Tag: ಲಷ್ಕರ್-ಎ-ತೊಯ್ಬಾ

  • ಭಾರತ ನಮ್ಮ ಶಿಬಿರವನ್ನ ನಾಶಮಾಡಿದೆ – ಜೈಶ್ ಬಳಿಕ ಆಪರೇಷನ್ ಸಿಂಧೂರ ಸತ್ಯ ಒಪ್ಪಿಕೊಂಡ ಲಷ್ಕರ್ ಉಗ್ರ

    ಭಾರತ ನಮ್ಮ ಶಿಬಿರವನ್ನ ನಾಶಮಾಡಿದೆ – ಜೈಶ್ ಬಳಿಕ ಆಪರೇಷನ್ ಸಿಂಧೂರ ಸತ್ಯ ಒಪ್ಪಿಕೊಂಡ ಲಷ್ಕರ್ ಉಗ್ರ

    – ದೇವರ ದಯೆಯಿಂದ ಮೊದಲಿಗಿಂತ ದೊಡ್ಡ ಮಸೀದಿ ನಿರ್ಮಾಣವಾಗ್ತಿದೆ; ವಿಡಿಯೋದಲ್ಲಿ ಹೇಳಿಕೆ

    ಇಸ್ಲಾಮಾಬಾದ್‌: ಆಪರೇಷನ್ ಸಿಂಧೂರದಲ್ಲಿ (Operation Sindoor) ಭಾರತೀಯ ಸೇನೆಯ ಶೌರ್ಯ, ಸಾಹಸ ಇಡೀ ವಿಶ್ವಕ್ಕೇ ಗೊತ್ತಾಗಿದೆ. ಭಾರತ ನಡೆಸಿದ ವಾಯುದಾಳಿಗೆ ಸಿಲುಕಿ ಪಾಕಿಸ್ತಾನ ಹಿಂಡಿ ಹಿಪ್ಪೆಯಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ಮುಗಿದು ಹಲವು ದಿನಗಳು ಕಳೆದರೂ ಅದರ ಪರಿಣಾಮಗಳು ಮಾತ್ರ ಇನ್ನೂ ಮುಗಿದಿಲ್ಲ. ಅದ್ರಲ್ಲೂ ಭಾರತದ ದಾಳಿಯಲ್ಲಿ ಏನೂ ಆಗೇ ಇಲ್ಲ ಎಂದು ಮೀಸೆ ತಿರುವುತ್ತಿರುವ ಪಾಕಿಸ್ತಾನದ (Pakistan) ಸುಳ್ಳುಗಳನ್ನು ಸ್ವತಃ ಅಲ್ಲಿನೇ ಉಗ್ರರೇ ಬಟಾಬಯಲು ಮಾಡುತ್ತಿದ್ದಾರೆ.

    ಈ ಹಿಂದೆ ಪಾಕಿಸ್ತಾನದ ಸುಳ್ಳುಗಳನ್ನು ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆ ಬಯಲು ಮಾಡಿತ್ತು. ಇದೀಗ ಲಷ್ಕರ್-ಎ-ತೊಯ್ಬಾ (Lashkar-e-Taiba) ಕೂಡ ಆಪರೇಷನ್‌ ಸಿಂಧೂರಕ್ಕೆ ಸಾಕ್ಷ್ಯ ನೀಡಿದೆ. ಭಾರತದ ‘ಆಪರೇಷನ್ ಸಿಂಧೂರ’ದ ಯಶಸ್ಸನ್ನು ಈ ಉಗ್ರಗಾಮಿ ಸಂಘಟನೆಯೇ ಒಪ್ಪಿಕೊಂಡಿದೆ. ಭಾರತೀಯ ಸೇನೆಯು ತಮ್ಮ ಪ್ರಮುಖ ಭಯೋತ್ಪಾದಕ ಶಿಬಿರವನ್ನು ನಾಶಪಡಿಸಿರುವುದಾಗಿ ಲಷ್ಕರ್ ಕಮಾಂಡರ್ ಖಾಸಿಂ ವೀಡಿಯೋ ಮೂಲಕ ಸತ್ಯ ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: ಪಾಕಿಸ್ತಾನ ನನ್ನ ಮನೆಯಂತೆ ಭಾಸವಾಗುತ್ತೆ, ಭಾರತ ಶಾಂತಿ ಮಾತುಕತೆ ನಡೆಸಬೇಕು: ಸ್ಯಾಮ್ ಪಿತ್ರೋಡಾ ಹೇಳಿಕೆ ವಿವಾದ

    ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಖಾಸಿಂ, ನಾನೀಗ ಭಾರತ ದಾಳಿ ಮಾಡಿ ನಾಶಪಡಿಸಿದ ಮುರಿಡ್ಕೆಯ ಮರ್ಕಜ್ ತೈಬಾ ಕ್ಯಾಂಪ್ ಮುಂದೆ ಇದ್ದೀನಿ. ಈ ಶಿಬಿರವನ್ನ ಭಾರತೀಯ ಪಡೆಗಳು ಹೊಡೆದುರುಳಿಸಿವೆ. ಆದ್ರೆ ಕಟ್ಟಡದ ಮರುನಿರ್ಮಾಣ ಕಾರ್ಯ ನಡೆಯುತ್ತಿದೆ. ದೇವರ ದಯೆಯಿಂದ ಮೊದಲಿಗಿಂತಲೂ ದೊಡ್ಡ ಮಸೀದಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾನೆ.

    ಆಪರೇಷನ್‌ ಸಿಂಧೂರಕ್ಕೆ ಕಾರಣ ಏನು?
    ಏಪ್ರಿಲ್‌ 22ರಂದು ಸೈನಿಕರ ಸೋಗಿನಲ್ಲಿ ಬಂದಿದ್ದ ಪಾಕ್‌ ಮೂಲದ ಉಗ್ರರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನೆತ್ತರ ಕೋಡಿ ಹರಿಸಿದ್ದರು. ಓರ್ವ ವಿದೇಶಿಗ ಸೇರಿ 26 ಪ್ರವಾಸಿಗರ ನರಮೇಧ ನಡೆಸಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಂಡ ಭಾರತ ಮೇ 7ರ ರಾತ್ರಿ ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ 9 ಅಡಗು ತಾಣಗಳ ಮೇಲೆ ದಾಳಿ ನಡೆಸಿತ್ತು. ಇದನ್ನೂ ಓದಿ: ಉಗ್ರ ಹಫೀಜ್‌ ಸಯೀದ್‌ ಜೊತೆ ಸಭೆ ನಡೆಸಿದ್ದಕ್ಕೆ ಸಿಂಗ್‌ ನನಗೆ ಥ್ಯಾಂಕ್ಸ್‌ ಹೇಳಿದ್ದರು: ಭಯೋತ್ಪಾದಕ ಯಾಸಿನ್ ಮಲಿಕ್

    ಇತ್ತ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜರಲ್ ಅನಿಲ್ ಚೌಹಾಣ್ ಮಧ್ಯರಾತ್ರಿ 1 ಗಂಟೆಗೆ ಯಾಕೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಲಾಯ್ತು ಅನ್ನೋದರ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಬೆಳಗಿನ ಜಾವದ ನಮಾಜ್ ಮಾಡುವ ಸಮಯವನ್ನು ತಪ್ಪಿಸುವ ಸಲುವಾಗಿ ಈ ಯೋಜನೆ ಮಾಡಬೇಕಾಯ್ತು. ಆ ಸಮಯದಲ್ಲಿ ಅಲ್ಲಿನ ಸಾಕಷ್ಟು ಜನ ತೊಂದರೆಗೆ ಸಿಲುಕಬಹುದು ಅಂತ ಮಧ್ಯರಾತ್ರಿ ವೇಳೆ ಕಾರ್ಯಾಚರಣೆ ಮಾಡಿದ್ದೇವು ಎಂದಿದ್ದಾರೆ. ಇದನ್ನೂ ಓದಿ: ನ.30 ರ ನಂತರ ಭಾರತದ ಮೇಲಿನ ಶೇ.25 ರಷ್ಟು ದಂಡ ಸುಂಕವನ್ನು ಅಮೆರಿಕ ತೆಗೆಯಬಹುದು: CEA

  • ಕಾಶ್ಮೀರದಲ್ಲಿ ಐಇಡಿ ಸ್ಫೋಟಿಸಿ ಮತ್ತೊಬ್ಬ ಉಗ್ರನ ಮನೆ ಉಡೀಸ್!

    ಕಾಶ್ಮೀರದಲ್ಲಿ ಐಇಡಿ ಸ್ಫೋಟಿಸಿ ಮತ್ತೊಬ್ಬ ಉಗ್ರನ ಮನೆ ಉಡೀಸ್!

    ಶ್ರೀನಗರ: ಜಮ್ಮು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ (Pahalgam Terror Attack) ಘಟನೆಗೆ ಸಂಬಂಧಿಸಿದಂತೆ ಐಇಡಿ ಸ್ಫೋಟಿಸಿ ಮತ್ತೊಬ್ಬ ಉಗ್ರನ ಮನೆಯನ್ನು ಭಾರತೀಯ ಸೇನೆ ಉಡೀಸ್ ಮಾಡಿದೆ.

    ಲಷ್ಕರ್ ಎ ತೊಯ್ಬಾ ಉಗ್ರ ಫಾರೂಕ್ ಮನೆಯನ್ನು ಸೇನೆ ಧ್ವಂಸಗೊಳಿಸಿದೆ. ಕುಪ್ವಾರದ ಕಲಾರೂಸ್ ಪ್ರದೇಶದಲ್ಲಿರುವ ಫಾರೂಕ್ ಮನೆಯನ್ನು ಐಇಡಿ ಸ್ಫೋಟಿಸಿ ಛಿದ್ರಛಿದ್ರ ಮಾಡಿದ್ದು, ಇಲ್ಲಿವರೆಗೆ ಒಟ್ಟು 6 ಉಗ್ರರ ಮನೆಯನ್ನು ನಾಶಪಡಿಸಲಾಗಿದೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟ ನೌಕಾಪಡೆ ಅಧಿಕಾರಿಯ ಕುಟುಂಬಕ್ಕೆ 50 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ ಘೋಷಣೆ

    ಪಹಲ್ಗಾಮ್ ದಾಳಿಯ ನಂತರ ಪುಲ್ವಾಮಾ, ಶೋಪಿಯಾನ್, ಅನಂತ್‌ನಾಗ್, ಕುಲ್ಗಾಮ್ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿ ಸ್ಫೋಟಕಗಳನ್ನು ಬಳಸಿ ಆರು ಭಯೋತ್ಪಾದಕರ ಮನೆಗಳನ್ನು ಕೆಡವಲಾಗಿದೆ. ಈ ಎಲ್ಲಾ ಭಯೋತ್ಪಾದಕರು ಲಷ್ಕರ್-ಎ-ತೊಯ್ಬಾಗೆ ಸೇರಿದವರಾಗಿದ್ದು, ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ತಡೆಯಲು ಸಾಧ್ಯನಾ? – ಜಲತಜ್ಞ ರಾಜಾರಾವ್ ಹೇಳಿದ್ದೇನು?

    ಫಾರೂಕ್ ಪ್ರಸ್ತುತ ಪಾಕಿಸ್ತಾನದಲ್ಲಿದ್ದು, ಭಾರತದಲ್ಲಿ ತೊಂದರೆ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧ – ಬುಸುಗುಟ್ಟಿದ ಪಾಕ್‌ ಗೃಹ ಸಚಿವ

  • ಭಾರತೀಯರ ಹತ್ಯೆಗೆ ಈ ಸಂಘಟನೆಯೇ ಹೊಣೆ: ಲಷ್ಕರ್‌-ಎ-ತೊಯ್ಬಾ ಬ್ಯಾನ್‌ ಮಾಡಿದ ಇಸ್ರೇಲ್‌

    ಭಾರತೀಯರ ಹತ್ಯೆಗೆ ಈ ಸಂಘಟನೆಯೇ ಹೊಣೆ: ಲಷ್ಕರ್‌-ಎ-ತೊಯ್ಬಾ ಬ್ಯಾನ್‌ ಮಾಡಿದ ಇಸ್ರೇಲ್‌

    ನವದೆಹಲಿ: ಮುಂಬೈ ಭಯೋತ್ಪಾದನಾ (Mumbai Attack) ದಾಳಿಯಾಗಿ ನವೆಂಬರ್‌ಗೆ 15 ವರ್ಷ. ಈ ಕರಾಳ ದಿನದ ಸ್ಮರಣಾರ್ಥ ಭಯೋತ್ಪಾದಕ ಸಂಘಟನೆ ಲಷ್ಕರ್‌-ಎ-ತೊಯ್ಬಾ ನಿಷೇಧಿಸುವುದಾಗಿ ಇಸ್ರೇಲ್‌ ಘೋಷಿಸಿದೆ. ಮುಂಬೈ ದಾಳಿ ಖಂಡನೀಯ ಎಂದು ಭಯೋತ್ಪಾದಕ ಸಂಘಟನೆ ವಿರುದ್ಧ ಹರಿಹಾಯ್ದಿದೆ.

    ಭಾರತ ಸರ್ಕಾರದ ಯಾವುದೇ ಮನವಿ ಇಲ್ಲದೆ ಈ ಕ್ರಮ ಕೈಗೊಳ್ಳಲಾಗಿದೆ. ಲಷ್ಕರ್-ಎ-ತೈಬಾವನ್ನು (Lashkar-e-Taiba) ಇಸ್ರೇಲಿ ಅಕ್ರಮ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ನಿಯಮಗಳನ್ನು ಪೂರೈಸಿದೆ ಎಂದು ಭಾರತದಲ್ಲಿನ ಇಸ್ರೇಲ್ (Israel) ರಾಯಭಾರ ಕಚೇರಿ ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಖಲಿಸ್ತಾನಿಗಳಿಂದ ಹಿಂದೂ ದೇವಾಲಯಗಳ ಟಾರ್ಗೆಟ್: ಕ್ರಮಕ್ಕೆ ಕೆನಡಾ ಸಂಸದ ಒತ್ತಾಯ

    ಇಸ್ರೇಲ್ ತನ್ನ ಗಡಿಯೊಳಗೆ ಅಥವಾ ಅದರ ಸುತ್ತಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳನ್ನು ಮಾತ್ರ ಪಟ್ಟಿ ಮಾಡಿದೆ. ನೂರಾರು ಭಾರತೀಯ ನಾಗರಿಕರು ಮತ್ತು ಇತರರ ಹತ್ಯೆಗೆ ಈ ಭಯೋತ್ಪಾದಕ ಸಂಘಟನೆ ಹೊಣೆಯಾಗಿದೆ ಎಂದು ತಿಳಿಸಿದೆ.

    ಭಯೋತ್ಪಾದಕ ಸಂಘಟನೆ ದಾಳಿಯ ಸಂತ್ರಸ್ತರು, ಇಸ್ರೇಲ್‌ ಸೇರಿದಂತೆ ಮುಂಬೈ ದಾಳಿಯಲ್ಲಿ ಬದುಕುಳಿದ ಮತ್ತು ದುಃಖಿತ ಕುಟುಂಬಗಳಿಗೆ ಇಸ್ರೇಲ್‌ ಸಂತಾಪ ಸೂಚಿಸಿದೆ. ಭವಿಷ್ಯದ ಶಾಂತಿಯುತ ಸಮಾಜದ ಭರವಸೆಯಲ್ಲಿ ನಾವು ನಿಮ್ಮೊಂದಿಗೆ ಒಂದಾಗಿದ್ದೇವೆ ಎಂದು ಹೇಳಿದೆ. ಇದನ್ನೂ ಓದಿ: ಗಾಜಾದ ಆಸ್ಪತ್ರೆಯನ್ನೇ ಉಗ್ರ ಚಟುವಟಿಕೆಗಳ ತಾಣವಾಗಿಸಿದ ಹಮಾಸ್- ಇಸ್ರೇಲ್ ವೀಡಿಯೋ ಸಾಕ್ಷಿ

    2008 ರ ನವೆಂಬರ್‌ನಲ್ಲಿ ಮುಂಬೈನಲ್ಲಿ ಹಲವಾರು ಭಯೋತ್ಪಾದಕ ದಾಳಿಗಳು ನಡೆದಿದ್ದವು. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾಗೆ ಸಂಪರ್ಕ ಹೊಂದಿದ್ದ 10 ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ. ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಮತ್ತು ಹ್ಯಾಂಡ್ ಗ್ರೆನೇಡ್‌ಗಳೊಂದಿಗೆ ಶಸ್ತ್ರಸಜ್ಜಿತವಾದ ಭಯೋತ್ಪಾದಕರು ಮುಂಬೈನ ದಕ್ಷಿಣ ಭಾಗದಲ್ಲಿ ಛತ್ರಪತಿ ಶಿವಾಜಿ ರೈಲು ನಿಲ್ದಾಣ, ಜನಪ್ರಿಯ ಲಿಯೋಪೋಲ್ಡ್ ಕೆಫೆ, ಎರಡು ಆಸ್ಪತ್ರೆಗಳು ಮತ್ತು ಥಿಯೇಟರ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದರು.

  • ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್‌; ಭಾರತೀಯ ಸೇನೆಯಿಂದ ಐವರು ಲಷ್ಕರ್‌ ಉಗ್ರರ ಹತ್ಯೆ

    ಜಮ್ಮು-ಕಾಶ್ಮೀರದಲ್ಲಿ ಎನ್‌ಕೌಂಟರ್‌; ಭಾರತೀಯ ಸೇನೆಯಿಂದ ಐವರು ಲಷ್ಕರ್‌ ಉಗ್ರರ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಗಡಿ ನಿಯಂತ್ರಣ ರೇಖೆ (LOC)ಯಲ್ಲಿ ಪೊಲೀಸರು ಮತ್ತು ಸೇನೆ ನಡೆಸಿದ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಐವರು ಲಷ್ಕರ್ ಭಯೋತ್ಪಾದಕರು ಹತ್ಯೆಯಾಗಿದ್ದಾರೆ.

    ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್‌ನಲ್ಲಿ ಇಂದು (ಗುರುವಾರ) ಎನ್‌ಕೌಂಟರ್ ನಡೆದಿದೆ. ಆರಂಭದಲ್ಲಿ ಸೇನೆ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದರು. ನಂತರದ ಗುಂಡಿನ ಕಾಳಗದಲ್ಲಿ ಇನ್ನೂ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕತಾರ್‌ನಲ್ಲಿ ಬಂಧಿತರಾಗಿದ್ದ 8 ಮಾಜಿ ನೌಕಾಪಡೆ ಸಿಬ್ಬಂದಿಗೆ ಮರಣದಂಡನೆ! – ಭಾರತಕ್ಕೆ ಆಘಾತ

    ಹತ್ಯೆಯಾದ ಭಯೋತ್ಪಾದಕರು ಲಷ್ಕರ್-ಎ-ತೊಯ್ಬಾ (Lashkar-e-Toiba)ಗೆ ಸೇರಿದವರು. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಹಿಂದೆ ಸೇನೆಯಿಂದ ಪ್ರತ್ಯೇಕವಾಗಿ ನಡೆಸಲಾಗಿದ್ದ ಒಳನುಸುಳುವಿಕೆ ವಿರುದ್ಧದ ಕಾರ್ಯಾಚರಣೆಯಲ್ಲಿ ಪೊಲೀಸರನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ.

    16 ಭಯೋತ್ಪಾದಕ ಲಾಂಚಿಂಗ್ ಪ್ಯಾಡ್‌ಗಳು ಎಲ್‌ಒಸಿಯಾದ್ಯಂತ ಇನ್ನೂ ಕಾರ್ಯನಿರ್ವಹಿಸುತ್ತಿವೆ. ಪಾಕಿಸ್ತಾನದಿಂದ ಭಯೋತ್ಪಾದಕರನ್ನು ಭಾರತದ ಕಡೆ ಕಳುಹಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಜಮ್ಮು-ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ವಾಯುಮಾಲಿನ್ಯಕ್ಕೆ ಮೂಲ ಗೊತ್ತಿಲ್ಲ – ಆಪ್ ಸಚಿವೆ ವಿವಾದಾತ್ಮಕ ಹೇಳಿಕೆ

    ಜಮ್ಮು ಮತ್ತು ಕಾಶ್ಮೀರದ ಉನ್ನತ ಅಧಿಕಾರಿಗಳು ಮತ್ತು ಭದ್ರತಾ ಏಜೆನ್ಸಿಗಳ ಸಭೆಯು ಶ್ರೀನಗರದಲ್ಲಿರುವ 15 ಕಾರ್ಪ್ಸ್‌ನ ಪ್ರಧಾನ ಕಚೇರಿಯಲ್ಲಿ ಬುಧವಾರ ನಡೆಯಿತು. ಕಾಶ್ಮೀರದಲ್ಲಿ ವಿದೇಶಿ ಭಯೋತ್ಪಾದಕರ ಪಾತ್ರವಿರುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಸ್ಥಳೀಯ ನೇಮಕಾತಿಗಳು ತೀವ್ರವಾಗಿ ಕಡಿಮೆಯಾಗಿರುವುದರಿಂದ ವಿದೇಶಿ ಭಯೋತ್ಪಾದಕರ ಸಂಖ್ಯೆ ಮತ್ತೆ ಹೆಚ್ಚಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಈ ವರ್ಷ ಕೇಂದ್ರಾಡಳಿತ ಪ್ರದೇಶದಲ್ಲಿ ಹತರಾದ 46 ಭಯೋತ್ಪಾದಕರ ಪೈಕಿ 37 ಮಂದಿ ಪಾಕಿಸ್ತಾನೀಯರು. ಒಂಬತ್ತು ಮಂದಿ ಮಾತ್ರ ಸ್ಥಳೀಯರು ಎಂದು ಅಧಿಕೃತ ಅಂಕಿ ಅಂಶಗಳು ಬಹಿರಂಗಪಡಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ 33 ವರ್ಷಗಳ ಭಯೋತ್ಪಾದನೆಯಲ್ಲಿ ವಿದೇಶಿ ಭಯೋತ್ಪಾದಕರ ಸಂಖ್ಯೆ ಸ್ಥಳೀಯ ಭಯೋತ್ಪಾದಕರಿಗಿಂತ ನಾಲ್ಕು ಪಟ್ಟು ಹೆಚ್ಚಿರುವುದು ಇದೇ ಮೊದಲು ಎನ್ನಲಾಗಿದೆ. ಪ್ರಸ್ತುತ ಕಣಿವೆಯಲ್ಲಿ ಸುಮಾರು 130 ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪೈಕಿ ಅರ್ಧದಷ್ಟು ವಿದೇಶಿ ಭಯೋತ್ಪಾದಕರು ಎಂದು ಗೃಹ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಡೇಟಿಂಗ್ ಆ್ಯಪ್ ಬಂಬಲ್ ಬಳಸುವ ಮುನ್ನ ಎಚ್ಚರ.. ಎಚ್ಚರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶೋಪಿಯಾನದಲ್ಲಿ ಇಬ್ಬರು ಲಷ್ಕರ್ ಉಗ್ರರ ಎನ್‍ಕೌಂಟರ್

    ಶೋಪಿಯಾನದಲ್ಲಿ ಇಬ್ಬರು ಲಷ್ಕರ್ ಉಗ್ರರ ಎನ್‍ಕೌಂಟರ್

    ಶ್ರೀನಗರ: ಜಮ್ಮು-ಕಾಶ್ಮೀರದ (Jammu- Kashmir) ಶೋಪಿಯಾನ ( Shopian) ಜಿಲ್ಲೆಯಲ್ಲಿ ಎನ್‍ಕೌಂಟರ್ ನಡೆದಿದ್ದು, ಇಬ್ಬರು ಲಷ್ಕರ್-ಎ- ತೈಬಾ (LET) ಉಗ್ರರಿಬ್ಬರನ್ನು ಹತ್ಯೆ ಮಾಡಲಾಗಿದೆ.

    ಉಗ್ರರನ್ನು ಮೋರಿಫತ್ ಮಕ್ಬೂಲ್ ಮತ್ತು ಜಾಜಿಮ್ ಫಾರೂಕ್ ಅಲಿಯಾಸ್ ಅಬ್ರಾರ್ ಎಂದು ಗುರುತಿಸಲಾಗಿದೆ. ಇದರಲ್ಲಿ ಅಬ್ರಾರ್ ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾ ಹತ್ಯೆಯಲ್ಲಿ ಭಾಗಿಯಾಗಿದ್ದನೆಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ತಿಳಿಸಿದ್ದಾರೆ.

    ಮಂಗಳವಾರ ನಸುಕಿನ ಜಾವ ಅಲ್ಶಿಪೋರಾ ಪ್ರದೇಶದಲ್ಲಿ ಉಗ್ರರು ಇದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಭದ್ರತಾ ಪಡೆ ತಕ್ಷಣವೇ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಅಲ್ಲದೆ ಎನ್‍ಕೌಂಟರ್ ಮಾಡಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿತ್ತು. ಇದನ್ನೂ ಓದಿ: ಡಿಜೆ ಸದ್ದಿಗೆ ಯುವಕನಿಗೆ ಹೃದಯಾಘಾತ

    ಎನ್‍ಕೌಂಟರ್ ಬಳಿಕವೂ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೊಲೀಸರನ್ನ ಹತ್ಯೆ ಮಾಡಿದ್ದ ಭಯೋತ್ಪಾದಕ ಎನ್‍ಕೌಂಟರ್

    ಪೊಲೀಸರನ್ನ ಹತ್ಯೆ ಮಾಡಿದ್ದ ಭಯೋತ್ಪಾದಕ ಎನ್‍ಕೌಂಟರ್

    ಶ್ರೀನಗರ: ಲಷ್ಕರ್-ಎ-ತೊಯ್ಬಾ ಭಯೋತ್ಪಾದಕನನ್ನು ಸದೆಬಡಿಯುವಲ್ಲಿ ಭದ್ರತಾ ಪಡೆ ಯಶಸ್ವಿಯಾಗಿದೆ.

    ಜಮ್ಮು-ಕಾಶ್ಮೀರದ ಪಾಲ್ಪೋರಾದಲ್ಲಿ ಭಾನುವಾರ ಸಂಜೆ ಭದ್ರತಾ ಪಡೆ ಕಾರ್ಯಾಚರಣೆ ಮಾಡಲಾಯಿತು. ಈ ವೇಳೆ ಎನ್‍ಕೌಂಟರ್‌ನಲ್ಲಿ ಇಬ್ಬರು ಜಮ್ಮು-ಕಾಶ್ಮೀರ ಪೊಲೀಸ್ ಸಿಬ್ಬಂದಿಯ ಹತ್ಯೆಯಲ್ಲಿ ಭಾಗಿಯಾಗಿದ್ದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿದೆ.

    ಆದಿಲ್ ಪರ್ರೆ ಎಂದು ಗುರುತಿಸಲಾದ ಭಯೋತ್ಪಾದಕನು ಸಂಗಮ್‍ನಲ್ಲಿ ಗುಲಾಮ್ ಹಸನ್ ದಾರ್ ಮತ್ತು ಸೌರಾದಲ್ಲಿ ಸೈಫುಲ್ಲಾ ಖಾದ್ರಿ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ. ಇದನ್ನೂ ಓದಿ:  2 ವಾರದಿಂದ ಸಿಕ್ಕಿಲ್ಲ ಸೈನಿಕರು – ಮುಂದುವರಿದ ಶೋಧಕಾರ್ಯ

    ಈ ಕುರಿತು ಟ್ವೀಟ್ ಮಾಡಿದ ಅಧಿಕಾರಿಗಳು, ಸಂಗಮ್‍ನಲ್ಲಿ 02 ಜೆಕೆಪಿ ಸಿಬ್ಬಂದಿ ಘ್ ಹಸನ್ ದಾರ್ ಮತ್ತು ಅಂಚಾರ್ ಸೌರಾದಲ್ಲಿ ಸೈಫುಲ್ಲಾ ಖಾದ್ರಿ ಮತ್ತು 9 ವರ್ಷದ ಬಾಲಕಿ ಮೇಲೆ ದಾಳಿ ನಡೆದಿತ್ತು. ಈ ದಾಳಿ ವೇಳೆ 02 ಜೆಕೆಪಿ ಸಿಬ್ಬಂದಿಯ ಹತ್ಯೆಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಆದಿಲ್ ಪರ್ರೆನನ್ನು ಎನ್‍ಕೌಂಟರ್ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.