Tag: ಲಾಂಗ್ ಹೇರ್ಸ್

  • ಲಾಂಗ್ Hairಗೆ ಗುಡ್ ಬೈ ಹೇಳಿದ ವಿಜಯ್ ದೇವರಕೊಂಡ

    ಲಾಂಗ್ Hairಗೆ ಗುಡ್ ಬೈ ಹೇಳಿದ ವಿಜಯ್ ದೇವರಕೊಂಡ

    ಹೈದರಾಬಾದ್: ಟಾಲಿವುಡ್ ರೌಡಿ ನಟ ವಿಜಯ್ ದೇವರಕೊಂಡ ತಮ್ಮ ಮುಂದಿನ ಸಿನಿಮಾ ಲೈಗರ್‌ಗಾಗಿ ಲಾಂಗ್ ಹೇರ್ಸ್ ಬಿಟ್ಟಿದ್ದರು. ಇದೀಗ ಎರಡು ವರ್ಷಗಳ ಬಳಿಕ ವಿಜಯ್ ದೇವರಕೊಂಡ ತಮ್ಮ ಲಾಂಗ್ ಹೇರ್ಸ್‍ಗೆ ಗುಡ್ ಬೈ ಹೇಳಿದ್ದಾರೆ.

    ಇತ್ತೀಚೆಗಷ್ಟೇ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ವಾಲಿಬಾಲ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಿಜಯ್ ದೇವರಕೊಂಡ ಅವರನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದ ವಿಜಯ್ ವಿಜೇತರಿಗೆ ಟ್ರೋಫಿ ನೀಡಿ ವಿಶ್ ಮಾಡಿದ್ದರು. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿಜಯ್ ಹೊಸ ಲುಕ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅದರಲ್ಲಿಯೂ ಹೆಣ್ಮಕ್ಕಳಂತೂ ಕ್ಲೀನ್ ಬೋಲ್ಡ್ ಆಗಿದ್ದಾರೆ. ಇದನ್ನೂ ಓದಿ : ಕ್ರೇಜಿಸ್ಟಾರ್ ವಿ.ರವಿಚಂದ್ರನ್ ತಾಯಿ ವಿಧಿವಶ

    ವಿಜಯ್ ದೇವರಕೊಂಡ ತಮ್ಮ ಮುಂದಿನ ಸಿನಿಮಾ ಲೈಗರ್‌ನಲ್ಲಿ ಲಾಂಗ್ ಹೇರ್ಸ್ ಬಿಟ್ಟು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಕ್ಕೆ ನಿರ್ದೇಶಕ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾದಲ್ಲಿ ವಿಜಯ್ ಬಾಕ್ಸರ್ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ವಿಜಯ್‍ಗೆ ಜೋಡಿಯಾಗಿ ಬಾಲಿವುಡ್ ನಟಿ ಅನನ್ಯ ಪಾಂಡೆ ಬಣ್ಣ ಹಂಚಿದ್ದಾರೆ. ಇದೇ 2022ರ ಆಗಸ್ಟ್ 25ಕ್ಕೆ ಲೈಗರ್ ಸಿನಿಮಾ ತೆರೆಕಾಣಲಿದೆ.

    ಇತ್ತೀಚೆಗಷ್ಟೇ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆ ಕುರಿತ ಗಾಸಿಪ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ಈ ವಿಚಾರವನ್ನು ವಿಜಯ್ ದೇವರಕೊಂಡ ಟ್ವೀಟ್ ಮಾಡುವ ಮೂಲಕ ಗಾಸಿಪ್‍ಗಳಿಗೆ ಫುಲ್‍ಸ್ಟಾಪ್ ಇಟ್ಟರು. ಸದ್ಯ ತಮ್ಮ ಮುಂದಿನ ಸಿನಿಮಾ ಬಿಡುಗಡೆಗಾಗಿ ವಿಜಯ್ ದೇವರಕೊಂಡ ಕಾಯುತ್ತಿದ್ದಾರೆ. ಇದನ್ನೂ ಓದಿ : ಮೊದಲ ಬಾರಿಗೆ ಒಂದಾದ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ರಾಜಮೌಳಿ