Tag: ಲವ್

  • ಕ್ರಿಕೆಟಿಗ ರಿಷಭ್ ಪಂತ್ ಗೆ ನಾನು ಕ್ಷಮೆ ಕೇಳಿಲ್ಲ, ಕೇಳೋದು ಇಲ್ಲ: ನಟಿ ಊರ್ವಶಿ ರೌಟೇಲಾ

    ಕ್ರಿಕೆಟಿಗ ರಿಷಭ್ ಪಂತ್ ಗೆ ನಾನು ಕ್ಷಮೆ ಕೇಳಿಲ್ಲ, ಕೇಳೋದು ಇಲ್ಲ: ನಟಿ ಊರ್ವಶಿ ರೌಟೇಲಾ

    ಟೀಮ್ ಇಂಡಿಯಾ ಆಟಗಾರ (Cricket) ರಿಷಭ್ ಪಂತ್ ಮತ್ತು ನಟಿ ಊರ್ವಶಿ ರೌಟೇಲಾ (Urvashi Rautela) ನಡುವಿನ ಕೋಳಿ ಜಗಳ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸೋಷಿಯಲ್ ಮೀಡಿಯಾ ಮೂಲಕವೇ ಇಬ್ಬರೂ ತಿಕ್ಕಾಟ ಶುರು ಮಾಡಿದ್ದಾರೆ. ಅವರೊಂದು ಬರೆದರೆ, ಇವರೊಂದು ಕೌಂಟರ್ ಕೊಡುತ್ತಾ ಅಭಿಮಾನಿಗಳಿಗಿಂತೂ ಸಖತ್ ಮಜಾ ನೀಡುತ್ತಿದ್ದಾರೆ.

    ಮೊದ ಮೊದಲು ಊರ್ವಶಿ ರೌಟೇಲಾ ಮತ್ತು ರಿಷಭ್ ಪಂತ್ (Rishabh Pant) ಡೇಟಿಂಗ್ ನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಇಬ್ಬರೂ ಹಲವಾರು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಗ್ಗೆಯೂ ಗಾಸಿಪ್ ಇದ್ದವು. ಆಗಾಗ್ಗೆ ಇಬ್ಬರೂ ಪಾರ್ಟಿ ಮಾಡುತ್ತಾರೆ ಎಂದು ಹೇಳಲಾಗಿತ್ತು. ಸಡನ್ನಾಗಿ ಸಂದರ್ಶನವೊಂದರಲ್ಲಿ ಊರ್ವಶಿ ಸತ್ಯವೊಂದನ್ನು ಹೇಳಿದ್ದರು. ಅದು ರಿಷಭ್ ಕೋಪಕ್ಕೆ ಕಾರಣವಾಗಿತ್ತು. ಇದನ್ನೂ ಓದಿ:ವಿಚಾರಣೆ ವೇಳೆ ‘ಬೆತ್ತಲೆ ಫೋಟೋ’ ನಂದಲ್ಲ ಎಂದ ಬಾಲಿವುಡ್ ನಟ ರಣವೀರ್ ಸಿಂಗ್

    ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ರಿಷಭ್ ಪಂತ್ ನನ್ನನ್ನು ಭೇಟಿ ಮಾಡಲು 10 ಗಂಟೆ ಕಾದಿದ್ದರು’ ಎಂದು ಊರ್ವಶಿ ಹೇಳಿಕೊಂಡಿದ್ದರು. ನನಗಾಗಿ ಸ್ಟಾರ್ ಕ್ರಿಕೆಟಿಗ ಒಬ್ಬ ಅಷ್ಟೊಂದು ಹೊತ್ತು ಕಾದಿದ್ದ ಎಂದು ಹೇಳಿದ್ದರು.  ಅದಕ್ಕೆ ರಿಷಭ್ ಸಖತ್ ತಿರುಗೇಟು ಕೊಟ್ಟಿದ್ದರು. ಅಲ್ಲಿಂದ ಇಬ್ಬರ ಮಧ್ಯ ಕೋಲ್ಡ್ ವಾರ್ ಶುರುವಾಗಿತ್ತು. ಮೊನ್ನೆಯಷ್ಟೇ ತನ್ನ ಹೇಳಿಕೆಗಾಗಿ ಪಂತ್ ಅವರಲ್ಲಿ ಕ್ಷಮೆ (Kshame) ಕೇಳುತ್ತೇನೆ ಎನ್ನುವ ಸುದ್ದಿ ಕೂಡ ಆಗಿತ್ತು.

    ಆದರೆ, ಈ ಸುದ್ದಿಯನ್ನು ಊರ್ವಶಿ ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ನಾನು ಕ್ಷಮೆ ಕೇಳಿಲ್ಲ. ಕೇಳಿರುವ ಕ್ಷಮೆ ರಿಷಭ್ ಪಂತ್ ಗೆ ಅಲ್ಲ. ನನ್ನ ಫ್ಯಾನ್ಸ್ ಗೆ (Fans) ಮತ್ತು ನನ್ನ ಆಪ್ತರಿಗೆ ಎಂದು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ಊರ್ವಶಿ. ಅಲ್ಲಿಗೆ ಈ ಜಗಳ ಮತ್ತೆ ಮುಂದುವರೆದಿದೆ. ಯಾವ ಹಂತ ಪಡೆದುಕೊಳ್ಳತ್ತೋ ಅವರಿಬ್ಬರಿಗೆ ಗೊತ್ತು.

    Live Tv
    [brid partner=56869869 player=32851 video=960834 autoplay=true]

  • ಲವ್ ಸ್ಟೋರಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದ ಉಮೇಶ್ ಕತ್ತಿ

    ಲವ್ ಸ್ಟೋರಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದ ಉಮೇಶ್ ಕತ್ತಿ

    ಬೆಂಗಳೂರು: ಸಚಿವ ಉಮೇಶ್ ಕತ್ತಿ(Umesh Katti) ಅವರನ್ನು ಪಬ್ಲಿಕ್ ಟಿವಿ ಈ ಹಿಂದೆ ಸಂದರ್ಶನ ನೀಡಿದ್ದಾಗ ಅವರು ತಮ್ಮ ಕಾಲೇಜಿನ ದಿನಗಳನ್ನು ಮೆಲಕು ಹಾಕುತ್ತಾ, ತಮ್ಮ ವರ್ಣರಂಜಿತ ಜೀವನ ಬಗ್ಗೆ ಹಾಗೂ ಲವ್ ಸ್ಟೋರಿಯ(Love Story) ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.

    ಐ ಲವ್ ಯೂ ಎಂದು ನಾನು ಯಾರಿಗೂ ಹೇಳಿರಲಿಲ್ಲ. ಹಾಗೇ ಆಗಿನ ಕಾಲದಲ್ಲಿ ಯಾರೂ ಐ ಲವ್ ಯು ಎಂದು ಹೇಳಲು ಹೋಗುತ್ತಿರಲಿಲ್ಲ. ಆಗಿನ ಕಾಲದಲ್ಲಿ ಆ ರೀತಿ ಇರಲಿಲ್ಲ. ಆಗಿನ ಕಾಲದಲ್ಲಿ ಆ ರೀತಿ ಹೇಳಿದ್ದರೆ ಅವರ ತಂದೆ ತಾಯಿ ಹಾಗೂ ನಮ್ಮ ತಂದೆ ತಾಯಿಯರು ಸೀರಿಯಸ್ ಆಗುತ್ತಿದ್ದರು ಜೊತೆಗೆ ಬೈಯುತ್ತಿದ್ದರು. ಅದಕ್ಕೆ ಐ ಲವ್ ಯೂ ಹೇಳುವ ಪ್ರಶ್ನೆಯೇ ಬರುತ್ತಿರಲಿಲ್ಲ. ಈ ರೀತಿಯ ಪರಿಸರದಲ್ಲಿ ನಾವು ಬೆಳೆದು ಬಂದಿದ್ದೆವು ಎಂದು ಹೇಳಿದರು.

    ಇವತ್ತಿನ ದಿನಮಾನದಲ್ಲಿ ನಾವು ನೋಡುತ್ತಿದ್ದೇವೆ. ಕೆಲವರು ಐ ಲವ್ ಯೂ ಎಂದು ಸುತ್ತಾಟವನ್ನೆಲ್ಲಾ ಮಾಡುತ್ತಾರೆ. ಆದರೆ ಅವತ್ತಿನ ದಿನಗಳಲ್ಲಿ ಇದೆಲ್ಲಾ ಇರಲಿಲ್ಲ. ಅವಕಾಶವಿತ್ತು, ಆದರೆ ಹುಡುಗಿಯರು ಕಾಲೇಜಿಗೆ(College) ಬರುತ್ತಿರಲಿಲ್ಲ. ಹಾಗಾಗಿ ತೊಂದರೆ ಆಗುತ್ತಿತ್ತು ಎಂದು ತಮಾಷೆ ಮಾಡಿದ್ದರು.

    ನನ್ನ ಸಹೋದರ ಅಕ್ಕನ ಮಗಳನ್ನೇ ನಾನು ಮದುವೆ(marriage) ಆಗಿದ್ದೇನೆ. ಅವಳು ಇಲ್ಲೇ ಕಲಿಯುತ್ತಿದ್ದಳು. ಇಲ್ಲೇ ಮದುವೆಯೂ ಆಯಿತು. ಆದರೆ ಲೈನ್ ಎಲ್ಲಾ ನಾನು ಹೊಡೆದಿಲ್ಲ. ರಜೆಯಿದ್ದಾಗ ಅವಳು ಇಲ್ಲಿ ಬರುತ್ತಿದ್ದಳು, ನಾನು ಅಲ್ಲಿ ಹೋಗುತ್ತಿದ್ದೆ. ಹಾಗಾಗಿ ಸಂಬಂಧಗಳು ಬಂದಿಲ್ಲ ಎಂದು ಹಳೆಯದ್ದನ್ನು ನೆನಪು ಮಾಡಿಕೊಂಡಿದ್ದರು.

    ಅಕ್ಕನ ಮಗಳ ಪರಿಚಯವಿತ್ತು. ಆದರೆ ಆಗೆಲ್ಲಾ ಲವ್ ಯೂ ಅನ್ನೊದು ಅವಳಿಗೂ ಹೇಳಲು ಬರುತ್ತಿರಲಿಲ್ಲ. ನನಗೂ ಹೇಳಲು ಬರುತ್ತಿರಲಿಲ್ಲ. ಈಗ ಹೇಳಲು ದುಡ್ಡು ಕಾಸಿನ ಪ್ರಶ್ನೆ ಬರುವುದಿಲ್ಲ, ಬದಲಿಗೆ ಲವ್ ಯೂ ಹೇಳುವ ಆ ವಯಸ್ಸು ನಮ್ಮಿಬ್ಬರಿಗೂ ಮುಗಿದಿದೆ ಎಂದು ನೆನಪು ಮಾಡಿಕೊಂಡಿದ್ದರು.

    ಶಾಲೆಯ ನೆನಪು ಮಾಡಿಕೊಂಡಿದ್ದ ಅವರು, ಶಾಲೆಗೆ ಹೋಗುತ್ತಿದ್ದೆವು. ಆದರೆ ನಮಗೆ ಶಾಲೆ ಕಲಿತು ಕೆಲಸ ಮಾಡಬೇಕು ಎಂಬುದಿರಲಿಲ್ಲ. ತಂದೆ ತಾಯಿಯರು ಶಾಲೆಗೆ ಕಳುಹಿಸುತ್ತಾರೆ. ನಾವು ಶಾಲೆಗೆ ಹೋಗಬೇಕು ಎನ್ನೋದಷ್ಟೇ ಇತ್ತು. ಮದುವೆ ಆದಾಗ ಶಾಲೆ ಬಿಟ್ಟೆವು ಎಂದು ತಿಳಿಸಿದರು.

    ಆಗಿನ ಚುಡುಯಿಸುವುದಕ್ಕೂ ಈಗ ಚುಡಾಯಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಈಗ ಹುಡುಗಿಯರೇ ಹುಡುಗರನ್ನು ಚುಡಾಯಿಸುತ್ತಿದ್ದಾರೆ. ಆಗೆಲ್ಲ ನಾವು ಹುಡುಗಿಯರನ್ನು ಚುಡಾಯಿಸುತ್ತಿದ್ದೆವು. ಮನೆ ಹತ್ತಿರ ಒಂದು ಆಲದ ಮರವಿದೆ. ಮರದ ಮೇಲೆ ಕೂತು ಅಲ್ಲಿಂದ ಕಾಯಿ ಒಗೆಯೋದು. ಕಲ್ಲು ಒಗೆಯೋದು ಎಲ್ಲಾ ಮಾಡುತ್ತಿದ್ದೆವು. ಆಗೆಲ್ಲಾ ಅವರು ಅಲ್ಲಿ ಕೂಗಾಡಿ, ನೇರವಾಗಿ ನಮ್ಮ ಮನೆಗೆ ಬಂದು ನನ್ನ ತಂದೆ ತಾಯಿಗೆ ದೂರು ಹೇಳುತ್ತಿದ್ದರು. ಆಗ ತಂದೆ ತಾಯಿಯರು ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆಗೆಲ್ಲಾ ನಮಗೆ ಅರ್ಥವಾಗುತ್ತಿರಲಿಲ್ಲ. ಆದರೂ ಈ ರೀತಿ ಮಾಡಿ ಮಜ ಮಾಡುತ್ತಿದ್ದೆವು ಎಂದು ನೆನಪು ಮಾಡಿಕೊಂಡರು. ಇದನ್ನೂ ಓದಿ: ದೇವರು ಇನ್ನೊಮ್ಮೆ ದೊಡ್ಡಪ್ಪನಿಗೆ ಜೀವ ಕೊಡಲಿ: ಪೃಥ್ವಿ ಕತ್ತಿ ಕಣ್ಣೀರು

    ಆಗಿನ ಕಾಲದಲ್ಲಿ 1 ತಿಂಗಳ ರಜೆ ಇರುತ್ತಿತ್ತು. ಹಬ್ಬ ಆಚರಣೆ ಮಾಡಲು ತಾಯಿ ಮನೆಗೆ ಹೋಗುತ್ತಿದ್ದೆವು. ಇದು ಇರೋದು ಚಿಕ್ಕೊಡಿ ತಾಲೂಕಿನ ಖಡಗ ಊರು ನಮ್ಮ ತಾಯಿ ಊರು ಆಗಿದೆ. ಹಬ್ಬ, ಹುಣ್ಣಿಮೆ, ಬೇಸಿಗೆಯಲ್ಲಿ ತಾಯಿ ಮನೆಗೆ ಹೋಗಿ ಮಜಾ ಮಾಡುತ್ತಿದ್ದೆವು. ಆಗ ಎಲ್ಲರೂ ಒಟ್ಟಿಗೆ ಕೂಡಿ ಹಬ್ಬ ಮಾಡುತ್ತಿದ್ದೆವು. ಇತ್ತೀಚೆಗೆ ಕುಟುಂಬ ಒಗ್ಗಟಿಲ್ಲದಿದ್ದರಿಂದ ನಾವು ಇಲ್ಲೇ ಹಬ್ಬ ಆಚರಿಸುತ್ತೇವೆ. ಅವರು ಅಲ್ಲೇ ಹಬ್ಬ ಮಾಡುತ್ತಾರೆ. ತಾಯಿ ಮಾಡುತ್ತಿರುವ ರೊಟ್ಟಿ, ಕಾಯಿ ಪಲ್ಯ ತುಂಬಾ ರುಚಿಕರವಾಗಿರುತ್ತಿತ್ತು ಎಂದು ಹೇಳಿದ್ದರು. ಇದನ್ನೂ ಓದಿ: ಸಕ್ಕರೆ ಉದ್ಯಮಕ್ಕೆ ಉಮೇಶ್ ಕತ್ತಿ ಕೊಡುಗೆ ಮರೆಯುವಂತಿಲ್ಲ: ಡಿ.ಕೆ ಶಿವಕುಮಾರ್

    Live Tv
    [brid partner=56869869 player=32851 video=960834 autoplay=true]

  • ಕ್ರಿಕೆಟ್ ದೇವರು ಸಚಿನ್ ಪುತ್ರಿಯ ಜೊತೆ ಶುಭಮನ್ ಗಿಲ್ ಲವ್ ಬ್ರೇಕ್ ಅಪ್

    ಕ್ರಿಕೆಟ್ ದೇವರು ಸಚಿನ್ ಪುತ್ರಿಯ ಜೊತೆ ಶುಭಮನ್ ಗಿಲ್ ಲವ್ ಬ್ರೇಕ್ ಅಪ್

    ಭಿಮಾನಿಗಳ ಪಾಲಿನ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಪುತ್ರ ಸಾರಾ ತೆಂಡೂಲ್ಕರ್ ಮತ್ತು ಕ್ರಿಕೆಟಿಗ ಶುಭಮನ್ ಗಿಲ್ ನಡುವೆ ಪ್ರೀತಿ ಗೀತಿ ಇತ್ಯಾದಿ ಇದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಚಾರ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇಬ್ಬರೂ ಅದೆಷ್ಟೋ ಬಾರಿ ಒಟ್ಟಿಗೆ ಕಾಣಿಸಿಕೊಂಡು ಸುದ್ದಿಗಳಿಗೆ ಆಹಾರವಾಗಿದ್ದಾರೆ. ಆದರೆ, ಸಾರಾ ಮತ್ತು ಶುಭಮನ್ ಬಾಂಧವ್ಯ ಚೆನ್ನಾಗಿ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಟೀಮ್ ಇಂಡಿಯಾದ ಪ್ರಭಾವಿ ಕ್ರಿಕೆಟಿಗ, ಸ್ಟಾರ್ ಓಪನರ್ ಎಂದೇ ಖ್ಯಾತರಾಗಿರುವ ಶುಭಮನ್ ಗಿಲ್ ಮತ್ತು ತೆಂಡೂಲ್ಕರ್ ಪುತ್ರಿ ಸಾರಾ ಇಬ್ಬರೂ ಒಬ್ಬರಿಗೊಬ್ಬರು ಇಷ್ಟಪಟ್ಟಿದ್ದರು ಎನ್ನುವುದು ಜಗಜ್ಜಾಹೀರು. ಆದರೂ, ಇಬ್ಬರೂ ಈ ಕುರಿತು ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಂತ ಅದು ಕೇವಲ ಗಾಸಿಪ್ ಕೂಡ ಆಗಿರಲಿಲ್ಲ. ಇಬ್ಬರೂ ಪ್ರೀತಿಸುತ್ತಿರುವ ವಿಚಾರ ಕ್ರಿಕೆಟ್ ತಂಡದ ಬಹುತೇಕರಿಗೆ ಗೊತ್ತಿತ್ತು. ಇದೀಗ ಆ ಪ್ರೀತಿ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:‘ಜೊತೆ ಜೊತೆಯಲಿ’ ಅನಿರುದ್ಧ ಗಲಾಟೆ ಧಾರವಾಡಕ್ಕೆ ಶಿಫ್ಟ್: ಪ್ರಕರಣ ತಿಳಿಗೊಳಿಸಲು ಸ್ನೇಹಿತರ ಮನವಿ

    ಲವ್ ಬ್ರೇಕ್ ಅಪ್ ನಂತರ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿರುವುದು ಬೆಳಕಿಗೆ ಬಂದಿದೆ. ಈ ಜೋಡಿ ಆಗಾಗ್ಗೆ ಅಭಿನಂದನೆಗಳನ್ನು ಮತ್ತು ಶುಭಾಶಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಬಾರಿ ವಿನಿಮಯ ಮಾಡಿಕೊಂಡಿದಿದೆ. ಇದೀಗ ಇಬ್ಬರೂ ಅನ್ ಫಾಲೋ ಮಾಡುವ ಮೂಲಕ ಅನುಮಾನ ಹುಟ್ಟು ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್

    ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್

    ಬಿಗ್ ಬಾಸ್ ಮನೆಯಲ್ಲಿ ಒಂಟಿಯಾಗಿ ಹೋದವರು, ವಾಪಸ್ಸು ಜಂಟಿಯಾಗಿಯೇ ಬರುತ್ತಾರೋ ಎನ್ನುವಷ್ಟು ಪ್ರೇಮಕಥೆಗಳು ಅರಳುತ್ತಿವೆ. ಈಗಾಗಲೇ ಸ್ಫೂರ್ತಿ ಗೌಡ, ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ನಡುವೆ ತ್ರಿಕೋನ ಪ್ರೇಮ ಶುರುವಾಗಿದೆ. ಯಾರು, ಯಾರನ್ನು ಲವ್ ಮಾಡುತ್ತಿದ್ದಾರೋ ಅವರಿಗೇ ಗೊತ್ತಿರುವ ವಿಚಾರವಾದರೂ, ಜನರಿಗೆ ತಮ್ಮ ಮೂವರೊಳಗೆ ಇನ್ನ್ಯಾರೋ ಇದ್ದಾರೆ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಮತ್ತೊಂದು ಲವ್ ಸ್ಟೋರಿ ಚಿಗುರೊಡೆಯುತ್ತಿದೆ.

    ಈಗಾಗಲೇ ಜೀವನಲ್ಲಿ ಒಂದು ಲವ್ ಫೆಲ್ಯೂವರ್ ಕಂಡಿರುವ ಪುಟ್ಟಗೌರಿ ಖ್ಯಾತಿಯ ಸಾನ್ಯಾ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ನಡುವೆ ಏನೋ ನಡೀತಾ ಇದೆ ಎನ್ನುವುದು ಬಿಗ್ ಬಾಸ್ ಮನೆಯಲ್ಲಿದ್ದವರ ಗುಮಾನಿ. ಅದಕ್ಕೆ ಪುಷ್ಠಿ ಎನ್ನುವಂತೆ ಈ ಜೋಡಿ ಸದಾ ಜೊತೆಯಾಗಿಯೇ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುತ್ತದೆ. ತಮ್ಮ ನಡುವೆ ಏನೋ ಇದೆ ಎನ್ನುವಂತೆ ನಡೆದುಕೊಳ್ಳುತ್ತಿದೆ. ಹೀಗಾಗಿ ದೊಡ್ಮನೆಯಲ್ಲಿ ಈ ಜೋಡಿಯ ಬಗ್ಗೆ ಗುಸುಗುಸು ಶುರುವಾಗಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಟ್ರಯಾಂಗಲ್ ಲವ್ ಸ್ಟೋರಿ: ರಾಕೇಶ್ ಅಡಿಗ ಪ್ರೇಮ ಪುರಾಣ

    ರೂಪೇಶ್ ಮತ್ತು ತಮ್ಮ ನಡುವಿನ ಅತೀ ಸಲುಗೆ ಇರುವ ವಿಚಾರವು ಬಿಗ್ ಬಾಸ್ ಮನೆಯಲ್ಲಿ ಇರುವವರಿಗೆ ತಿಳಿದಿದೆ ಎಂದು ಸ್ವತಃ ಸಾನ್ಯಾಗೂ ಗೊತ್ತಾಗಿದೆ. ಹಾಗಾಗಿಯೇ ಅವರು ಇದಕ್ಕೆ ಸ್ಪಷ್ಟ ಪಡಿಸಲು ಹೋಗುತ್ತಾರೆ. ರೂಪೇಶ್ ಮತ್ತು ತಮ್ಮ ನಡುವೆ ಅಂಥದ್ದೂ ಏನೂ ಇಲ್ಲ, ನಾವು ಜಸ್ಟ್ ಫ್ರೆಂಡ್ಸ್ ಎಂದು ಹೇಳುವ ಮೂಲಕ ತಿಳಿಗೊಳಿಸಲು ಪ್ರಯತ್ನಿಸುತ್ತಾರೆ. ಏನೇ ಪ್ರಯತ್ನಿಸಿದರೂ, ಅವರುಗಳ ನಡೆ ಮಾತ್ರ ಈಗಲೂ ಪ್ರೇಮಿಗಳ ಲಕ್ಷಣಗಳಂತೆ ಗೋಚರಿಸುತ್ತಿರುವುದನ್ನು ಸ್ಪರ್ಧಿಗಳು ನೋಟಿಸ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದೇವರಕೊಂಡ ಫೋಟೋ ಹಂಚಿಕೊಂಡು, ಹೃದಯದ ಚೂರುಗಳು ಎಂದು ಹೊಗಳಿದ ರಶ್ಮಿಕಾ ಮಂದಣ್ಣ

    ವಿಜಯ್ ದೇವರಕೊಂಡ ಫೋಟೋ ಹಂಚಿಕೊಂಡು, ಹೃದಯದ ಚೂರುಗಳು ಎಂದು ಹೊಗಳಿದ ರಶ್ಮಿಕಾ ಮಂದಣ್ಣ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ಏನೂ ಇಲ್ಲ ಅನ್ನುವ ಸುದ್ದಿಯ ನಡುವೆಯೇ ಮತ್ತೊಂದು ಹೊಸ ಸುದ್ದಿಯನ್ನು ಕೊಟ್ಟಿದ್ದಾರೆ ರಶ್ಮಿಕಾ ಮಂದಣ್ಣ. ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಒಂದೂವರೆ ವರ್ಷದಿಂದ ಈ ಲವ್ ಗೆ ಬ್ರೇಕ್ ಅಪ್ ಆಗಿದೆ ಎನ್ನುವ ಮಾತಿದೆ. ಆದರೂ, ರಶ್ಮಿಕಾ ಅವರು ವಿಜಯ್ ದೇವರಕೊಂಡ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

    ತಮ್ಮ ಜೀವನದ ಪ್ರಮುಖ ವ್ಯಕ್ತಿಗಳು ಹೆಸರಿನಲ್ಲಿ ಒಂದಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ರಶ್ಮಿಕಾ, ಆ ಫೋಟೋಗಳಲ್ಲಿ ವಿಜಯ್ ದೇವರಕೊಂಡ ಕೂಡ ಇದ್ದಾರೆ. ಅಲ್ಲದೇ, ತನ್ನ ಬದುಕಿಗೆ ಮೆಟ್ಟಿಲಾದವರು ಇವರು ಎಂದು ಕ್ಯಾಪ್ಷನ್ ಬರೆದಿದ್ದಾರೆ. ಇಂದು ಅವರು ಸಿನಿಮಾ ರಂಗಕ್ಕೆ ಬರಲು ಕನ್ನಡದ ನಟರೊಬ್ಬರು ಕಾರಣ. ಆದರೆ, ಆ ನಟರ ಒಂದೇ ಒಂದು ಫೋಟೋ ಕೂಡ ಅಲ್ಲಿಲ್ಲ. ಇದನ್ನೂ ಓದಿ: ಮೈ ತುಂಬಾ ಬಟ್ಟೆ ಹಾಕು ಅಂದಿದ್ದಕ್ಕೆ, ಉರ್ಫಿಗೆ ಬಂತು ಜ್ವರ

    ದೇವರಕೊಂಡ ಜೊತೆ ಇರುವಂತಹ ಫೋಟೋವನ್ನು ರಶ್ಮಿಕಾ ಅಪ್ ಲೋಡ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಮತ್ತೆ ಕುತೂಹಲದಿಂದ ಕಾಮೆಂಟ್ ಮಾಡಿದ್ದಾರೆ. ಲವ್ ಬ್ರೇಕ್ ಅಪ್ ಅಂತ ಹೇಳಿದ್ದವರು, ಇದೇನಿದು ಹೊಸ ಆಟ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಂದು ನಿಮ್ಮನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ ನಟರನ್ನೇ ಮರೆತಿದ್ದೀರಿ ಎಂದೂ ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿರಹ ವಾರ್ಷಿಕೋತ್ಸವ: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಲವ್ ಬ್ರೇಕ್ ಅಪ್

    ವಿರಹ ವಾರ್ಷಿಕೋತ್ಸವ: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಲವ್ ಬ್ರೇಕ್ ಅಪ್

    ತೆಲುಗು ನಟ ವಿಜಯ್ ದೇವರಕೊಂಡ ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದರು ಎಂದು ಬಹಿರಂಗವಾಗಿಯೇ ಕಾಫಿ ವಿತ್ ಕರಣ್ ಶೋ ನಲ್ಲಿ ನಟಿ ಅನನ್ಯ ಪಾಂಡೆ ಹೇಳಿದ್ದರು. ಅನನ್ಯ ಜೊತೆಯಲ್ಲೇ ಇದ್ದ ವಿಜಯ್ ದೇವರಕೊಂಡ ಈ ಮಾತಿಗೆ ಅಲ್ಲಗಳೆಯದೇ ಅದನ್ನು ಒಪ್ಪುವಂತೆ ಕೂತಿದ್ದರು. ರಶ್ಮಿಕಾ ಅವರ ಪ್ರಶ್ನೆ ಬಂದಾಗ ‘ಡಾರ್ಲಿಂಗ್’ ಎನ್ನುವ ಶಬ್ದ ಬಳಸಿದ್ದರು ವಿಜಯ್. ಆದರೆ, ಇವರ ಲವ್ ಬ್ರೇಕ್ ಅಪ್ ಆಗಿ ಎರಡು ವರ್ಷಗಳು ಕಳೆದಿವೆಯಂತೆ.

    ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಸಾವಿರ ಸಾವಿರ ಸಾಕ್ಷಿಗಳಿವೆ. ಕ್ಯಾಮೆರಾ ಕಣ್ಣಿಗೆ ಇಬ್ಬರು ಮಧ್ಯರಾತ್ರಿ ಹೋಟೆಲ್ ನಲ್ಲಿ ಸಿಕ್ಕಾಕಿಕೊಂಡಿದ್ದಾರೆ. ಗೋವಾ ಟ್ರಿಪ್ ಮಾಡಿದ್ದಾರೆ. ಒಟ್ಟೊಟ್ಟಿಗೆ ಪಾರ್ಟಿ ಮಾಡಿದ್ದಾರೆ. ನಾನಾ ಪಾರ್ಟಿಗಳಿಗೆ ಒಟ್ಟಿಗೆ ಹೋಗಿದ್ದಾರೆ. ಇದೆಲ್ಲವೂ ನಡೆದದ್ದು ಎರಡು ವರ್ಷಗಳ ಹಿಂದೆ. ಆದರೆ, ಇದೀಗ ಇಬ್ಬರೂ ನಾನೊಂದು ತೀರ, ನೀನೊಂದು ತೀರಾ ಅಂತ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಶೋಭಿತಾ ಜೊತೆಗಿನ ಡೇಟಿಂಗ್ ವಿಚಾರಕ್ಕೆ ಕೊನೆಗೂ ಮೌನ ಮುರಿದ ನಾಗಚೈತನ್ಯ

    ಒಟ್ಟೊಟ್ಟಿಗೆ ಸಿನಿಮಾ ಮಾಡಿ, ಒಬ್ಬರಿಗೊಬ್ಬರು ಬಿಟ್ಟಿರಲಾದಂತಹ ಸ್ನೇಹ ಸಂಪಾದಿಸಿ ಇದೀಗ ಅವರು ಬೇರೆ ಆಗಿರುವುದು ಹಲವು ಕಾರಣಗಳು ಇವೆಯಂತೆ. ಆದರೆ, ಇಬ್ಬರೂ ಆ ಕಾರಣಗಳನ್ನು ಹೇಳಿಕೊಂಡಿಲ್ಲ. ವಿಜಯ್ ಬದುಕಿನಲ್ಲಿ ಅನನ್ಯ ಪಾಂಡೆ ಬಂದ ನಂತರ ಈ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಜ್ಯೋತಿಷಿಯೊಬ್ಬನ ಮಾತು ಕೇಳಿ ರಶ್ಮಿಕಾ ದೂರವಾಗಿದ್ದಾರೆ ಎನ್ನುವ ಸುದ್ದಿಯೂ ಇದೆ. ಆದರೂ, ಯಾವುದೂ ಖಚಿವಲ್ಲ. ಆದರೆ, ಎರಡು ವರ್ಷಗಳಿಂದ ಇವರು ದೂರವಾಗಿರುವುದಂತೂ ಸತ್ಯ.

    Live Tv
    [brid partner=56869869 player=32851 video=960834 autoplay=true]

  • ಟೆನ್ನಿಸ್ ಕ್ಲಬ್ ಮತ್ತು ಬಾಲಿವುಡ್ ನಟ ಆಮೀರ್ ಖಾನ್ ಫಸ್ಟ್ ಲವ್

    ಟೆನ್ನಿಸ್ ಕ್ಲಬ್ ಮತ್ತು ಬಾಲಿವುಡ್ ನಟ ಆಮೀರ್ ಖಾನ್ ಫಸ್ಟ್ ಲವ್

    ಸ್ಟ್ ಲವ್ ಯಾರಿಗೆ ಎಲ್ಲಿ ಆಗುತ್ತದೆಯೋ ಗೊತ್ತಿಲ್ಲ. ಆದರೆ, ಆಮೀರ್ ಖಾನ್ ಅವರಿಗೆ ಮಾತ್ರ ಮೊದಲ ಪ್ರೇಮ ಚಿಗುರೊಡೆದಿದ್ದು ಟೆನ್ನಿಸ್ ಕ್ಲಬ್ ನಲ್ಲಿ ಅಂತೆ. ಸ್ವತಃ ಅವರೇ ಅದನ್ನು ಹೇಳಿಕೊಂಡಿದ್ದಾರೆ. ಇನ್ನೂ ಫಸ್ಟ್ ಲವ್ ನೆನಪುಗಳನ್ನು ಅವರು ಇಟ್ಟುಕೊಂಡಿದ್ದಾರೆ. ಆ ಲವ್ ಮಧುರ ಕ್ಷಣಗಳನ್ನು ತಮ್ಮಲ್ಲಿ ಮೂಡಿಸಿದ್ದರ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ.

    ನನಗೆ ಮೊದಲ ನೋಟದಲ್ಲೇ ಲವ್ ಆಗಿದ್ದು ಟೆನ್ನಿಸ್  ಕ್ಲಬ್ ನಲ್ಲಿ. ನಾನು ಆ ಸುಂದರಿಯನ್ನು ಮತ್ತು ಸುಂದರ ಕ್ಷಣಗಳನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅದೊಂದು ಮಧುರ ಅನುಭೂತಿ. ಇವತ್ತಿಗೂ ಅದು ಪದೇ ಪದೇ ನನಗೆ ನೆನಪಾಗುತ್ತದೆ. ಮೊದಲ ಲವ್ ನಲ್ಲಿ ಆದ ರೋಮಾಂಚನ ಮತ್ತ್ಯಾವತ್ತೂ ನನಗೆ ಆಗಿಲ್ಲ. ಪ್ರೀತಿಸುವ ದೃಶ್ಯಗಳು ಬಂದಾಗ ಅದು ನೆನಪಾಗುತ್ತದೆ ಎಂದು ಬಾಲಿವುಡ್ ನಟ ಆಮೀರ್ ಖಾನ್ ಹೇಳಿಕೊಂಡಿದ್ದಾರೆ. ಆ ಪ್ರೇಮವೇ ನಿಜವಾದದ್ದು ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ:`ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ

    ಈವರೆಗೂ ಆಮೀರ್ ಖಾನ್ ಪ್ರೀತಿಸಿಯೇ ಮದುವೆ ಆಗಿದ್ದು. ಇಬ್ಬರು ಹೆಂಡರು. ಇಬ್ಬರಿಗೂ ಡಿವೋರ್ಸ್ ನೀಡಿದ್ದಾರೆ. ಆದರೆ, ಇವತ್ತಿಗೂ ಅವರೊಂದಿಗೆ ಅದೇ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಪರಸ್ಪರ ಗೌರವಿಸಿಕೊಂಡು ಬದುಕುತ್ತಿದ್ದಾರೆ. ಅದೇ ನಿಜವಾದ ಪ್ರೀತಿ ಎಂದೂ ಅವರು ಅನೇಕ ಬಾರಿ ಸಾರಿದ್ದಾರೆ. ಹಾಗೆಯೇ ಆಮೀರ್ ಪುತ್ರಿ ಕೂಡ ಪ್ರೀತಿಸುತ್ತಿದ್ದಾರೆ. ಮದುವೆಯಾಗದೇ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದಾರೆ.

    Live Tv

  • ಬೇರೊಬ್ಬರ ಪತ್ನಿ ಜೊತೆಗೆ ಲವ್ವಿ-ಡವ್ವಿ – ಕೊಲೆಯಾದ ಆಟೋ ಚಾಲಕ

    ಬೇರೊಬ್ಬರ ಪತ್ನಿ ಜೊತೆಗೆ ಲವ್ವಿ-ಡವ್ವಿ – ಕೊಲೆಯಾದ ಆಟೋ ಚಾಲಕ

    ಚಾಮರಾಜನಗರ: ಮನೆಯಲ್ಲಿ ಚಿನ್ನದಂತಹ ಹೆಂಡ್ತಿಯಿದ್ರೂ ಕೆಲ ಗಂಡಸರು ಬೇರೆ ಮನೆಯ ಹೆಂಗಸರ ಸಹವಾಸ ಮಾಡಿ ಜೀವನ ಹಾಳು ಮಾಡಿಕೊಂಡ ಅನೇಕ ನಿದರ್ಶನ ನಮ್ಮ ಕಣ್ಣ ಮುಂದಿವೆ. ಇಂತಹ ಘಟನೆಯ ಸಾಲಿಗೆ ಕೊಳ್ಳೆಗಾಲದಲ್ಲಿ ನಡೆದ ಕೊಲೆ ಪ್ರಕರಣ ಸಹ ಸೇರ್ಪಡೆಯಾಗಿದೆ.

    ಕಳೆದ ಮಾರ್ಚ್ 31 ರಂದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಬಳಿಯ ದರ್ಗಾದ ಬಳಿ ಅಪರಿಚಿತ ವ್ಯಕ್ತಿಯ ಕೊಲೆಯಾಗಿತ್ತು. ಇದರ ಜಾಡು ಹಿಡಿದು ಹೊರಟ ಪೊಲೀಸರ ತಂಡ ನಿಂತಿದ್ದು ರಾಮನಗರದಲ್ಲಿ. ಹೌದು, ಅಲ್ಲಿ ಕೊಲೆಯಾದ ವ್ಯಕ್ತಿ ಸೈಯದ್ ಅರೀಫ್ ಪಾಷಾ ಮೂಲತಃ ರಾಮನಗರದ ನಿವಾಸಿ. ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಈತ ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡು ಇದ್ದಿದ್ರೆ ಇವತ್ತು ಕೊಲೆಯಾಗುವ ಪರಿಸ್ಥಿತಿ ಬರುತ್ತ ಇರಲಿಲ್ಲ. ಇದನ್ನೂ ಓದಿ: ವೀಸಾ ಇಲ್ಲದೇ ಇಂಡೋ-ನೇಪಾಳ ಗಡಿಗೆ ಬಂದಿದ್ದ ಇಬ್ಬರು ಚೀನಿ ಪ್ರಜೆಗಳು ಅರೆಸ್ಟ್ 

    ಈತ ಆಟೋ ಚಾಲನೆ ಮಾಡಪ್ಪ ಅಂದ್ರೆ ಬೇರೆಯವರ ಪತ್ನಿ ಜೊತೆ ಆಟ ಆಡ್ತಿದ್ದ. ಅದೇ ರಾಮನಗರದ ರೇಷ್ಮೆಗೂಡು ವ್ಯಾಪಾರಿ ಸೈಯದ್ ಸಿಕಂದರ್ ಪತ್ನಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ವಿಚಾರ ತಿಳಿದ ಸಿಕಂದರ್ ಇಬ್ಬರಿಗೂ ಬುದ್ಧಿವಾದ ಹೇಳಿದ್ದ. ಆದ್ರೆ ಸಿಕಂದರ್ ಮಾತು ಕೇಳದ ಇಬ್ಬರೂ ತಮ್ಮ ಆಟ ಮುಂದುವರೆಸಿದ್ರು. ಇದರಿಂದ ರೊಚ್ಚಿಗೆದ್ದ ಸಿಕಂದರ್ ತನ್ನ ಸ್ನೇಹಿತರ ಜೊತೆ ಸೇರಿ ಸೈಯದ್ ಅರೀಫ್ ಪಾಷಾಗೆ ಮಸಣದ ಹಾದಿ ತೋರಿದ್ದಾನೆ.

    ಕೊಲೆಗೆ ಪ್ಲಾನ್‌
    ಸಿಕಂದರ್ ಮಾತು ಕೇಳದ ಅರೀಪ್ ಪಾಷಾನನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ. ತನ್ನ ಸ್ನೇಹಿತರ ಜೊತೆ ಅವನನ್ನು ಶಿವನಸಮುದ್ರದ ದರ್ಗಾ ದರ್ಶನ ಮಾಡಿಕೊಂಡು ಬರೋಣಾ ಎಂದು ಕರೆದುಕೊಂಡು ಬಂದಿದ್ದಾನೆ. ಸಿಕಂದರ್ ಮಾತು ಕೇಳಿ ಬಂದ ಸೈಯದ್ ಅರೀಪ್ ಪಾಷಾನನ್ನು ಸಿಕಂದರ್ ಮತ್ತು ಆತನ ಸ್ನೇಹಿತರು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ನಂತರ ಏನು ಗೊತ್ತಿಲ್ಲದಂತೆ ಅಲ್ಲಿಂದ ಜಾಗ ಖಾಲಿ ಮಾಡಿದ್ರು. ಇದನ್ನೂ ಓದಿ:  ಚರಂಡಿ ವಿಷಯಕ್ಕೆ ಜಗಳ – ಯುವಕನ ಕೊಲೆ, 6 ಜನರ ಸ್ಥಿತಿ ಗಂಭೀರ 

    ಇತ್ತ ಅಪರಿಚಿತ ವ್ಯಕ್ತಿ ಕೊಲೆ ಪ್ರಕರಣ ದಾಖಲಿಸಿಕೊಂಡ ಕೊಳ್ಳೇಗಾಲ ಪೊಲೀಸರು ತನಿಖೆ ಕೈಗೊಂಡಾಗ ಪ್ರಕರಣ ಬಯಲಿಗೆ ಬಂದಿದೆ. ಸದ್ಯ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಸೈಯದ್ ಸಿಕಂದರ್ ಈತನ ಸ್ನೇಹಿತರಾದ ಮುಸಾವೀರ್, ಶೌಕತ್ ಅಲಿ, ಹಬೀಬ್ ವುಲ್ಲಾ, ಸೈಯದ್ ಸಲೀಂ ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

  • ಅಮೀರ್ ಖಾನ್ ಮಗಳ ಲವ್ ಕಹಾನಿಗೆ 2 ವರ್ಷ : ಮತ್ತೆ ಬಿಕಿನಿಯಲ್ಲೇ ಪೋಸ್ ಕೊಟ್ಟ ಇರಾ

    ಅಮೀರ್ ಖಾನ್ ಮಗಳ ಲವ್ ಕಹಾನಿಗೆ 2 ವರ್ಷ : ಮತ್ತೆ ಬಿಕಿನಿಯಲ್ಲೇ ಪೋಸ್ ಕೊಟ್ಟ ಇರಾ

    ಬಾಲಿವುಡ್ ಖ್ಯಾತ ನಟ ಅಮೀರ್ ಖಾನ್ ಈ ಕಡೆ ಲಾಲ್ ಸಿಂಗ್ ಛಡ್ಡಾ ಸಿನಿಮಾದ ಬಿಡುಗಡೆಯ ಸಂಭ್ರಮದಲ್ಲಿದ್ದರೆ, ಅತ್ತ ಮಗಳು ಇರಾ ಖಾನ್ ತನ್ನ ಪ್ರೀತಿಗೆ ಎರಡು ವರ್ಷ ತುಂಬಿರುವ ಸಡಗರದಲ್ಲಿ ಇದ್ದಾಳೆ. ಆ ಸಂಭ್ರಮವನ್ನು ಅವರು ತನ್ನ ಬಾಯ್ ಫ್ರೈಂಡ್ ನಪೂರ್ ಶಿಖರ್ ಜೊತೆ ಹಾಟ್ ಫೋಟೋ ಶೇರ್ ಮಾಡಿ, ಪ್ರೀತಿಯ ಸಾಲುಗಳನ್ನು ಬರೆದಿದ್ದಾರೆ. ಇದನ್ನೂ ಓದಿ : ನಟ ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ : ಭದ್ರತೆ ಹೆಚ್ಚಿಸಲು ನಿರ್ಧಾರ

    ಪ್ರೀತಿ ಮತ್ತು ಪ್ರಿಯತಮನ ವಿಷಯದಲ್ಲಿ ಇರಾ ಯಾವತ್ತೂ ಮುಚ್ಚುಮರೆ ಮಾಡಿದವರು ಇಲ್ಲ. ಸಮಯ ಸಿಕ್ಕಾಗೆಲ್ಲ ಆ ಹುಡುಗನ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಅವನೊಂದಿಗಿರುವ ಫೋಟೋವನ್ನು ಶೇರ್ ಮಾಡುತ್ತಲೇ ಇರುತ್ತಾರೆ. ತಮ್ಮ ಪ್ರೀತಿಗೆ ಇದೀಗ ಎರಡು ವರ್ಷ ತುಂಬಿರುವ ಸಂದರ್ಭದಲ್ಲಿ ಹುಡುಗನ ಜೊತೆ ತಮ್ಮ ಹುಟ್ಟು ಹಬ್ಬದಂದು ತೆಗೆದಿದ್ದ ಬಿಕಿನಿ ಫೋಟೋಗಳನ್ನೇ ಶೇರ್ ಮಾಡಿ ಮತ್ತೆ ಟ್ರೋಲ್ ಗೆ ಗುರಿಯಾಗಿದ್ದಾರೆ.

    ಹುಡುಗನ ಜೊತೆ ಫೋಟೋ ಶೇರ್ ಮಾಡಿರುವ ಇರಾ, ತಮ್ಮ ಪ್ರಾಮಾಣಿಕ ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾರೆ. ಯಾವಾಗಲೂ ನಾವು ಹೀಗೆಯೇ ಇದ್ದೇವೆ ಎನ್ನುವ ಭಾವನೆಯೇ ಮಧುರು. ಐ ಲವ್ ಯೂ ಎಂದು ಬರೆದಿದ್ದಾರೆ. ಪೂಲ್ ನಲ್ಲಿ ಹುಡುಗನ ಜೊತೆ ಇರುವ ಹಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅವಮಾನ

    ಕೆಲ ದಿನಗಳ ಹಿಂದೆಯಷ್ಟೇ ಬಿಕಿನಿಯಲ್ಲೇ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು ಇರಾ ಖಾನ್. ಅವತ್ತು ಅವರು ತಮ್ಮ ಬಾಯ್ ಫ್ರೆಂಡ್ ಮತ್ತು ಇತರ ಸ್ನೇಹಿತರ ಜೊತೆಗೆ ಪೂಲ್ ಸೈಡ್ ಪಾರ್ಟಿ ಮಾಡಿದ್ದರು. ಅಲ್ಲದೇ, ತಂದೆಯೊಂದಿಗೆ ಕೇಕ್ ಕತ್ತರಿಸುವಾಗಲೂ ಅವರು ಬಿಕಿನಿಯಲ್ಲೇ ಇದ್ದರು. ಈ ಫೊಟೋ ಸಖತ್ ವೈರಲ್ ಕೂಡ ಆಗಿದ್ದವು.

  • ಪ್ರೀತಿಸಿದ ಹುಡುಗಿ ಮದ್ವೆಗೆ ಒಪ್ಪಿಲ್ಲವೆಂದು ಪ್ರಿಯಕರ ಆತ್ಮಹತ್ಯೆ

    ಪ್ರೀತಿಸಿದ ಹುಡುಗಿ ಮದ್ವೆಗೆ ಒಪ್ಪಿಲ್ಲವೆಂದು ಪ್ರಿಯಕರ ಆತ್ಮಹತ್ಯೆ

    ಚಿಕ್ಕಮಗಳೂರು: ಪ್ರೀತಿಸಿದ ಹುಡುಗಿ ಮದುವೆಯಾಗಲು ನಿರಾಕರಿಸಿದಳೆಂದು ಮನನೊಂದು ಪ್ರಿಯಕರ ಆತ್ಮಹತ್ಯೆಯ ದಾರಿ ಹಿಡಿದ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಚೇತನ್(31) ಆತ್ಮಹತ್ಯೆಗೆ ಶರಣಾದ ಯುವಕ. ಎನ್.ಆರ್. ಪುರ ತಾಲೂಕಿನ ಮುತ್ತಿನಕೊಪ್ಪ ಬಳಿಯ ಶಂಕರಪುರದಲ್ಲಿ ಈ ಘಟನೆ ನಡೆದಿದೆ. ನನಗೆ ಶ್ವೇತಾ(ಹೆಸರು ಬದಲಾಯಿಸಲಾಗಿದೆ) ಮೋಸ ಮಾಡಿದಳು ಎಂದು ವಾಯ್ಸ್ ಮೆಸೇಜ್ ಕಳುಹಿಸಿ ಚೇತನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ; ಈಜಲು ಹೋದ ಇಬ್ಬರು ಬಾಲಕಿಯರು ನೀರುಪಾಲು

    ನಾನು ಶ್ವೇತಾ ಕಳೆದ 9 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ನನ್ನಿಂದ ಆಕೆ 4 ಲಕ್ಷ ರೂ. ಹಣವನ್ನು ಕಿತ್ತುಕೊಂಡಿದ್ದಾಳೆ ಎಂದು ವಾಯ್ಸ್ ಮೆಸೇಜ್ ನಲ್ಲಿ ಚೇತನ್ ಗಂಭೀರ ಆರೋಪ ಮಾಡಿದ್ದಾನೆ. ಅಲ್ಲದೆ ನನ್ನ ಸಾವಿಗೆ ನ್ಯಾಯ ಸಿಗಬೇಕೆಂದರೆ ಆಕೆಗೆ ಶಿಕ್ಷೆಯಾಗಬೇಕು. ನನ್ನ ಚಿತೆಗೆ ಆಕೆಯೇ ಬೆಂಕಿ ಇಡಬೇಕು, ಆಕೆ ಬರುವತನಕ ಹೆಣವನ್ನು ಕೆಳಗಿಳಿಸಬೇಡಿ. ನನಗೆ ಮಾನಸಿಕ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ವಾಯ್ಸ್ ಮೆಸೇಜ್ ಹಾಗೂ ಡೆತ್ ನೋಟ್ ಮೂಲಕ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾನೆ.

    ಎನ್.ಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.