್ಶನ್ ರಾಬರ್ಟ್ ಚಿತ್ರದ ಪೋಸ್ಟರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿ ಅದಕ್ಕೆ, “ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ #ಡಿ53 ಚಿತ್ರಕ್ಕೆ `ರಾಬರ್ಟ್’ ಎಂಬ ಶೀರ್ಷಿಕೆ ಅಂತಿಮಗೊಳಿಸಲಾಗಿದೆ. ಉಮಾಪತಿ ಫಿಲ್ಮ್ ಬ್ಯಾನರ್ ಅಡಿಯಲ್ಲಿ, ತರುಣ್ ಕಿಶೋರ್ ಸುಧೀರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. 2019 ರಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ” ಎಂದು ದರ್ಶನ್ ತಮ್ಮ ಅಭಿಮಾನಿಗಳಿಗೆ ತಿಳಿಸಿ ಎಲ್ಲಾ ಕ್ರೈಸ್ತ ಭಾಂದವರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ತಿಳಿಸಿ ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಮ್ಮಲ್ಲಿ ಅಯ್ಯೋ ಅಂತ ಕನ್ನಡ ಸಿನಿಮಾ ನೋಡ್ತಾರೆ- ದರ್ಶನ್

    ನಮ್ಮಲ್ಲಿ ಅಯ್ಯೋ ಅಂತ ಕನ್ನಡ ಸಿನಿಮಾ ನೋಡ್ತಾರೆ- ದರ್ಶನ್

    ಬೆಂಗಳೂರು: ಕನ್ನಡದಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಕಡಿಮೆಯಾಗಿವೆ. ನಮ್ಮಲ್ಲಿ ಅಯ್ಯೋ ಅಂತ ಹೇಳಿ ಕನ್ನಡ ಸಿನಿಮಾವನ್ನು ನೋಡುತ್ತಾರೆ ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ಬೆಂಗಳೂರಿನ ‘ಅನುಕ್ತ’ ಚಿತ್ರ ಲಾಂಚ್ ವೇಳೆ ಮಾತನಾಡಿದ ದರ್ಶನ್, ನಮ್ಮ ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾ ಕಡಿಮೆ. ನಮ್ಮಲ್ಲಿ ಎಲ್ಲಾ ಭಾಷೆಯವರು ಇದ್ದಾರೆ. ನಮ್ಮ ರಾಜ್ಯಕ್ಕೆ ಬಂದವರಿಗೆ ನಾವು ಅವರ ಭಾಷೆಯಲ್ಲೇ ಮಾತನಾಡುತ್ತೇವೆ. ನಮ್ಮ ಭಾಷೆ ಮಾತನಾಡುತ್ತೇವೆ. ಹಾಗಾಗಿ ನಮಗೆ ಎಲ್ಲ ಭಾಷೆ ಬರುತ್ತದೆ ಎಂದು ಹೇಳಿದರು.

    ನಮ್ಮಲ್ಲಿ ಹೇಗೆ ಅಂದರೆ ಎಕ್ಸ್ ಪರಿಮೆಂಟಲ್ ಸಿನಿಮಾ ನೋಡಬೇಕು ಅಂದ್ರೆ ತಮಿಳು ಚಿತ್ರ ನೋಡುತ್ತಾರೆ. ಡಮಲ್ ಡಿಮಿಲ್ ಸಿನಿಮಾ ನೋಡಬೇಕು ಅಂದರೆ ತೆಲುಗು ನೋಡುತ್ತಾರೆ. ಫಾರೀನ್ ಲೋಕೇಷನ್ ಸಿನಿಮಾ ಅಂದರೆ ಹಿಂದಿ ನೋಡುತ್ತಾರೆ. ಆದ್ರೆ ಬೇಜಾರದಾಗ ಕನ್ನಡ ಸಿನಿಮಾ ನೋಡುತ್ತಾರೆ. ಅಯ್ಯೋ ಏನೋ ನೋಡಬೇಕು ಅಂತಾ ಕನ್ನಡ ಸಿನಿಮಾ ನೋಡುತ್ತಾರೆ ಅಂತ ವಿಷಾದ ವ್ಯಕ್ತಪಡಿಸಿದ್ರು.

    ಸದ್ಯ ಈಗಿನ ಟ್ರೆಂಡ್ ಬದಲಾಗುತ್ತಿದೆ. ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರಗಳು ತುಂಬಾನೆ ಕಡಿಮೆ ಬರುತ್ತಿದೆ. ಪ್ರಯೋಗಾತ್ಮಕ ಚಿತ್ರಗಳು ಕನ್ನಡದಲ್ಲಿ ಆಗಬೇಕು. ನಾನು ಒಳ್ಳೆಯ ಸಿನಿಮಾ ನೋಡಬೇಕು ಎಂದಾಗ ಈ ರೀತಿ ಸಿನಿಮಾ ಮಾಡಬೇಕು. ಆಗ ನಿರ್ಮಾಪಕರಿಗೆ ಒಳ್ಳೆಯದಾಗುತ್ತೆ ಅಂತ ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews