Tag: ಲಸ್ಸಿ

  • ವಂದೇ ಭಾರತ್​ ರೈಲಿನ ಒಳಗಡೆ ಲಗ್ಗೆ ಇಡಲು ನಂದಿನಿ ತಯಾರಿ!

    ವಂದೇ ಭಾರತ್​ ರೈಲಿನ ಒಳಗಡೆ ಲಗ್ಗೆ ಇಡಲು ನಂದಿನಿ ತಯಾರಿ!

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಕನಸಿನ ವಂದೇ ಭಾರತ್​ ರೈಲಿನ (Vande Bharat Train) ಒಳಗಡೆ ನಂದಿನಿ (Nandini) ಲಗ್ಗೆ ಇಡಲು ಸಜ್ಜಾಗಿದೆ.

    ಹೌದು. ಕರ್ನಾಟಕ ಚುನಾವಣೆಯ ಸಮಯದಲ್ಲಿ ನಂದಿನಿ ವರ್ಸಸ್​ ಅಮುಲ್ (Amul) ವಿಚಾರ ಜೋರು ಚರ್ಚೆಯಾಗಿತ್ತು. ನಂದಿನಿಯ ಮಾರುಕಟ್ಟೆಯನ್ನು ಅಮುಲ್‌ ಕಬಳಸಿಲು ಮುಂದಾಗಿದೆ ಎಂದು ಬಿಂಬಿಸಲಾಗುತ್ತಿತ್ತು. ಆದರೆ ಈಗ ನಂದಿನಿ ಉತ್ಪನ್ನಗಳನ್ನು ವಂದೇ ಭಾರತ್‌ ರೈಲಿನಲ್ಲಿ ವಿತರಿಸಲು ಕೆಎಂಎಫ್‌ (KMF) ಚಿಂತನೆ ನಡೆಸಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರಿಗೆ ಟೆಂಡರ್: ಪ್ರಮೋದ್ ಮುತಾಲಿಕ್ ಕಿಡಿ

    ಸದ್ಯ ರಾಜ್ಯದಲ್ಲಿ ಪ್ರತಿ ದಿನ ಸುಮಾರು 75-85 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಈ ಪೈಕಿ 8ರಿಂದ 9 ಲಕ್ಷ ಲೀಟರ್ ಹಾಲಿನಿಂದ ಇತರೆ ಉತ್ಪನ್ನಗಳ ತಯಾರಿ ನಡೆಸಲಾಗುತ್ತಿದೆ. ಉತ್ಪನ್ನಗಳ ಬಳಕೆಯ ಹಾಲಿನ ಪ್ರಮಾಣ ಏರಿಸಲು ಚಿಂತಿಸಿರುವ ಕೆಎಂಎಫ್ 9 ರಿಂದ 11 ಅಥವಾ 12 ಲಕ್ಷ ಲೀಟರ್ ಹಾಲನ್ನು ಬಳಸಲು ಚಿಂತನೆ ನಡೆಸುತ್ತಿದೆ.

    ಲಸ್ಸಿ, ಮಜ್ಜಿಗೆ, ಪೇಡಾ, ನಂದಿನಿ ಕೋಲ್ಡ್ ಹಾಲು, ಪ್ಲೇವರ್ಡ್ ಡ್ರಿಂಕ್ ಸೇರಿದಂತೆ ನಂದಿನ ಉತ್ಪನ್ನಗಳ ಮಾರಾಟಕ್ಕೆ ಕೆಎಂಎಫ್‌ ಪ್ಲ್ಯಾನ್ ಮಾಡಿದ್ದು ಈ ಸಂಬಂಧ ಸವಿಸ್ತಾರ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.

     

    ಕೆಎಂಎಫ್ ಪ್ಲ್ಯಾನ್ ಏನು?
    ಸದ್ಯ ರಾಜ್ಯದಲ್ಲಿ ಪ್ರತಿ ದಿನ ಸುಮಾರು 75-85 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು ಈ ಪೈಕಿ 8 ರಿಂದ 9 ಲಕ್ಷ ಲೀಟರ್ ಹಾಲಿನಿಂದ ಇತರೇ ಉತ್ಪನ್ನಗಳ ತಯಾರಿಸಲಾಗುತ್ತಿದೆ. ಉತ್ಪನ್ನಗಳ ಬಳಕೆಯ ಹಾಲಿನ ಪ್ರಮಾಣ ಏರಿಸಲು ಕೆಎಂಎಫ್ ಚಿಂತಿಸಿದೆ. 9 ರಿಂದ 11 ಅಥವಾ 12 ಲಕ್ಷ ಲೀಟರ್ ಬಳಕೆಗೆ ಚಿಂತನೆ ಮಾಡಿದೆ. ಉತ್ಪಾದನೆ ಜಾಸ್ತಿಯಾದರೆ ನಂದಿನಿ ಉತ್ಪನ್ನಗಳ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತಾರಗೊಳಿಸಲು ಸಹಾಯವಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಯಿಯಲ್ಲಿ ನೀರು ಬರಿಸುವ ‘ಚಾಕೊಲೇಟ್ ಲಸ್ಸಿ’ ಮಾಡಿ

    ಬಾಯಿಯಲ್ಲಿ ನೀರು ಬರಿಸುವ ‘ಚಾಕೊಲೇಟ್ ಲಸ್ಸಿ’ ಮಾಡಿ

    ಚಾಕೊಲೇಟ್‍ನಲ್ಲಿ ಮಾಡುವ ಯಾವುದೇ ರೀತಿಯ ತಿಂಡಿ ಮತ್ತು ಪಾನೀಯಾಗಳನ್ನು ಎಲ್ಲ ವಯಸ್ಸಿನವರು ಚಪ್ಪರಿಸಿಕೊಂಡು ಸವಿಯುತ್ತಾರೆ. ಅದರಲ್ಲಿ ಲಸ್ಸಿ ಎಂದರೂ ಎಲ್ಲರಿಗೂ ಇಷ್ಟ. ಚಾಕೊಲೇಟ್ ಮತ್ತು ಲಸ್ಸಿ ಎಂದು ಮಿಕ್ಸ್ ಮಾಡಿ ಒಂದು ರೆಸಿಪಿ ಮಾಡಿದ್ರೆ ಹೇಗಿರುತ್ತೆ ಯೋಚಿಸಿ. ಈ ರೆಸಿಪಿಯನ್ನು ಸರಳವಾಗಿ ನಿಮ್ಮ ಮನೆಯಲ್ಲಿ ಟ್ರೈ ಮಾಡಿ.

    ಬೇಕಾಗಿರುವ ಸಾಮಾಗ್ರಿಗಳು:
    * ಮೊಸರು – 4 ಕಪ್
    * ಚಾಕೊಲೇಟ್ – 10
    * ಸಕ್ಕರೆ – 3/4 ಕಪ್
    * ಚಾಕೊಲೇಟ್ ಸಿರಪ್ – 4 ಟೇಬಲ್‍ಸ್ಪೂನ್
    * ಡಾರ್ಕ್ ಚಾಕೊಲೇಟ್ ಬಿಸ್ಕತ್ತುಗಳನ್ನು ಅಲಂಕರಿಸಲು ಪುಡಿಮಾಡಿಕೊಳ್ಳಿ.

    ಮಾಡುವ ವಿಧಾನ:
    * ಮಿಕ್ಸರ್ ಜಾರ್‌ನಲ್ಲಿ ಮೊಸರನ್ನು ಹಾಕಿ. ಅದಕ್ಕೆ ಚಾಕೊಲೇಟ್, ಸಕ್ಕರೆ ಸೇರಿಸಿ ರುಬ್ಬಿಕೊಳ್ಳಿ.
    * ಇಂದು ಖಾಲಿ ಗ್ಲಾಸ್‍ಗೆ 1 ಟೀಸ್ಪೂನ್ ಡಾರ್ಕ್ ಚಾಕೊಲೇಟ್ ಸಿರಪ್ ಅನ್ನು ಹರಡಿ. ನಂತರ ಅದಕ್ಕೆ ರುಬ್ಬಿದ ಚಾಕೊಲೇಟ್ ಮಿಶ್ರಣವನ್ನು ಹಾಕಿ. ಇದನ್ನೂ ಓದಿ:‘ಟೊಮೆಟೊ ತಿಳಿಸಾರು’ ಮಾಡುವ ಸಿಂಪಲ್ ವಿಧಾನ

    * ನಂತರ ಚಾಕೊಲೇಟ್ ಲಸ್ಸಿ ಮೇಲೆ ಪುಡಿಮಾಡಿದ ಡಾರ್ಕ್ ಚಾಕೊಲೇಟ್ ಬಿಸ್ಕತ್ತುಗಳು ಮತ್ತು ಕೆಲವು ಪುಡಿಮಾಡಿದ ಚಾಕೊಲೇಟ್‍ಗಳನ್ನು ಅಲಂಕರಿಸಿ. ತಣ್ಣಗಾದ ನಂತರ ಬಡಿಸಿ. ಇದನ್ನೂ ಓದಿ: ಆರೋಗ್ಯಕರವಾದ ‘ಗೋಧಿ ನುಚ್ಚಿನಿಂದ ಪಡ್ಡು’ ಮಾಡಿ ಸವಿಯಿರಿ

  • ಸೂಪರ್ ಕೂಲ್ ದ್ರಾಕ್ಷಿ ಹಣ್ಣಿನ ಲಸ್ಸಿ ಮಾಡುವ ಸರಳ ವಿಧಾನ ನಿಮಗಾಗಿ

    ಸೂಪರ್ ಕೂಲ್ ದ್ರಾಕ್ಷಿ ಹಣ್ಣಿನ ಲಸ್ಸಿ ಮಾಡುವ ಸರಳ ವಿಧಾನ ನಿಮಗಾಗಿ

    ಬೇಸಿಗೆಯಲ್ಲಿ ನೀರು, ಹಣ್ಣಿನ ಜ್ಯೂಸ್, ಮಜ್ಜಿಗೆ ಇವುಗಳನ್ನು ಎಷ್ಟು ಕುಡಿದರೂ ಕಡಿಮೆಯೇ ಎನಿಸುತ್ತದೆ. ಕೆಲವು ಮಕ್ಕಳಂತೂ ಹಾಲು ಕುಡಿಯುವುದಿಲ್ಲ, ಮೊಸರು ಬಳಸುವುದಿಲ್ಲ. ಹೀಗಾಗಿ ನೀವು ಲಸ್ಸಿಯನ್ನು ಮಾಡಿ ಕೊಟ್ಟರೆ? ಯಾರು ತಾನೆ ಬೇಡವೆನ್ನುತ್ತಾರೆ ಅಲ್ಲವೆ? ಇಲ್ಲಿದೆ ಈ ಲಸ್ಸಿ ತಯಾರು ಮಾಡುವ ಸುಲಭ ವಿಧಾನ.

    ಬೇಕಾಗುವ ಸಾಮಗ್ರಿಗಳು:
    * ಕಪ್ಪು ದ್ರಾಕ್ಷಿ- ಕಾಲು ಕೆ.ಜಿ
    * ಮೊಸರು- 1 ಕಪ್
    * ಹಾಲು- 1 ಲೋಟ
    * ಸಕ್ಕರೆ- 4 ಚಮಚ

    ಮಾಡುವ ವಿಧಾನ:
    * ಕಪ್ಪು ದ್ರಾಕ್ಷಿಗಳನ್ನು 2-3 ಬಾರಿ ಚೆನ್ನಾಗಿ ತೊಳೆಯಿರಿ.
    * ಮೊಸರು, ಹಾಲು, ಸಕ್ಕರೆಯನ್ನು ಹಾಕಿ ಮಿಕ್ಸಿಯಲ್ಲಿ ಚೆನ್ನಾಗಿ ಬ್ಲೆಂಡ್ ಮಾಡಿ,
    * ಈಗ ಶೋಧಿಸಿಕೊಳ್ಳಬೇಕು, ನೀರು ಸೇರಿಸುವ ಅಗತ್ಯವಿಲ್ಲ.


    * ಒಳ್ಳೆಯ ಸ್ವಾದ, ಹಿತವಾದ ಬಣ್ಣ, ಹಾಗೂ ಪೌಷ್ಟಿಕವಾದ ಕಪ್ಪು ದ್ರಾಕ್ಷಿಯ ಲಸ್ಸಿ ಕುಡಿಯಲು ಸಿದ್ಧ. ಗ್ಲಾಸ್‍ಗೆ ಹಾಕಿ ಸರ್ವ್ ಮಾಡುವಾಗ ಬೇಕೆಂದಲ್ಲಿ ಐಸ್ ಕ್ಯೂಬ್ ಗಳನ್ನು ಹಾಕಿಕೊಳ್ಳಿ.

  • ಗಂಡನ ಕೊಲ್ಲಲು ಹಾಲಿಗೆ ವಿಷ ಹಾಕಿದ್ಳು – ಅದೇ ಹಾಲಿನಿಂದ ಮಾಡಿದ ಲಸ್ಸಿ ಕುಡಿದು 13 ಸಾವು – ಪ್ರೀತಿ ಮಾಯೆ ಹುಷಾರು!

    ಗಂಡನ ಕೊಲ್ಲಲು ಹಾಲಿಗೆ ವಿಷ ಹಾಕಿದ್ಳು – ಅದೇ ಹಾಲಿನಿಂದ ಮಾಡಿದ ಲಸ್ಸಿ ಕುಡಿದು 13 ಸಾವು – ಪ್ರೀತಿ ಮಾಯೆ ಹುಷಾರು!

    ಮುಜಾಫರ್ ಗಢ: ಪ್ರಿಯತಮನ ಸೇರಿಕೊಳ್ಳುವ ಆಸೆಯಿಂದ ಗಂಡನನ್ನು ಕೊಲ್ಲಲು ಸಿದ್ಧಪಡಿಸಿದ ವಿಷಪೂರಿತ ಹಾಲು ಸೇವಿಸಿ ಒಂದೇ ಕುಟುಂಬದ 13 ಮಂದಿ ಸಾವನ್ನಪ್ಪಿದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಇಲ್ಲಿನ ಲಷಾರಿ ಸಮೀಪದ ತೆಹ್ಸಿಲ್ ಅಲಿಪುರದಲ್ಲಿ ಅಕ್ಟೋಬರ್ 24ರಂದು ಈ ಘಟನೆ ಸಂಭವಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

    ಆಗಿದ್ದೇನು?: ಒಂದು ತಿಂಗಳ ಹಿಂದೆ ಇಲ್ಲಿನ ದೌಲತ್ ಪುರ್ ಏರಿಯಾದ ಅಮ್ಜದ್ ಎಂಬಾತನಿಗೆ ಅಸಿಯಾ ಬೀಬಿ ಎಂಬಾಕೆಯನ್ನು ಮದುವೆ ಮಾಡಿ ಕೊಟ್ಟಿದ್ದರು. ಆದರೆ ಆಸಿಯಾ ಬೀಬಿಗೆ ಇದಕ್ಕೂ ಮುನ್ನವೇ ಶಾಹಿದ್ ಎಂಬಾತನ ಜೊತೆ ಲವ್ ಆಗಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಆಸಿಯಾ ಕುಟುಂಬಸ್ಥರು ಆಕೆಗೆ ಅಮ್ಜದ್ ಜೊತೆ ಮದುವೆ ಫಿಕ್ಸ್ ಮಾಡಿದ್ದರು.

    ಅಮ್ಜದ್ ಜೊತೆ ವಿವಾಹವಾಗಿದ್ದರೂ ಆಕೆ ನಿರಂತರವಾಗಿ ಶಾಹಿದ್ ಸಂಪರ್ಕದಲ್ಲಿದ್ದಳು. ಅಲ್ಲದೆ ಗಂಡನ ಮನೆಯಿಂದ ತವರು ಮನೆಗೆ ವಾಪಸ್ ಬಂದಿದ್ದಳು. ಆದರೆ ಮನೆಯವರು ಮತ್ತೆ ಬಲವಂತ ಮಾಡಿ ಆಕೆಯನ್ನು ಪತಿಯ ಮನೆಗೆ ಕಳಿಸಿದ್ದರು. ಇಷ್ಟೆಲ್ಲಾ ಆದ್ಮೇಲೆ ಆಕೆ ಅಮ್ಜದ್ ನನ್ನು ಕೊಲ್ಲಲು ಸಂಚು ರೂಪಿಸುತ್ತಾಳೆ. ಆಗ ಆಕೆಗೆ ಹೊಳೆದಿದ್ದೇ ಹಾಲಿಗೆ ವಿಷ ಹಾಕುವ ಪ್ಲ್ಯಾನ್.

    ಈ ಪ್ಲ್ಯಾನ್ ನಂತೆಯೇ ಆಸಿಯಾ ತನ್ನ ಗಂಡನಿಗೆ ಕೊಡಬೇಕಾದ ಹಾಲಿಗೆ ವಿಷ ಬೆರೆಸಿ ತೆಗೆದಿಟ್ಟಿರುತ್ತಾಳೆ. ಆದರೆ ಅಂದು ಅಮ್ಜದ್ ಹಾಲು ಕುಡಿಯಲೇ ಇಲ್ಲ. ಹೀಗಾಗಿ ಆ ಹಾಲನ್ನು ಲಸ್ಸಿ ಮಾಡಿದ್ದಾರೆ. ಇದನ್ನು ಕುಟುಂಬದ ಎಲ್ಲಾ ಸದಸ್ಯರಿಗೆ ಹಂಚಿದ್ದಾರೆ. ಲಸ್ಸಿ ಕುಡಿದ 14 ಮಂದಿಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ.

    ವಿಷಯ ತಿಳಿದ ತಕ್ಷಣ ಪೊಲೀಸರು ಆಸಿಯಾ, ಆಕೆಯ ಪ್ರಿಯತಮ ಶಾಹಿದ್ ಆತನ ಅತ್ತೆ ಝರೀನಾ ಮಾಯಿಯನ್ನು ಬಂಧಿಸಿದ್ದಾರೆ. ಆದರೆ ಆಸಿಯಾ ಮಾತ್ರ ತನ್ನ ವಿರುದ್ಧದ ಆರೋಪವನ್ನು ತಿರಸ್ಕರಿಸಿದ್ದಾಳೆ. ಶಾಹಿದ್ ನನಗೆ ವಿಷ ಬೆರೆಸುವಂತೆ ಹೇಳಿದ್ದ. ಆದರೆ ನಾನು ವಿಷ ಹಾಕಿಲ್ಲ. ಶಾಹಿದ್ ನನ್ನನ್ನು ಮದುವೆಯಾಗುವಂತೆ ಕೇಳಿಕೊಂಡರೂ ನಾನು ಬೇಡಿಕೆಯನ್ನು ತಿರಸ್ಕರಿಸಿದ್ದೆ ಎಂದು ಮಾಧ್ಯಮಗಳ ಮುಂದೆ ಆಸಿಯಾ ಹೇಳಿಕೆ ನೀಡಿದ್ದಾಳೆ. ಆದರೆ ಪೊಲೀಸರು ಮಾತ್ರ ಆಸಿಯಾ ವಿಷ ಬೆರೆಸಿದ್ದನ್ನು ಒಪ್ಪಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

    ಪಂಜಾಬ್ ಪ್ರಾಂತ್ಯದಲ್ಲಿ ಒತ್ತಾಯಪೂರ್ವಕವಾದ ಮದುವೆ ಮಾಡಿದ ಬಳಿಕ ವಿಷ ನೀಡಿ ಸಾಯಿಸುವಂತಹ ಘಟನೆಗಳನ್ನು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿವೆ.