Tag: ಲವ್

  • ಪ್ರೀತಿಸಿದ ಯುವತಿಯನ್ನು ದೂರ ಮಾಡಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

    ಪ್ರೀತಿಸಿದ ಯುವತಿಯನ್ನು ದೂರ ಮಾಡಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

    ರಾಯಚೂರು: ಪ್ರೀತಿಸಿ ಮದುವೆಯಾಗಿದ್ದ ಯುವತಿಗೆ ಇನ್ನೊಂದು ಮದುವೆ ಮಾಡಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಗಾಣದಾಳ ಗ್ರಾಮ ಹೊರವಲಯದಲ್ಲಿ ನಡೆದಿದೆ.

    ಸಾವಿಗೂ ಮುನ್ನ ಯುವಕ ಭೀಮೇಶ್ ಫೇಸ್ ಬುಕ್‍ನಲ್ಲಿ ಆತ್ಮಹತ್ಯೆ ಬಗ್ಗೆ ಹೇಳಿಕೊಂಡಿದ್ದಾನೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ನನ್ನ ಸಾವಿಗೆ ಇಡಪನೂರು ಪಿಎಸ್‍ಐ ಗಂಗಪ್ಪ ಹಾಗೂ ಯುವತಿ ಮನೆಯವರೇ ಕಾರಣ ಎಂದು 11 ಜನರ ಹೆಸರನ್ನು ಬರೆದಿದ್ದಾನೆ. ಇದನ್ನೂ ಓದಿ: ರಾಜ್ಯದಲ್ಲಿಂದು 851 ಹೊಸ ಕೊರೊನಾ ಕೇಸ್- 790 ಡಿಸ್ಚಾರ್ಜ್, 15 ಸಾವು

    ಗಾಣದಾಳ ಗ್ರಾಮದ ಯುವತಿ ಸಂಧ್ಯಾ ಹಾಗೂ ಭೀಮೇಶ್ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಯುವತಿ ಮನೆಯಲ್ಲಿ ಮದುವೆಗೆ ಒಪ್ಪದ ಕಾರಣ ಮನೆಬಿಟ್ಟು ಹೋಗಿ ಮದುವೆಯಾಗಿದ್ದರು. ಜೋಡಿಯನ್ನು ಪತ್ತೆಹಚ್ಚಿದ್ದ ಪೊಲೀಸರು, ಯುವತಿಯನ್ನು ಪೋಷಕರಿಗೆ ಒಪ್ಪಿಸಿದ್ದರು. ಇಡಪನೂರು ಪೊಲೀಸ್ ಠಾಣೆಯಲ್ಲಿ ಯುವತಿ ಕಾಣೆ ಕುರಿತು ಪ್ರಕರಣ ದಾಖಲಾಗಿತ್ತು. ಪಿಎಸ್‍ಐ ಗಂಗಪ್ಪ 3 ಲಕ್ಷ ರೂಪಾಯಿ ಲಂಚ ಪಡೆದು ನನ್ನನ್ನು ಬಿಟ್ಟಿದ್ದಾರೆ. ಯುವತಿ ಒಂದು ತಿಂಗಳು ಗರ್ಭಿಣಿಯಾಗಿದ್ದರೂ ಅನ್ಯ ಜಾತಿ ಕಾರಣಕ್ಕೆ ಬೇರೆ ಮಾಡಿದ್ದಾರೆ ಎಂದು ಯುವಕ ಡೆತ್ ನೋಟ್ ಹಾಗೂ ವಿಡಿಯೋದಲ್ಲಿ ಆರೋಪಿಸಿದ್ದಾನೆ.

    ಯುವಕನ ಶವ ಇನ್ನೂ ಸ್ಥಳದಲ್ಲೇ ಇದ್ದು ಮೃತನ ಸಂಬಂಧಿಕರು ಆಕ್ರೋಶಗೊಂಡಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

  • ಒನ್ ಸೈಡ್ ಲವ್ – ಬೆಳ್ಳಂಬೆಳಗ್ಗೆ ಯುವತಿ ತಂದೆಯ ಬರ್ಬರ ಕೊಲೆ

    ಒನ್ ಸೈಡ್ ಲವ್ – ಬೆಳ್ಳಂಬೆಳಗ್ಗೆ ಯುವತಿ ತಂದೆಯ ಬರ್ಬರ ಕೊಲೆ

    -ಮನೆ ಮುಂದೆ ಗಲಾಟೆ ಮಾಡಿದ್ದಕ್ಕೆ ಬುದ್ಧಿ ಹೇಳಿದ್ದ ಯುವತಿ ತಂದೆ

    ಬೆಂಗಳೂರು/ನೆಲಮಂಗಲ: ಒನ್ ಸೈಡ್ ಲವ್ ಬೇಡ ಎಂದು ಬುದ್ದಿವಾದ ಹೇಳಿ ಕಳಿಸಿದ್ದಕ್ಕೆ ಯುವತಿಯ ತಂದೆಯನ್ನೇ ಯುವಕ ಹತ್ಯೆಗೈದಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.

    ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬೆತ್ತನಗೆರೆ ರಸ್ತೆಯಲ್ಲಿ ನಡೆದಿದ್ದು, ಇಂದು ಬೆಳಗ್ಗೆ ಬಳ್ಳಾರಿ ಜಿಲ್ಲೆಯ ಶಿರಗುಪ್ಪ ಮೂಲದ ನಾಗಪ್ಪ ನೆಲಮಂಗಲ ನಗರದ ಬೆತ್ತನಗೆರೆ ರಸ್ತೆಯಲ್ಲಿ ಇತ್ತೀಚೆಗೆ ಮನೆ ಕಟ್ಟಿಕೊಂಡು ವಾಸವಿದ್ದರು. ಪೆಪ್ಸಿಕೋ ಕಂಪೆನಿಗೆ ಕೆಲಸಕ್ಕೆ ತೆರಳುತ್ತಿದ್ದ ಸಮಯದಲ್ಲಿ ಅಡ್ಡಗಟ್ಟಿದ ಇಬ್ಬರು ಯುವಕರು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.

    ಸೋಮವಾರ ನರೇಶ್ ಎಂಬ ಯುವಕ ಯುವತಿಯನ್ನು ಪ್ರೀತಿಸುತ್ತಿರುವುದಾಗಿ ನಾಗಪ್ಪ ಅವರ ಮನೆಯ ಮುಂದೆ ಗಲಾಟೆ ಮಾಡಿದ್ದು, ಈ ವಿಚಾರವಾಗಿ ಯುವಕ ನರೇಶ್‍ಗೆ ಬುದ್ದಿವಾದ ಹೇಳಿದ್ದರಂತೆ, ಇದರಿಂದ ಕೋಪಗೊಂಡ ಪಾಗಲ್ ಪ್ರೇಮಿ ನರೇಶ್ ಈ ಕೊಲೆ ಮಾಡಿರುವುದಾಗಿ ಮೃತ ನಾಗಪ್ಪನ ಸಂಬಂಧಿ ಸುರೇಶ್ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅತ್ತೆ ಆರೋಪ ಸುಳ್ಳು ಎಂದು ಸಾಬೀತುಪಡಿಸಲು ಕೆಂಡದ ಮೇಲೆ ನಡೆದ ಸೊಸೆ

    ಮೃತ ನಾಗಪ್ಪ ತನ್ನ ಮಗನ ಜೊತೆ ಬಸ್ ನಿಲ್ದಾಣಕ್ಕೆ ಡ್ರಾಪ್ ತೆಗೆದುಕೊಳ್ಳುವ ವೇಳೆ ಅಡ್ಡಗಟ್ಟಿದ ಯುವಕರು ಮಗನ ಮುಂದೆಯೇ ತಂದೆಯನ್ನು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದು, ಹೆಚ್ಚಿನ ವಿಚಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ:ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ, ದೇಹ ಇಲ್ಲೇ ಮಣ್ಣಾದರೂ ಸೈ: ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್

  • ಹಿಂದೂ ಯುವತಿ-ಮುಸ್ಲಿಂ ಯುವಕನ ಮದುವೆ – ಆಹ್ವಾನ ಪತ್ರಿಕೆ ಪ್ರಿಂಟ್ ಬಳಿಕ ವಿವಾಹ ಕ್ಯಾನ್ಸಲ್

    ಹಿಂದೂ ಯುವತಿ-ಮುಸ್ಲಿಂ ಯುವಕನ ಮದುವೆ – ಆಹ್ವಾನ ಪತ್ರಿಕೆ ಪ್ರಿಂಟ್ ಬಳಿಕ ವಿವಾಹ ಕ್ಯಾನ್ಸಲ್

    – ಹಿಂದೂ ಸಂಘಟನೆಗಳಿಂದ ಲವ್ ಜಿಹಾದ್ ಆರೋಪ
    – ಮದುವೆಗೆ ತೀವ್ರ ವಿರೋಧ, ಪ್ರತಿಭಟನೆ

    ಮುಂಬೈ: ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕನ ಮದುವೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿವಾಹ ಸಮಾರಂಭವನ್ನು ರದ್ದುಗೊಳಿಸಿದ್ದಾರೆ. ಮಹಾರಾಷ್ಟ್ರದ ನಾಸಿಕ್ ನಲ್ಲಿ ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಕಲ್ಯಾಣ ಮಂಟಪ ಬುಕ್ ಮಾಡಲಾಗಿತ್ತು. ಆದ್ರೆ ಮದುವೆ ಆಹ್ವಾನ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಬಳಿಕ ದೊಡ್ಡ ಸಂಚಲನವೇ ಸೃಷ್ಟಿಯಾಗಿದ್ದರಿಂದ ಕುಟುಂಬಸ್ಥರು ಮದುವೆ ನಿರ್ಧಾರದಿಂದ ಸದ್ಯ ಹಿಂದೆ ಸರಿದಿದ್ದಾರೆ.

    ನಾಸಿಕ್ ನಗರದ ರಸಿಕಾ (28) ಮದುವೆ ಗೆಳೆಯ ಆಸೀಫ್ ಜೊತೆ ನಿಶ್ಚಯವಾಗಿತ್ತು. ರಸಿಕಾ ದಿವ್ಯಾಂಗ ಆಗಿದ್ದರಿಂದ ಲವ್ ಜಿಹಾದ್ ಮಾಡಲಾಗ್ತಿದೆ ಎಂದು ಆರೋಪಿಸಿ ಸ್ಥಳೀಯ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇಷ್ಟೆಲ್ಲ ವಿವಾದ ಗಲಾಟೆ ನಂತ್ರವೂ ಪೋಷಕರು ಮಗಳ ನಿರ್ಧಾರದ ಪರ ನಿಂತಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ರಸಿಕಾ ತಂದೆ ಪ್ರಸಾದ್, ನನ್ನ ಮಗಳು ದಿವ್ಯಾಂಗ ಆಗಿರೋದರಿಂದ ಆಕೆಯ ಮದುವೆ ವಿಳಂಬವಾಗಿರುವ ವಿಷಯ ನಮ್ಮ ಸಮುದಾಯದ ಎಲ್ಲರಿಗೂ ಗೊತ್ತು. ಕೊನೆಗೆ ಮಗಳು ತನ್ನ ಇಚ್ಛೆಯನ್ನು ನಮ್ಮ ಮುಂದೆ ಹೇಳಿಕೊಂಡಿದ್ದಳು. ಇತ್ತ ಆಸೀಫ್ ಕುಟುಂಬಸ್ಥರು ಮಗಳನ್ನು ಸೊಸೆ ಮಾಡಿಕೊಳ್ಳಲು ಒಪ್ಪಿದ್ದರು. ಇಲ್ಲಿ ಯಾವುದೇ ಬಲವಂತ ಧರ್ಮ ಪರಿವರ್ತನೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಸ್ಲಿಂ ನೆರೆಹೊರೆಯವರ ಸಮ್ಮುಖದಲ್ಲಿ ಹಿಂದೂ ಜೋಡಿಯ ಮದ್ವೆ

    ಇಬ್ಬರು ವಯಸ್ಕರು ಪರಸ್ಪರ ಪ್ರೀತಿಸಿದ್ದಾರೆ. ನಾವು ಅವರ ಪ್ರೀತಿಯನ್ನು ಒಪ್ಪಿ ಮದುವೆ ಮಾಡಲು ಮುಂದಾಗಿದ್ದೇವೆ. ಇನ್ನೂ ಆಸೀಫ್ ಕುಟುಂಬಸ್ಥರು ಹಿಂದೂ ಸಂಪ್ರದಾಯದಂತೆ ಮದುವೆ ನಡೆಸಲು ಒಪ್ಪಿಗೆ ಸೂಚಿಸಿರೋದು ವಿಶೇಷ ಎಂದು ಪ್ರಸಾದ್ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಇದನ್ನೂ ಓದಿ:  ಮಾದರಿಯಾಯ್ತು ಹಿಂದೂ ಯುವಕ, ಮುಸ್ಲಿಂ ಯುವತಿಯ ಸರಳ ಮದುವೆ

    ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಮದುವೆಯನ್ನು ರದ್ದುಗೊಳಿಸಲಾಗಿದೆ. ಎರಡೂ ಕುಟುಂಬಗಳು ಮುಂದೆ ಮದುವೆ ನಡೆಸುತ್ತಾ ವಿಷಯ ತಿಳಿದು ಬಂದಿಲ್ಲ. ಇದನ್ನೂ ಓದಿ: ಮುಸ್ಲಿಂ ತಂದೆಯಿಂದ ಹಿಂದೂ ಸಂಪ್ರದಾಯದಂತೆ ದತ್ತು ಮಗನ ಮದ್ವೆ

  • ಯುವತಿ ನೇಣಿಗೆ ಶರಣು, ಯುವಕನ ಮನೆಗೆ ಬೆಂಕಿ – ಪತಿಯನ್ನ ಬಿಟ್ಟು ಇನಿಯನ ಜೊತೆ ಮದ್ವೆ

    ಯುವತಿ ನೇಣಿಗೆ ಶರಣು, ಯುವಕನ ಮನೆಗೆ ಬೆಂಕಿ – ಪತಿಯನ್ನ ಬಿಟ್ಟು ಇನಿಯನ ಜೊತೆ ಮದ್ವೆ

    ಬಾಗಲಕೋಟೆ: ಗಂಡನನ್ನ ಬಿಟ್ಟು ಬಂದು, ಪ್ರೀತಿಸಿದ್ದ ಹುಡುಗನ ಜೊತೆ ಎರಡನೇಯ ಮದುವೆಯಾಗಿ ಅನುಮಾನಾಸ್ಪದವಾಗಿ ಯುವತಿ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಕೆಲೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ 20 ವರ್ಷದ ಬಸಮ್ಮ ಮಾದರ್ ತೋಟದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಾಲ್ಕು ತಿಂಗಳ ಹಿಂದೆ ಗದಗ ಜಿಲ್ಲೆಯ ರೋಣ ತಾಲೂಕಿನ ಶಾಂತಗಿರಿ ಗ್ರಾಮದ ಯುವಕನೊಬ್ಬನ ಜೊತೆ ಬಸಮ್ಮಳ ಮದುವೆಯಾಗಿತ್ತು. ಕೆಲ ದಿನಗಳಿಂದ ಬಸಮ್ಮ ಗಂಡನನ್ನ ಬಿಟ್ಟು, ಕೆಲೂರು ಗ್ರಾಮದಲ್ಲಿ ವಾಸವಾಗಿದ್ದಳು.

    ಮೊದಲು ಪ್ರೀತಿ ಮಾಡಿದ ರಂಜಿತ್ ಪಂಚನ್ನವರ್ ಎಂಬವನ ಜೊತೆ ಮರು ಸಂಪರ್ಕ ಹೊಂದಿ ಕೆಲ ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ಇನಿಯನ ಜೊತೆ ಮದುವೆಯಾಗಿದ್ದಳು. ಆದ್ರೆ ಮದುವೆಗೆ ರಂಜೀತ್ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಶುಕ್ರವಾರ ಬಸಮ್ಮ ತೋಟದ ಮನೆಯಲ್ಲಿ ನೇಣಿಗೆ ಶರಣಾಗಿರುವ ವಿಷಯ ತಿಳಿದು ರಂಜಿತ್ ಮನೆಯವರು ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಸಲಿಂಗ ಕಾಮಕ್ಕಾಗಿ ಯುವಕನಿಗೆ ಫೋನ್ ಮಾಡ್ದ – ಮನೆಯಿಂದ ಹೋದ ಶಿಕ್ಷಕ ಕೊಲೆ

    ಇದರಿಂದ ಕೋಪಗೊಂಡ ಯುವತಿ ಕುಟುಂಬಸ್ಥರು ರಂಜಿತ್ ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ಕುರಿತು ಎರಡೂ ಕಡೆ ಪ್ರಕರಣ ದಾಖಲಿಸಿಕೊಂಡ ಅಮೀಗಢ ಪೊಲೀಸರು ಹತ್ತಕ್ಕೂ ಹೆಚ್ಚು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಯುವತಿ ಸಾವಿಗೆ ರಂಜಿತ್ ಮನಯವರೇ ಕಾರಣ ಎಂದು ಬಸಮ್ಮ ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಟ್ರ್ಯಾಕ್ಟರ್ ಹರಿದು ಬಾಲಕ ಸಾವು- ವಿಷಯ ತಿಳಿದ ಪಿಎಚ್ ಡಿ ವಿದ್ಯಾರ್ಥಿ ಆತ್ಮಹತ್ಯೆ

  • ಮಿಸ್ಡ್ ಕಾಲ್‍ನಲ್ಲಿ ಪರಿಚಯ, ಕೆಲವೇ ದಿನದಲ್ಲಿ ಲವ್ – ಮದ್ವೆಯಾದ 7 ತಿಂಗಳಿಗೆ ಯುವತಿಯ ಸಾವು

    ಮಿಸ್ಡ್ ಕಾಲ್‍ನಲ್ಲಿ ಪರಿಚಯ, ಕೆಲವೇ ದಿನದಲ್ಲಿ ಲವ್ – ಮದ್ವೆಯಾದ 7 ತಿಂಗಳಿಗೆ ಯುವತಿಯ ಸಾವು

    – ಪೋಷಕರ ವಿರೋಧದ ನಡುವೆ ಮದುವೆಯಾಗಿದ್ದ ಜೋಡಿ
    – ಆತ್ಮಹತ್ಯೆಯಲ್ಲ ಕೊಲೆ, ಪೋಷಕರ ಆರೋಪ

    ಶಿವಮೊಗ್ಗ: ಹೆತ್ತವರ ವಿರೋದಧ ನಡುವೆಯೂ ತಾನು ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಿದ್ದ ನವವಿವಾಹಿತೆ ಏಳು ತಿಂಗಳಿನಲ್ಲೇ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಕಾಡಿಗ್ಗೇರಿಯಲ್ಲಿ ನಡೆದಿದೆ. ಮೃತ ನವವಿವಾಹಿತೆಯನ್ನು ಸೌಂದರ್ಯ (21) ಎಂದು ಗುರುತಿಸಲಾಗಿದೆ.

    ಪತಿ ಕುಟುಂಬಸ್ಥರಿಂದ ಕಿರುಕುಳ
    ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಬೆಳಗೋಡು ಸಮೀಪದ ಗೋಳಗೊಂಡೆ ಗ್ರಾಮದ ಉದಯ್ – ಅನಿತಾ ದಂಪತಿಯ ಪುತ್ರಿ ಸೌಂದರ್ಯ ಹಾಗೂ ಹೊಸನಗರ ತಾಲೂಕಿನ ಕಾಡಿಗ್ಗೇರಿ ಉಮೇಶ್ ನಡುವೆ ಮಿಸ್ಡ್ ಕಾಲ್ ಮೂಲಕ ಪರಿಚಯವಾಗಿ, ಫೇಸ್ ಬುಕ್ ಮೂಲಕ ಸಂಪರ್ಕ ಆರಂಭವಾಗಿ ಕ್ರಮೇಣ ಪ್ರೀತಿ ಶುರುವಾಗಿತ್ತು. ಕಳೆದ ಏಳು ತಿಂಗಳ ಹಿಂದೆಯಷ್ಟೇ ಇಬ್ಬರು ವಿವಾಹ ಮಾಡಿಕೊಂಡಿದ್ದರು. ಇಬ್ಬರದ್ದು ಬೇರೆ ಬೇರೆ ಜಾತಿ ಆದರೂ ವಿವಾಹವಾದ ಆರಂಭದಲ್ಲಿ ಇಬ್ಬರು ಅನ್ಯೋನ್ಯವಾಗಿದ್ದರು. ನಂತರದ ದಿನಗಳಲ್ಲಿ ಉಮೇಶ್ ಕುಟುಂಬಸ್ಥರು ಜಾತಿ ಕಾರಣಕ್ಕೆ ಸೌಂದರ್ಯಳಿಗೆ ಕಿರುಕುಳ ಕೊಡಲು ಆರಂಭಿಸಿದ್ದರು. ಈ ಬಗ್ಗೆ ಸ್ವತಃ ಸೌಂದರ್ಯ ತನ್ನ ಹೆತ್ತವರಿಗೆ ಮಾಹಿತಿ ನೀಡಿದ್ದಳಂತೆ.

    ಆತ್ಮಹತ್ಯೆ ಅಲ್ಲ, ಕೊಲೆ:
    ಜೂನ್ 25 ರಂದು ಉಮೇಶ್ ಮನೆಯಿಂದ ಹೊರಗೆ ಹೋಗಿದ್ದನಂತೆ. ಈ ವೇಳೆ ಆತನ ತಾಯಿ ಮತ್ತು ತಂಗಿ ಉಮೇಶ್ ನಿಗೆ ಫೋನ್ ಮಾಡಿ ಸೌಂದರ್ಯ ನೇಣು ಹಾಕಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಆದರೆ ಮೃತ ಸೌಂದರ್ಯ ಪೋಷಕರು ಇದು ಆತ್ಮಹತ್ಯೆಯಲ್ಲ, ಬದಲಿಗೆ ಕೊಲೆ ಎಂದು ಆರೋಪಿಸಿದ್ದಾರೆ. ತನ್ನ ಮಗಳ ಸಾವಿಗೆ ಅಳಿಯ ಉಮೇಶ್, ಆತನ ತಂದೆ ಪಾಂಡುರಂಗ, ತಾಯಿ ಶಾಂತಮ್ಮ, ಹಾಗೂ ಸಹೋದರಿ ರೂಪ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

    ಉಮೇಶ್ ಕುಟುಂಬಸ್ಥರು ನಾಪತ್ತೆ:
    ಬೇರೆ ಜಾತಿ ಎಂಬ ಕಾರಣಕ್ಕೆ ತನ್ನ ಮಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಉಮೇಶ್ ನಿಗೆ ಬೇರೊಂದು ಮದುವೆ ಮಾಡಲು ಸಹ ಯೋಚಿಸುತ್ತಿದ್ದರು ಎಂದು ನಗರ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಉಮೇಶ್ ನನ್ನು ವಶಕ್ಕೆ ಪಡೆದಿದ್ದು, ಆತನ ತಂದೆ ತಾಯಿ ಹಾಗೂ ಸಹೋದರಿ ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: 5 ಲಕ್ಷ ಮೌಲ್ಯದ ಚಿನ್ನ, 20 ಸಾವಿರ ಹಣದೊಂದಿಗೆ ಲವ್ವರ್ ಜೊತೆ ನವವಿವಾಹಿತೆ ಎಸ್ಕೇಪ್!

    ಜೂನ್ 8ಕ್ಕೆ ಸೌಂದರ್ಯ ಅಕ್ಕ ಆತ್ಮಹತ್ಯೆ:
    ಇನ್ನೊಂದು ದುರಂತ ಅಂದರೆ ಉದಯ್ – ಅನಿತಾ ದಂಪತಿಯ ಎರಡನೇ ಮಗಳು ಐಶ್ವರ್ಯ (19) ಸಹ ಜೂ.8 ರಂದು ಆಕೆಯೂ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದಳು. ಐಶ್ವರ್ಯಳನ್ನು ಕಳೆದ ವರ್ಷ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಾವೇರಿಪುರದ ನಾಗರಾಜು ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಕಳೆದ 20 ದಿನದ ಹಿಂದೆ ಆಕೆಯು ಸಾವನ್ನಪ್ಪಿದ್ದಾಳೆ. ಐಶ್ವರ್ಯ ಪತಿ ನಾಗರಾಜುಗೆ ಅನೈತಿಕ ಸಂಬಂಧ ಇತ್ತು. ಹೀಗಾಗಿ ಮಗಳು ಗಂಡನನ್ನು ಈ ಬಗ್ಗೆ ಪ್ರಶ್ನಿಸಿದ್ದಾಳೆ. ಗಂಡನೇ ಆಕೆಯನ್ನು ಹೊಡೆದು ಕೊಲೆ ಮಾಡಿದ್ದಾನೆ ಎಂದು ಐಶ್ವರ್ಯ ತಂದೆ ಉದಯ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ನವ ವಿವಾಹಿತೆ ತಾಳಿ, ಕಾಲುಂಗುರ ತೆಗೆಸಿದ ಪೊಲೀಸ್ರು?

    ತಂಗಿ ಐಶ್ವರ್ಯ ಮೃತಪಟ್ಟ 17 ದಿನದ ಅಂತರದಲ್ಲಿ ಅಕ್ಕ ಸೌಂದರ್ಯ ಸಹ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದಾಳೆ. ಕಾಫಿ ತೋಟದಲ್ಲಿ ಉದಯ್ ಹಾಗೂ ಅನಿತಾ ದಂಪತಿ ಇಬ್ಬರು ಕಷ್ಟಪಟ್ಟು ತಮ್ಮ ಮಕ್ಕಳನ್ನು ಸಾಕಿ ಬೆಳೆಸಿದ್ದರು. ಮಕ್ಕಳು ಬದುಕು ಕಟ್ಟಿಕೊಳ್ಳುವ ಹೊತ್ತಿಗೆ ದುರಂತ ಸಾವಿಗೀಡಾಗಿರುವುದು ಹೆತ್ತವರಿಗೆ ಸಹಿಸಲು ಆಗದಂತಹ ನೋವು ತರಿಸಿದೆ. ಪೊಲೀಸರು ಎರಡು ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ, ಹೆತ್ತವರಿಗೆ ನ್ಯಾಯ ದೊರಕಿಸಿಕೊಡಬೇಕಿದೆ. ಇದನ್ನೂ ಓದಿ: ಪತಿಯ ಮನೆಯವರಿಂದ ಕಿರುಕುಳ – ನವ ವಿವಾಹಿತೆ ನೇಣಿಗೆ ಶರಣು

  • ಪ್ರಿಯತಮೆಯ ಕೊಲೆಗೈದು ಸಹೋದರನ ಸಹಾಯದಿಂದ ಹೂತು ಹಾಕಿದ!

    ಪ್ರಿಯತಮೆಯ ಕೊಲೆಗೈದು ಸಹೋದರನ ಸಹಾಯದಿಂದ ಹೂತು ಹಾಕಿದ!

    ಕೊಪ್ಪಳ: ಪ್ರಿಯತಮೆಯ ಶೀಲ ಶಂಕಿಸಿ ಪ್ರಿಯತಮ ತನ್ನ ಸಹೋದರನ ಸಹಾಯದಿಂದ ಕೊಲೆ ಮಾಡಿ ಶವ ಹೂತು ಹಾಕಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಲೆಗುಡ್ಡ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಮದ್ದಾನವ್ವ (19) ಕೊಲೆಯಾದ ಯುವತಿ. ಯಲ್ಲಪ್ಪ ಬಮ್ಮನಗೌಡ (22) ಎಂಬಾತನೇ ಕೊಲೆ ಮಾಡಿರುವ ಪ್ರಿಯಕರ. ಯಲ್ಲಪ್ಪ ತನ್ನ ಸಹೋದರ ರಮೇಶ್ (19) ಸಹಾಯದಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಟಿಕ್‍ಟಾಕ್, ಫೇಸ್ಬುಕ್‍ನಲ್ಲಿ ಪರಿಚಯ, ಲವ್ ಬಳಿಕ ಮದುವೆ- 7 ತಿಂಗಳಲ್ಲಿ ಯುವತಿಯ ಬದುಕು ದುರಂತ ಅಂತ್ಯ

    ಕಳೆದ ಒಂದು ವರ್ಷದಿಂದ ಯಲ್ಲಪ್ಪ ಮತ್ತು ಮದ್ದಾನವ್ವ ಇಬ್ಬರು ಪ್ರೀತಿಸುತ್ತಿದ್ದು, ಮದುವೆಯಾಗಲು ತಿರ್ಮಾನಿಸಿದ್ದರು. ಯುವತಿ ಅಪ್ರಾಪ್ತಳಾಗಿದ್ದರಿಂದ ಎರಡೂ ಕುಟುಂಬದವರು ಮುಂದಿನ ವರ್ಷ ಮದುವೆಯಾಗುವಂತೆ ಬುದ್ಧಿವಾದ ಹೇಳಿದ್ದರಿಂದ ಯುವಕನ ಮನೆಯಲ್ಲಿ ಯುವತಿಯನ್ನು ಬಿಟ್ಟಿದ್ದರು.

    ಇತ್ತ ಯುವಕ, ಯುವತಿಯ ಮೇಲೆ ಅನುಮಾನ ಪಟ್ಟು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಯುವತಿ ಶವವನ್ನು ಮುರುಡಿ ಗ್ರಾಮದ ಕೆರೆ ಹತ್ತಿರದ ಜಮೀನಲ್ಲಿ ಹೂತು ಹಾಕಿದ್ದಾನೆ. ಪೊಲೀಸರು ನಿನ್ನೆ ಶವವನ್ನು ಹೊರತೆಗೆದು ಆರೋಪಿ ಯಲ್ಲಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೊಬ್ಬ ಆರೋಪಿ ರಮೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.

  • ಟಿಕ್‍ಟಾಕ್, ಫೇಸ್ಬುಕ್‍ನಲ್ಲಿ ಪರಿಚಯ, ಲವ್ ಬಳಿಕ ಮದುವೆ- 7 ತಿಂಗಳಲ್ಲಿ ಯುವತಿಯ ಬದುಕು ದುರಂತ ಅಂತ್ಯ

    ಟಿಕ್‍ಟಾಕ್, ಫೇಸ್ಬುಕ್‍ನಲ್ಲಿ ಪರಿಚಯ, ಲವ್ ಬಳಿಕ ಮದುವೆ- 7 ತಿಂಗಳಲ್ಲಿ ಯುವತಿಯ ಬದುಕು ದುರಂತ ಅಂತ್ಯ

    ಕೊಪ್ಪಳ: ಬ್ಯಾನ್ ಆಗುವುದಕ್ಕೂ ಮುನ್ನ ಟಿಕ್‍ಟಾಕ್ ನಲ್ಲಿ ಪರಿಚಯವಾಗಿ, ಬಳಿಕ ಫೇಸ್ಬುಕ್, ವಾಟ್ಸಪ್‍ನಲ್ಲಿ ಮಾತುಕತೆ, ಸಲಿಗೆ ಬೆಳೆದಿದ್ದು, ಪ್ರೀತಿಗೆ ತಿರುಗಿದೆ. 7 ತಿಂಗಳ ಹಿಂದಷ್ಟೇ ಜೋಡಿ ವಿವಾಹವಾಗಿತ್ತು. ಇದೀಗ ಯುವತಿಯ ಬದುಕು ದುರಂತ ಅಂತ್ಯವಾಗಿದೆ.

    ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಘಟನೆ ನಡೆದಿದ್ದು, ಪ್ರೀತಿಸಿ ಮದುವೆಯಾದ ಕೇವಲ 7 ತಿಂಗಳಲ್ಲಿ ಯುವತಿಯ ಬದುಕು ದುರಂತ ಅಂತ್ಯವಾಗಿದೆ. ಪತಿಯ ಮನೆಯವರ ಕಿರುಕುಳಕ್ಕೆ ಬೇಸತ್ತು ಯುವತಿ ಶಿಲ್ಪಾ ವಿಕ್ರಂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿಯ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಮೃತಳ ಪೋಷಕರು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಕೊಪ್ಪದ ಶಿಲ್ಪಾ ಹಾಗೂ ಗಂಗಾವತಿ ತಾಲೂಕಿನ ಸಾಣಾಪುರದ ವಿಕ್ರಂ ಕಳೆದ ಒಂದೂವರೆ ವರ್ಷದ ಹಿಂದೆ ಟಿಕ್‍ಟಾಕ್ ಮೂಲಕ ಪರಿಚಯವಾಗಿ ಬಳಿಕ ಪ್ರೇಮದಲ್ಲಿ ಬಿದ್ದಿದ್ದಾರೆ. ನಂತರ ಕಳೆದ ಡಿಸೆಂಬರ್ ನಲ್ಲಿ ಇಬ್ಬರೂ ಮದುವೆಯಾಗಿದ್ದರು. ಆದರೆ ಬೇರೆ ಜಾತಿಯ ಯುವತಿಯನ್ನು ಮದುವೆಯಾಗಿದ್ದಕ್ಕೆ ವಿಕ್ರಂ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ.

    ಶಿಲ್ಪಾಳ ಸಾವಿಗೆ ಗಂಡ ವಿಕ್ರಂ, ಮಾವ ದುರುಗಪ್ಪ, ಅಜ್ಜಿ ಹುಲಿಗೆಮ್ಮ ನೀಡಿರುವ ವರದಕ್ಷಿಣೆ ಕಿರಕುಳ ಕಾರಣ ಎಂದು ಮೃತಳ ತಂದೆ ಸಂತೋಷ್ ಗಂಗಾವತಿ ಗ್ರಾಮೀಣ ಪೊಲೀಸರಿಗೆ ದೂರು ನೀಡಿದ್ದಾರೆ.

  • ಪ್ರಿಯಕರನ ಮಾತು ನಂಬಿ ಗಾಂಜಾ ವ್ಯಾಪಾರಕ್ಕಿಳಿದ ಟೆಕ್ಕಿ..!

    ಪ್ರಿಯಕರನ ಮಾತು ನಂಬಿ ಗಾಂಜಾ ವ್ಯಾಪಾರಕ್ಕಿಳಿದ ಟೆಕ್ಕಿ..!

    ಬೆಂಗಳೂರು: ಯಾವ ಲವ್ ಸ್ಟೋರಿಗಿಂತ ಈ ಸ್ಟೋರಿ ಕಡಿಮೆಯೇನಿಲ್ಲ. ಪ್ರಿಯಕರಿನಿಗಾಗಿ ಏನು ಬೇಕಾದ್ರು ಮಾಡಲು ಸಿದ್ಧಳಿದ್ದಳು ಆಕೆ. ಪ್ರಿಯಕರನ ಮಾತು ಕೇಳಿ ದಾರಿ ತಪ್ಪಿದ ಯುವತಿ ಇದೀಗ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದು ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾಳೆ.

    ಪ್ರೀತಿಗಾಗಿ ಪೋಷಕರನ್ನ ದೂರಮಾಡಿ ಪ್ರಿಯತಮನಿಗಾಗಿ ಯುವತಿ ಗಾಂಜಾ ಮಾರಾಟಕ್ಕಿಳಿದ್ದಳು. ಆಂಧ್ರಪ್ರದೇಶ ಶ್ರೀಕಾಕುಳಂನ ರೇಣುಕಾ(25) ಚೆನೈನಲ್ಲಿ ಎಂಜಿನಿಯರಿಂಗ್ ಮಾಡುವಾಗ ಕಡಪದ ಸಿದ್ದಾರ್ಥ್ ಜೊತೆಗೆ ಲವ್ ಆಗಿತ್ತು. ಕಾಲೇಜು ಕ್ಯಾಂಪಸ್ ನಲ್ಲಿ ಅರಳಿದ ಪ್ರೀತಿಗೆ ಯುವತಿ ತುಂಬಾನೆ ಬೆಲೆ ಕೊಡುತ್ತಿದ್ದಳು. ವಿದ್ಯಾಭ್ಯಾಸ ಮುಗಿದ ಬಳಿಕ ಸಿದ್ಧಾರ್ಥ್ ತವರು ರಾಜ್ಯಕ್ಕೆ ಹೋಗಿದ್ದ. ಯುವತಿ ರೇಣುಕಾ ಚನ್ನೈನಲ್ಲೇ ಸಾಫ್ಟ್ ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಳು.

    ಐಷಾರಾಮಿ ಜೀವನಕ್ಕಾಗಿ ಗಾಂಜಾ ಸಪ್ಲೈ ಮಾಡ್ತಿದ್ದ ಪ್ರಿಯಕರ ಸಿದ್ದಾರ್ಥ್, ಹಣದಾಸೆಗೆ ಪ್ರಿಯತಮೆಯನ್ನೂ ಗಾಂಜಾ ಮಾರಾಟಕ್ಕೆ ಇಳಿಸಿದ್ದ. ಹೊಸ ಬ್ಯುಸಿನೆಸ್ ನಲ್ಲಿ ಹೆಚ್ಚಹ ಹಣ ಸಿಕ್ತಿದೆ ಬಾ ಅಂತಾ ಕೆಲಸ ಬಿಡಿಸಿ, ತನ್ನೊಟ್ಟಿಗೆ ಇಟ್ಕೊಂಡಿದ್ದ. ಮನೆಯಲ್ಲಿ ಪೋಷಕರ ವಿರೋಧದ ನಡುವೆಯೂ ಲವರ್ ಸಿದ್ದಾರ್ಥ್ ಜೊತೆ ಯುವತಿ ವಿಶಾಖ ಪಟ್ನಂ ನಲ್ಲಿದ್ದಳು.

    ಬಿಹಾರದ ಓರ್ವನನ್ನ ಪರಿಚಯಿಸಿ ಬೆಂಗಳೂರು ನಗರದಲ್ಲಿ ಗಾಂಜಾ ಮಾರಾಟಕ್ಕೆ ಆಕೆಯನ್ನ ಕಳಿಸಿದ್ದ. ಲಾಕ್ ಡೌನ್ ಬಂಡವಾಳ ಮಾಡಿಕೊಂಡು ಹೆಚ್ಚು ಹಣಕ್ಕೆ ಮಾರಾಟ ಕೂಡ ಮಾಡುತ್ತಿದ್ದರು. ಬಿಹಾರದ ವ್ಯಕ್ತಿ ಜೊತೆ ಸೇರಿ ಗಾಂಜಾವನ್ನ ಸಣ್ಣ ಪೊಟ್ಟಣಗಳನ್ನಾಗಿ ಮಾಡುತ್ತಿದ್ದರು. ಇದೀಗ ಪೊಲೀಸರು ಕಾರ್ಯಾಚರಣೆ ನಡೆಸಿ ರೇಣುಕಾಳ ಜೊತೆ ಬಿಹಾರದ ಗಾಂಜಾ ಕಿಂಗ್ ಪಿನ್ ನನ್ನ ಸಹ ಸದಾಶಿವನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಇತ್ತ ಪ್ರಿಯತಮೆಯ ಬಂಧನದ ಸುದ್ದಿ ಕೇಳಿ ಪ್ರಿಯಕರ ಸಿದ್ದಾರ್ಥ್ ತಲೆ ಮರೆಸಿಕೊಂಡಿದ್ದಾನೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಿಯಕರನ ಮೋಹಕ್ಕೆ ಸಿಲುಕಿ ಇಂತಹ ಕೃತ್ಯ ಎಸಗಿದ್ದಾಗಿ ಕಣ್ಣೀರು ಹಾಕುತ್ತಿದ್ದಾಳೆ.

  • ಸೋಶಿಯಲ್ ಮೀಡಿಯಾದಲ್ಲಿ ಪರಿಚಯ – ಮದ್ವೆ ಭರವಸೆ ನೀಡಿ ಶಿಕ್ಷಕಿಯಿಂದ ಹಣ ಪಡೆದವ ಅರೆಸ್ಟ್

    ಸೋಶಿಯಲ್ ಮೀಡಿಯಾದಲ್ಲಿ ಪರಿಚಯ – ಮದ್ವೆ ಭರವಸೆ ನೀಡಿ ಶಿಕ್ಷಕಿಯಿಂದ ಹಣ ಪಡೆದವ ಅರೆಸ್ಟ್

    ಗದಗ: ಫೇಸ್‍ಬುಕ್‍ನಲ್ಲಿ ಪರಿಚಯವಾಗಿ ಶಿಕ್ಷಕಿಯ ಬಳಿ 7 ಲಕ್ಷ ರೂಪಾಯಿಗೂ ಹೆಚ್ಚು ಹಣ ಪಡೆದಿದ್ದ ಮೋಸಗಾರನನ್ನು ಮುಂಡರಗಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರ ಕೊಡಮಗ್ಗಿ ಗ್ರಾಮದ ನೇತಾಜಿ ಮದ್ದನೇರ ಬಂಧಿತ ವ್ಯಕ್ತಿ.

    ನೇತಾಜಿಗೆ ಫೇಸ್‍ಬುಕ್ ನಲ್ಲಿ ಮುಂಡರಗಿ ಪಟ್ಟಣದ ಖಾಸಗಿ ಶಾಲೆಯ ಶಿಕ್ಷಕಿಯ ಪರಿಚಯ ಆಗುತ್ತದೆ. ಇಬ್ಬರ ಸ್ನೇಹ ಪ್ರೇಮವಾಗಿ ಬದಲಾಗಿತ್ತು. ಒಂದು ಬಾರಿ ಹುಬ್ಬಳ್ಳಿಯಲ್ಲಿಯೂ ಭೇಟಿಯಾಗಿದ್ದಾರೆ. ನೇತಾಜಿ ಸಹ ಮದುವೆ ಮಾಡಿಕೊಳ್ಳುವ ಮಾತು ಸಹ ನೀಡಿದ್ದನು. ಶಿಕ್ಷಕಿ ತನ್ನನ್ನು ಬಲವಾಗಿ ನಂಬುತ್ತಿದ್ದಂತೆ ಅನಾರೋಗ್ಯ ಕಾರಣಗಳನ್ನ ಹೇಳಿ ಹಣ ಪಡೆದಿದ್ದಾನೆ.

    ಮದುವೆಯಾಗುವ ಹುಡುಗ ಎಂದು ಸಹೋದ್ಯೋಗಿಗಳ ಬಳಿ ಸಾಲ ಪಡೆದು ಲಕ್ಷ ಲಕ್ಷ ಹಣ ಹಾಕಿದ್ದಾರೆ. ನಂತರ ಕೆಲಸದ ನೆಪಗಳನ್ನು ಹೇಳಿ ಬರೋಬ್ಬರಿ ಏಳು ಲಕ್ಷ ರೂಪಾಯಿಯನ್ನ ಉಪಾಯವಾಗಿ ಪಡೆದುಕೊಂಡಿದ್ದಾನೆ. ಕೆಲ ದಿನಗಳ ಹಿಂದೆ ಶಿಕ್ಷಕಿಗೆ ಅನುಮಾನ ಬಂದು ಹಣ ನೀಡಿಲ್ಲ. ಶಿಕ್ಷಕಿ ಹಣ ನೀಡದಿದ್ದಾಗ, ನೇತಾಜಿ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾನೆ.

    ನೇತಾಜಿ ಹಿನ್ನೆಲೆ ಪತ್ತೆ ಮಾಡಿದಾಗ ಇದೇ ರೀತಿ ಮಹಿಳೆಯರಿಗೆ ಮೋಸ ಮಾಡಿರುವ ವಿಚಾರ ಶಿಕ್ಷಕಿಗೆ ತಿಳಿದಿದೆ. ತಾನು ಮೋಸ ಹೋಗಿರುವ ವಿಷಯ ತಿಳಿಯುತ್ತಲೇ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.

  • ಪತಿಯ ಸಮ್ಮುಖದಲ್ಲಿಯೇ ಪ್ರೇಮಿಯ ಜೊತೆ ಪತ್ನಿಯ ಮದುವೆ

    ಪತಿಯ ಸಮ್ಮುಖದಲ್ಲಿಯೇ ಪ್ರೇಮಿಯ ಜೊತೆ ಪತ್ನಿಯ ಮದುವೆ

    – ಮದ್ವೆ ಬಳಿಕ ಇಬ್ಬರದ್ದೂ ಭಿನ್ನ ಹೇಳಿಕೆ

    ಪಾಟ್ನಾ: ಪತಿಯೇ ತನ್ನ ಪತ್ನಿಯ ಮದುವೆಯನ್ನ ಆಕೆಯ ಪ್ರಿಯಕರನ ಜೊತೆ ಮಾಡಿಸಿರುವ ಘಟನೆ ಬಿಹಾರದ ಛಪ್ರಾದಲ್ಲಿ ನಡೆದಿದೆ. ಛಪ್ರಾದ ವಾರ್ಡ್-45ರ ಗೇಗಟಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದುವೆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಮದುವೆ ಬಳಿಕ ಕಳೆದ ಆರು ತಿಂಗಳಿನಿಂದ ಪತ್ನಿ ಮತ್ತು ಯುವಕ ಪ್ರೇಮಪಾಶದಲ್ಲಿ ಸಿಲುಕಿದ್ದರು. ಹಾಗಾಗಿ ಪತ್ನಿಯ ಇಚ್ಛೆಯಂತೆ ಪ್ರಿಯಕರನ ಜೊತೆ ಮದುವೆ ಮಾಡುತ್ತಿದ್ದೇನೆ. ನಾನು ಮತ್ತೊಂದು ಮದುವೆಯಾಗಿ ಮಗು ಸಾಕುತ್ತೇನೆ ಎಂದು ಪತಿ ಹೇಳಿದ್ದಾನೆ.

    ಇತ್ತ ಮದುವೆ ಬಳಿಕ ಪತ್ನಿ, ನನ್ನ ಮೇಲೆ ಆತ ಹಲ್ಲೆ ನಡೆಸುತ್ತಿದ್ದನು. ಈಗ ಹೊಡೆಯಲು ಬಂದ್ರೆ ನಾನು ತಿರುಗಿ ಹೊಡೆಯುತ್ತೇನೆ. ಯುವಕನನ್ನು ಇಷ್ಟಪಟ್ಟು ಮದುವೆಯಾಗಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ. ಇತ್ತ ಯುವಕ, ಆಕೆಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾನೆ.

    ವೀಡಿಯೋದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿಯೇ ಮದುವೆ ನಡೆದಿದೆ. ಇತ್ತ ಪತಿ ಮಾತ್ರ ಖುಷಿಯಿಂದಲೇ ಪತ್ನಿ ಮದುವೆ ಮಾಡಿಸಿ ಯುವಕನ ಜೊತೆ ಕಳುಹಿಸಿದ್ದಾನೆ. ದಂಪತಿಯ ಮಗು ಪತಿ ಬಳಿಯಲ್ಲಿದೆ. ಇದನ್ನೂ ಓದಿ: ಭೂಮಿ ಮೇಲೆ ಕೊರೊನಾ ಇದೆ – ವಿಶೇಷ ವಿಮಾನದಲ್ಲಿ ಮದುವೆ