Tag: ಲಹರಿ ಮ್ಯೂಸಿಕ್

  • ದರ್ಶನ್ ‘ತಾರಕ್’ ಟೀಸರ್ ಸೂಪರ್ ಹಿಟ್..!

    ದರ್ಶನ್ ‘ತಾರಕ್’ ಟೀಸರ್ ಸೂಪರ್ ಹಿಟ್..!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಸಿನಿಮಾದ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹವಾ ಕ್ರಿಯೇಟ್ ಮಾಡಿದೆ. ನಿನ್ನೆ ಬಿಡುಗಡೆಯಾದ ಟೀಸರ್ ಈಗಾಗಲೇ ಯೂಟ್ಯೂಬ್ ನಲ್ಲಿ 3.50 ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದುಕೊಂಡಿದೆ.

    ಟೀಸರ್ ನಲ್ಲಿ ದರ್ಶನ್ ಸ್ಟೈಲಿಶ್ ಲುಕ್ ಮತ್ತು ಆಕ್ಷನ್ ಮೂಲಕ ಗಮನ ಸೆಳೆದಿದ್ದಾರೆ. ‘ತಾರಕ್’ ದರ್ಶನ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದರ್ಶನ ರಗ್ಬಿ ಪ್ಲೇಯರ್ ಪಾತ್ರವನ್ನು ನಿಭಾಯಿಸಿದ್ದಾರೆ. ತಾರಕ್ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶಿಸಿದ್ದು, ವಿಶೇಷ ಪಾತ್ರದಲ್ಲಿ ನಟ ದೇವರಾಜ್ ನಟಿಸಿದ್ದಾರೆ. ಶೃತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾತ್ಸವ್ ಅಭಿನಯಿಸಿದ್ದಾರೆ.

    ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದಲ್ಲಿ ಒಟ್ಟಾರೆ 6 ಹಾಡುಗಳಿವೆ. ಟೀಸರ್ ನೋಡಲು ಕಾಯುತ್ತಿದ್ದ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಗುಣಗಾನ ಮಾಡುತ್ತಿದ್ದಾರೆ. ಈ ಬಾರಿಯ ದಸರಾ ವೇಳೆ ತಾರಕ್ ಚಿತ್ರಮಂದಿರ ತಲುಪಲಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಚಿತ್ರದ ಟೀಸರ್ ನೀವೂ ನೋಡಬಹುದು.

    https://www.youtube.com/watch?v=bUWVi72WlCw

  • ಹ್ಯಾಪನ್ ಆಪ್ ಜೊತೆ ಕೈ ಜೋಡಿಸಿದ ಲಹರಿ ಮ್ಯೂಸಿಕ್ ಸಂಸ್ಥೆ

    ಹ್ಯಾಪನ್ ಆಪ್ ಜೊತೆ ಕೈ ಜೋಡಿಸಿದ ಲಹರಿ ಮ್ಯೂಸಿಕ್ ಸಂಸ್ಥೆ

    ಬೆಂಗಳೂರು: ಲಹರಿ ಆಡಿಯೋ ಸಂಸ್ಥೆ ಕೇವಲ ಮ್ಯೂಸಿಕ್ ಕ್ಷೇತ್ರಕಷ್ಟೇ ಸಿಮಿತವಾಗದೇ ಈಗ ಹೊಸದಾಗಿ ಆಪ್ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ.

    ವಿದೇಶದಲ್ಲಿ ಈಗಾಗಲೇ ಖ್ಯಾತಿ ಪಡೆದು ಹೊಸ ಕ್ರೇಜ್ ಹುಟ್ಟಿಸುತ್ತಿರುವ ಹ್ಯಾಪನ್ ಎಂಬ ಡೇಟಿಂಗ್/ ಮೀಟಿಂಗ್ ಆಪ್ ಜೊತೆ ಲಹರಿ ಸಂಸ್ಥೆ ಸಹ ಕೈ ಜೋಡಿಸಿದೆ.

    ಲಹರಿ ಸಂಸ್ಥೆಯ ಮುಖ್ಯಸ್ಥರಾದ ವೇಲು ಮಾತನಾಡಿ, ಹ್ಯಾಪನ್ ಮೀಟಿಂಗ್ ಆಪ್ ಜನರನ್ನು ಸಂಪರ್ಕದಲ್ಲಿಟ್ಟುಕೊಳ್ಳುವ ಆಪ್ ಆಗಿದ್ದು, ವಿದೇಶಗಳಲ್ಲಿ ಹೆಚ್ಚು ಕ್ರೇಜ್ ಕ್ರಿಯೇಟ್ ಮಾಡಿದೆ. ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್ ಸೇರಿದಂತೆ 40 ಕ್ಕೂ ಹೆಚ್ಚಿನ ದೇಶಗಳ ಜನರು ಈ ಆಪನ್ನು ಬಳಕೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

    ಭಾರತದಲ್ಲಿ ಈ ಆಪ್‍ಗೆ ಬಾಲಿವುಡ್ ನಟ ಹೃತಿಕ್ ರೋಷನ್ ರಾಯಭಾರಿಯಾಗಿದ್ದಾರೆ. ವಿಶ್ವದಲ್ಲಿ ಒಟ್ಟು 2.8 ಕೋಟಿಗೂ ಅಧಿಕ ಜನ ಈ ಆಪನ್ನು ಬಳಸುತ್ತಿದ್ದಾರೆ. ಭಾರತದಲ್ಲಿ ಮುಂಬೈನಲ್ಲಿ ಉದ್ಘಾಟನೆ ಮಾಡಿದ 50 ದಿನದಲ್ಲಿ 10 ಲಕ್ಷಕ್ಕೂ ಅಧಿಕ ಜನರು ಡೌನ್‍ಲೋಡ್ ಮಾಡಿದ್ದಾರೆ ಎಂದು ತಿಳಿಸಿದರು.

    ಹ್ಯಾಪನ್ ಸಂಸ್ಥೆಯ ಸಿಇಒ ಡೈಡೆರ್ ರಪಾಪೊರ್ಟ್ ಮತ್ತು ಲಹರಿ ಸಂಸ್ಥೆಯ ಚಂದ್ರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ನೀವು ಸಹ ಈ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು ಅಂದ್ರೆ ಗೂಗಲ್ ಪ್ಲೇ ಸ್ಟೋರ್/ ಐಟ್ಯೂನ್ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು

    ಐಓಎಸ್ ಆಪ್ : happen

    ಆಂಡ್ರಾಯ್ಡ್ ಆಪ್: happen

  • ‘ಸಾಹೋರೆ ಬಾಹುಬಲಿ’ ವೀಡಿಯೋ ಸಾಂಗ್ ಪ್ರೋಮೋ ರಿಲೀಸ್

    ‘ಸಾಹೋರೆ ಬಾಹುಬಲಿ’ ವೀಡಿಯೋ ಸಾಂಗ್ ಪ್ರೋಮೋ ರಿಲೀಸ್

    ಬೆಂಗಳೂರು: ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ಯಾಕೆ ಎಂದು ತಿಳಿಯಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ. ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ – ದಿ ಕನ್‍ಕ್ಲೂಷನ್ ಚಿತ್ರದ ವೀಡಿಯೋ ಸಾಂಗ್ ಪ್ರೋಮೋ ರಿಲೀಸ್ ಆಗಿದ್ದು ಬಿಡುಗಡೆಯಾದ ಒಂದು ಗಂಟೆಯಲ್ಲೇ 1 ಲಕ್ಷಕ್ಕೂ ಹೆಚ್ಚು ಜನರು ಈ ವೀಡಿಯೋ ನೋಡಿದ್ದಾರೆ.

    ಈ ವೀಡಿಯೋದಲ್ಲಿ ಪ್ರಭಾಸ್ ಆನೆಯ ಸೊಂಡಿಲಿನ ಮೂಲಕ ಬಾಣ ಹೂಡುವ ದೃಶ್ಯ, ಆನೆಗಳು ನಮಿಸುವ ದೃಶ್ಯ ಹಾಗೂ ಯುದ್ಧದ ದೃಶ್ಯಗಳಿವೆ.

    ಲಹರಿ ಮ್ಯೂಸಿಕ್ ಸಂಸ್ಥೆ `ಸಾಹೋರೇ ಬಾಹುಬಲಿ’ ಹಾಡನ್ನು ಬಿಡುಗಡೆ ಮಾಡಿದ್ದು ಬಿಡುಗಡೆಯಾದ ಕೇವಲ 10 ನಿಮಿಷದಲ್ಲಿ ಹದಿನೈದು ಸಾವಿರ ಜನರು ಯೂಟ್ಯೂಬ್‍ನಲ್ಲಿ ಈ ವೀಡಿಯೋ ಸಾಂಗ್ ನೋಡಿದ್ದಾರೆ. ಬಾಹುಬಲಿ-2 ಚಿತ್ರ ಏಪ್ರಿಲ್ 28ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

    ಎಂ.ಎಂ.ಕೀರವಾಣಿ, ದಲೇರ್ ಮೆಹಂದಿ, ಮೌನಿಮಾ ಚಿತ್ರದ ಹಾಡಿಗೆ ದನಿಗೂಡಿಸಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರೆದ ಕಥೆಯಾಧರಿತ ಬಾಹುಬಲಿ ಭಾಗ 2 ಚಿತ್ರದಲ್ಲಿ ಪ್ರಭಾಸ್, ರಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ಸತ್ಯರಾಜ್, ತಮನ್ನಾ, ರಮ್ಯಕೃಷ್ಣ ಅಭಿನಯಿಸಿದ್ದಾರೆ.

    ಬಾಹುಬಲಿ ದಿ ಬಿಗಿನಿಂಗ್ ಚಿತ್ರ 2015ರ ಜುಲೈ 10ರಂದು ಬಿಡುಗಡೆಯಾಗಿತ್ತು. ಅಂದಾಜು 120 ಕೋಟಿ ಬಜೆಟ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 650 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು.

    ಬಾಹುಬಲಿ ಚಿತ್ರದ ಟ್ರೇಲರ್ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿತ್ತು. ಬಿಡುಗಡೆಯಾದ 24 ಗಂಟೆಯಲ್ಲೇ 5 ಕೋಟಿಗೂ ಅಧಿಕ ವ್ಯೂ ಗಳಿಸಿದ ಮೊದಲ ಟ್ರೇಲರ್ ಎಂಬ ಹೆಗ್ಗಳಿಕೆಗೆ ಬಾಹುಬಲಿ ಪಾತ್ರವಾಗಿತ್ತು. ಈ ಹಿಂದೆ ರಾಯಿಸ್ ಟ್ರೇಲರ್ ಬಿಡುಗಡೆಯಾದ 24 ಗಂಟೆಯಲ್ಲಿ 1.19 ಕೋಟಿ ವ್ಯೂ ಕಂಡಿದ್ದರೆ, ದಂಗಲ್ ಚಿತ್ರ 96 ಲಕ್ಷ ವ್ಯೂ ಕಂಡಿತ್ತು

    ವೀಡಿಯೋ ಸಾಂಗ್ ನೋಡಿ.

    https://www.youtube.com/watch?v=f-OQ-OpXAAo

     

     

  • ಬಾಹುಬಲಿ ಆಡಿಯೋ ರಿಲೀಸ್

    ಬಾಹುಬಲಿ ಆಡಿಯೋ ರಿಲೀಸ್

    ಹೈದರಾಬಾದ್: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಬಾಹುಬಲಿ-2 ಚಿತ್ರದ ಆಡಿಯೋ ಆಲ್ಬಂ ಇಂದು ಲೋಕಾರ್ಪಣೆಗೊಂಡಿದೆ. ಹೈದರಾಬಾದ್‍ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಬಾಹುಬಲಿ ಪ್ರೀ ರಿಲೀಸ್ ಕಾರ್ಯಕ್ರಮದ ಆಡಿಯೋ ಆಲ್ಬಂ ಬಿಡುಗಡೆಯಾಗಿದೆ.

    ಬಾಹುಬಲಿ-2 ಆಡಿಯೋ ವನ್ನು ದಕ್ಷಿಣ ಭಾರತದ ಖ್ಯಾತ ಆಡಿಯೋ ಕಂಪನಿ ಲಹರಿ ಮ್ಯೂಸಿಕ್ ತರುತ್ತಿದ್ದು, ಇಂದು 5 ಹಾಡುಗಳು ಬಿಡುಗಡೆಯಾಗಿದೆ.

    ಎಸ್.ಎಸ್.ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೆ ಎಮ್.ಎಮ್ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ದಲೆರ್ ಮೆಹೆಂದಿ, ಕೀರವಾಣಿ, ಕಾಲ ಭೈರವ, ಶ್ರೀನಿಧಿ, ಶ್ರೀ ಸೌಮ್ಯ ಮುಂತಾದವರು ಹಾಡಿದ್ದಾರೆ.

    ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ವಿಜಯೇಂದ್ರ ಪ್ರಸಾದ್, ರಾಜಮೌಳಿ, ರಮ್ಯಾ ಕೃಷ್ಣ, ಕರಣ್ ಜೋಹಾರ್ ಉಪಸ್ಥಿತರಿದ್ದರು.

    ಬಾಹುಬಲಿ ಟ್ರೇಲರ್ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದ್ದು, ಈಗಾಗಲೇ ನಾಲ್ಕು ಭಾಷೆಯಲ್ಲಿ 10 ಕೋಟಿಗೂ ಅಧಿಕ ವ್ಯೂ ಕಂಡಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಏಪ್ರಿಲ್ 28ರಂದು ಬಿಡುಗಡೆಯಾಗಲಿದೆ.

    ಇದನ್ನೂ ಓದಿ: ಬಿಡುಗಡೆಗೆ ಮುನ್ನವೇ ಲಾಭ ತಂದುಕೊಟ್ಟ ಬಾಹುಬಲಿ: ದಾಖಲೆ ಮೊತ್ತಕ್ಕೆ ಸಿನಿಮಾದ ರೈಟ್ಸ್ ಮಾರಾಟ

    https://twitter.com/LakshPimpdae/status/845999338396381184